ಡಿಜಿಟಲ್ ಇಂಡಿಯಾ ಪರಿಕಲ್ಪನೆಯ ಪ್ರಯೋಜನೆಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಕರ್ನಾಟಕ ಹೆಜ್ಜೆ ಹಾಕುತ್ತಿದೆ.
ರಾಷ್ಟ್ರೀಯ ಶೈಕ್ಷಣಿಕ ಠೇವಣಿ (ನ್ಯಾಷನಲ್ ಅಕಾಡೆಮಿ ಡಿಪಾಸಿಟರಿ) ಭಾಗವಾಗಿ ಇನ್ಮುಂದೆ ಶೈಕ್ಷಣಿಕ ಅಂಕಪಟ್ಟಿಗಳು ಮತ್ತು ಪ್ರಮಾಣ ಪತ್ರ ಡಿಜಿಲಾಕರ್ ನಲ್ಲಿ ಸಿಗಲಿವೆ.
ಇನ್ಮುಂದೆ ಡಿಜಿಲಾಕರ್ ನಲ್ಲಿ 2003 ರಿಂದ ಈಚೆಗೆ ಇರುವ ಎಸೆಸೆಲ್ಸಿ ಅಂಕಪಟ್ಟಿಗಳು, 2008ರಿಂದೀಚೆಗಿನ ದ್ವಿತೀಯ ಪಿಯುಸಿ ಅಂಕಪಟ್ಟಿ, 32 ವಿಶ್ವವಿದ್ಯಾಲಯಗಳ ಪದವಿ ಪ್ರಮಾಣಪತ್ರ, ಹಾಗೂ 50 ವಿವಿಗಳ ಪ್ರಮಾಣಪತ್ರ ಶೀಘ್ರದಲ್ಲಿ ಲಭ್ಯವಾಗಲಿದೆ. ಇದರೊಂದಿಗೆ ಡಿಪ್ಲೋಮಾ ವಿಟಿಯುನ ಹಿಂದಿನ ವರ್ಷದ ಪ್ರಮಾಣಪತ್ರ ಶೀಘ್ರ ಸಿಗಲಿವೆ.
ಇದರಿಂದಾಗಿ ಅಂಕಪಟ್ಟಿ ಕಳೆದರೆ ಸಂಬಂಧಪಟ್ಟವರಿಗೆ ಅಲೆದಾಟ ತಪ್ಪಲಿದೆ. ಉದ್ಯೋಗ ಸಂಬಂಧ ಅಂಕಪಟ್ಟಿ ಸಲ್ಲಿಸುವಾಗ ಡಿಜಿಟಲ್ ರೂಪದಲ್ಲಿ ಸಲ್ಲಿಸಬಹುದು. ಮುಂದಿನ ದಿನಗಳಲ್ಲಿ ನಕಲಿ ಅಂಕಪಟ್ಟಿ ಹಾವಳಿಗೆ ತಡೆ ಬೀಳಬಹುದು. ಉದ್ಯೋಗದಾತರು ಆಕ್ಷಣವೇ ಅಂಕಪಟ್ಟಿ ನೈಜತೆ ಪರಿಶೀಲಿಸಬಹುದು. ಹಾಗೂ ಸರ್ಕಾರಿ ವ್ಯವಸ್ಥೆಯಲ್ಲಿ ಇದು ನಿರ್ವಹಣೆ ಆಗುವುದರಿಂದ ಮಾನ್ಯತೆಯನ್ನು ಪಡೆದಿದೆ. ಸಮಯ ಮತ್ತು ಹಣದ ಉಳಿತಾಯವೂ ಆಗಲಿದೆ.
ಡಿಜಿ ನಕಲಿ ಅಂಕಪಟ್ಟಿ ಪ್ರಮಾಣಪತ್ರ ಸಿಗಬೇಕೆಂಬ ನಿಟ್ಟಿನಲ್ಲಿ ನಮ್ಮ ಸರ್ಕಾರ ಮಹತ್ವದ ಘಟ್ಟ ತಲುಪಿದೆ. ಶೀಘ್ರವೇ 2003ರಿಂದೀಚೆಗಿನ ಎಸೆಸೆಲ್ಸಿ ಅಂಕಪಟ್ಟಿ ಹಾಗೂ 2008ರ ನಂತರದ ಪಿಯುಸಿ ಅಂಕಪಟ್ಟಿ ಡಿಜಿಲಾಕರ್ ನಲ್ಲಿ ಸಿಗುವಂತೆ ಮಾಡುತ್ತಿದ್ದೇವೆ ಎಂದು ನ್ಯಾಡ್ ಯೋಜನಾ ನಿರ್ದೇಶಕ ಶ್ರೀವ್ಯಾಸ್ ಹೇಳಿದ್ದಾರೆ.
ಡಿಜಿಲಾಕರ್ ಮೊಬೈಲ್ ಆಪ್ ಬಳಕೆ ಹೆಚ್ಚಾಗುತ್ತಿದೆ. ಬಳಕೆ ಮಾಡಿಕೊಳ್ಳದವರು ಡಿಜಿಲಾಕರ್ ಡೌನ್ಲೋಡ್ ಮಾಡಿಕೊಂಡು ಸೇವೆ ಪಡೆದುಕೊಳ್ಳಬಹುದು. ಆಧಾರ್ ಆಧರಿತ ಡಿಜಿಲಾಕರ್ ಒಳಪ್ರವೇಶಿಸಿ ತಮಗೆ ಯಾವ ಸಂಸ್ಥೆಯ ಅಂಕಪಟ್ಟಿ ಪ್ರಮಾಣಪತ್ರವನ್ನು ನೀಡಿದೆಯೋ ಅದನ್ನು ಡೌನ್ ಲೋಡ್ ಮಾಡಿಕೊಳ್ಳಲು ಅವಕಾಶ ಇರಲಿದೆ. ರೋಲ್ ನಂಬರ್, ರಿಜಿಸ್ಟರ್ ನಂಬರ್, ಅಭ್ಯರ್ಥಿ ಹೆಸರು, ಹಾಗೂ ವರ್ಷವನ್ನು ನಮೂದಿಸಿದರೆ ಡಿಜಿಟಲ್ ರೂಪದ ದಾಖಲೆ ಸಿಗುತ್ತದೆ.ವ್ಯವಸ್ಥೆ ಕೂಡ ಬರುತ್ತಿದೆ ಎಂದು ಅವರು ತಿಳಿಸಿದರು.
ಅಂಕಪಟ್ಟಿ : ಡಿಜಿಲಾಕರ್ ಮಾನ್ಯತೆ
Date: