ರಾಜ್ಯದಲ್ಲಿ ಸರ್ಕಾರಿ ಶಾಲೆಗಳ ಮಕ್ಕಳಿಗೆ ಮೊಟ್ಟೆ ವಿತರಣೆ ಬಗ್ಗೆ ಪರ ವಿರೋಧ ವ್ಯಕ್ತವಾಗಿದೆ. ಆದರೆ ಸದ್ಯ ರಾಜ್ಯದಲ್ಲಿ 38,181 ಮಕ್ಕಳು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಎಂದು ತಿಳಿದುಬಂದಿದೆ.
ಶಾಸಕ ಎಸ್ ರಾಮಪ್ಪ ಅವರು ಅಧಿವೇಶನದಲ್ಲಿ ಕೇಳಿದ ಪ್ರಶ್ನೆಗೆ “ತೀವ್ರ ಅಪೌಷ್ಠಿಕ ಮಕ್ಕಳಿಗೆ ಪ್ರತಿದಿನ 12 ರೂ. ಮೌಲ್ಯದ ಪೂರಕ ಪೌಷ್ಟಿಕ ಆಹಾರ ನೀಡಲಾಗುತ್ತಿದೆ. ಅಂಗನವಾಡಿಗೆ ಬರುವ ಮೂರರಿಂದ ಆರು ವರ್ಷದ ಎಲ್ಲಾ ಮಕ್ಕಳಿಗೆ ವಾರದಲ್ಲಿ ಎರಡು ದಿನ ಮುಟ್ಟಿ ನೀಡಲಾಗುತ್ತಿದೆ” ಎಂದು ಸಚಿವ ಹಾಲಪ್ಪ ಆಚಾರ್ ಉತ್ತರಿಸಿದ್ದಾರೆ.
ಅಲ್ಲದೆ “ಮೂರರಿಂದ ಆರು ವರ್ಷದ ಅಪೌಷ್ಟಿಕ ಮಕ್ಕಳು ಹಾಗೂ 5 ಹಿಂದುಳಿ ಜಿಲ್ಲೆಗಳಾದ ಬೀದರ್, ಕಲಬುರ್ಗಿ, ರಾಯಚೂರು, ಯಾದಗಿರಿ, ಕೊಪ್ಪಳದಲ್ಲಿ ಸಾಧಾರಣ ಪೌಷ್ಟಿಕ ಮಕ್ಕಳಿಗೆ ವಾರದಲ್ಲಿ ಐದು ದಿನ ಮೊಟ್ಟೆ ನೀಡಲಾಗುತ್ತಿದೆ ಬೇಡ ಎನ್ನುವ ಮಕ್ಕಳಿಗೆ ವಾರದಲ್ಲಿ ಮೂರು ದಿನ 200ಮಿ.ಲೀ. ಹಾಲನ್ನು ನೀಡಲಾಗುತ್ತಿದೆ ಮಕ್ಕಳ ಬೆಳವಣಿಗೆಗೆ ಪೂರಕ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ” ಎಂದು ಸಚಿವರು ತಿಳಿಸಿದ್ದಾರೆ.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ಟೂರ್ನಿ ಭಾನುವಾರ ನಡೆದ ಪುರುಷರ ಸಿಂಗಲ್ಸ್ ಫೈನಲ್ ನಲ್ಲಿ ಶ್ರೀಕಾಂತ್ ಸಿಂಗಪುರದ ಲೋಹ್ ಯೂ ಎದುರು ನೇರ ಗೇಮ್ ಗಳಿಂದ ಸೋತರು. ಆದರೆ ಚಾಂಪಿಯನ್ ಶಿಪ್ ನಲ್ಲಿ ದೇಶಕ್ಕೆ ಮೊಟ್ಟಮೊದಲ ಬೆಳ್ಳಿ ಪದಕ ಗಳಿಸಿಕೊಟ್ಟರು. 28 ವರ್ಷದ ಶ್ರೀಕಾಂತ್ 43 ನಿಮಿಷಗಳಲ್ಲಿ (15-21,20-22) ರಲ್ಲಿ ಎದುರಾಳಿಗೆ ಮಣಿದರು.
ವಿಶ್ವ ಚಾಂಪಿಯನ್ ಶಿಪ್ ನ ಪುರುಷರ ವಿಭಾಗದಲ್ಲಿ ಇದೇ ಮೊದಲ ಬಾರಿ ಭಾರತ 2 ಪದಕ ಗೆದ್ದುಕೊಂಡಿದೆ, ಶನಿವಾರ ನಡೆದ ಸೆಮಿಫೈನಲ್ ನಲ್ಲಿ ಶ್ರೀಕಾಂತ್ (17-21,21-14,21-17) ರಲ್ಲಿ ಭಾರತದವರೇ ಆದ ‘ಲಕ್ಷ್ಯ ಸೇನ್’ ವಿರುದ್ಧ ಗೆದ್ದಿದ್ದರು. ಲಕ್ಷ್ಯ ಕಂಚಿನ ಪದಕ ಗಳಿಸಿದರು. ಪುರುಷರ ವಿಭಾಗದಲ್ಲಿ ಈ ಹಿಂದೆ ‘ಪ್ರಕಾಶ್ ಪಡುಕೋಣೆ’ ಮತ್ತು ‘B’ ಸಾಯಿ ಪ್ರಣೀತ್’ ಕಂಚಿನ ಪದಕದ ಸಾಧನೆ ಮಾಡಿದ್ದಾರೆ.
12ನೇ ಶ್ರೇಯಾಂಕದ ಶ್ರೀಕಾಂತ್ ಅವರನ್ನು 24 ವರ್ಷದ ಲೋಹ್ ಅವರು ಪ್ರಬಲ ಆಕ್ರಮಣಕಾರಿ ಆಟದ ಮೂಲಕ ಕಾಡಿದರು, ನೆಟ್ ಬಳಿ ಅಮೋಘ ‘ಡ್ರಾಪ್ ‘ ಮೂಲಕ ಪಾಯಿಂಟ್ ಗಳಿಸಿದ ‘ಲೋಹ್ ‘ ಆರಂಭದ ಗೇಮ್ ನಲ್ಲಿ (3-1) ರ ಮುನ್ನಡೆ ಸಾಧಿಸಿದರು.
2 ನೇ ಗೇಮ್ ನಲ್ಲಿ ಇಬ್ಬರು ಜಿದ್ದಾಜಿದ್ದಿಯ ಹೋರಾಟ ನಡೆಸಿ (4-4) ರ ಸಮಬಲ ಸಾಧಿಸಿದರು. ನಂತರ ಶ್ರೀಕಾಂತ್ ತಮ್ಮ ಸಹಜ ಆಟದ ಮೂಲಕ (7-4) ರಲ್ಲಿ ಮುನ್ನಡೆಸಿದರು. ಆದರೆ ಮತ್ತೆ ತಪ್ಪುಗಳನ್ನು ಎಸಗಿ (9-9) ರ ಸಮಬಲ ಸಾಧಿಸಲು ಎದುರಾಳಿಗೆ ಅವಕಾಶ ಮಾಡಿಕೊಟ್ಟರು.
ನಂತರ ಶ್ರೀಕಾಂತ್ ಅವರಿಗೆ ಸಿಡಿದೇಳಲು ಆಗಲಿಲ್ಲ. ಹೋರಾಡಿ ಸೋತ ಭಾರತದ ಕಿದಂಬಿ ಶ್ರೀಕಾಂತ್ ವಿಶ್ವ ಬ್ಯಾಡ್ಮಿಂಟನ್ ಬೆಳ್ಳಿ ಪದಕಕ್ಕೆ ತೃಪ್ತಿಪಡಬೇಕಾಯಿತು. “ಆದರೆ ಬ್ಯಾಡ್ಮಿಂಟನ್ ಪ್ರಿಯರ ಮನ ಗೆಲ್ಲುವಲ್ಲಿ ಯಶಸ್ವಿಯಾದರು”.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
ಏಷ್ಯಾನ್ ಚಾಂಪಿಯನ್ಸ್ ಟ್ರೋಫಿ “ಹಾಕಿ” ಟೂರ್ನಿಯ ಪಂದ್ಯಾವಳಿ ಭಾರತ ಮತ್ತು ಜಪಾನ್ ತಂಡಗಳ ನಡುವೆ ನಡೆಯಿತು.
‘ಮೌಲಾನಾ ಭಸಾನಿ’ ಹಾಕಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ‘ರೌಂಡ್ ರಾಬಿನ್’ ಕೊನೆಯ ಪಂದ್ಯದಲ್ಲಿ ‘ಮನ್ ಪ್ರೀತ್ ಸಿಂಗ್’ ಬಳಗದ ಪರ ಹರ್ಮನ್ ಪ್ರೀತ್ 10 ಮತ್ತು 53 ನೇ ನಿಮಿಷ ಗೋಲ್ ದಾಟಿಸಿದರು.
ಟೂರ್ನಿಯಲ್ಲಿ ಭಾರತಕ್ಕೆ ಇದು ಮೂರನೇ ಜಯ. ಪಂದ್ಯದ ಎಲ್ಲಾ ವಿಭಾಗಗಳನ್ನು ಭಾರತ “ಪಾರಮ್ಯ”ಮೆರೆಯಿತು. ಮೊದಲ 6 ನಿಮಿಷಗಳೊಳಗೆ ತಂಡಕ್ಕೆ 2 ‘ಪೆನಾಲ್ಟಿ ಕಾರ್ನರ್’ ಅವಕಾಶಗಳು ದೊರೆಯಿತು. ಆದರೆ ಗೋಲ್ ನಲ್ಲಿ ಪರಿವರ್ತಿಸುವಲ್ಲಿ ಸಾಧ್ಯವಾಗಲಿಲ್ಲ, ಬಳಿಕ ಜಪಾನ್ ಗೆ ದೊರೆತ ‘ಪೆನಾಲ್ಟಿ ‘ ಅವಕಾಶಗಳು ಗೋಲ್ ಆಗಲಿಲ್ಲ.
36 ನೇ ನಿಮಿಷದಲ್ಲಿ ಜಪಾನ್ ಗೆ ದೊರೆತ ಪೆನಾಲ್ಟಿ ಅವಕಾಶವನ್ನು ಭಾರತದ ಗೋಲ್-ಕೀಪರ್ “ಸೂರಜ್ ಕರ್ಕೇರಾ” ಅಡ್ಡಿ ಪಡಿಸಿದರು. ಮೊದಲ ನಿಮಿಷದಲ್ಲಿ ಸುಮಿತ್ ತಂಡದ ಮುನ್ನಡೆಯನ್ನು (4-0) ಗೆ ಹೆಚ್ಚಿಸಿದರು. ಬಳಿಕ ಹರ್ಮನ್ ಪ್ರೀತ್ ಮತ್ತು ಜಂಷೇರ ಸಿಂಗ್ ಜಪಾನ್ ಕೋಟೆಯನ್ನು ಭೇದಿಸಿದರು.
ಆಕ್ರಮಣ ಮುಂದುವರೆಸಿದ ಭಾರತಕ್ಕೆ ಸಿಕ್ಕ ಮತ್ತೊಂದು ‘ಪೆನಾಲ್ಟಿ’ ಅವಕಾಶದಲ್ಲಿ ಹಾರ್ದಿಕ್ ಸಿಂಗ್ ನೀಡಿದ ಪಾಸ್ ನಲ್ಲಿ ಹರ್ಮನ್ ಪ್ರೀತ್ ಸೊಗಸಾದ ಗೋಲು ದಾಖಲಿಸಿ ಮುನ್ನಡೆ ತಂದುಕೊಟ್ಟರು. ಜರ್ಮನ್ ಪ್ರೀತ್ ಮಾಡಿದ “ಕ್ಲೀನ್ – ಸ್ಟ್ರೈಕ್” ಭಾರತಕ್ಕೆ ಮೂರನೇ ಗೋಲು ತಂದುಕೊಟ್ಟರು.
ಉಪನಾಯಕ ಹರ್ಮನ್ ಪ್ರೀತ್ ಸಿಂಗ್ ಮತ್ತೊಮ್ಮೆ ಕೈ ಚಳಕ ತೋರಿ ಅವರು ಗಳಿಸಿದ 2 ಗೋಲುಗಳ ನೆರವಿನಿಂದ ಭಾರತ ತಂಡವು “ಏಷ್ಯಾ ಚಾಂಪಿಯನ್ಸ್ ಟ್ರೋಫಿಯ ಹಾಕಿ ಟೂರ್ನಿಯ” ಪಂದ್ಯದಲ್ಲಿ ಜಪಾನ್ ಗೆ (6-0) ಯಿಂದ ಸೋಲಿಸಿತು.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
ವಿಜಯ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯು ಭಾರತ ಮತ್ತು ರಾಜಸ್ಥಾನ ತಂಡಗಳ ನಡುವೆ ಪಂದ್ಯ ನಡೆಯಿತು. ರಾಜಸ್ಥಾನದ ವಿರುದ್ಧ ಕರ್ನಾಟಕ ಭರ್ಜರಿ ಜಯ ಸಾಧಿಸಿ ಕ್ವಾರ್ಟರ್ ಫೈನಲ್ ಹಂತಕ್ಕೆ ದಾಪುಗಾಲಿಟ್ಟಿದೆ.
ಜೈಪುರದ ಕೆ. ಎಲ್. ಸೈನಿ ಕ್ರೀಡಾಂಗಣದ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಕರ್ನಾಟಕ ಫೀಲ್ಡಿಂಗ್ ಆಯ್ಕೆಮಾಡಿಕೊಂಡಿತು. ಎದುರಾಳಿ ತಂಡಕ್ಕೆ ಬ್ಯಾಟಿಂಗ್ ಆಡಲು ಅವಕಾಶ ಮಾಡಿಕೊಟ್ಟಿತು.
ಮೊದಲಿಗೆ ಬ್ಯಾಟಿಂಗ್ ಮಾಡಿದ ರಾಜಸ್ಥಾನ ತಂಡ 41.4 ಓವರ್ ಗಳಲ್ಲಿ 199 ರನ್ ಗಳಿಸಿಕೊಂಡಿತು. 200 ರನ್ ಗಳ ಗೆಲುವಿನ ಗುರಿ ಬೆನ್ನತ್ತಿ ಆಡಿದ ಕರ್ನಾಟಕ ತಂಡ ಆರಂಭಿಕ ಬ್ಯಾಟರ್ ‘ದೇವದತ್ತ ಪಡಿಕಲ್ ‘ ತಂಡದ ಮೊತ್ತ 25 ಆಗಿದ್ದಾಗ ಔಟಾದರು. ಸಮರ್ಥ್ ಜೊತೆಗೂಡಿದ ಕೃಷ್ಣಮೂರ್ತಿ ಸಿದ್ದಾರ್ಥ್ 75 ರನ್ ಸೇರಿಸಿ, ತಂಡಕ್ಕೆ ಆಸರೆಯಾದರು. ಸಮರ್ಥ್ ಔಟಾದ ನಂತರ ಸಿದ್ದಾರ್ಥ್ ಮತ್ತು ಮನೀಷ್ ಪಾಂಡೆ ಆಟ ಕಳೆಗಟ್ಟಿತು. ಇಬ್ಬರು 104 ರನ್ ಗಳ ಜೊತೆಯಾಟವಾಗಿ ಸುಲಭ ಜಯ ತಂದುಕೊಟ್ಟರು.
5 ಸಿಕ್ಸರ್ ಮತ್ತು 9 ಬೌಂಡರಿ ಸಿಡಿಸಿ 109 ಎಸೆತಗಳಲ್ಲಿ 109 ರನ್ ಗಳಿಸಿದ ನಾಯಕ ದೀಪಕ್ ಹೂಡಾ ಏಕಾಂಗಿಯಾಗಿ ಹೋರಾಡಿದರು.
ಆತಿಥೇಯ ರಾಜಸ್ಥಾನ ತಂಡವನ್ನು 8 ವಿಕೆಟ್ ಗಳಿಂದ ಮಣಿಸಿದ ಮನೀಷ್ ಪಾಂಡೆ ನೇತೃತ್ವದ ಕರ್ನಾಟಕ ತಂಡ “ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯ” ‘ಕ್ವಾರ್ಟರ್ ಫೈನಲ್’ ಪ್ರವೇಶಿಸಿದೆ.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
ಹತ್ತು ವರ್ಷಗಳ ಹಿಂದೆ ಸತ್ತು ಹೋಗಿದ್ದಾರೆ ಎಂದು ಭಾವಿಸಿದ್ದ ನಾಯಕಿ ಹೊಸಗದ್ದೆ ಪ್ರಭ ತಮಿಳುನಾಡಿನ ತಿರುಪತ್ತೂರು ಪೊಲೀಸರಿಗೆ ಶರಣಾಗಿದ್ದಾರೆ.
ಇತ್ತೀಚಿನ ಸ್ಟೇ ಕೇರಳದಲ್ಲಿ ಬಂಧನಕ್ಕೊಳಗಾಗಿದ್ದ ಬಿ.ಜಿ. ಕೃಷ್ಣಮೂರ್ತಿ ಪತ್ನಿ ಹೊಸಗದ್ದೆ ಪ್ರಭಾ 2010 ಆಗಸ್ಟ್ 19ರಂದು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿತ್ತು. ಈಗ ತಮಿಳುನಾಡು ಪೊಲೀಸರ ಮುಂದೆ ಶರಣಾಗುವ ಮೂಲಕ ಎಲ್ಲಾ ಗೊಂದಲಗಳಿಗೆ ಹೊಸಗದ್ದೆ ಪ್ರಭಾ ತೆರೆ ಎಳೆದಿದ್ದಾರೆ.
ತೀರ್ಥಹಳ್ಳಿ ತಾಲೂಕಿನ ಆಗುಂಬೆ ಹೋಬಳಿಯ ಹೊಸ ಗದ್ದೆಯ ನಾಯಕಿ ಪ್ರಭಾ, ಸಂಧ್ಯಾ, ವಿಂದು, ನೇತ್ರಾ, ಮಧು ಎಂಬ ಹೆಸರುಗಳಿಂದ ನಕ್ಸಲ್ ಚಟುವಟಿಕೆಯಲ್ಲಿ ಗುರುತಿಸಿಕೊಂಡಿದ್ದರು. ಹೊಸಗದ್ದೆ ಪ್ರಭಾ ಏಳನೇ ತರಗತಿವರೆಗೆ ವ್ಯಾಸಂಗ ಮಾಡಿದ್ದು, ಆಗುಂಬೆಯ ಎಸ್.ವಿ.ಎಸ್ ಪ್ರೌಢಶಾಲೆ ನಂತರ ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡಿದ್ದಾರೆ. ಪ್ರಗತಿಪರ ಹೋರಾಟಗಳಲ್ಲಿ ಸಕ್ರಿಯವಾಗಿ ಟು ಕರ್ನಾಟಕ ವಿಮೋಚನಾ ರಂಗ, ಮಹಿಳಾ ಜಾಗೃತಿ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದರು. ಪಶ್ಚಿಮಘಟ್ಟ ಮತ್ತು ಕರಾವಳಿ ಸರಹದ್ದಿನಲ್ಲಿ ನಕ್ಸಲ್ ಚಟುವಟಿಕೆ ವಿಸ್ತರಿಸುವ ಮುಂಚೂಣಿಯಲ್ಲಿದ್ದರು. ಅಡಿಕೆಯ ವಿರುದ್ಧ ಹಲವು ಠಾಣೆಗಳಲ್ಲಿ ಪ್ರಕರಣ ಗಳು ದಾಖಲಾಗಿವೆ. ಪ್ರಭಾ ಅವರ ಬಗ್ಗೆ ಮಾಹಿತಿ ನೀಡಿದವರಿಗೆ ಪೊಲೀಸ್ ಇಲಾಖೆಯು 5 ಲಕ್ಷ ರೂ. ಬಹುಮಾನವನ್ನು ಘೋಷಣೆ ಮಾಡಿತ್ತು.
ಹೊಸಗದ್ದೆ ಪ್ರಭಾ ಅವರು ಪಾರ್ಶ್ವವಾಯುವಿಗೆ ತುತ್ತಾಗಿದ್ದು ಬಲಗೈ ಸ್ವಾಧೀನವನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದಾರೆ ಹಾಗೂ ಅವರ ಪತಿ ಬಿ.ಜಿ.ಕೃಷ್ಣಮೂರ್ತಿಯವರು ಪೊಲೀಸರಿಗೆ ಶರಣಾದ ಬೆನ್ನಲ್ಲೇ ಇದರಿಂದ ಬೇಸತ್ತು ಪೊಲೀಸರ ಮುಂದೆ ಶರಣಾಗುವ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
ಅಪ್ರತಿಮಸ್ವಾತಂತ್ರ್ಯ ಹೋರಾಟಗಾರ ಧೋಂಡಿಯಾವಾಘ್ ಅಶ್ವದಳದ ಸಿಪಾಯಿಯಾಗಿ ಕೆಲಸಕ್ಕೆ ಸೇರಿ ಎತ್ತರಕ್ಕೆ ಬೆಳೆದು ಬ್ರಿಟೀಷರ ವಿರುದ್ಧ ಪೊಲೀಸ್ ಪಶುದ್ಧ ರಣಕಹಳೆ ಮೊಳಗಿಸಿದ್ದು ಎಲ್ಲರಿಗೂ ದಿವ್ಯ ಪ್ರೇರಣೆ ಎಂದು ಖ್ಯಾತ ಸಾಹಿತಿ ಹಾಗೂ ಧೋಂಡಿಯಾವಾಘ್ ಜಾಗೃತಿ ಸಮಿತಿ ರಾಜ್ಯಾಧ್ಯಕ್ಷ ಪದ್ಮಶ್ರೀ ಪುರಸ್ಕೃತ ಡಾ. ದೊಡ್ಡರಂಗೇಗೌಡ ತಿಳಿಸಿದರು.
ಶ್ರೀರಂಗಪಟ್ಟಣದ ರಂಗನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ಧೋಂಡಿಯಾವಾಘ್ ಜಾಗೃತಿ ಸಮಿತಿ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ನಿಮಿತ್ತ ಏರ್ಪಡಿಸಿದ್ದ ರಾಜ್ಯ ಮಟ್ಟದ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,ಇವತ್ತು ಯಾವುದೇ ಸಂಶೋಧನೆಗಳನ್ನು ಮಾಡಿದರೂ ಸಂಶೋಧನೆಗಳು ಮಸುಕಾಗಿರುತ್ತವೆ. ತೆರೆಗೆ ಸರಿದಿರುತ್ತವೆ. ಅದರ ಬೆಳಕನ್ನು ಚೆಲ್ಲಿ ಸತ್ಯದ ಅನ್ವೇಷಣೆಗೆ ತೊಡಗಿಸಿಕೊಂಡು ವಾಸ್ತವ ದರ್ಶನ ಮಾಡಿದಾಗ ಸಂಶೋಧನೆಗಳು ಹೊರ ಬರುತ್ತವೆ.ಈ ನಿಟ್ಟಿನಲ್ಲಿ ಇತಿಹಾಸಕಾರರು ಆಸಕ್ತಿ ತೋರದೆ ಪೂರ್ವಾಗ್ರಪೀಡಿತರಾಗಿ ಧೋಂಡಿಯಾವಾಘ್ ಅವರನ್ನು ಸ್ಮರಿಸದೇ ಇರುವ ಕುಟಿಲ ತಂತ್ರಕ್ಕೆ ಒಳಗಾದಂತೆ ಕಾಣುತ್ತಿದ್ದಾರೆ ಎಂದರು.
ಆದರ್ಶದ ಹಾದಿಯಲ್ಲಿ ಯುವಜನರನ್ನು ಕರೆದುಕೊಂಡು ಹೋಗಬೇಕಾಗಿದೆ.ಈ ನಿಟ್ಟಿನಲ್ಲಿ ಯುವಕರಿಂದ ಜಾಗೃತಿ ಆಗಬೇಕು. ಭಾರತೀಯರಿಂದ ಸ್ವಂತದ್ದು ಯಾವುದೂ ಇಲ್ಲ.ಪಾಶ್ಚಿಮಾತ್ಯ ದೇಶಗಳ ಕಡೆಗೆ ಅಭಿಮುಖವಾಗುತ್ತಿದ್ದೇವೆ ಎಂದರು.
ಇತ್ತೀಚಿನ ದಿನಗಳಲ್ಲಿ ಮಕ್ಕಳು ಸಂಪೂರ್ಣವಾಗಿ ಹಾದಿ ತಪ್ಪುತ್ತಿದ್ದಾರೆ.ಮೊಬೈಲ್‌ಗೆ ಶರಣಾಗಿ ಕಲಿಯಬಾರದ್ದನ್ನು ಕಲಿತು ದುರ್ನಡತೆಯ ದಿನಗಳಲ್ಲಿ ನಾವು ಇದ್ದೇವೆ. ಭಾರತೀಯರ ಪುನರುತ್ಥಾನ ಚಾರಿತ್ರ್ಯವಾಗದೇ ಹೋದರೆ ಜಗತ್ತಿಗೆ ಭಾರತ ಮಾದರಿಯಾಗುವುದು ಹೇಗೆ, ಈ ನಿಟ್ಟಿನಲ್ಲಿ ಕೈಂಕರ‍್ಯಗಳನ್ನು ಮಾಡುವ ಮೂಲಕ ಎಲ್ಲರೂ ಒಳ್ಳೆಯ ಹಾದಿಯಲ್ಲಿ ಸಾಗಬೇಕು ಎಂದು ಹೇಳಿದರು. ಸ್ವಾಭಿಮಾನಕ್ಕೆ ಮತ್ತೊಂದು ಹೆಸರು ಧೋಂಡಿಯಾವಾಘ್. ಈತ ಎಲ್ಲೂ ಕೂಡ ಶರಣಾಗತನಾಗಿಲ್ಲ. ತನ್ನ ವೀರಪರಾಕ್ರಮಗಳನ್ನು ಪಣಕ್ಕಿಟ್ಟು ಬ್ರಿಟೀಷರ ವಿರುದ್ಧ ಹೋರಾಟ ಮಾಡಿದ ಶೌರ‍್ಯ ಸಾಹಸಿ. ೫ ವರ್ಷಗಳ ಕಾಲ ಸೆರೆಮನೆವಾಸ ಅನುಭವಿಸಿ ತನ್ನನ್ನು ತಾನು ತೊಡಗಿಸಿಕೊಂಡ ಐತಿಹಾಸಿಕ ಮಾಹಿತಿಗಳನ್ನು ಜಾಗೃತಿ ಸಮಿತಿ ಕ್ರೋಢೀಕರಣ ಮಾಡಿ ಕರಾರುವಕ್ಕಾಗಿ ಎಲ್ಲ ಕಡೆ ತಿಳಿಸಬೇಕು. ಈ ನಿಟ್ಟಿನಲ್ಲಿ ಜಾಗೃತಿ ಸಮಿತಿ ಧೀಕ್ಷೆ ಪಡೆದು ಯುವಜನರ ಪಡೆ ಕಟ್ಟಬೇಕು ಎಂದು ಸಲಹೆ ನೀಡಿದರು.
ಶಾಲಾ ಕಾಲೇಜುಗಳಲ್ಲಿ ಧೋಂಡಿಯಾವಾಘ್ ಚರಿತ್ರೆಯನ್ನು ತಿಳಿಸಬೇಕು. ಇಂತಹ ಸಮಾರಂಭಗಳಲ್ಲಿ ಧೋಂಡಿಯಾವಾಘ್ ಇತಿಹಾಸ ಸಾರುವ ಕೆಲಸದ ಜೊತೆಗೆ ಚಾರಿತ್ರ್ಯ ನೀತಿ ಪಾಠ ಹೇಳಿಕೊಡುವ ಸಾಹಿತ್ಯದ ಕೆಲಸ ಆಗಬೇಕು ಎಂದರು.
ಶ್ರೀರಂಗಪಟ್ಟಣದ ರಹಸ್ಯ ನೆಲಮಾಳಿಗೆಯಲ್ಲಿ ಐದು ವರ್ಷಗಳ ಕಾಲ ಬಂಧಿತನಾಗಿ ಸೆರೆಮನೆವಾಸ ಮಾಡಿರುವ ಆ ಸೆರೆಮನೆಗೆ ಧೋಂಡಿಯಾವಾಘ್ ಸೆರೆಮನೆ ಎಂದು ಹೆಸರಿಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.
ನಿವೃತ್ತ ತಹಸೀಲ್ದಾರ್ ಹಾಗೂ ಜಾಗೃತ ಸಮಿತಿ ಸಂಚಾಲಕ ಕ.ವೆಂ. ನಾಗರಾಜು ಮಾತನಾಡಿ, ೧೮೫೭ರ ಪ್ರಥಮ ಸ್ವಾತಂತ್ರ್ಯ ಹೋರಾಟಕ್ಕೆ ೬೦ ವರ್ಷಗಳ ಮೊದಲೇ ಕರುನಾಡಿನಲ್ಲಿ ಕ್ರಾಂತಿಯ ಕಿಡಿ ಹಚ್ಚಿದವರು ಧೋಂಡಿಯಾ. ಚನ್ನಗಿರಿಯ ಸಾಮಾನ್ಯ ಮರಾಠ ಕುಟುಂಬದಲ್ಲಿ ೧೭೪೫ರ ಸುಮಾರಿನಲ್ಲಿ ಜನಿಸಿದ ದೋಂಡಿಯಾನ ಬಂಡಾಯ ಒಂದು ಸಂಸ್ಥಾನಕ್ಕೆ, ಸೀಮೆಗೆ ಅಥವಾ ಸಮುದಾಯಕ್ಕೆ ಸೀಮಿತವಾಗಿರಲಿಲ್ಲ. ರಾಷ್ಟ್ರೀಯ ಜನನಾಯಕನಾಗಿ, ಸಂಘಟಕನಾಗಿ ಬೆಳೆದು ಬಂದ ರೀತಿ ಅನನ್ಯ ಎಂದು ಹೇಳಿದರು.
ಈ ವೀರನ ಹೆಸರನ್ನೇ ನಾಡಿನ ಬಹುತೇಕರು ಕೇಳಿಲ್ಲ. ಇದಕ್ಕೆ ಇಂದಿನ ಶಿಕ್ಷಣ ಪದ್ಧತಿ. ಆಡಳಿತದಲ್ಲಿರುವವವರ ನಿರ್ಲಕ್ಷ್ಯ ಇತಿಹಾಸಕಾರರು ಅವನ ಸಾಮಾನ್ಯ ಹಿನ್ನಲೆ, ಇತ್ಯಾದಿಗಳನ್ನು ಕಾರಣವಾಗಿ ಕೊಡಬಹುದು. ಇತಿಹಾಸದಲ್ಲಿ ಮುಚ್ಚಿಹಾಕಲ್ಪಟ್ಟ ಅವನಂತಹ ಸಾಮಾನ್ಯ ವೀರರ ಕಥೆಗಳನ್ನು ಅಧ್ಯಯನ ಸಂಶೋಧನೆಯಿಂದ ಹೊರತಂದು ಮಕ್ಕಳಿಗೆ ಹೇಳಿಕೊಡಬೇಕಾಗಿದೆ ಎಂದು ಸಲಹೆ ನೀಡಿದರು.
ಮೈಸೂರು ವಿ.ವಿ. ಸಿಂಡಿಕೇಟ್ ಸದಸ್ಯ ಹಾಗೂ ಧೋಂಡಿಯಾವಾಘ್ ಸಮಿತಿಯ ಪ್ರಧಾನ ಕಾರ‍್ಯದರ್ಶಿ ಈ.ಸಿ. ನಿಂಗರಾಜ್ ಗೌಡ ಮಾತನಾಡಿ, ೧೮ನೇ ಶತಮಾನದ ಅಂತ್ಯದ ವೇಳೆ ಆಗಿನ ಮೈಸೂರು ಪ್ರಾಂತ್ಯ ಮತ್ತು ಸುತ್ತಮುತ್ತ ಧೋಂಡಿಯಾವಾಘ್ ಅಶ್ವದಳದ ನಾಯಕನಾಗಿ ಕೆಲವು ಪ್ರದಶಗಳ ಒಡೆಯನಾಗಿ ಬ್ರಿಟೀಷರ ವಿರುದ್ಧ ಮೈಸೂರು ಪ್ರಾಂತ್ಯದಲ್ಲಿ ಹೋರಾಟ ಮಾಡಿದ ಒಬ್ಬ ಸಾಹಸಿ ಎಂದು ಹೇಳಿದರು. ಧೋಂಡಿಯಾವಾಘ್ ಅವರ ವಿಚಾರಗಳನ್ನು ಪಠ್ಯ ಪುಸ್ತಕದಲ್ಲಿ ತಿಳಿಸುವ ಕೆಲಸ ಆಗಬೇಕು.ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಅವರ ವಿಚಾರಧಾರೆಗಳನ್ನು ತಿಳಿಸುವ ಕೆಲಸ ಮಾಡಿಲ್ಲ. ಈ ನಿಟ್ಟಿನಲ್ಲಿ ಅವರ ವಿಚಾರಗಳನ್ನು ರಾಜ್ಯ ಮತ್ತು ವಿಶ್ವ, ದೇಶಕ್ಕೆ ತಲುಪಿಸುವ ಕೆಲಸ ಆಗಬೇಕು. ಕೆಳದಿಯ ಸಂಸ್ಥಾನದಲ್ಲಿ ಕರಣಿಕರಿಗೆ ಸಹಾಯಕನಾಗಿ ವೃತ್ತಿ ಆರಂಭಿಸಿದ ಧೋಂಡಿಯಾವಾಘ್, ಮೈಸೂರಿನ ಹೈದರಾಲಿ ಸೈನ್ಯದಲ್ಲಿ ಸೈನಿಕನಾಗಿ ಸೇರಿದ ಮೂರನೇ ಮೈಸೂರು ಯುದ್ಧದ ನಂತರ ಈ ಸೈನ್ಯವನ್ನು ತೊರೆದು ಸ್ವತಂತ್ರವಾಗಿ ಸೈನ್ಯ ಕಟ್ಟಿ ಹರಿಹರ, ಸವಣೂರು ಮುಂತಾದ ಊರುಗಳನ್ನು ಗೆದ್ದು ತನ್ನ ಪ್ರಭಾವವನ್ನು ವಿಸ್ತರಿಸಲು ಪ್ರಯತ್ನಿಸಿದ. ಮರಾಠರೊಂದಿಗೆ ಸೋತ ಕಾರಣ ಮತ್ತೆ ಟಿಪ್ಪುವನ್ನು ಆಶ್ರಯಿಸಲು ನಿಶ್ಚಯಿಸಿದ. ಮತಾಂತರ ಹೊಂದಲು ಹೇಳಿ ಅವನನ್ನು ಎದುರಿಸಿದ್ದರು.ಆದರೆ ಮತಾಂತರ ಹೊಂದದ ಕಾರಣ ಟಿಪ್ಪು ಧೋಂಡಿಯಾವಾಘ್‌ನನ್ನು ಐದು ವರ್ಷಗಳ ಕಾಲ ಬಂಧನದಲ್ಲಿರಿಸಿದ್ದ ಎಂದು ವಿವರಿಸಿದರು.
ನಾಲ್ಕನೇ ಮೈಸೂರು ಯುದ್ಧದಲ್ಲಿ ಟಿಪ್ಪು ಸೋತ ನಂತರ ಶ್ರೀರಂಗಪಟ್ಟಣದಿಂದ ತಪ್ಪಿಸಿಕೊಂಡು ಮತ್ತೆ ತನ್ನ ಪ್ರಭುತ್ವವನ್ನು ಸ್ಥಾಪಿಸಲು ಪ್ರಯತ್ನಿಸಿದ. ಕಡೆಗೆ ಬ್ರಿಟೀಷರೊಂದಿಗೆ ಹೋರಾಟ ಮಾಡಿ ವೀರ ಮರಣವನ್ನಪ್ಪಿದ ಎಂದು ಹೇಳಿದರು.
ಈ ಸಮಾರಂಭ ಉದ್ಘಾಟಿಸಿ ಮಾತನಾಡಿದ ಶ್ರೀರಂಗಪಟ್ಟಣದ ಶಾಶ್ವತಿ ಕ್ರಿಯಾ ಸಮಿತಿ ಅಧ್ಯಕ್ಷ ಡಾ. ಬಾನುಪ್ರಕಾಶ್‌ಶರ್ಮಾ ಮಾತನಾಡಿ, ಧೋಂಡಿಯಾವಾಘ್ ಶ್ರೀರಂಗಪಟ್ಟಘಿಣದಲ್ಲೇ ಸೆರೆವಾಸ ಅನುಭವಿಸಿರುವುದು ಶ್ರೀರಂಗಪಟ್ಟಣದ ಜನರಿಗೇ ತಿಳಿದಿಲ್ಲ.ಇವತ್ತು ಶ್ರೀರಂಗಪಟ್ಟಣದಲ್ಲೇ ವಾಸವಿದ್ದರೂ ಆ ಹೆಸರನ್ನು ಇನ್ನೂ ತಿಳಿದುಕೊಳ್ಳಲಾಗಿಲ್ಲ.ಈ ನಿಟ್ಟಿನಲ್ಲಿ ಮಕ್ಕಳಿಗೆ ಚರಿತ್ರೆಯಲ್ಲಿ ಧೋಂಡಿಯಾವಾಘ್ ವಿಚಾರಗಳನ್ನು ತಿಳಿಸಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ಚನ್ನಗಿರಿಯಿಂದ ಬಂದು ಇಲ್ಲಿ ಬ್ರಿಟೀಷರೊಂದಿಗೆ ಹೋರಾಟ ಮಾಡಿದ ಧೋಂಡಿಯಾವಾಘ್ ಹೆಸರನ್ನು ಶಾಲೆಗಳಲ್ಲಿ ವಿಚಾರ ಸಂಕಿರಣ, ರಸಪ್ರಶ್ನೆ ಸೇರಿದಂತೆ ವಿವಿಧ ಕಾರ‍್ಯಕ್ರಮಗಳನ್ನು ರೂಪಿಸಿ ಅವರ ಹೆಸರು ಚಿರಸ್ತಾಯಿಯಾಗಿರುವಂತೆ ಮಾಡಬೇಕು.ಪಟ್ಟಣದಲ್ಲಿ ತಂಗುದಾಣವನ್ನು ನಿರ್ಮಿಸುತ್ತಿದ್ದು, ಅದಕ್ಕೆ ಧೋಂಡಿಯಾವಾಘ್ ಅವರ ಹೆಸರಿಡಲು ನಾನೇ ಜವಾಬ್ದಾರಿ ತೆಗೆದುಕೊಳ್ಳುತ್ತೇನೆ ಎಂದು ಭರವಸೆ ನೀಡಿದರು.
ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಮೈಸೂರು ಅಧ್ಯಯನದ ನಿರ್ದೇಶಕ ಪ್ರೊ.ಎಂ.ಜಿ.ಮಂಜುನಾಥ್, ಅಖಿಲ ಭಾರತ ಸಾಹಿತ್ಯ ಪರಿಷತ್ ಅಧ್ಯಕ್ಷ ಮತ್ತು ಶಿವಮೊಗ್ಗ ಕೆ-ಲೈವ್ ಮೀಡಿಯಾ ಪ್ರಧಾನ ಸಂಪಾದಕ ಡಾ. ಸುಧೀಂದ್ರ ಅವರು ಧೋಂಡಿಯಾವಾಘ್ ಅದ್ಭುತ ಹೋರಾಟಗಾರ ಮತ್ತು ಜನನಾಯಕ ಕುರಿತು ವಿಚಾರ ಮಂಡಿಸಿದರು. ಸಾಮಾಜಿಕ ಕಾರ‍್ಯಕರ್ತ ಅಣ್ಣೋಜಿರಾವ್ ಪವಾರ್ ಅವರು ಧೋಂಡಿಯಾವಾಘ್‌ನ ಬಲವಂತದ ಮತಾಂತರ ಮತ್ತು ಸೆರೆವಾಸ ಕುರಿತು ವಿಷಯ ಮಂಡಿಸಿದರೆ, ಶಿವಮೊಗ್ಗದ ಸಾಮಾಜಿಕ ಕಾರ‍್ಯಕರ್ತೆ ಶ್ರೀರಂಜನಿ ದತ್ರಾತ್ರಿ ಶ್ರೀರಂಗಪಟ್ಟಣದ ನೆಲಮಾಳಿಗೆ ಸೆರೆಮನೆಯ ಕಥೆ ಕುರಿತು ವಿಚಾರ ಮಂಡಿಸಿದರು.
ಸಂಜೆ ನಡೆದ ಸಂಭ್ರಮದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯೆ ಡಾ.ಎಸ್.ಆರ್. ಲೀಲಾ ಅವರು ಸಮಾರೋಪ ನುಡಿಗಳನ್ನಾಡಿದರು. ಶಿಕ್ಷಣ ಇಲಾಖೆಯನಿವೃತ್ತ ಜಂಟಿ ನಿರ್ದೇಶಕ ಡಾ.ತಿರುಮಲರಾವ್, ವಿಜ್ಞಾನ ಲೇಖಕ ಸಾತನೂರು ದೇವರಾಜ್ ಸೇರಿದಂತೆ ಹಲವರು ಸಮಾರಂಭದಲ್ಲಿ ಭಾಗವಹಿಸಿದ್ದರು.
ಇಡೀ ಕಾರ್ಯಕ್ರಮವನ್ನು ಅತ್ಯಂತ ಕಡಿಮೆ ಅವಧಿಯಲ್ಲಿ ವ್ಯವಸ್ಥೆಮಾಡಿ ಅಂದಗಾಣಿಸಿದ ಸಂಘಟಕ,ಮೈಸೂರುವಿವಿ ಸೆನೆಟ್ ಸದಸ್ಯ ಡಾ.ಇ.ಸಿ.ನಿಂಗರಾಜೇಗೌಡರು ಅಭಿನಂದನಾರ್ಹರು.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
ಕೇಂದ್ರ ತನಿಖಾ ಸಂಸ್ಥೆ (ಸಿಬಿಐ)ಗೆ ಹೆಚ್ಚಿನ ಅಧಿಕಾರ ನೀಡಲು ಸಂಸದೀಯ ಸಮಿತಿ ಶಿಫಾರಸು ಮಾಡಿದೆ. ಸಿಬಿಐ ನಲ್ಲಿ ಸದ್ಯ 1000 ಹುದ್ದೆಗಳು ಖಾಲಿ ಇವೆ. ಅವುಗಳನ್ನು ಭರ್ತಿ ಮಾಡಿಕೊಳ್ಳುವ ಅಧಿಕಾರ ಸಂಸ್ಥೆಗೆ ಇಲ್ಲವಾಗಿದೆ. ಆ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಏನು ಕ್ರಮ ಕೈಗೊಳ್ಳಲಾಗಿದೆ? ಯಾವಾಗ ಭರ್ತಿ ಪ್ರಕ್ರಿಯೆ ಶುರು ಮಾಡುತ್ತೀರಿ ಎನ್ನುವ ಬಗ್ಗೆ ವಿವರ ಕೊಡಿ ಎಂದು ಸಿಬಿಐ ಗೆ ಸಂಸದೀಯ ಸಮಿತಿ ಕೇಳಿದೆ. ಇನ್ನೊಂದು ಕೇಂದ್ರ ತನಿಖಾ ಸಂಸ್ಥೆ ಸಿವಿಸಿ ಕೂಡ ಹಣಕಾಸಿನ ಮುಗ್ಗಟ್ಟು ಎದುರಿಸುತ್ತಿದ್ದು, ಅದರ ಬಲವರ್ಧನೆಗೆ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ. ಈಗ ಇರುವ ಕಾನೂನಿನ ಪ್ರಕಾರ ಅದರ ಅಧಿಕಾರ ವ್ಯಾಪ್ತಿ ಅಸ್ಪಷ್ಟವಾಗಿದೆ. ಇದರಿಂದ ತನಿಖಾ ಕ್ಷಮತೆ ಕುಗ್ಗಿದೆ. ಹೊಸ ಕಾನೂನಿನ ಮೂಲಕ ಸಿಬಿಐಗೆ ಹೆಚ್ಚಿನ ಬಲ ತುಂಬುವ ಅಗತ್ಯ ಇದೆ ಎಂದು ಸಮಿತಿ ವರದಿಯಲ್ಲಿ ತಿಳಿಸಿದೆ.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
26 ತಿಂಗಳ ಬಳಿಕ ಚಾರ್ಮುಡಿ ಘಾಟಿನಲ್ಲಿ 24ಗಂಟೆಯೂ ಘನ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಗುಂಬಿ ‘ಬಿ’ ವರ್ಗದ ಭಾರೀ ವಾಹನಗಳ ಸಂಚಾರದ ನಿಷೇಧ 24 ಗಂಟೆಗಳ ಕಾಲವೂ ಮುಂದುವರೆದಿದೆ.
2019 ಸೆಪ್ಟೆಂಬರ್ ನ ಬಿದ್ದ ಭಾರಿ ಮಳೆ ಹಾಗೂ ಗುಡ್ಡ ಕುಸಿತದಿಂದಾಗಿ ಚಾರ್ಮುಡಿ ಘಾಟಿನಲ್ಲಿ 24ಗಂಟೆಯೂ ಘನ ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗಿತ್ತು.
ಚಾರ್ಮುಡಿ ಘಾಟಿಯಲ್ಲಿ ತಿರುವುಗಳನ್ನು ಅಗಲಗೊಳಿಸಿರುವುದರಿಂದ ಸಂಚಾರ ದಟ್ಟಣೆ ನಿವಾರಣೆಯಾಗಿದೆ. ಈ ನಿಟ್ಟಿನಲ್ಲಿ ರಾಷ್ಟ್ರೀಯ ಹೆದ್ದಾರಿ ಇಲಾಖೆ ಘಾಟಿ ಪ್ರದೇಶದಲ್ಲಿ ದಿನದ 24 ಗಂಟೆಯೂ ಸನ್ನದ್ಧ ಸ್ಥಿತಿಯಲ್ಲಿ ವಾಹನಗಳ ಸಂಚಾರಕ್ಕೆ ಸಿದ್ಧವಾಗಿದೆ.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
ಕಳೆದ ಮೂರು ದಿನದಿಂದ ಸಂಜೆಯಾದರೆ ತಣ್ಣನೆ ಚಳಿ ಶುರುವಾಗುತ್ತಿದೆ. ರಾತ್ರಿ ವೇಳೆಗೆ ಕನಿಷ್ಠ ತಾಪಮಾನ 15 ಡಿಗ್ರಿ ಸೆಂಟಿಗ್ರೇಡ್ ಗೆ ಇಳಿದಿದೆ. ಮುಂಜಾನೆ ಹೊತ್ತಿಗೆ ಮೈ ಕೊರೆಯುವ ಚಳಿ ಆವರಿಸುತ್ತಿದೆ. ಮುಂದಿನ ಎರಡು ಮೂರು ದಿನ ತಾಪಮಾನದಲ್ಲಿ ಇನ್ನಷ್ಟು ಕುಸಿತ ಆಗಲಿದ್ದು ಚಳಿಯು ಏರುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಚಳಿಯನ್ನು ಧ್ಯಾನಿಸುವ ಜೀವಸಂಕುಲದ ಪ್ರಭೇದಗಳಲ್ಲಿ ಚಳಿಯ ಉತ್ಸಾಹ ಕಂಡುಬರುತ್ತಿದೆ. ಚಳಿ ತಿಂಗಳ ಅಭಿಮಾನಿ ಕಲ್ಲಂಗಡಿ, ಇಬ್ಬನಿ ಹೀರಿ ಬೆಳೆವ ಹುರುಳಿ ಮತ್ತು ಕಡಲೆ ಗಿಡಗಳು ಚಳಿಯ ಮೋಹಕ್ಕೆ ಬಿದ್ದಿರುವುದು ರೈತರಲ್ಲಿ ಹರ್ಷದ ಹೊನಲು ಹರಿಸಿದೆ. ಈ ವರ್ಷ ನವೆಂಬರ್ ಕೊನೆಯವರೆಗೂ ಮಳೆ ಸುರಿಯಿತು. ಡಿಸೆಂಬರ್ ತಿಂಗಳು ಆರಂಭವಾದರೂ ಮೊದಲೆರಡು ವಾರ ಮೋಡ ಮುಸುಕಿದ ವಾತಾವರಣದಿಂದ ಚಳಿ ಅನುಭವಕ್ಕೆ ಬರಲಿಲ್ಲ. ಹಾಗಾಗಿ ಒಂದುವರೆ ತಿಂಗಳು ತಡವಾಗಿ ಚಳಿ ಕಾಲೂರುತ್ತಿದ್ದು, ಮೂರು ನಾಲ್ಕು ದಿನಗಳಿಂದ ಚಳಿ ಅನುಭವಕ್ಕೆ ಬರುತ್ತಿದೆ. ಎರಡು ದಿನ ಕನಿಷ್ಠ ತಾಪಮಾನ 14ಡಿಗ್ರಿ ಗೆ ಇಳಿಯಲಿದೆ. ಇನ್ನೊಂದೆರಡು ಡಿಗ್ರಿ ತಾಪಮಾನ ಇಳಿದರೆ ದಾಖಲೆ ಚಳಿಯೂ ಕಾಣಿಸಿಕೊಳ್ಳಬಹುದು ಎಂಬಂತ ವಾತಾವರಣ ಕಂಡುಬರುತ್ತಿದೆ.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
ಭವಿಷ್ಯದ ವಿದ್ಯುತ್ ಕೊರತೆ ನಿವಾರಿಸಲು ಸೌರಶಕ್ತಿಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ರಾಜ್ಯ ಸರ್ಕಾರ ವಿನೂತನ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಆದರೆ ರಾಜ್ಯದಲ್ಲಿನ ಗ್ರಾಮಪಂಚಾಯ್ತಿಗಳು ಕಟ್ಟಡಗಳ ಛಾವಣಿಗಳಲ್ಲಿ ಸೌರ ವಿದ್ಯುತ್ ಉತ್ಪಾದಿಸಲು ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿವೆ. ಇದರಿಂದ ಸರಕಾರದ ಮೂಲ ಆಶಯ ಈಡೇರಿದಂತಾಗಿದೆ. ಗ್ರಾಮ ಪಂಚಾಯಿತಿ ಕಟ್ಟಡಗಳ ಛಾವಣಿಯಲ್ಲಿ ಸೌರ ಘಟಕ ಗಳನ್ನು ಅಳವಡಿಸಿ ವಿದ್ಯುತ್ ಉತ್ಪಾದಿಸಲು ಕ್ರಮ ಕೈಗೊಳ್ಳುವಂತೆ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.ಅದಾಗ್ಯೂ, ವಿದ್ಯುತ್ ಉತ್ಪಾದನೆಗೆ ಗ್ರಾ.ಪಂ. ಅಧಿಕಾರಿಗಳು ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರ್ ಡಿಪಿಆರ್ ನಿರ್ದೇಶಕರಾದ ಕೆ. ರೇವಣ್ಣಪ್ಪ ನವರು ತಿಳಿಸಿದ್ದಾರೆ.
ವಿದ್ಯುತ್ ಸಮಸ್ಯೆ ನಿವಾರಿಸುವ ಸಲುವಾಗಿ ರಾಜ್ಯದ ಎಲ್ಲಾ ಗ್ರಾಮಪಂಚಾಯಿತಿಗಳಲ್ಲೂ ಸೌರ ವಿದ್ಯುತ್ ಉತ್ಪಾದನೆಯನ್ನು ಕಡ್ಡಾಯಗೊಳಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು 2020ರ ಡಿಸೆಂಬರ್ ನಲ್ಲಿ ಆದೇಶ ಹೊರಡಿಸಿದೆ. ಅನಂತರವೂ ಹಲವು ಸಲ ಸೌರ ವಿದ್ಯುತ್ ಘಟಕಗಳನ್ನು ಅಳವಡಿಸುವಂತೆ ನಿರ್ದೇಶನ ನೀಡಿದೆ. ಸೌರ ವಿದ್ಯುತ್ ಉತ್ಪಾದನೆಗೆ ಅನುದಾನದ, ಆರ್ಥಿಕ ಸಂಪನ್ಮೂಲದ ಕೊರತೆಯೂ ಇಲ್ಲ. ಅದಾಗ್ಯೂ, ಸೌರ ವಿದ್ಯುತ್ ಉತ್ಪಾದನೆ ಯೋಜನೆಯು ಕಾರ್ಯರೂಪಕ್ಕೆ ಬಂದಿಲ್ಲ. ಗ್ರಾಮ್ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರು ಹಾಗೂ ಅಧಿಕಾರಿಗಳ ಉದಾಸೀನತೆಯಿಂದ ಯೋಜನೆ ಸಾಕಾರಗೊಂಡಿಲ್ಲ ಎಂದು ತಿಳಿದುಬಂದಿದೆ. ಸೌರ ವಿದ್ಯುತ್ ಘಟಕಗಳನ್ನು ಅಳವಡಿಸಲು ಟೆಂಡರ್ ಪಡೆದ ಕಂಪನಿಗಳೇ ಸ್ಥಳೀಯ ವಿದ್ಯುತ್ ಸರಬರಾಜು ಕಂಪನಿಯ ಗ್ರಿಡ್ ಗಳ ಜೊತೆ ಸಂಪರ್ಕ ಕಲ್ಪಿಸುವಂತೆ ಆದೇಶಿಸಲಾಗಿದೆ. ಗ್ರಿಡ್ ಸಂಪರ್ಕದ ಅಂತರದ ಕುರಿತು ಸ್ಪಷ್ಟತೆ ಇಲ್ಲದಿರುವುದರಿಂದ ಕಂಪನಿಗಳ ಮೇಲೆ ಹೆಚ್ಚಿನ ಹೊರೆ ಬೀಳುತ್ತಿದೆ ಎಂಬ ದೂರಿದೆ. ಹೀಗಾಗಿ , ಟೆಂಡರ್ ಪಡೆದ ಕಂಪನಿಗಳು ಹಿಂದೇಟು ಹಾಕುತ್ತಿವೆ. ಈ ಹಿನ್ನೆಲೆಯಲ್ಲಿ ಸೌರ ವಿದ್ಯುತ್ ಉತ್ಪಾದನೆಗೆ ಆರಂಭದಲ್ಲೇ ವಿಘ್ನ ಎದುರಾಗಿದೆ.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.