ಕೋವಿಡ್ ನಿರೋಧಕ ಲಸಿಕೆ ಅಭಿಯಾನ ತೀವ್ರ ಗತಿಯಲ್ಲಿ ಮುಂದುವರಿಯಬೇಕು. ಹಾಗಾಗಿ ಎರಡೂ ಡೋಸ್ ಲಸಿಕೆ ಪೂರ್ಣಗೊಳಿಸಿದ ಕುಟುಂಬಗಳ ಮನೆ ಬಾಗಿಲಿಗೆ ಸ್ಟಿಕ್ಕರ್ ಅಂಟಿಸಬೇಕು ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಸಲಹೆ ನೀಡಿದ್ದಾರೆ.
ಲಸಿಕೆ ಅಭಿಯಾನ ಇನ್ನೊಂದು ಹೆಜ್ಜೆ ಮುಂದಕ್ಕೆ ಕೊಂಡೊಯ್ಯುವ ಉದ್ದೇಶದಿಂದ ಸರ್ಕಾರೇತರ ಸಂಸ್ಥೆಗಳು, ನಾಗರಿಕ ಸಂಘಟನೆಗಳು ಮತ್ತು ಅಭಿವೃದ್ಧಿ ಪಾಲುದಾರರ ಜೊತೆ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಸಮಾಲೋಚನೆ ನಡೆಸಿದರು.
ಮನೆ ಬಾಗಿಲಿಗೆ ಲಸಿಕೆ ಕೊಂಡೊಯ್ಯುವ ‘ಹರ್ ಘರ್ ದಸ್ತಕ್’ ಅಭಿಯಾನದ ಕುರಿತು ಈ ಸಂದರ್ಭದಲ್ಲಿ ಪ್ರಸ್ತಾಪಿಸಿದರು.
ಕೋವಿಡ್ ಬಿಕ್ಕಟ್ಟು ನಿಭಾಯಿಸುವ ವಿಷಯದಲ್ಲಿ ಭಾರತ ಸರಿಸಾಟಿ ಇಲ್ಲದ ಸಾಧನೆ ಮಾಡಿದೆ. ಲಾಕ್ ಡೌನ್ ಸಂದರ್ಭ ಯಾರೊಬ್ಬರು ಉಪವಾಸ ಬೀಳದಂತೆ ನೋಡಿಕೊಂಡಿದ್ದು ನಮ್ಮ ಸರ್ಕಾರದ ಹೆಗ್ಗಳಿಕೆ. ಇದರಲ್ಲಿ ಎನ್ ಜಿಒ ಮತ್ತು ನಾಗರಿಕ ಸಂಘ ಸಂಸ್ಥೆಗಳ ಪಾಲು ದೊಡ್ಡದಿದೆ. ಭಾರತದಂತಹ ಬೃಹತ್ ರಾಷ್ಟ್ರದಲ್ಲಿ ಮನೆಬಾಗಿಲಿಗೆ ಲಸಿಕೆ ತಲುಪಿಸುವುದು ಸಾಹಸದ ಕೆಲಸವೇ ಸರಿ. ಇದರಲ್ಲಿ ಜನರು ಕೂಡ ಮುತುವರ್ಜಿ ವಹಿಸಬೇಕು.
ಎರಡೂ ಡೋಸ್ ಪೂರೈಸಿದವರ ಪ್ರಮಾಣ ಶೇಕಡ 40ರಷ್ಟು ದಾಟಿದೆ. ಈ ಸಾಧನೆಗೆ ಎಲ್ಲರ ಸಹಭಾಗಿತ್ವವೇ ಕಾರಣ.
ಆದರೂ ಸಂಕ್ರಾಮಿಕ ರೋಗ ಸಂಪೂರ್ಣ ಅಂತ್ಯಗೊಳ್ಳಬೇಕಾದರೆ ಶೇ.100ರಷ್ಟು ಲಸಿಕೆ ಪೂರೈಸುವುದು ಅನಿವಾರ್ಯ ಎಂದು ಹೇಳಿದರು.
ಲಸಿಕೆ ಪೂರ್ಣಗೊಂಡ ಮನೆಗೆ ಸ್ಟಿಕ್ಕರ್
Date: