Guarantee scheme ಕರ್ನಾಟಕ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳು ನಾಡಿನ ಜನತೆಯ ಬದುಕಿಗೆ ಬೆಳಕಾಗಿವೆ. ಮಹಿಳೆಯರು ಮತ್ತು ಬಡ, ಹಿಂದುಳಿದ ಜನತೆಗೆ ಸ್ವಾವಲಂಬಿ ಬದುಕನ್ನು ಕಟ್ಟಿಕೊಡುವಲ್ಲಿ ಈ ಯೋಜನೆಗಳು ಯಶಸ್ವಿಯಾಗಿವೆ.
ಪ್ರಸ್ತುತ ರಾಜ್ಯ ಸರ್ಕಾರ ಜಾರಿಗೆ ಬಂದು ಮೇ ೨೦ ಕ್ಕೆ ಎರಡು ವರ್ಷ ತುಂಬುತ್ತಿರುವ ಹಿನ್ನೆಲೆ ಐತಿಹಾಸಿಕ ಗ್ಯಾರಂಟಿ ಯೋಜನೆಗಳ ಮೂಲಕ ಪ್ರಗತಿಯತ್ತ ಜಿಲ್ಲೆ, ರಾಜ್ಯ ಯಶಸ್ವಿಯಾಗಿ ಹೆಜ್ಜೆ ಇಡುತ್ತಿದ್ದು, ಈ ಹೆಜ್ಜೆ ಗುರುತುಗಳ ಮೇಲೆ ಬೆಳಕು ಚೆಲ್ಲುವ ಒಂದು ನುಡಿ ನೋಟ ಇದಾಗಿದೆ.
ರಾಜ್ಯದಲ್ಲಿ ಅತ್ಯಂತ ಯಶಸ್ಸು ಕಂಡಿರುವ ಮತ್ತು ಮಹಿಳೆಯರನ್ನು ಸ್ವಾವಲಂಬಿಗೊಳಿಸಿ ಅವರಲ್ಲಿ ಆತ್ಮ ವಿಶ್ವಾಸ ತುಂಬುತ್ತಿರುವ ಗೃಹಲಕ್ಷ್ಮಿ ಯೋಜನೆ ಹಸಿವು ಮುಕ್ತಗೊಳಿಸಿ, ನೆಮ್ಮದಿಯ ಬದುಕಿಗೆ ದಾರಿಮಾಡಿಕೊಟ್ಟಿರುವ ‘ಅನ್ನಭಾಗ್ಯ’, ದುಬಾರಿ ಯುಗದಲ್ಲಿ ಜನಸಾಮಾನ್ಯರ ಕೈಹಿಡಿದು ನಿಟ್ಟಿಸಿರುವ ಬಿಡುವಂತೆ ಮಾಡಿರುವ ‘ಗೃಹಜ್ಯೋತಿ’, ಮಹಿಳೆಯರು ಧೈರ್ಯವಾಗಿ, ನಿರಾತಂಕವಾಗಿ ರಾಜ್ಯಾದ್ಯಂತ ಪ್ರಯಾಣಿಸಲು ಅವಕಾಶವಿತ್ತಿರುವ ಮಹಿಳೆಯರ ನಿಜವಾದ ಬಲ ‘ಶಕ್ತಿ’ ಯೋಜನೆ ಹಾಗೂ ಯುವಕರ ಪಾಲಿನ ಆಶಾಕಿರಣವಾಗಿರುವ ‘ಯುವ ನಿಧಿ’ ರಾಜ್ಯದ ಪ್ರಗತಿಯಲ್ಲಿ ತಮ್ಮದೇ ಆದ ವಿಶಿಷ್ಟ ಕೊಡುಗೆಯನ್ನು ನೀಡಿರುವುದಕ್ಕೆ ಫಲಾನುಭವಿಗಳ ಅನುಭವವೇ ಸಾಕ್ಷಿಯಾಗಿದೆ. ರಾಜ್ಯಾದ್ಯಂತ ಪ್ರತಿ ತಿಂಗಳು ಕೋಟ್ಯಾಂತರ ಫಲಾನುಭವಿಗಳು ಈ ಯೋಜನೆಯ ಫಲ ಪಡೆದು ಆತ್ಮ ವಿಶ್ವಾಸದಿಂದ ಬದುಕು ಕಟ್ಟಿಕೊಳ್ಳುತ್ತಿದ್ದಾರೆ.
ಹಸಿವಿನ ಚಿಂತೆ ದೂರ ಮಾಡಿದ ‘ಅನ್ನಭಾಗ್ಯ’
Guarantee scheme ಬಡತನದ ಬೇಗೆಯಲ್ಲಿದ್ದ ನಮಗೆ ಅನ್ನಭಾಗ್ಯ ನಿಜಕ್ಕೂ ಅನ್ನದೇವರಾಗಿದೆ. ನನ್ನ ಗಂಡ ಅನಾರೋಗ್ಯದಿಂದಾಗಿ ಬಹಳ ಹಿಂದೆಯೇ ತೀರಿ ಹೋಗಿದ್ದು ಕೂಲಿ ಮಾಡಿ ಜೀವನ ನಡೆಸುತ್ತಿದ್ದೇನೆ. ಚಿಕ್ಕ ಚಿಕ್ಕ ಇಬ್ಬರು ಹೆಣ್ಣು ಮಕ್ಕಳನ್ನು ನೋಡಿಕೊಳ್ಳುವುದು ಬಹಳ ಕಷ್ಟವಾಗಿತ್ತು. ಇದೀಗ ಮಕ್ಕಳು ಡೊಡ್ಡವರಾಗುತ್ತಿದ್ದಾರೆ. ಒಬ್ಬ ಮಗಳು ಓದುತ್ತಿದ್ದಾಳೆ. ಮೊದಲೆಲ್ಲ ಕುಟುಂಬ ನಿರ್ವಹಣೆ ಬಗ್ಗೆ ತುಂಬಾ ಚಿಂತೆಯಾಗುತ್ತಿತ್ತು. ಅನ್ನಭಾಗ್ಯ ಯೋಜನೆ ಜಾರಿಯಾದಾಗಿನಿಂದ ಹಸಿವಿನ ಚಿಂತೆ ದೂರವಾಗಿ ನೆಮ್ಮದಿಯ ನಿಟ್ಟಿಸಿರುವ ಬಿಡುವಂತಾಗಿದೆ. ಇದರಿಂದ ನನ್ನ ಆರೋಗ್ಯ ಸ್ಥಿತಿ ಹಾಗೂ ಮನೆಯ ಪರಿಸ್ಥಿತಿ ಕೂಡ ಸುಧಾರಣೆಯಾಗಿದೆ. ಅನ್ನಭಾಗ್ಯ ನಿಜಕ್ಕೂ ನಮ್ಮಂತವರ ಮನೆಗಳ ಭಾಗ್ಯವಾಗಿದೆ. ಅದಕ್ಕೆ ನಾನು ಸರ್ಕಾರಕ್ಕೆ ಋಣಿಯಾಗಿದ್ದೇನೆ ಎಂದು ಫಲಾನುಭವಿ
ಗುತ್ಯಮ್ಮ, (ಕೊಮ್ಮನಾಳು, ಶಿವಮೊಗ್ಗ ತಾಲ್ಲೂಕು) ಹೇಳಿದ್ದಾರೆ.
Guarantee scheme ಜನ ಸಾಮಾನ್ಯರ ಬದುಕಿಗೆ ಗ್ಯಾರಂಟಿ ಯೋಜನೆಗಳು ಬೆಳಕಾಗಿವೆ
Date: