Vijay Tiranga Yatra Shimoga ಶಿವಮೊಗ್ಗದಲ್ಲಿ ನಡೆಯುತ್ತಿರುವ ಜಿಜೆಪಿ ವಿಜಯ ತಿರಂಗ ಯಾತ್ರೆಯು ಶಿವಮೊಗ್ಗ ನಗರದ ರಮಣಶ್ರೇಷ್ಠಿ ಪಾರ್ಕ್ ನಿಂದ ಆರಂಭವಾಯಿತು. ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳು ೭೫೦ ಅಡಿಯ ತಿರಂಗವನ್ನು ಹೊತ್ತು ಜಯಘೋಷಗೈಯುತ್ತಾ ನೆಹರೂ ಮಾರ್ಗದಲ್ಲಿ ಸಾಗಿ ಬಂದ ದೃಶ್ಯ ಕಣ್ತುಂಬಿಕೊಳ್ಳುವಂತಿತ್ತು. ಮಳೆಯ ನಡುವೆಯೂ ತಿರಂಗ ಹಿಡಿದು ಯಾತ್ರೆಯಲ್ಲಿ ಹೊರಟ ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳು ತಮ್ಮ ದೇಶಪ್ರೇಮ ಮೆರೆದರು.
Vijay Tiranga Yatra Shimoga ನಗರದ ಗಾಂಧಿಬಜಾರ್, ಬಿಹೆಚ್ ರಸ್ತೆ, ನೆಹರು ರಸ್ತೆ ಮೂಲಕ ಯಾತ್ರೆಯು ಗೋಪಿ ವೃತ್ತ ತಲುಪಿತು ಗೋಪಿ ವೃತ್ತದಲ್ಲಿ ಹಿಂದಿ ಹಾಡಿಗೆ ಕುಣಿದು ಕುಪ್ಪಳಿಸಿದ ವಿದ್ಯಾರ್ಥಿಗಳು ಮಳೆರಾಯನನ್ನ ಲೆಕ್ಕಿಸಲೇ ಇಲ್ಲ. ಯಾತ್ರೆಯಲ್ಲಿ ಒಂದೇಸಮನೆ ಮಳೆ ಸುರುದರೂ ಸಾವಿರಾರು ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳು ಜಾಥಾದಲ್ಲಿ ನಡೆದುಬಂದರು. ಯಾತ್ರೆಯಲ್ಲಿ ಸಂಸದ ಬಿವೈ ರಾಘವೇಂದ್ರ, ಶಾಸಕ ಎಸ್ ಎನ್ ಚನ್ನಬಸಪ್ಪ, ಪರಿಷತ್ ಸದಸ್ಯರುಗಳಾದ ಡಿಎಸ್ ಅರುಣ್ ಹಾಗೂ ಡಾ. ಧನಂಜಯ ಸರ್ಜಿ ಪಾಲ್ಗೊಂಡಿದ್ದರು. ಸಂಸದ ಬಿವೈ ರಾಘವೇಂದ್ರ, ಶಾಸಕ ಚನ್ನಬಸಪ್ಪ, ಡಿ ಎಸ್ ಅರುಣ್ ಹಾಗೂ ಧನಂಜಯ ಸರ್ಜಿ ಅವರು
ದೇಶ ಭಕ್ತಿ ಗೀತೆಗಳಿಗೆ ಹೆಜ್ಜೆ ಹಾಕಿದ ಪರಿ ವಿಶೇಷವಾಗಿತ್ತು.