Tuesday, February 10, 2026
Tuesday, February 10, 2026
Home Blog Page 1820

ಹೆಣ್ಣಿಗೆ ಮದುವೆ ವಯಸ್ಸು 21 ಆದಿವಾಸಿಗಳಲ್ಲಿ ಆತಂಕ

0

ಕೇಂದ್ರ ಸರ್ಕಾರವು ಹೆಣ್ಣುಮಕ್ಕಳ ವಿವಾಹದ ವಯಸ್ಸನ್ನು 18ರಿಂದ 21 ವಶಕ್ಕೆ ಏನು ಮಾಡಲು ನಿರ್ಧರಿಸಿದೆ. ಆದರೆ ಆದಿವಾಸಿ ಸಮುದಾಯವೂ, ಹೆಣ್ಣುಮಕ್ಕಳ ಮದುವೆಯ ವಯಸ್ಸನ್ನು 18ರಿಂದ 16ಕ್ಕೆ ಇಳಿಸುವಂತೆ ಕಳೆದ ವರ್ಷ ಮನವಿ ಮಾಡಿಕೊಂಡಿತ್ತು. ಆದರೆ ಸರ್ಕಾರದ ಈಗಿನ ನಿರ್ಧಾರವು ಅವರಲ್ಲಿ ಆಘಾತಕ್ಕೆ ಕಾರಣವಾಗಿದೆ.

ಯಾವುದೇ ಶಾಸ್ತ್ರೀಯ ಅಧ್ಯಯನವನ್ನು ನಡೆಸದೆ ಆದಿವಾಸಿಗಳನ್ನು ಸಾಮಾನ್ಯ ವರ್ಗಕ್ಕೆ ಸೇರಿದ್ದಲ್ಲ ಜನಾಂಗವೇ ನಾಶವಾಗಬಹುದು ಎನ್ನುವ ಆತಂಕವನ್ನು ಸಮುದಾಯದ ಮುಖಂಡರು ವ್ಯಕ್ತಪಡಿಸಿದ್ದಾರೆ.

ಪುರುಷ ಮತ್ತು ಮಹಿಳೆಯರ ಮದುವೆಗೆ ಕನಿಷ್ಠ ವಯೋಮಿತಿಯನ್ನು ಸಮಾನವಾಗಿ 21ಕ್ಕೆ ನಿಗದಿ ಮಾಡಿರುವುದನ್ನು ಕೆಲವರು ಸ್ವಾಗತಿಸಿದ್ದಾರೆ. ಈ ಕುರಿತು ಚರ್ಚೆ ನಡೆಯುತ್ತಿದೆ. ಆದರೆ, ಆದಿವಾಸಿಗಳು ಸರ್ಕಾರದ ನಿರ್ಧಾರವನ್ನು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ ಎಂದು ಹೇಳುತ್ತಿದ್ದಾರೆ.

2020ರ ಜನವರಿಯಲ್ಲಿ ಆದಿವಾಸಿಗಳ ಪಾರ್ಲಿಮೆಂಟ್ ಸಭೆಯಲ್ಲಿ ಮಕ್ಕಳ ವಿವಾಹದ ಕನಿಷ್ಠ ವಯಸ್ಸನ್ನು 16ಕ್ಕೆ ಹಾಗೂ ಗಂಡುಮಕ್ಕಳ ಕನಿಷ್ಠ ವಯಸ್ಸನ್ನು 21ರಿಂದ 18ಕ್ಕೆ ಇಳಿಸುವಂತೆ ಒತ್ತಾಯಿಸಿ ಸರ್ಕಾರಕ್ಕೆ ಮನವಿ ಮಾಡಿದ್ದರು. ಇದಕ್ಕೆ ಹಲವು ವೈಜ್ಞಾನಿಕ ಕಾರಣಗಳನ್ನು ಸಹ ನೀಡಲಾಗಿತ್ತು.

ದೇಶದಲ್ಲಿ ಸಾಮಾಜಿಕವಾದ ಯಾವುದೇ ಕಾನೂನು ರೂಪಿಸುವ ಮುನ್ನ ಸಾಕಷ್ಟು ವೈಜ್ಞಾನಿಕ ಅಧ್ಯಯನ ನಡೆಸಬೇಕು ವಿಶೇಷವಾಗಿ ವಿವಾಹ ಕನಿಷ್ಠ ವಯೋಮಿತಿ ಅಂತಹ ಕಾಯ್ದೆ ರೂಪಿಸುವ ಸಂದರ್ಭದಲ್ಲಿ, ಕೆಳ ಸಮುದಾಯ ಮತ್ತು ಬುಡಕಟ್ಟು ಸಮುದಾಯಗಳ ಶಾರೀರಿಕ ಮತ್ತು ಜನಾಂಗೀಯ ಅಧ್ಯಯನ ನಡೆಸಬೇಕು. ಅವರ ಜೀವಿತಾವಧಿ, ಕೆಲಸ, ಅವರ ವಂಶವಾಹಿನಿಯನ್ನು ಗಮನಿಸಬೇಕು ಎಂದು ತಜ್ಞರು ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ರಾಜ್ಯದಲ್ಲಿ ಮತ್ತೆ ಓಮಿಕ್ರಾನ್ ಪ್ರಕರಣಗಳು

0

ಕರ್ನಾಟಕದಲ್ಲಿ ಮತ್ತೆ ಆರು ಜನರಲ್ಲಿ ಕೊರೋನ ರೂಪಾಂತರಿ ತಳಿ ಓಮಿಕ್ರಾನ್ ವೈರಸ್ ಪತ್ತೆಯಾಗಿದೆ. ವೈರಸ್ ನ ಸಂರಕ್ಷಣಾ ವಿಶ್ಲೇಷಣೆ ಪರೀಕ್ಷಾ ವರದಿಯಿಂದ ದೃಢಪಟ್ಟಿದೆ. ರಾಜ್ಯದಲ್ಲಿ ಒಟ್ಟು ಓಮಿಕ್ರಾನ್ ಸೋಂಕಿತರ ಸಂಖ್ಯೆ 14 ಕ್ಕೆ ಏರಿದೆ.

ಬ್ರಿಟನ್ ನಿಂದ ಕೋವಿಡ್ ಹೊಂದಿಲ್ಲ ಎಂಬ ವರದಿ ಪಡೆದುಕೊಂಡು, ಬೆಂಗಳೂರಿಗೆ ಬಂದಿದ್ದ ಹದಿನೆಂಟು ವರ್ಷದ ಯುವತಿಯಲ್ಲಿ ಓಮಿಕ್ರಾನ್ ಸೋಂಕು ಕಾಣಿಸಿಕೊಂಡಿದೆ. ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಕೋವಡ್ ಪರೀಕ್ಷೆಗೆ ಈಕೆಯನ್ನು ಒಳಪಡಿಸಲಾಗಿತ್ತು. ಸೋಂಕು ದೃಡ ಪಟ್ಟಿದ್ದರಿಂದ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು.

ಇವತ್ತಿಗೆ 3 ನೇರ ಸಂಪರ್ಕಿತ ರು 16 ಪರೋಕ್ಷ ಸಂಪರ್ಕಿತರಿದ್ದು, ಅವರುಗಳನ್ನು ಸಹ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದೆ. ಯಾರಿಗೂ ಸೋಂಕು ತಗಲಿಲ್ಲ ಎಂಬುದು ವರದಿಯಿಂದ ತಿಳಿದುಬಂದಿದೆ.

ಯುವತಿಯು ಫೈಜರ್ ಲಸಿಕೆಯ 2 ಡೋಸ್ ಗಳನ್ನೂ ಬ್ರಿಟನ್ನಲ್ಲಿ ಪಡೆದಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಐದು ಜನರಲ್ಲಿ ಓಮಿಕ್ರಾನ್ ದೃಡಪಟ್ಟಿದೆ. 19 ವರ್ಷದ ಯುವತಿಯನ್ನು ಮಂಗಳೂರಿನ ಕಾಲೇಜಿನಲ್ಲಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಉಳಿದ ನಾಲ್ಕು ವಿದ್ಯಾರ್ಥಿನಿಯರು 14 ವರ್ಷದೊಳಗಿನವರಾಗಿದ್ದಾರೆ. ಅವರನ್ನು ಬಂಟ್ವಾಳದ ಕಾಲೇಜಿನಲ್ಲಿ ಪರೀಕ್ಷೆಗೊಳಪಡಿಸಿದಾಗ ಸೋಂಕು ತಗುಲಿರುವುದು ದೃಢಪಟ್ಟಿದೆ. ಸೋಂಕಿತರು ಅಥವಾ ಅವರು ಪೋಷಕರು ಕೇರಳ ರಾಜ್ಯ ಅಥವಾ ಅಂತರಾಷ್ಟ್ರೀಯ ಪ್ರಯಾಣ ಮಾಡಿರುವವರಲ್ಲ. 19 ವರ್ಷದ ಯುವತಿ ಲಸಿಕೆಯ 2 ಡೋಸ್ ಪಡೆದವರಾಗಿದ್ದಾರೆ. ಆಕೆಯಲ್ಲಿ ರೋಗಲಕ್ಷಣಗಳು ಇರಲಿಲ್ಲ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸರ್ಕಾರದ ಷೇರು ಇಳಿಕೆ ?

0

ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ತನ್ನ ಶೇರು ಪಾಲನ್ನು ಶೇ.26ಕ್ಕೆ ಇಳಿಸಲು ಹಾದಿ ಸುಗಮವಾಗುವಂತೆ ಕಾನೂನು ಬದಲಾವಣೆಗೆ ಕೇಂದ್ರ ಸರ್ಕಾರ ಮುಂದಾಗಿದೆ.
ಸಾರ್ವಜನಿಕ ಬ್ಯಾಂಕ್ಗಳು ಸರ್ಕಾರದ ಬಂಡವಾಳದ ಮೇಲಿನ ಅವಲಂಬನೆಯನ್ನು ಕ್ರಮೇಣ ತಗ್ಗಿಸಲು ಕೇಂದ್ರ ಸರ್ಕಾರ ಯತ್ನಿಸಲಿದೆ. ಇದೇ ಸಂದರ್ಭ ಇದು ಬ್ಯಾಂಕ್ಗಳ ಸಂಪೂರ್ಣ ಖಾಸಗೀಕರಣವು ಆಗಿರುವುದಿಲ್ಲ. ಸಾರ್ವಜನಿಕ ಬ್ಯಾಂಕುಗಳಲ್ಲಿ ವಸೂಲಾಗದ ಸಾಲ ಹೆಚ್ಚುತ್ತಿರುವುದರಿಂದ ಸರ್ಕಾರದ ಶೇರು ಪಾಲು ತಗ್ಗಿಸಲು ಕಳೆದ ಕೆಲವು ವರ್ಷಗಳಿಂದ ತಜ್ಞರು ಒತ್ತಾಯಿಸುತ್ತಿದ್ದರು.
ಈ ಪ್ರಸ್ತಾವನೆಗೆ ಅನುಮೋದನೆ ದೊರೆತರೆ, ಕ್ರಮೇಣವಾಗಿ ಸಾರ್ವಜನಿಕ ಬ್ಯಾಂಕುಗಳಲ್ಲಿ ಸರ್ಕಾರದ ಶೇರುಗಳನ್ನು ತಗ್ಗಿಸಲು ಅವಕಾಶ ಸೃಷ್ಟಿಯಾಗಲಿದೆ. ಪ್ರಸ್ತುತ ಸಾರ್ವಜನಿಕ ಬ್ಯಾಂಕುಗಳಲ್ಲಿ ಶೇಕಡಾ 50ರಷ್ಟು ಶೇರುಗಳನ್ನು ಹೊಂದಿರುವ ಸರ್ಕಾರ ಈ ಪ್ರಮಾಣವನ್ನು ಶೇಕಡ 26 ಕ್ಕೆ ಇಳಿಕೆ ಮಾಡಲು ಯೋಚಿಸಿದೆ. ಅಂದರೆ ಬ್ಯಾಂಕುಗಳ ನಿರ್ವಹಣೆ ಮತ್ತು ನೇಮಕಾತಿಯಲ್ಲಿ ಸರ್ಕಾರದ ಹಿಡಿತ ದುರ್ಬಲಗೊಳ್ಳದಂತೆ ತನ್ನ ಪಾಲನ್ನು ಶೇಕಡ 26ಕ್ಕೆ ಕಡಿಮೆ ಮಾಡಲು ಯೋಜನೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ರಫೆಲ್ ವಿಮಾನ ನೀಡಲು ಫ್ರಾನ್ಸ್ ಸಿದ್ಧ

0

ಭಾರತವು ಬೇಡಿಕೆ ಸಲ್ಲಿಸಿದರೆ ಹೆಚ್ಚುವರಿ ರಫೆಲ್ ಯುದ್ಧ ವಿಮಾನಗಳನ್ನು ಪೂರೈಸಲು ಸಿದ್ಧ ಎಂದು ಫ್ರಾನ್ಸ್ ತಿಳಿಸಿದೆ.

ಭಾರತ ಪ್ರವಾಸದಲ್ಲಿರುವ ಫ್ರಾನ್ಸ್ ರಕ್ಷಣಾ ಸಚಿವೆ ಫ್ಲಾರೆನ್ಸ್ ಪಾರ್ಲಿ ಅವರು, ಕೋವಿಡ್-19 ಸಾಂಕ್ರಮಿಕ ರೋಗದ ನಡುವೆಯೂ ಒಪ್ಪಂದದಂತೆ 36 ಯುದ್ಧವಿಮಾನವನ್ನು ಗಳನ್ನು ಸಮಯಕ್ಕೆ ಸರಿಯಾಗಿ ಪೂರೈಸುತ್ತಿರುವುದು ನಮಗೆ ಹೆಮ್ಮೆ ಇದೆ. ಭಾರತ ಹೆಚ್ಚಿನ ಸಂಖ್ಯೆಯ ರಫೆಲ್ ಗಳಿಗೆ ಬೇಡಿಕೆ ನೀಡಿದ್ದಲ್ಲಿ, ಪೂರೈಸಲು ನಾವು ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ.

ಉಭಯ ದೇಶಗಳ ವಾಯುಪಡೆಯಲ್ಲಿ ರಫೆಲ್ ಬಳಸುವುದು ನಮ್ಮ ನಡುವೆ ಬಾಂಧವ್ಯ ಬೆಳೆಯುತ್ತದೆ. ಹೆಚ್ಚಿರುವ ಸೇನಾ ಸಾಮರ್ಥ್ಯದ ಸಂಕೇತವಾಗಲಿದೆ. ಭಾರತದ ರಕ್ಷಣಾ ಅವಶ್ಯಕತೆಗಳನ್ನು ಫ್ರಾನ್ಸ್ ಚೆನ್ನಾಗಿ ಅರಿತುಕೊಂಡಿದೆ. ಇಷ್ಟಲ್ಲದೆ ಮೇಕ್ ಇನ್ ಇಂಡಿಯಾ ಸಂಕಲ್ಪಕ್ಕೆ ಬೆಂಬಲ ನೀಡುತ್ತದೆ. ಇದಕ್ಕಾಗಿ ನಮ್ಮ ಜಾಗತಿಕ ಪೂರೈಕೆದಾರರ ಜೊತೆಗೆ ಭಾರತದ ತಯಾರಕರನ್ನು ಸಂಪರ್ಕಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ.

2016 ರ ಸೆಪ್ಟೆಂಬರ್ ತಿಂಗಳಿನಲ್ಲಿ ಫ್ರಾನ್ಸ್ ನ ಡಸಾಲ್ಟ್ ಏವಿಯೇಷನ್ ಕಂಪನಿ ಜೊತೆಗೆ 36 ರಫೆಲ್ ಯುದ್ಧ ವಿಮಾನಗಳ ಖರೀದಿ ಒಪ್ಪಂದವನ್ನು ಕೇಂದ್ರ ಸರ್ಕಾರ ಮಾಡಿಕೊಂಡಿತ್ತು. ಅದರಂತೆ ಇಲ್ಲಿಯವರೆಗೆ 33 ವಿಭಾ ವಿಮಾನಗಳು ಪೂರೈಕೆಯಾಗಿವೆ. ಅವುಗಳನ್ನು ಎಲ್ ಎಸಿ ಮತ್ತು ಕಾಶ್ಮೀರದ ಗಡಿಗಳಲ್ಲಿ ನ ವಾಯು ನೆಲೆಗಳಲ್ಲಿ ನಿಯೋಜಿಸಲಾಗಿದೆ. ರಷ್ಯಾದಿಂದ ಸುಖೋಯ್ ಜೆಟ್ ಗಳ ಖರೀದಿ ನಂತರ ವಿದೇಶಿ ಯುದ್ಧವಿಮಾನಗಳ ಖರೀದಿಯ ಪ್ರಮುಖ ಒಪ್ಪಂದ ಎಂದರೆ ರಫೆಲ್ ಒಪ್ಪಂದವಾಗಿದೆ. ಒಟ್ಟು 59 ಸಾವಿರ ಕೋಟಿ ರೂ. ಮೊತ್ತದ ಒಪ್ಪಂದ ಇದಾಗಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಓಮಿಕ್ರಾನ್ ಜಾಗ್ರತೆಯಾಗಿರಿ

0

ಜಗತ್ತಿನಾದ್ಯಂತ ವೇಗವಾಗಿ ಹಬ್ಬುತ್ತಿರುವಂತಹ ಕೋವಿಡ್ ರೂಪಾಂತರಿ ವೈರಸ್ ಓಮಿಕ್ರಾನ್ ಪ್ರಕರಣ ಭಾರತದಲ್ಲಿ 113 ಕ್ಕೆ ಏರಿಕೆಯಾಗಿದೆ.

ದೇಶದ ಹಲವು ರಾಜ್ಯಗಳ ದೆಹಲಿಯಲ್ಲಿ 10, ಮಹಾರಾಷ್ಟ್ರದಲ್ಲಿ 8, ಕೇರಳ ಮತ್ತು ಗುಜರಾತಿನಲ್ಲಿ ತಲಾ ಇಬ್ಬರಿಗೆ ಸೋಂಕು ದೃಡಪಟ್ಟಿದೆ. ಕರ್ನಾಟಕ ಸೇರಿದಂತೆ 11 ರಾಜ್ಯಗಳಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ113 ಕ್ಕೆ ಏರಿಕೆಯಾಗಿದೆ.

ನೂತನ ರೂಪಾಂತರಿ ತಳಿಯು ‘ಡೆಲ್ಟಾ’ ರೂಪಾಂತರಿಗಿಂತ ನಾಲ್ಕು ಪಟ್ಟು ಹೆಚ್ಚು ವೇಗವಾಗಿ ಹಬ್ಬುತ್ತಿದೆ. ಈ ವೈರಾಣುವು ದೇಶದಲ್ಲಿ ಮೂರನೇ ಅಲೆಗೆ ಕಾರಣವಾಗ ಬಹುದು ಎಂಬ ಆತಂಕವನ್ನು ತಜ್ಞರು ತಿಳಿಸಿದ್ದಾರೆ.

ಕೇಂದ್ರ ಆರೋಗ್ಯ ಸಚಿವಾಲಯ ರಾಜ್ಯಗಳಿಗೆ ಪರೀಕ್ಷೆ, ಜಿನೋಮ್ ಸೀಕ್ವೆನ್ಸಿಂಗ್ ಹೆಚ್ಚಿಸುವಂತೆ ಸೂಚನೆ ನೀಡಿದೆ. ಅನಗತ್ಯವಾಗಿ ಪ್ರವಾಸವನ್ನು ಕೈಗೊಳ್ಳದಂತೆ ಜನರಲ್ಲಿ ಮನವಿ ಮಾಡಿದೆ.

“ಸಾಮುದಾಯಿಕವಾಗಿ ಪ್ರಸರಣ ವೇಗದಲ್ಲಿ 2ನೇ ಅಲೆಯನ್ನು ಸೃಷ್ಟಿಸಿದ್ದ ಡೆಲ್ಟಾ ರೂಪಾಂತರಿಯನ್ನು ಓಮಿಕ್ರಾನ್ ಹಿಂದಿಕ್ಕಲಿದೆ. ಹಲೋ ಬೇಗನೆ ದೇಶದಲ್ಲಿ ಮೂರನೇ ಕೊರೋನಾ ಅಲೆ ಏಳುವ ಸಾಧ್ಯತೆಯಿದೆ” ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್ ತಿಳಿಸಿದ್ದಾರೆ.

“ವೈರಾಣು ನಮ್ಮ ದೇಶಕ್ಕೆ ಎಷ್ಟು ಹಾನಿ ಉಂಟುಮಾಡಬಲ್ಲದು ಎನ್ನುವುದನ್ನು ಮಾತ್ರವೇ ಗಮನಿಸಿ ಸಮಾಧಾನ ಪಟ್ಟುಕೊಳ್ಳಬಾರದು. ಬದಲಿಗೆ ದೇಶದ ರೋಗ ನಿರೋಧಕತೆಗೆ ಚಳ್ಳೆಹಣ್ಣು ತಿನ್ನಿಸುವ ಸಾಮರ್ಥ್ಯ ಪಡೆದಿರುವ ಓಮಿಕ್ರಾನ್ ಬಗ್ಗೆ ಜಾಗೃಕತೆ ಹೆಚ್ಚಾಗಿರಬೇಕು. ವಿವಿಧ ದೇಶಗಳಲ್ಲಿ ಓಮಿಕ್ರಾನ್ ಬಾಧಿತರ ಪ್ರಮಾಣ ಹೆಚ್ಚಾಗುತ್ತಾ ಹೋದಂತೆ, ಸಮಾಜದಲ್ಲಿ ಭಯ ಹೆಚ್ಚಲಿದೆ. ಆಸ್ಪತ್ರೆಗಳಿಗೆ ದಾಖಲಾಗುವವರ ಸಂಖ್ಯೆ ಏರಿಕೆಯಾಗಿ, ಆರೋಗ್ಯ ವ್ಯವಸ್ಥೆಯ ತೀವ್ರ ಒತ್ತಡಕ್ಕೆ ಸಿಲುಕಲಿದೆ” ಇಂದು ಡಾ.ಮೈಕೆಲ್ ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಶ್ರೀ ಮೋದಿಜಿಗೆ ಭೂತಾನ್ ದೇಶದ ಅತ್ಯುನ್ನತ ಗೌರವ

0

ಭೂತಾನ್ ಸರ್ಕಾರದ ಅತ್ಯುನ್ನತ ಪ್ರಶಸ್ತಿ ‘ನಗ್ ದಗ್ ಪೇಲ್ ಜಿ ಖೋರ್ಲೋ’ ಗೆ ಭಾರತದ ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಭಾಜನರಾಗಿದ್ದಾರೆ.

ಭೂತಾನ್ ದೇಶದ 114ನೇ ರಾಷ್ಟ್ರೀಯ ದಿನಾಚರಣೆ ವೇಳೆ ಮೋದಿಯವರಿಗೆ ಅತ್ಯುನ್ನತ ನಾಗರಿಕ ಪ್ರಶಸ್ತಿ ಘೋಷಿಸಲಾಗಿದೆ. ಈ ಕುರಿತಂತೆ ಭೂತಾನ್ ಪ್ರಧಾನಿ ಲೋಟೆ ತ್ಸೆರಿಂಗ್ ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡುವ ಮೂಲಕ “ಭಾರತದ ಪ್ರಧಾನಿಯವರಿಗೆ ನಮ್ಮ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ನೀಡುತ್ತಿರುವುದು ಖುಷಿಯಾ ಸಂಗತಿಯಾಗಿದೆ. ಖಂಡಿತವಾಗಿಯೂ ನೀವು ಪ್ರಶಸ್ತಿಗೆ ಅರ್ಹರಾಗಿದ್ದೀರಿ. ಇತ್ತೀಚಿನ ಹಲವು ವರ್ಷಗಳಲ್ಲಿ ನೀವು ಭೂತಾನ್ ಗೆ ನೀಡಿದ ಸಹಕಾರ, ಅದರಲ್ಲೂ ಕೊರೋನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಒದಗಿಸಿದವು ಅತ್ಯಮೂಲ್ಯವಾದದ್ದು” ಎಂದು ಹೇಳಿದ್ದಾರೆ.

” ಭೂತಾನ್ ನ ಸಮಸ್ತ ನಾಗರಿಕರ ಪರವಾಗಿ ನಿಮಗೆ ಅಭಿನಂದನೆಗಳು. ಪ್ರತಿ ಬಾರಿ ನಿಮ್ಮ ಜೊತೆ ಮಾತನಾಡುವಾಗ ನೀವು ತೋರುವ ಔದಾರ್ಯ, ನಿಮ್ಮಲ್ಲಿರುವ ಮಾನವೀಯತೆಯು ನಮ್ಮ ಮನ ಮುಟ್ಟಿದೆ. ನಿಮ್ಮನ್ನು ಗೌರವಿಸಲು ನಾವು ಕಾತುರರಾಗಿದ್ದೇವೆ” ಎಂದು ತಿಳಿಸಿದ್ದಾರೆ.

ಭೂತಾನ್ ಸರ್ಕಾರ ನೀಡಿರುವ ಅಲ್ಲಿನ ಅತ್ಯುನ್ನತ ನಾಗರಿಕ ಪ್ರಶಸ್ತಿ ಕುರಿತಂತೆ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿಯವರು ತ್ಸೆರಿಂಗ್ ಅವರಿಗೆ ಟ್ವೀಟ್ ಮಾಡುವ ಮೂಲಕ ಧನ್ಯವಾದ ತಿಳಿಸಿದ್ದು, “ನಿಮ್ಮ ಪ್ರೀತಿ, ಮಮಕಾರಕ್ಕೆ ನನ್ನ ಹೃದಯ ತುಂಬಿ ಬಂದಿದೆ” ಎಂದು ಹೇಳಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಶೋಕಾಚರಣೆ ವರದಿ ಓದಿ ನಗಬೇಡಿ

0

ಉತ್ತರ ಕೋರಿಯಾದ ದಿವಂಗತ ಕಿಮ್ ಜಾಂಗ್ ಇಲ್ ಅವರ 10ನೇ ವರ್ಷದ ಪುಣ್ಯತಿಥಿ ಅಂಗವಾಗಿ 11 ದಿನಗಳ ಶೋಕಾಚರಣೆಯನ್ನು ಆಚರಿಸಲು ಅಲ್ಲಿನ ಸರ್ವಾಧಿಕಾರಿ ಕಿಂಗ್-ಜಾಂಗ್-ಉನ್ ಆದೇಶ ಹೊರಡಿಸಿದ್ದಾರೆ.

“ಉತ್ತರ ಕೊರಿಯಾ ಪ್ರಜೆಗಳು ಸತತ 11 ದಿನಗಳವರೆಗೆ ನಗಬಾರದು. ಮದ್ಯಪಾನ ಕೂಡ ಮಾಡಬಾರದು. ಯಾವುದೇ ಖಾಸಗಿ ಸಭೆ-ಸಮಾರಂಭಗಳಲ್ಲಿ ಜನ ಭಾಗವಹಿಸುವಂತಿಲ್ಲ. ದಿನಸಿ ಅಂಗಡಿಗಳು ಕೂಡ ಒಂದು ದಿನದ ಮಟ್ಟಿಗೆ ವ್ಯಾಪಾರವನ್ನು ಪೂರ್ಣವಾಗಿ ಸಿದ್ಧಗೊಳಿಸಬೇಕು. 11 ದಿನಗಳ ಅವಧಿಯಲ್ಲಿ ಜನರ ಮನೆಗಳಲ್ಲಿ ಮರಣ ಸಂಭವಿಸಿದರೆ ಅವರು ಜೋರಾಗಿ ಅಳುವಂತಿಲ್ಲ. ಕಿರುಚುವಂತಿಲ್ಲ, ದುಃಖಿಸುವಂತಿಲ್ಲ, ಮನಸ್ಸಿನಲ್ಲೇ ನೋವನ್ನು ನುಂಗಿಕೊಳ್ಳಬೇಕು. ಒಂದು ವೇಳೆ ಈ ನಿರ್ಬಂಧಗಳನ್ನು ಉಲ್ಲಂಘಿಸಿದರೆ ಅಂಥವರನ್ನು ಸೈದಾಂತಿಕ ಅಪರಾಧಿಗಳು ಎಂದು ಪರಿಗಣಿಸಲಾಗುವುದು” ಎಂದು ಸರ್ವಾಧಿಕಾರಿ ಕಿಮ್-ಜಾಂಗ್-ಉನ್ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಶೀಘ್ರವೇ ಸಿಡಿಎಸ್ ಮುಖ್ಯಸ್ಥರ ನೇಮಕ

0

ಹೆಲಿಕ್ಯಾಪ್ಟರ್ ದುರಂತದಲ್ಲಿ ದೇಶದ ಶಶಸ್ತ್ರ ಪಡೆಗಳ ಮೊದಲ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ಹುತಾತ್ಮರಾದ ಹಿನ್ನೆಲೆ ನೂತನ ಸಿಡಿಎಸ್ ನೇಮಕ ಪ್ರಕ್ರಿಯೆ ಆರಂಭಗೊಂಡಿದೆ.

ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಶೀಘ್ರವೇ ಸಂಭವನೀಯರ ಪಟ್ಟಿಯನ್ನು ಸಲ್ಲಿಸಲಾಗುವುದು ಎಂದು ರಕ್ಷಣಾ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ಜನವರಿ 1ರಂದು ದೇಶದ ಮೊದಲ ಸಿಡಿಎಸ್ ಆಗಿ ಜನರಲ್ ರಾವತ್ ಅವರು ಅಧಿಕಾರವನ್ನು ಸ್ವೀಕರಿಸಿದ್ದರು. ಈಗ ಈ ಸ್ಥಾನಕ್ಕೆ ನರವಣೆ ಸೇರಿದಂತೆ ವಾಯುಪಡೆಯ ನಿವೃತ್ತ ಮುಖ್ಯಸ್ಥ ಆರ್ ಕೆ ಎಸ್ ಭಡೌವರಿಯಾ ಅವರ ಹೆಸರು ಕೇಳಿ ಬಂದಿದೆ. ಭೂಸೇನೆ ಮುಖ್ಯಸ್ಥ ಜನರಲ್ ಎಂ.ಎಂ.ನರವಣಿ ಅವರನ್ನೇ ಬಹುತೇಕ ಹೊಸ ಸಿಡಿಎಸ್ ಆಗಿ ನೇಮಕ ಮಾಡುವ ಸಾಧ್ಯತೆ ಇದೆ ಮೂಲಗಳು ತಿಳಿಸಿವೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಕೋವಿಡ್ ಪ್ರತಿರೋಧಕ ಲಸಿಕೆ

0

ವಿಶ್ವ ಆರೋಗ್ಯ ಸಂಸ್ಥೆಯು ಪುಣೆಯ ಸೀರಂ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾ ಉತ್ಪಾದಿಸುತ್ತಿರುವ ಪ್ರತಿರೋಧಕ ಲಸಿಕೆ ‘ಕೋವ್ಯಾಕ್ಸಿನ್’ ಅನ್ನು ತುರ್ತು ಬಳಕೆಗೆ ಅನುಮೋದನೆ ನೀಡಿದೆ.

ವಿಶ್ವ ಸಂಸ್ಥೆಯ ಈ ಅನುಮೋದನೆ ಯಿಂದಾಗಿ ಸೋಂಕಿನ ವಿರುದ್ಧ ಭಾರತದ ಹೋರಾಟಕ್ಕೆ ಮತ್ತೊಂದು ಲಸಿಕೆ ಸಿಕ್ಕಂತಾಗಿದೆ,

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಜನದಕಲೆಗಳಿಗೆ ಸಂವಹನ ಸಾಮರ್ಥ್ಯವಿದೆ

0

ಜನಪದ ಕಲೆ ಅನಾದಿಕಾಲದಿಂದಲೂ ಬೆಳೆದುಬಂದಿದೆ. ಅದು ಎಲ್ಲಾ ಕಲೆಗಳ ತಾಯಿಬೇರು. ಆ ಕಲೆಗಳನ್ನು ಉಳಿಸಿ ಬೆಳಸಲು ಸರ್ಕಾರ, ಮಠಗಳು, ಸಂಘ ಸಂಸ್ಥೆಗಳು ಆರ್ಥಿಕ ನೆರವು ನೀಡಬೇಕು. ಲೇಖಕರು, ಕಲಾವಿದರು, ಸಂಘಟಕರು ಬಹಳ ಮುಖ್ಯ ಪಾತ್ರವಹಿಸಬೇಕು. ಕಲಾವಿದರನ್ನು ಬೆನ್ನುತಟ್ಟಿ ಪ್ರೋತ್ಸಾಹ ನೀಡುವ ಮನಸ್ಥಿತಿ ಎಲ್ಲರಿಗೂ ಬರಬೇಕು.

ಜನಪದದ ಕಲೆಗಳಿಗೆ ಭಾಷೆಯ ಹಂಗಿಲ್ಲದೆ ಎಲ್ಲರ ಮನವನ್ನು ತಲುಪುವ ಶಕ್ತಿಯಿದೆ. ಅನೇಕ ಅಪರೂಪದ ಕಲೆಗಳು ನಶಿಸಿ ಹೋಗಿವೆ. ಉಳಿದಿರುವ ಕಲೆಗಳನ್ನಾದರೂ ಉಳಿಸುವಲ್ಲಿ ಇಂತಹ ಶಿಬಿರಗಳ ಅಗತ್ಯವಿದೆ ಎಂದು ಕರ್ನಾಟಕ ಜಾನಪದ ಅಕಾಡೆಮಿ ಮಾಜಿ ಅಧ್ಯಕ್ಷರು, ಅಂತರಾಷ್ಟ್ರೀಯ ಖ್ಯಾತಿಯ ಜನಪದ ಕಲಾವಿದ ಟಾಕಪ್ಪ ಕಣ್ಣೂರು ಹಿತನುಡಿದರು.

ಡಿಸೆಂಬರ್ 17 ರಂದು ಬೆಳಿಗ್ಗೆ ಕರ್ನಾಟಕ ಜಾನಪದ ಪರಿಷತ್ತು, ಬೆಂಗಳೂರು, ಜಿಲ್ಲಾ ಸಮಿತಿ ನೇತೃತ್ವದಲ್ಲಿ ಸಹ್ಯಾದ್ರಿ ಕಲಾ ಕಾಲೇಜು ವಿದ್ಯಾರ್ಥಿ ಸಾಂಸ್ಕೃತಿಕ ಸಂಘ ದ ಸಹಯೋಗದಲ್ಲಿ ಎರಡು ದಿನಗಳ ಜನಪದ ಕಲೆಗಳ ಕಲಿಕಾ ಶಿಬಿರವನ್ನು ಡೊಳ್ಳು ಭಾರಿಸುವ ಮೂಲಕ ಉದ್ಘಾಟಿಸಿ ಟಾಕಪ್ಪ ಕಣ್ಣೂರು ಮಾತನಾಡಿದರು.

ಡಾ. ಮೇಟಿ ಮಲ್ಲಿಕಾರ್ಜುನ ಅವರು ಪ್ರಾಸ್ತಾವಿಕ ಮಾತುಗಳನ್ನು ಹೇಳುತ್ತಾ ವಿದ್ಯಾರ್ಥಿಗಳು ಸಾಂಸ್ಕೃತಿಕವಾಗಿ ಬೆಳೆಯಲು ಜನಪದ ಕಲೆಗಳ ಕಲಿಕೆಗೆ ಆಸಕ್ತಿ ಮೂಡಿಸಲು ನೆರವಾಗಿದೆ. ಈ ಕಲೆ ಹಳ್ಳಿಯದು, ಬುಡಕಟ್ಟು ಜನರದ್ದು, ಕೆಲವರಿಗೆ ಸೇರಿದ್ದು ಎನ್ನುವ ಕೀಳರಿಮೆ ಸರಿಯಲ್ಲ. ಅದು ಹಳೆಯದಲ್ಲ. ಅದು ಎಲ್ಲರಿಗೂ ಬೇಕು ಎನ್ನುವಂತಾಗಿದೆ. ಜನಪದರ ಸಾಮಾನ್ಯ ಜ್ಞಾನ, ಲೋಕದೃಷ್ಠಿ, ಕಥನಕ ಕಟ್ಟಿ ಬೆಳಸಿದ ರೀತಿಯಿಂದಲೇ ಅದು ಸಮುದಾಯದ ಬದುಕನ್ನು ಆವರಿಸಿದೆ. ಮನುಷ್ಯ ಹುಟ್ಟಿನಿಂದ ಸಾವಿನವರೆಗೆ ಜನಪದ ನಮ್ಮ ಬದುಕಿನಲ್ಲಿ ಆವರಿಸಿದೆ. ಜಾತಿ, ಧರ್ಮ, ಲಿಂಗ ಅಸಮಾನತೆಯಿಂದ ಹೊರಬರಲು ಅವುಗಳ ಮಹತ್ವ ಅರಿಯಬೇಕು ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾ ಸಮಿತಿಯ ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷರಾದ ಡಿ. ಮಂಜುನಾಥ ಅವರು “ಜನಪದ ಕಲೆ ಕಲಿತವರಿಗೆ ಆ ಕಲೆಯನ್ನು ಅಭಿವ್ಯಕ್ತಪಡಿಸಲು ಪ್ರತಿವರ್ಷ ಅನೇಕ ಕಾರ್ಯಕ್ರಮ, ಸ್ಪರ್ಧೆಗಳನ್ನು ಏರ್ಪಡಿಸುತ್ತೇವೆ. ಕಲೆಯನ್ನು ಕರಗತಮಾಡಿಕೊಂಡು ಸಾಧನೆಮಾಡಿದರೆ ಅನೇಕ ಅವಕಾಶಗಳು ದೊರೆಯುತ್ತವೆ” ಎಂದು ಹೇಳಿದರು. ನಾಡೋಜ ಡಾ. ಎಚ್. ಎಲ್. ನಾಗೇಗೌಡರ ದೂರದೃಷ್ಟಿಯಿಂದ ಆರಂಭವಾದ ಕರ್ನಾಟಕ ಜಾನಪದ ಪರಿಷತ್ತು ನಿರಂತರ ಚಟುವಟಿಕೆಗಳನ್ನು ಮಾಡುತ್ತಿದೆ ಎಂದರು.

ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಹ್ಯಾದ್ರಿ ಕಲಾ ಕಾಲೇಜು ಪ್ರಿನ್ಸಿಪಾಲ್ ಡಾ. ಧನಂಜಯ ಕೆ. ಬಿ. ಅವರು ಮಾತನಾಡಿ “ನಾಗರಿಕ ಸಮಾಜ ಇರುವಲ್ಲಿ ಅನೇಕ ಸಾಂಸ್ಕೃತಿಕ ಕಲೆಗಳು ಉಳಿದಿವೆ ಎಂದರೆ ಅವೆಲ್ಲವೂ ಜನಪದದ ಹಿನ್ನೆಲೆಯಲ್ಲಿ ಬಂದಿರುವುದನ್ನ ನಾವು ಗಮನಿಸಬೇಕು. ಜನರಿಂದ, ಜನರಿಗಾಗಿ ಜನಪದ ಉತ್ತಮ ಮೌಲ್ಯ ತಂದುಕೊಟ್ಟಿದೆ” ಎಂದರು.

ಈ ಕಾರ್ಯಕ್ರಮ ಸಂಚಾಲಕರಾದ ಡಾ. ಮೋಹನ್ ಚಂದ್ರಗುತ್ತಿ, ಕಜಾಪ ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ ಹಿಳ್ಳೋಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.