Friday, February 6, 2026
Friday, February 6, 2026
Home Blog Page 1870

ಬೆಂಗಳೂರು ಟೆಕ್ ಸಮಾವೇಶ : ವಿಶೇಷತೆಗಳು

0

ಪ್ರತಿಷ್ಠಿತ ಬೆಂಗಳೂರು ತಂತ್ರಜ್ಞಾನ ಶೃಂಗದ 24ನೇ ವರ್ಷದ ಮೂರು ದಿನಗಳ ಸಮಾವೇಶವು ಇಂದಿನಿಂದ ಆರಂಭಗೊಳ್ಳಲಿದೆ. ತಂತ್ರಜ್ಞಾನ ವಿಲ್ಲದೆ ಬದುಕಿನ ಕಲ್ಪನೆಯು ಸಾಧ್ಯವಿಲ್ಲ. ಇದರ ಲಾಭ ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕು. ಈ ದೇಶದಿಂದ ಶೃಂಗ ಸಮಾವೇಶವನ್ನು ಏರ್ಪಡಿಸಲಾಗಿದೆ.
‘ತಾಜ್ ವೆಸ್ಟ್ ಎಂಡ್’ ಹೋಟೆಲ್ ನಲ್ಲಿ ಹೈಬ್ರಿಡ್ ಮಾದರಿಯಲ್ಲಿ ನಡೆಯಲಿರುವ ಶೃಂಗದಲ್ಲಿ 30ಕ್ಕೂ ಹೆಚ್ಚು ದೇಶಗಳು ಭಾಗವಹಿಸಲಿವೆ.
300ಕ್ಕೂ ಹೆಚ್ಚು ಕಂಪನಿಗಳು, 5ಸಾವಿರಕ್ಕೂ ಹೆಚ್ಚು ನವೋದ್ಯಮಗಳು, ವಾಣಿಜ್ಯ ವಲಯದಲ್ಲಿ 20 ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ಡ್ರೈವಿಂಗ್ ದಿ ನೆಕ್ಸ್ಟ್ ಘೋಷವಾಕ್ಯದಡಿ ನಡೆಯಲಿರುವ ಈ ಶೃಂಗದಲ್ಲಿ ಪ್ರಧಾನವಾಗಿ ಐಟಿ,ಬಿಟಿ, ಕೃಷಿ, ಆರೋಗ್ಯ, ಸೈಬರ್ ಸೆಕ್ಯೂರಿಟಿ, ಲಸಿಕೆ, ವೈದ್ಯಕೀಯ ಮತ್ತು ಆರ್ಥಿಕ ತಂತ್ರಜ್ಞಾನಗಳಿಗೆ ಒತ್ತು ಕೊಡಲಾಗಿದೆ.
ತಂತ್ರಜ್ಞಾನದಲ್ಲಿ ಪಾರಮ್ಯ ಹೊಂದಿರುವ ಬೆಂಗಳೂರಿನ ಸಾಧನೆಯನ್ನು ಮತ್ತಷ್ಟು ವಿಸ್ತರಿಸುವ ಗುರಿಯಿಂದ ಶೃಂಗದಲ್ಲಿ ಪ್ರತ್ಯೇಕವಾಗಿ ‘ಬೆಂಗಳೂರು ನೆಕ್ಸ್ಟ್’ ನಾವಿನ್ಯತೆ ಮತ್ತು ನಾಯಕತ್ವ ಗೋಷ್ಠಿಗಳನ್ನು ಏರ್ಪಡಿಸಲಾಗಿದೆ.
ನಾಲ್ಕು ವೇದಿಕೆಗಳಲ್ಲಿ ಒಟ್ಟು 75 ಗೋಷ್ಠಿ ಮತ್ತು 7 ಸಂವಾದ ನಡೆಯಲಿದೆ.
ಈ ಶೃಂಗವು ಭಾರತ ಮತ್ತು ಅಮೆರಿಕ ಸಮಾವೇಶವಾಗಿದೆ.
ಗ್ರಾಮೀಣ ಐಟಿ ಮತ್ತು ಬಯೋ ಕ್ವಿಜ್ ನಡೆಯಲಿದೆ.
ವಿಜ್ಞಾನ ಗ್ಯಾಲರಿ, ಸ್ಟಾರ್ಟಪ್ ಯೂನಿಕಾರ್ನ್ ಕಂಪನಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.
ಇದು ಜಾಗತಿಕ ನಾವೀನ್ಯತಾ ಮೈತ್ರಿಕೂಟ ವಾಗಿದೆ.
ಎಸ್ಟಿ ಪಿಐ / ಐಟಿ ರಫ್ತು ಪ್ರಶಸ್ತಿ-ಪುರಸ್ಕಾರ ಕಾರ್ಯಕ್ರಮ ನಡೆಯಲಿದೆ.
ವರ್ಚುವಲ್ ವಸ್ತುಪ್ರದರ್ಶನ ಏರ್ಪಡಿಸಲಾಗಿದೆ. 320ಕ್ಕೂ ಹೆಚ್ಚು ಕಂಪನಿಗಳು ಪಾಲ್ಗೊಳ್ಳುತ್ತಿವೆ. ಇವುಗಳ ಪೈಕಿ ರಾಜ್ಯ ಸರ್ಕಾರದ ‘ಎಲಿವೇಟ್’ ಯೋಜನೆಯಡಿ ಆಯ್ಕೆಯಾಗಿರುವ 100 ಮಳಿಗೆಗಳಿರಲಿವೆ. ಆಸಕ್ತರು ಲಿಂಕ್ ಮೂಲಕ ನೋಂದಣಿ ಮಾಡಿಕೊಂಡು ಸಮಾವೇಶ ವೀಕ್ಷಿಸಬಹುದಾಗಿದೆ.

ಲಿಂಕ್ :https://www.bengalurutechsummit.com/web/it_forms/registration & conference.php

ಶಬ್ದ ಮಾಲಿನ್ಯ ನಿಯಂತ್ರಣ ಮಾಹಿತಿ ಕೇಳಿದ ಹೈಕೋರ್ಟ್

0

ಮಾರ್ಪಡಿಸಿದ ಸೈಲೆನ್ಸರ್ ಗಳನ್ನು ಬಳಸುವ ಮೂಲಕ ಶಬ್ದ ಮಾಲಿನ್ಯ ಉಂಟು ಮಾಡುತ್ತಿರುವ ದ್ವಿಚಕ್ರ ಹಾಗೂ ವಾಹನಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಆ ಬಗ್ಗೆ ಸಮಗ್ರ ವರದಿ ಸಲ್ಲಿಸಬೇಕೆಂದು ಹೈಕೋರ್ಟ್ ರಾಜ್ಯ ಸರ್ಕಾರ ಮತ್ತು ಪೊಲೀಸ್ ಇಲಾಖೆಗೆ ಆದೇಶ ಹೊರಡಿಸಿದೆ.
ಕರ್ನಾಟಕ ಮೋಟಾರು ವಾಹನ ಅಧಿನಿಯಮ- 1989 ರ ನಿಯಮ 33 ಕ್ಕೆ ತಿದ್ದುಪಡಿ ತಂದು ಹೊಸ ವಾಹನಗಳ ನೋಂದಣಿ ಕಾರ್ಯ ನಡೆಯುತ್ತಿದೆ. ಖಾಸಗಿ ಡೀಲರ್ ಗಳಿಗೆ ವಹಿಸಿರುವ ಸಾರಿಗೆ ಇಲಾಖೆ ಅಧಿಸೂಚನೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ಸಂಬಂಧ ಹೈಕೋರ್ಟ್ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.
ರಾಜ್ಯದಲ್ಲಿ ಶಬ್ದ ಮಾಲಿನ್ಯ ನಿಯಂತ್ರಣ ಕಾಯ್ದೆ ಕಟ್ಟುನಿಟ್ಟಿನ ಜಾರಿಯ ಬಗ್ಗೆ ಸಲ್ಲಿಕೆಯಾಗಿರುವ ಹಲವು ಪಿಐಎಲ್ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ನೀಡಿದೆ.
ಶಬ್ದ ಮಾಲಿನ್ಯ ಉಂಟು ಮಾಡುತ್ತಿರುವ ವಾಹನಗಳನ್ನು ಗುರುತಿಸಲು ಸಂಬಂಧಪಟ್ಟ ಪ್ರಾಧಿಕಾರಗಳು ಕಾರ್ಯಾಚರಣೆ ನಡೆಸಬೇಕು. ಅಂತಹ ವಾಹನಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಮೌಖಿಕ ಆದೇಶ ನೀಡಿದೆ.
ದ್ವಿಚಕ್ರ ಮತ್ತು ನಾಲ್ಕು ಚಕ್ರ ವಾಹನಗಳು ಮಾರ್ಪಡಿಸಿದ ಸೈಲೆನ್ಸರ್ ಬಳಸಿ ಶಬ್ದ ಮಾಲಿನ್ಯ ಉಂಟು ಮಾಡುತ್ತಿವೆ. ಅದನ್ನು ತಡೆಯಲು ಮತ್ತು ಅಂತಹ ವಾಹನಗಳನ್ನು ಗುರುತಿಸಲು ಯಾವ ಕ್ರಮ ಕೈಗೊಳ್ಳಲಾಗಿದೆ. ಶಬ್ದ ಮಾಲಿನ್ಯ ಉಂಟು ಮಾಡುವ ರಾತ್ರಿ ಕ್ಲಬ್ ಗಳು ಮತ್ತು ಇತರೆ ಸಂಸ್ಥೆಗಳ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಕುರಿತು ಸಮಗ್ರ ವರದಿ ಸಲ್ಲಿಸಬೇಕು ಎಂದು ಸರಕಾರ ಮತ್ತು ಪೊಲೀಸ್ ಇಲಾಖೆಗೆ ನ್ಯಾಯಪೀಠ ನಿರ್ದೇಶನ ನೀಡಿದೆ.
ಜನ ಸಂದಣಿ ಇರುವ ದಾರಿಗಳಲ್ಲಿ ಅವಶ್ಯಕತೆ ಇಲ್ಲದೆ ಇದ್ದರೂ, ಮೋಟಾರ್ ವಾಹನ ಗಳ ಶಬ್ದವನ್ನು ಹೆಚ್ಚಿಸುವವರಿಗೆ ಈ ಆದೇಶದಿಂದ ಕಡಿವಾಣ ಹಾಕಿದಂತಾಗುತ್ತದೆ.

ಮಣ್ಣ ಮಕ್ಕಳನ್ನು ಕಾಡಿದ, ಮಳೆರಾಯ

0

ಕಳೆದ ಮೂರ್ನಾಲ್ಕು ದಿನಗಳಿಂದ ರಾಜ್ಯದ ಮಲೆನಾಡು, ಕರಾವಳಿ ಪ್ರದೇಶಗಳಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ರೈತರ ಬೆಳೆ ನಾಶಕ್ಕೆ ಕಾರಣವಾಗಿದೆ.

ಅಪಾರ ಬೆಳೆಯ ನಾಶದ ಪರಿಣಾಮವಾಗಿ ತರಕಾರಿಗಳ ಬೆಲೆ ಏರುಗತಿಯಲ್ಲಿದೆ.

ಕಳೆದ ತಿಂಗಳಿಗೆ ಹೋಲಿಸಿದರೆ ಸೀಮೆ ಬದನೆಕಾಯಿ, ಬೀಟ್ರೂಟ್ ಹೊರತುಪಡಿಸಿ ಇತರೆ ಎಲ್ಲಾ ತರಕಾರಿಗಳು ಶೇ. 50ರಿಂದ 60 ರಷ್ಟು ಏರಿಕೆಯಾಗಿವೆ. ಗೆಡ್ಡೆಕೋಸು, ದಪ್ಪ ಮೆಣಸಿನಕಾಯಿ, ನುಗ್ಗೆಕಾಯಿ ಹೀಗೆ ಇತ್ಯಾದಿ ತರಕಾರಿಯ ಬೆಲೆ ಏರಿದೆ. 15 ಕೆಜಿ ಟೊಮೆಟೊ ಬಾಕ್ಸ್ ಕಳೆದ ತಿಂಗಳು 400ರಿಂದ 450 ರೂಗಳಿಂದ 800 ರೂ. ತಲುಪಿದೆ ಎಂದು ಫೋರ್ ಸ್ಟಾರ್ ಗ್ರೂಪ್ಸ್ ಟ್ರೇಡರ್ಸ್ ನ ಪ್ರಕಾಶ್ ಅವರು ತಿಳಿಸಿದ್ದಾರೆ.

ವಾಡಿಕೆಗಿಂತ ಹೆಚ್ಚು ಸುರಿಯುತ್ತಿರುವ ಮಳೆಯಿಂದಾಗಿ ಕೊಡಗಿನ ಕಾಫಿ, ಮಲೆನಾಡಿನ ಅಡಿಕೆ ಬೆಳೆ, ಚಾಮರಾಜನಗರ ಹಾಸನದಲ್ಲಿ ಮೆಕ್ಕೆಜೋಳ ರಾಗಿ ಬೆಳೆಗಳಿಗೆ ಹಾನಿ ಉಂಟುಮಾಡಿದೆ. ಕಟಾವಿಗೆ ಬಂದ ರಾಗಿ, ಶೇಂಗಾ, ಕಾಳುಮೆಣಸು ನಾಶವಾಗಿವೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ದಲ್ಲಿ ಭಾರಿ ಪ್ರಮಾಣದ ನೀರು ನಿಂತು ಹೊಲಗದ್ದೆಗಳು ಸಂಪೂರ್ಣ ಜಲಾವೃತಗೊಂಡಿವೆ. ಬೆಂಗಳೂರು, ಮೈಸೂರು, ದಾವಣಗೆರೆ, ಕೋಲಾರ ಮುಂತಾದ ಪ್ರದೇಶದಲ್ಲಿ ಮಳೆಯ ಅಬ್ಬರ ಮುಂದುವರೆದಿದೆ.

ಪೈರು ಕೊಯ್ಲುಗುವ ಹಂತದಲ್ಲಿ ಇಂತಹ ದುಸ್ಥಿತಿ ಬಂದಿದೆ. ಕಷ್ಟಪಟ್ಟು ಬೆಳೆದ ಬೆಳೆಯು ಕೈಗೆ ಸೇರುವಷ್ಟರಲ್ಲಿ ನೀರುಪಾಲಾಗಿದೆ ಎಂದು ರೈತರು ಕಂಗಾಲಾಗಿದ್ದಾರೆ.

ಕಷ್ಟಪಟ್ಟು ಬೆವರು ಹರಿಸಿ, ಸಾಲ ಸೋಲ ಮಾಡಿ ಬೆಳೆದ ಬೆಳೆಯು ಇಂದು ನೀರುಪಾಲಾಗಿದೆ. ರೈತರ ಸ್ಥಿತಿ ಚಿಂತಾಜನಕ. ಇಂತಹ ಸಂದರ್ಭದಲ್ಲಿ ಅವರಿಗೆ ನೆರವಾಗಲು ರಾಜ್ಯ ಸರ್ಕಾರ ಪರಿಹಾರ ಚಟುವಟಿಕೆ ಆರಂಭಿಸಬೇಕಿದೆ.

ಮುಂದಿನ ವಿಶ್ವಕಪ್ ಕ್ರಿಕೆಟ್: ಪಂದ್ಯಗಳಿಗೆ ಆತಿಥೇಯ ಭಾರತ

0

ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯು ಈಗಾಗಲೇ ವಿಶ್ವಮಟ್ಟದ ಟೂರ್ನಿಗಳ ವೇಳಾಪಟ್ಟಿ ಬಿಡುಗಡೆ ಮಾಡಿದೆ.
ವೇಳಪಟ್ಟಿಯ ಅನ್ವಯ 2023 ರಿಂದ 2031 ರವರೆಗೆ ನಡೆಯುವ ಟೂರ್ನಿಗಳಿಗೆ ಆ ಅವಧಿಯಲ್ಲಿ ಅಂತರ್ರಾಷ್ಟ್ರೀಯ ಕ್ರಿಕೆಟ್ ಸಮಿತಿಯ 3 ವಿಶ್ವಮಟ್ಟದ ಟೂರ್ನಿಗಳಿಗೆ ಭಾರತ ಆತಿಥ್ಯ ವಹಿಸಲಿದೆ.
2026 ರ ಟಿ – 20 ವಿಶ್ವಕಪ್ 2029 ರಲ್ಲಿ ಚಾಂಪಿಯನ್ಸ್ ಟ್ರೋಫಿ ಮತ್ತು 2031 ರ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಗಳನ್ನು ಭಾರತದಲ್ಲಿ ನಡೆಸಲಾಗುವುದು.
11 ಪೂರ್ಣಾವಧಿ ಸದಸ್ಯ ರಾಷ್ಟ್ರಗಳು ಮತ್ತು 3 ಸಹ ಸದಸ್ಯ ರಾಷ್ಟ್ರಗಳನ್ನು 2 ಏಕದಿನ ವಿಶ್ವಕಪ್, 4 ಟಿ – 20 ವಿಶ್ವಕಪ್ ಮತ್ತು 2 ಚಾಂಪಿಯನ್ಸ್ ಟ್ರೋಫಿ ಟೂರ್ನಿಗಳನ್ನು ಆಯೋಜಿಸಲು ಆಯ್ಕೆ ಮಾಡಲಾಗಿದೆ ಎಂದು ICC ಅಪೆಕ್ಸ್ ಮಂಡಳಿಯು ಪ್ರಕಟಣೆಯಲ್ಲಿ ತಿಳಿಸಿದೆ.

ಲಸಿಕೆ ಪೂರ್ಣಗೊಂಡ ಮನೆಗೆ ಸ್ಟಿಕ್ಕರ್

0

ಕೋವಿಡ್ ನಿರೋಧಕ ಲಸಿಕೆ ಅಭಿಯಾನ ತೀವ್ರ ಗತಿಯಲ್ಲಿ ಮುಂದುವರಿಯಬೇಕು. ಹಾಗಾಗಿ ಎರಡೂ ಡೋಸ್ ಲಸಿಕೆ ಪೂರ್ಣಗೊಳಿಸಿದ ಕುಟುಂಬಗಳ ಮನೆ ಬಾಗಿಲಿಗೆ ಸ್ಟಿಕ್ಕರ್ ಅಂಟಿಸಬೇಕು ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಸಲಹೆ ನೀಡಿದ್ದಾರೆ.
ಲಸಿಕೆ ಅಭಿಯಾನ ಇನ್ನೊಂದು ಹೆಜ್ಜೆ ಮುಂದಕ್ಕೆ ಕೊಂಡೊಯ್ಯುವ ಉದ್ದೇಶದಿಂದ ಸರ್ಕಾರೇತರ ಸಂಸ್ಥೆಗಳು, ನಾಗರಿಕ ಸಂಘಟನೆಗಳು ಮತ್ತು ಅಭಿವೃದ್ಧಿ ಪಾಲುದಾರರ ಜೊತೆ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಸಮಾಲೋಚನೆ ನಡೆಸಿದರು.
ಮನೆ ಬಾಗಿಲಿಗೆ ಲಸಿಕೆ ಕೊಂಡೊಯ್ಯುವ ‘ಹರ್ ಘರ್ ದಸ್ತಕ್’ ಅಭಿಯಾನದ ಕುರಿತು ಈ ಸಂದರ್ಭದಲ್ಲಿ ಪ್ರಸ್ತಾಪಿಸಿದರು.
ಕೋವಿಡ್ ಬಿಕ್ಕಟ್ಟು ನಿಭಾಯಿಸುವ ವಿಷಯದಲ್ಲಿ ಭಾರತ ಸರಿಸಾಟಿ ಇಲ್ಲದ ಸಾಧನೆ ಮಾಡಿದೆ. ಲಾಕ್ ಡೌನ್ ಸಂದರ್ಭ ಯಾರೊಬ್ಬರು ಉಪವಾಸ ಬೀಳದಂತೆ ನೋಡಿಕೊಂಡಿದ್ದು ನಮ್ಮ ಸರ್ಕಾರದ ಹೆಗ್ಗಳಿಕೆ. ಇದರಲ್ಲಿ ಎನ್ ಜಿಒ ಮತ್ತು ನಾಗರಿಕ ಸಂಘ ಸಂಸ್ಥೆಗಳ ಪಾಲು ದೊಡ್ಡದಿದೆ. ಭಾರತದಂತಹ ಬೃಹತ್ ರಾಷ್ಟ್ರದಲ್ಲಿ ಮನೆಬಾಗಿಲಿಗೆ ಲಸಿಕೆ ತಲುಪಿಸುವುದು ಸಾಹಸದ ಕೆಲಸವೇ ಸರಿ. ಇದರಲ್ಲಿ ಜನರು ಕೂಡ ಮುತುವರ್ಜಿ ವಹಿಸಬೇಕು.
ಎರಡೂ ಡೋಸ್ ಪೂರೈಸಿದವರ ಪ್ರಮಾಣ ಶೇಕಡ 40ರಷ್ಟು ದಾಟಿದೆ. ಈ ಸಾಧನೆಗೆ ಎಲ್ಲರ ಸಹಭಾಗಿತ್ವವೇ ಕಾರಣ.
ಆದರೂ ಸಂಕ್ರಾಮಿಕ ರೋಗ ಸಂಪೂರ್ಣ ಅಂತ್ಯಗೊಳ್ಳಬೇಕಾದರೆ ಶೇ.100ರಷ್ಟು ಲಸಿಕೆ ಪೂರೈಸುವುದು ಅನಿವಾರ್ಯ ಎಂದು ಹೇಳಿದರು.

ಜನತೆಗೆ ಆಹಾರ ಭದ್ರತೆ : ಸುಪ್ರೀಂ ಕಳಕಳಿ

0

ಕೋವಿಡ್-19 ಸಾಂಕ್ರಾಮಿಕ ರೋಗ ಹಾಗೂ ಲಾಕ್ ಡೌನ್ ನಿಂದಾಗಿ ಬಡವರ್ಗ ಮತ್ತು ಮಧ್ಯಮ ವರ್ಗದ ಜನರು ಸಂಕಷ್ಟದಲ್ಲಿದ್ದಾರೆ ಹೀಗಾಗಿ ಕೇಂದ್ರ ಸರ್ಕಾರ ಸಮುದಾಯ ಕ್ಯಾಂಟೀನ್ ಗಳನ್ನು ಮೂರು ವಾರಗಳಲ್ಲಿ ಆರಂಭಿಸುವಂತೆ ಗಡುವು ನೀಡಿದೆ.

ಜನರು ಆರ್ಥಿಕವಾಗಿ ಸಂಕಷ್ಟದಲ್ಲಿದ್ದು ಇಂತಹ ಸಂದರ್ಭದಲ್ಲಿ ಜನರ ಆಹಾರ ಭದ್ರತೆಯನ್ನು ನಿಗದಿಪಡಿಸಬೇಕು. ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಮುದಾಯಗಳನ್ನು ಸ್ಥಾಪಿಸಿ ಜನರಿಗೆ ಸಬ್ಸಿಡಿ ದರದಲ್ಲಿ ಆಹಾರ ದೊರೆಯುವಂತೆ ಮಾಡಲು ಸರ್ಕಾರಕ್ಕೆ ಸೂಚಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಅನುನ್ ಧವನ್, ಇಶಾನ್ ಧವನ್ ಮತ್ತು ಕುಂಜನಾ ಸಿಂಗ್ ಅವರು ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ವಾದ-ವಿವಾದಗಳನ್ನು ಆಲಿಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ನೇತೃತ್ವದ ಪೀಠವು ಕೇಂದ್ರ‌ ಸರ್ಕಾರ ಸಲ್ಲಿಸಿದ ಪ್ರಮಾಣ ಪತ್ರಗಳು ಮತ್ತು ಹೇಳಿಕೆಗಳನ್ನು ಗಮನಿಸಿದರೆ ಸಲಹೆಗಳನ್ನು ಕಲೆಹಾಕುವ ಪ್ರಕ್ರಿಯೆ ಇನ್ನೂ ನಡೆಯುತ್ತಿರುವಂತೆ ಕಾಣಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದೆ.

“ಹಸಿವು ಮತ್ತು ಅಪೌಷ್ಠಿಕತೆ ಎರಡು ಭಿನ್ನ ವಿಚಾರಗಳು. ಈ ಎರಡನ್ನು ಮಿಶ್ರಣ ಮಾಡಬೇಡಿ. ಅಪೌಷ್ಟಿಕತೆಯ ಬಗ್ಗೆ ಬಂದಿರುವ ಅಂತರಾಷ್ಟ್ರೀಯ ಸೂಚ್ಯಂಕಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ನಮ್ಮ ಉದ್ದೇಶ ಇರುವುದು ದೇಶದಲ್ಲಿ ಹಸಿವು ಇಲ್ಲದಂತೆ ಮಾಡುವುದು” ಎಂದು ನ್ಯಾಯಪೀಠ ಹೇಳಿದೆ.

ಕೇಂದ್ರ ಸರ್ಕಾರ ಸಮುದಾಯ ಕ್ಯಾಂಟೀನ್ ಸ್ಥಾಪನೆಗೆ ಯೋಜನೆ ರೂಪಿಸಿದ್ದು ಇದಕ್ಕೆ ರಾಜ್ಯಗಳು ಸಹಕರಿಸಬೇಕು. ರಾಜ್ಯ ಸರ್ಕಾರಗಳಿಗೆ ಏನಾದರೂ ಆಕ್ಷೇಪ ಇದ್ದರೆ ಮುಂದಿನ ವಿಚಾರಣೆಯ ಸಂದರ್ಭದಲ್ಲಿ ಪರಿಶೀಲನೆ ನಡೆಸಲಾಗುವುದು ಎಲ್ಲಾ ರಾಜ್ಯಗಳು ಕೇಂದ್ರದ ಜೊತೆಗೆ ಸಹಕರಿಸಬೇಕು ಎಂದು ಕೋರ್ಟ್ ತಿಳಿಸಿದೆ. ಉತ್ತರಪ್ರದೇಶ, ಮಧ್ಯಪ್ರದೇಶ, ಬಿಹಾರ, ಮಹಾರಾಷ್ಟ್ರ ಮತ್ತು ಒಡಿಶಾ ರಾಜ್ಯಗಳು ಪ್ರತಿಕ್ರಿಯೆ ಸಲ್ಲಿಸಬೇಕು ಎಂದು ಈ ಸಮಯದಲ್ಲಿ ಪೀಠ ಸೂಚಿಸಿದೆ.

‘ಹಸಿವು ತಡೆಗೆ ನಾವು ಮುಂದಾದರೆ ಯಾವುದೇ ಸಂವಿಧಾನ, ಯಾವುದೇ ಕಾನೂನು ಅಥವಾ ಯಾವುದೇ ನ್ಯಾಯಾಲಯ ಬೇಡ ಎನ್ನುವುದಿಲ್ಲ. ಈಗಾಗಲೇ ವಿಳಂಬವಾಗಿದೆ. ವಿಚಾರಣೆಯನ್ನು ಪದೇಪದೇ ಮುಂದೂಡುವುದರಿಂದ ಪ್ರಯೋಜನ ಇಲ್ಲ. ರಾಜ್ಯ ಸರ್ಕಾರಗಳ ಜೊತೆಗೆ ದಯವಿಟ್ಟು ಚರ್ಚಿಸಿ ಯೋಜನೆಯನ್ನು ಅಭಿವೃದ್ಧಿಪಡಿಸಿ’ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.

ಮಾಜಿ ಸಿ. ಎಂ.ಆಸ್ತಿ ಕೇವಲ ಒಂದೇಮನೆ

0

ಅಪ್ಪಟ ಗಾಂಧಿವಾದಿ,ಸರಳತೆಯಲ್ಲೇ ಜೀವನ ಸಾಗಿಸಿದವರು, ಸಿದ್ದವನಹಳ್ಳಿ ನಿಜಲಿಂಗಪ್ಪ.
ದಿವಂಗತ ಮುಖ್ಯಮಂತ್ರಿ ಎಸ್ ನಿಜಲಿಂಗಪ್ಪ ಅವರ ನಿವಾಸವನ್ನು ಸ್ವಾಧೀನಪಡಿಸಿಕೊಂಡು ಅವರ ಮನೆಯನ್ನು ವಸ್ತು ಸಂಗ್ರಹಾಲಯವನ್ನಾಗಿ ಪರಿವರ್ತಿಸಲು ಕರ್ನಾಟಕ ಸರ್ಕಾರ ತೀರ್ಮಾನಿಸಿದೆ.

ಇಂತಹ ಅಪೂರ್ವ ವ್ಯಕ್ತಿಯ ಆದರ್ಶಗಳು ಅನುಕರಣೀಯ. ಅವರು ಬಾಳಿದ ಮನೆಯನ್ನ ಸ್ಮಾರಕವಾಗಿಸಲು ಸಾರ್ವಜನಿಕರ ಒತ್ತಾಯವಿತ್ತು.
ಅದಕ್ಕೆ ಪೂರಕವಾಗಿ
ವಿಧಾನ ಪರಿಷತ್ ಸದಸ್ಯ ಶ್ರೀ ಮೋಹನ್ ಕೊಂಡಜ್ಜಿ ಸರ್ಕಾರದ ಗಮನ ಸೆಳೆದು ಪತ್ರವನ್ನೂ ಬರೆದಿದ್ದರು.

ಎಸ್ ನಿಜಲಿಂಗಪ್ಪ ಅವರ ನಿವಾಸ ಚಿತ್ರದುರ್ಗದಲ್ಲಿದೆ. ದಶಕಗಳಿಂದ ಅಲ್ಲಿನ ಜನರು ನಿಜಲಿಂಗಪ್ಪ ಅವರ ಮನೆಯನ್ನು ವಸ್ತು ಸಂಗ್ರಹಾಲಯವನ್ನಾಗಿ ಪರಿವರ್ತಿಸಲು ಬೇಡಿಕೆಯನ್ನು ಇಟ್ಟಿದ್ದರು. ಈಗ ಅವರ ಬೇಡಿಕೆಗೆ ಕೇಂದ್ರ ಸರ್ಕಾರವು ಮನ್ನಣೆಯನ್ನು ನೀಡಿದೆ.

ಎಸ್ ನಿಜಲಿಂಗಪ್ಪ ಅವರ ಮೊಮ್ಮಗನಿಂದ ಮನೆ ಖರೀದಿಸಲು ಸರ್ಕಾರ ನಿರ್ಧರಿಸಿದೆ. ಈ ಯೋಜನೆಗೆ ಐದು ಕೋಟಿ ರೂಗಳನ್ನು ಮಂಜೂರು ಮಾಡಲಾಗಿದೆ. ಅದರಲ್ಲಿ ಎರಡು ಕೋಟಿ ರೂಗಳನ್ನು ಮೊದಲ ಹಂತದಲ್ಲಿ ಬಿಡುಗಡೆಗೊಳಿಸಲಾಗಿದೆ.

ಎಸ್ ನಿಜಲಿಂಗಪ್ಪ ಸಮಾಧಿ ಸಮಿತಿಯ ಸದಸ್ಯರಾದ ಎಂ. ಎಲ್.ಸಿ ಮೋಹನ್ ಕೊಂಡಜ್ಜಿ ಅವರು ಮಾತನಾಡಿ ಸುಮಾರು ಎಂಟು ವರ್ಷಗಳ ಕಾಲ ಸಿಎಂ ಆಗಿದ್ದ ನಿಜಲಿಂಗಪ್ಪ ಅವರು ಕೇವಲ ಒಂದೇ ಒಂದು ಆಸ್ತಿಯನ್ನು ಹೊಂದಿದ್ದರು. ಅದು ಅವರ ಮನೆ ಮಾತ್ರ. ಚಿತ್ರದುರ್ಗದ ಜನರ ಒತ್ತಾಯದ ಮೇರೆಗೆ ನಾನು ಕೇಂದ್ರ ಸರ್ಕಾರಕ್ಕೆ ಪತ್ರವನ್ನು ಬರೆದು ಅವರ ನಿವಾಸ ಸ್ಮರಣೀಯವಾಗಲಿರುವುದು ಸಂತಸದ ವಿಚಾರ ಎಂದರು.

ಚಾಲನಾಪತ್ರ ನೀಡುವಾಗ ಕಾಯಿದೆ ಪಾಲಿಸಿ

0

ವಾಹನ ಚಾಲನಾ ಪರವಾನಗಿ ನೀಡಲು ಅಗತ್ಯ ಪರೀಕ್ಷೆ ನಡೆಸುವಾಗ ‘ಮೋಟಾರು ವಾಹನ ಕಾಯಿದೆ – 1986’ ರ ಸೆಕ್ಷನ್ 15 (2) ಕಟ್ಟುನಿಟ್ಟಾಗಿ ಪಾಲಿಸುವಂತೆ ಹೈಕೋರ್ಟ್ ಸಾರಿಗೆ ಇಲಾಖೆಗೆ ಆದೇಶಿಸಿದೆ.
ಎಸ್. ಗೌರಿಶಂಕರ್ ಸಲ್ಲಿಸಿದ್ದ ಪಿಐಎಲ್ ಕುರಿತು ಮುಖ್ಯ ನ್ಯಾಯಮೂರ್ತಿಗಳಾದ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠವು ವಿಚಾರಣೆಯನ್ನು ನಡೆಸಿತು.
ಅರ್ಜಿದಾರ ಎಸ್.ಗೌರಿಶಂಕರ್ ಖುದ್ದು ವಾದ ಮಂಡಿಸಿ, ವಾಹನ ಚಾಲನಾ ಪರವಾನಗಿ ನೀಡುವ ಮೊದಲು ನಡೆಸುವ ಪರೀಕ್ಷೆಗಳಲ್ಲಿ ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 15ರ ನಿಯಮ ಪಾಲನೆ ಆಗುತ್ತಿಲ್ಲ. ವಾಹನ ಚಾಲನೆಯಲ್ಲಿ ಪಕ್ವತೆ ಪಡೆದುಕೊಳ್ಳದವರಿಗೂ ಪರವಾನಗಿ ನೀಡಲಾಗುತ್ತಿದೆ. ಒಂದು ಕೇಂದ್ರದಲ್ಲಿ ದಿನಕ್ಕೆ 200 ಮಂದಿಗೆ ಪರೀಕ್ಷೆ ನಡೆಸಲಾಗುತ್ತದೆ. ಇದು ಪ್ರಯೋಗಿಕವಾಗಿ ಸಾಧುವಲ್ಲ. ಹಾಗಾಗಿ ರಸ್ತೆ ಅಪಘಾತಗಳು ಹೆಚ್ಚಾಗುತ್ತಿವೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು.
ವಾದ ಪ್ರತಿವಾದ ಆಲಿಸಿದ ಪೀಠ, ನಿಯಮಗಳನ್ನು ಪಾಲಿಸಲಾಗುತ್ತದೆ ಎಂದು ಸರ್ಕಾರ ಹೇಳಿದೆ. ಅದನ್ನು ನಂಬದೇ ಇರಲು ಸಾಧ್ಯವಿಲ್ಲ. ಅದಾಗ್ಯೂ ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 15 (2) ರೈ ಅನ್ವಯ ನೋಂದಣಿ ಪುಸ್ತಕ ನಿರ್ವಹಿಸುವಂತೆ ಸಂಬಂಧಪಟ್ಟ ಪ್ರಾಧಿಕಾರಕ್ಕೆ ನಿರ್ದೇಶನ ನೀಡುತ್ತೇವೆ ಎಂದು ಆದೇಶಿಸಿ ಅರ್ಜಿ ಇತ್ಯರ್ಥ ಪಡಿಸಿತು.

ಪುನೀತ್ ರಾಜಕುಮಾರ್:ಕರ್ನಾಟಕ ರತ್ನ ಘೋಷಣೆ

0

ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಭಿಮಾನಿಗಳು ಮೇಳೈಸಿದ್ದರು.ಕರ್ನಾಟಕ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ ಯು “ಪುನೀತ ನಮನ” ಎಂಬ ಭಾವಪೂರ್ಣ ಕಾರ್ಯಕ್ರಮ ಏರ್ಪಡಿಸಿತ್ತು.ರಾಜ್ಯದ ಮುಖ್ಯಮಂತ್ರಿಗಳೇ ಅಲ್ಲದೆ ಸರ್ಕಾರದ ಸಚಿವ ಸಂಪುಟ ಸದಸ್ಯರು ಭಾಗವಹಿಸಿದ್ದರು.ವಿಶೇಷವೆಂದರೆ ದಕ್ಷಿಣ ಭಾರತದ ಅನೇಕ ಚಲನಚಿತ್ರ ನಟರು ನಮನ ಸಲ್ಲಿಸಲು ಉಪಸ್ಥಿತರಿದ್ದರು.ಸ್ಥಳಾವಕಾಶ ಮತ್ತು ಸಮಯದ ಮಿತಿಯಿಂದಾಗಿ ನಾಡಿನ ಎಲ್ಲರಿಗೂ ಈ ಕಾರ್ಯಕ್ರಮಕ್ಕೆ ಹಾಜರಿರಲು ಅವಕಾಶಮಾಡಿಕೊಡಲಾಗಲಿಲ್ಲ.ಕ್ಷಮಿಸಬೇಕು ಎಂದು ಮಂಡಳಿಯ ಪರವಾಗಿ ಶ್ರೀ ಸಾ.ರಾ.ಗೋವಿಂದು ಕೋರಿದರು.ಚಲನಚಿತ್ರ ಸಾಹಿತಿ ಕವಿ ಡಾ.ನಾಗೇಂದ್ರ ಪ್ರಸಾದ್ ಅವರು ರಚಿಸಿದ ಪುನೀತ್ ಅವರ ಕುರಿತ ಹಾಡುಎಲ್ಲರೆದೆಯನ್ನು ಕಲಕಿತು.ಹಿರಿಯಣ್ಣ ನಟ ಶಿವರಾಜ್ ಕುಮಾರ್ ಅಂತೂ ಬಿಕ್ಕಿಬಿಕ್ಕಿ ಅತ್ತರು.ಶ್ರೀಮತಿ  ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಕಣ್ಮುಚ್ಚಿಕೊಂಡೇ ದುಃಖದ ಕಡಲಲ್ಲಿ ಮುಳುಗಿದ್ದರು. ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ್ ಬೊಮ್ಮಾಯಿ ಅವರುಪುನೀತ್ ಅವರ ಅಭಿನಯ, ವ್ಯಕ್ತಿತ್ವ, ಸಮಾಜ ಸೇವೆಯನ್ನ ಶ್ಲಾಘಿಸಿದರು.ರಾಜ್ಯ ಸರ್ಕಾರವು ಪುನೀತ್ ಅವರ ಸಮಗ್ರ ಸೇವೆಯನ್ನ ಪರಿಗಣಿಸಿ ಅವರಿಗೆಮರಣೋತ್ತರವಾಗಿ”ಕರ್ನಾಟಕ ರತ್ನ” ಪುರಸ್ಕಾರ ನೀಡುವುದಾಗಿ ಘೋಷಿಸಿದರು.ಅಷ್ಟೇ ಅಲ್ಲ ದೇಶದ ಮಟ್ಟದಲ್ಲಿ ಸಿಗಬೇಕಾಗಿರುವ ಉನ್ನತ ಪುರಸ್ಕಾರಗಳ ಬಗ್ಗೆ ಸೂಕ್ತವಾಗಿ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದರು.ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪ ಮತ್ತು ‌ವಿರೋಧ ಪಕ್ಷದ ನಾಯಕ      ಶ್ರೀ ಸಿದ್ಧರಾಮಯ್ಯ ಮಾತನಾಡಿದರು.ಪುನೀತ್ ಅವರುಡಾ.ರಾಜ್ ಕುಮಾರ್ ಅವರಷ್ಟೇ ಜನಪ್ರಿಯತೆ ಗಳಿಸಿದ್ದರು.ಅವರ ಸಮಾಜ ಸೇವೆಅನುಕರಣೀಯ ಎಂದು ಬಿ.ಎಸ್.ಯಡಿಯೂರಪ್ಪ ನುಡಿದರು.ಶ್ರೀಸಿದ್ಧರಾಮಯ್ಯ ಅವರು ಮಾತನಾಡಿಪುನೀತ್ ಅವರ ನಿಧನ ನಮ್ಮ ಕುಟುಂಬದಲ್ಲಿ ಒಬ್ಬರನ್ನ ಕಳೆದುಕೊಂಡಂತೆ ದುಃಖವಾಗಿದೆ. ಈ ಭಾವನೆ ಇಡೀ ಕರ್ನಾಟಕದ ಜನತೆಯದ್ದೇ ಆಗಿದೆ ಎಂದರು.ತಮಿಳು ನಟ ವಿಶಾಲ್ ಅವರು “ಶಕ್ತಿಧಾಮದ ಹೆಣ್ಣುಮಕ್ಕಳ ಜವಾಬ್ದಾರಿ ನಾನು ವಹಿಸಿಕೊಳ್ಳುವೆ.ನನಗೊಂದು ಅವಕಾಶ ಕೊಡಿ.ಯಾವುದೇ ಪ್ರಚಾರ ಪಡೆಯಲು ನಾನು ಈ ವಿಚಾರ ಹೇಳುತ್ತಿಲ್ಲ. ಪುನೀತರ ನಗು ಸದಾ ನನ್ನ ಕಣ್ಮುಂದೆ ಇರುತ್ತದೆ ” ಎಂದರು.

ನ್ಯಾಯಮೂರ್ತಿಗಳ ಸಮ್ಮುಖ:ಲಿಖಿಂಪುರ -ಖೇರಿ ತನಿಖೆ

0

ಲಿಖಿಂಪುರ -ಖೇರಿ ಹಿಂಸಾಚಾರ ಪ್ರಕರಣದ ತನಿಖೆಯ ಉಸ್ತುವಾರಿಯನ್ನ ನಿವೃತ್ತ ನ್ಯಾಯಮೂರ್ತಿ ನಡೆಸುವಂತೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿತ್ತು. ಉತ್ತರ ಪ್ರದೇಶ ಸರ್ಕಾರ ಅದರ ಪಾಲನೆ ಮಾಡಲು ತನ್ನ ಸಮ್ಮತಿ ಸೂಚಿಸಿದೆ.
ವಿಶೇಷ ತನಿಖಾ ತಂಡವನ್ನು ( ಎಸ್ಐಟಿ) ಮೇಲ್ದರ್ಜೆಗೆ ಏರಿಸುವಂತೆ ಉತ್ತರಪ್ರದೇಶ ಸರ್ಕಾರಕ್ಕೆ ನ್ಯಾಯಾಲಯವು ಸೂಚಿಸಿದೆ. ಉನ್ನತ ಶ್ರೇಣಿಯ ಅಧಿಕಾರಿಗಳನ್ನು ನೇಮಿಸಲು ಹೇಳಿದೆ. ಉತ್ತರಪ್ರದೇಶ ಕೇಡರ್ ನ ಐಪಿಎಸ್ ಅಧಿಕಾರಿಗಳನ್ನು ನೇಮಿಸಬೇಕು. ಆದರೆ, ಅವರು ಮೂಲತಃ ಬೇರೆ ರಾಜ್ಯದವರಾಗಿರಬೇಕು ಎಂದು ತಿಳಿಸಿದೆ.
ನಾಲ್ವರು ರೈತರು ಮತ್ತು ಒಬ್ಬ ಪತ್ರಕರ್ತನ ಮೇಲೆ ಎಸ್ ಯುವಿ ವಾಹನ ಹರಿಸಿ ಹತ್ತಿ ಹಾಗೂ ನಂತರದ ಹಿಂಸಾಚಾರದಲ್ಲಿ ಮೂವರ ಹತ್ಯೆಯು ಅಕ್ಟೋಬರ್ 3ರಂದು ಲಿಖಿಂಪುರ -ಖೇರಿಯಲ್ಲಿ ನಡೆದಿತ್ತು.
ಸುಪ್ರೀಂಕೋರ್ಟ್ ಅಥವಾ ಹೈಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಯೊಬ್ಬರನ್ನು ತನಿಖೆಯ ದಿನ ನಿತ್ಯದ ಪ್ರಗತಿಯ ಉಸ್ತುವಾರಿಗೆ ನೇಮಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯ ನ್ಯಾಯಮೂರ್ತಿ ಎಂ. ವಿ.ರಮಣ ಅವರ ನೇತೃತ್ವದ ಪೀಠವು ಹೇಳಿದೆ.
ತನಿಖೆ ಸರಿಯಾಗಿ ನಡೆಯುತ್ತಿಲ್ಲ ಎಂದು ಉತ್ತರಪ್ರದೇಶ ಸರ್ಕಾರವನ್ನು ಸುಪ್ರೀಂಕೋರ್ಟ್ ಇದೇ 8 ರಂದು ತರಾಟೆಗೆ ತೆಗೆದುಕೊಂಡಿತ್ತು. ಪಂಜಾಬ್-ಹರಿಯಾಣ ಹೈಕೋರ್ಟ್ ನ ನಿವೃತ್ತ ನ್ಯಾಯಮೂರ್ತಿಯನ್ನು ತನಿಖೆಯ ಪ್ರಗತಿಯ ಮೇಲೆ ನಿಗಾ ಇರಿಸಲು ನೇಮಿಸುವ ಪ್ರಸ್ತಾಪವನ್ನೂ ಮುಂದಿಟ್ಟಿತ್ತು.
ಪ್ರಕರಣದ ಪ್ರಮುಖ ಆರೋಪಿ ಯೊಬ್ಬರನ್ನು ರಕ್ಷಿಸುವುದಕ್ಕಾಗಿಯೇ ಸಾಕ್ಷ್ಯ ಸಂಗ್ರಹ ಮಾಡಿದಂತಿದೆ ಎಂದು ಅತೃಪ್ತಿ ವ್ಯಕ್ತಪಡಿಸಿತ್ತು. ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಮಗ, ಪ್ರಮುಖ ಆರೋಪಿ ಆಶಿಶ್ ಮಿಶ್ರಾ ಅವರನ್ನು ಪರೋಕ್ಷವಾಗಿ ಉಲ್ಲೇಖಿಸಿ ಹೀಗೆ ಹೇಳಲಾಗಿತ್ತು.