ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ತನ್ನ ಶೇರು ಪಾಲನ್ನು ಶೇ.26ಕ್ಕೆ ಇಳಿಸಲು ಹಾದಿ ಸುಗಮವಾಗುವಂತೆ ಕಾನೂನು ಬದಲಾವಣೆಗೆ ಕೇಂದ್ರ ಸರ್ಕಾರ ಮುಂದಾಗಿದೆ.
ಸಾರ್ವಜನಿಕ ಬ್ಯಾಂಕ್ಗಳು ಸರ್ಕಾರದ ಬಂಡವಾಳದ ಮೇಲಿನ ಅವಲಂಬನೆಯನ್ನು ಕ್ರಮೇಣ ತಗ್ಗಿಸಲು ಕೇಂದ್ರ ಸರ್ಕಾರ ಯತ್ನಿಸಲಿದೆ. ಇದೇ ಸಂದರ್ಭ ಇದು ಬ್ಯಾಂಕ್ಗಳ ಸಂಪೂರ್ಣ ಖಾಸಗೀಕರಣವು ಆಗಿರುವುದಿಲ್ಲ. ಸಾರ್ವಜನಿಕ ಬ್ಯಾಂಕುಗಳಲ್ಲಿ ವಸೂಲಾಗದ ಸಾಲ ಹೆಚ್ಚುತ್ತಿರುವುದರಿಂದ ಸರ್ಕಾರದ ಶೇರು ಪಾಲು ತಗ್ಗಿಸಲು ಕಳೆದ ಕೆಲವು ವರ್ಷಗಳಿಂದ ತಜ್ಞರು ಒತ್ತಾಯಿಸುತ್ತಿದ್ದರು.
ಈ ಪ್ರಸ್ತಾವನೆಗೆ ಅನುಮೋದನೆ ದೊರೆತರೆ, ಕ್ರಮೇಣವಾಗಿ ಸಾರ್ವಜನಿಕ ಬ್ಯಾಂಕುಗಳಲ್ಲಿ ಸರ್ಕಾರದ ಶೇರುಗಳನ್ನು ತಗ್ಗಿಸಲು ಅವಕಾಶ ಸೃಷ್ಟಿಯಾಗಲಿದೆ. ಪ್ರಸ್ತುತ ಸಾರ್ವಜನಿಕ ಬ್ಯಾಂಕುಗಳಲ್ಲಿ ಶೇಕಡಾ 50ರಷ್ಟು ಶೇರುಗಳನ್ನು ಹೊಂದಿರುವ ಸರ್ಕಾರ ಈ ಪ್ರಮಾಣವನ್ನು ಶೇಕಡ 26 ಕ್ಕೆ ಇಳಿಕೆ ಮಾಡಲು ಯೋಚಿಸಿದೆ. ಅಂದರೆ ಬ್ಯಾಂಕುಗಳ ನಿರ್ವಹಣೆ ಮತ್ತು ನೇಮಕಾತಿಯಲ್ಲಿ ಸರ್ಕಾರದ ಹಿಡಿತ ದುರ್ಬಲಗೊಳ್ಳದಂತೆ ತನ್ನ ಪಾಲನ್ನು ಶೇಕಡ 26ಕ್ಕೆ ಕಡಿಮೆ ಮಾಡಲು ಯೋಜನೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.