Tuesday, February 10, 2026
Tuesday, February 10, 2026
Home Blog Page 1821

ಸ್ವಚ್ಛತಾ ನಗರ ಆಂದೋಲನದಲ್ಲಿ ಪಾಲ್ಗೊಳ್ಳಲು ಆಗ್ರಹ

0

ಸ್ವಚ್ಛತಾ ಆಂದೋಲನದಲ್ಲಿ ಪಾಲ್ಗೊಳ್ಳದೇ ನಿರ್ಲಕ್ಷ್ಯ ವಹಿಸುತ್ತಿರುವ ನಗರಗಳನ್ನು ಪಟ್ಟಿ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರ ವಸತಿ ಮತ್ತು ನಗರ ಅಭಿವೃದ್ಧಿ ವ್ಯವಹಾರಗಳ ಸಚಿವಾಲಯಕ್ಕೆ ಸಲಹೆ ನೀಡಿದ್ದಾರೆ.

ವಾರಣಾಸಿಯಲ್ಲಿ ನಡೆದ ಅಖಿಲ ಭಾರತ ನಿಯರ್ ಗಳ ಸಮಾವೇಶ ನಡೆಯಿತು. ವಿಡಿಯೋ ಕಾನ್ಫರೆನ್ಸ್ ಮೂಲಕ ಮಾನ್ಯ ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

“ಹಲವು ನಗರಗಳು ಸ್ವಚ್ಛತೆಯಿಂದ ವಿಮುಖವಾಗಿವೆ. ಈ ವಿಚಾರದಲ್ಲಿ ಜಾಣಕುರುಡುತನ ಪ್ರದರ್ಶಿಸುತ್ತಿವೆ. ಆದ್ದರಿಂದ ಅಂತಹ ನಗರಗಳನ್ನು ಪಟ್ಟಿ ಮಾಡಿ, ಜನರಿಗೆ ತಿಳಿಸಬೇಕು. ಆ ಮೂಲಕ ಆಯಾ ನಗರಗಳ ಅಧಿಕಾರಿಗಳ ಮೇಲೆ ಸಾರ್ವಜನಿಕ ಒತ್ತಡ ಹೆಚ್ಚಾಗುವಂತೆ ನೋಡಿಕೊಳ್ಳಬೇಕು. ಅಧಿಕಾರಿಗಳು ಸ್ವಚ್ಛತೆ ವಿಚಾರದಲ್ಲಿ ಗಂಭೀರವಾಗಿ ಕಾರ್ಯನಿರ್ವಹಿಸುವಂತೆ ಮಾಡಬೇಕು ಎಂದು ತಿಳಿಸಿದ್ದಾರೆ.

ಈ ಸಮಾವೇಶದಲ್ಲಿ ಸುಮಾರು 120 ಮೇಯರ್ ಗಳು ಭಾಗವಹಿಸಿದ್ದರು. ಸ್ವಚ್ಛತೆ ಅಭಿಯಾನದ ಹಿನ್ನೆಲೆಯಲ್ಲಿ, ಮುಂದಿನ ದಿನಗಳಲ್ಲಿ ಆಯೋಜಿಸುವ ಸ್ಪರ್ಧೆಗಳಲ್ಲಿ ನಿಮ್ಮ ನಗರಗಳು ಹಿಂದುಳಿಯದಂತೆ ನೋಡಿಕೊಳ್ಳಿ. ಸ್ವಚ್ಛತೆ ಅಭಿಯಾನವು ವರ್ಷದಲ್ಲಿ ಒಮ್ಮೆ ಮಾತ್ರ ಆಯೋಜಿಸುವ ಅಭಿಯಾನ ವಾಗಬಾರದು ವಾರ್ಡ್ಗಳಲ್ಲಿ ಸಹ ಸ್ವಚ್ಛತೆ ಕುರಿತು ಜಾಗೃತಿ ನೀಡಬೇಕು. ವಾರ್ಡ್ ಗಳ ಮಟ್ಟದ ಸ್ಪರ್ಧೆ ಆಯೋಜಿಸಬೇಕು ಆ ಮೂಲಕ ಸ್ಥಳೀಯವಾಗಿಯೂ ಸ್ವಚ್ಛತೆ, ನಗರಗಳ ಸೌಂದರ್ಯ ಹೆಚ್ಚಿಸುವ ದೃಷ್ಟಿಯಿಂದ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.

ಮೇಯರ್ ಗಳು ನಗರಗಳ ಸಂಸ್ಥಾಪನ ದಿನವನ್ನು ಗುರುತಿಸಿ ಕಾರ್ಯಕ್ರಮ ಆಯೋಜಿಸಬೇಕು. ಆಯಾ ನಗರಗಳಲ್ಲಿರುವ ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ ತಂಡಗಳನ್ನು ರಚಿಸಬೇಕು. ಗಣ್ಯರ ಮೂರ್ತಿಗಳನ್ನು ಸ್ವಚ್ಛಗೊಳಿಸುವ ಜೊತೆಗೆ ಆಜಾದಿ ಕಾ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಗಣ್ಯರ ಕುರಿತು ಭಾಷಣ ಸ್ಪರ್ಧೆ ಆಯೋಜಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಕರ್ನಾಟಕಕ್ಕೆ ಎರಡನೇ ತ್ರೈಮಾಸಿಕ ತೆರಿಗೆ ಕೊರತೆ

0

ಕೊರೋನಾ ಎರಡನೇ ಅಲೆಯಾ ಪರಿಣಾಮ ಪ್ರಸ್ತುತ ಆರ್ಥಿಕ ವರ್ಷದಲ್ಲಿ ಎರಡನೇ ತ್ರೈಮಾಸಿಕ ಅಂತ್ಯಕ್ಕೆ ರಾಜ್ಯ ಸರ್ಕಾರದ ಸ್ವಂತ ತೆರಿಗೆ ಸಂಗ್ರಹದಲ್ಲಿ 3,105 ಕೋಟಿ ರೂ. ಕೊರತೆಯಾಗಿದೆ.

