ಕರ್ನಾಟಕದಲ್ಲಿ ಮತ್ತೆ ಆರು ಜನರಲ್ಲಿ ಕೊರೋನ ರೂಪಾಂತರಿ ತಳಿ ಓಮಿಕ್ರಾನ್ ವೈರಸ್ ಪತ್ತೆಯಾಗಿದೆ. ವೈರಸ್ ನ ಸಂರಕ್ಷಣಾ ವಿಶ್ಲೇಷಣೆ ಪರೀಕ್ಷಾ ವರದಿಯಿಂದ ದೃಢಪಟ್ಟಿದೆ. ರಾಜ್ಯದಲ್ಲಿ ಒಟ್ಟು ಓಮಿಕ್ರಾನ್ ಸೋಂಕಿತರ ಸಂಖ್ಯೆ 14 ಕ್ಕೆ ಏರಿದೆ.
ಬ್ರಿಟನ್ ನಿಂದ ಕೋವಿಡ್ ಹೊಂದಿಲ್ಲ ಎಂಬ ವರದಿ ಪಡೆದುಕೊಂಡು, ಬೆಂಗಳೂರಿಗೆ ಬಂದಿದ್ದ ಹದಿನೆಂಟು ವರ್ಷದ ಯುವತಿಯಲ್ಲಿ ಓಮಿಕ್ರಾನ್ ಸೋಂಕು ಕಾಣಿಸಿಕೊಂಡಿದೆ. ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಕೋವಡ್ ಪರೀಕ್ಷೆಗೆ ಈಕೆಯನ್ನು ಒಳಪಡಿಸಲಾಗಿತ್ತು. ಸೋಂಕು ದೃಡ ಪಟ್ಟಿದ್ದರಿಂದ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು.
ಇವತ್ತಿಗೆ 3 ನೇರ ಸಂಪರ್ಕಿತ ರು 16 ಪರೋಕ್ಷ ಸಂಪರ್ಕಿತರಿದ್ದು, ಅವರುಗಳನ್ನು ಸಹ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದೆ. ಯಾರಿಗೂ ಸೋಂಕು ತಗಲಿಲ್ಲ ಎಂಬುದು ವರದಿಯಿಂದ ತಿಳಿದುಬಂದಿದೆ.
ಯುವತಿಯು ಫೈಜರ್ ಲಸಿಕೆಯ 2 ಡೋಸ್ ಗಳನ್ನೂ ಬ್ರಿಟನ್ನಲ್ಲಿ ಪಡೆದಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಐದು ಜನರಲ್ಲಿ ಓಮಿಕ್ರಾನ್ ದೃಡಪಟ್ಟಿದೆ. 19 ವರ್ಷದ ಯುವತಿಯನ್ನು ಮಂಗಳೂರಿನ ಕಾಲೇಜಿನಲ್ಲಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಉಳಿದ ನಾಲ್ಕು ವಿದ್ಯಾರ್ಥಿನಿಯರು 14 ವರ್ಷದೊಳಗಿನವರಾಗಿದ್ದಾರೆ. ಅವರನ್ನು ಬಂಟ್ವಾಳದ ಕಾಲೇಜಿನಲ್ಲಿ ಪರೀಕ್ಷೆಗೊಳಪಡಿಸಿದಾಗ ಸೋಂಕು ತಗುಲಿರುವುದು ದೃಢಪಟ್ಟಿದೆ. ಸೋಂಕಿತರು ಅಥವಾ ಅವರು ಪೋಷಕರು ಕೇರಳ ರಾಜ್ಯ ಅಥವಾ ಅಂತರಾಷ್ಟ್ರೀಯ ಪ್ರಯಾಣ ಮಾಡಿರುವವರಲ್ಲ. 19 ವರ್ಷದ ಯುವತಿ ಲಸಿಕೆಯ 2 ಡೋಸ್ ಪಡೆದವರಾಗಿದ್ದಾರೆ. ಆಕೆಯಲ್ಲಿ ರೋಗಲಕ್ಷಣಗಳು ಇರಲಿಲ್ಲ.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.