Thursday, February 12, 2026
Thursday, February 12, 2026
Home Blog Page 1791

ಜಿಪಂ ಗಳಿಗೆ ಕಾರ್ಯನಿರ್ವಹಣೆ ಶ್ರೇಯಾಂಕ ಜಾರಿಗೆ – ಸಿಎಂ

0

ಇದೇ ಪ್ರಥಮ ಬಾರಿಗೆ ಜಿಲ್ಲಾ ಪಂಚಾಯಿತಿ ಸಿಇಒಗಳೊಂದಿಗೆ ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ವಿಸ್ತೃತ ಸಭೆ ನಡೆಸಿದರು. ಉತ್ತಮ ಕೆಲಸ ಮಾಡಿದ ಅಧಿಕಾರಿಗಳನ್ನು ಮುಕ್ತವಾಗಿ ಪ್ರಶಂಶಿಸಿಸಿದರು. ಆದರೆ ನಿಷ್ಕ್ರೀಯ ಅಧಿಕಾರಿಗಳ ವಿರುದ್ಧ ಕಿಡಿಗಾರಿದರು. ಮುಂದಿನ ದಿನಗಳಲ್ಲಿ ಜಿ. ಪಂ. ಸಿಇಒಗಳ ಕಾರ್ಯನಿರ್ವಹಣೆ ಸಂಬಂಧ ಜಿಲ್ಲಾವಾರು ಶ್ರೇಯಾಂಕ ನೀಡುವುದಾಗಿ ಮುಖ್ಯಮಂತ್ರಿ ಅವರು ತಿಳಿಸಿದರು.

ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ವಿಸ್ತೃತ ಸಭೆಯಲ್ಲಿ ಮಾತನಾಡುತ್ತಿದ್ದರು.”ಜನೋಪಯೋಗಿ ಸರ್ಕಾರ ವಾಗಬೇಕಾದರೆ ಜಿಲ್ಲಾ ಪಂಚಾಯಿತಿಗಳು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುವುದು ಮುಖ್ಯ. ನಿಮ್ಮ ಜಿಲ್ಲೆಯಲ್ಲಿ ಉತ್ತಮ ಕಾರ್ಯ ಶೈಲಿಯಿಂದ ನಿಮ್ಮದೇ ಛಾಪನ್ನು ಮೂಡಿಸಿ. ಕೆಳಹಂತದಲ್ಲಿ ಯೋಜನೆಗಳ ಅನುಷ್ಠಾನಕ್ಕೆ ಮಹತ್ವ ನೀಡಬೇಕು. ವಿಕೇಂದ್ರೀಕರಣದ ಮೂಲಕ ನಿಮಗೆ ಹೆಚ್ಚಿನ ಅಧಿಕಾರ ನೀಡಲಾಗಿದೆ. ನಿಮ್ಮ ವಿವೇಚನಾಧಿಕಾರ ವನ್ನು ಜಾಗರೂಕತೆಯಿಂದ ಜನಹಿತಕ್ಕಾಗಿ ಬಳಸಬೇಕು. ಬಡವರ ಅನುಕೂಲಕ್ಕಾಗಿ ಅಧಿಕಾರಿಗಳು ಕೈಗೊಳ್ಳುವ ತೀರ್ಮಾನಕ್ಕೆ ಸರ್ಕಾರ ಸಂಪೂರ್ಣ ಬೆಂಬಲವಿದೆ ಎಂದು ಬಸವರಾಜ ಬೊಮ್ಮಾಯಿ ಅವರು ಭರವಸೆ ನೀಡಿದರು.

ಅಧಿಕಾರಿಗಳು ಸ್ಪಷ್ಟ ನಿರ್ಣಯ ತೆಗೆದುಕೊಳ್ಳಬೇಕು. ಅನಿಶ್ಚಿತತೆ ಪ್ಲೇಗ್ ಇದ್ದಂತೆ. ವಿಳಂಬ ಧೋರಣೆ ಅತ್ಯಂತ ದುಬಾರಿಯಾಗುತ್ತದೆ. ಜನರ ಸುತ್ತ ಅಭಿವೃದ್ಧಿಯಾಗಬೇಕು ಹೊರತು ಅಭಿವೃದ್ದಿ ಸುತ್ತ ಜನರು ಓಡಾಡಬಾರದು. ಜನರು ಹೆಚ್ಚಿನ ಸಂಖ್ಯೆಯಲ್ಲಿ ನಿಮ್ಮ ಹತ್ತಿರ ಬರುತ್ತಾರೆ ಎಂದರೆ ಕೆಳಹಂತದಲ್ಲಿ ವ್ಯವಸ್ಥೆ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದರ್ಥ. ಆದ್ದರಿಂದ ವ್ಯವಸ್ಥೆ ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು. ವ್ಯಕ್ತಿಗಳು ವ್ಯವಸ್ಥೆಯನ್ನು ಮುನ್ನಡೆಸಬೇಕು. ಕೆಳಹಂತದ ಅಧಿಕಾರಿ, ಸಿಬ್ಬಂದಿ ಮೇಲೆ ಹತೋಟಿ ಹೊಂದಿರಬೇಕು. ಕಾಲಕಾಲಕ್ಕೆ ಪ್ರಗತಿ ಪರಿಶೀಲನೆ ನಡೆಸಬೇಕು. ಹಳ್ಳಿಗಳಿಗೆ ನಿಯಮಿತವಾಗಿ ಭೇಟಿ ನೀಡಿ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಬಸವರಾಜ್ ಬೊಮ್ಮಾಯಿ ಅವರು ಸೂಚನೆ ನೀಡಿದರು.

ಕಾರ್ಯಕ್ರಮ ಅನುಷ್ಠಾನದಲ್ಲಿರುವ ಕಾನೂನು ಸಮಸ್ಯೆ, ಎದುರಾಗುವ ತೊಡಕಿನ ಬಗ್ಗೆ ವರದಿ ಮಾಡಿ ಇದನ್ನು ಇತ್ಯರ್ಥಗೊಳಿಸಬೇಕು. ಇಂಜಿನಿಯರಿಂಗ್ ವಿಭಾಗದ ಮೇಲೆ ನಿಯಂತ್ರಣ ಇಳಿಸಿಕೊಳ್ಳಬೇಕು. ಇಂಜಿನಿಯರ್ ಗಳು ಸಮರ್ಪಕವಾಗಿ ಕೆಲಸ ನಿರ್ವಹಿಸದ ಕುರಿತು ನೀವು ವರದಿ ಸಲ್ಲಿಸಿದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುತ್ತದೆ. ಜಲಜೀವನ್ ಮಿಷನ್, ಉದ್ಯೋಗ ಖಾತರಿ ಹೀಗೆ ಇತರ ಕೇಂದ್ರ ಪುರಸ್ಕೃತ ಯೋಜನೆಗಳ ಅನುಷ್ಠಾನಕ್ಕೆ ತೀವ್ರ ನಿಗಾ ವಹಿಸಬೇಕು. ಇವುಗಳ ಕುರಿತ ಪ್ರಗತಿ ಮಾಹಿತಿಯನ್ನು ಪ್ರತ್ಯೇಕವಾಗಿ ನಿರ್ವಹಿಸಿ ಎಂದು ಕೂಡ ಸೂಚನೆ ನೀಡಿದರು.

‘ನಾನಾ ಯೋಜನೆಗಳಡಿ ಗುತ್ತಿಗೆದಾರರು ನಿಯಮಾನುಸಾರ ಎಂದು ಪರಿಶೀಲಿಸಬೇಕು. ಗುಣಮಟ್ಟದ ವಸ್ತುಗಳ ಬಳಕೆ ಮತ್ತು ಕಾಮಗಾರಿ ಅನುಷ್ಠಾನವನ್ನು ಖಾತರಿಪಡಿಸಬೇಕು. ಗ್ರಾಮೀಣ ಪ್ರದೇಶದಲ್ಲಿ ಶೌಚಾಲಯ ನಿರ್ಮಾಣ ಸಾಕಷ್ಟು ಪ್ರಮಾಣದಲ್ಲಿ ಆಗಿದೆ. ಇವುಗಳ ಬಳಕೆಯನ್ನು ಜನರು ಮಾಡಿಕೊಳ್ಳುವಂತೆ ಮನವೊಲಿಸಬೇಕು. ಹಾಗೆಯೇ ಘನತ್ಯಾಜ್ಯ ನಿರ್ವಹಣೆಗೆ ಆದ್ಯತೆ ನೀಡಬೇಕು’ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆಎಸ್ ಈಶ್ವರಪ್ಪ ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಸಚಿವರಾದ ಗೋವಿಂದ ಕಾರಜೋಳ, ಆರ್. ಅಶೋಕ್, ಸಂಪುಟದ ಇತರೆ ಸದಸ್ಯರು ಇನ್ನು ಮುಂತಾದವರು ಭಾಗವಹಿಸಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಮುಂಬೈನತ್ತ ಖಲಿಸ್ತಾನಿ ಉಗ್ರರ ಚಿತ್ತ!

0

ಲುಧಿಯಾನ ಕೋರ್ಟ್ ಆವರಣದಲ್ಲಿ ಐ ಇಡಿ ಸ್ಫೋಟ ನಡೆಸಿದ ಖಲಿಸ್ತಾನಿ ಉಗ್ರರ ಕಣ್ಣು ದೇಶದ ವಾಣಿಜ್ಯ ನಗರ ಎಂದು ಪ್ರಖ್ಯಾತವಾಗಿರುವ ಮುಂಬೈ ಮೇಲೆ ಬಿದ್ದಿದೆ.

ಈಗಾಗಲೇ ಓಮಿಕ್ರಾನ್ ಸೋಂಕಿನಿಂದ ತೀವ್ರವಾಗಿ ಮುಂಬೈ ತತ್ತರಿಸಿದೆ. ಈಗ ಹೊಸವರ್ಷದ ಸಂಭ್ರಮಾಚರಣೆಯಲ್ಲಿ ಖಲಿಸ್ತಾನಿ ಉಗ್ರರು ದಾಳಿ ನಡೆಸಲಿದ್ದಾರೆ ಎಂದು ಗುಪ್ತಚರ ಅಧಿಕಾರಿಗಳು ಎಚ್ಚರಿಕೆ ಸಂದೇಶವನ್ನು ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ಮುಂಬೈ ನಗರದಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದೆ. ಪೊಲೀಸ್ ಸಿಬ್ಬಂದಿಯ ಎಲ್ಲಾ ರಜೆಗಳನ್ನು ರದ್ದುಗೊಳಿಸಲಾಗಿದೆ. ಡಿಸೆಂಬರ್ 31ರಂದು ನಗರವನ್ನು ಪೂರ್ಣರೂಪದಲ್ಲಿ ಕಾವಲು ಕಾಯಲು ಸನ್ನದ್ಧರಾಗಿ ವಂತೆ ಮಹಾರಾಷ್ಟ್ರ ಗೃಹ ಸಚಿವಾಲಯ ನಿರ್ದೇಶನ ನೀಡಿದೆ.

ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್, ಬಾಂದ್ರಾ ಚರ್ಚ್ ಈ ಪ್ರದೇಶಗಳಲ್ಲಿ ಪೊಲೀಸರು ತೀವ್ರ ನಿಗಾವಹಿಸಿದ್ದಾರೆ. ರೈಲ್ವೆ ಪೊಲೀಸ್ ಇಲಾಖೆಯ ಮೂರು ಸಾವಿರ ಸಿಬ್ಬಂದಿಗಳು ಕೂಡ ನಗರದಲ್ಲಿ ರಕ್ಷಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ.

ಒಟ್ಟಾರೆಯಾಗಿ ನೈಟ್ ಕರ್ಫ್ಯೂ ಕೂಡ ಇರುವುದರಿಂದ ಜನರ ಸಂಚಾರದ ಮೇಲೆ ಹದ್ದಿನಕಣ್ಣು ಇರಿಸಲಾಗಿದೆ. ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ಕೂಡಲೇ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗುತ್ತದೆ ಎಂದು ಮುಂಬೈ ಪೊಲೀಸ್ ನ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಜಿಎಸ್ ಟಿ ಪರಿಹಾರ ಮುಂದುವರೆಸಲು ರಾಜ್ಯಗಳ ಆಗ್ರಹ

0

ನವದೆಹಲಿಯ ವಿಜ್ಞಾನ ಭವನದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ ಅವರು ರಾಜ್ಯಗಳ ಹಣಕಾಸು ಸಚಿವರಿಗೆ ಬಜೆಟ್ ಸಿದ್ಧತೆ ಸಭೆಯನ್ನು ನಡೆಸಿದ್ದಾರೆ.

ಕೇಂದ್ರ ಸರ್ಕಾರದ ಬಜೆಟ್ ಗೂ ಮುಂಚೆ ಸರಕು ಹಾಗೂ ಸೇವಾ ತೆರಿಗೆ ಮಂಡಳಿ ಸಭೆ ನಡೆಯಲಿದೆ. ಕೋವಿಡ್ ನಿಂದಾಗಿ ಆರ್ಥಿಕ ಬಿಕ್ಕಟ್ಟು ಉಂಟಾಗಿರುವ ಕಾರಣದಿಂದ ಮುಂದಿನ 5 ವರ್ಷದವರೆಗೆ ಜಿಎಸ್ ಟಿ ಪರಿಹಾರ ಮುಂದುವರಿಸಬೇಕು ಎಂದು ಕೇರಳ ಸೇರಿ ಐದು ರಾಜ್ಯಗಳು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿವೆ. ಕೇರಳ ,ದೆಹಲಿ, ಛತ್ತಿಸ್ಗಡ್ ಸೇರಿ ಐದು ರಾಜ್ಯಗಳು ಮನವಿ ಮಾಡಿವೆ.

ಕೊರೋನಾ ಬಿಕ್ಕಟ್ಟಿನಿಂದಾಗಿ ರಾಜ್ಯಗಳ ಆರ್ಥಿಕ ಪರಿಸ್ಥಿತಿ ಸಂಕಷ್ಟಕ್ಕೆ ಸಿಲುಕಿದೆ. ಆದ್ದರಿಂದ ಇನ್ನೂ ಐದು ವರ್ಷಗಳಿಗೆ ಕೇಂದ್ರ ಸರ್ಕಾರವು ಪರಿಹಾರ ನೀಡಬೇಕು ಎಂಬುದು ರಾಜ್ಯಗಳ ಮನವಿಯಾಗಿದೆ.

ಇದನ್ನು ಬಜೆಟ್ ಪೂರ್ವ ಜಿಎಸ್ ಟಿ ಸಭೆ ಎಂದು ಸಹ ಕರೆಯಲಾಗಿದೆ. ಬಟ್ಟೆ ಹಾಗೂ ಚಪ್ಪಲಿಯ ಮೇಲಿನ ಜಿ ಎಸ್ ಟಿ ಹೆಚ್ಚಳ ಮುಂದೂಡುವ ನಿರೀಕ್ಷೆ ಇದೆ ಎಂದು ವರದಿಯಲ್ಲಿ ತಿಳಿದುಬಂದಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಸ್ಥಳೀಯ ಸಂಸ್ಥೆ ಚುನಾವಣೆ :ಏರಿದ ಕೈ ಬಲ

0

ವಿಧಾನಸಭೆಯ ಎರಡು ಚುನಾವಣೆ, ವಿಧಾನಪರಿಷತ್ 25 ಚುನಾವಣೆ ಬಳಿಕ ಡಿಸೆಂಬರ್ 27 ರಂದು ನಡೆದ 58 ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ವಿರೋಧ ಪಕ್ಷ ಕಾಂಗ್ರೆಸ್ ಈ ಚುನಾವಣೆಯಲ್ಲಿ ಮುನ್ನಡೆ ಸಾಧಿಸಿದೆ.

ಈಬಾರಿ ನಗರಸಭೆ (5) 166 ವಾರ್ಡ್ಗಳಲ್ಲಿ ಕಾಂಗ್ರೆಸ್ 62, ಬಿಜೆಪಿ 66, ಜೆಡಿಎಸ್ 12, ಎಎಪಿ 1, ಪಕ್ಷೇತರ ಅಭ್ಯರ್ಥಿಗಳು 24 ಸ್ಥಾನಗಳನ್ನು ಪಡೆದು ಗೆಲುವು ಸಾಧಿಸಿವೆ.

ಪುರಸಭೆಯ(19) 441 ವಾರ್ಡ್ಗಳಲ್ಲಿ ಕಾಂಗ್ರೆಸ್ 202, ಬಿಜೆಪಿ 176, ಜೆಡಿಎಸ್ 21, ಜನತಾ ಪಕ್ಷ 1, ಎಸ್ ಡಿ ಪಿ ಐ 3 ಹಾಗೂ ಪಕ್ಷೇತರ ಅಭ್ಯರ್ಥಿಗಳು 38 ಸ್ಥಾನಗಳಲ್ಲಿ ಗೆಲುವು ಸಾಧಿಸಿವೆ.

ಪಟ್ಟಣ ಪಂಚಾಯಿತಿಯ (34) 577 ವಾರ್ಡ್ ಗಳಲ್ಲಿ ಕಾಂಗ್ರೆಸ್ 237, ಬಿಜೆಪಿ 191, ಜೆಡಿಎಸ್ 12, ಎಐಎಂಐಎಂ 2, ಎಸ್ ಡಿ ಪಿ ಐ 2 ಹಾಗೂ ಪಕ್ಷೇತರ ಅಭ್ಯರ್ಥಿಗಳು 133 ಸ್ಥಾನಗಳಲ್ಲಿ ವಿಜಯ ಸಾಧಿಸಿದ್ದಾರೆ.
ಒಟ್ಟಾರೆ ಹೇಳುವುದಾದರೆ 1184 ವಾರ್ಡ್ ಗಳಲ್ಲಿ ಕಾಂಗ್ರೆಸ್ 501, ಬಿಜೆಪಿ 433, ಜೆಡಿಎಸ್ 45, ಜನತಾ ಪಕ್ಷ 1, ಎಎಪಿ 1, ಎಐಎಂಐಎಂ 2, ಎಸ್ ಡಿಪಿಐ 6, ಪಕ್ಷೇತರ ಅಭ್ಯರ್ಥಿಗಳು 195 ಮತಗಳಲ್ಲಿ ಗೆಲುವು ಸಾಧಿಸುತ್ತದೆ. ಕಾಂಗ್ರೆಸ್ ಎಲ್ಲಾ ಪಕ್ಷಗಳಿಗಿಂತ ಹೆಚ್ಚು ವಾರ್ಡ್ಗಳಲ್ಲಿ ಗೆಲುವು ಸಾಧಿಸುವ ಮೂಲಕ ಮುಂಚೂಣಿಯಲ್ಲಿದೆ.

ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕ “ಈ ಹಿಂದೆ ಅಲ್ಪಸಂಖ್ಯಾತರು ಹೆಚ್ಚಿರುವ ಕಡೆಗಳಲ್ಲಿ ಬಿಜೆಪಿಗೆ ಹೆಚ್ಚಿನ ಯಶಸ್ಸು ಸಿಗುತ್ತಿರಲಿಲ್ಲ. ಈ ಬಾರಿ ಗದಗ-ಬೆಟಗೇರಿ ಸೇರಿ ಹಲವು ಕಡೆ ನಾವು ದೊಡ್ಡ ಯಶಸ್ಸು ಕಂಡಿದ್ದೇವೆ” ಎಂದು ಪ್ರತಿಕ್ರಿಯಿಸಿದ್ದಾರೆ.

‘ವಿಧಾನಸಭೆ ವಿರೋಧಪಕ್ಷದ ನಾಯಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಬಿಜೆಪಿಯ ವಿರುದ್ಧ ಜನಾಭಿಪ್ರಾಯ ಇದೆ ಎಂಬುದು ಈ ಫಲಿತಾಂಶದಿಂದ ಸ್ಪಷ್ಟವಾಗಿದ್ದು, ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಬೇಕು ಎಂದು ಜನ ಭಾವಿಸಿರುವುದು ಕಾಣುತ್ತಿದೆ’ ಎಂದು ತಿಳಿಸಿದರು.

‘ವಿಜಯಪುರ, ರಾಯಚೂರು, ಶಿರಾ, ಚಿಕ್ಕಮಗಳೂರು ಮತ್ತಿತರ ಕಡೆ ನಮ್ಮವರು ಗೆದ್ದಿದ್ದಾರೆ ಶಿರಾದಲ್ಲಿ ಜೆಡಿಎಸ್ ಮುಳುಗಿತ್ತು ಎಂದವರಿಗೆ ಜನ ಉತ್ತರ ನೀಡಿದ್ದಾರೆ ಎಂದು’ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಯ
ಅವರು ತಿಳಿಸಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಗಡಿಯಲ್ಲಿನ ಸ್ಥಳಗಳಿಗೆ ಚೈನಾ ಹೆಸರು: ಚೀನಾದ ತಂಟೆ ಶುರು

0

ಭಾರತದ ಈಶಾನ್ಯ ಭಾಗದ ಅರುಣಾಚಲ ಪ್ರದೇಶದ 15 ಸ್ಥಳಗಳ ಹೆಸರುಗಳನ್ನು ಚೀನಾ ಬದಲಿಸುವ ಮೂಲಕ ಈ ರಾಜ್ಯಗಳ ಮೇಲೆ ತನ್ನ ಹಕ್ಕು ಇದೆ ಎಂದು ತೋರಿಸುವ ಉದ್ಧಟತನ ಮೆರೆದಿದೆ.

ಭಾರತ ಮತ್ತು ಚೀನಾ ಸೈನಿಕರ ನಡುವೆ ಪೂರ್ವ ಲಡಾಕ್ ನ ಗಡಿಯಲ್ಲಿ 20 ತಿಂಗಳಿಂದ ಸಂಘರ್ಷ ನಡೆಯುತ್ತಿದೆ ಅದರ ನಡುವೆ ಚೀನಾ ಮತ್ತೆ ಕ್ಯಾತೆ ತೆಗೆದಿದೆ.

ಚೀನಾ ಸರ್ಕಾರಿ ಸ್ವಾಮ್ಯದ ಗ್ಲೋಬಲ್ ಟೈಮ್ಸ್ ಪತ್ರಿಕೆಯು ಝಂಗಾಂಗ್ ಅಥವಾ ದಕ್ಷಿಣ ಷಿಝಾಂಗ್ ನ 15 ಸ್ಥಳಗಳಿಗೆ ಮ್ಯಾಂಡರಿನ್ ಭಾಷೆಯ ಹೆಸರು ಇರಿಸಲಾಗಿದೆ ಎಂದು ವರದಿ ಮಾಡಿದೆ.

ಚೀನಾ ಅರುಣಾಚಲ ಪ್ರದೇಶದ 90 ಸಾವಿರ ಚದರ ಕಿಲೋಮೀಟರ್ ಪ್ರದೇಶವು ತನ್ನದೆಂದು ಹೇಳುತ್ತಿದೆ. ಅರುಣಾಚಲ ಪ್ರದೇಶದ ಈ ಭಾಗವನ್ನು ಝಂಗಾಂಗ್ ಅಥವಾ ದಕ್ಷಿಣ ಚೀನಾ ಎಂದು ಕರೆಯುತ್ತಿದೆ.

ಚೀನಾದ ಕ್ರಮಕ್ಕೆ ಭಾರತದ ಅಧಿಕೃತ ಪ್ರತಿಕ್ರಿಯೆ ಇನ್ನೂ ಪ್ರಕಟವಾಗಿಲ್ಲ. ಆದರೆ, ಚೀನಾವು 2017ರ ಏಪ್ರಿಲ್ ನಲ್ಲಿ ಇಂತಹದ್ದೆ ಕ್ರಮಕ್ಕೆ ಮುಂದಾಗಿದ್ದಾಗ ಭಾರತ ಕಟುವಾದ ಪ್ರತಿಕ್ರಿಯೆ ನೀಡಿತ್ತು. ಪಟ್ಟಣಗಳಿಗೆ ಹೊಸ ಹೆಸರುಗಳನ್ನು ಇರಿಸುವುದರಿಂದ ನೆರೆಯ ದೇಶದ ಪ್ರದೇಶದ ಮೇಲೆ ನಿಮ್ಮ ಅಕ್ರಮ ಹಕ್ಕು ಸಾಧನೆಯು ಸಕ್ರಮ ಅನಿಸಿಕೊಳ್ಳುವುದಿಲ್ಲ ಎಂದು ಭಾರತದ ವಿದೇಶಾಂಗ ಸಚಿವಾಲಯವು ತಿಳಿಸಿತ್ತು.

