Monday, November 9, 2026
Monday, November 9, 2026
Home Blog Page 1924

ಸ್ನೇಹ ಮಾಡಬೇಕೆ? ಕೆಲವು ಟಿಪ್ಸ್ ಇಲ್ಲಿವೆ ನೋಡಿ

0

ಮನುಷ್ಯ ಜೀವನವೇ ವಿಚಿತ್ರ. ಜೀವನದಲ್ಲಿ ಯಾರು ಯಾವಾಗ ಯಾವ ಸಮಯದಲ್ಲಿ ಇಷ್ಟ ಆಗ್ತಾರೆ ಅಂತ ಹೇಳೋಕೆ ಆಗಲ್ಲ. ಅದರಲ್ಲೂ ಈ ಪ್ರೀತಿ ಅಥವಾ ಸ್ನೇಹದ ವಿಷಯಕ್ಕೆ ಬಂದ್ರೆ ಅದು ಹೇಗೆ ಶುರುವಾಯ್ತು ಅಂತ ಹೇಳೋದೇ ಕಷ್ಟ. ಆದರೆ ಒಪ್ಪಿಕೊಂಡ ಸ್ನೇಹವಿರಲಿ ಪ್ರೀತಿಯಿರಲಿ ಅದನ್ನ ಕೊನೆವರೆಗೂ ಉಳಿಸಿಕೊಳ್ಳೋದು ಒಂದು ದೂಡ್ಡ ಸವಾಲೇ ಸರಿ.

ಒಂದು ಚೂರು ಹೆಚ್ಚು ಕಮ್ಮಿ ಆದ್ರೂ ಅದ್ಭುತವಾಗಿರುವ ಒಂದು ಸಂಬಂಧನೇ ಮುರಿದು ಬೀಳುವ ಸಾಧ್ಯತೆಗಳಿರುತ್ತೆ. ಹಾಗಾಗಿ ಸಂಬಂಧಗಳಲ್ಲಿ ಅತ್ಯಂತ ಜಾಗರೂಕತೆಯಿಂದ ಇರಬೇಕು.

ಯಾವುದೇ ಸಂಬಂಧವಿರಲಿ ಅಥವಾ ಸ್ನೇಹವಿರಲಿ ಅದರಲ್ಲಿ ನಾವು ಒಪ್ಪಿಕೊಳ್ಳಬೇಕಾದಂತ ಅಂಶಗಳಿವೆ.

ಅದನ್ನ ಅರ್ಥ ಮಾಡಿಕೊಂಡು ಮುಂದುವರೆದರೆ ಯಾವುದೇ ಸಂಬಂಧ ಅಥವಾ ಸ್ನೇಹದಲ್ಲಿ ವಿಶ್ವಾಸದಿಂದ ಇರಬಹುದಾಗಿದೆ.
ಕುಟುಂಬದವರನ್ನ ಹೊರತುಪಡಿಸಿ ಸ್ನೇಹಿತರಿಗೆ ತುಂಬಾ ಹತ್ತಿರದವರಾಗಿರುತ್ತೇವೆ. ಮನುಷ್ಯ ಜೀವನದಲ್ಲಿ ಅಪ್ಪ,ಅಮ್ಮ ಅಣ್ಣ ತಂಗಿ ಮತ್ತು ತಮ್ಮ ಸಂಬಂಧಿಕರ ಸಂಬಂಧ ಹುಟ್ಟಿದಾಗಿನಿಂದಲೇ ಜೊತೆಗೂಡಿ ಬರುತ್ತದೆ. ಆದರೆ ಜೀವನದ ಬಹುಮುಖ್ಯ ಸಂಬಂಧವಾದ ಸ್ನೇಹವು ನಮ್ಮ ಆಯ್ಕೆಗೆ ಸೀಮಿತ. ಒಳ್ಳೆಯ, ಕೆಟ್ಟ ಸ್ನೇಹಿತರ ಸಂಗ ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತೆ.

ಒಳ್ಳೆಯ ಸ್ನೇಹ ಪ್ರೀತಿಯನ್ನು ಬಯಸದವರು ಬಹುಶಃ ಈ ಜಗತ್ತಿನಲ್ಲಿಯೇ ಯಾರೂ ಇಲ್ಲ.
ಹಾಗಾಗಿ ಸ್ನೇಹಕ್ಕೆ ಸಂಬಂಧಪಟ್ಟ ಹಲವಾರು ವಿಷಯಗಳನ್ನ ಮನಸ್ಸಿನಲ್ಲಿಯೇ ಇಟ್ಟುಕೊಳ್ಳುವುದು ಉತ್ತಮ.

ಪರಿಪೂರ್ಣ ಸ್ನೇಹ ಎಂದಿಗೂ ಅಸ್ತಿತ್ವದಲ್ಲಿಲ್ಲ.
ಒಬ್ಬ ಮನುಷ್ಯ ಪರಿಪೂರ್ಣ ಎಂದು ಎಂದಿಗೂ ಹೇಳಲು ಸಾಧ್ಯವಿಲ್ಲ. ಸ್ನೇಹದಲ್ಲಿ, ಸ್ನೇಹಿತರ ಮೇಲೆ ಹೆಚ್ಚಿನ ನಿರೀಕ್ಷೆಗಳನ್ನು ಇಟ್ಟುಕೊಳ್ಳುವುದು ನಮ್ಮ ಸ್ನೇಹಕ್ಕೇ ಕುತ್ತಾಗಬಹುದು. ಹಾಗಾಗಿ ನಿಮ್ಮ ಸ್ನೇಹಿತರನ್ನು ಅವರು ಇರುವ ರೀತಿಯಲ್ಲಿಯೇ ಅವರನ್ನು ಸ್ವೀಕರಿಸುವುದು ಉತ್ತಮ.

ನಿಮ್ಮ ಸ್ನೇಹಿತರ ನ್ಯೂನತೆಗಳು ಮತ್ತು ಅಪೂರ್ಣತೆಗಳನ್ನು ಎತ್ತಿ ತೋರಿಸುವುದರ ಬದಲು ಅವರು ಒಬ್ಬ ಉತ್ತಮ ವ್ಯಕ್ತಿಯಾಗಲು ನೀವು ಅವರಿಗೆ ಸಹಾಯ ಮಾಡಬಹುದು.

ನಮಗೆ ನಮ್ಮ ಕುಟುಂಬದವರನ್ನ ಹೊರತುಪಡಿಸಿ ಸ್ನೇಹಿತರಿಗೆ ತುಂಬಾ ಹತ್ತಿರದವರಾಗಿರುತ್ತೇವೆ. ಕುಟುಂಬದವರ ಹತ್ತಿರ ಹೇಳಿಕೊಳ್ಳಲಾಗದ ಅದೆಷ್ಟೋ ವಿಷಯಗಳನ್ನ ನಾವು ಸ್ನೇಹಿತರ ಹತ್ತಿರ ಹೇಳಿಕೊಳ್ಳುತ್ತೇವೆ.

ಯಾರನ್ನಾದರೂ ಅತಿಯಾಗಿ ಹಚ್ಚಿಕೊಂಡಾಗ ಕೆಲವೊಮ್ಮೆ ನೋವುಂಟಾಗುವುದು ಸಹಜ. ಪ್ರತಿಯೊಬ್ಬರಿಗೂ ಅವರದೇ ಆದ ಸ್ವಾತಂತ್ರ್ಯ, ಸ್ಪೇಸ್ ಕೊಡಬೇಕಾಗುತ್ತದೆ. ನಿಮ್ಮ ಪ್ರೀತಿ ಪಾತ್ರರು, ಸ್ನೇಹಿತರು ಅಥವಾ ಸಂಗಾತಿ ನಿಮ್ಮನ್ನು ಬಿಟ್ಟು ಬೇರೆ ಸ್ನೇಹಿತರನ್ನೂ ಹೊಂದಿರಬಹುದು. ಅವರು ಆ ಸ್ನೇಹಿತರೊಂದಿಗೆ ಹೊರಗಡೆ ಹೋಗಬಹುದು, ಅವರೊಂದಿಗೆ ಮಾತಿಗೆ ನಿಲ್ಲಬಹುದು.
ಆದರೆ ನೀವು ಇದನ್ನು ಸಹಿಸದೇ ಇದ್ದರೆ ಅಥವಾ ನಿಮ್ಮನ್ನು ಹೊರತಾಗಿಯೂ ಅವರಿಗೆ ಬೇರೊಬ್ಬರ ಸ್ನೇಹವಿದೆ ಎಂಬ ಸತ್ಯವನ್ನು ಅರಿತುಕೊಳ್ಳದಿದ್ದರೆ ಸಮಸ್ಯೆಯಾಗುವುದು ಖಂಡಿತ. ಈ ಬಗ್ಗೆ ಅಸೂಯೆ ಪಟ್ಟುಕೊಳ್ಳದೇ, ಅಥವಾ ಸ್ನೇಹಿತೆ/ಸ್ನೇಹಿತ ಬಿಟ್ಟು ಹೋಗಬಹುದು ಎಂಬ ಅಸುರಕ್ಷಿತ ಭಾವನೆಯನ್ನು ಬೆಳೆಸಿಕೊಳ್ಳದೆ ಸಂಗತಿಯನ್ನು ಹಾಗೆಯೇ ಒಪ್ಪಿಕೊಂಡರೆ ಅವರ ವೈಯಕ್ತಿಕ ಜೀವನವನ್ನು ಗೌರವಿಸುವುದು ಸೂಕ್ತ.

ಸ್ನೇಹದಲ್ಲಿ ಜಗಳಗಳು, ಮುನಿಸು ಉಂಟಾದಾಗಲೇ ಸ್ನೇಹ ಸಂಬಂಧಗಳು ಗಟ್ಟಿಗೊಳ್ಳುತ್ತವೆ. ಹಾಗಂತ ಅದು ಅತಿರೇಕಕ್ಕೆ ಹೋಗುವುದೂ ಸರಿಯಲ್ಲ.

ಸಾಕಷ್ಟು ಸಲ ಪರಸ್ಪರ ಒಬ್ಬರನ್ನೊಬ್ಬರು ಒಪ್ಪದಿರಬಹುದು. ಇದರಿಂದ ನಿಮಗೆ ನಿಮ್ಮ ಸ್ನೇಹಿತರ ಮೇಲೆ ಕಿರಿಕಿರಿ ಉಂಟಾಗಬಹುದು ಆದರೆ ಯಾವುದೇ ಮನುಷ್ಯನು ಪರಿಪೂರ್ಣನಲ್ಲ ಎಂಬುದನ್ನು ಮೊದಲು ನೀವು ಅರ್ಥಮಾಡಿಕೊಳ್ಳಬೇಕು.

ನಿಮ್ಮ ಸ್ನೇಹಿತರನ್ನು ಬದಲಾಯಿಸಲು ಪ್ರಯತ್ನಿಸುವ ಬದಲು, ಜೀವನದ ಬಗ್ಗೆ ಹೊಸ ಮತ್ತು ಉತ್ತಮ ದೃಷ್ಟಿಕೋನವನ್ನು ಬೆಳೆಸಲು ನೀವು ಅವರಿಗೆ ಸಹಾಯ ಮಾಡಬಹುದು. ನಿಮ್ಮ ಸ್ನೇಹದಲ್ಲಿ ಅತೀ ಮುಖ್ಯವಾದುದು ನೀವು ಪರಸ್ಪರ ಒಪ್ಪಿಕೊಂಡು ಮುಂದುವರೆಯುವುದು.

ಪ್ರತಿಯೊಬ್ಬರೂ ಶಾಶ್ವತವಾಗಿ ಉಳಿಯುವುದಿಲ್ಲ
ಇದನ್ನು ನಾವು ಮೊದಲು ಅರಿತುಕೊಳ್ಳಬೇಕು. ನಿಮ್ಮ ಜೀವನದಲ್ಲಿ ನೀವು ಅನೇಕ ಜನರನ್ನು ಭೇಟಿ ಮಾಡುತ್ತೀರಿ, ಅವರೊಂದಿಗೆ ಸ್ನೇಹ ಬೆಳೆಸಿಕೊಳ್ಳುತ್ತೀರಿ. ಆದರೆ ಅವರು ಎಂದೆಂದಿಗೂ ನಿಮ್ಮ ಜೊತೆಯಲ್ಲಿಯೇ ಇರಬೇಕೆಂದೇನೂ ಇಲ್ಲ.
ಕೆಲವೊಮ್ಮೆ ವಿಷಯಗಳು ಅನಿರೀಕ್ಷಿತ ರೀತಿಯಲ್ಲಿ ನಿಮ್ಮ ಕೈತಪ್ಪಿ ಹೋಗಬಹುದು ಅಥವಾ ನಿಮ್ಮ ಸ್ನೇಹಿತರೊಂದಿಗೆ ಇನ್ನು ಮುಂದೆ ಸಂಪರ್ಕ ಇಟ್ಟುಕೊಳ್ಳದಂತ ಸ್ಥಿತಿ ನಿರ್ಮಾಣವಾಗಬಹುದು. ಅದಕ್ಕೆಲ್ಲಾ ಮೊದಲೇ ತಯಾರಿರಬೇಕು. ಜೀವನದಲ್ಲಿ ಯಾವುದೂ ಶಾಶ್ವತವಲ್ಲ. ಇಂದು ನಗು, ನಾಳೆ ದುಃಖ. ಎರಡನ್ನೂ ನಿಭಾಯಿಸುವ ಸಾಮರ್ಥ್ಯ ನಮ್ಮಲ್ಲಿದ್ದರೆ, ಬದುಕು ಉಲ್ಲಾಸಮಯ.

ನಿಮಗೆ ಒಬ್ಬರು ಅಥವಾ ಇಬ್ಬರು ಸ್ನೇಹಿತರು ಇದ್ದರೂ ಸಾಕು, ನಿಮ್ಮ ಜೀವನ ಸಂತೋಷದಿಂದ ಕೂಡಿರಬಹುದು! ಹೊಂದಾಣಿಕೆಯಾಗದ ಮತ್ತು ನಕಲಿ ಸ್ನೇಹಿತರ ಒಂದು ಸೈನ್ಯವನ್ನೇ ಹೊಂದಿರುವುದಕ್ಕಿಂತ ಬೆರಳೆಣಿಕೆಯಷ್ಟು ವಿಶ್ವಾಸಾರ್ಹ ಸ್ನೇಹಿತರನ್ನು ಉಳಿಸಿಕೊಳ್ಳುವುದು ಉತ್ತಮ.

ಕೆಲವು ಸ್ನೇಹಿತರು ತಮ್ಮ ಕೆಟ್ಟ ಸ್ವಭಾವದೊಂದಿಗೆ ನಿಮ್ಮಲ್ಲಿರುವ ಸಕಾರಾತ್ಮಕ ಭಾವನೆಯನ್ನು ಹಾಳುಮಾಡಬಹುದು. ಇಂತಹ ಸಂದರ್ಭದಲ್ಲಿ, ನಿಮ್ಮ ಸಂತೋಷದ ಬಗ್ಗೆ ಕಾಳಜಿ ವಹಿಸುವುದು ಮತ್ತು ನಿಮ್ಮ ಸಮಯ ಮತ್ತು ಭಾವನೆಗಳನ್ನು ಅರ್ಥಪೂರ್ಣ ಸಂಬಂಧದಲ್ಲಿ ಕಳೆಯುವುದು ಒಳ್ಳೆಯದು.

ಎಲ್ಲರೊಂದಿಗಿನ ಬಂಧಗಳು ಒಂದೇ ರೀತಿ ಇರುವುದಿಲ್ಲ
ನಿಮ್ಮ ಜೀವನದುದ್ದಕ್ಕೂ ನೀವು ನಿಮ್ಮ ಪ್ರತಿಯೊಬ್ಬ ಸ್ನೇಹಿತರೊಂದಿಗೆ ಒಂದೇ ರೀತಿಯ ಸಂಬಂಧವನ್ನು ಉಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ನೀವು ಬೆಳೆದು ಪ್ರಬುದ್ಧರಾದಂತೆ, ಅಗತ್ಯವಿಲ್ಲದ ಗಾಸಿಪ್ ಮಾತುಗಳನ್ನಾಡುವ ಸ್ನೇಹಿತರಿಗಿಂತ ಕೆಲವು ಅರ್ಥಪೂರ್ಣ ಜನರನ್ನು ನೀವು ಹುಡುಕಬಹುದು. ಅಥವಾ ನಿಮ್ಮ ಬಾಲ್ಯದಲ್ಲಿ ಅಥವಾ ನಿಮ್ಮ ಕಾಲೇಜು ದಿನಗಳಲ್ಲಿ ನಡೆದ ಸಂಗತಿಗಳ ಬಗ್ಗೆ ಮಾತನಾಡಲು ನಿಮಗೆ ಇಷ್ಟವಿಲ್ಲದಿರಬಹುದು. ದಿನಕಳೆದಂತೆ ನಿಮ್ಮ ಆಯ್ಕೆಗಳು ಭಿನ್ನವಾಗಿ, ನೀವು ಒಮ್ಮೆ ಹೊಂದಿದ್ದಂತಹ ನಿಕಟತೆಯನ್ನು ಮತ್ತೆ ಹೊಂದಲು ಸಾಧ್ಯವಾಗದೇ ಹೋಗಬಹುದು.

ಜೀವನವು ಸಾಕಷ್ಟು ಅನಿರೀಕ್ಷತೆಯನ್ನು ಒಳಗೊಂಡಿರುತ್ತದೆ. ನಿಮ್ಮ ಜೀವನದಲ್ಲಿ ಪಡೆಯಬೇಕೆಂದುಕೊಂಡಿರುವ ಜನರು ನಿಮ್ಮೊಂದಿಗೆ ಇರಲು ಖಂಡಿತವಾಗಿಯೂ ಒಂದಿಲ್ಲೊಂದು ಮಾರ್ಗ ದೊರೆತೇ ದೊರೆಯುತ್ತದೆ ಎಂಬುದನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಿ.

ಪರಿಪೂರ್ಣ ಸ್ನೇಹವನ್ನು ಹೊಂದುವ ಕಲ್ಪನೆಯೊಂದಿಗೆ ನೀವು ಕಳೆದುಹೋಗಬೇಡಿ. ಇಲ್ಲದ ಸ್ನೇಹದ ಹುಡುಕಾಟದಲ್ಲಿ ಕಳೆದ ವರ್ಷಗಳನ್ನು ಎಣಿಸಬೇಡಿ, ಬದಲಿಗೆ ಉತ್ತಮ ಸ್ನೇಹವನ್ನು ನಿಮ್ಮದಾಗಿಸಿಕೊಳ್ಳಿ.

ನೀವು ಶಾಶ್ವತವಾಗಿ ನೆನಪಿನಲ್ಲಿಟ್ಟುಕೊಳ್ಳುವಂತ ಸಿಹಿ ನೆನಪುಗಳು ಖಂಡಿತವಾಗಿಯೂ ನಿಮ್ಮದಾಗಲಿವೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message ‘Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಉಕ್ರೇನ್ ಜೀವಗಳ ನಾಶಕ್ಕೆ ರಷ್ಯಾ ಹೊಣೆ

0

ಯುದ್ಧ ಬಾಧಿತ ಉಕ್ರೇನ್ ನಲ್ಲಿನ ಜೀವ ಹಾನಿಗೆ ರಷ್ಯಾ ಹೊಣೆ ಹೊರಬೇಕಾದ ಅಗತ್ಯವಿದೆ ಎಂದು ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಸೋಮವಾರ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ವರ್ಚುಯಲ್ ಶೃಂಗಸಭೆಯಲ್ಲಿ ಮಾತನಾಡಿದ ಮಾರಿಸನ್, ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಇಂತಹ ಭಯಾನಕ ಘಟನೆಗಳು ಎಂದಿಗೂ ಸಂಭವಿಸುವುದಿಲ್ಲ ಎಂದು ಖಚಿತಪಡಿಸಿಕೊಳ್ಳಬೇಕು ಎಂದರು.

ಕ್ವಾಡ್ ಗುಂಪಿನ ನಾಯಕರ ಇತ್ತೀಚಿನ ಸಭೆಯನ್ನು ಉಲ್ಲೇಖಿಸಿದ ಅಸ್ಟ್ರೇಲಿಯಾ ಪ್ರಧಾನಿ, ಇಂಡೋ-ಪೆಸಿಫಿಕ್‌ಗಾಗಿ ಯುರೋಪಿನಲ್ಲಿನ ಬೆಳವಣಿಗೆಗಳು ಮತ್ತು ಪರಿಣಾಮಗಳನ್ನು ಚರ್ಚಿಸಲು ಇದು ಅವಕಾಶವನ್ನು ಒದಗಿಸಿದೆ ಎಂದು ಹೇಳಿದರು.

ಯುರೋಪಿನಲ್ಲಿನ ಆತಂಕಕಾರಿ ಮತ್ತು ಭಯಾನಕ ಪರಿಸ್ಥಿತಿಯನ್ನು ಉಲ್ಲೇಖಿಸಿದ ಮಾರಿಸನ್, ಇದು ನಮ್ಮ ಪ್ರದೇಶದಲ್ಲಿ ನಡೆಯಬಾರದು. ರಷ್ಯಾದಲ್ಲಿನ ಜೀವ ಹಾನಿಗೆ ರಷ್ಯಾವನ್ನು ಹೊಣೆಗಾರನ್ನಾಗಿ ಮಾಡಬೇಕು. ಸಮಾನ ಮನಸ್ಕ ಉದಾರವಾದಿ ಪ್ರಜಾಪ್ರಭುತ್ವಗಳ ನಡುವಿನ ಸಹಕಾರವು ಸಮೃದ್ಧ ಇಂಡೋ-ಪೆಸಿಫಿಕ್‌ ಮುಕ್ತತೆಗೆ ಪ್ರಮುಖವಾಗಿದೆ ಎಂದು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಮಾತನಾಡಿ, ಉಭಯ ದೇಶಗಳ ಆರ್ಥಿಕ ಪುನಶ್ಚೇತನ ಮತ್ತು ಆರ್ಥಿಕ ಭದ್ರತೆಗೆ ಸಮಗ್ರ ಆರ್ಥಿಕ ಸಹಕಾರ ಒಪ್ಪಂದ ತೀರ್ಮಾನ ಪ್ರಮುಖವಾಗಿದೆ. ಕ್ವಾಡ್ ನಲ್ಲಿ ಉತ್ತಮ ಸಹಕಾರವನ್ನು ನಾವು ಹೊಂದಿದ್ದೇವೆ. ನಮ್ಮ ಈ ಸಹಯೋಗವು ಉಚಿತ, ಮುಕ್ತ ಮತ್ತು ಅಂತರ್ಗತ ಇಂಡೋ-ಪೆಸಿಫಿಕ್‌ಗೆ ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಕ್ವಾಡ್‌ನ ಯಶಸ್ಸು ಪ್ರಾದೇಶಿಕ ಮತ್ತು ಜಾಗತಿಕ ಸ್ಥಿರತೆಗೆ ನಿರ್ಣಾಯಕವಾಗಿದೆ ಎಂದು ಅವರು ಹೇಳಿದ್ದಾರೆ.

ವ್ಯಾಪಾರ ಮತ್ತು ಹೂಡಿಕೆ, ರಕ್ಷಣೆ ಮತ್ತು ಭದ್ರತೆ, ಶಿಕ್ಷಣ, ಅನ್ವೇಷಣೆ ಮತ್ತು ವಿಜ್ಞಾನ, ತಂತ್ರಜ್ಞಾನದಲ್ಲಿನ ಉಭಯ ದೇಶಗಳ ನಡುವಣ ಆಪ್ತ ಸಹಕಾರವಿದ್ದು, ಕಳೆದ ಕೆಲವು ವರ್ಷಗಳಲ್ಲಿ ಸಂಬಂಧಗಳು ಗಮನಾರ್ಹ ಪ್ರಗತಿಯನ್ನು ಕಂಡಿವೆ. ನೀರು ನಿರ್ವಹಣೆ, ನವಿಕರಿಸಬಲ್ಲ ಇಂಧನ, ಕೋವಿಡ್-19 ಸಂಶೋಧನೆ ಮತ್ತಿತರ ಕ್ಷೇತ್ರಗಳಲ್ಲಿ ಉಭಯ ದೇಶಗಳ ಸಹಯೋಗ ಗಮನಾರ್ಹ ರೀತಿಯಲ್ಲಿ ಪ್ರಗತಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message ‘Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ರಷ್ಯಕ್ಕೆ ಬೆಂಬಲ ನೀಡಿದರೆ ಚೀನಾಗೆ ಅಪಾಯವಿದೆ- ಲಿಂಡಾ ಥಾಮಸ್

0

ನಿರ್ಬಂಧಗಳಿಂದ ತಪ್ಪಿಸಿಕೊಳ್ಳಲು ಅನುವು ಮಾಡಿಕೊಡುವ ರಷ್ಯನ್ನರಿಗೆ ಗಣನೀಯ ಮಿಲಿಟರಿ ಅಥವಾ ಆರ್ಥಿಕ ಬೆಂಬಲವನ್ನು ನೀಡಲು ನಿರ್ಧರಿಸಿದರೆ ಚೀನಾಗೆ ಅಪಾಯ ಉಂಟಾಗುತ್ತದೆ ಎಂದು ಅಮೆರಿಕದ ಉನ್ನತ ರಾಜತಾಂತ್ರಿಕರೊಬ್ಬರು ಭಾನುವಾರ ಎಚ್ಚರಿಸಿದ್ದಾರೆ.

ಚೀನಾದ ಅಧ್ಯಕ್ಷ xi
ಜಿಂಗ್‌ಪಿಂಗ್ ಅವರು ಯುಎಸ್ ಅಧ್ಯಕ್ಷ ಜೋ ಬಿಡೆನ್ ಅವರು ಉಕ್ರೇನ್ ವಿರುದ್ಧದ ದಾಳಿಯಲ್ಲಿ ರಷ್ಯಾಕ್ಕೆ ವಸ್ತು ಬೆಂಬಲವನ್ನು ನೀಡಿದರೆ ಅದರ ಪರಿಣಾಮ ಅಪಾಯವನ್ನು ತಂದೊಡ್ಡಬಹುದು ಎಂದರು.

ಬೀಜಿಂಗ್ ಮಾಸ್ಕೋಗೆ ನೆರವು ನೀಡುವುದನ್ನು ತಡೆಯಲು ಬಿಡೆನ್ ಚೀನಾದ ನಾಯಕನೊಂದಿಗೆ ಸುದೀರ್ಘವಾಗಿ ಮಾತನಾಡಿದರು.

ಯುಎನ್‌ಗೆ ಯುಎಸ್ ರಾಯಭಾರಿ, ಲಿಂಡಾ ಥಾಮಸ್-ಗ್ರೀನ್‌ಫೀಲ್ಡ್, ಸಂದರ್ಶನವೊಂದರಲ್ಲಿ ಬಿಡೆನ್ ಅವರು xi ಅವರೊಂದಿಗಿನ ಚರ್ಚೆಯ ಬಗ್ಗೆ ಸ್ಪಷ್ಟಪಡಿಸಿದ್ದಾರೆ ಎಂದು ಹೇಳಿದರು. ಚೀನಾ ಗಣನೀಯ ಮಿಲಿಟರಿ ಅಥವಾ ಆರ್ಥಿಕ ಬೆಂಬಲವನ್ನು ನೀಡಲು ನಿರ್ಧರಿಸಿದರೆ ಅಪಾಯ ಉಂಟಾಗುತ್ತವೆ ಎಂದು ನಮ್ಮ ನಿಲುವು.
ನಾವು ನಮ್ಮ ನಿಲುವನ್ನು ಚೀನಾದವರಿಗೆ ಸ್ಪಷ್ಟಪಡಿಸಿದ್ದೇವೆ ಎಂದರು.

ನಮ್ಮ ಸಾರ್ವಭೌಮತ್ವ ಮತ್ತು ಗಡಿಗಳ ಸಮಗ್ರತೆಯ ತತ್ವಗಳ ವಿರುದ್ಧ ರಷ್ಯಾವನ್ನು ರಕ್ಷಿಸುವ ಸ್ಥಾನದಲ್ಲಿ ಅವರನ್ನು ಇರಿಸಲಾಗಿದೆ. ಆದ್ದರಿಂದ ಅವರು ಈ ಹಂತದಿಂದ ಎಲ್ಲಿಗೆ ಹೋಗಬೇಕೆಂದು ನಿರ್ಧರಿಸಬೇಕು. ಮತ್ತು ಬೇಲಿಯ ಮೇಲೆ ಕುಳಿತುಕೊಳ್ಳಬಾರದು. ಮತ್ತು ಅಸಮರ್ಥನೀಯವಾದದ್ದನ್ನು ರಕ್ಷಿಸುವ ಸ್ಥಾನದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬಾರದು ಎಂದು ಥಾಮಸ್ ಗ್ರೀನ್ಫೀಲ್ಡ್ ಅವರು ತಿಳಿಸಿದರು

ಎಲ್ಲಾ ಅಂತರಾಷ್ಟ್ರೀಯ ಮಾನದಂಡಗಳನ್ನು ಉಲ್ಲಂಘಿಸಿ ರಷ್ಯಾ ಸ್ವಚ್ಛವಾಗಿ ಆಕ್ರಮಣ ಮಾಡುತ್ತಿದೆ ಎಂದು ಆರೋಪಿಸಿದ ಅವರು, ಉಕ್ರೇನಿಯನ್ ನಾಗರಿಕರನ್ನು ಒತ್ತಡಕ್ಕೆ ದೂಡುವುದು ಮತ್ತು ಅವರನ್ನು ಮೂಲಭೂತವಾಗಿ ಕಾನ್ಸಂಟ್ರೇಶನ್ ಮತ್ತು ಖೈದಿಗಳ ಶಿಬಿರಗಳಲ್ಲಿ ಇರಿಸುವುದು ರಷ್ಯಾಕ್ಕೆ ಅಸಮಂಜಸವಾಗಿದೆ ಎಂದು ಹೇಳಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message ‘Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಪ್ರಸವಪೂರ್ವ ಲಿಂಗ ಪತ್ತೆ ನಿಷೇಧ ಕಾಯಿದೆಕಟ್ಟುನಿಟ್ಟು ಜಾರಿಗೆ

0

ಹೆಣ್ಣು ಭ್ರೂಣ ಪತ್ತೆ ಮತ್ತು ಹತ್ಯೆ ಮಾಡದಂತೆ ಹಾಗೂ ಹೆಣ್ಣು ಮಕ್ಕಳ ಲಿಂಗಾನುಪಾತವನ್ನು ಹೆಚ್ಚಿಸುವ ಉದ್ದೇಶದಿಂದ ಸರ್ಕಾರ ಜಾರಿಗೆ ತಂದಿರುವ ಗರ್ಭಧಾರಣ ಪೂರ್ವ ಮತ್ತು ಪ್ರಸವಪೂರ್ವ ಪತ್ತೆತಂತ್ರ ವಿಧಾನಗಳ (ಲಿಂಗ ಆಯ್ಕೆ ನಿಷೇಧ) ಕಾಯ್ದೆ 1994 ನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಲು ಆರೋಗ್ಯ ಇಲಾಖೆಯೊಂದಿಗೆ ಎಲ್ಲ ಇಲಾಖೆಗಳು, ಸಂಘ ಸಂಸ್ಥೆಗಳು ಕೈಜೋಡಿಸಬೇಕೆಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಹೇಳಿದರು.

ರಾಷ್ಟ್ರೀಯ ಆರೋಗ್ಯ ಅಭಿಯಾನ, ರಾಜ್ಯ ಪಿ.ಸಿ ಮತ್ತು ಪಿ.ಎನ್.ಡಿ.ಟಿ ಕೋಶ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಬೆಂಗಳೂರು ವಿಭಾಗ ಇವರ ವತಿಯಿಂದ ಇಂದು ನಗರದ ಬಿ.ಹೆಚ್.ರಸ್ತೆಯ ರಾಯಲ್ ಆರ್ಕಿಡ್ ಸೆಂಟ್ರಲ್ ಇಲ್ಲಿ ಏರ್ಪಡಿಸಲಾಗಿದ್ದ ವಿಭಾಗೀಯ ಮಟ್ಟದ ಪಿ.ಸಿ. ಮತ್ತು ಪಿ.ಎನ್.ಡಿ.ಟಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರೋಗ ಪತ್ತೆಯಂತಹ ಒಳ್ಳೆಯ ಉದ್ದೇಶಕ್ಕೆ ಬಳಕೆಯಾಗ ಬೇಕಾದ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ತಂತ್ರಜ್ಞಾನವನ್ನು ಹೆಣ್ಣು ಭ್ರೂಣ ಪತ್ತೆಗಾಗಿ ದುರುಪಯೋಗ ಪಡೆಸಿಕೊಳ್ಳಲಾಗುತ್ತಿದೆ. ಈ ದುರುಪಯೋಗವನ್ನು ನಿಯಂತ್ರಿಸಲು ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಸಲಹಾ ಮಂಡಳಿ ಹಾಗೂ ತಪಾಸಣಾ ಸಮಿತಿಗಳಿದ್ದು, ಬಹಳಷ್ಟು ಸ್ಟಿಂಗ್ ಕಾರ್ಯಾಚರಣೆಗಳನ್ನು ಕೈಗೊಳ್ಳಲಾಗುತ್ತಿದೆ. ಆದರೂ ಸಹ ಈ ಜಿಲ್ಲೆಯಿಂದ ಬೇರೆ ಜಿಲ್ಲೆ, ಬೇರೆ ಪ್ರದೇಶಗಳಿಗೆ ಹೋಗಿ ಹೆಣ್ಣು ಭ್ರೂಣ ಪತ್ತೆ ಮತ್ತು ಹತ್ಯೆಯಾಗುತ್ತಿರುವುದನ್ನು ಕಾಣುತ್ತಿದ್ದೇವೆ ಎಂದರು.

ಅನಧಿಕೃತವಾಗಿ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಮಷೀನ್‍ಗಳನ್ನು ಇರಿಸಿಕೊಂಡು ವ್ಯವಹರಿಸಲಾಗುತ್ತಿದೆ. ಸಮಿತಿಗಳಿದ್ದರೂ ಸಹ ಸಂಪೂರ್ಣವಾಗಿ ಇದನ್ನು ತಡೆಗಟ್ಟಲು ಆಗಿಲ್ಲ. ಇದನ್ನು ತಡೆಗಟ್ಟಲು ಕೇವಲ ಆರೋಗ್ಯ ಇಲಾಖೆಯಿಂದ ಮಾತ್ರ ಸಾಧ್ಯವಿಲ್ಲ. ಆರೋಗ್ಯ ಇಲಾಖೆಗೆ ಸಂಬಂಧಿಸಿದ ಎಲ್ಲ ವಿಭಾಗಗಳು, ಐಎಂಎ, ಎನ್‍ಜಿಓ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಕೈಜೋಡಿಸಬೇಕು ಎಂದರು.

ಮುಖ್ಯವಾಗಿ ಸಮಾಜ ಹೆಣ್ಣುಮಕ್ಕಳನ್ನು ನೋಡುವ ದೃಷ್ಟಿಕೋನ ಬದಲಾಗಬೇಕು. ಸಮುದಾಯದಲ್ಲಿನ ಮೂಢನಂಬಿಕೆ ಹೋಗಲಾಡಿಸಲು ಹೆಚ್ಚಿನ ಪ್ರಯತ್ನಗಳು ಆಗಬೇಕು. ಹಾಗೂ ಇದಕ್ಕೆ ಎಲ್ಲರೂ ಸಹಕರಿಸಬೇಕೆಂದರು.

ಇಂದಿನ ಕಾರ್ಯಾಗಾರದಲ್ಲಿ ಬೆಂಗಳೂರು ವಿಭಾಗ ವ್ಯಾಪ್ತಿಯ 09 ಜಿಲ್ಲೆಗಳ ಡಿಹೆಚ್‍ಓ ಸೇರಿದಂತೆ ಪಿಸಿ & ಪಿಎನ್‍ಡಿಸಿಟಿ ಸದಸ್ಯರು, ವೈದ್ಯರು ಬಂದಿದ್ದು ಎಲ್ಲ ಸೇರಿ ಹೆಣ್ಣು ಭ್ರೂಣ ಹತ್ಯೆ ತಡೆ ಹಾಗೂ ಹೆಣ್ಣು ಮಕ್ಕಳ ಲಿಂಗಾನುಪಾತ ಹೆಚ್ಚಿಸಲು ಒಂದು ಮೂಲ ನಕ್ಷೆ ತಯಾರಿಸಬೇಕು. ಕಾರ್ಯಕ್ರವನ್ನು ಅರ್ಥಪೂರ್ಣಗೊಳಿಸಿ ಫಲಪ್ರದವಾಗುವಂತೆ ಮಾಡಬೇಕೆಂದು ಕರೆ ನೀಡಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೈಶಾಲಿ ಎಂ.ಎಲ್ ಮಾತನಾಡಿ, ಹೆಣ್ಣು ಭ್ರೂಣ ಪತ್ತೆ ಮತ್ತು ಹತ್ಯೆ ತಡೆಯುವ ನಿಟ್ಟಿನಲ್ಲಿ ಡಿಹೆಚ್‍ಓ ನೇತೃತ್ವದ ತಂಡ ಜಿಲ್ಲೆಯಲ್ಲಿ ಅನೇಕ ಬಾರಿ ದಿಢೀರ್ ದಾಳಿ ನಡೆಸುತ್ತ ಬಂದಿದೆ. ಈ ತಂಡ ಇನ್ನೂ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಬೇಕು. ಜೊತೆಗೆ ನಿಯಮಿತವಾಗಿ ಜಿಲ್ಲೆಯಲ್ಲಿ ಒಟ್ಟು ಗರ್ಭಧಾರಣೆ, ಪ್ರಸವ ಮತ್ತು ಇವರೆಡರ ನಡುವಿನ ವ್ಯತ್ಯಾಸ ಮತ್ತು ಅದಕ್ಕೆ ಕಾರಣಗಳನ್ನು ಪರಿಶೀಲಿಸುತ್ತಾ ಇರಬೇಕು. ಯಾರಾದರೂ ಕಾನೂನುಬಾಹಿರವಾಗಿ ಭ್ರೂಣ ಪತ್ತೆ ಅಥವಾ ಹತ್ಯೆಗೆ ಕೇಳಿಕೊಂಡರೆ ಅಂತಹವರಿಗೆ ಮನವರಿಕೆ ಮಾಡಬೇಕು ಎಂದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಪಿ.ಸಿ.ಎನ್.ಡಿ.ಟಿ ಉಪ ನಿರ್ದೇಶಕ ಡಾ.ವಿವೇಕ್ ದೊರೈ ಪಿಪಿಟಿ ಪ್ರದರ್ಶನ ಮೂಲಕ ಗರ್ಭಧಾರಣ ಪೂರ್ವ ಮತ್ತು ಪ್ರಸವಪೂರ್ವ ಪತ್ತೆತಂತ್ರ ವಿಧಾನಗಳ (ಲಿಂಗ ಆಯ್ಕೆ ನಿಷೇಧ) ಕಾಯ್ದೆ 1994(ಪಿ.ಸಿ ಮತ್ತು ಪಿ.ಎನ್.ಡಿ.ಟಿ ಕಾಯ್ದೆ) ಹಾಗೂ ಹೆಣ್ಣುಭ್ರೂಣ ಪತ್ತೆ ಮತ್ತು ಹತ್ಯೆ ತಡೆ ಜೊತೆಗೆ ಹೆಣ್ಣು ಲಿಂಗಾನುಪಾತ ಹೆಚ್ಚಿಸುವ ಕುರಿತಾದ ಅಂಶಗಳ ಬಗ್ಗೆ ಮಾತನಾಡಿದರು.

ಬೆಂಗಳೂರು ವಿಭಾಗದ ವಿಭಾಗೀಯ ಜಂಟಿ ನಿರ್ದೇಶಕರ ಕಚೇರಿಯ ಉಪನಿರ್ದೇಶಕಿ ಡಾ.ಮಮತ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಕಾಯ್ದೆ ಕುರಿತು ಮಾತನಾಡಿದರು.

ಡಿಹೆಚ್ ಓ ಡಾ.ರಾಜೇಶ್ ಸುರಗಿಹಳ್ಳಿ ಸ್ವಾಗತಿಸಿದರು. ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಮಂಜುನಾಥ ನಾಗಲೀಕರ ವಂದಿಸಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message ‘Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಉದ್ಯೋಗ ವಾರ್ತೆ

0

ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಖಾಲಿ ಇರುವಂತ ಜವಾನರ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ 28 ಸಾವಿರದವರೆಗೆ ವೇತನವನ್ನು ನಿಗದಿ ಪಡಿಸಲಾಗಿದೆ.

ಈ ಬಗ್ಗೆ ಶಿವಮೊಗ್ಗ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಅಧಿಸೂಚನೆ ಹೊರಡಿಸಿದೆ. ಖಾಲಿ ಇರುವಂತ 27 ಜವಾನ ಹುದ್ದೆಗಳಿಗೆ ಹಾಗೂ ಹಿಂಬಾಕಿ ಉಳಿದ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಹ ಅಭ್ಯರ್ಥಿಗಳು https://recruitmenthck.kar.nic.in/district/shm/gdp/home.php ಲಿಂಕ್ , ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ದಿನಾಂಕ 25-02-2022ರಿಂದ ಅರ್ಜಿ ಸಲ್ಲಿಕೆ ಆರಂಭಗೊಂಡಿದೆ. ಅರ್ಜಿ ಸಲ್ಲಿಸಲು ದಿನಾಂಕ 24 ಕೊನೆ ದಿನವಾಗಿದೆ.

ಶೈಕ್ಷಣಿಕ ವಿದ್ಯಾರ್ಹತೆ – ಎಸ್ ಎಸ್ ಎಲ್ ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು. ಕನ್ನಡ ಓದಲು, ಬರೆಯಲು ತಿಳಿದಿರಬೇಕು.

ವೇತನ ಶ್ರೇಣಿ – ರೂ.17,000 ರಿಂದ 28,950 ಹಾಗೂ ಇತರೆ ಭತ್ಯೆಗಳು ಸೇರಿವೆ.

ಕನಿಷ್ಠ 18, ಗರಿಷ್ಣ ವಯೋಮಿತಿ ಸಾಮಾನ್ಯ ವರ್ಗಕ್ಕೆ 35 ವರ್ಷ, 2ಎ, 2ಬಿ, 3ಎ, 3ಬಿ ವರ್ಗದವರಿಗೆ 38 ವರ್ಷ, ಪರಿಶಿಷ್ಟ ಜಾತಿ, ಪಂಗಡ, ಪ್ರವರ್ಗ 1ಕ್ಕೆ 40 ವರ್ಷಗಳಾಗಿವೆ.

ಅರ್ಜಿ ಶುಲ್ಕ 200 ರೂಪಾಯಿ ಸಾಮಾನ್ಯ ವರ್ಗದವರಿಗೆ, 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ ರೂ.100, ಎಸ್ಸಿ, ಎಸ್ಟಿ, ಪ್ರವರ್ಗ-1 ಮತ್ತು ಅಂಗವಿಕಲರಿಗೆ ಶುಲ್ಕದಿಂದ ವಿನಾಯ್ತಿ ನೀಡಲಾಗಿದೆ.

ಕನ್ನಡ ಓದಲು, ಬರೆಯಲು ಅಭ್ಯರ್ಥಿ ಹೊಂದಿರುವ ಸಾಮರ್ಥ್ಯ ಮತ್ತು ಸಾಮಾನ್ಯ ಜ್ಞಾನದ ಬಗ್ಗೆ ಸಂದರ್ಶನ. ಅರ್ಹತಾ ಪರೀಕ್ಷೆಯಲ್ಲಿ ಗಳಿಸಿರುವ ಒಟ್ಟು ಶೇಕಡಾವಾರು ಅಂಕಗಳ ಆಧಾರದ ಮೇಲೆ ಒಂದು ಹುದ್ದೆಗೆ 10 ಅಭ್ಯರ್ಥಿಗಳಂತೆ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message ‘Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಸಂಧಾನಕ್ಕೆ ಸಿದ್ಧ- ಝೆಲೆನ್ಸ್ಕಿ

0

ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರ ಜೊತೆ ಸಂಧಾನಕ್ಕೆ ಸಿದ್ಧನಿದ್ದೇನೆ. ಆದರೆ ಸಂಧಾನಕಾರರ ಪ್ರಯತ್ನ ವಿಫಲಗೊಂಡರೆ 3ನೇ ವಿಶ್ವಯುದ್ಧವೆಂದೇ ಅರ್ಥ’ ಎಂದು ಉಕ್ರೇನ್‌ನ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಹೇಳಿದ್ದಾರೆ.

ಈ ಕುರಿತು ಉಕ್ರೇನ್‌ನ ಮಾಧ್ಯಮ ‘ದಿ ಕೀವ್‌ ಇಂಡಿಪೆಂಡೆಂಟ್‌’ ತಿಳಿಸಿರುವುದಾಗಿ ಸುದ್ದಿ ಸಂಸ್ಥೆ ‘ಎಎನ್‍‌ಐ’ ಟ್ವೀಟ್‌ ಮಾಡಿದೆ.

‘ಕಲಾ ಶಾಲೆಯ ಮೇಲೆ ರಷ್ಯಾದ ಸೇನೆ ಬಾಂಬ್ ದಾಳಿ ನಡೆಸಿದೆ. ರಷ್ಯಾದ ಪಡೆಗಳು ನಿರಂತರ ಆಕ್ರಮಣದಲ್ಲಿ ಯುದ್ಧಾಪರಾಧಗಳನ್ನು ಎಸಗುತ್ತಿದ್ದು, ರಷ್ಯಾವು ಇತಿಹಾಸದ ಪುಟದಲ್ಲಿ ಅಧೋಗತಿಗೆ ಇಳಿಯಲಿದೆ’ ಎಂದು ಝೆಲೆನ್‌ಸ್ಕಿ ಆಕ್ರೋಶ ಹೊರಹಾಕಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message ‘Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಉಕ್ರೇನ್ ನಿಂದ ವಾಪಸಾದ ವಿದ್ಯಾರ್ಥಿಗಳ ಭವಿಷ್ಯದ ಕಾಳಜಿ ಇದೆ-ಸಿಎಂ

0

ಖಾಸಗಿ ಮೆಡಿಕಲ್ ಕಾಲೇಜುಗಳಲ್ಲಿ ಶುಲ್ಕ ಹೆಚ್ಚಾಗಿದೆ. ಇದನ್ನು ಕಡಿಮೆ ಮಾಡುವ ಬಗ್ಗೆ ಚಿಂತನೆ ಮಾಡಲಾಗುವುದು. ಶೇ.95 ರಷ್ಟು ಅಂಕ ಪಡೆದವರಿಗೂ ಸೀಟ್ ಸಿಗುತ್ತಿಲ್ಲ. ಈ ಬಗ್ಗೆ ಗಂಭೀರ ಚಿಂತನೆ ಆಗಬೇಕು ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

ಕರ್ನಾಟಕದಲ್ಲಿ ವೈದ್ಯಕೀಯ ಶುಲ್ಕ ಕಡಿಮೆ ಮಾಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ.
ಉಕ್ರೇನ್​ನಿಂದ ಬಂದ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಕೇಂದ್ರ ಸರ್ಕಾರ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದೆ ಎಂದರು.

ಅಲ್ಲಿನ ವೈದ್ಯಕೀಯ ಕೋರ್ಸ್​ಗೂ, ಇಲ್ಲಿಗೂ ಬದಲಾವಣೆ ಇದೆ‌. ಈಗಾಗಲೇ ಇಂತಹ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ.

ಭಾರತೀಯ ವೈದ್ಯಕೀಯ ಮಂಡಳಿ ಚಿಂತನೆ ಮಾಡುತ್ತಿದೆ ಎಂದು ದಾವಣಗೆರೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.

ನಮ್ಮಲ್ಲಿ ಸರ್ಕಾರಿ ಕಾಲೇಜುಗಳಲ್ಲಿ ಶುಲ್ಕ‌ ಕಡಿಮೆ ಇದೆ. ಖಾಸಗಿ ಮೆಡಿಕಲ್ ಕಾಲೇಜುಗಳಲ್ಲಿ ಶುಲ್ಕ ಹೆಚ್ಚಾಗಿದೆ. ಇದನ್ನು ಕಡಿಮೆ ಮಾಡುವ ಬಗ್ಗೆ ಚಿಂತನೆ ಮಾಡಲಾಗುವುದು. ಶೇ.95 ರಷ್ಟು ಅಂಕ ಪಡೆದವರಿಗೂ ಸೀಟ್ ಸಿಗುತ್ತಿಲ್ಲ. ಈ ಬಗ್ಗೆ ಗಂಭೀರ ಚಿಂತನೆ ಆಗಬೇಕು ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.

ವೈದ್ಯಕೀಯ ವಿದ್ಯಾರ್ಥಿಗಳು ಇಂದು ಸಿಎಂ ಭೇಟಿ ಆಗಲಿದ್ದಾರೆ. ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದಲ್ಲಿ ಸಿಎಂ ಬೊಮ್ಮಾಯಿ ಜತೆ ಚರ್ಚೆ ನಡೆಸಲಿದ್ದಾರೆ.

ರಷ್ಯಾ, ಉಕ್ರೇನ್ ಯುದ್ಧ ಮುಂದುವರಿದಿರುವ ಹಿನ್ನೆಲೆ ಮೆಡಿಕಲ್ ವಿದ್ಯಾರ್ಥಿಗಳಿಂದ ತುಮಕೂರು ಡಿಸಿ ಭೇಟಿ ಮಾಡಲಾಗಿದೆ. ಉಕ್ರೇನ್​​ನಿಂದ ವಾಪಸಾದ ಮೆಡಿಕಲ್ ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಭೇಟಿ ಆಗಿದ್ದಾರೆ. ಯುದ್ಧದಿಂದ ನಮ್ಮ ಶಿಕ್ಷಣದ ಭವಿಷ್ಯ ಅತಂತ್ರವಾಗಿದೆ. ಇಲ್ಲೇ ಶಿಕ್ಷಣಕ್ಕೆ ವ್ಯವಸ್ಥೆ ಮಾಡಿಕೊಡಲು ಡಿಸಿಗೆ ಮನವಿ ಮಾಡಲಾಗಿದೆ. ಡಿಸಿ ವೈ.ಎಸ್. ಪಾಟೀಲ್​ಗೆ ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ.

ತುಮಕೂರು ಜಿಲ್ಲೆಯ 26 ಮೆಡಿಕಲ್ ವಿದ್ಯಾರ್ಥಿಗಳು ಮನವಿ ಸಲ್ಲಿಸಿದ್ದಾರೆ. ವಿದ್ಯಾರ್ಥಿಗಳ ಮನವಿ ಬಗ್ಗೆ ಸರ್ಕಾರದ ಗಮನಕ್ಕೆ ತರುತ್ತೇನೆ ಎಂದು ತುಮಕೂರು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್ ಹೇಳಿದ್ದಾರೆ.

ಉಕ್ರೇನ್ ನಿಂದ ವಾಪಸ್ ಆಗಿ ನಮ್ಮ ವಿದ್ಯಾಭ್ಯಾಸ ತೊಂದರೆಯಾಗಿದೆ. ಹೀಗಾಗಿ ನಮಗೆ ನಮ್ಮ ರಾಜ್ಯದ ಮೆಡಿಕಲ್ ಕಾಲೇಜುಗಳಲ್ಲಿ ಸೀಟ್ ಕೊಡಿಸಬೇಕೆಂದು ಡಿಸಿಗೆ ಮನವಿ ಮಾಡಿದ್ದೇವೆ. ಆಯಾ ಸೆಮಿಸ್ಟರ್ ಪರೀಕ್ಷೆಗಳಿಗೆ ಅನುಗುಣವಾಗಿ ಅವಕಾಶ ನೀಡುವಂತೆ ಮನವಿ ಮಾಡಲಾಗಿದೆ. ಸರ್ಕಾರ ನಮಗೆ ವ್ಯವಸ್ಥೆ ಕಲ್ಪಿಸಬೇಕೆಂದು ವಿದ್ಯಾರ್ಥಿಗಳಿಂದ ಮನವಿ ಮಾಡಲಾಗಿದೆ ಎಂದು ಉಕ್ರೇನ್​ನಿಂದ ವಾಪಸ್ ಆದ ಮೆಡಿಕಲ್ ವಿದ್ಯಾರ್ಥಿನಿಯೊಬ್ಬರು ಹೇಳಿಕೆ ನೀಡಿದ್ದಾರೆ.

ಉಕ್ರೇನ್​ನಿಂದ ವಾಪಸ್ ಆದ ವಿದ್ಯಾರ್ಥಿಗಳು ನನ್ನ ಮೂಲಕ ಸರ್ಕಾರಕ್ಕೆ ಮನವಿ ಪತ್ರ ನೀಡಿದ್ದಾರೆ. ಉಕ್ರೇನ್​ನಲ್ಲಿ ವಿದ್ಯಾಭ್ಯಾಸ ಸಂಪೂರ್ಣ ನಿಂತಿದ್ದು, ನಮ್ಮ ರಾಜ್ಯದಲ್ಲಿ ಹತ್ತಿರದ ಮೆಡಿಕಲ್ ಕಾಲೇಜಿನಲ್ಲಿ ಸೀಟ್ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದ್ದಾರೆ. ನಾನು ಈ ಬಗ್ಗೆ ಸರ್ಕಾರಕ್ಕೆ ತಿಳಿಸಿ, ಬಳಿಕ ಸರ್ಕಾರದ ನಿರ್ಧಾರವನ್ನು ತಿಳಿಸಲಾಗುತ್ತದೆ ಎಂದು ತುಮಕೂರು ಡಿಸಿ ವೈಎಸ್ ಪಾಟೀಲ್ ಹೇಳಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message ‘Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಸಾವಿನಲ್ಲೂ ಸಮಾಜ ಸೇವೆ ಮಾಡಿದ ನವೀನ್

0

ಯೂಕ್ರೇನ್‌ನಲ್ಲಿ ನಡೆದ ಬಾಂಬ್‌ ದಾಳಿಯಲ್ಲಿ ಇದೇ 2ರಂದು ಮೃತಪಟ್ಟ ಹಾವೇರಿ ಜಿಲ್ಲೆಯ ರಾಣೆಬೇನ್ನೂರು ತಾಲೂಕಿನ ಚಳಗೇರಿ ಗ್ರಾಮದ ನವೀನ್‌ ಮೃತದೇಹ 20 ದಿನಗಳ ಬಳಿಕ ತಾಯ್ನಾಡನ್ನು ಸೇರಿದೆ.

ಇದಾಗಲೇ ಮೃತದೇಹ ಬೆಂಗಳೂರಿನಿಂದ ನವೀನ್‌ ಗ್ರಾಮಕ್ಕೆ ತೆರಳುತ್ತಿದ್ದು ಬೆಳಗ್ಗೆ 10 ಗಂಟೆ ಸುಮಾರಿಗೆ ಗ್ರಾಮವನ್ನು ತಲುಪಿದೆ.
ಒಂದೆಡೆ ಪಾರ್ಥಿವ ಶರೀರವನ್ನು ಬರಮಾಡಿಕೊಳ್ಳಲು ಗ್ರಾಮಸ್ಥರು ಸಜ್ಜಾಗಿದ್ದರೆ, ಮನೆ ಮಗನನ್ನು ಕಳೆದುಕೊಂಡಿರುವ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

ಆದರೆ ಈ ನೋವಿನ ನಡುವೆಯೇ ಕುಟುಂಬಸ್ಥರು ಶ್ಲಾಘನಾರ್ಹ ನಿರ್ಧಾರ ತೆಗೆದುಕೊಂಡಿದ್ದಾರೆ.

ನವೀನ್‌ ಡಾಕ್ಟರ್‌ ಆಗಬೇಕೆಂಬ ಹಂಬಲದಿಂದ ಎಂಬಿಬಿಎಸ್‌ ಓದಲು ಯೂಕ್ರೇನ್‌ಗೆ ಹೋಗಿದ್ದ. ಮಗ ಡಾಕ್ಟರ್‌ ಆಗುವ ಬದಲು ಅಲ್ಲಿಯೇ ಬಲಿಯಾದ. ಈ ನಡುವೆಯೇ ಮಹತ್ವದ ನಿರ್ಧಾರ ತೆಗೆದುಕೊಂಡಿರುವ ಕುಟುಂಬಸ್ಥರು ಮೃತ ದೇಹವನ್ನು ದಾವಣಗೆರೆ ಎಸ್ ಎಸ್ ಮೆಡಿಕಲ್ ಕಾಲೇಜು ಹಸ್ತಾಂತರ ಮಾಡಲು ನಿರ್ಧರಿಸಿದ್ದಾರೆ.

ಪಾರ್ಥಿವ ಶರೀರ ಬರಮಾಡಿಕೊಳ್ಳಲು ನವೀನ್ ಮನೆ ಮುಂದೆ ಶಾಮಿಯಾನ ಬ್ಯಾರಿಕೇಡ್ ಹಾಕಿ ಸಕಲ ಸಿದ್ಧತೆ ಮಾಡಲಾಗಿದೆ.

ಇಂದು ಚಳಗೇರಿ ಗ್ರಾಮದಲ್ಲಿ ನವೀನ್ ಅಂತಿಮ ದರ್ಶನ ಮಾಡಲು ಮನೆ ಮುಂದೆ 4 ಗಂಟೆಗಳ ಕಾಲ ಪಾರ್ಥಿವ ಶರೀರಕ್ಕೆ ಗೌರವ ಸೂಚಿಸಲು ವ್ಯವಸ್ಥೆ ಮಾಡಲಾಗಿದೆ. ಬಳಿಕ ಲಿಂಗಾಯತ ಸಂಪ್ರದಾಯದಂತೆ ಅಂತಿಮ ವಿಧಿವಿಧಾನ ನಡೆಯಲಿದೆ.

ಇದಾದ ಬಳಿಕ ನಂತರ ಮೃತ ದೇಹವನ್ನು ದಾವಣಗೆರೆ ಎಸ್ ಎಸ್ ಮೆಡಿಕಲ್ ಕಾಲೇಜು ಹಸ್ತಾಂತರ ಮಾಡಲಾಗುತ್ತದೆ. ನವೀನ್ ಕುಟುಬಂಸ್ಥರ ಆಸೆಯಂತೆ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲವಾಗಲು ಮೃತದೇಹ ದಾನ ಮಾಡಲು ಕುಟುಂಬಸ್ಥರು ನಿರ್ಧಾರ ತೆಗೆದುಕೊಂಡಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message ‘Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಹಿಂದೂಸ್ತಾನ್ ಕೊ ದಾದ್ ದೇತಾ ಹ್ಞೂಂ-ಇಮ್ರಾನ್

0

ಭಾರತದ ವಿದೇಶಾಂಗ ನೀತಿಯನ್ನು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಮೆಚ್ಚಿ ಹೊಗಳಿದ್ದಾರೆ.

ಖೈಬರ್ ಪಖ್ತುಂಕ್ವಾದ ಪ್ರಾಂತ್ಯದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿರುವ ಖಾನ್, ಅಮೆರಿಕದ ನಿರ್ಬಂಧಗಳ ಹೊರತಾಗಿಯೂ ರಷ್ಯಾದಿಂದ ಕಚ್ಚಾ ತೈಲವನ್ನು ಆಮದು ಮಾಡಿಕೊಂಡಿರುವುದಕ್ಕೆ ಭಾರತದ ಸ್ವತಂತ್ರ ವಿದೇಶಾಂಗ ನೀತಿಯನ್ನು ಶ್ಲಾಘಿಸಿದ್ದಾರೆ.
ʼಮೇ ಆಜ್ ಹಿಂದೂಸ್ತಾನ್ ಕೋ ದಾದ್ ದೇತಾ ಹೂಂʼ (ನಾನು ಇಂದು ಭಾರತಕ್ಕೆ ಸಲ್ಯೂಟ್ ಮಾಡುತ್ತೇನೆ). ಭಾರತವು ಯಾವಾಗಲೂ ಸ್ವತಂತ್ರ ವಿದೇಶಾಂಗ ನೀತಿಯನ್ನು ಅನುಸರಿಸಿದೆ ಎಂದು ಹೇಳಿದರು.

ಭಾರತವು ಅಮೆರಿಕದೊಂದಿಗೆ ಕ್ವಾಡ್ ಮೈತ್ರಿಕೂಟದ ಸದಸ್ಯ ರಾಷ್ಟ್ರವಾಗಿದ್ದರೂ ಅದು ಇನ್ನೂ ತನ್ನನ್ನು ತಟಸ್ಥ ಎಂದು ಕರೆಯುತ್ತದೆ. ಅಮೇರಿಕ ನಿರ್ಬಂಧಗಳನ್ನು ಹೇರಿರುವ ರಷ್ಯಾದಿಂದಲೇ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಇದು ಹೇಗೆ ಸಾಧ್ಯವಾಗಿದೆಯೆಂದರೆ ಭಾರತದ ವಿದೇಶಾಂಗ ನೀತಿ ತನ್ನ ಜನರಿಗಾಗಿ ಕೆಲಸ ಮಾಡುತ್ತದೆ ಎಂದು ಪಾಕ್‌ ಪ್ರಧಾನಿ ಇಮ್ರಾನ್ ಖಾನ್ ಮೆಚ್ಚುಗೆ ಸೂಚಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message ‘Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಅಸಾನಿ ಚಂಡಮಾರುತ ಮಳೆ ತರಲಿದೆ ಹವಾಮಾನ ಮುನ್ಸೂಚನೆ

0

ಬಂಗಾಳ ಕೊಲ್ಲಿಯಲ್ಲಿ ರೂಪುಗೊಂಡಿರುವ ಅಸನಿ ಚಂಡಮಾರುತದಿಂದ ರಾಜ್ಯದಲ್ಲಿ ಮುಂದಿನ 3-4 ದಿನ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ನೀಡಿದೆ.

ಉತ್ತರ ಕನ್ನಡ, ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಕೊಡಗು ಮತ್ತು ಹಾಸನದಲ್ಲಿ ಮಾ.
21ರಿಂದ ಮಾ.23ರವರೆಗೆ ಭಾರಿ ಮಳೆ ಬೀಳಲಿದೆ.

ಈ ಹಿನ್ನೆಲೆಯಲ್ಲಿ ಇಲಾಖೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ. ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಲ್ಲಿ ಮುಂದಿನ 72 ಗಂಟೆ ಗುಡುಗು ಮಿಂಚು ಸಹಿತ ಹಗುರದಿಂದ ಕೂಡಿದ ಮಳೆಯಾಗಲಿದೆ.

ಭಾನುವಾರ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಸುರಿದಿದೆ. ಮಧ್ಯಾಹ್ನದವರೆಗೆ ಬಿಸಿಲು ಜತೆಗೆ ಮೋಡಕವಿದ ವಾತಾವರಣವಿತ್ತು. ಸಂಜೆ ವೇಳೆ ಕೆಲವೆಡೆ ಭರ್ಜರಿ ಮಳೆಯಾಗಿದೆ. ಕೆಲ ಜಿಲ್ಲೆಗಳಲ್ಲಿ ಗರಿಷ್ಠ ಹಾಗೂ ಕನಿಷ್ಠ ತಾಪಮಾನದಲ್ಲಿ ಏರಿಳಿತವಾಗಿದೆ ಎನ್ನಲಾಗಿದೆ.