ಟಿ – 20 ವಿಶ್ವಕಪ್ ಟೂರ್ನಿಯ ಸೂಪರ್ – 12 ರ A-ಗುಂಪಿನಲ್ಲಿರುವ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ತಂಡ ಭರ್ಜರಿ ಜಯಗಳಿಸಿತು.ಟಿ – 20 ವಿಶ್ವಕಪ್ ಫೈನಲ್ ಹಂತಕ್ಕೆ ಮೆಟ್ಟಿಲೇರಿದೆ.
ಅಬುಧಾಬಿಯ ಕ್ರೀಡಾಂಗಣದಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ಆಡಿದ ಇಂಗ್ಲೆಂಡ್ ಮೊಯಿನ್ ಅಲಿ 37 ಎಸೆತಗಳಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್ ಗಳನ್ನ ಬಾರಿಸಿ ಇವರ ಸ್ಫೋಟಕ ಬ್ಯಾಟಿಂಗ್ ಆಟದಿಂದ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 166 ರನ್ ಗಳಿಸುವುದಕ್ಕೆ ನೆರವಾದರು.
166 ರನ್ ಗಳನ್ನ ಸ್ಪರ್ಧಾತ್ಮಕ ಗೆಲುವಿನ ಗುರಿಯನ್ನಿಟ್ಟುಕೊಂಡು ಬೆನ್ನತ್ತಿ ಆಡಿದ ನ್ಯೂಜಿಲೆಂಡ್ ತಂಡ ಕೇವಲ 19 ಓವರ್ ಗಳಲ್ಲಿಯೇ 5 ವಿಕೆಟ್ ನಷ್ಟಕ್ಕೆ 167 ರನ್ ಭಾರಿಸು ರೋಚಕ ಜಯ ಸಾಧಿಸಿದೆ.ಆರಂಭಿಕ ವಿಕೆಟ್ ಹಂತದಲ್ಲಿ ಆಡಿದ ಡೇರಿಲ್ ಮಿಚೆಲ್ ರವರು 47 ಎಸೆತಗಳಲ್ಲಿ 4 ಬೌಂಡರಿ ಹಾಗೂ 4 ಸಿಕ್ಸರ್ ಗಳನ್ನ ಸಿಡಿಸಿ 72 ರನ್ ಗಳನ್ನ ಗಳಿಸಿ ತಂಡವನ್ನು ಫೈನಲ್ ಗೇರಿಸುವ ಜವಾಬ್ಧಾರಿಯನ್ನು ಅಚ್ಚು – ಕಟ್ಟಾಗಿ ನಿಭಾಯಿಸಿದರು.
2019 ರ ಏಕದಿನ ವಿಶ್ವಕಪ್ ಫೈನಲ್ ನಲ್ಲಿ ಆಂಗ್ಲರ ವಿರುದ್ಧ ಬೌಂಡರಿ ಕೌಂಟ್ ನಲ್ಲಿ ಕಂಡ ನಿರಾಸೆಗೂ ಸೇಡು ತೀರಿಸಿಕೊಂಡ ನ್ಯೂಜಿಲೆಂಡ್ ತಂಡ ಟಿ – 20 ವಿಶ್ವಕಪ್ ಟೂರ್ನಿಯ ಮೊದಲ ಸೆಮಿಫೈನಲ್ ಹಣಾಹಣಿಯಲ್ಲಿ ಇಂಗ್ಲೆಂಡ್ ತಂಡವನ್ನು 5 ವಿಕೆಟ್ ಗಳಿಂದ ಸೋಲಿಸಿ ಟೂರ್ನಿಯ ಮೊಟ್ಟ ಮೊದಲ ಬಾರಿಗೆ ಫೈನಲ್ ಹಂತಕ್ಕೇರಿದ ನ್ಯೂಜಿಲೆಂಡ್ ತಂಡ ಭಾನುವಾರ ನಡೆಯಲಿರುವ ಫೈನಲ್ ಹಂತದಲ್ಲಿ ಪಾಕ್ – ಆಸೀಸ್ ನಡುವೆ ಮುಖಾಮುಖಿ ಆಡಲಿದೆ.
ಟಿ – 20 ಫೈನಲ್ ಕಿವೀಸ್ ಮೊದಲ ಪ್ರವೇಶ
ನೇತ್ರಾ ಪುತ್ರನಿಗೆ ” ಪುನೀತ್ ” ನಾಮಧೇಯ.
ಸಕ್ರೆಬೈಲು ಆನೆ ಬಿಡಾರದ ನೇತ್ರಾವತಿ ಆನೆಯ ಮಗನಿಗೆ ಪುನೀತ್ ರಾಜಕುಮಾರ್ ಎಂದು ಹೆಸರಿಡಲಾಗಿದೆ. ಖ್ಯಾತ ನಟ ಪುನೀತ್ ರಾಜಕುಮಾರ್ ಅವರ ನಿಧನದ ಬಳಿಕ ಹಲವು ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳನ್ನು ಗಣ್ಯರು ಹಾಗೂ ಅಭಿಮಾನಿಗಳು ಕೈಗೊಳ್ಳುತ್ತಿದ್ದಾರೆ.
ಕಳೆದ ಒಂದುವರೆ ತಿಂಗಳ ಹಿಂದೆ ನಟ ಪುನೀತ್ ರಾಜಕುಮಾರ್ ಅವರು ಶಿವಮೊಗ್ಗದ ಸಕ್ರೆಬೈಲು ಆನೆ ಬಿಡಾರಕ್ಕೆ ಅರಣ್ಯ ಇಲಾಖೆಗೆ ಸಂಬಂಧಿಸಿದ ವನ್ಯಜೀವಿ ಸಾಕ್ಷಚಿತ್ರ ಚಿತ್ರೀಕರಣಕ್ಕೆಂದು ಭೇಟಿ ನೀಡಿದರು. ಆವೇಳೆ ಆನೆಗಳನ್ನು ಕಂಡು ಪುನೀತ್ ಹರ್ಷ ವ್ಯಕ್ತಪಡಿಸಿದರು ಹಾಗೂ ನೇತ್ರಾವತಿ ಆನೆಯ ಮರಿಯನ್ನು ಮುದ್ದಾಡಿದರು. ಕೆಲಕಾಲ ಆ ಆನೆ ಮರಿಯೊಂದಿಗೆ ಚಿನ್ನಾಟ ಸಹ ಆಡಿ ಅದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಬಿಡಾರದಲ್ಲಿರುವ ಮಾವುತರೊಂದಿಗೆ ಆತ್ಮೀಯವಾಗಿ ಮಾತನಾಡಿ ಅವರೊಂದಿಗೆ ಫೋಟೋ ತೆಗೆಸಿಕೊಂಡು ಮತ್ತೆ ಬರುವುದಾಗಿ ಹೇಳಿ ಹೋಗಿದ್ದರು. ಅದಾಗಿ ಒಂದುವರೆ ತಿಂಗಳ ಒಳಗಾಗಿ
ಪುನೀತ್ ಅವರ ಹಠಾತ್ ನಿಧನ ಎಲ್ಲರಲ್ಲೂ ದಿಗ್ಭ್ರಮೆ ಮೂಡಿಸಿದೆ.

ಪುನೀತ್ ರಾಜಕುಮಾರ್ ಸ್ಮರಣೆಗಾಗಿ ಅವರ ಮುದ್ದಾಡಿದ ಮರಿ ಆನೆಗೆ ಪುನೀತ್ ರಾಜಕುಮಾರ್ ಎಂದು ನಾಮಕರಣ ಮಾಡಿದ್ದಾರೆ. ಈ ಬಗ್ಗೆ ಮಾತನಾಡಿದ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ನಾಗರಾಜ್ ಅವರು ಮಾತನಾಡಿ. ಮರಿ ಆನೆಗೆ ಏನು ಹೆಸರಿಡಬೇಕಂಬ ಬಗ್ಗೆ ಬಹಳ ಚರ್ಚೆ ನಡೆದಿತ್ತು. ಇತ್ತೀಚೆಗಷ್ಟೇ ಬಿಡಾರಕ್ಕೆ ಬಂದು ಹೋದ ಪುನೀತ್ ಅವರು ದೈಹಿಕವಾಗಿ ನಮ್ಮನ್ನು ಅಗಲಿದ್ದರಿಂದ ಮರಿ ಆನೆಗೆ ಅವರ ಹೆಸರು ಇಡಬೇಕೆಂಬ ಬಗ್ಗೆ ಸಿಬ್ಬಂದಿ ಅಭಿಪ್ರಾಯ ಸೂಚಿಸಿದ್ದರು. ಅಪ್ಪು ಅವರು ವನ್ಯಜೀವಿಗಳ ಬಗ್ಗೆ ಅಪಾರವಾದ ಪ್ರೀತಿ ಇಟ್ಟುಕೊಂಡಿದ್ದರಿಂದ ಆನೆ ಮರಿಗೆ ಅವರ ಹೆಸರು ಇಡಲಾಗಿದೆ ಎಂದು ಹೇಳಿದರು.
ಅಂಕಪಟ್ಟಿ : ಡಿಜಿಲಾಕರ್ ಮಾನ್ಯತೆ
ಡಿಜಿಟಲ್ ಇಂಡಿಯಾ ಪರಿಕಲ್ಪನೆಯ ಪ್ರಯೋಜನೆಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಕರ್ನಾಟಕ ಹೆಜ್ಜೆ ಹಾಕುತ್ತಿದೆ.
ರಾಷ್ಟ್ರೀಯ ಶೈಕ್ಷಣಿಕ ಠೇವಣಿ (ನ್ಯಾಷನಲ್ ಅಕಾಡೆಮಿ ಡಿಪಾಸಿಟರಿ) ಭಾಗವಾಗಿ ಇನ್ಮುಂದೆ ಶೈಕ್ಷಣಿಕ ಅಂಕಪಟ್ಟಿಗಳು ಮತ್ತು ಪ್ರಮಾಣ ಪತ್ರ ಡಿಜಿಲಾಕರ್ ನಲ್ಲಿ ಸಿಗಲಿವೆ.
ಇನ್ಮುಂದೆ ಡಿಜಿಲಾಕರ್ ನಲ್ಲಿ 2003 ರಿಂದ ಈಚೆಗೆ ಇರುವ ಎಸೆಸೆಲ್ಸಿ ಅಂಕಪಟ್ಟಿಗಳು, 2008ರಿಂದೀಚೆಗಿನ ದ್ವಿತೀಯ ಪಿಯುಸಿ ಅಂಕಪಟ್ಟಿ, 32 ವಿಶ್ವವಿದ್ಯಾಲಯಗಳ ಪದವಿ ಪ್ರಮಾಣಪತ್ರ, ಹಾಗೂ 50 ವಿವಿಗಳ ಪ್ರಮಾಣಪತ್ರ ಶೀಘ್ರದಲ್ಲಿ ಲಭ್ಯವಾಗಲಿದೆ. ಇದರೊಂದಿಗೆ ಡಿಪ್ಲೋಮಾ ವಿಟಿಯುನ ಹಿಂದಿನ ವರ್ಷದ ಪ್ರಮಾಣಪತ್ರ ಶೀಘ್ರ ಸಿಗಲಿವೆ.
ಇದರಿಂದಾಗಿ ಅಂಕಪಟ್ಟಿ ಕಳೆದರೆ ಸಂಬಂಧಪಟ್ಟವರಿಗೆ ಅಲೆದಾಟ ತಪ್ಪಲಿದೆ. ಉದ್ಯೋಗ ಸಂಬಂಧ ಅಂಕಪಟ್ಟಿ ಸಲ್ಲಿಸುವಾಗ ಡಿಜಿಟಲ್ ರೂಪದಲ್ಲಿ ಸಲ್ಲಿಸಬಹುದು. ಮುಂದಿನ ದಿನಗಳಲ್ಲಿ ನಕಲಿ ಅಂಕಪಟ್ಟಿ ಹಾವಳಿಗೆ ತಡೆ ಬೀಳಬಹುದು. ಉದ್ಯೋಗದಾತರು ಆಕ್ಷಣವೇ ಅಂಕಪಟ್ಟಿ ನೈಜತೆ ಪರಿಶೀಲಿಸಬಹುದು. ಹಾಗೂ ಸರ್ಕಾರಿ ವ್ಯವಸ್ಥೆಯಲ್ಲಿ ಇದು ನಿರ್ವಹಣೆ ಆಗುವುದರಿಂದ ಮಾನ್ಯತೆಯನ್ನು ಪಡೆದಿದೆ. ಸಮಯ ಮತ್ತು ಹಣದ ಉಳಿತಾಯವೂ ಆಗಲಿದೆ.
ಡಿಜಿ ನಕಲಿ ಅಂಕಪಟ್ಟಿ ಪ್ರಮಾಣಪತ್ರ ಸಿಗಬೇಕೆಂಬ ನಿಟ್ಟಿನಲ್ಲಿ ನಮ್ಮ ಸರ್ಕಾರ ಮಹತ್ವದ ಘಟ್ಟ ತಲುಪಿದೆ. ಶೀಘ್ರವೇ 2003ರಿಂದೀಚೆಗಿನ ಎಸೆಸೆಲ್ಸಿ ಅಂಕಪಟ್ಟಿ ಹಾಗೂ 2008ರ ನಂತರದ ಪಿಯುಸಿ ಅಂಕಪಟ್ಟಿ ಡಿಜಿಲಾಕರ್ ನಲ್ಲಿ ಸಿಗುವಂತೆ ಮಾಡುತ್ತಿದ್ದೇವೆ ಎಂದು ನ್ಯಾಡ್ ಯೋಜನಾ ನಿರ್ದೇಶಕ ಶ್ರೀವ್ಯಾಸ್ ಹೇಳಿದ್ದಾರೆ.
ಡಿಜಿಲಾಕರ್ ಮೊಬೈಲ್ ಆಪ್ ಬಳಕೆ ಹೆಚ್ಚಾಗುತ್ತಿದೆ. ಬಳಕೆ ಮಾಡಿಕೊಳ್ಳದವರು ಡಿಜಿಲಾಕರ್ ಡೌನ್ಲೋಡ್ ಮಾಡಿಕೊಂಡು ಸೇವೆ ಪಡೆದುಕೊಳ್ಳಬಹುದು. ಆಧಾರ್ ಆಧರಿತ ಡಿಜಿಲಾಕರ್ ಒಳಪ್ರವೇಶಿಸಿ ತಮಗೆ ಯಾವ ಸಂಸ್ಥೆಯ ಅಂಕಪಟ್ಟಿ ಪ್ರಮಾಣಪತ್ರವನ್ನು ನೀಡಿದೆಯೋ ಅದನ್ನು ಡೌನ್ ಲೋಡ್ ಮಾಡಿಕೊಳ್ಳಲು ಅವಕಾಶ ಇರಲಿದೆ. ರೋಲ್ ನಂಬರ್, ರಿಜಿಸ್ಟರ್ ನಂಬರ್, ಅಭ್ಯರ್ಥಿ ಹೆಸರು, ಹಾಗೂ ವರ್ಷವನ್ನು ನಮೂದಿಸಿದರೆ ಡಿಜಿಟಲ್ ರೂಪದ ದಾಖಲೆ ಸಿಗುತ್ತದೆ.ವ್ಯವಸ್ಥೆ ಕೂಡ ಬರುತ್ತಿದೆ ಎಂದು ಅವರು ತಿಳಿಸಿದರು.
ತಮಿಳುನಾಡು; ವಕ್ಕರಿಸಿದ ವರುಣ
ತಮಿಳುನಾಡಿನಲ್ಲಿ ವರುಣನ ಆರ್ಭಟ ಮತ್ತಷ್ಟು ಹೆಚ್ಚಾಗಿದೆ. ಕಳೆದ ಮೂರು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಅನಾಹುತಕ್ಕೆ ಕಾರಣ ವಾಗಿದೆ.
ಚೆನ್ನೈ, ತಿರುಕೊಯಿಲೂರ್, ಕಡಲೂರು, ಮಧುರೈ, ಕೃಷ್ಣಗಿರಿ, ಪುದುಚೇರಿ, ತಿರುವಣ್ಣಾಮಲೈ ಹೀಗೆ ಹಲವು ಪ್ರದೇಶಗಳು ಜಲಾವೃತಗೊಂಡಿದೆ. ಜಲಪ್ರಳಯದಿಂದಾಗಿ 12 ಜನ ಸಾವನ್ನಪ್ಪಿದ್ದಾರೆ.
