Tuesday, February 10, 2026
Tuesday, February 10, 2026
Home Blog Page 1816

ಯುಕೆಯಲ್ಲಿ ಹೆಚ್ಚಿದ ಓಮಿಕ್ರಾನ್ ಪ್ರಕರಣಗಳು

0

ಯುಕೆಯಲ್ಲಿ ಇದುವರೆಗೆ ಅತಿ ಹೆಚ್ಚು ದೈನಂದಿನ ಉಲ್ಬಣದಲ್ಲಿ 10,000 ಕ್ಕೂ ಹೆಚ್ಚು ಹೊಸ ಓಮಿಕ್ರಾನ್ ಪ್ರಕರಣಗಳು ವರದಿಯಾಗಿವೆ. ಒಟ್ಟಾರೆ ಕೋವಿಡ್ -19 ಸೋಂಕುಗಳ ಸಂಖ್ಯೆ 90,000 ಕ್ಕಿಂತ ಹೆಚ್ಚಾಗಿವೆ. ಯುಕೆ ಆರೋಗ್ಯ ಭದ್ರತಾ ಏಜೆನ್ಸಿಯು ಶನಿವಾರದಂದು ಹೊಸ ರೂಪಾಂತರಿಯ ಹೆಚ್ಚುವರಿ 10,056 ಪ್ರಕರಣಗಳು ದೃಢಪಟ್ಟಿವೆ ಎಂದು ತಿಳಿಸಿದೆ.
ಶುಕ್ರವಾರಕ್ಕೆ ಹೊಲಿಸಿದರೆ ಮೂರು ಪಟ್ಟು ಹೆಚ್ಚು ಪ್ರಕರಣಗಳ ಸಂಖ್ಯೆ 24,968 ಕ್ಕೆ ತಲುಪಿದೆ. ಈ ಸಾಂಕ್ರಾಮಿಕ ರೋಗವನ್ನು ನಿಭಾಯಿಸುವಲ್ಲಿ ಸರ್ಕಾರವು ಹಿಂದೆ ಬಿದ್ದಿದೆ. ಅಗತ್ಯವಿರುವುದನ್ನು ನಾವು ಮಾಡುತ್ತೇವೆ, ಆದರೆ, ಓಮಿಕ್ರಾನ್ ಡೇಟಾದಿಂದ ಬೆಂಬಲಿತವಾಗಿದೆ. ಓಮಿಕ್ರಾನ್ ಉಲ್ಬಣದಿಂದಾಗಿ ಸರ್ಕಾರವು ಬಿಗಿಯಾದ ಲಾಕ್‌ಡೌನ್ ನಿರ್ಬಂಧಗಳನ್ನು ಯೋಜಿಸುತ್ತಿದೆ ಎಂಬ ವರದಿಗಳನ್ನು ಉಲ್ಲೇಖಿಸಿ ಯುಕೆ ಆರೋಗ್ಯ ಕಾರ್ಯದರ್ಶಿ ಸಾಜಿದ್ ವಾಜಿದ್ ಹೇಳಿದ್ದಾರೆ. ನಾವು ,ನಮ್ಮ ವಿಜ್ಞಾನಿಗಳು ಮತ್ತು ನಮ್ಮ ಅತ್ಯುತ್ತಮ ಸಲಹೆಗಾರರೊಂದಿಗೆ ಸುಮಾರು ಒಂದು ಗಂಟೆಯ ಕಾಲ ಚರ್ಚೆ ನಡೆಸಿದೆವು. ನಾವು ಬಹಳ ಎಚ್ಚರಿಕೆಯಿಂದ ಮೇಲ್ವಿಚಾರಣೆ ಮಾಡುತ್ತೇವೆ ಮತ್ತು ಪರಿಸ್ಥಿತಿಯನ್ನು ಪರಿಶೀಲಿಸುತ್ತೇವೆ ಎಂದು ಅವರು ವಿವರಿಸಿದರು. ನಿದರ್ಶನವು ಇತ್ತೀಚಿನ ಕೋವಿಡ್ -19 ವಿವರಗಳ ಕುರಿತು ಬ್ರೀಫಿಂಗ್ ಅನ್ನು ಸ್ವೀಕರಿಸಿದೆ ಮತ್ತು ಕ್ಯಾಬಿನೆಟ್ ಕಛೇರಿಯ ಬ್ರೀಫಿಂಗ್ ರೂಮ್‌ನ ಸಭೆಯು ವಾರಾಂತ್ಯದಲ್ಲಿ ತುರ್ತು ಸಭೆಯು ಮುಂದಿನ ಕ್ರಮಗಳನ್ನು ತರಬೇಕೆ ಎಂದು ನಿರ್ಣಯಿಸಲು ನಡೆಯಲಿದೆ. ಕಳೆದ ಕೆಲವು ದಿನಗಳಿಂದ ನಾವು ಭಯದಲ್ಲಿದ್ದೆವೆ. ಆಸ್ಪತ್ರೆಯಲ್ಲಿದ್ದವರು, ವೆಂಟಿಲೇಟರ್‌ಗಳಲ್ಲಿದ್ದವರು ಸೇರಿದಂತೆ ಕಳೆದ ವರ್ಷಕ್ಕಿಂತ ಕಡಿಮೆಯಿದ್ದರೂ, ಧನಾತ್ಮಕ ಪ್ರಕರಣಗಳ ಸಂಖ್ಯೆಯು ಮೇಲೆರುತ್ತಲೇ ಇದೆ. ಕಳೆದ 24 ಗಂಟೆಗಳಲ್ಲಿ, ನಾವು ಸುಮಾರು 30,000 ಹೊಸ ಪ್ರಕರಣಗಳನ್ನು ಹೊಂದಿದ್ದೇವೆ. ಕಳೆದ 7 ದಿನಗಳಲ್ಲಿ, 130,000 ಕ್ಕೂ ಹೆಚ್ಚು ಹೊಸ ಪ್ರಕರಣಗಳು ದೃಢಪಟ್ಟಿವೆ. ಆದ್ದರಿಂದ ಪ್ರಯಾಣದ ದಿಕ್ಕು ಒಂದೇ ದಾರಿಯಲ್ಲಿ ಸಾಗುತ್ತಿದೆ ಎಂದು ಅವರು ಎಚ್ಚರಿಸಿದ್ದಾರೆ. ಪ್ರಸ್ತುತ ಪ್ಲಾನ್ ಬಿ ಪ್ರಕಾರ, ನಿಯಮಗಳಲ್ಲಿ ಕೋವಿಡ್ ಪಾಸ್‌ಗಳು, ಹೆಚ್ಚಿನ ಸ್ಥಳಗಳಲ್ಲಿ ಮುಖವಾಡಗಳನ್ನು ಧರಿಸುವುದು. ಜನರು ಸಾಧ್ಯವಾದರೆ ಮನೆಯಿಂದಲೇ ಕೆಲಸ ಮಾಡವುದನ್ನು ಒತ್ತಾಯಿಸಲಾಗುತ್ತಿದೆ ಎಂದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಅಫ್ಘಾನಿಸ್ತಾನದಲ್ಲಿ ಪಾಸ್ ಪೋರ್ಟ್ ನೀಡಿಕೆ ಪುನರಾರಂಭ

0

ಅಫ್ಘಾನಿಸ್ತಾನದ ತಾಲಿಬಾನ್ ಅಧಿಕಾರಿಗಳು ಕಾಬೂಲ್‌ನಲ್ಲಿ ಪಾಸ್‌ಪೋರ್ಟ್‌ಗಳನ್ನು ನೀಡುವುದನ್ನು ಪುನರಾರಂಭಿಸುವುದಾಗಿ ಹೇಳಿದ್ದಾರೆ. ಇಸ್ಲಾಮಿಸ್ಟ್ ಆಳ್ವಿಕೆಯಲ್ಲಿ ಜೀವಿಸುವ ಬೆದರಿಕೆಯನ್ನು ಅನುಭವಿಸುವ ನಾಗರಿಕರಿಗೆ ಭರವಸೆ ನೀಡಿದ್ದಾರೆ. ಬೆಳೆಯುತ್ತಿರುವ ಆರ್ಥಿಕ ಮತ್ತು ಮಾನವೀಯ ಬಿಕ್ಕಟ್ಟಿನಿಂದ ಪಾರಾಗಲು ಸಾವಿರಾರು ಆಫ್ಘನ್ನರು ಹೊಸ ಪ್ರಯಾಣ ದಾಖಲೆಗಳಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಇದಕ್ಕೆ ವಿಶ್ವಸಂಸ್ಥೆಯು ‘ಹಸಿವಿನ ಕ್ಷೀಣತೆ’ ಕಾರಣ ಎಂದು ವಿವರಿಸಿದೆ. ಅಧಿಕಾರಿಗಳು ಭಾನುವಾರದಿಂದ ಕಾಬೂಲ್‌ನ ಪಾಸ್‌ಪೋರ್ಟ್ ಕಚೇರಿಯಲ್ಲಿ ದಾಖಲೆಗಳನ್ನು ನೀಡಲು ಪ್ರಾರಂಭಿಸುತ್ತಾರೆ ಎಂದು ಆಂತರಿಕ ಸಚಿವಾಲಯದ ಅಧಿಕಾರಿ ಆಲಂ ಗುಲ್ ಹಕಾನಿ ಹೇಳಿದ್ದಾರೆ.
ತಾಲಿಬಾನ್ ಅವರು ಆಗಸ್ಟ್ 15 ರಂದು ಅಧಿಕಾರಕ್ಕೆ ಮರಳಿದ ಕೆಲವೇ ದಿನಗಳಲ್ಲಿ ಪಾಸ್‌ಪೋರ್ಟ್‌ಗಳನ್ನು ನೀಡುವುದನ್ನು ನಿಲ್ಲಿಸಿದರು. ಅಕ್ಟೋಬರ್‌ನಲ್ಲಿ, ಬಯೋಮೆಟ್ರಿಕ್ ಉಪಕರಣಗಳು ಕೆಟ್ಟುಹೋದ ಕಾರಣ ಅರ್ಜಿಗಳ ಪ್ರವಾಹದಿಂದಾಗಿ ಕೆಲಸವನ್ನು ಸ್ಥಗಿತಗೊಳಿಸಲಾಗಿತ್ತು. ಈಗ ಕಚೇರಿಯನ್ನು ಪುನಃ ತೆರೆಯಲಾಗಿದೆ. ಎಲ್ಲಾ ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಲಾಗಿದೆ ಎಂದು ಹಕಾನಿ ಹೇಳಿದ್ದಾರೆ.
ಕೆಲಸವನ್ನು ನಿಲ್ಲಿಸುವ ಮೊದಲು ಈಗಾಗಲೇ ಅರ್ಜಿ ಸಲ್ಲಿಸಿದವರಿಗೆ ಆರಂಭದಲ್ಲೇ ದಾಖಲೆಗಳನ್ನು ನೀಡಲಾಗುವುದು. ಈ ಮಧ್ಯೆ, ಆರ್ಥಿಕ ಮತ್ತು ಮಾನವೀಯ ಬಿಕ್ಕಟ್ಟನ್ನು ತಡೆಯಲು ಅಫ್ಘಾನಿಸ್ತಾನಕ್ಕೆ ಸಹಾಯ ಮಾಡಲು ಪಾಕಿಸ್ತಾನ ಮುಸ್ಲಿಂ ರಾಷ್ಟ್ರಗಳನ್ನು ಒಟ್ಟುಗೂಡಿಸುತ್ತಿವೆ. 57 ಸದಸ್ಯರ ಸಂಘಟನೆಯ ಇಸ್ಲಾಮಿಕ್ ಸಹಕಾರದ ಹಲವಾರು ವಿದೇಶಾಂಗ ಮಂತ್ರಿಗಳು ಅಫ್ಘಾನಿಸ್ತಾನದ ಮಾರ್ಗಗಳನ್ನು ಅನ್ವೇಷಿಸಲು ಭಾನುವಾರ ಇಸ್ಲಾಮಾಬಾದ್‌ನಲ್ಲಿ ಸಭೆ ನಡೆಸುತ್ತಿದ್ದಾರೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿ ಅವರು ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಅಕ್ರಮ ಮರಳು ಸಾಗಣೆ ತಡೆಗೆ ಕಠಿಣ ಕ್ರಮ

0

ಕರ್ನಾಟಕದಲ್ಲಿ ಅಕ್ರಮ ಮರಳು ಗಣಿಗಾರಿಕೆಗೆ ಕಡಿವಾಣ ಹಾಕುವ ಸಂಬಂಧ ಪ್ರತ್ಯೇಕ ಕಾವಲು ಪಡೆಯನ್ನು ಸ್ಥಾಪಿಸಲಾಗುವುದು ಎಂದು ಕರ್ನಾಟಕದ ಗಣಿ ಹಾಗೂ ಭೂ ವಿಜ್ಞಾನ ಇಲಾಖೆಯು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗೆ ತಿಳಿಸಿದೆ.

ರಾಜ್ಯದ ವಿಜಯಪುರ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿರುವುದಕ್ಕೆ ಸಂಬಂಧಿಸಿದ ಅರ್ಜಿಯ ವಿಚಾರಣೆ ನಡೆಸಲಾಗಿದೆ. ಎನ್ ಜಿಟಿ ಯ ದಕ್ಷಿಣ ಪೀಠಕ್ಕೆ ಸಲ್ಲಿಸಿರುವ ಅಫಿಡೆವಿಟ್ ನಲ್ಲಿ ಇಲಾಖೆಯು ಈ ಮಾಹಿತಿಯನ್ನು ನೀಡಿದೆ.

ಅಕ್ರಮ ಮರಳು ಗಣಿಗಾರಿಕೆ ನಿಯಂತ್ರಿಸಲು ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಂಡಿದೆ. ಅಕ್ರಮ ಗಣಿಗಾರಿಕೆ ಮೇಲೆ ನಿಗಾ ಇಡುವಂತೆ ಸಂಬಂಧಪಟ್ಟ ಜಿಲ್ಲೆಗಳ ವಿಜ್ಞಾನಿಗಳಿಗೆ ಸೂಚಿಸಲಾಗಿದೆ. ಅಕ್ರಮದಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಪೊಲೀಸ್, ಕಂದಾಯ, ಹಾಗೂ ಅರಣ್ಯ ಇಲಾಖೆಗೆ ಅಧಿಕಾರವನ್ನು ನೀಡಲಾಗಿದೆ ಎಂದು ಇಲಾಖೆ ತಿಳಿಸಿದೆ.

ಅಕ್ರಮ ಮರಳು ಗಣಿಗಾರಿಕೆ ನಿಯಂತ್ರಿಸುವ ಸಂಬಂಧ, ಕೆರೆಗಳು, ಹೊಂಡಗಳು ಹಾಗೂ ನದಿಗಳಿಗೆ ಸಂಪರ್ಕ ಕಲ್ಪಿಸುವ ಅನಧಿಕೃತ ಗ್ರಾಮೀಣ ರಸ್ತೆಗಳನ್ನು ಬಂದ್ ಮಾಡಲಾಗಿದೆ. ಇಲಾಖೆಯು ಮರಳು ಬ್ಲಾಕ್ ಗಳನ್ನು ಗುರುತಿಸಿ, ಅನಂತರ ವೈಜ್ಞಾನಿಕ ರೀತಿಯಲ್ಲಿ ಅವುಗಳನ್ನು ಹರಾಜು ಹಾಕುತ್ತಿದೆ ಎಂದು ಇಲಾಖೆಯು ತಿಳಿಸಿದೆ.

ಗುತ್ತಿಗೆದಾರರು ಮರಳು ಸಾಗಿಸಲು ಬಳಸುವ ವಾಹನಗಳಿಗೆ ಜಿಪಿಎಸ್ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಇದರಿಂದ ಮರಳು ಸಾಗಾಣಿಕೆಯ ಮೇಲೆ ನಿಗಾವಹಿಸಲು ಸಾಧ್ಯವಾಗಲಿದೆ. ಪ್ರಮುಖ ಸ್ಥಳಗಳಲ್ಲಿ ವೇ-ಬ್ರಿಡ್ಜ್ ಗಳು ಹಾಗೂ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದು ಇಲಾಖೆಯು ಎನ್ ಜಿಟಿ ಗೆ ಮಾಹಿತಿ ನೀಡಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಅನಧೀಕೃತ ಅಕ್ಕಿ ದಾಸ್ತಾನು ಪತ್ತೆ.

0

ಗೋದಾಮಿನಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಅಕ್ಕಿಯನ್ನು ತಹಶೀಲ್ದಾರ ಶಿವಾನಂದ ರಾಣೆ ಅವರ ನೇತೃತ್ವದ ತಂಡ ದಾಳಿ ನಡೆಸಿ ವಶಪಡಿಸಿಕೊಂಡಿದೆ.

ಸಾರ್ವಜನಿಕರಿಂದ ಬಂದ ಮಾಹಿತಿಯ ಪ್ರಕಾರ ಕಂದಾಯ ಅಧಿಕಾರಿಗಳು ಹಾಗೂ ಆಹಾರ ಇಲಾಖೆಯ ಅಧಿಕಾರಿಗಳ ತಂಡ ಗೋದಾಮಿನ ಮೇಲೆ ದಾಳಿ ನಡೆಸಿದ್ದಾರೆ.
ಸೊರಬ ತಾಲ್ಲೂಕಿನ ಹೆಚ್ಚೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಣ ಮನೆ ಗ್ರಾಮದ ಮಿಥುನ್ ಜಗದೀಶ್ ಅವರ ಗೋದಾಮಿಯಾಗಿದೆ.

ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ ಕ್ವಿಂಟಾಲ್ ಅಕ್ಕಿಯನ್ನು ಗ್ರಾಮದ ಪಂಚರ ಸಮಕ್ಷಮದಲ್ಲಿ ವಶಪಡಿಸಿಕೊಂಡು ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ತಹಶೀಲ್ದಾರ್ ಶಿವಾನಂದ ರಾಣೆ ಅವರು ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಮಹಿಳೆಯರು ಸಂಘಟಿತರಾಗ ಬೇಕು

0

ಎಲ್ಲ ಮಹಿಳೆಯರು ಸಂಘಟಿತರಾಗಿ ಮತ ನೀಡಿದರೆ ಮಾತ್ರ ನಿಮ್ಮನ್ನು ರಾಜಕೀಯದಲ್ಲಿ ಗಂಭೀರವಾಗಿ ಪರಿಗಣಿಸುತ್ತಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವಾದ್ರಾ ಅವರು ತಿಳಿಸಿದ್ದಾರೆ.

ಉತ್ತರಪ್ರದೇಶದ ರಾಯಬರೇಲಿಯಲ್ಲಿ ಮಹಿಳೆಯರ ಜೊತೆಗೆ ಸಂವಾದ ನಡೆಸಿದ ಸಂದರ್ಭದಲ್ಲಿ ಮಾತನಾಡುತ್ತಿದ್ದರು. ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಮಹಿಳಾ ಶಕ್ತಿಯನ್ನು ಕ್ರೋಡೀಕರಿಸಿ ತಮ್ಮ ಪಕ್ಷಕ್ಕೆ ಬಲ ತುಂಬುವ ಪ್ರಯತ್ನದಲ್ಲಿದ್ದಾರೆ.

ಬದಲಾವಣೆ ತರಲು ಬಯಸುವುದಾದರೆ ನೋವು ಒಗ್ಗೂಡಬೇಕು. ನಮ್ಮನ್ನು ಏಕೆ ಯಾರೂ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ವಿಮರ್ಶೆ ಮಾಡಿಕೊಳ್ಳಬೇಕು. ನಾವು ಈಗಾಗಲೇ ಸಾಕಷ್ಟು ಕಷ್ಟಪಟ್ಟಿದ್ದೇವೆ. ಇನ್ನೂ ಕಷ್ಟಪಡುವುದಿಲ್ಲ ಎಂದು ಈಗ ನಾವು ನಿರ್ಧಾರ ಮಾಡಬೇಕು. ನಾವು ಜನಸಂಖ್ಯೆಯ ಅರ್ಧದಷ್ಟು ಇದ್ದೇವೆ. ನಾವು ನಮ್ಮ ಸಾಮರ್ಥ್ಯವನ್ನು ಕಂಡುಕೊಳ್ಳಬೇಕು. ನಾವು ಸಂಘಟಿತರಾಗಿ ಮತಚಲಾಯಿಸಬೇಕು. ಆಗ ಮಾತ್ರ ನಮ್ಮನ್ನು ಗಂಭೀರವಾಗಿ ಪರಿಗಣಿಸುತ್ತಾರೆ ಎಂದು ಆಶ್ವಾಸನೆಯನ್ನು ನೀಡಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಕೋವಿಡ್ ಕಾರಣ ಮೃತ ವಕೀಲರ ಕುಟುಂಬಗಳಿಗೆ ನೆರವುಬೇಕು

0

ಕೋವಿಡ್ ಸಂದರ್ಭದಲ್ಲಿ ಜೀವನೋಪಾಯ ಕಳೆದುಕೊಂಡ ವಕೀಲರ ಕುಟುಂಬದವರಿಗೆ ಆರ್ಥಿಕ ನೆರವು ಮುಂತಾದ ವಿಷಯಗಳಿಗೆ ಕೇಂದ್ರ ಸರ್ಕಾರವು ಇನ್ನಷ್ಟು ಸ್ಪಷ್ಟ ಬೇಕಿದೆ ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಅವರು ತಿಳಿಸಿದ್ದಾರೆ.

ವರಂಗಲ್ ನಲ್ಲಿ ನ್ಯಾಯಾಲಯ ಸಂಕೀರ್ಣದ ಕಟ್ಟಡ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ನ್ಯಾಯಾಂಗ ಮೂಲಸೌಕರ್ಯ ನಿಗಮ ಸ್ಥಾಪನೆ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಮೊಬೈಲ್ ಇಂಟರ್ನೆಟ್ ಸೌಲಭ್ಯ ನೀಡಿಕೆಯ ಪ್ರಸ್ತಾವವನ್ನು ಕ್ರಮವಾಗಿ ಜುಲೈ ಹಾಗೂ ಜೂನ್ನಲ್ಲಿ ಸಲ್ಲಿಸಲಾಗಿತ್ತು. ಆದರೆ, ಈವರೆಗೆ ಯಾವ ಕ್ರಮವೂ ಆಗಿಲ್ಲ. ನಿಗಮ ಸ್ಥಾಪನೆಗೆ ಅಗತ್ಯವಾದ ಮಸೂದೆಯನ್ನು ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿಯೇ ಸರ್ಕಾರವು ಮಂಡಿಸುವ ವಿಶ್ವಾಸವಿದೆ ಎಂದು ಅವರು ತಿಳಿಸಿದ್ದಾರೆ.

ಕೊರೋನಾದಿಂದಾಗಿ, ಜೀವನ ಭಯ ಕಳೆದುಕೊಂಡ ವಕೀಲರ ಕುಟುಂಬಗಳಿಗೆ ನೆರವಾಗಬೇಕು ಎಂದು ಸರ್ಕಾರವನ್ನು ಕೋರಿದೆ. ಈ ಕೋರಿಕೆಗೆ ಇದುವರೆಗೂ ಯಾವ ಪ್ರತಿಕ್ರಿಯೆ ಕೂಡ ಬಂದಿಲ್ಲ. ಪ್ರಧಾನಿ ಹಾಗೂ ರಾಷ್ಟ್ರಪತಿ ಇದ್ದಂತಹ ಎಲ್ಲಾ ವೇದಿಕೆಯಲ್ಲಿ ಅವಕಾಶ ಸಿಕ್ಕಾಗಲೆಲ್ಲಾ ಈ ವಿಚಾರವನ್ನು ಪ್ರಸ್ತಾಪಿಸಿದ್ದೇನೆ ಎಂದು ಅವರು ಸುಪ್ರೀಂಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಎನ್. ವಿ. ರಮಣ ಅವರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಲೈಂಗಿಕ ಕಿರುಕುಳ: ರಾಜ್ಯದಲ್ಲಿ ಗರಿಷ್ಠ ಪ್ರಕರಣಗಳ ವಿಲೇವಾರಿ

0

ಅಧಿಕಾರಿಗಳ ವಿರುದ್ಧ ದಾಖಲಾಗಿದ್ದ, ಕೆಲಸದ ಸ್ಥಳಗಳಲ್ಲಿ ಲೈಂಗಿಕ ಕಿರುಕುಳ ಪ್ರಕರಣಗಳಲ್ಲಿ ಗರಿಷ್ಠ ಪ್ರಕರಣಗಳನ್ನು ಕರ್ನಾಟಕ ವಿಲೇವಾರಿ ಮಾಡಿದ ಎಂದು ಸರ್ಕಾರ ನೀಡಿದ ಅಂಕಿ ಅಂಶಗಳಲ್ಲಿ ತಿಳಿಸಿವೆ.

ಕರ್ನಾಟಕದಲ್ಲಿ ಇಂತಹ ಪ್ರಕರಣಗಳ ವಿಲೇವಾರಿ ಪ್ರಮಾಣವು ಶೇ.89 ರಷ್ಟು ಇದೆ.
2020-21ರಲ್ಲಿ ಕರ್ನಾಟಕದಲ್ಲಿ ಅಧಿಕಾರಿಗಳ ವಿರುದ್ಧ 56 ಪ್ರಕರಣಗಳು ದಾಖಲಾಗಿದ್ದವು. ಅವುಗಳ ಪೈಕಿ 50 ಪ್ರಕರಣಗಳ ವಿಲೇವಾರಿಯಾಗಿವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವೂ ಸಂಸತ್ತಿಗೆ ಮಾಹಿತಿ ನೀಡಿದೆ.

ಮಹಾರಾಷ್ಟ್ರದಲ್ಲಿ ಇಂತಹ ಪ್ರಕರಣಗಳ ವಿಲೇವಾರಿ ಪ್ರಮಾಣವು ಶೇ.21ರಷ್ಟು ಇದೆ. ಇದು ದೇಶದಲ್ಲಿ ಕನಿಷ್ಠ ಪ್ರಮಾಣವಾಗಿದೆ. ಈ ರಾಜ್ಯದ ಗರಿಷ್ಠ ಅಂದರೆ 102 ಪ್ರಕರಣಗಳು ದಾಖಲಾಗಿದ್ದವು. 22 ಪ್ರಕರಣಗಳನ್ನು ಮಾತ್ರ ವಿಲೇವಾರಿ ಮಾಡಲಾಗಿದೆ.

ದೆಹಲಿಯಲ್ಲಿ ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳದ 62 ಪ್ರಕರಣಗಳು ದಾಖಲಾಗಿದ್ದವು. ಅವುಗಳ ಪೈಕಿ 21 ಪ್ರಕರಣಗಳ ವಿಲೇವಾರಿ ಆಗಿವೆ. ಶೇ.34 ರಷ್ಟು ಇದೆ.

ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಉತ್ತರ ಪ್ರದೇಶದಲ್ಲಿ 2017ರಿಂದ ಇಲ್ಲಿಯವರೆಗೆ 92 ಪ್ರಕರಣಗಳು ದಾಖಲಾಗಿದ್ದವು. 74 ವಿಲೇವಾರಿ ಆಗಿದೆ. ಇದರ ಪ್ರಮಾಣ ಶೇ.80ರಷ್ಟಿದೆ.

ಲೋಕಸಭೆಯ ಹಲವು ಸಂಸದರು ಕೇಳಿದ ಪ್ರಶ್ನೆಗಳಿಗೆ ಪ್ರತಿಯಾಗಿ ಸಚಿವಾಲಯವು ಈ ಮಾಹಿತಿಯನ್ನು ನೀಡಿದೆ.

ಕೆಲಸದ ಸ್ಥಳದಲ್ಲಿ ನಡೆಯುವ ಲೈಂಗಿಕ ದೌರ್ಜನ್ಯ ತಡೆಯುವ ಸಲುವಾಗಿ, ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ತಡೆ ನಿಷೇಧ ಹಾಗೂ ಪರಿಹಾರ ಕಾಯ್ದೆ 2013ರ ಅಡಿ ಸೆಕ್ಸು ಯಲ್ ಹೆರಾಸ್ ಮೆಂಟ್ ಎಲೆಕ್ಟ್ರಾನಿಕ್ ಶಿ ಬಾಕ್ಸ್ ಎಂಬ ಆನ್ಲೈನ್ ದೂರು ನೀಡಿಕೆ ವ್ಯವಸ್ಥೆಯನ್ನು ಆರಂಭಿಸಲಾಗಿತ್ತು. 2017ರ ನಂತರ ಈ ವ್ಯವಸ್ಥೆ ಜಾರಿಗೆ ಬಂದಿದೆ. ಅನಂತರ ದಾಖಲಾದ ದೂರುಗಳ ಮಾಹಿತಿ ಎಂದು ಸರ್ಕಾರ ತಿಳಿಸಿದೆ.

ಶಿ-ಬಾಕ್ಸ್ ಮೂಲಕ ದೂರು ದಾಖಲಿಸಿದ ತಕ್ಷಣ ಅದು ಸಂಬಂಧಿತ ಪ್ರಾಧಿಕಾರಕ್ಕೆ ವರ್ಗಾವಣೆಯಾಗುತ್ತದೆ.
ಶಿ-ಬಾಕ್ಸ್ ಮೂಲಕ ಬಂದ ದೂರಿನ ವಿರುದ್ಧ ಕ್ರಮ ತೆಗೆದುಕೊಳ್ಳುವ ಹಾಗೂ ಅದರ ಪ್ರಗತಿಯ ಸ್ಥಿತಿಯನ್ನು ಕಾಲಕಾಲಕ್ಕೆ ಬಹಿರಂಗಪಡಿಸುವ ಹೊಣೆ ಸಂಬಂಧಿತ ಪ್ರಾಧಿಕಾರದ್ದೇ ಆಗಿರುತ್ತದೆ ಎಂದು ಸರ್ಕಾರವು ವರದಿಗಳಲ್ಲಿ ತಿಳಿಸಿದೆ.

ಪ್ರಸ್ತುತ ಈ ವ್ಯವಸ್ಥೆಯು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಿ ನೌಕರರಿಗೆ ಸಂಬಂಧಿಸಿದ ದೂರುಗಳನ್ನು ಮಾತ್ರ ನಿರ್ವಹಣೆ ಮಾಡುತ್ತಿದೆ. ಇದನ್ನು ಖಾಸಗಿ ಕಂಪನಿಗಳಿಗೆ ವಿಸ್ತರಿಸುವ ಯೋಜನೆ ಇದೆ ಎಂದು ಸರ್ಕಾರ ತಿಳಿಸಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಸಹಕಾರ ಕೋರ್ಸ್ ಗಳಿಗಾಗಿ ರಾಷ್ಟ್ರೀಯ ವಿ ವಿ ಸ್ಥಾಪನೆ

0

ಕೃಷಿ ಹಣಕಾಸಿಗಾಗಿ ಪಾರದರ್ಶಕ ವ್ಯವಸ್ಥೆಯನ್ನು ಸ್ಥಾಪಿಸುವ ಗುರಿಯೊಂದಿಗೆ ದೇಶದಲ್ಲಿ ಸಹಕಾರ ಚಳವಳಿಯನ್ನು ಬಲಪಡಿಸಲು ಕೇಂದ್ರವು ವಿವಿಧ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ತಿಳಿಸಿದ್ದಾರೆ. ವೈಕುಂಠ ಮೆಹ್ತಾ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಕೋಆಪರೇಟಿವ್ ಮ್ಯಾನೇಜ್‌ಮೆಂಟ್‌ನ ಘಟಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಅಮಿತ್ ಶಾ, ಸರ್ಕಾರವು ಬಹು ರಾಜ್ಯಗಳ ಸಹಕಾರಿ ಕಾಯ್ದೆಗೆ ತಿದ್ದುಪಡಿ ತರುತ್ತದೆ ಮತ್ತು ಇತರ ಕ್ರಮಗಳನ್ನು ತೆಗೆದುಕೊಳ್ಳುವುದರ ಜೊತೆಗೆ ಎಲ್ಲಾ ಲೋಪದೋಷಗಳನ್ನು ಮುಚ್ಚಲು ಪ್ರಯತ್ನಿಸುತ್ತಿದೆ ಎಂದರು.
ಶೀಘ್ರದಲ್ಲೇ ಹೊಸ ಸಹಕಾರ ನೀತಿಯನ್ನು ತರಲಾಗುವುದು ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ, ಕೇಂದ್ರವು ಶೀಘ್ರದಲ್ಲೇ ಸಹಕಾರಿ ನಿರ್ವಹಣಾ ಕೋರ್ಸ್‌ಗಳಿಗಾಗಿ ರಾಷ್ಟ್ರೀಯ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಿದೆ. ಕಳೆದ 7 ವರ್ಷಗಳಲ್ಲಿ ದೇಶದಲ್ಲಿ ಸಹಕಾರ ಚಳವಳಿ ದುರ್ಬಲಗೊಂಡಿದೆ ಎಂದರು. ನಾವು ಮತ್ತೊಮ್ಮೆ ಸಹಕಾರಿ ಕ್ಷೇತ್ರವನ್ನು ಬಲಪಡಿಸಬೇಕು ಮತ್ತು ಅದನ್ನು ದೇಶದ ಜಿಡಿಪಿಯಲ್ಲಿ ಅತಿದೊಡ್ಡ ಕೊಡುಗೆದಾರರನ್ನಾಗಿ ಮಾಡಬೇಕು.ಅದಕ್ಕಾಗಿ ನೀವು ನಿಮ್ಮ ಆಯಾ ಕ್ಷೇತ್ರಗಳಲ್ಲಿ ಸಮರ್ಪಣಾ ಮನೋಭಾವದಿಂದ ಕೆಲಸ ಮಾಡಬೇಕು ಎಂದು ಶಾ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ದೇಶದಲ್ಲಿ ಸಹಕಾರ ಚಳವಳಿಯನ್ನು ಬಲಪಡಿಸಲು ನರೇಂದ್ರ ಮೋದಿ ಸರ್ಕಾರ ಹಲವು ಕ್ರಮಗಳನ್ನು ತರುತ್ತಿದೆ. ನಾವು ಬಹು ರಾಜ್ಯ ಸಹಕಾರ ಕಾಯಿದೆಗೆ ತಿದ್ದುಪಡಿ ತರುತ್ತೇವೆ ಮತ್ತು ಎಲ್ಲಾ ಲೋಪದೋಷಗಳನ್ನು ಮುಚ್ಚಲು ಪ್ರಯತ್ನಿಸುತ್ತೇವೆ. ಸಹಕಾರ ಚಳವಳಿಯ ಆತ್ಮವಾಗಿರುವ ಪ್ರಾಥಮಿಕ ಕೃಷಿ ಸಾಲ ಸಂಘಗಳನ್ನು ಜಿಲ್ಲಾ ಸಹಕಾರಿ ಬ್ಯಾಂಕ್‌ಗಳಿಗೆ ಸಂಪರ್ಕಿಸಲಾಗುವುದು. ಸಹಕಾರಿ ನಿರ್ವಹಣಾ ಕೋರ್ಸ್‌ಗಳಿಗಾಗಿ ಶೀಘ್ರದಲ್ಲೇ ವಿಶ್ವವಿದ್ಯಾಲಯವನ್ನು ಸ್ಥಾಪಿಸುತ್ತೇವೆ. ಇದು ರಾಷ್ಟ್ರೀಯ ವಿಶ್ವವಿದ್ಯಾನಿಲಯವಾಗಲಿದೆ ಎಂದರು.ಇಲ್ಲಿ ಎಲ್ಲಾ ರಾಜ್ಯಗಳ ಕಾಲೇಜುಗಳು ಈ ವಿಶ್ವವಿದ್ಯಾನಿಲಯದೊಂದಿಗೆ ತಮ್ಮನ್ನು ತಾವು ಸಂಯೋಜಿಸಿಕೊಳ್ಳುತ್ತವೆ ಎಂದು ಶಾ ತಿಳಿಸಿದರು.
ಭಾರತವು ಸಹಕಾರಿ ಕ್ಷೇತ್ರದಲ್ಲಿ ಹಲವಾರು ಯಶಸ್ಸಿನ ಕಥೆಗಳನ್ನು ಬರೆದಿದೆ ಮತ್ತು ಭಾರತವು ಪ್ರಪಂಚದ ಮುಂದೆ ‘ಆತ್ಮ-ನಿರ್ಭರ್’ (ಸ್ವಾವಲಂಬಿ)ಯಾಗಿ ನಿಲ್ಲಲು ಬಯಸಿದಾಗ, ಸಹಕಾರಿ ಕ್ಷೇತ್ರವು ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ಅವರು ಹೇಳಿದರು. ಆತ್ಮನಿರ್ಭರವಾಗುವುದರ ಒಂದು ಅರ್ಥವೆಂದರೆ ಭಾರತದಲ್ಲಿ ಅಗತ್ಯವಿರುವ ಎಲ್ಲಾ ವಸ್ತುಗಳನ್ನು ತಯಾರಿಸುವುದು, ಇನ್ನೊಂದು ಅರ್ಥವೆಂದರೆ ದೇಶದ 130 ಕೋಟಿ ಜನರನ್ನು ಸ್ವಾವಲಂಬಿಗಳನ್ನಾಗಿ ಮಾಡುವುದು ಎಂದು ಶಾ ಹೇಳಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಪ್ರಾಥಮಿಕ ಶಾಲಾಹಂತದಲ್ಲಿ ‘ರಾಶಿನೀ’ ಜಾರಿಗೆ

0

ಪ್ರಾಥಮಿಕ ಶಾಲಾಹಂತದಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರಲಾಗುವುದು ಎಂದು ಪ್ರಾರ್ಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.

“ಕೊರೋನಾ ಮೂರನೇ ಅಲೆ ಬಗ್ಗೆ ದೇಶದಲ್ಲಿ ಆತಂಕವಿಲ್ಲ ಶಾಲಾ ಮಕ್ಕಳು ಆರೋಗ್ಯದಿಂದ ಇರಲು ಅಗತ್ಯವಾದ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು” ಎಂದು ಸಚಿವರು ತಿಳಿಸಿದ್ದಾರೆ.

“ಶಾಲಾ ಕಟ್ಟಡ ನಿರ್ಮಾಣ ಕುರಿತಂತೆ ಮಾರ್ಗಸೂಚಿಯನ್ನು 2015ರಲೇ ಸುಪ್ರೀಂಕೋರ್ಟ್ ಆದೇಶದ ಮೇರೆಗೆ ಜಾರಿಗಳಿಸಿತ್ತು. ಮಾರ್ಗಸೂಚಿಯನ್ನು ಬಿಜೆಪಿ ಸರ್ಕಾರ ಬಂದ ಬಳಿಕ ಮಾಡಿಲ್ಲ ದೇಶದಲ್ಲಿ ಪ್ರತಿಭಟನೆ ಮಾಡಲು ಎಲ್ಲರೂ ಸ್ವತಂತ್ರರು” ಎಂದು ಖಾಸಗಿ ಶಾಲೆಗಳ ಕಟ್ಟಡಕ್ಕೆ ಸಂಬಂಧಿಸಿದ ಸರ್ಕಾರದ ನಿಯಮಗಳಿಗೆ ವಿರೋಧಿ ವ್ಯಕ್ತವಾಗಿದ್ದು, ಈ ಬಗ್ಗೆ ಸಚಿವರು ಪ್ರತಿಕ್ರಿಯಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಕೆರೆಗಳ ನಿರ್ವಹಣೆ ಆಗಬೇಕಿದೆ

0

ಈ ವರ್ಷ ರಾಜ್ಯದಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಬಯಲುಸೀಮೆ ಭಾಗದ ದಶಕಗಳಿಂದಲೂ ಬತ್ತಿ ಹೋಗಿದ್ದ ಹಲವು ನದಿಗಳು ಮೈದುಂಬಿ ಹರಿದಿದ್ದವು.

ಬಯಲುಸೀಮೆ ಭಾಗಗಳಲ್ಲಿ ನೀರು ಸಂಗ್ರಹಕ್ಕೆ ಸೂಕ್ತ ವ್ಯವಸ್ಥೆ ಇಲ್ಲದಿರುವುದರಿಂದ ಪ್ರವಾಹೋಪಾದಿಯಲ್ಲಿ ನದಿಗಳಲ್ಲಿ ಹರಿದ ನೀರು ಮಳೆ ನಿಂತ ಕೆಲವೇ ದಿನಗಳಲ್ಲಿ ಬರಿದಾಗಿವೆ.

ಹತ್ತು ವರ್ಷಗಳ ಬಳಿಕ ಸುರಿದ ದಾಖಲೆ ಮಳೆಗೆ ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು ಜಿಲ್ಲೆಗಳ ನದಿಗಳಲ್ಲಿ ಪ್ರಸ್ತುತ ನೀರಿನ ಪ್ರಮಾಣ ಕಡಿಮೆಯಾಗಿದೆ. ಈ ಭಾಗಗಳಲ್ಲಿನ ಅರ್ಕಾವತಿ, ಚಿತ್ರಾವತಿ, ಉತ್ತರ ಪಿನಾಕಿನಿ, ದಕ್ಷಿಣ ಪಿನಾಕಿನಿ, ಪಾಲಾರ್, ಕುಶಾವತಿ ನದಿಗಳ ಬಡಲು ಈಗ ನೀರಿಲ್ಲದೆ ಸೊರಗಿದೆ.

“ಬಯಲುಸೀಮೆ ಜಿಲ್ಲೆಗಳಿಗೆ ಕೆರೆಗಳೇ ಜೀವನಾಧಾರ. ಮಳೆ ಬರಲಿ ಬಾರದಿರಲಿ ಕೆರೆಗಳ ನಿರ್ವಹಣೆಯನ್ನು ನಿರಂತರವಾಗಿ ಮಾಡಬೇಕು. 40 ವರ್ಷಗಳ ನಂತರ ಸುರಿದ ಮಳೆ ನೀರನ್ನು ನಮ್ಮ ಕೆರೆಗಳಲ್ಲಿ ಹಿಡಿದಿಟ್ಟುಕೊಳ್ಳಲು ಆಗಿಲ್ಲ” ಎಂದು ಶಾಶ್ವತ ಇರುವ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆಂಜನೇಯ ರೆಡ್ಡಿ ತಿಳಿಸಿದ್ದಾರೆ.

“ಪರಿಸರವಾದಿ ಚೌಡಪ್ಪ ಅವರು ಈ ಬಾರಿ ಸುರಿದ ದಾಖಲೆ ಮಳೆ ನೀರನ್ನು ಸಂಗ್ರಹ ಮಾಡಿಕೊಳ್ಳುವ ವ್ಯವಸ್ಥೆ ಇದ್ದಿದ್ದರೆ, 20 ಟಿಎಂಸಿಗೂ ಹೆಚ್ಚು ನೀರನ್ನು ಸಂಗ್ರಹಿಸಬಹುದಿತ್ತು” ಎಂದು ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.