Tuesday, February 10, 2026
Tuesday, February 10, 2026
Home Blog Page 1818

ಪ್ಯಾಕೇಜ್ ಪ್ರವಾಸ’ ಏರ್ಪಡಿಸಲು ಕ್ರಮ :ಡಿ.ಎಸ್.ಅರುಣ್

0

ವಿಧಾನಪರಿಷತ್ತಿಗೆ ಶಿವಮೊಗ್ಗ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ಸದಸ್ಯರಾಗಿ ಆಯ್ಕೆಯಾಗಿರುವ ಶ್ರೀ ಡಿ.ಎಸ್. ಅರುಣ್ ಅವರಿಗೆ ಶಿವಮೊಗ್ಗ ಜಿಲ್ಲಾ ಪ್ರವಾಸೋದ್ಯಮ ವೇದಿಕೆಯಿಂದ ಅಭಿನಂದಿಸಲಾಯಿತು.
ವೇದಿಕೆ ಅಧ್ಯಕ್ಷ ಶ್ರೀ ಲಕ್ಷ್ಮೀನಾರಾಯಣ ಕಾಶಿ ಅವರು ಮಾತನಾಡಿ, ಈಗಾಗಲೇ ಮಂಜೂರಾಗಿ ನಿಂತಿರುವ ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆಗಳ ಬಗ್ಗೆ ಶಾಸಕ ಶ್ರೀ ಡಿ.ಎಸ್. ಅರುಣ್ ಅವರು ಸೂಕ್ತ ನಿರ್ದೇಶನ ನೀಡಿ ಸರ್ಕಾರದ ಕಡೆಯಿಂದ ಯೋಜನೆ ಪೂರ್ಣಗೊಳಿಸಲು ಕೋರಿದರು.
ಶಿವಮೊಗ್ಗ ಜಿಲ್ಲಾ ಕೇಂದ್ರದಿಂದ ಪ್ರತಿ ಭಾನುವಾರ ಪ್ರವಾಸಿ ತಾಣಗಳಿಗೆ ‘ಪ್ಯಾಕೇಜ್ ಪ್ರವಾಸ’ ಏರ್ಪಡಿಸಲು ಮನವಿ ಅರ್ಪಿಸಲಾಯಿತು. ಭಾನುವಾರಗಳಂದು ಖಾಸಗಿ ಅಥವಾ ರಾಜ್ಯ ಸಾರಿಗೆ ಬಸ್ ವ್ಯವಸ್ಥೆ ಮಾಡಲು ಕೋರಲಾಯಿತು. ವೇದಿಕೆ ಕಾರ್ಯದರ್ಶಿ ಶ್ರೀ ಕೆ. ಗೋಪಿನಾಥ್ ಪ್ರವಾಸಿ ತಾಣಗಳ ವಿವರ ನೀಡಿದರು.

ಸದ್ಯ ಮಾಹಿತಿಗಳನ್ನು ಸಂಗ್ರಹಿಸಿ, ಬಸ್ ಮಾಲೀಕರು ಮತ್ತು ರಾಜ್ಯ ಸಾರಿಗೆ ಸಂಸ್ಥೆಯೊಂದಿಗೆ ಚರ್ಚಿಸಿ ಪ್ರವಾಸಿ ಬಸ್ ವ್ಯವಸ್ಥೆ ಮಾಡುವುದಾಗಿ ಶಾಸಕ ಅರುಣ್ ಭರವಸೆ ನೀಡಿದರು.
ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆಯ ನಿರ್ದೇಶಕರಾದ ಡಾ. ಸುಧೀಂದ್ರ, ಸುಕುಮಾರ್ ,ಕೆ.ಜಿ. ಮಂಜುನಾಥ ಶರ್ಮ, ಮಂಜುನಾಥ ಮೂರ್ತಿ , ಶಂಕರಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಪೋಲಿಸ್ ಕಠಿಣ ಕ್ರಮ ಕಾದುನೋಡಿ- ಗೃಹಸಚಿವರು

0

ಗಡಿಭಾಗವಾದ ಬೆಳಗಾವಿಯಲ್ಲಿ ಶಾಂತಿ ಕದಡಲು ಸಂಚು ಹೂಡಿರುವ ಮಹಾರಾಷ್ಟ್ರ ಏಕೀಕರಣ ಸಮಿತಿ ಪುಂಡರು ಕರ್ನಾಟಕದ ಅಸ್ಮಿತೆ ಗಳಲ್ಲಿ ಒಬ್ಬರಾಗಿರುವ ಸಂಗೊಳ್ಳಿ ರಾಯಣ್ಣನ ಪ್ರತಿಮೆಗಳನ್ನು ವಿರೂಪಗೊಳಿಸುವ ಉದ್ಧಟತನ ಮೆರೆದಿದ್ದಾರೆ. ಈ ವಿದ್ಯಮಾನ ರಾಜ್ಯಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ .
ತಪ್ಪಿತಸ್ಥರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಬೆರಳೆಣಿಕೆಯಷ್ಟು ಜನರು ಮಾಡುತ್ತಿರುವ ಕೃತ್ಯ ಇದಾಗಿದೆ. ಪೊಲೀಸರು ತೆಗೆದುಕೊಳ್ಳುವ ಕಠಿನ ಕ್ರಮ ಕಾದು ನೋಡಿ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ತಿಳಿಸಿದ್ದಾರೆ.
ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿರೂಪಗೊಳಿಸಿದ ಎಂಇಎಸ್ ಪುಂಡರ ಕೃತ್ಯ ಖಂಡನೀಯ. ತಕ್ಷಣ ಗೂಂಡಾಗಳನ್ನು ಬಂಧಿಸಿ ಜೈಲಿಗಟ್ಟಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ನವರು ತಿಳಿಸಿದ್ದಾರೆ.
ವಿಧಾನಸಭಾದಿವೇಶನ ಆರಂಭದ ದಿನವೇ ಮಹಾಮೇಳಾವ ನಡೆಸುವ ಮೂಲಕ ಕನ್ನಡಿಗರ ಸ್ವಾಭಿಮಾನವನ್ನು ಕೆಣಕಿದ ಎಂಇಎಸ್ ಪುಂಡರಿಗೆ ಮಸಿ ಬಳಿಯುವ ಮೂಲಕ ಕನ್ನಡ ಹೋರಾಟಗಾರರು ಪ್ರತಿರೋಧ ತೋರಿದ್ದರು. ಈ ನಡುವೆ , ಕೊಲ್ಲಾಪುರದಲ್ಲಿ ಶಿವಸೇನೆ ಮತ್ತು ಎಂಇಎಸ್ ಗೆ ಸೇರಿದ ಕೆಲವು ಪುಂಡರು ಕನ್ನಡ ಬಾವುಟಕ್ಕೆ ಬೆಂಕಿ ಹಚ್ಚುವ ಉದ್ಧಟತನ ಮೆರೆದಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ನ್ಯಾ.ನಾನಾವತಿ ನಿಧನ

0

ಸುಪ್ರೀಂಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಜಿ. ಟಿ. ನಾನಾವತಿ ಅವರು ಹೃದಯಾಘಾತದಿಂದಾಗಿ ಅಹಮದಾಬಾದ್ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ ಎಂದು ಅವರ ಕುಟುಂಬದವರು ತಿಳಿಸಿದ್ದಾರೆ.

2002ರಲ್ಲಿ ಗುಜರಾತ್ ನ ಗೋದ್ರಾ ಗಲಭೆಯ ನಂತರ ನಡೆದ ಹಿಂಸಾಚಾರ ಹಾಗೂ ದೆಹಲಿಯಲ್ಲಿ 1984 ರಲ್ಲಿ ನಡೆದ ಸಿಖ್ ವಿರೋಧಿ ದಂಗೆ ಗಳ ಬಗ್ಗೆ ತನಿಖೆಗೆ ನಾನಾವತಿ ಅವರ ನೇತೃತ್ವದಲ್ಲಿ ಆಯೋಗ ರಚಿಸಲಾಗಿತ್ತು.1935ರ ಫೆಬ್ರವರಿಯಲ್ಲಿ ಶ್ರೀಯುತರು ಜನಿಸಿದರು. 1979 ರಲ್ಲಿ ಗುಜರಾತ್ ಹೈಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕಗೊಂಡರು. ಅನಂತರ 1995 ರಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾದರು.2000 ರಲ್ಲಿ ನಿವೃತ್ತರಾದರು.

ಗೋದ್ರಾ ಗಲಭೆಯ ನಂತರ ನಡೆದ ಘಟನೆಗಳ ಬಗ್ಗೆ ಅಂತಿಮ ತನಿಖಾ ವರದಿಯನ್ನು ಅವರು 2014 ರಲ್ಲಿ ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಇದನ್ನು ಡಿಸೆಂಬರ್ 2019 ರಲ್ಲಿ ಗುಜರಾತ್ ವಿಧಾನಸಭೆಯಲ್ಲಿ ಮಂಡಿಸಲಾಗಿತ್ತು. ಈ ವರದಿಯಲ್ಲಿ ಗುಜರಾತ್ ನ ಆಗಿನ ಮುಖ್ಯಮಂತ್ರಿ ನರೇಂದ್ರ ಮೋದಿ ಹಾಗೂ ಅವರ ಸಂಪುಟ ಸಹೋದ್ಯೋಗಿಗಳಿಗೆ ಕ್ಲೀನ್ ಚಿಟ್ ನೀಡಲಾಗಿತ್ತು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ರಾಯಣ್ಣ ಬರೀ ಕರ್ನಾಟಕಕ್ಕೆ ಸೀಮಿತವಾಗಿಲ್ಲ

0

ಬೆಳಗಾವಿಯಲ್ಲಿ ಸಂಗೊಳ್ಳಿರಾಯಣ್ಣನ ಪ್ರತಿಮೆ ಧ್ವಂಸಗೊಳಿಸಿ ರುವುದನ್ನು ಖಂಡಿಸಿ ಜಿಲ್ಲಾ ಯುವ ಕುರುಬರ ಬಳಗದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಸಂಗೊಳ್ಳಿ ರಾಯಣ್ಣ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲ. ಅವರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದವರಲ್ಲಿ ಒಬ್ಬರಾಗಿದ್ದಾರೆ. ಬ್ರಿಟಿಷರ ವಿರುದ್ಧ ಹೋರಾಡಿ ತಮ್ಮ ಪ್ರಾಣವನ್ನೇ ಬಲಿದಾನ ಮಾಡಿದ್ದಾರೆ. ಇಂತಹ ಸಂಗೊಳ್ಳಿರಾಯಣ್ಣ ಪ್ರತಿಮೆಯನ್ನು ಧ್ವಂಸಗೊಳಿಸಲಾಗಿದೆ ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

ಬೆಳಗಾವಿಯ ಎಂಇಎಸ್ ಗೂಂಡಾಗಳು 4 ದಿನಗಳ ಹಿಂದೆ ಕರ್ನಾಟಕದ ಬಾವುಟವನ್ನು ಸುಟ್ಟು ಹಾಕಿದ್ದರು. ಆದರೆ, ಇದುವರೆಗೂ ಅವರ ಮೇಲೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಈಗ ವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆಗೆ ಅವಮಾನ ಮಾಡಿದ್ದಾರೆ. ಆದರೂ ಸಹ ಸಚಿವೆ ಶಶಿಕಲಾ ಜೊಲ್ಲೆ ಅವರು ಮರಾಠಿಗರ ಹಿತ ಕಾಪಾಡುತ್ತಿದ್ದಾರೆ. ಇದೊಂದು ಒಳ ಕೈಯ ರಾಜಕಾರಣವಾಗಿದೆ. ಇವರು ಮುಖ್ಯಮಂತ್ರಿಯಾಗಿರುವುದೇ ರಾಜ್ಯಕ್ಕೆ ಅವಮಾನ ಎಂದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಕೂಡಲೇ ಸಂಗೊಳ್ಳಿರಾಯಣ್ಣನ ಪ್ರತಿಮೆ ಧ್ವಂಸ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ವಾಟಾಳ್ ಮಂಜುನಾಥ್, ಕೆ. ರಂಗನಾಥ್, ಗಣೇಶ್ ಬೀಳಗಿ ಇನ್ನು ಮುಂತಾದವರು ಉಪಸ್ಥಿತರಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಕೊರೋನ; ಮೃತರ ಕುಟುಂಬಕ್ಕೆ ಸರ್ಕಾರದ ಸಹಾಯಧನ

0

ಕೊರೋನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ನೆರವು ನೀಡಲು ಸರ್ಕಾರ ಧನ ಸಹಾಯ ಮಾಡುವ ಕಾರ್ಯಕ್ರಮ ಜಾರಿಗೊಳಿಸಿದೆ. ಕುಟುಂಬಗಳ ಸದಸ್ಯರ ನೋವಿನ ಕಣ್ಣೀರು ಒರೆಸುವ ಸಣ್ಣ ಪ್ರಯತ್ನವನ್ನು ಸರ್ಕಾರದ್ದಾಗಿದೆ ಎಂದು ಮಾನ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ತಿಳಿಸಿದ್ದಾರೆ.

ಕೊರೋನಾದಿಂದ ಸಾವನ್ನಪ್ಪಿರುವ ಸದಸ್ಯರ ಕುಟುಂಬಕ್ಕೆ ಸರ್ಕಾರ ಒಂದು ಲಕ್ಷ ನೆರವಿನ ಚೆಕ್ಕನ್ನು ತೀರ್ಥಹಳ್ಳಿ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿತರಿಸಲಾಯಿತು.

ಕೊರೋನಾ ಸೋಂಕಿನಿಂದ ದುಡಿಯುವ ವ್ಯಕ್ತಿ ಮೃತಪಟ್ಟರೆ ಮಾತ್ರ 1 ಲಕ್ಷ ಧನಸಹಾಯ ನೆರವು ನೀಡಬೇಕು ಎಂದು ಸರ್ಕಾರ ಆದೇಶ ನೀಡಿತ್ತು. ಆದರೆ ಈಗ ಕೋವಿಡ್ ಸೋಂಕಿನಿಂದ ಮೃತಪಟ್ಟ ಬಿಪಿಎಲ್ ಕುಟುಂಬಕ್ಕೆ 1 ಲಕ್ಷ ಧನ ಸಹಾಯ ಮಾಡಲಾಗುತ್ತಿದೆ. ಕುಟುಂಬದ ಸದಸ್ಯರ ಜೊತೆಗೆ ಸರ್ಕಾರ ಇದೆ ಎಂದು ಆರಗ ಜ್ಞಾನೇಂದ್ರ ಅವರು ಹೇಳಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಡಾ. ಎಸ್. ಶಿವಪ್ರಸಾದ್, ಬಿ. ಶ್ರೀಪಾದ್, ಉಪತಹಸೀಲ್ದಾರ್ ಉಪಸ್ಥಿತರಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಹುಲಿ ಸಿಂಹಧಾಮಕ್ಕೆ ಹೊಸ ಅತಿಥಿ

0

ಶಿವಮೊಗ್ಗದ, ತಾವರೆ ಕೊಪ್ಪದ ಹುಲಿ-ಸಿಂಹಧಾಮಕ್ಕೆ ಆಫ್ರಿಕಾ ಮೂಲದ ನೀರುಕುದುರೆ ಹೊಸ ಅತಿಥಿಯಾಗಿ ಆಗಮಿಸಿದೆ.

ಇತ್ತೀಚಿಗಷ್ಟೇ ಮೈಸೂರು ಮೃಗಾಲಯದಿಂದ ಶಿವಮೊಗ್ಗದ ಹುಲಿ-ಸಿಂಹಧಾಮ ಕ್ಕೆ ಗಂಡು ನೀರು ಕುದುರೆಯನ್ನು ಉಡುಗೊರೆಯಾಗಿ ನೀಡಲಾಗಿತ್ತು. ಮೈಸೂರು, ಬನ್ನೇರುಘಟ್ಟದಲ್ಲಿ ಮಾತ್ರಾ ಇದನ್ನು ವೀಕ್ಷಿಸಬಹುದಾಗಿತ್ತು. ಇದೇ ಪ್ರಥಮವಾಗಿ ಶಿವಮೊಗ್ಗದ ತಾವರೆಕೊಪ್ಪ ಹುಲಿ-ಸಿಂಹಧಾಮ ಕ್ಕೆ ನೀರು ಕುದುರೆ ಬಂದಿದೆ. ಗಂಡು ಕುದುರೆಯ ಹೆಸರು ವಿಷ್ಣು. ಇದರ ಜೋಡಿಯಾಗಿ ಈಗ ಹಂಸ ಎಂಬ ನೀರು ಕುದುರೆಯನ್ನು ಕರೆ ತರಲಾಗಿದೆ.
ನೀರು ಕುದುರೆಗಳ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಿಕೊಡಲಾಗಿದೆ ಎಂದು ಸಿಂಹಧಾಮದ ಕಾರ್ಯನಿರ್ವಾಹಕ ನಿರ್ದೇಶಕರಾದ ಮುಕುಂದ್ ಚಂದ್ ಅವರು ಹೇಳಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಫಿಲಿಫೈನ್ಸ್ ಗೆ ಚಂಡಮಾರುತ ಆಘಾತ

0

ರೈ ಚಂಡಮಾರುತಕ್ಕೆ ಫಿಲಿಪ್ಪಿನ್ಸ್ ತತ್ತರಿಸಿಹೋಗಿದೆ. ಚಂಡಮಾರುತ ಸಂಬಂಧಿತ ಹಲವು ಅವಘಡಗಳಲ್ಲಿ 33 ಜನ ಮೃತಪಟ್ಟಿದ್ದಾರೆ.
ರಕ್ಷಣಾ ಕಾರ್ಯಾಚರಣೆಗಾಗಿ 18 ಸಾವಿರ ಸೈನಿಕರು ಹಾಗೂ ತುತ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇದುವರೆಗೆ ಮೂರು ಲಕ್ಷಕ್ಕೂ ಅಧಿಕ ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.
ಸೆಂಟ್ರಲ್ ಫಿಲಿಪಿನ್ಸ್ ನ ಬಹುತೇಕ ಪ್ರಾಂತ್ಯಗಳಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಇದರೊಂದಿಗೆ ಸಂಪರ್ಕ ಕಡಿತವಾಗಿದೆ.
50ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದು ಅವರಿಗಾಗಿ ಶೋಧ ನಡೆಯುತ್ತಿದೆ. ಗಂಟೆಗೆ ಸುಮಾರು 195-270 ಕಿ.ಮೀ. ವೇಗದಲ್ಲಿ ಗಾಳಿ ಬೀಸಿದ ಕಾರಣ ಅಪಾರ ಪ್ರಮಾಣದ ಆಸ್ತಿಪಾಸ್ತಿ ಹಾನಿಯಾಗಿದೆ. ಗುರುವಾರದಿಂದಲೇ ಚಂಡ ಮಾರುತ ಬೀಸುತ್ತಿದ್ದು ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂಬುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಫೆಬ್ರವರಿಯಲ್ಲಿ ಗರಿಷ್ಠ ಹಂತಕ್ಕೆ ಓಮಿಕ್ರಾನ್

0

ಮುಂದಿನ ಎರಡು ತಿಂಗಳಲ್ಲಿ ದೇಶದಲ್ಲಿ ಕೋರೋನಾ ರೂಪಾಂತರಿ ಯಾದ ಓಮಿಕ್ರಾನ್ ಸೋಂಕು ಗರಿಷ್ಠ ಮಟ್ಟಕ್ಕೆ ತಲುಪಲಿದೆ. ಆದರೆ ಈ ಸೋಂಕು ಡೆಲ್ಟಾದಷ್ಟು ಅಪಾಯಕಾರಿ ಆಗಿಲ್ಲ. ಸೌಮ್ಯ ಅನಾರೋಗ್ಯ ಪೀಡಿತರು ಹೆಚ್ಚಿನ ಸಂಖ್ಯೆಯಲ್ಲಿ ಇರಲಿದ್ದಾರೆ ಎಂದು ತಜ್ಞರು ತಿಳಿಸಿದ್ದಾರೆ.

ಜನವರಿಯಲ್ಲಿ ಓಮಿಕ್ರಾನ್ ಸೋಂಕಿತರ ಸಂಖ್ಯೆಯೂ ಗಣನೀಯವಾಗಿ ಹೆಚ್ಚಳವಾಗಲಿದೆ. ಫೆಬ್ರವರಿಯಲ್ಲಿ ಉತ್ತುಂಗಕ್ಕೆ ತಲುಪಲಿದೆ. ಬ್ರಿಟನ್ ನಲ್ಲಿ ಓಮಿಕ್ರಾನ್ ಸ್ಪೋಟಕ್ಕೂ, ನಮ್ಮ ದೇಶಕ್ಕೂ ಹೋಲಿಕೆ ಮಾಡುವುದು ಬೇಡ. ಬ್ರಿಟನ್ ಪ್ರಜೆಗಳಲ್ಲಿ ಸದ್ಯದ ಮಟ್ಟಿಗೆ ನೈಸರ್ಗಿಕ ರೋಗನಿರೋಧಕ ಶಕ್ತಿಯು ಕಡಿಮೆ ಇರುತ್ತದೆ ಎಂಬುದು ಕಂಡುಬಂದಿದೆ.

ಭಾರತೀಯರಿಗೆ ರೋಗನಿರೋಧಕ ಶಕ್ತಿ ಹೆಚ್ಚಿದೆ ಎಂದು ರಾಷ್ಟ್ರೀಯ ಕೋವಿಡ್-19 ಸೂಪರ್ ಮಾಡೆಲ್ ಸಮಿತಿ ಮುಖ್ಯಸ್ಥ ಪ್ರೊ. ಎಂ. ವಿದ್ಯಾಸಾಗರ್ ತಿಳಿಸಿದ್ದಾರೆ.

ಕರುಣ ಸಾಂಕ್ರಾಮಿಕ ದೇಶದಲ್ಲಿ ಸಂಬಂಧಗಳ ಕುರಿತು ಮುಂಚಿತವಾಗಿ ಅಧ್ಯಯನ ನಡೆಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ವಿದ್ಯಾಸಾಗರ ಅವರ ನೇತೃತ್ವದ ಸಮಿತಿಯನ್ನು ರಚಿಸಿದೆ.

ದೇಶದಲ್ಲಿ ಓಮಿಕ್ರಾನ್ 18 ಹೊಸ ಪ್ರಕರಣಗಳು ವರದಿಯಾಗಿವೆ. ಮಹಾರಾಷ್ಟ್ರದಲ್ಲಿ 8, ಕರ್ನಾಟಕದಲ್ಲಿ 6, ಕೇರಳದಲ್ಲಿ ನಾಲ್ಕು ಪ್ರಕರಣಗಳು ವರದಿಯಾಗಿವೆ ಎಂದು ಮೂಲಗಳು ತಿಳಿಸಿವೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಚಳಿ ಚಳಿ ತಾಳೆನು ಈ ಚಳಿಯ, ರಾಜ್ಯದಲ್ಲಿ ಶೀತ ಏರಿಕೆ

0

ಕರ್ನಾಟಕದಲ್ಲಿ ಮಳೆಯ ಪ್ರಮಾಣ ತಗ್ಗಿದ ಹಿನ್ನಲೆಯಲ್ಲಿ ಚಳಿ ಹೆಚ್ಚಾಗುತ್ತಿದೆ. ಉತ್ತರದ ಶೀತ ಮಾರುತಗಳು ರಾಜ್ಯವನ್ನು ಪ್ರವೇಶಿಸಿದ್ದು ಚಳಿಗಾಲದ ಆರಂಭಕ್ಕೆ ಮುನ್ನುಡಿ ಬರೆದಿವೆ.

ರಾಜ್ಯದ ಉತ್ತರ ಕರ್ನಾಟಕದ ಜಿಲ್ಲೆಗಳಾದ ಬೀದರ್, ಕಲ್ಬುರ್ಗಿ, ಯಾದಗಿರಿಯಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಅಧಿಕವಾಗಿದೆ. ಇದು ರಾಜ್ಯದ ಚಳಿಗಾಲದ ಮುನ್ಸೂಚನೆಯಾಗಿದೆ ಇಂದು ಹವಾಮಾನ ತಜ್ಞರಾದ ಡಾ. ಜಿ. ಎಸ್. ಶ್ರೀನಿವಾಸ್ ರೆಡ್ಡಿ ಅವರು ತಿಳಿಸಿದ್ದಾರೆ.

ಮುಂದಿನ ಎರಡು ಮೂರು ದಿನಗಳ ಒಳಗೆ ಶೀತ ಮಾರುತಗಳು ರಾಜ್ಯದ್ಯಂತ ಆವರಿಸಿಕೊಳ್ಳುತ್ತದೆ. ಆ ಮೂಲಕ ಕರಾವಳಿ, ದಕ್ಷಿಣ ಒಳನಾಡು ಹಾಗೂ ಮಲೆನಾಡು ಭಾಗದಲ್ಲಿ ಚಳಿ ಹೆಚ್ಚಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಇದೇ ವೇಳೆ ರಾಜ್ಯದಲ್ಲಿ ಮುಂದಿನ 24ಗಂಟೆಯಲ್ಲಿ ಒಣಹವೆ ಮುಂದುವರಿಯುವುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಡಿವೈಎಸ್ಪಿ ಸಿಐಡಿ ಡಿವೈಎಸ್ಪಿ ಯಶವಂತ್ ಕುಮಾರ್ ಅವರಿಗೆ ಪ್ರಶಸ್ತಿ

0

ಸೈಬರ್ ಅಪರಾಧ ಪ್ರಕರಣಗಳ ತನಿಖೆ ವೇಳೆ ತಾಂತ್ರಿಕ ಮತ್ತು ಡಿಜಿಟಲ್ ಮಾಹಿತಿ, ಸಾಕ್ಷ್ಯ ಸಂಗ್ರಹಿಸಿ ಪತ್ತೆಹಚ್ಚಿದ ಅತ್ಯುತ್ತಮ ಸೇವೆ ನೀಡುವ 2021ನೇ ಸಾಲಿನ ‘ಸೈಬರ್ ಕಾಪ್’ಪ್ರಶಸ್ತಿಗೆ ಸಿಐಡಿ ಡಿವೈಎಸ್ ಪಿ ಕೆ.ಎನ್. ಯಶವಂತಕುಮಾರ್ ಭಾಜನರಾಗಿದ್ದಾರೆ.
ಕೇಂದ್ರ ಸರ್ಕಾರದ ಡೇಟಾ ಸೆಕ್ಯೂರಿಟಿ ಕೌನ್ಸಿಲ್ ಆಫ್ ಇಂಡಿಯಾ 2010ನೇ ಸಾಲಿನಿಂದ ಸೈಬರ್ ಕ್ರೈಂ ಅಪರಾಧಗಳಲ್ಲಿ ಅಸಾಧಾರಣ ತನಿಖೆ ನಡೆಸಿ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗುವ ತನಿಖಾಧಿಕಾರಿಯನ್ನು ರಾಷ್ಟ್ರ ಮಟ್ಟದಲ್ಲಿ ಗುರುತಿಸಿ ಗೌರವಿಸಿ ಪ್ರೋತ್ಸಾಹಿಸುವ ಪದ್ಧತಿ ಇದಾಗಿದೆ.
ದೇಶದೆಲ್ಲೆಡೆಯಿಂದ 55 ಸೈಬರ್ ಅಪರಾಧ ಪ್ರಕರಣಗಳ ವರದಿಗಳನ್ನು ಸಲ್ಲಿಸಲಾಗಿತ್ತು. ಅಂತಿಮವಾಗಿ ಆಂಧ್ರಪ್ರದೇಶದ, ಉತ್ತರಾಖಂಡ ಮತ್ತು ಕರ್ನಾಟಕ ತನಿಖಾಧಿಕಾರಿಗಳು ಆಯ್ಕೆಪಟ್ಟಿಯನ್ನು ಇದ್ದರು.
ಕರ್ನಾಟಕದ ಸಿಐಡಿ ವಿಭಾಗ ಎರಡನೇ ಬಾರಿಗೆ ಪ್ರತಿಷ್ಠಿತ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ. 2015 ನೇ ಸಾಲಿನಲ್ಲಿ ಆನ್ಲೈನ್ ಮೂಲಕ ಉದ್ಯೋಗ ಕೊಡಿಸುವುದಾಗಿ ವಂಚನೆ ಪ್ರಕರಣವನ್ನು ಭೇಧಿಸಿದ ತನಿಖೆ ನಡೆಸಿದ್ದ ಪ್ರಸ್ತುತ ಸೈಬರ್ ಕ್ರೈಂ ವಿಭಾಗದ ಪೋಲಿಸ್ ಅಧೀಕ್ಷಕ ಎಂ.ಡಿ. ಶರತ್ ಅವರಿಗೆ ಪ್ರಶಸ್ತಿ ಲಭಿಸಿತ್ತು.