ಬಂಗಾಳಕೊಲ್ಲಿಯಲ್ಲಿನ ಚಿತ್ರದ ಮುಂದುವರೆಯುವ ಹಿನ್ನೆಲೆಯಲ್ಲಿ ತಮಿಳುನಾಡು, ಆಂಧ್ರಪ್ರದೇಶದ ಕರಾವಳಿಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ತಗಿ ಇನ್ನೆರಡು ದಿನ ಜನರು ಎಚ್ಚರಿಕೆಯಿಂದ ಇರುವಂತೆ ಹವಾಮಾನ ಇಲಾಖೆ ತಿಳಿಸಿದೆ.
ತಮಿಳುನಾಡು, ಪುದುಚೇರಿಯಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಸುರಿದ ಮಳೆಗೆ ಐದು ಲಕ್ಷ ಎಕರೆ ಕೃಷಿಭೂಮಿ ನೀರಿನಿಂದ ಆವೃತಗೊಂಡಿದೆ. ಇದರಿಂದ ಭತ್ತ ಬೆಳೆ ನಾಶವಾಗಿದೆ ಎಂದು ಮೂಲಗಳು ತಿಳಿಸಿವೆ.
ಆಫ್ಘನ್ ಸಮಸ್ಯೆ : ವಿಶ್ವಸಂಸ್ಥೆ ಕಣ್ಗಾವಲು ಅಗತ್ಯ
ಆಫ್ಘಾನಿಸ್ತಾನದಿಂದ ಎದುರಾಗುವ ಸವಾಲುಗಳನ್ನು ಎದುರಿಸಲು ಪ್ರಾದೇಶಿಕ ದೇಶಗಳ ನಡುವೆ ಸಮಾಲೋಚನೆ ಹೆಚ್ಚಿನ ಸಹಕಾರ ಮತ್ತು ಸಮನ್ವಯ ಬೇಕು ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ರಾದ ಅಜಿತ್ ದೋವಲ್ ತಿಳಿಸಿದ್ದಾರೆ.
ದೆಹಲಿಯಲ್ಲಿ ನಡೆದ ಸಭೆಯಲ್ಲಿ ಭಾರತ, ಇರಾನ್, ರಷ್ಯಾ ಹಾಗೂ ಮತ್ತು ಏಷ್ಯಾದ ಐದು ದೇಶಗಳ ರಾಷ್ಟ್ರೀಯ ಭದ್ರತಾ ಸಲಹೆಗಾರರು ಭಾಗಿಯಾಗಿದ್ದರು.
ಅಫ್ಘಾನಿಸ್ತಾನ ಜಾಗತಿಕ ಭಯೋತ್ಪಾದಕರ ಸುರಕ್ಷಿತ ನೆಲೆ ಯಾಗದಂತೆ ನೋಡಿಕೊಳ್ಳುವ ದಿಸೆಯಲ್ಲಿ ಕೆಲಸ ಮಾಡಲು ಭಾರತ-ರಷ್ಯಾ ಇರಾನ್ ಹಾಗೂ ಮಧ್ಯ ಏಷ್ಯಾದ ದೇಶಗಳು ನವದೆಹಲಿಯಲ್ಲಿ ಪ್ರತಿಜ್ಞೆ ಮಾಡಿದವು.
ಅಫ್ಘಾನಿಸ್ತಾನದ ಜನರು ಎದುರಿಸುತ್ತಿರುವ ಕಷ್ಟಗಳ ಬಗ್ಗೆ ಸಭೆ ಕಳವಳ ವ್ಯಕ್ತಪಡಿಸಿತು.ಮಹಿಳೆ ಮಕ್ಕಳು ಮತ್ತು ಅಲ್ಪಸಂಖ್ಯಾತ ಸಮುದಾಯದ ಮೂಲಭೂತ ಹಕ್ಕುಗಳು ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕಾದ ಅಗತ್ಯವಿದೆ ಎಂದು ಭದ್ರತಾ ಸಭೆ ಹೇಳಿದೆ.
ಅಫ್ಘಾನ್ ವಿಚಾರದಲ್ಲಿ ವಿಶ್ವಸಂಸ್ಥೆ ಕೈಗೊಂಡ ನಿರ್ಣಯವನ್ನು ಸಭೆ ಪ್ರಸ್ತಾಪಿಸಿತು. ಅಫ್ಘಾನಿಸ್ತಾನದಲ್ಲಿ ವಿಶ್ವಸಂಸ್ಥೆ ಪ್ರಮುಖ ಪಾತ್ರವನ್ನು ವಹಿಸುತ್ತಿದ್ದು, ಅಲ್ಲಿ ಅದರ ನಿರಂತರ ಉಪಸ್ಥಿತಿ ಅಗತ್ಯವಿದೆ ಎಂದು ವಿವಿಧ ದೇಶಗಳ ಪ್ರತಿನಿಧಿಗಳು ಅಭಿಪ್ರಾಯ ವ್ಯಕ್ತಪಡಿಸಿದರು.
ನೆರವು ನೀಡಬೇಕಿದೆ ಎಂಬುದನ್ನು ಸಭೆಯಲ್ಲಿ ಚರ್ಚಿಸಲಾಯಿತು.ಆಫ್ಘಾನಿಸ್ತಾನಕ್ಕೆ ಮಾನವೀಯ ನೆರವನ್ನು ಅಡೆತಡೆ ಇಲ್ಲದೆ, ನೇರ ಮತ್ತು ಭರವಸೆಯ ರೀತಿಯಲ್ಲಿ ಒದಗಿಸಬೇಕು ಹಾಗೂ ಎಲ್ಲಾ ವರ್ಗಗಳಿಗೂ ತಾರತಮ್ಯವಿಲ್ಲದೆ ಸಹಾಯ ಮಾಡಬೇಕು ಎಂದು ಭದ್ರತಾ ಅಧಿಕಾರಿಗಳು ಹೇಳಿದರು.
