Klive Special Article ಪೆಹಲ್ಗಾಂ ದುರಂತದ ನಂತರ ನಡೆದ ಬೆಳವಣಿಗೆಗಳಲ್ಲಿ
ಮೂರು ಸಂಗತಿಗಳು ಸುದ್ದಿಮನೆಯನ್ನ ಬೆಚ್ಚಗೆ ಮತ್ತು ಹಿತಗೊಳಿಸುವಂತೆ ಮಾಡಿವೆ.
ಭಾರತೀಯ ಚಲನಚಿತ್ರರಂದ ಖ್ಯಾತ ಚಿತ್ರಸಾಹಿತಿ,ಕವಿ ಜಾವೇದ್ ಅಖ್ತರ್, ಸಂಸದ ಓವೈಸಿ ಮತ್ತು ಹಿರಿಯ ಸಂಸದ ಶಶಿ ತರೂರ್
ನೀಡಿರುವ ಹೇಳಿಕೆಗಳು ಮಾಧ್ಯಮದ ಹಣೆಮನ್ನಣೆಗೊಳಗಾಗಿವೆ.
ಕಾಶ್ಮೀರಿಗಳು ಭಾರತಕ್ಕೆ ನಿಷ್ಠರಾಗಿದ್ದು, ಪಾಕಿಸ್ತಾನ ಈಗಾಲಾದರೂ ಕಾಶ್ಮೀರ ಮತ್ತು ಕಾಶ್ಮೀರದ ನಿವಾಸಿಗಳನ್ನು ನೆಮ್ಮದಿಯಿಂದ ಇರಲು ಬಿಡಬೇಕು. ಭಯೋತ್ಪಾದನೆಗೆ ಕುಮ್ಮಕ್ಕು ನೀಡುವ ಮೂಲಕ ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನ ತನ್ನ ಮಾನ ಮರ್ಯಾದೆಯನ್ನು ಹರಾಜು ಹಾಕಿಕೊಂಡಿದೆ”
ಎಂದು ಜಾವೇದ್ ಅಖ್ತರ್ ಪಾಕ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಪಾಕಿಸ್ತಾನಕ್ಕೆ ಹೋಗುವೆಯೋ,? ನರಕಕ್ಕೆ ಹೋಗುವೆಯೋ? ಎಂಬ ಆಯ್ಕೆ ಕೇಳಿದರೆ ನಾನು ನರಕವನ್ನೇ ಆಯ್ಕೆ ಮಾಡಿಕೊಳ್ಳುವೆ ಎಂದು ಜಾವೇದಗ ಅಖ್ತರ್ ಹೇಳಿದ್ದಾರೆ.
ಇದು ಪತ್ರಿಕೆಯೊಂದರಲ್ಲಿ ಪ್ರಮುಖವಾಗಿ ಕಂಡ ಸುದ್ದಿ.
ಮುಸ್ಲೀಂ ಸಮುದಾಯದ ಗಣ್ಯ ವ್ಯಕ್ತಿಯೋರ್ವರ ಹೇಳಿಕೆ ಗಮನಾರ್ಹವಾಗಿದೆ.
ಏಕೆಂದರೆ ಎಲ್ಲಾ ಮುಸ್ಲೀಮರೂ ಪಾಕಿಸ್ತಾನ ಪರವಾದಿಗಳು ಎಂಬ
ನೆರೇಟಿವ್ ಗೆ ಇದು ವಿರುದ್ಧವಾಗಿದೆ.
ಬಹಳ ನಿಖರವಾಗಿ
ಮುಸ್ಲೀಂ ಪರವಾಗಿಯೇ ಮಾತನಾಡಿ ಇಡೀ ದೇಶದ ಗಮನ ಸೆಳೆದಿರುವ ಸಂಸದ ಓವೈಸಿ ಅವರು ಐಎಂಎಫ್ ,ಪಾಕಿಸ್ತಾಕ್ಕೆ ಸಾಲ ಮಂಜೂರು ಮಾಡಿದಾಗ ಐಎಂಎಫ್ ಗೆ ” ಇಂಟರ್ ನ್ಯಾಷನಲ್ ಮಿಲಿಟೆಂಟ್ ಫಂಡ್ ” ಎಂಬುದಾಗಿ ಟೀಕಿಸಿದ್ದಾರೆ. ಅಂದರೆ ಸದ್ಯದಲ್ಲಿ ಉಗ್ರವಾದ ಬೆಂಬಲಿಸುವ ಪಾಕಿಸ್ತಾನದ ಜಾಯಮಾನಕ್ಕೆ ಓವೈಸಿ ನೆಗೆಟಿವ್ ಆಗಿದ್ದಾರೆ.
ಓವೈಸಿ ಮತ್ತು ಶಶಿ ತರೂರ್ ಅವರನ್ನ ಕೇಂದ್ರ ಸರ್ಕಾರವು
ಯೋಜಿಸಿರುವ
ಐದು ರಾಷ್ಟ್ರಗಳಿಗೆ ತೆರಳಬೇಕಾದ ಸರ್ವಪಕ್ಷ ನಿಯೊಗದಲ್ಲಿ ಸೇರ್ಪಡೆಮಾಡಿದೆ.
ಈರ್ವರೂ ಖುಷಿಯಿಂದ ಒಪ್ಪಿಕೊಂಡಿದ್ದಾರೆ.
ಎಲ್ಲದಕ್ಕೂ ಕಾಲಬರಬೇಕು ಎಂಬ ಮಾತನ್ನ ನಾವು ಭಾರತೀಯ ಆಧ್ಯಾತ್ಮದಲ್ಲಿ ಕೇಳಿದ್ದೇವೆ. ಅದರಂತೆ ಪಸ್ತುತ ಪಾಕಿಸ್ತಾನ ತರಬೇತಿ ನೀಡಿದ ಉಗ್ರರು ಮಾಡಿರುವ ಪೆಹಲ್ಗಾಂ ನರಬಲಿ ಪ್ರಕರಣವನ್ನು ಭಾರತೀಯ ಮುಸ್ಲೀಮರೂ ವಿರೋಧಿಸಿ ಮುಖ ಕಹಿ ಮಾಡುತ್ತಾರೆ.
ಇದು ಕಾಲ ನೀಡಿದ ಉತ್ತರವೇ ಆಗಿದೆ.
Klive Special Article ಸಣ್ಣ ರಾಜಕೀಯ ಚುರುಮುರಿ ಎಂದರೆ
ಕಾಂಗ್ರೆಸ್ ತನ್ನ ಸದಸ್ಯರನ್ನ ಸರ್ವಪಕ್ಷ ನಿಯೋಗಕ್ಕೆ ಶಿಫಾರಸು ಮಾಡಿದಾಗ ಅದು ಶಶಿ ತರೂರ್ ಅವರ ಹೆಸರನ್ನ ನಮೂದಿಸಿಲ್ಲ.. ಕಾಂಗ್ರೆಸ್ ಪಕ್ಷದ ಒಳಗೆ ಮತ್ತು ಹೊರಗೆ
ಇದೊಂದು ದೊಡ್ಡ
‘ರಿಮಾರ್ಕ್ ‘ ಆಗಿದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ವ್ಯವಹರಿಸಬೇಕಾದ ಎಲ್ಲ ನಾಜೂಕುಗಳನ್ನ
ಕತಲಾಮಲಕ ಮಾಡಿಕೊಂಡಿರುವ ಶಶಿ ತರೂರ್ ಬಗ್ಗೆ ಕಾಂಗ್ರೆಸ್ ತಾಳಿರುವ ನಿರ್ಲಕ್ಷ್ಯ
ಜಗಜ್ಜಾಹೀರಾಗಿದೆ.
ಪಕ್ಷದ ಅಧ್ಯಕ್ಷ. ಮಲ್ಲಿಕಾರ್ಜುನ ಖರ್ಗೆ ಮತ್ತು “ಲೋವಿನಾ” ( LoP)
ರಾಹುಲ್ ಗಾಂಧಿ ಇಲ್ಲಿಯವರೆಗೂ ತುಟಿಬಿಚ್ಚಿಲ್ಲ. ಜಯರಾಂ ರಮೇಶ್ ಮಾತ್ರ ಪಕ್ಷದ ಪಟ್ಟಿಗೆ ಬೆಲೆ ನೀಡದ್ದಕ್ಕೆ ಒಂದಿಷ್ಟು ಅತೃಪ್ತಿ ಹೊರಹಾಕಿದ್ದಾರೆ.