Sunday, March 23, 2025
Sunday, March 23, 2025

ಪುನೀತ್ ರಾಜಕುಮಾರ್:ಕರ್ನಾಟಕ ರತ್ನ ಘೋಷಣೆ

Date:

ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಭಿಮಾನಿಗಳು ಮೇಳೈಸಿದ್ದರು.ಕರ್ನಾಟಕ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ ಯು “ಪುನೀತ ನಮನ” ಎಂಬ ಭಾವಪೂರ್ಣ ಕಾರ್ಯಕ್ರಮ ಏರ್ಪಡಿಸಿತ್ತು.ರಾಜ್ಯದ ಮುಖ್ಯಮಂತ್ರಿಗಳೇ ಅಲ್ಲದೆ ಸರ್ಕಾರದ ಸಚಿವ ಸಂಪುಟ ಸದಸ್ಯರು ಭಾಗವಹಿಸಿದ್ದರು.ವಿಶೇಷವೆಂದರೆ ದಕ್ಷಿಣ ಭಾರತದ ಅನೇಕ ಚಲನಚಿತ್ರ ನಟರು ನಮನ ಸಲ್ಲಿಸಲು ಉಪಸ್ಥಿತರಿದ್ದರು.ಸ್ಥಳಾವಕಾಶ ಮತ್ತು ಸಮಯದ ಮಿತಿಯಿಂದಾಗಿ ನಾಡಿನ ಎಲ್ಲರಿಗೂ ಈ ಕಾರ್ಯಕ್ರಮಕ್ಕೆ ಹಾಜರಿರಲು ಅವಕಾಶಮಾಡಿಕೊಡಲಾಗಲಿಲ್ಲ.ಕ್ಷಮಿಸಬೇಕು ಎಂದು ಮಂಡಳಿಯ ಪರವಾಗಿ ಶ್ರೀ ಸಾ.ರಾ.ಗೋವಿಂದು ಕೋರಿದರು.ಚಲನಚಿತ್ರ ಸಾಹಿತಿ ಕವಿ ಡಾ.ನಾಗೇಂದ್ರ ಪ್ರಸಾದ್ ಅವರು ರಚಿಸಿದ ಪುನೀತ್ ಅವರ ಕುರಿತ ಹಾಡುಎಲ್ಲರೆದೆಯನ್ನು ಕಲಕಿತು.ಹಿರಿಯಣ್ಣ ನಟ ಶಿವರಾಜ್ ಕುಮಾರ್ ಅಂತೂ ಬಿಕ್ಕಿಬಿಕ್ಕಿ ಅತ್ತರು.ಶ್ರೀಮತಿ  ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಕಣ್ಮುಚ್ಚಿಕೊಂಡೇ ದುಃಖದ ಕಡಲಲ್ಲಿ ಮುಳುಗಿದ್ದರು. ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ್ ಬೊಮ್ಮಾಯಿ ಅವರುಪುನೀತ್ ಅವರ ಅಭಿನಯ, ವ್ಯಕ್ತಿತ್ವ, ಸಮಾಜ ಸೇವೆಯನ್ನ ಶ್ಲಾಘಿಸಿದರು.ರಾಜ್ಯ ಸರ್ಕಾರವು ಪುನೀತ್ ಅವರ ಸಮಗ್ರ ಸೇವೆಯನ್ನ ಪರಿಗಣಿಸಿ ಅವರಿಗೆಮರಣೋತ್ತರವಾಗಿ”ಕರ್ನಾಟಕ ರತ್ನ” ಪುರಸ್ಕಾರ ನೀಡುವುದಾಗಿ ಘೋಷಿಸಿದರು.ಅಷ್ಟೇ ಅಲ್ಲ ದೇಶದ ಮಟ್ಟದಲ್ಲಿ ಸಿಗಬೇಕಾಗಿರುವ ಉನ್ನತ ಪುರಸ್ಕಾರಗಳ ಬಗ್ಗೆ ಸೂಕ್ತವಾಗಿ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದರು.ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪ ಮತ್ತು ‌ವಿರೋಧ ಪಕ್ಷದ ನಾಯಕ      ಶ್ರೀ ಸಿದ್ಧರಾಮಯ್ಯ ಮಾತನಾಡಿದರು.ಪುನೀತ್ ಅವರುಡಾ.ರಾಜ್ ಕುಮಾರ್ ಅವರಷ್ಟೇ ಜನಪ್ರಿಯತೆ ಗಳಿಸಿದ್ದರು.ಅವರ ಸಮಾಜ ಸೇವೆಅನುಕರಣೀಯ ಎಂದು ಬಿ.ಎಸ್.ಯಡಿಯೂರಪ್ಪ ನುಡಿದರು.ಶ್ರೀಸಿದ್ಧರಾಮಯ್ಯ ಅವರು ಮಾತನಾಡಿಪುನೀತ್ ಅವರ ನಿಧನ ನಮ್ಮ ಕುಟುಂಬದಲ್ಲಿ ಒಬ್ಬರನ್ನ ಕಳೆದುಕೊಂಡಂತೆ ದುಃಖವಾಗಿದೆ. ಈ ಭಾವನೆ ಇಡೀ ಕರ್ನಾಟಕದ ಜನತೆಯದ್ದೇ ಆಗಿದೆ ಎಂದರು.ತಮಿಳು ನಟ ವಿಶಾಲ್ ಅವರು “ಶಕ್ತಿಧಾಮದ ಹೆಣ್ಣುಮಕ್ಕಳ ಜವಾಬ್ದಾರಿ ನಾನು ವಹಿಸಿಕೊಳ್ಳುವೆ.ನನಗೊಂದು ಅವಕಾಶ ಕೊಡಿ.ಯಾವುದೇ ಪ್ರಚಾರ ಪಡೆಯಲು ನಾನು ಈ ವಿಚಾರ ಹೇಳುತ್ತಿಲ್ಲ. ಪುನೀತರ ನಗು ಸದಾ ನನ್ನ ಕಣ್ಮುಂದೆ ಇರುತ್ತದೆ ” ಎಂದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

PM Yoga Awards 2025 ಪ್ರಧಾನಮಂತ್ರಿಗಳ ಯೋಗ ಪ್ರಶಸ್ತಿಗೆ ಅರ್ಜಿ ಆಹ್ವಾನ

PM Yoga Awards 2025 ಯೋಗ ಕ್ರೀಡೆಗೆ ಅತ್ಯುನ್ನತವಾದ ಕೊಡುಗೆಯನ್ನು ನೀಡಿರುವಂತಹ...

Department of Tourism ಕೌಶಲ್ಯಾಭಿವೃದ್ಧಿಗೆ ಪ.ಜಾ/ ಪ.ಪಂಗಡದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

Department of Tourism ಜಿಲ್ಲಾ ಪ್ರವಾಸೋದ್ಯಮ ಇಲಾಖೆಯು ಮೈಸೂರಿನ ಫುಡ್ ಕ್ರಾಫ್ಟ್...

Shivamogga News ವಹಿಸಿರುವ ಜವಾಬ್ದಾರಿಯನ್ನ ಪರಿಣಾಮಕಾರಿಯಾಗಿ ನಿರ್ವಹಿಸುವೆ- ವಸಂತ ಹೋಬಳಿದಾರ್

Shivamogga News ಸಮಾಜದಲ್ಲಿ ಸೇವಾ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ಮಾಡುವಲ್ಲಿ ರೋಟರಿಯಂತಹ ಸಂಸ್ಥೆಗಳು...

Rotary Club Shivamogga ಸಮಾಜದಲ್ಲಿ ಪ್ರತಿಫಲಾಪೇಕ್ಷೆಯಿಲ್ಲದೆ ಸಹಾಯಮಾಡುವುದು ರೋಟರಿಸಂಸ್ಥೆಯ ಗುರಿ-ಸಿ.ಎ.ದೇವ್ ಆನಂದ್

Rotary Club Shivamogga ವಿಶ್ವದ ಎಲ್ಲ ದೇಶಗಳಲ್ಲಿ ಹೆಚ್ಚು ಸೇವಾ ಕಾರ್ಯಗಳನ್ನು...