ಭವಿಷ್ಯದಲ್ಲಿ ಸದಸ್ಯ ದೇಶಗಳು ಪರಸ್ಪರ ಸಂಪರ್ಕದಲ್ಲಿರಬೇಕು ಎಂಬುದಾಗಿ ಸಭೆಯಲ್ಲಿ ನಿರ್ಧರಿಸಲಾಯಿತು. ಸಭೆಯ ಬಳಿಕ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ಅಧಿಕಾರಿಗಳು ಸಭೆಯ ನಿರ್ಣಯದ ಬಗ್ಗೆ ಮಾಹಿತಿ ಒದಗಿಸಿದರು.
ಮಲಾಲ:ಕಂಕಣ ಭಾಗ್ಯ
ಶಿಕ್ಷಣಕ್ಕಾಗಿ ಹೋರಾಡಿದ ಮಲಾಲ ಯೂಸುಫ್ ಝೂಯ್ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ನೊಬೆಲ್ ಶಾಂತಿ ಪ್ರಸ್ತುತ ಸಾಮಾಜಿಕ ಹೋರಾಟಗಾರ್ತಿ ಮಲಾಲ ಅವರು, ಪಾಕಿಸ್ತಾನ ಕ್ರಿಕೆಟ್ ಮಂಡಳಿ ಉನ್ನತಾಧಿಕಾರಿ ಅಸೆರ್ ಮಲ್ಲಿಕ್ ಅವರನ್ನು ವಿವಾಹವಾಗಿದ್ದಾರೆ.
ಜೂನ್ ತಿಂಗಳ ಮ್ಯಾಗಜಿನ್ ಒಂದಕ್ಕೆ ಸಂದರ್ಶನ ನೀಡಿದ ಮಲಾಲ ಅವರು “ನಾನು ಜೀವನದಲ್ಲಿ ಮದುವೆ ಆಗುವ ಸಾಧ್ಯತೆ ಕಡಿಮೆ. ಜನ ಏಕೆ ಮದುವೆಯಾಗುತ್ತಾರೋ ಗೊತ್ತಿಲ್ಲ. ಜೀವನ ಪಯಣದಲ್ಲಿ ಒಬ್ಬ ವ್ಯಕ್ತಿ ಬೇಕೆಂದರೆ ಏಕೆ ಮದುವೆಯಾಗಬೇಕು? ಏಕೆ ವಿವಾಹ ನೋಂದಣಿ ಪತ್ರಗಳ ಮೇಲೆ ಸಹಿ ಹಾಕಬೇಕು?, ಮದುವೆಯಾಗದೆ ಇಬ್ಬರು ಒಟ್ಟಿಗೆ ಇರಲು ಸಾಧ್ಯವಿಲ್ಲವೇ” ಎಂದು ಮದುವೆ ಕುರಿತು ಮಲಾಲ ಹೇಳಿದ್ದರು. ಇವರ ಅಸಮಾಧಾನ ವ್ಯಕ್ತಪಡಿಸಿದ್ದು ವಿವಾದಕ್ಕೆ ಕಾರಣವಾಗಿತ್ತು. ಆದರೆ, ಅದೇ ಮಲಾಲ ಈಗ ತಮ್ಮ ಗೆಳೆಯನನ್ನು ಮದುವೆಯಾಗುತ್ತಿದ್ದಾರೆ.
ಬ್ರಿಟನ್ ಬರ್ಮಿಂಗ್ ಹ್ಯಾಮ್ ನಲ್ಲಿರುವ ತಮ್ಮ ನಿವಾಸದಲ್ಲಿ ಸರಳ ವಿವಾಹವಾಗಿದ್ದಾರೆ. ತಮ್ಮ ಮದುವೆ ಸಮಾರಂಭದ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.
‘ಇದು ನನ್ನ ಜೀವನದ ಅತ್ಯಮೂಲ್ಯ ದಿನ. ನಾನು ಹಾಗೂ ಅಸೆರ್ ಮಲ್ಲಿಕ್ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದೇವೆ. ಬರ್ಮಿಂಗ್ಹ್ಯಾಮ್ ನಲ್ಲಿರುವ ನನ್ನ ನಿವಾಸದಲ್ಲಿ ಕುಟುಂಬಸ್ಥರ ಆಶೀರ್ವಾದದೊಂದಿಗೆ ಮದುವೆಯಾಗಿದ್ದೇವೆ. ನಿಮ್ಮ ಹಾರೈಕೆಗಳು ಇರಲಿ’ ಎಂದು ಮಲಾಲ ತಿಳಿಸಿದ್ದಾರೆ.
ಪುನೀತ್! ಅನನ್ಯ ಸಾಂಸ್ಕೃತಿಕ ಸಿರಿ
ಪುನೀತ್ ..! ಹೆಸರೇ ಈಗ ಸ್ಫೂರ್ತಿದಾಯಕ. ಚಿತ್ರ ರಸಿಕರ ಚಿನ್ನ.
ಯುವರತ್ನ,ದೊಡ್ಮನೆ ಹುಡುಗ ,ವೀರಕನ್ನಡಿಗ.
ಪುನೀತರ ಪುಣ್ಯಾರಾಧನೆಗೆ ಜನಸಾಗರ. ಪುಣ್ಯಸ್ಮರಣೆಯ ದಿನ
ಅನ್ನ ದಾಸೋಹ. ಸಹಸ್ರಸಹಸ್ರ ಅಭಿಮಾನಿಗಳ ಮಹಾಪೂರ.
