ಪುನೀತ್ ..! ಹೆಸರೇ ಈಗ ಸ್ಫೂರ್ತಿದಾಯಕ. ಚಿತ್ರ ರಸಿಕರ ಚಿನ್ನ.
ಯುವರತ್ನ,ದೊಡ್ಮನೆ ಹುಡುಗ ,ವೀರಕನ್ನಡಿಗ.
ಪುನೀತರ ಪುಣ್ಯಾರಾಧನೆಗೆ ಜನಸಾಗರ. ಪುಣ್ಯಸ್ಮರಣೆಯ ದಿನ
ಅನ್ನ ದಾಸೋಹ. ಸಹಸ್ರಸಹಸ್ರ ಅಭಿಮಾನಿಗಳ ಮಹಾಪೂರ.
ಒಬ್ಬ ಕಲಾವಿದ, ಪುಟ್ಟ ಅವಧಿಯಲ್ಲೇ ಅಪಾರ ಅಭಿಮಾನಿಗಳನ್ನ ಸಂಪಾದಿಸಿದ. ಎಂದರೆ ಅದು ಸಾಂಸ್ಕೃತಿಕ ದಾಖಲೆ.
ನಟ ಸಾರ್ವಭೌಮ ಡಾ.ರಾಜ್ ಕುಟುಂಬದಲ್ಲಿ ವಿಶಿಷ್ಟವಾಗಿ ಬೆಳೆದ ಕುಡಿ. ಬಹಳ ಬೇಗ. ವಿಧಿ ಅವರನ್ನ ಕೊಂಡೊಯ್ದ. ಆದರೆ
ಇದು .ಕನ್ನಡ ಚಿತ್ರ ರಸಿಕರಿಗೆ ಒಂದು ದೊಡ್ಡ ಆಘಾತ.
ಪುನೀತರ ಪುಣ್ಯಾರಾಧನೆಯ ದಿನ ಕಿಂಚಿತ್ತೂ ಕಿರಿಕಿರಿಯಿಲ್ಲ.ಸುಮಾರು ಮೂವತ್ತು ಸಹಸ್ರಕ್ಕೂ ಮೀರಿದ ಮಂದಿ ಊಟ ಸ್ವೀಕರಿಸಿದರು.
ಎಲ್ಲವೂ ಶಿಸ್ತುಬದ್ಧ.
ನಮನ್ನ ಥಟ್ಟನೆ ಸೆಳೆದ ಸಂಗತಿ.ನೇತ್ರದಾನಮಾಡಿದ ಮಹಾನುಭಾವರ ಸಂಖ್ಯೆ ಮೂರುಸಾವಿರದ ನೂರು!.ಈ ಬಗ್ಗೆ
ಶ್ರೀ ಪ್ರಕೃತಿ ಪಸನ್ನ ಅವರು ಮಾಧ್ಯಮಗಳಿಗೆ ಹೇಳಿಕೆ ನೀಡಿದರು.
ದೇಶದಲ್ಲೇ ಇದೊಂದು ದಾಖಲೆಯಂತೆ.
ಮುನ್ನೂರೈವತ್ತು ಮಿಕ್ಕಿ ಜನ ರಕ್ತದಾನ ಮಾಡಿದರು.ಪುನೀತರ ಹಿರಿಯಣ್ಣ ಶಿವರಾಜ್ ಕುಮಾರ್ ಅದರಲ್ಲಿ ಮುಂಚೂಣಿಯಲ್ಲಿದ್ದರು.
ಓರ್ವ ಕಲಾವಿದ ,ನಾಡಿನ ಹೃದಯ ಗೆದ್ದು ಮಾಡಬಹುದಾದ ಅಪರೂಪದ ಘಟನೆ. ಎಂದೆಂದೂ ಕರ್ನಾಟಕದ ಜನಮನದಲ್ಲಿ ಪುನೀತರದು ಚಿರಸ್ಥಾಯಿ ಹೆಸರು.
ಪುನೀತ್! ಅನನ್ಯ ಸಾಂಸ್ಕೃತಿಕ ಸಿರಿ
Date: