Shivamogga Police ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಅಶೋಕ ಸರ್ಕಲ್ ಹತ್ತಿರದ ಕ್ರಿಶ್ಚಿಯನ್ ಸಮುದಾಯದ ಸ್ಮಶಾನ ಎದುರಿನ ರಸ್ತೆಯ ಪಕ್ಕ ಪ್ರಜ್ಞೆಯಿಲ್ಲದೆ ಮಲಗಿದ್ದ 35-38 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯನ್ನು ಸಾರ್ವಜನಿಕರ ಸಹಾಯದಿಂದ ಆಂಬ್ಯುಲೆನ್ಸ್ ಮೂಲಕ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೇ 15 ರಂದು ಮೃತಪಟ್ಟಿರುತ್ತಾನೆ.
ಮೃತ ವ್ಯಕ್ತಿಯ ಚಹರೆ 5.5 ಅಡಿ ಎತ್ತರ, ಉದ್ದನೆಯ ಮುಖ, ಸಾಧಾರಣ ಮೈಕಟ್ಟು, ಎಣ್ಣೆಗೆಂಪು ಮೈಬಣ್ಣ, ಮೃತನ ಎದೆಯ ಮಧ್ಯಭಾಗದಲ್ಲಿ ಕಪ್ಪು ಮಚ್ಚೆಯಿರುತ್ತದೆ. ಬಲಗೈನ ಮೇಲೆ ಮಂಜಮ್ಮ ಮತ್ತು ಎಡಗೈ ಮೇಲೆ ಜಯ ಹಾಗೂ ದಿನ ಎಂಬ ಹಚ್ಚೆ ಗುರುತು ಇರುತ್ತದೆ. ಎದೆಯ ಬಲಭಾಗದಲ್ಲಿ ಮತ್ತು ಹುಬ್ಬಿನ ಮೇಲೆ ಹಳೆಯ ಗಾಯದ ಗುರುರು ಇರುತ್ತದೆ. ಮೈಮೇಲೆ ಗ್ರೇ ಕಲರ್ ಟೀಶರ್ಟ್, ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ.
Shivamogga Police ಈ ಮೃತ ವ್ಯಕ್ತಿಯ ವಾರಸುದಾರರು ಇದ್ದಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆ ದೂ.ಸಂ.: 08182-261414 / 9916882544 ನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.
Shivamogga Police ಅಪರಿಚಿತ ಮೃತವ್ಯಕ್ತಿಯ ಪತ್ತೆಗೆ ಸಹಕರಿಸಲು ಶಿವಮೊಗ್ಗ ಪೊಲೀಸ್ಮನವಿ
Date: