ಅಪ್ಪಟ ಗಾಂಧಿವಾದಿ,ಸರಳತೆಯಲ್ಲೇ ಜೀವನ ಸಾಗಿಸಿದವರು, ಸಿದ್ದವನಹಳ್ಳಿ ನಿಜಲಿಂಗಪ್ಪ.
ದಿವಂಗತ ಮುಖ್ಯಮಂತ್ರಿ ಎಸ್ ನಿಜಲಿಂಗಪ್ಪ ಅವರ ನಿವಾಸವನ್ನು ಸ್ವಾಧೀನಪಡಿಸಿಕೊಂಡು ಅವರ ಮನೆಯನ್ನು ವಸ್ತು ಸಂಗ್ರಹಾಲಯವನ್ನಾಗಿ ಪರಿವರ್ತಿಸಲು ಕರ್ನಾಟಕ ಸರ್ಕಾರ ತೀರ್ಮಾನಿಸಿದೆ.
ಇಂತಹ ಅಪೂರ್ವ ವ್ಯಕ್ತಿಯ ಆದರ್ಶಗಳು ಅನುಕರಣೀಯ. ಅವರು ಬಾಳಿದ ಮನೆಯನ್ನ ಸ್ಮಾರಕವಾಗಿಸಲು ಸಾರ್ವಜನಿಕರ ಒತ್ತಾಯವಿತ್ತು.
ಅದಕ್ಕೆ ಪೂರಕವಾಗಿ
ವಿಧಾನ ಪರಿಷತ್ ಸದಸ್ಯ ಶ್ರೀ ಮೋಹನ್ ಕೊಂಡಜ್ಜಿ ಸರ್ಕಾರದ ಗಮನ ಸೆಳೆದು ಪತ್ರವನ್ನೂ ಬರೆದಿದ್ದರು.
ಎಸ್ ನಿಜಲಿಂಗಪ್ಪ ಅವರ ನಿವಾಸ ಚಿತ್ರದುರ್ಗದಲ್ಲಿದೆ. ದಶಕಗಳಿಂದ ಅಲ್ಲಿನ ಜನರು ನಿಜಲಿಂಗಪ್ಪ ಅವರ ಮನೆಯನ್ನು ವಸ್ತು ಸಂಗ್ರಹಾಲಯವನ್ನಾಗಿ ಪರಿವರ್ತಿಸಲು ಬೇಡಿಕೆಯನ್ನು ಇಟ್ಟಿದ್ದರು. ಈಗ ಅವರ ಬೇಡಿಕೆಗೆ ಕೇಂದ್ರ ಸರ್ಕಾರವು ಮನ್ನಣೆಯನ್ನು ನೀಡಿದೆ.
ಎಸ್ ನಿಜಲಿಂಗಪ್ಪ ಅವರ ಮೊಮ್ಮಗನಿಂದ ಮನೆ ಖರೀದಿಸಲು ಸರ್ಕಾರ ನಿರ್ಧರಿಸಿದೆ. ಈ ಯೋಜನೆಗೆ ಐದು ಕೋಟಿ ರೂಗಳನ್ನು ಮಂಜೂರು ಮಾಡಲಾಗಿದೆ. ಅದರಲ್ಲಿ ಎರಡು ಕೋಟಿ ರೂಗಳನ್ನು ಮೊದಲ ಹಂತದಲ್ಲಿ ಬಿಡುಗಡೆಗೊಳಿಸಲಾಗಿದೆ.
ಎಸ್ ನಿಜಲಿಂಗಪ್ಪ ಸಮಾಧಿ ಸಮಿತಿಯ ಸದಸ್ಯರಾದ ಎಂ. ಎಲ್.ಸಿ ಮೋಹನ್ ಕೊಂಡಜ್ಜಿ ಅವರು ಮಾತನಾಡಿ ಸುಮಾರು ಎಂಟು ವರ್ಷಗಳ ಕಾಲ ಸಿಎಂ ಆಗಿದ್ದ ನಿಜಲಿಂಗಪ್ಪ ಅವರು ಕೇವಲ ಒಂದೇ ಒಂದು ಆಸ್ತಿಯನ್ನು ಹೊಂದಿದ್ದರು. ಅದು ಅವರ ಮನೆ ಮಾತ್ರ. ಚಿತ್ರದುರ್ಗದ ಜನರ ಒತ್ತಾಯದ ಮೇರೆಗೆ ನಾನು ಕೇಂದ್ರ ಸರ್ಕಾರಕ್ಕೆ ಪತ್ರವನ್ನು ಬರೆದು ಅವರ ನಿವಾಸ ಸ್ಮರಣೀಯವಾಗಲಿರುವುದು ಸಂತಸದ ವಿಚಾರ ಎಂದರು.