ಭಾರತವು ಬೇಡಿಕೆ ಸಲ್ಲಿಸಿದರೆ ಹೆಚ್ಚುವರಿ ರಫೆಲ್ ಯುದ್ಧ ವಿಮಾನಗಳನ್ನು ಪೂರೈಸಲು ಸಿದ್ಧ ಎಂದು ಫ್ರಾನ್ಸ್ ತಿಳಿಸಿದೆ.
ಭಾರತ ಪ್ರವಾಸದಲ್ಲಿರುವ ಫ್ರಾನ್ಸ್ ರಕ್ಷಣಾ ಸಚಿವೆ ಫ್ಲಾರೆನ್ಸ್ ಪಾರ್ಲಿ ಅವರು, ಕೋವಿಡ್-19 ಸಾಂಕ್ರಮಿಕ ರೋಗದ ನಡುವೆಯೂ ಒಪ್ಪಂದದಂತೆ 36 ಯುದ್ಧವಿಮಾನವನ್ನು ಗಳನ್ನು ಸಮಯಕ್ಕೆ ಸರಿಯಾಗಿ ಪೂರೈಸುತ್ತಿರುವುದು ನಮಗೆ ಹೆಮ್ಮೆ ಇದೆ. ಭಾರತ ಹೆಚ್ಚಿನ ಸಂಖ್ಯೆಯ ರಫೆಲ್ ಗಳಿಗೆ ಬೇಡಿಕೆ ನೀಡಿದ್ದಲ್ಲಿ, ಪೂರೈಸಲು ನಾವು ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ.
ಉಭಯ ದೇಶಗಳ ವಾಯುಪಡೆಯಲ್ಲಿ ರಫೆಲ್ ಬಳಸುವುದು ನಮ್ಮ ನಡುವೆ ಬಾಂಧವ್ಯ ಬೆಳೆಯುತ್ತದೆ. ಹೆಚ್ಚಿರುವ ಸೇನಾ ಸಾಮರ್ಥ್ಯದ ಸಂಕೇತವಾಗಲಿದೆ. ಭಾರತದ ರಕ್ಷಣಾ ಅವಶ್ಯಕತೆಗಳನ್ನು ಫ್ರಾನ್ಸ್ ಚೆನ್ನಾಗಿ ಅರಿತುಕೊಂಡಿದೆ. ಇಷ್ಟಲ್ಲದೆ ಮೇಕ್ ಇನ್ ಇಂಡಿಯಾ ಸಂಕಲ್ಪಕ್ಕೆ ಬೆಂಬಲ ನೀಡುತ್ತದೆ. ಇದಕ್ಕಾಗಿ ನಮ್ಮ ಜಾಗತಿಕ ಪೂರೈಕೆದಾರರ ಜೊತೆಗೆ ಭಾರತದ ತಯಾರಕರನ್ನು ಸಂಪರ್ಕಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ.
2016 ರ ಸೆಪ್ಟೆಂಬರ್ ತಿಂಗಳಿನಲ್ಲಿ ಫ್ರಾನ್ಸ್ ನ ಡಸಾಲ್ಟ್ ಏವಿಯೇಷನ್ ಕಂಪನಿ ಜೊತೆಗೆ 36 ರಫೆಲ್ ಯುದ್ಧ ವಿಮಾನಗಳ ಖರೀದಿ ಒಪ್ಪಂದವನ್ನು ಕೇಂದ್ರ ಸರ್ಕಾರ ಮಾಡಿಕೊಂಡಿತ್ತು. ಅದರಂತೆ ಇಲ್ಲಿಯವರೆಗೆ 33 ವಿಭಾ ವಿಮಾನಗಳು ಪೂರೈಕೆಯಾಗಿವೆ. ಅವುಗಳನ್ನು ಎಲ್ ಎಸಿ ಮತ್ತು ಕಾಶ್ಮೀರದ ಗಡಿಗಳಲ್ಲಿ ನ ವಾಯು ನೆಲೆಗಳಲ್ಲಿ ನಿಯೋಜಿಸಲಾಗಿದೆ. ರಷ್ಯಾದಿಂದ ಸುಖೋಯ್ ಜೆಟ್ ಗಳ ಖರೀದಿ ನಂತರ ವಿದೇಶಿ ಯುದ್ಧವಿಮಾನಗಳ ಖರೀದಿಯ ಪ್ರಮುಖ ಒಪ್ಪಂದ ಎಂದರೆ ರಫೆಲ್ ಒಪ್ಪಂದವಾಗಿದೆ. ಒಟ್ಟು 59 ಸಾವಿರ ಕೋಟಿ ರೂ. ಮೊತ್ತದ ಒಪ್ಪಂದ ಇದಾಗಿದೆ.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.