ವಿಧಾನಸಭೆಯಲ್ಲಿ ನಡೆದ ಮುಖ್ಯಮಂತ್ರಿಗಳ ಪರವಾಗಿ ಸಚಿವ ಜೆ. ಸಿ. ಮಾಧುಸ್ವಾಮಿ ಅವರು ಮಂಡಿಸಿದ ರಾಜ್ಯ ಹಣಕಾಸಿನ ಮಧ್ಯವಾರ್ಷಿಕ ಪರಿಶೀಲನೆ ವರದಿಯಲ್ಲಿ ಉಲ್ಲೇಖವಿದೆ.

ಈ ವರ್ಷದ ಸೆಪ್ಟೆಂಬರ್ ತಿಂಗಳ ಅಂತ್ಯಕ್ಕೆ ರಾಜಸ್ವ ಮೂಲದಿಂದ 86,136 ಕೋಟಿ ರೂ. ಸಂಗ್ರಹ ಗುರುವಿದ್ದರೂ 83,031 ಕೋಟಿ ರೂ. ಮಾತ್ರ ಸಂಗ್ರಹವಾಗಿದೆ. ಆರ್ಥಿಕ ಚಟುವಟಿಕೆಗಳ ಮೇಲಿನ ನಿರ್ಬಂಧದಿಂದಾಗಿ ನೊಂದಣಿ ಹಾಗೂ ಮುದ್ರಾಂಕ, ಮೋಟಾರು ವಾಹನ ತೆರೆಗೆ ಆದರೆ ಆದಾಯ ಸಂಗ್ರಹದಲ್ಲೂ ಕುಂಠಿತವಾಗಿದೆ.
ಕೊರೊನಾ ಹರಡುವಿಕೆ ತೀವ್ರತೆ ಪರಿಣಾಮ ಚೇತರಿಕೆ ಯಾಗುತ್ತಿರುವ ಅಂಶವೂ ದಾಖಲಾಗಿದೆ.

ಪ್ರಸಕ್ತ ಸಾಲಿನ ಅಂತ್ಯಕ್ಕೆ ರಾಜ್ಯದ ಒಟ್ಟು ಸಾಲವು, ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ ಶೇ.26.66 ರಷ್ಟಾಗಲಿದೆ. ಮಾರ್ಚ್ ಕೊನೆಯ ವೇಳೆಗೆ ಬಾಕಿ ಇದ್ದ 3.36 ಲಕ್ಷ ಕೋಟಿ ರೂ. ಹೊರೆಯುವ 4. 45 ಕೋಟಿ ರೂ. ಗೆ ಏರಿಕೆಯಾಗಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಕೇಂದ್ರ ತೆರಿಗೆಗಳಲ್ಲಿ ರಾಜ್ಯಕ್ಕೆ ಹಂಚಿಕೆ ಮಾಡಿದ್ದ 24,273 ಕೋಟಿ ರೂ
.ಗಳಲ್ಲಿ ಸೆಪ್ಟೆಂಬರ್ ವರೆಗೆ ಕೇವಲ 9,488 ಕೋಟಿ ಮೊತ್ತವನ್ನಷ್ಟೇ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಅಂದರೆ ನಿಗದಿತ ಮೊತ್ತದ ಶೇ.39ರಷ್ಟನ್ನು ಮಾತ್ರ ಕೇಂದ್ರ ನೀಡಿದೆ ಎಂದು ದಾಖಲಾಗಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಬಿ ಇಡಿ ಕೋರ್ಸ್ ಪ್ರವೇಶ ಪ್ರಕ್ರಿಯೆ

0

ನಿಗದಿತ ವೇಳಾಪಟ್ಟಿಯಂತೆ ಬಿ. ಇಡಿ ಕೋರ್ಸ್ ಪ್ರವೇಶ ಪ್ರಕ್ರಿಯೆ ನಡೆಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥನಾರಾಯಣ ತಿಳಿಸಿದ್ದಾರೆ.

ಕಾಂಗ್ರೆಸ್ ನ ರಾಜುಗೌಡ ಕಡಿಮೆ ವೇಳೆಯಲ್ಲಿ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರಿಸಿ, ಬಿ. ಇಡಿ ಕೋರ್ಸ್ ಪ್ರವೇಶಕ್ಕೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಿಸುವುದು ಕಷ್ಟಸಾಧ್ಯ. ಆದ್ದರಿಂದ ನಿಗದಿತ ವೇಳಾಪಟ್ಟಿಯಂತೆಯೇ ಪ್ರಕ್ರಿಯೆ ನಡೆಯಲಿದೆ ಎಂದು ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಷೇರುಪೇಟೆಗಳಲ್ಲಿ ಸೂಚ್ಯಂಕ ಇಳಿಕೆ

0

ಜಾಗತಿಕ ಮಟ್ಟದಲ್ಲಿ ಕೇಂದ್ರೀಯ ಬ್ಯಾಂಕುಗಳು ಹಣದುಬ್ಬರವನ್ನು ನಿಯಂತ್ರಿಸಲು ಬಡ್ಡಿದರ ಹೆಚ್ಚಿಸಬಹುದು ಎಂಬ ಲೆಕ್ಕಾಚಾರ ಮತ್ತು ಓಮಿಕ್ರಾನ್ ಪ್ರಕರಣಗಳು ಹೆಚ್ಚುತ್ತಿರುವುದು ದೇಶಿ ಶೇರುಪೇಟೆಗಳಲ್ಲಿ ನಕರಾತ್ಮಕ ವಹಿವಾಟು ನಡೆಯುವಂತೆ ಮಾಡಿದವು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 889 ಅಂಶ ಏರಿಕೆ ಕಂಡಿದೆ. ದಿನದ ಕೊನೆಯಲ್ಲಿ 57,011 ಅಂಶಗಳಲ್ಲಿ ವಹಿವಾಟು ಮುಗಿಸಿದೆ. ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 263 ಅಂಶ ಇಳಿಕೆಯಾಗಿ 16,985 ಅಂಶಗಳಲ್ಲಿ ವಹಿವಾಟು ಕೊನೆಗೊಳಿಸಿದೆ.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಬಂಡವಾಳ ಹಿಂತೆಗೆತ ವನ್ನು ಮುಂದುವರಿಸಿದ್ದು ಕೂಡ ಷೇರುಪೇಟೆ ಸೂಚ್ಯಂಕಗಳ ಇಳಿಕೆಗೆ ಕಾರಣವಾಯಿತು ಎಂದು ವರ್ತಕರು ಹೇಳಿದ್ದಾರೆ.

ಕೊರೋನಾ ಆರಂಭವಾದ ನಂತರ ಇದೇ ಮೊದಲ ಬಾರಿಗೆ ಬ್ಯಾಂಕ್ ಆಫ್ ಇಂಗ್ಲೆಂಡ್ ಬಡ್ಡಿ ದರ ಹೆಚ್ಚಿಸುವ ತೀರ್ಮಾನ ಕೈಗೊಂಡಿದೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಷೇರು ಭಾರತವನ್ನು ಮುಂದುವರಿಸಿರುವುದು ದೇಶಿ ಹೂಡಿಕೆದಾರರ ಚಿಂತೆಗೆ ಕಾರಣವಾಗಿದೆ. ಐ. ಟಿ. ಹೊರತುಪಡಿಸಿ ಉಳಿದ ಒಲೆಗಳ ಉದ್ಯಮದ ಷೇರು ಗಳ ಮೌಲ್ಯ ಇಳಿಕೆಯಾಗಿದೆ ಇಳಿಕೆಯಾಗಿದೆ ಎಂದು ಜಿಯೋ ಜಿತ್ ಫೈನಾನ್ಸಿಯಲ್ ಸರ್ವಿಸಸ್ ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ತಿಳಿಸಿದ್ದಾರೆ.

ಪ್ರಪಂಚದ ಹೆಚ್ಚಿನ ಕಡೆಗಳಲ್ಲಿ ಹಣದುಬ್ಬರ ಹೆಚ್ಚಾಗಿ ಆಗುತ್ತಿದೆ. ಆದ್ದರಿಂದ ಎಲ್ಲರ ಗಮನ ಬೇರೆ ಬೇರೆ ದೇಶಗಳ ಕೇಂದ್ರೀಯ ಬ್ಯಾಂಕುಗಳು ಕೈಗೊಳ್ಳುವ ತೀರ್ಮಾನ ಕಡೆ ನೆಟ್ಟಿದೆ ಕೋಟಕ್ ಮಹಿಂದ್ರ ಆಸ್ತಿ ನಿರ್ವಹಣಾ ಕಂಪನಿಯ ಹಿರಿಯ ಅಧಿಕಾರಿ ಶಿವಾನಿ ಕುರಿಯನ್ ತಿಳಿಸಿದ್ದಾರೆ.

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾತೈಲದ ಬೆಲೆಯು ಶೇ.1.48 ರಷ್ಟು ಇಳಿಕೆಯಾಗಿದೆ. ಪ್ರತಿ ಬ್ಯಾರೆಲ್ ಗೆ 73. 91 ಡಾಲರ್ ಗೆ ತಲುಪಿದೆ ಎಂದು ಮೂಲಗಳು ತಿಳಿಸಿವೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ರಾಷ್ಟ್ರಮಟ್ಟದ ಯೋಗಸ್ಪರ್ಧೆಗೆ ಸಾಗರದ ಪ್ರತಿಭೆಗಳು

0

ವಿದ್ಯಾರ್ಥಿಗಳು ಯೋಗಾಸನದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದರಿಂದ ಮಾನಸಿಕ, ದೈಹಿಕ ಸಾಮರ್ಥ್ಯ ಹೆಚ್ಚಾಗುತ್ತದೆ. ಜೊತೆಗೆ ತಮ್ಮ ವ್ಯಕ್ತಿತ್ವ ಕೂಡ ವಿಕಸನಗೊಳ್ಳುತ್ತದೆ ಎಂದು ಇಂದಿರಾಗಾಂಧಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಪ್ರಾಂಶುಪಾಲರಾದ ಡಾ. ಜಿ. ಸಣ್ಣ ಹನುಮಪ್ಪ ಅವರು ಹೇಳಿದ್ದಾರೆ.

ಸಾಗರ ತಾಲೂಕಿನ, ಇಂದಿರಾಗಾಂಧಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮ ನಡೆಯಿತು. ಅಂತರಕಾಲೇಜು ವಿವಿ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಸಮಗ್ರ ಪ್ರಶಸ್ತಿ ಪಡೆದು, ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವ ಯೋಗಪಟು ಗಳನ್ನು ಈ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಯೋಗಾಸನದಲ್ಲಿ ಗಮನಸೆಳೆಯುವ ಸಾಧನೆ ಮಾಡಿದ್ದಾರೆ. ಉತ್ತರಾಖಂಡ್ ನಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಯೋಗಾಸನ ಸ್ಪರ್ಧೆಗೆ ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿಯಾಗಿದೆ. ಈ ವಿದ್ಯಾರ್ಥಿಗಳಿಂದ ಇತರ ವಿದ್ಯಾರ್ಥಿಗಳು ಪ್ರೇರಣೆ ಪಡೆಯಬೇಕು ಎಂದು ಡಾ. ಜಿ. ಸಣ್ಣ ಹನುಮಪ್ಪ ಅವರು ತಿಳಿಸಿದ್ದಾರೆ.

“ಯೋಗಾಸನ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ತೊಡಗಿಸಿಕೊಂಡರೆ ಮಾತ್ರ ಉನ್ನತ ಸಾಧನೆ ಮಾಡಬಹುದು. ಈ ಭಾಗದ ಹಲವು ಗ್ರಾಮೀಣ ಪ್ರತಿಭೆಗಳು ಯೋಗಾಸನದಲ್ಲಿ ಹೆಸರು ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅವರಿಗೆ ಉಜ್ವಲ ಭವಿಷ್ಯವಿದೆ” ಎಂದು ಯೋಗ ತರಬೇತಿದಾರರಾದ ವನಶ್ರೀ ಮಂಜಪ್ಪ ಅವರು ಹೇಳಿದ್ದಾರೆ.

ಕಾರ್ಯಕ್ರಮದಲ್ಲಿ ಕಾಲೇಜಿನ ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ವೆಂಕಟೇಶ್, ಸಾಂಸ್ಕೃತಿಕ ವಿಭಾಗದ ಸಂಚಾಲಕ ಪ್ರೊ. ಮಹಾಬಲೇಶ್ವರ್, ಯೋಗ ಶಿಕ್ಷಕ ಶ್ರೀಧರ ಮೂರ್ತಿ ಇನ್ನೂ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಜಾನುವಾರುಗಳಿಗೆ ಲಸಿಕಾ ಅಭಿಯಾನ

0

ಡಿಸೆಂಬರ್ 17 ರಿಂದ ಜನವರಿ 15ರ ವರೆಗೆ ಜಿಲ್ಲಾಧ್ಯಂತ ಉಚಿತವಾಗಿ ಜಾನುವಾರುಗಳಿಗೆ ಕಾಲುಬಾಯಿ ಜ್ವರ ಲಸಿಕೆಯನ್ನು ಹಾಕುವ ಕಾರ್ಯಕ್ರಮವನ್ನು, ಪಶುಪಾಲನಾ ಇಲಾಖೆ ಹಮ್ಮಿಕೊಂಡಿದೆ.

ಕಾಲುಬಾಯಿ ಜ್ವರದ ಲಸಿಕೆ ಕಾರ್ಯಕ್ರಮದಲ್ಲಿ ಜಿಲ್ಲೆಯಾದ್ಯಂತ ಒಟ್ಟು 6.46 ಲಕ್ಷಣ ಜಾನುವಾರುಗಳಿಗೆ (ದನ,ಎಮ್ಮೆ ಮತ್ತು ಹಂದಿಗಳು) ಹಾಕಲಾಗುವುದು.

ಲಸಿಕಾ ಕಾರ್ಯಕ್ರಮದ ವೇಳಾ ಪಟ್ಟಿಯನ್ನು ತಾಲೂಕುವಾರು ಗ್ರಾಮವಾರು ತಯಾರಿಸಲಾಗಿದೆ. ಪಶುಪಾಲನಾ ಇಲಾಖೆಯ ಅಧಿಕಾರಿ ಸಿಬ್ಬಂದಿಯನ್ನು ಒಳಗೊಂಡ ಲಸಿಕಾ ತಂಡಗಳು ವೇಳಾಪಟ್ಟಿಯಂತೆ ಆಯಾ ಗ್ರಾಮಗಳಿಗೆ ಭೇಟಿ ನೀಡಿ ಜಾನುವಾರುಗಳಿಗೆ ಉಚಿತವಾಗಿ ಲಸಿಕೆಯನ್ನು ಹಾಕುವರು.

ಈ ಲಸಿಕೆಯನ್ನು ಪಡೆದಮೇಲೆ ಜಾನುವಾರುಗಳಲ್ಲಿ ಹಾಲು ಕಡಿಮೆಯಾಗುವುದು ಅಥವಾ ಗರ್ಭಪಾತದ ಅಂತಹ ಸಮಸ್ಯೆ ಎದುರಾಗುವುದಿಲ್ಲ. ಯಾವುದೇ ಮೂಡನಂಬಿಕೆ ಅಥವಾ ತಪ್ಪು ಗ್ರಹಿಕೆಗೆ ಒಳಗಾಗದೆ ರೈತರು ತಮ್ಮ ಜಾನುವಾರುಗಳಿಗೆ ಕಡ್ಡಾಯವಾಗಿ ಲಸಿಕೆಯನ್ನು ಹಾಕಿಸಬೇಕೆಂದು ಪಶುಪಾಲನಾ ಇಲಾಖೆಯ ಉಪನಿರ್ದೇಶಕರು ಮನವಿ ಮಾಡಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ವಿವಿಧ ಕೋರ್ಸ್ ಗಳಿಗೆ ಡಿ 31 ರವರೆಗೆ ಪ್ರವೇಶಾವಕಾಶ

0

ಬೆಂಗಳೂರು: ಪ್ರಸಕ್ತ ಸಾಲಿನಲ್ಲಿ ರಾಜ್ಯದಲ್ಲಿ ಎಂಜಿನಿಯರಿಂಗ್, ಫಾರ್ಮಸಿ, ಕೃಷಿ ಮತ್ತು ಇತರ ಕೋರ್ಸುಗಳಿಗೆ ಡಿ.31ರವರೆಗೂ ಪ್ರವೇಶಾವಕಾಶ ಕಲ್ಪಿಸಲು ಸುಪ್ರೀಂಕೋರ್ಟ್ ಅನುಮತಿ ನೀಡಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿರುವ ಅವರು ಎಂಜಿನಿಯರಿಂಗ್ ಕೋರ್ಸುಗಳಿಗೆ ಪ್ರತೀವರ್ಷ ಜುಲೈ 31ರೊಳಗೆ ಪ್ರವೇಶಾತಿ ಮುಗಿಸುವಂತೆ ಈ ಹಿಂದೆ (2012ರಲ್ಲಿ) ಸುಪ್ರೀಂಕೋರ್ಟ್ ಆದೇಶಿಸಿತ್ತು. ಆದರೆ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಎಂಜಿನಿಯರಿಂಗ್ ಮತ್ತು ಫಾರ್ಮಸಿ ಕೋರ್ಸುಗಳಿಗೆ ಡಿ.31ರವರೆಗೂ ಪ್ರವೇಶ ಪಡೆಯಲು ಅವಕಾಶ ಕೊಡಬೇಕೆಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಅರ್ಜಿ ಸಲ್ಲಿಸಿತ್ತು.ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು ರಾಜ್ಯದ ಮನವಿಯನ್ನು ಪುರಸ್ಕರಿಸಿದೆ ಎಂದು ತಿಳಿಸಿದರು.

ಸುಪ್ರೀಂಕೋರ್ಟಿನ ಆದೇಶದಂತೆ ಇದೇ ತಿಂಗಳ 31ರೊಳಗೆ ಎಂಜಿನಿಯರಿಂಗ್ ಸೀಟು ಹಂಚಿಕೆ ಪ್ರಕ್ರಿಯೆಯನ್ನು ಮುಗಿಸಬೇಕಾಗಿದೆ. ಹೀಗಾಗಿ ವೈದ್ಯಕೀಯ ಸೀಟು ಹಂಚಿಕೆಯ ನಂತರ ಖಾಲಿ ಉಳಿದ ಎಂಜಿನಿಯರಿಂಗ್, ಆರ್ಕಿಕೆಟ್ಚರ್, ಕೃಷಿ ವಿಜ್ಞಾನ, ಪಶು ವೈದ್ಯಕೀಯ, ಫಾರ್ಮಸಿ ಮುಂತಾದ ಸೀಟುಗಳಿಗೆ ಮತ್ತೊಮ್ಮೆ ‘ಕ್ಯಾಶುಯಲ್ ವೇಕೆನ್ಸಿ ರೌಂಡ್’ ನಡೆಸಲು ತೀರ್ಮಾನಿಸಲಾಗಿದೆ ಎಂದು ಅವರು ವಿವರಿಸಿದರು.

ಹಿಂದಿನ ವರ್ಷಗಳಲ್ಲಿ ರಾಜ್ಯದಲ್ಲಿ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಸೀಟುಗಳನ್ನು ಒಟ್ಟಿಗೇ ಹಂಚಲಾಗುತ್ತಿತ್ತು. ಆದರೆ, ಪ್ರಸಕ್ತ ಸಾಲಿನಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗಗಳ ಆದಾಯ ಮಿತಿ ನಿರ್ಧಾರಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟಿನಲ್ಲಿ ವಿಚಾರಣೆ ನಡೆಯುತ್ತಿದ್ದು, ಇದು ಇತ್ಯರ್ಥವಾಗುವವರೆಗೂ ವೈದ್ಯಕೀಯ ಕೋರ್ಸುಗಳಿಗೆ ಪ್ರವೇಶಾತಿ ಕೈಗೊಳ್ಳದಂತೆ ತಡೆಯಾಜ್ಞೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಸಮಿತಿ (ಎಐಸಿಟಿಇ) ಮತ್ತು ಭಾರತೀಯ ಮೆಡಿಕಲ್ ಕೌನ್ಸಿಲ್ ಜತೆ ಚರ್ಚಿಸಿ, ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಕೋರ್ಸುಗಳಿಗೆ ಸಂಯೋಜಿತವಾಗಿ ಸೀಟು ಹಂಚಿಕೆ ಪ್ರಕ್ರಿಯೆ ನಡೆಸಲು ಅನುಮತಿ ಕೋರಿ ಅರ್ಜಿ ಸಲ್ಲಿಸುವಂತೆ ಕೇಂದ್ರ ಸರಕಾರವನ್ನು ಕೋರಲಾಗುವುದು ಎಂದು ಅವರು ಹೇಳಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಆಸ್ಟ್ರೇಲಿಯ-ಇಂಗ್ಲೆಂಡ್ ಕ್ರಿಕೆಟ್ : ಮೊದಲ ದಿನದಾಟ

0

ಏಷ್ಯನ್ ಸರಣಿಯ ದ್ವಿತೀಯ ಟೆಸ್ಟ್ ಪಂದ್ಯವು ಆಸ್ಟ್ರೇಲಿಯ ಮತ್ತು ಇಂಗ್ಲೆಂಡ್ ತಂಡಗಳ ನಡುವೆ ನಡೆಯಿತು.

ಮೊದಲ ದಿನದ ಮೊದಲನೇ ಇನ್ನಿಂಗ್ಸ್ ನಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಆಸ್ಟ್ರೇಲಿಯಾ ತಂಡ 89 ಓವರ್ ಗಳಲ್ಲಿ 2 ವಿಕೆಟ್ ಪತನಕ್ಕೆ 221 ರನ್ ಗಳಿಸಿಕೊಂಡಿತು. ಡೇವಿಡ್ ವಾರ್ನರ್ 95 ರನ್ ಮತ್ತು ಲಾಬುಷೇನ್ ಶತಕದಿಂದ ಉತ್ತಮ ಮೊತ್ತ ಕಲೆ ಹಾಕಿ ಪಂದ್ಯ ಆರಂಭಿಸಿದರು.

ಕ್ರೀಸ್ ನಲ್ಲಿದ್ದ ಲಾಬುಷೇನ್ ಎರಡನೇ ದಿನದ ಬೆಳಿಗ್ಗೆ ತಮ್ಮ ಶತಕಕ್ಕೆ ಅಗತ್ಯವಿದ್ದ 5 ರನ್ ಸೇರಿಸಿದರು. 22ನೇ ಟೆಸ್ಟ್ ನಲ್ಲಿ ಆಡುತ್ತಿರುವ ಅವನಿಗೆ ಇದು 7ನೇ ಶತಕ, ಹಾಗೂ ಲಾಬುಷೇನ್ ಶತಕ ಮತ್ತು ಸ್ಟೀವನ್ ಸ್ಮಿತ್ ಮತ್ತು ಅಲೆಕ್ಸ್ ಕ್ಯಾರಿಯಾ ಮಿಂಚಿನ ಬ್ಯಾಟಿಂಗ್ ಬಲದಿಂದ ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್ ನಲ್ಲಿ 9 ವಿಕೆಟ್ ನಷ್ಟಕ್ಕೆ 473 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಆದರೆ ದಿನದಾಟದ ಒಂಬತ್ತನೇ ಓವರ್ನಲ್ಲಿ ಲಾಬುಷೇನ್ (LBW) ಬಲೆಗೆ ಬಿದ್ದರು, ಇನ್ನೊಂದೆಡೆ ಇದ್ದ ಸ್ಟೀವನ್ ಇನ್ನಿಂಗ್ಸ್ ಕಟ್ಟುವ ಹೊಣೆಯನ್ನು ತಮ್ಮ ಮೇಲೆಳೆದುಕೊಂಡರು, ಈ ಹಂತದಲ್ಲಿ ಸ್ಮಿತ್ ಜೊತೆಗೂಡಿದ ಅಲೆಕ್ಸ್ ಕ್ಯಾರಿ 107 ಎಸೆತಗಳಲ್ಲಿ 5 ಬೌಂಡರಿ ಸಿಡಿಸಿ 51ರನ್ ಗಳಿಸಿಕೊಂಡರು.

ಎರಡು ಓವರ್ ಗಳ ನಂತರ ಕ್ಯಾರಿ ಕೂಡ ಔಟಾದರು, ಕೊನೆಯ ಹಂತದಲ್ಲಿ ಮಿಂಚಿದ ಸ್ಟಾರ್ಕ್ ಔಟಾಗದೆ 39 ಎಸೆತಗಳಲ್ಲಿ 5 ಬೌಂಡರಿ ಸಿಡಿಸಿ 39ರನ್ ಗಳಿಸಿಕೊಂಡರು, ಮತ್ತು ಮಿಚೆಲ್ ನೆಸರ್ 24 ಎಸೆತಗಳಲ್ಲಿ 5 ಬೌಂಡರಿ ಸಿಡಿಸಿ 35ರನ್ ಗಳಿಸಿಕೊಂಡರು.

5 ನೇ ವಿಕೆಟ್ ಜೊತೆಯಾಟಕ್ಕೆ ಅಂಕಣ ಇಳಿದು ಆಡಿದ ಸ್ಮಿತ್ 91 ರನ್ ಸೇರಿಸಿದರು, ತಮ್ಮ ಶತಕಕ್ಕೆ 7 ರನ್ ಗಳ ಅಗತ್ಯವಿದ್ದ ಸಂದರ್ಭದಲ್ಲಿ 201 ಎಸೆತಗಳಲ್ಲಿ 12 ಬೌಂಡರಿ 93 ರನ್ ಗಳಿಸಿಕೊಂಡರು, ಅಷ್ಟರಲ್ಲಿಯೇ ಆಂಡರ್ಸನ್ ಅವರ ಬೌಲಿಂಗ್ ನಲ್ಲಿ (LBW) ಬಲೆಗೆ ಬಿದ್ದರು, ದಿನದಾಟದ ಮುಕ್ತಾಯಕ್ಕೆ ಸ್ವಲ್ಪ ಸಮಯಕ್ಕೆ ಮುಂಚೆಯೇ ಹಂಗಾಮಿ ನಾಯಕ ಸ್ಮಿತ್ ಡಿಕ್ಲೇರ್ ಘೋಷಿಸಿದರು.

ನಂತರ ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ದಿನದಾಟದ ಕೊನೆಗೆ ತಂಡವು 8.4 ಓವರ್ ಗಳಲ್ಲಿ 17 ರನ್ ಗಳಿಸುವಷ್ಟರಲ್ಲಿ 2 ವಿಕೆಟ್ ಕಳೆದುಕೊಂಡು, ಆಟ ಮುನ್ನಡೆಸಲಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಏಷ್ಯನ್ ಹಾಕಿ : ಭಾರತ ಸೆಮಿಫೈನಲ್ ಗೆ

0

ಏಷ್ಯಾನ್ ಚಾಂಪಿಯನ್ಸ್ ಟ್ರೋಫಿ “ಹಾಕಿ” ಟೂರ್ನಿಯು ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ಪಂದ್ಯ ನಡೆಯಿತು, ಪಾಕಿಸ್ತಾನದ ವಿರುದ್ಧ ಭಾರತ ಜಯ ಸಾಧಿಸಿ ಸೆಮಿಫೈನಲ್ ಹಂತಕ್ಕೆ ಕಾಲಿಟ್ಟಿದೆ.
ಟೋಕಿಯೋ ಒಲಂಪಿಕ್ಸ್ ನಲ್ಲಿ ‘ಕಂಚಿನ ಪದಕ’ ಗೆದ್ದು ದಾಖಲೇ ಮಾಡಿದ್ದ ಭಾರತ ತಂಡವು,ಈ ಟೂರ್ನಿಯಲ್ಲಿ ಸತತ ಎರಡನೇ ಪಂದ್ಯದಲ್ಲಿ ‘ಫೈನಲ್’ ಪ್ರವೇಶದತ್ತ ದಾಪುಗಾಲಿಟ್ಟಿದೆ.
ಎರಡನೇ ಪಂದ್ಯದಲ್ಲಿ ಆತಿಥೇಯ ಬಾಂಗ್ಲಾ ವಿರುದ್ಧ ಬಾರಿ ಜಯಗಳಿಸಿತ್ತು, ಮೊದಲ ಪಂದ್ಯದಲ್ಲಿ ಕೊರಿಯಾ ಎದುರು ‘ಡ್ರಾ’ ಮಾಡಿಕೊಂಡಿತು.
ಕಳೆದ ಬಾರಿ ಮಸ್ಕತ್ ನಲ್ಲಿ ನಡೆದಿದ್ದ ಟೂರ್ನಿಯ ಫೈನಲ್ ಪಂದ್ಯವು ಮಳೆಯಿಂದಾಗಿ ರದ್ದಾಗಿತ್ತು, ಆದ್ದರಿಂದ ಭಾರತ ಮತ್ತು ಪಾಕ್ ಪ್ರಶಸ್ತಿ ಹಂಚಿಕೊಂಡಿದ್ದವು.
ಶುಕ್ರವಾರ ನಡೆದ ಪಂದ್ಯದಲ್ಲಿ ಪಾರಮ್ಯ ಮೆರೆದ ಭಾರತ ತಂಡವು 3-1 ಗೋಲುಗಳಿಂದ ಪಾಕ್ ತಂಡವನ್ನು ಹಣಿಯಿತು, ಹರ್ಮನ್ ಪ್ರೀತ್ (8 ನೇ ನಿಮಿಷ ಮತ್ತು 52 ನೇ ನಿಮಿಷ) ಗಳಲ್ಲಿ 2 ಪೆನಾಲ್ಟಿ ಕಾರ್ನರ್ ಗಳನ್ನು ಗೋಲ್ ಗಳಲ್ಲಿ ಪರಿವರ್ತಿಸಿದ್ದು ತಂಡದ ಜಯದಲ್ಲಿ ಪ್ರಮುಖ ಕಾರಣವಾದವು.
42 ನೇ ನಿಮಿಷದಲ್ಲಿ ಆಕಶದೀಪ್ ಲೆಫ್ಟ್ ಪ್ಲಾಂಕ್ ನಿಂದ ಸಮಿತ್ ಡ್ರೈವ್ ಮಾಡಿದ ಚೆಂಡನ್ನು ರಿವರ್ಸ್ ಹಿಟ್ ಮಾಡುವ ಮೂಲಕ ಗೋಲ್ ಪೆಟ್ಟಿಗೆ ಸೇರಿಸಿದರು,ಇದರಿಂದಾಗಿ ಗೋಲ್ ಅಂತರ ಹೆಚ್ಚಾಯಿತು,3 ನಿಮಿಷಗಳ ನಂತರ ಪಾಕ್ ಕೂಡ ತಿರುಗೇಟು ನೀಡಿತು,ಇದರ ನಂತರ ಭಾರತದ ರಕ್ಷಣಾ ಪಡೆ ಮತ್ತಷ್ಟು ಚುರುಕಾಯಿತು, ಅದರಿಂದಾಗಿ ಪಾಕ್ ಬಳಗವು ಗೋಲ್ ಗಳಿಸಲು ಪರದಾಡಿತು, ಈ ಒತ್ತಡವನ್ನು ಸಮರ್ಥವಾಗಿ ಬಳಸಿಕೊಂಡ ಹರ್ಮನ್ ಪ್ರೀತ್ ಮತ್ತೊಂದು ಪೆನಾಲ್ಟಿಯಲ್ಲಿ ಗೋಲ್ ಬಾರಿಸಿದರು.
ಪಂದ್ಯದ 2 ಕ್ವಾರ್ಟರ್ ಗಳಲ್ಲಿ ಭಾರತದ ಆಟಗಾರರೇ ಚೆಂಡಿನ ಮೇಲೆ ಹೆಚ್ಚು ಸಮಯ ನಿಯಂತ್ರಣ ಸಾಧಿಸಿದ್ದರು,ಅದರಲ್ಲೂ ಹರ್ಮನ್ ಪ್ರೀತ್ ಪದೇ ಪದೇ ನಡೆಸಿದ ದಾಳಿಯನ್ನು ತಡೆಯುವಲ್ಲಿ ಪಾಕ್ ತಂಡದ ಗೋಲ್ ಕೀಪರ್ ಮಝರ್ ಅಬ್ಬಾಸ್ ಅವರ ಆಟ ಅಮೋಘವಾಗಿತ್ತು, ಅರ್ಧ ವಿರಾಮಕ್ಕೆ ಭಾರತವು 1 – 0 ಯಿಂದ ಮುಂದಿತ್ತು.
ಆದರೆ ಪಾಕ್ ತಂಡವು ತನ್ನ ಮೊದಲ ಪಂದ್ಯದಲ್ಲಿ ಜಪಾನ್ ಎದುರು ‘ಡ್ರಾ’ಮಾಡಿಕೊಂಡಿತ್ತು, ಭಾರತ ತಂಡವು 7 ಪಾಯಿಂಟ್ ಗಳೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿದೆ.
ಈ ಪಂದ್ಯದಲ್ಲಿ ಭಾರತವು 8 ನೇ ನಿಮಿಷದಲ್ಲಿಯೇ ಪಾಕ್ ರಕ್ಷಣಾ ಗೋಡೆಯನ್ನು ದಾಟುವಲ್ಲಿ ಭಾರತದ ಸ್ಟ್ರೈಕರ್ ಹರ್ಮನ್ ಪ್ರೀತ್ ಯಶಸ್ವಿಯಾದರು, ಪೆನಾಲ್ಟಿ ಅವಕಾಶದಲ್ಲಿ ಚೆಂಡನ್ನು ಕೆಳಮಟ್ಟದ ‘ಫ್ಲಿಕ್’ ಮೂಲಕ ಗೋಲ್ ಪೆಟ್ಟಿಗೆ ಸೇರಿಸುವಲ್ಲಿ ಯಶಸ್ವಿಯಾದರು.
ಭಾರತ ತಂಡವು ಸೆಮಿಫೈನಲ್ ಹಂತದ ಪದ್ಯವನ್ನು ಭಾನುವಾರ ಜಪಾನ್ ತಂಡದ ಎದುರು ಸೆಣಸಲಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಸರೋಗೆಸಿ ತಾಯ್ತನ ವಿಧೇಯಕ ಒಪ್ಪಿಗೆ

0

ಸಂಸತ್ತಿನಲ್ಲಿ ಬಾಡಿಗೆ ತಾಯಿ ಅಥವಾ ಬದಲಿ ತಾಯಿಯ ಮೂಲಕ ಮಗುವನ್ನು ಪಡೆಯುವ ಕುರಿತಾದ ವಿವಾದಿತ “ಸರೋಗೆಸಿ ವಿಧೇಯಕಕ್ಕೆ” ಅನುಮೋದನೆ ನೀಡಲಾಗಿದೆ.

ಸರೋಗೆಸಿ ವಿಧೇಯಕ ಅನುಮೋದನೆ ದೊರೆತಿರುವುದರಿಂದ ಇನ್ನುಮುಂದೆ ದೇಶದಲ್ಲಿ ಹಣ ನೀಡಿ ಬೇರೆಯವರ ಗರ್ಭದಲ್ಲಿ ತಮ್ಮ ಮಗುವಿನ ಜನ್ಮ ಪಡೆಯುವ ವ್ಯವಹಾರ ಕಾನೂನಾತ್ಮಕವಾಗಿ ಕೈಗೊಳ್ಳಬಹುದಾಗಿದೆ.

ಡಿಸೆಂಬರ್ 14ರಂದು ಹಲವು ತಿದ್ದುಪಡಿಗಳೊಂದಿಗೆ ರಾಜ್ಯಸಭೆಯಲ್ಲಿ ಈ ವಿಧೇಯಕವನ್ನು ಶುಕ್ರವಾರ ಲೋಕಸಭೆಗೆ ವಾಪಸ್ ಕಳುಹಿಸಲಾಗಿತ್ತು.

ಕೆಳಮನೆಯಲ್ಲಿ ಪ್ರತಿಪಕ್ಷಗಳ ಗದ್ದಲದ ನಡುವೆಯೇ ಧ್ವನಿಮತದ ಮೂಲಕ ಸರೋಗೆಸಿ ವಿಧೇಯಕಕ್ಕೆ ಅನುಮತಿ ದೊರೆತಿದೆ.

ಬಾಡಿಗೆ ತಾಯ್ತನವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ‘ರಾಷ್ಟ್ರೀಯ ಸರೋಗೆಸಿ’ ಮತ್ತು ‘ರಾಜ್ಯ ಸರೋಗೆಸಿ ಮಂಡಳಿ’ ಬದಲಾಯಿಸಲು ರಚನೆ, ಸರೋಗೆಸಿ ಪ್ರಕ್ರಿಯೆಯ ನಿಯಂತ್ರಣಕ್ಕೆ ಸೂಕ್ತ ಅಧಿಕಾರಗಳ ನೇಮಕಾತಿ ಸೇರಿದಂತೆ ಹಲವು ನೂತನ ಪ್ರಸ್ತಾವಗಳನ್ನು ಹೊಸ ಕಾಯ್ದೆ ಒಳಗೊಂಡಿದೆ.

ಅಧಿಕೃತವಾಗಿ ಮದುವೆಯಾಗಿ ಐದು ವರ್ಷ ಆಗಿರುವ ಭಾರತೀಯ ದಂಪತಿ ಮಾತ್ರ ‘ಸರೋಗೆಸಿ’ ಗೆ ಅರ್ಹರಾಗಿರುತ್ತಾರೆ. ಆದರೆ ಈ ಪ್ರಕ್ರಿಯೆಯು ಸೇವಾ ಅಥವಾ ನೈತಿಕತೆ ಆಧರಿತವಾಗಿರಬೇಕೆ ಮಗುವನ್ನು ಪಡೆಯಲು ಚಿಕಿತ್ಸೆ ವೆಚ್ಚ ಹೊರತಾಗಿ ಇತರ ಯಾವುದೇ ಹಣಕಾಸು ವ್ಯವಹಾರಗಳನ್ನು ನಡೆಸುವಂತ್ತಿಲ್ಲ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.