Rajesh Keelambi ಶಾಖಾಹಾರಿ ಚಿತ್ರದ ನಿರ್ಮಾಪಕ
ಕೀಳಂಬಿ ಮೀಡಿಯಾ ಲ್ಯಾಬ್ ಸಂಸ್ಥೆಯ ಎಂ.ಡಿ. ರಾಜೇಶ್ ಕೀಳಂಬಿ ಅವರು ಡಾ.ಪುನೀತ್ ರಾಜ್ ಕುಮಾರ್ ಸ್ಮರಣೆಯಲ್ಲಿ ನೀಡುವ ಚೊಚ್ಚಲ ನಿರ್ಮಾಪಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮುಂದಿನ ಅನಿಸಿಕೆಗಳನ್ನ ಅವರ ನಿರೂಪಣೇಯೇ ತಿಳಿಸಿದೆ ಕಳೆದ ಭಾನುವಾರ ಜೀವನದ ಅವಿಸ್ಮರಣೀಯ ದಿನ! ಸಿನೆಮಾ ಪತ್ರಕರ್ತರು ಕೊಡಮಾಡುವ ಚಂದನವನ ಕ್ರಿಟಿಕ್ಸ್ ಅವಾರ್ಡ್ಸ್ ಸಮಾರಂಭದಲ್ಲಿ ಅತ್ಯುತ್ತಮ ಚೊಚ್ಚಲ ನಿರ್ಮಾಪಕ ಪ್ರಶಸ್ತಿ ಪಡೆದಿರುವುದಕ್ಕೆ ಇಷ್ಟೆಲ್ಲ ಸಂಭ್ರಮ ಪಡಲು ಅನೇಕ ಕಾರಣಗಳಿವೆ!! ನನ್ನ ಪಾಲಿನ ಆದರ್ಶ ನಟ ಡಾ|| ಪುನೀತ್ ರಾಜ್ ಕುಮಾರ್ ಅವರ ಹೆಸರಿನಲ್ಲಿ ಈ ಪ್ರಶಸ್ತಿ ಇರುವುದು ನನ್ನ ಹೆಮ್ಮೆಗೆ ಪ್ರಮುಖ ಕಾರಣ.
Rajesh Keelambi ನನ್ನ ಮತ್ತೊಬ್ಬ ನೆಚ್ಚಿನ ನಟ ಗೋಪಾಲಕೃಷ್ಣ ದೇಶಪಾಂಡೆ ಸರ್ ಗೆ ನಮ್ಮ ಶಾಖಾಹಾರಿ ಸಿನಿಮಾದ ಅತ್ಯುತ್ತಮ ನಟನೆಗಾಗಿ ಪ್ರಶಸ್ತಿ ಸಿಕ್ಕಿರುವುದು Cherry on the cake! ನಮ್ಮ ಶಾಖಾಹಾರಿ ಸಿನಿಮಾ ಏಳು ವಿಭಾಗಗಳಲ್ಲಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಂತೂ Over the moon ಅನುಭವ! ಪ್ರಶಸ್ತಿಯ ಸಮ ಭಾಗಿದಾರಳಾದ preetiya ತಂಗಿ Ranjini Prasanna ಗೆ ಕೂಡ hearty congratulations.. ಶಾಖಾಹಾರಿಯ ಈ ಎಲ್ಲ ಸಾಧನೆಗಾಗಿ Sandeep Sunkad ಮತ್ತು ಇಡೀ ಚಿತ್ರತಂಡಕ್ಕೆ ಹಾರ್ದಿಕ ಅಭಿನಂದನೆಗಳು. ಈ ಪ್ರಶಸ್ತಿಗಳು ಚಿತ್ರತಂಡದ ಪರಿಶ್ರಮಕ್ಕೆ ಸಮರ್ಪಿತ! ಅಂದಹಾಗೆ ಇಡೀ ಪ್ರಶಸ್ತಿಪ್ರದಾನ ಸಮಾರಂಭವನ್ನು ಅಚ್ಚುಕಟ್ಟಾಗಿ ಆಯೋಜಿಸಿ, ನಿರ್ವಹಿಸಿದ Sharanu Hullur ಸರ್ ಮತ್ತು ತಂಡಕ್ಕೆ Hats off!!
ಶಾಖಾಹಾರಿಯ ಯಾತ್ರೆಯಲ್ಲಿ ಕೈಜೋಡಿಸಿದ ಸಮಸ್ತರಿಗೂ ಕೋಟಿ ನಮನಗಳನ್ನ ರಾಜೇಶ್ ಕೀಳಂಬಿ ಅರ್ಪಿಸಿದ್ದಾರೆ