ಒಬ್ಬ ಕಲಾವಿದ, ಪುಟ್ಟ ಅವಧಿಯಲ್ಲೇ ಅಪಾರ ಅಭಿಮಾನಿಗಳನ್ನ ಸಂಪಾದಿಸಿದ. ಎಂದರೆ ಅದು ಸಾಂಸ್ಕೃತಿಕ ದಾಖಲೆ.
ನಟ ಸಾರ್ವಭೌಮ ಡಾ.ರಾಜ್ ಕುಟುಂಬದಲ್ಲಿ ವಿಶಿಷ್ಟವಾಗಿ ಬೆಳೆದ ಕುಡಿ. ಬಹಳ ಬೇಗ. ವಿಧಿ ಅವರನ್ನ ಕೊಂಡೊಯ್ದ. ಆದರೆ
ಇದು .ಕನ್ನಡ ಚಿತ್ರ ರಸಿಕರಿಗೆ ಒಂದು ದೊಡ್ಡ ಆಘಾತ.
ಪುನೀತರ ಪುಣ್ಯಾರಾಧನೆಯ ದಿನ ಕಿಂಚಿತ್ತೂ ಕಿರಿಕಿರಿಯಿಲ್ಲ.ಸುಮಾರು ಮೂವತ್ತು ಸಹಸ್ರಕ್ಕೂ ಮೀರಿದ ಮಂದಿ ಊಟ ಸ್ವೀಕರಿಸಿದರು.
ಎಲ್ಲವೂ ಶಿಸ್ತುಬದ್ಧ.
ನಮನ್ನ ಥಟ್ಟನೆ ಸೆಳೆದ ಸಂಗತಿ.ನೇತ್ರದಾನಮಾಡಿದ ಮಹಾನುಭಾವರ ಸಂಖ್ಯೆ ಮೂರುಸಾವಿರದ ನೂರು!.ಈ ಬಗ್ಗೆ
ಶ್ರೀ ಪ್ರಕೃತಿ ಪಸನ್ನ ಅವರು ಮಾಧ್ಯಮಗಳಿಗೆ ಹೇಳಿಕೆ ನೀಡಿದರು.
ದೇಶದಲ್ಲೇ ಇದೊಂದು ದಾಖಲೆಯಂತೆ.
ಮುನ್ನೂರೈವತ್ತು ಮಿಕ್ಕಿ ಜನ ರಕ್ತದಾನ ಮಾಡಿದರು.ಪುನೀತರ ಹಿರಿಯಣ್ಣ ಶಿವರಾಜ್ ಕುಮಾರ್ ಅದರಲ್ಲಿ ಮುಂಚೂಣಿಯಲ್ಲಿದ್ದರು.
ಓರ್ವ ಕಲಾವಿದ ,ನಾಡಿನ ಹೃದಯ ಗೆದ್ದು ಮಾಡಬಹುದಾದ ಅಪರೂಪದ ಘಟನೆ. ಎಂದೆಂದೂ ಕರ್ನಾಟಕದ ಜನಮನದಲ್ಲಿ ಪುನೀತರದು ಚಿರಸ್ಥಾಯಿ ಹೆಸರು.
ಮೇಲ್ಮನೆಗೆ ಚುನಾವಣೆ ಪ್ರಕ್ರಿಯೆ
20 ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿನ 25 ಸ್ಥಾನಗಳಿಗೆ ದ್ವೈವಾರ್ಷಿಕ ಚುನಾವಣೆ ಡಿಸೆಂಬರ್ 10ರಂದು ಮತದಾನ ನಡೆಯಲಿದೆ.
ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಮತ್ತು ಇತರೆ ಸ್ಥಳೀಯ ಸಂಸ್ಥೆಗಳ ಸದಸ್ಯರು ಮತದಾರ ರಾಗಿದ್ದು ಇವರಲ್ಲಿ ಎಷ್ಟು ಮಂದಿ ಸದಸ್ಯರು ಮತದಾನಕ್ಕೆ ಅರ್ಹತೆ ಹೊಂದಿದ್ದಾರೆ ಎಂಬುದರ ಬಗ್ಗೆ ಇನ್ನೆರಡು ದಿನಗಳಲ್ಲಿ ಮತದಾರರ ಕರಡು ಪ್ರಕಟಿಸಲಾಗುವುದು. ಆಗಲೇ ಮತದಾರರ ನಿಖರ ಮಾಹಿತಿ ಸಿಗಲಿದೆ ಎಂದು ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ತಿಳಿಸಿದ್ದಾರೆ.
ವಿಧಾನಮಂಡಲದ ಮೇಲ್ಮನೆಯಲ್ಲಿ ತಮ್ಮ ಪಕ್ಷದ ಬಲ ಭದ್ರಗೊಳಿಸಿ ಕೊಳ್ಳಲು ಮೂರು ರಾಜಕೀಯ ಪಕ್ಷಗಳು ರಣತಂತ್ರ ಹೂಡುತ್ತಿವೆ. ಚುನಾವಣಾ ಆಯೋಗದ ಆದೇಶ ಹೊರಬಿದ್ದ ಬೆನ್ನಲ್ಲೇ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಲ್ಲಿ ಬಿರುಸಿನ ಚಟುವಟಿಕೆ ಆರಂಭವಾಗಿದೆ.
ಪಂಚಾಯತ್ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಸದಸ್ಯತ್ವದ ಅವಧಿ ಮುಗಿದಿದ್ದರೆ ಅವರಿಗೆ ಮತದಾನದ ಹಕ್ಕು ಇರುವುದಿಲ್ಲ. ಚುನಾವಣೆ ನಡೆಯುವ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಅರ್ಹ ಮತದಾರರ ಪ್ರಕಟಿಸುವರು. ಬಿಬಿಎಂಪಿಯ 198, ತಾಲೂಕು ಪಂಚಾಯಿತಿ 3285 ಹಾಗೂ ಜಿಲ್ಲಾ ಪಂಚಾಯಿತಿ 1191 ಸದಸ್ಯರ ಅವಧಿ ಮುಗಿದಿದ್ದು ಮತ ಚಲಾವಣೆಯ ಹಕ್ಕು ಕಳೆದುಕೊಳ್ಳಲಿದ್ದಾರೆ ಎಂದು ಚುನಾವಣಾ ಅಧಿಕಾರಿ ಹೇಳಿದ್ದಾರೆ.
- ಅರ್ಹ ಮತದಾರರ ಪಟ್ಟಿ…
ಚುನಾವಣೆಯ ಅಧಿಸೂಚನೆ ನವೆಂಬರ್ 16 ರಕ್ಕೆ
ನವೆಂಬರ್ 23 ರಂದು ನಾಮಪತ್ರ ಸಲ್ಲಿಕೆ ಕೊನೆಯ ದಿನಾಂಕವಾಗಿದೆ. ನವೆಂಬರ್ 24ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನವೆಂಬರ್ 26 ರಂದು ನಾಮಪತ್ರ ಹಿಂದಕ್ಕೆ ಪಡೆಯಲು ಕೊನೆಯ ದಿನವಾಗಿದೆ. ಡಿಸೆಂಬರ್ 10 ಬೆಳಗ್ಗೆ ಎಂಟರಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದೆ. ಡಿಸೆಂಬರ್ 14 ಮತಗಳ ಎಣಿಕೆ ಪ್ರಕ್ರಿಯೆ ಜರುಗಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ನ್ಯೂಜಿಲೆಂಡ್ ಪ್ರವಾಸ: ಭಾರತ ಕ್ರಿಕೆಟ್ ತಂಡ ಪ್ರಕಟ
ಭಾರತದ ಟಿ ಟ್ವೆಂಟಿ ಕ್ರಿಕೆಟ್ ತಂಡಕ್ಕೆ ನಾಯಕರನ್ನಾಗಿ ‘ಹಿಟ್ ಮ್ಯಾನ್’ ಖ್ಯಾತಿಯ ಬ್ಯಾಟ್ಸ್ ಮ್ಯಾನ್ ರೋಹಿತ್ ಶರ್ಮಾ ಅವರನ್ನು ನೇಮಕ ಮಾಡಲಾಗಿದೆ. ಭಾರತ ಮತ್ತು ನ್ಯೂಜಿಲ್ಯಾಂಡ್ ಟಿ20 ಸರಣಿಯು ಇದೇ ತಿಂಗಳ 17ರಂದು ನಡೆಯಲಿದ್ದು, ಸರಣಿಯಲ್ಲಿ ಆಡುವ ತಂಡವನ್ನು ಮಂಗಳವಾರ ಪ್ರಕಟಿಸಲಾಗಿದೆ.
ಮಾಜಿ ನಾಯಕ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿದೆ. ವಿಶ್ವಕಪ್ ಟೂರ್ನಿ ನಂತರ ವಿರಾಟ್ ಟಿ20 ತಂಡದ ನಾಯಕತ್ವ ಬಿಟ್ಟುಕೊಟ್ಟಿದ್ದಾರೆ. ವೇಗಿ ಜಸ್ ಪ್ರೀತ್ ಬೂಮ್ರಾ ಮತ್ತು ಸ್ಪಿನ್ನರ್ ರವೀಂದ್ರ ಜಡೇಜಾ ಅವರಿಗೆ ವಿಶ್ರಾಂತಿ ನೀಡಲಾಗಿದೆ ಹಾಗೂ ಆಲ್-ರೌಂಡರ್ ಹಾರ್ದಿಕ್ ಪಾಂಡೆ ಅವರನ್ನು ತಂಡದಿಂದ ಕೈ ಬಿಡಲಾಗಿದ್ದು, ಕರ್ನಾಟಕದ ಕೆ ಎಲ್ ರಾಹುಲ್ ಅವರನ್ನು ತಂಡದ ಉಪನಾಯಕನಾಗಿ ಆಯ್ಕೆ ಮಾಡಲಾಗಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಕಿವೀಸ್ ವಿರುದ್ಧದ ಟಿ-20 ಸರಣಿಯಲ್ಲಿ ರೋಹಿತ್ ಶರ್ಮಾ (ನಾಯಕ), ಕೆ.ಎಲ್. ರಾಹುಲ್ (ಉಪನಾಯಕ), ಋತುರಾಜ್ ಗಾಯಕವಾಡ, ಶ್ರೇಯಸ್ ಅಯ್ಯರ್, ಸೂರ್ಯ ಕುಮಾರ್ ಯಾದವ್, ರಿಷಬ್ ಪಂತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ವೆಂಕಟೇಶ ಅಯ್ಯರ್, ಯಜುವೇಂದ್ರ ಚಾಹಲ್, ಆರ್. ಅಶ್ವಿನ್, ಅಕ್ಷರ್ ಪಟೇಲ್, ಆವೇಶ್ ಖಾನ್, ಭುವನೇಶ್ವರ್ ಕುಮಾರ್, ದೀಪಕ್ ಚಾಹರ್, ಹರ್ಷಲ್ ಪಟೇಲ್ ಮತ್ತು ಮೊಹಮ್ಮದ್ ಸಿರಾಜ್ ಇವರುಗಳನ್ನ ಆಯ್ಕೆ ಮಾಡಲಾಗಿದೆ.
ಅಡಕೆ ವಿರುದ್ಧ ಮತ್ತೆ ಅಪಸ್ವರ
ಈಗಾಗಲೇ ಕರ್ನಾಟಕದ ಅಡಿಕೆ ಕೃಷಿಕರು ಒಂದಲ್ಲ ಒಂದು ಸಮಸ್ಯೆ ಎದುರಿಸುತ್ತಿದ್ದಾರೆ. ಅಡಿಕೆ ರೋಗಕಾರಕ ಪದಾರ್ಥ ಹೊಂದಿಲ್ಲ
ಎಂದು ಸಂಘಟಿತರಾಗಿ ಹೋರಟ ನಡೆಸುತ್ತಿದ್ದಾರೆ.ಆದರೆ ನಡುವೆ ಯಾರದ್ದಾದರೂ ಕೀಟಲೆಗಳು ಇದ್ದೇ ಇರುತ್ತವೆ.
ಅಡಕೆ ,ಉದ್ಯಮವಾಗಿ ಹೇಗೆ ಬೆಳೆಸಬಹುದು ಎಂದು ವಿಚಾರ ಸಂಕಿರಣಗಳು ನಡೆಯುತ್ತಿವೆ.ಇಂತಹ ಸನ್ನಿವೇಶದಲ್ಲಿ ಸಂಸದರೊಬ್ಬರು
ಅಡಕೆ ಕ್ಯಾನ್ಸರ್ ಕಾರಕ ಎಂದು ರಾಗ ಎಳೆಯುತ್ತಿದ್ದಾರೆ….
ಪ್ರಸಂಗ ಹೀಗಿದೆ.
ಮಾರಕ ಕ್ಯಾನ್ಸರ್ ರೋಗಕ್ಕೆ ಅಡಕೆ ಸೇವನೆ ಕಾರಣವಾಗಿದೆ. ಜನರು ಅಡಕೆ ಸೇವಿಸದಂತೆ ನಿಷೇಧಿಸಬೇಕು ಎಂದು ಜಾರ್ಖಂಡ್ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಮಾನ್ಯ ಪ್ರಧಾನ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ನನ್ನ ವೈಯಕ್ತಿಕ ಅನುಭವದಲ್ಲಿ ಹೇಳುತ್ತಿರುವೆ. ಪಾನ್ ಮಸಾಲದ ಪ್ರಮುಖ ಭಾಗವಾದ ಅಡಕೆ ಸೇವಿಸುವುದರಿಂದ ಕ್ಯಾನ್ಸರ್ ಸೇರಿದಂತೆ ಹಲವು ಮಾರಕ ಕಾಯಿಲೆಗೆ ಜನರು ತುತ್ತಾಗಿ ತೊಂದರೆಗೊಳಗಾಗಿರುವುದನ್ನು ಸ್ವತಹ ನಾನೇ ನೋಡಿದ್ದೇನೆ. ಈ ಕಾರಣದಿಂದ ಮಾನವರ ಬಳಕೆಗೆ ಅಡಕೆಯನ್ನು ನಿಷೇಧಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಅಲ್ಲದೆ ಅಡಕೆ ಸೇವನೆಯಿಂದ ಅಸ್ತಮಾ ರೋಗ ಉಲ್ಬಣವಾಗುತ್ತದೆ. ಹೃದಯ ಸಂಬಂಧಿ ಕಾಯಿಲೆಗೆ ತುತ್ತಾಗುವುದು ಜೊತೆಗೆ ಉಸಿರಾಟ ಸಮಸ್ಯೆಗೆ ಗುರಿಯಾಗುತ್ತಿದ್ದಾರೆ. ಈ ಕಾರಣಕ್ಕಾಗಿ 2018ರಲ್ಲಿ ಮಹಾರಾಷ್ಟ್ರ ಸರ್ಕಾರ ಅಡಕೆ ಮಾರಾಟ ಮತ್ತು ಬಳಕೆ ನಿಷೇಧಿಸಿತ್ತು. ಹೀಗಾಗಿ ಮಾನವರ ಬಳಕೆಗೆ ಅಡಕೆ ನಿಷೇಧಿಸಿ ಆದರೆ ಧಾರ್ಮಿಕ ವಿಧಿ ವಿಧಾನಗಳಿಗೆ ಅಡಕೆ ಬಳಸಲು ಅನುಮತಿ ನೀಡಬೇಕೆಂದು ದುಬೆ ಅವರು ಪ್ರಧಾನಿಗಳಿಗೆ ಬರೆದಿರುವ ಪತ್ರದಲ್ಲಿ ಮನವಿ ಮಾಡಿದ್ದಾರೆ.
ದೇಶದಾದ್ಯಂತ ಅಡಕೆ ಬಗ್ಗೆ ಆರೋಗ್ಯಕ್ಕೆ ಹಾನಿಕಾರಕವಲ್ಲ. ಅದರಿಂದ ಟೀ ತಯಾರಿಸಿ ಭೇಷ್ ಅನಿಸಿಕೊಂಡಿರುವ
ನಿವೇದನ್ ನೆಂಪೆ ಅವರನ್ನ ಸಂಪರ್ಕಿಸಲು ಸಂಸದರಿಗೆ ಸೂಚಿಸಬೇಕಿದೆ. ನಮ್ಮ ಕರ್ನಾಟಕದ
ಅಡಕೆ ಪ್ರಾಧಿಕಾರದವರಾದರೂ ಆ ಪುಣ್ಯಾತ್ಮನಿಗೆ
ಮನವರಿಕೆಯಾಗುವ ರೀತಿ ತಿಳಿಸಬೇಕಿದೆ.
