Tuesday, February 10, 2026
Tuesday, February 10, 2026
Home Blog Page 1819

ತುಂಡುಭೂಮಿ ಮಾರಾಟ ನಿಷೇಧ ಬೇಡ

0

ಸರ್ಕಾರ ರೈತರು ಕೃಷಿ ಭೂಮಿ ಮಾರಾಟ ಮಾಡಲು ಹಲವು ನಿರ್ಬಂಧಗಳನ್ನು ವಿಧಿಸಿದೆ. ಇದು ರೈತರಿಗೆ ಮಾರಕವಾಗಿ ಪರಿಣಮಿಸಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಹಾಗೂ ಕೊಡಗು ಜಿಲ್ಲೆಗಳಲ್ಲಿ ಮೂರು ಗುಂಟೆ ಹಾಗೂ ಉಳಿದ ಜಿಲ್ಲೆಗಳಲ್ಲಿ ಕನಿಷ್ಠ 5 ಗುಂಟೆಗಿಂತ ಕಡಿಮೆ ಜಮೀನನ್ನು ಮಾರಾಟ ಮಾಡುವಂತಿಲ್ಲ ಎಂಬುದನ್ನು ಆದೇಶದಲ್ಲಿ ತಿಳಿಸಲಾಗಿದೆ.
ಮಕ್ಕಳ ಮದುವೆ, ವಿದ್ಯಾಭ್ಯಾಸ, ಆರೋಗ್ಯ ಸಮಸ್ಯೆ ಸೇರಿದಂತೆ ತುರ್ತು ಸಂದರ್ಭಗಳಲ್ಲಿ ಹಣಕಾಸು ಹೊಂದಿಸಲು ಅನೇಕ ರೈತರು ತಮ್ಮ ಜಮೀನುಗಳನ್ನು ಮಾರಾಟ ಮಾಡಿ ಹಣ ಹೊಂದಿಸುತ್ತಾರೆ. ಆದರೆ ಹೊಸ ಕಾನೂನಿನಿಂದ ಸಮಸ್ಯೆಯ ಸುಳಿಯಲ್ಲಿ ಸಿಲುಕಲಿದ್ದಾರೆ.
ಇನ್ನು 10 ಸೆಂಟ್ಸ್ ಜಮೀನು ಇದ್ದು, ಅದರಲ್ಲಿ ಅರ್ಧ ಜಮೀನನ್ನು ಮಾರಾಟ ಮಾಡುವ ಸ್ಥಿತಿ ಬಂದರೂ ಇದಕ್ಕೆ ಅವಕಾಶ ಇರುವುದಿಲ್ಲ. ಒಂದೋ ಜಮೀನು ಮಾರಾಟ ಮಾಡದೆ ಇರುವ ನಿರ್ಧಾರಕ್ಕೆ ಬರಬೇಕು.
ಇಲ್ಲವಾದರೆ ಸಂಪೂರ್ಣ ಜಮೀನನ್ನು ಮಾರಾಟ ಮಾಡಬೇಕಾದ ಸ್ಥಿತಿ ಎದುರಾಗಬಹುದು.
ರಸ್ತೆ, ಚರಂಡಿ, ಉದ್ಯಾನವನ ಸಹಿತ ಇತರ ಮೂಲಸೌಕರ್ಯ ಕಲ್ಪಿಸಲು ಕಷ್ಟವಾಗುತ್ತದೆ ಎಂಬ ಕಾರಣಕ್ಕೆ ಈ ರೀತಿ ಮಾಡಲಾಗಿದೆ ಎಂಬುದು ಸರಕಾರದ ಸಮರ್ಥನೆ. ಆದರೆ ಇದು ಸಣ್ಣ ರೈತರಿಗೆ ಹೊಡೆತ ನೀಡಲಿದೆ.
ಕರ್ನಾಟಕ ಭೂಕಂದಾಯ ಅಧಿನಿಯಮ 1964ರ 108ರಡಿ ಕೃಷಿ ಉದ್ದೇಶಕ್ಕಾಗಿ ಬಳಸಲಾಗುವ ಭೂಮಿಯನ್ನು ಒಳಗೊಂಡ ಸರ್ವೆ ನಂಬರ್ ನ ಕನಿಷ್ಠ ವಿಸ್ತೀರ್ಣ ನಿಗದಿಪಡಿಸಲಾಗಿದೆ. ಇದರಿಂದ ತುಂಡು ಭೂಮಿ ಹೊಂದಿದ್ದ ರೈತರಿಗೆ ಇನ್ನು ಮುಂದೆ ತಮ್ಮ ಕೃಷಿ ಭೂಮಿ ಮಾರಾಟ ಮಾಡಲು ಅವಕಾಶ ಇಲ್ಲ. ಒಂದು ವೇಳೆ ಮಾರಾಟ ಮಾಡುವುದಿದ್ದರೆ ನಿಗದಿತ ಭೂಮಿಗಿಂತ ಕಡಿಮೆ ಇದ್ದರೆ ಅದಕ್ಕೆ 11ಇ ನಕ್ಷೆ ಕೊಡಲು ಅವಕಾಶ ಇಲ್ಲ. ಸದ್ಯ ಭೂಮಿ ಸಾಫ್ಟ್ ವೇರ್ ನಲ್ಲೇ ಇದಕ್ಕೆ ಅವಕಾಶ ನಿರಾಕರಿಸಲಾಗಿದೆ.
ಅನೇಕ ರೈತರಿಗೆ ತಮ್ಮ ಕುಟುಂಬ ವಿಸ್ತಾರವಾದಂತೆ ಒಂದೇ ಜಮೀನಿನಲ್ಲಿ ಬೇರೆ ಬೇರೆ ಮನೆ ಕಟ್ಟಿಕೊಳ್ಳುವ ಸಂದರ್ಭ ಬರುತ್ತದೆ. ಈ ಹಂತದಲ್ಲೂ ನಿಗದಿತ ಪ್ರಮಾಣಕ್ಕಿಂತ ಕಡಿಮೆ ವಿಸ್ತೀರ್ಣದ ಭೂಮಿಯಿದ್ದರೆ ಅದಕ್ಕೆ 11ಇ ನಕ್ಷೆ ಕೊಡಲು ಸಾಫ್ಟ್ ವೇರ್ ನಲ್ಲಿ ಅವಕಾಶವೇ ಇರುವುದಿಲ್ಲ. ಇದರಿಂದ ಮುಂದೆ ಮನೆ ಕಟ್ಟಿಕೊಳ್ಳಲು ಕೂಡ ಸಣ್ಣ ರೈತರು ಪರದಾಡುವ ಸ್ಥಿತಿ ಬರಲಿದೆ ಎಂದು ಮಂಗಳೂರಿನ ವಕೀಲ ಪ್ರವೀಣ್ ಅದ್ಯಪಾಡಿ ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಮಂಗಳೂರಿನಲ್ಲಿ ಓಮಿಕ್ರಾನ್ ಪತ್ತೆ!

0

ರಾಜ್ಯದಲ್ಲಿ ಓಮಿಕ್ರಾನ್ ಆರ್ಭಟ ಮುಂದುವರಿದಿದೆ. ಮಂಗಳೂರಿನ ಎರಡು ಶಿಕ್ಷಣ ಸಂಸ್ಥೆಗಳಲ್ಲಿ ಹಾಗೂ ಇಂಗ್ಲೆಂಡ್ ನಿಂದ ಬಂದ ಒಬ್ಬರಲ್ಲಿ ಓಮಿಕ್ರಾನ್ ದೃಡಪಟ್ಟಿದೆ. ಈ ಮೂಲಕ ರಾಜ್ಯದಲ್ಲಿ ಓಮಿಕ್ರಾನ್ ಸೋಂಕಿಗೆ ತುತ್ತಾದವರ ಸಂಖ್ಯೆ 14ಕ್ಕೆ ಈ ಏರಿಕೆಯಾಗಿದೆ.
ನರ್ಸಿಂಗ್ ಕಾಲೇಜು ಒಂದರಲ್ಲಿ ಡಿ.9ರಂದು ವರದಿಯಾದ ಮತ್ತೊಂದು ಕ್ಲಸ್ಟರ್ ನಲ್ಲಿ 19 ಪ್ರಕರಣಗಳು ವರದಿಯಾಗಿದ್ದವು.ಜಿನೋಮ್ ಪರೀಕ್ಷೆಗಾಗಿ ಮಾದರಿಗಳನ್ನು ಡಿಸೆಂಬರ್ 10ರಂದು ಕಳುಹಿಸಲಾಗಿತ್ತು. ಆ ಪೈಕಿ 1 ವಿದ್ಯಾರ್ಥಿನಿಗೆ ಓಮಿಕ್ರಾನ್ ದೃಢಪಟ್ಟಿದ್ದು, ಆಕೆಯು ಆರೋಗ್ಯವಾಗಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಾರ್ಥಮಿಕ ಸಂಪರ್ಕ ಪತ್ತೆ ಹಚ್ಚುವಿಕೆಯ ಪ್ರಕಾರ ಯಾರಿಗೂ ವಿದೇಶ ಪ್ರಯಾಣದ ಇತಿಹಾಸವಿಲ್ಲ ಎಂದು ಹೇಳಲಾಗಿದೆ.
ಈ ಕುರಿತು ಆರೋಗ್ಯ ಸಚಿವ ಡಾಕ್ಟರ್ ಸುಧಾಕರ್ ಮಾಹಿತಿ ನೀಡಿದ್ದಾರೆ. ಕ್ಲಸ್ಟರ್ ಒಂದರಲ್ಲಿ ಪರೀಕ್ಷೆಗೆ ಒಳಗಾದ 14 ಪ್ರಕರಣಗಳಲ್ಲಿ 4 ಮಂದಿಗೆ ಓಮಿಕ್ರಾನ್ ದೃಢವಾಗಿದ್ದು, ಕ್ಲಸ್ಟರ್ ಎರಡರಲ್ಲಿ ಪರೀಕ್ಷೆಗೆ ಒಳಗಾದ 19 ಪ್ರಕರಣಗಳಲ್ಲಿ 1 ಓಮಿಕ್ರಾನ್ ದೃಡಪಟ್ಟಿದೆ. ರಾಜ್ಯಕ್ಕೆ ಯುಕೆಯಿಂದ ಬಂದ ಒಬ್ಬ ಪ್ರಯಾಣಿಕನಲ್ಲೂ ಈ ಸೋಂಕು ಪತ್ತೆಯಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಎದೆಹಾಲು ಜಾಗೃತಿ ಮೂಡಿಸಲು ಮಕ್ಕಳತಜ್ಞರ ಆಗ್ರಹ

0

ಕೊರೊನಾ ಹಿನ್ನೆಲೆಯಲ್ಲಿ ಮಕ್ಕಳಲ್ಲಿ ಅಪೌಷ್ಟಿಕತೆ ಹೆಚ್ಚಾಗಿದೆ. ಮಕ್ಕಳಲ್ಲಿ ಅಪೌಷ್ಟಿಕತೆ ಸೇರಿದಂತೆ ಬಾಲ್ಯದಲ್ಲಿ ಎದುರಾಗುತ್ತಿರುವ ಆರೋಗ್ಯ ಸಮಸ್ಯೆಗೆ ತಾಯಿಯ ಎದೆಹಾಲು ರಾಮಬಾಣ. ಇದರ ಮಹತ್ವ ಅರಿತಿರುವ ರಾಜ್ಯ ಸರ್ಕಾರವು ‘ನೋರಾ ಹೆಲ್ತ್ ಕೇರ್’ಯೋಜನೆ ಮೂಲಕ ಕೇರ್ ಕಂಪ್ಯಾನಿಯನ್ ಪ್ರೋಗ್ರಾಮನ್ನು ರಾಜ್ಯಾದ್ಯಂತ ಹಮ್ಮಿಕೊಂಡಿದೆ.
ವಿಮ್ಸ್ ನಿರ್ದೇಶಕರಾದ ಗಂಗಾಧರ ಗೌಡ, ಅಧೀಕ್ಷಕ ಅಶ್ವಿನ್ ಕುಮಾರ್ ಸಹಕಾರದೊಂದಿಗೆ ವಿಮ್ಸ್ ನ ಮಕ್ಕಳ ವಿಭಾಗದ ಮುಖ್ಯಸ್ಥ ಡಾ. ದುರ್ಗಪ್ಪ ಮತ್ತು ಪ್ರಸೂತಿ ವಿಭಾಗದ ಮುಖ್ಯಸ್ಥರಾದ ಡಾ. ಸುಮನ್ ಗಡ್ಡಿ ಬಳಗದ ತಂಡವು ಕೇರ್ ಕಂಪ್ಯಾನಿಯನ್ ಪ್ರೋಗ್ರಾಮ್ ಮೂಲಕ ತಾಯಂದಿರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.
ತಾಯಿಂದಿರು ಸಕಾಲಿಕ ಸೂಕ್ತ ಮಾರ್ಗದರ್ಶನದ ಕೊರತೆಯಿಂದ ತಮ್ಮ ಮಕ್ಕಳಿಗೆ ಎದೆಹಾಲು ಕೊಡುವಲ್ಲಿ ವಿಫಲರಾಗಿ ನವಜಾತ ಶಿಶುಗಳ ಸಾವಿಗೆ ಕಾರಣವಾಗುತ್ತಿದ್ದಾರೆ. ಎದೆ ಹಾಲು ಮತ್ತು ಎದೆಹಾಲು ಕೊಡುವ ಬಗ್ಗೆ ತಾಯಂದಿರಲ್ಲಿ ಇರುವ ಗೊಂದಲ ಹೋಗಲಾಡಿಸಿ, ಎದೆ ಹಾಲು ಕುಡಿಸಲು ನಿರಂತರ ಜಾಗೃತಿ ಮೂಡಿಸುವ ಕೆಲಸ ಬಳ್ಳಾರಿ ವಿಮ್ಸ್ ಸೇರಿದಂತೆ ರಾಜ್ಯದ 78 ಕಡೆಗಳಲ್ಲಿ ಸದ್ದಿಲ್ಲದೇ ನಡೆಯುತ್ತಿದೆ. ರಾಜ್ಯದ ಪ್ರತಿಯೊಂದು ಜಿಲ್ಲಾಸ್ಪತ್ರೆ, ದೊಡ್ಡ ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜುಗಳಲ್ಲಿ ಎದೆಹಾಲಿನ ಮಹತ್ವವನ್ನು ಬಾಣಂತಿಯರಿಗೆ ನೀಡಲಾಗುತ್ತಿದೆ.
ಮಗುವಿನ ಹುಟ್ಟಿನಿಂದ 6 ತಿಂಗಳ ವರೆಗೆ ಕೇವಲ ತಾಯಿಯ ಎದೆ ಹಾಲನ್ನಷ್ಟೇ ನೀಡಬೇಕು. ಎರಡು ಗಂಟೆಗೊಮ್ಮೆ ಅಂದಾಜು 15-20 ನಿಮಿಷಗಳ ಎದೆಹಾಲು ಉಣಿಸಬೇಕು. ಇನ್ನು ಆರು ತಿಂಗಳ ನಂತರದಲ್ಲಿ ತಾಯಿಯ ಎದೆಹಾಲಿನೊಂದಿಗೆ ಮೃದು ಆಹಾರ ನೀಡಬೇಕು. ಯಾವುದೇ ಕಾರಣಕ್ಕೂ 2 ವರ್ಷದವರೆಗೆ ತಾಯಿಯ ಎದೆಹಾಲು ಮಗುವಿಗೆ ಕೊಡುವುದನ್ನು ನಿಲ್ಲಿಸಬಾರದು ಎಂಬುದು ಮಕ್ಕಳ ತಜ್ಞರ ಅಭಿಪ್ರಾಯವಾಗಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಈ ವರ್ಷದ ಕೊನೆಗೆ ಲಸಿಕಾ ಗುರಿ ಸಾಧನೆ?

0

ರಾಜ್ಯದಲ್ಲಿ ಜನರಿಗೆ ಶೇ.100ರಷ್ಟು ಮೊದಲ ಡೋಸ್ ಕೊವಿಡ್ ಲಸಿಕೆ ನೀಡುವ ಪ್ರಕ್ರಿಯೆ ವರ್ಷಾಂತ್ಯಕ್ಕೆ ಪೂರ್ಣಗೊಳ್ಳಲಿದೆ.
ಲಸಿಕಾ ಅಭಿಯಾನ ಆರಂಭವಾದ ನಂತರ ಆಗಸ್ಟ್ ಮತ್ತು ಸೆಪ್ಟೆಂಬರ್ ನಲ್ಲಿ ಅತಿ ಹೆಚ್ಚು ಲಸಿಕೆ ನೀಡಲಾಗಿದೆ. ಈ ಎರಡು ತಿಂಗಳಲ್ಲಿ ಕ್ರಮವಾಗಿ 1.18 ಕೋಟಿ ಮತ್ತು 1.40 ಕೋಟಿ ಲಸಿಕೆ ನೀಡಲಾಗಿದೆ. ಸರಕಾರ ಅಂದುಕೊಂಡಂತೆ ಯಾಗಿದ್ದರೆ ಈಗಾಗಲೇ ಎರಡೂ ಡೋಸ್ ಶೇ.100ರಷ್ಟು ಮುಗಿಯಬೇಕಿತ್ತು.
2021ರ ಜ.16ರಂದು ಆರಂಭವಾದ ಲಸಿಕಾ ಅಭಿಯಾನವು ಹಲವು ಅಡೆತಡೆಗಳ ನಡುವೆ ಸಾಗಿದೆ. ಮೊದಲ ಡೋಸ್ ಲಸಿಕೆ ನೀಡಿಕೆಯಲ್ಲಿ ಗುರಿಮುಟ್ಟುವ ಹಂತಕ್ಕೆ ಬಂದು ತಲುಪಿದೆ. ಈಗಾಗಲೇ ಶೇಕಡಾ 90ರಷ್ಟು ಮೊದಲ ಡೋಸ್ ನೀಡಲಾಗಿದೆ. ಪ್ರಸ್ತುತ 8.13 ಕೋಟಿ ಲಸಿಕೆ ನೀಡಲಾಗಿದೆ. ಇದರಲ್ಲಿ 4.67 ಕೋಟಿ ಮೊದಲ ಹಾಗೂ 3.45 ಕೋಟಿ ಎರಡನೇ ಡೋಸ್ ಲಸಿಕೆ ನೀಡಲಾಗಿದೆ.
ರಾಜ್ಯದಲ್ಲಿ ಲಸಿಕೆ ನೀಡುವಲ್ಲಿ ಬಿಬಿಎಂಪಿ ಮೊದಲ ಸ್ಥಾನದಲ್ಲಿದೆ. ಇದುವರೆಗೆ 1.49 ಕೋಟಿ ಲಸಿಕೆ ನೀಡಲಾಗಿದೆ. ಇದರಲ್ಲಿ 83.10 ಲಕ್ಷ ಮೊದಲ ಹಾಗೂ 65.99 ಲಕ್ಷ ಎರಡನೇ ಡೋಸ್ ನೀಡಲಾಗಿದೆ

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಬೆಂಗಳೂರಿನಲ್ಲಿ ಬಿಗುವಿನ ವಾತಾವರಣ

0

ಬೆಂಗಳೂರು ನಗರದ ಸ್ಯಾಂಕಿ ಕೆರೆ ಬಳಿಯಿರುವ ಶಿವಾಜಿ ಪ್ರತಿಮೆಗೆ ಮಸಿ ಬೆಳಿದಿರುವ ನಾಲ್ವರು ಕಿಡಿಗೇಡಿಗಳು ಸ್ಥಳೀಯರು ಎಂಬುದನ್ನು ಪತ್ತೆ ಹಚ್ಚಿರುವ ಪೊಲೀಸರು, ಶೀಘ್ರದಲ್ಲೇ ಅವರನ್ನು ಬಂಧಿಸುವ ಸಾಧ್ಯತೆ ಇದೆ.
ಕಿಡಿಗೇಡಿಗಳ ಕೃತ್ಯಕ್ಕೆ ಸರಕಾರ, ಪೊಲೀಸ್ ಇಲಾಖೆ, ನಿರ್ಲಕ್ಷ್ಯ ಎಂದು ಹೇಳಲಾಗದು. ಕೃತ್ಯ ಎಸಗಿದವರ ವಿರುದ್ಧ ಕ್ರಮ ಕೈಗೊಳ್ಳುವ ಶಕ್ತಿ ಸರಕಾರ ಹಾಗೂ ಪೊಲೀಸ್ ಇಲಾಖೆಗೆ ಇದೆ. ಆ ಕೆಲಸ ಮಾಡಬೇಕು ಎಂದೂ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ಈ ಘಟನೆ ಹಿನ್ನೆಲೆಯಲ್ಲಿ ಮುಂಜಾಗ್ರತೆ ಕ್ರಮವಾಗಿ ನಗರದಾದ್ಯಂತ ಇರುವ ಎಲ್ಲಾ ಪ್ರತಿಭೆಗಳಿಗೂ ಪೊಲೀಸ್ ಭದ್ರತೆ ಒದಗಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿದ್ದಾರೆ.
ನಗರದ ಮರಾಠ ಸಮುದಾಯದ ಕಾಲೇಜುಗಳು, ವಿದ್ಯಾರ್ಥಿ ನಿಲಯ, ಕಟ್ಟಡಗಳು ಹಾಗೂ ಮಹಾರಾಷ್ಟ್ರ ದಿಂದ ಬರುವ ಬಸ್ ಗಳಿಗೆ ಯಾವುದೇ ಹಾನಿಯಾಗದಂತೆ ಪೊಲೀಸರು ನಿಗಾ ವಹಿಸಿದ್ದಾರೆ‌ ಇಷ್ಟೇ ಅಲ್ಲದೆ, ಸೂಕ್ಷ್ಮ ಪ್ರದೇಶಗಳಲ್ಲಿ ಯಾವುದೇ ಅಹಿತಕರ ಘಟನೆಗೆ ಆಸ್ಪದ ನೀಡಬಾರದೆಂದು ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.
ಸಂಗೊಳ್ಳಿ ರಾಯಣ್ಣ ಕನ್ನಡಿಗರ ಹೆಮ್ಮೆ. ಅವರು ಪ್ರತಿಮೆಯನ್ನು ಹಾಳುಗೆಡವಿದ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಕೆಲವರು ಅರಾಜಕತೆ ಸೃಷ್ಟಿ ಮಾಡಲು ಕರ್ನಾಟಕ ಮತ್ತು ಮಹಾರಾಷ್ಟ್ರದ ನಡುವೆ ಸಂಘರ್ಷ ಸೃಷ್ಟಿಯಾಗುವಂತೆ ಮಾಡಿದ್ದಾರೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಅವರು ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಮಂಜೂರಾದ ವಸತಿ ಯೋಜನೆ ರದ್ದು:ಯಾಕೀ ಕ್ರಮ?

0

ಪ್ರತಿ ಗ್ರಾಮ ಪಂಚಾಯಿತಿಗೆ 20 ಮನೆಗಳನ್ನು ಮಂಜೂರು ಮಾಡಿ ವಸತಿರಹಿತರಲ್ಲಿ ನಿರೀಕ್ಷೆ ಹುಟ್ಟಿಸಿದ ರಾಜ್ಯ ಸರ್ಕಾರ ಇದೀಗ ಯೋಜನೆಯನ್ನೇ ರದ್ದುಮಾಡಿ ನಿರಾಸೆ ಮಾಡಿದೆ.
2018- 19ನೇ ಸಾಲಿನಲ್ಲಿ ವಿವಿಧ ವಸತಿ ಯೋಜನೆಗಳಡಿ ಮಂಜೂರಾದ ಮನೆಗಳನ್ನು ಸರ್ಕಾರ ವಾಪಸ್ ಪಡೆದಿರುವುದನ್ನು ಸದನದಲ್ಲಿ ಮಾಹಿತಿ ಒದಗಿಸಿದೆ. ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ ಪ್ರತಿ ಗ್ರಾಪಂಗೆ 20 ಮನೆಗಳಂತೆ 720 ಮನೆಗಳನ್ನು ವಾಪಸ್ಸು ಪಡೆಯಲಾಗಿದೆ ಎಂದು ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕರಾದ ಬಸವನಗೌಡ ದದ್ದಲ್ ಅವರು ತಿಳಿಸಿದ್ದಾರೆ.
2018 19 ನೇ ಸಾಲಿನಲ್ಲಿ ಮೈತ್ರಿ ಸರ್ಕಾರ ಪ್ರತಿ ಗ್ರಾಮ ಪಂಚಾಯಿತಿಗೆ 20 ಮನೆಗಳನ್ನು ಮಂಜೂರು ಮಾಡಿ ಸರ್ಕಾರ ಘೋಷಣೆ ಹೊರಡಿಸಿತ್ತು. ರಾಜ್ಯದಲ್ಲಿ ಈಗ 5962 ಗ್ರಾಮ ಮನೆಗಳು ಮಂಜೂರಾಗಿದ್ದವು. ಇದು ನಂತರ ಆಡಳಿತಕ್ಕೆ ಬಂದ ಬಿಜೆಪಿಗೆ ಗ್ರಾಮ ಪಂಚಾಯಿತಿ ಚುನಾವಣೆಯನ್ನು ಎದುರಿಸಲು ದೊಡ್ಡ ಅಸ್ತ್ರವಾಗಿತ್ತು.ಇದಾದ ಬಳಿಕ ಸ್ಥಳೀಯ ಸಂಸ್ಥೆಗಳ ಮೂಲಕ ನಡೆದ ವಿಧಾನಪರಿಷತ್ ಚುನಾವಣೆಯಲ್ಲೂ ಗ್ರಾಪಂ ಸದಸ್ಯರ ಮನವೊಲಿಕೆಗೆ ಇದು ಬಳಕೆಯಾಗಿತ್ತು. ಆದರೆ, ಎರಡು ಚುನಾವಣೆಗಳು ಮುಗಿದ ಬಳಿಕ ಈಗ ಯೋಜನೆಯನ್ನು ರದ್ದುಪಡಿಸಲಾಗಿದೆ ಎಂದು ಘೋಷಿಸಲಾಗಿದೆ.ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲೇ ವಸತಿ ಸಚಿವ ವಿ.ಸೋಮಣ್ಣ ವಿಚಾರವನ್ನು ಪ್ರಕಟಿಸಿದ್ದಾರೆ.
ಸರಕಾರ ಹಲವು ಕಾರಣಗಳನ್ನು ಮುಂದೊಡ್ಡಿ ಅಷ್ಟು ಮನೆಗಳನ್ನು ವಾಪಸ್ ಪಡೆದಿರುವುದರಿಂದ ರಾಜ್ಯದ್ಯಂತ ಬಡವರ ನೆತ್ತಿ ಮೇಲಿನ ಸೂರಿನ ಕನಸು ಭಗ್ನವಾಗಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸಿಸುತ್ತಿದ್ದಾರೆ. ಅಸ್ತಿತ್ವದಲ್ಲಿರಬೇಕಾಗಿದೆಯೆ? ಎಂಬ ಜಿಜ್ಞಾಸೆ

0

ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಚುನಾವಣೆ ನಡೆದು 25 ನೂತನ ಸದಸ್ಯರು ಆಯ್ಕೆಯಾಗಿದ್ದಾರೆ. ಪಕ್ಷಗಳ ಬಲಾಬಲ,ಸೋಲು, ಗೆಲುವಿನ ಕುರಿತು ಚರ್ಚೆಯಾಗುತ್ತಿದೆ. ಆದರೆ, ಇಡೀ ಚುನಾವಣೆ ನಡೆದ ರೀತಿಗೆ ಪ್ರಜ್ಞಾವಂತರು ತೀವ್ರ ವ್ಯಕ್ತಪಡಿಸುತ್ತಿದ್ದಾರೆ. ಇದೊಂದು ಪ್ರಜಾಪ್ರಭುತ್ವದ ಬಹುದೊಡ್ಡ ವ್ಯಂಗ್ಯ ಎನ್ನುತ್ತಿದ್ದಾರೆ.
ಪ್ರಗತಿಪರರ, ಚಿಂತಕರು, ಸಾಹಿತಿಗಳು, ಕಲಾವಿದರು, ವಿವಿಧ ಕ್ಷೇತ್ರಗಳ ತಜ್ಞರು ತುಂಬಿರಬೇಕಿದ್ದ ಮೇನ್ ಮನೆಗೆ ಅಭ್ಯರ್ಥಿಗಳು ಮೌಢ್ಯ ಬಿತ್ತಿ ಆ ಮೂಲಕ ಆಯ್ಕೆ ಆಗುತ್ತಿರುವುದು ವಿಪರ್ಯಾಸ. ಮತದಾರರನ್ನು ದೇವರು, ಧರ್ಮ, ನಂಬಿಕೆ ಹೆಸರಲ್ಲಿ ಬ್ಲಾಕ್ಮೇಲ್ ಮಾಡಲಾಗುತ್ತಿದೆ. ಹಣದ ಕವರ್ ನೊಂದಿಗೆ ದೇವರ ಫೋಟೋ, ಕುಂಕುಮ, ಹಾಲಿನ ಪೊಟ್ಟಣಗಳ ಮೇಲೆ ಆಣೆ ಮಾಡಿಸಿಕೊಳ್ಳುತ್ತಾರೆ. ಇವೆಲ್ಲವೂ ಗೊತ್ತಿದ್ದರೂ ವ್ಯವಸ್ಥೆ ಬದಲಾವಣೆಗೆ ಯಾರೂ ಮುಂದಾಗದಿರುವುದು ಪ್ರಜಾಪ್ರಭುತ್ವದ ದುರಂತ ಎನ್ನುತ್ತಿದ್ದಾರೆ.
ಬಹಿರಂಗವಾಗಿಯೇ ನಡೆಯುತ್ತಿರುವ ಅಕ್ರಮಗಳ ಬಗ್ಗೆ ಸಿಎಂ ಬಸವರಾಜ್ ಬೊಮ್ಮಾಯಿ ಸೇರಿದಂತೆ ಪ್ರಮುಖ ರಾಜಕಾರಣಿಗಳೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬೊಮ್ಮಾಯಿ, ಸ್ಪೀಕರ್ ವಿಶ್ವೇಶ್ವರ ಕಾಗೇರಿ, ಜಗದೀಶ್ ಶೆಟ್ಟರ್, ಕೆ.ಎಸ್. ಈಶ್ವರಪ್ಪ ಅವರು ಇಂಥ ಮೇಲ್ಮನೆ ಅಸ್ತಿತ್ವದಲ್ಲಿರಬೇಕಾದ ಎಂಬ ಜಿಜ್ಞಾಸೆಯನ್ನು ವ್ಯಕ್ತಪಡಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಭೂಸುಧಾರಣೆ ಕಾಯಿದೆ ವಾಪಸ್ ಇಲ್ಲ

0

ಭೂ ಸುಧಾರಣೆ ಕಾಯ್ದೆ ವಾಪಸ್ ಪಡೆಯದಿರಲು ಸರ್ಕಾರ ನಿರ್ಧಾರ ಮಾಡಿರುವುದು ಕಲಾಪದಲ್ಲೇ ಮಾಹಿತಿ ಹೊರಬಿದ್ದಿದೆ.
ಕೇಂದ್ರ ಸರ್ಕಾರವು ಕೃಷಿ ಬಿಲ್ ಪಡೆದ ಪ್ರತಿಯಲ್ಲಿ ಭೂಸುಧಾರಣೆ ವಿಧೇಯಕ ವಾಪಸ್ ಪಡೆಯುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಸಚಿವ ಅಶೋಕ್ ಸಮರ್ಥಿಸಿದ್ದಾರೆ.
ಭೂ ಸುಧಾರಣೆ, ಎಪಿಎಂಸಿ ಮತ್ತು ಜಾನುವಾರು ಹತ್ಯೆ ನಿಷೇಧ ಕಾಯಿದೆ ವಾಪಸ್ ವಿಚಾರದಲ್ಲಿ ರೈತರು ಪ್ರತಿಭಟಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲೇ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ನಿಯಮ 69ರಡಿ ಚರ್ಚೆ ನಡೆಸುವುದಕ್ಕೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಎಚ್.ಕೆ.ಪಾಟೀಲ್, ಕೆ.ಆರ್. ರಮೇಶ್ ಕುಮಾರ್, ಕೃಷ್ಣಬೈರೇಗೌಡ ಮತ್ತಿತರರು ನೋಟಿಸ್ ನೀಡಿದ್ದಾರೆ.
ಇಂಡಿ ಶಾಸಕ ಯಶವಂತರಾಗೌಡರು ಕೇಳಿದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಕಂದಾಯ ಸಚಿವ ಆರ್. ಅಶೋಕ್ ನೀಡಿದ ಉತ್ತರದಲ್ಲಿ ಕಾಯಿದೆ ವಾಪಸ್ ಪಡೆಯುವ ಉದ್ದೇಶವನ್ನು ಸರ್ಕಾರ ಹೊಂದಿಲ್ಲ ಎಂದು ಪಡಿಸಿದ್ದಾರೆ. ತಿದ್ದುಪಡಿ ಕಾಯ್ದೆ ವಾಪಸ್ ಇಲ್ಲ. 2020 ರ ಡಿಸೆಂಬರ್ 30ರಂದು ತಂದಿದ್ದ ಈ ತಿದ್ದುಪಡಿಯನ್ನು ಈಗಾಗಲೇ ಜಾರಿಗೆ ತರಲಾಗಿದೆ ಎಂದು ಉತ್ತರಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಡಿ.20 ರಿಂದ ಉತ್ತಮ ಆಡಳಿತ ಸಪ್ತಾಹ

0

ಆಡಳಿತವನ್ನು ಗ್ರಾಮಗಳ ಮಟ್ಟಕ್ಕೆ ಕೊಂಡೊಯ್ಯುವ ಉದ್ದೇಶದೊಂದಿಗೆ ಡಿಸೆಂಬರ್ 20ರಿಂದ ದೇಶಾದ್ಯಂತ ಒಂದು ವಾರ ಕಾಲ ‘ಉತ್ತಮ ಆಡಳಿತ ಸಪ್ತಾಹ’ ನಡೆಸಲು ಕೇಂದ್ರ ಸರ್ಕಾರ ಯೋಜಿಸಿದೆ.
ಹಲವು ರಾಜ್ಯ ಸರ್ಕಾರಗಳೂ ಅಭಿಯಾನದಲ್ಲಿ ಭಾಗವಹಿಸಲು ಒಲವು ತೋರಿವೆ. ಜಿಲ್ಲಾಧಿಕಾರಿಗಳು, ದರ್ಶನ್ ದಾರರು ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕುಂದುಕೊರತೆ ಇತ್ಯರ್ಥ ನಡೆಯಲಿದೆ. ಇದಕ್ಕಾಗಿ ಕೇಂದ್ರ ಸರ್ಕಾರ ವಿಶೇಷ ವಾಟ್ಸಾಪ್ ಗ್ರೂಪ್ ಸಹ ರಚಿಸಿದೆ. ಇದರೊಂದಿಗೆ ಮಾರ್ಗಸೂಚಿಗಳನ್ನು ಸಹ ಪ್ರಕಟಿಸಿದೆ.
ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ ನಡೆಯುವ ಈ ಸಪ್ತಾಹದಲ್ಲಿ ದೇಶಾದ್ಯಂತ ಇತ್ಯರ್ಥವಾಗದೆ ಉಳಿದಿರುವ ಸುಮಾರು 10 ಲಕ್ಷ ಕುಂದುಕೊರತೆಗಳನ್ನು ಪರಿಹರಿಸಲು ಉದ್ದೇಶಿಸಲಾಗಿದೆ.
ಡಿಸೆಂಬರ್ 25ರಂದು ಮಾಜಿ ಪ್ರಧಾನಿ ವಾಜಪೇಯಿ ಅವರ ಜನ್ಮದಿನದ ಅಂಗವಾಗಿ ಉತ್ತಮ ಆಡಳಿತ ದಿನ ಆಚರಿಸಲು ಮತ್ತು ಉತ್ತಮ ಆಡಳಿತ ಸೂಚ್ಯಂಕ ಬಿಡುಗಡೆಗೆ ಉದ್ದೇಶಿಸಲಾಗಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಸೂಕ್ತಸಮಯಕ್ಕೆ ಆಂಬುಲೆನ್ಸ್ ಸೇವೆ -ಶಾಸಕ ಹಾಲಪ್ಪ ಕರೆ

0

ಸಾಗರದ ನಗರಸಭೆ ಆವರಣದಲ್ಲಿನ ಗಾಂಧಿ ಮೈದಾನದಲ್ಲಿ ಆರೋಗ್ಯ ಇಲಾಖೆ ವತಿಯಿಂದ ಆನಂದಪುರಂ ಭಾಗಕ್ಕೆ ನೂತನ 108 ಆಂಬುಲೆನ್ಸ್ ವಾಹನ ಹಾಗೂ ತುಮರಿ ಭಾಗಕ್ಕೆ ದುರಸ್ತಿಯಾದ ಆಂಬುಲೆನ್ಸ್ ಸೌಲಭ್ಯಕ್ಕೆ ಎಂ ಎಸ್ ಐ ಎಲ್ ಅಧ್ಯಕ್ಷ, ಶಾಸಕ ಎಚ್. ಹಾಲಪ್ಪ ಅವರು ಚಾಲನೆ ನೀಡಿದ್ದಾರೆ.

ಹಿನ್ನೀರು ಭಾಗದಲ್ಲಿ ಸಮರ್ಪಕವಾದ ಆರೋಗ್ಯ ಸೇವೆ ಸಲ್ಲಿಸಲು ಸರ್ಕಾರ ಬದ್ಧವಾಗಿದೆ. ಸೂಕ್ತ ಸಮಯಕ್ಕೆ ಆಂಬುಲೆನ್ಸ್ ಸೇವೆ ಸಿಗದೇ ಜೀವಹಾನಿಯ ಘಟನೆಗಳು ಮರುಕಳಿಸಬಾರದು ಎಂದು ಎಚ್. ಹಾಲಪ್ಪ ಅವರು ತಿಳಿಸಿದ್ದಾರೆ.

ಕರೂರು ಭಾರಂಗಿ ಹೋಬಳಿಯ ನೆಟ್ವರ್ಕ್ ಸಮಸ್ಯೆ ಪರಿಹಾರಕ್ಕಾಗಿ ಟೆಲಿಕಾಂ ಸಂಸ್ಥೆಗಳ ಜೊತೆಗೆ ಮಾತುಕತೆ ನಡೆಸಲಾಗಿದೆ. ಸಂಸದರು ಹಾಗೂ ಶಾಸಕರ ನಿಧಿಯಿಂದ ಶಾಲೆಗಳಿಗೆ ನೆಟ್ವರ್ಕ್ ಕಲ್ಪಿಸುವ ಯೋಜನೆ ಶೀಘ್ರದಲ್ಲಿ ಕಾರ್ಯರೂಪಕ್ಕೆ ಬರಲಿದೆ. ಹಿನ್ನೀರಿನ ವ್ಯಾಪ್ತಿಯಲ್ಲಿನ ಸಮಸ್ಯೆಗಳನ್ನ ಗಮನದಲ್ಲಿದೆ. ಇದನ್ನು ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಕೂಡ ತಿಳಿಸಿದರು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್, ಉಪಾಧ್ಯಕ್ಷ ವಿ. ಮಹೇಶ್ ಇನ್ನು ಮುಂತಾದವರು ಉಪಸ್ಥಿತರಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.