ಚೀನಾದ ಸ್ಟೇಟ್ ಕೌನ್ಸಿಲ್ನ ನಿಯಮಗಳಿಗೆ ಅನುಗುಣವಾಗಿ ದಕ್ಷಿಣ ಟಿಬೆಟ್ ನ 15 ಸ್ಥಳಗಳ ಹೆಸರು ಬದಲಾಯಿಸಲಾಗಿದೆ ಎಂದು ಗ್ಲೋಬಲ್ ಟೈಮ್ಸ್ ಹೇಳಿದೆ. ಸ್ಟೇಟ್ ಕೌನ್ಸಿಲಿಂಗ್ ಅರೆ ಚೀನಾದ ಮುಖ್ಯ ಆಡಳಿತ ಪ್ರಾಧಿಕಾರವಾಗಿದೆ. ದಿನ ಹೇಳುತ್ತಿರುವ 15 ಸ್ಥಳಗಳಲ್ಲಿ 8 ವಸತಿ ಪ್ರದೇಶಗಳು, 4 ಪರ್ವತಗಳು, 2 ನದಿಗಳು ಮತ್ತು 1 ಕಣಿವೆ ಸೇರಿವೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಮಹಾತ್ಮಗಾಂಧೀಜಿ ಅವಹೇಳನ: ಕಾಳಿಚರಣ್ ಮಹಾರಾಜ್ ದಸ್ತಗಿರಿ.

0

ಮಹಾತ್ಮ ಗಾಂಧೀಜಿ ಅವರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದ ಧಾರ್ಮಿಕ ಮುಖಂಡ ಕಾಳಿ ಚರಣ್ ಮಹಾರಾಜ್ ಅವರನ್ನು ಮಧ್ಯಪ್ರದೇಶದಲ್ಲಿ ಛತ್ತಿಸ್ಗಡ್ ಪೊಲೀಸರು ಬಂಧಿಸಿದ್ದಾರೆ.

ನಿಖರ ಮಾಹಿತಿ ದೊರೆತ ನಂತರ ಖಜುರಾಹೋ ಪಟ್ಟಣದಿಂದ ಸುಮಾರು 25 ಕಿ. ಮೀ. ದೂರದಲ್ಲಿರುವ ಭಾಗೇಶ್ವರ್ ಧಾಮ್ ಹತ್ತಿರ ಇರುವ ಕೋಣೆಯೊಂದರಲ್ಲಿ ಕಾಳಿ ಚರಣ್ ಅವರು ತಂಗಿದ್ದರು. ಪೊಲೀಸರು ಬೆಳಗ್ಗಿನ 4 ಗಂಟೆಗೆ ಸುಮಾರಿಗೆ ಕಾಳಿಚರಣ್ ಅವರನ್ನು ಬಂಧಿಸಿದ್ದಾರೆ.

ಛತ್ತಿಸ್ಗಡ್ ರಾಜಧಾನಿ ರಾಯಪುರದಲ್ಲಿ ನಡೆದ ಧರ್ಮ ಸಂಸತ್ತಿನಲ್ಲಿ ಗಾಂಧೀಜಿ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆಯನ್ನು ಕಾಳಿ ಚರಣ್ ಅವರು ಹೇಳಿದ್ದಾರೆ. ಈ ಕಾರಣ ಕಾಳಿ ಚರಣ್ ವಿರುದ್ಧ ರಾಯಪುರದಲ್ಲಿ ಎಫ್ಐಆರ್ ದಾಖಲಿಸಲಾಗಿತ್ತು. ಆದ್ದರಿಂದ ಇದರ ಬಂಧನಕ್ಕಾಗಿ ಮಹಾರಾಷ್ಟ್ರ, ಮಧ್ಯ ಪ್ರದೇಶ ಮತ್ತು ದೆಹಲಿಗೆ ಪೊಲೀಸರ ತಂಡ ತೆರಳಿತ್ತು. ಕಾಳಿ ಚರಣ್ ಅವರನ್ನು ರಾಯಪುರಕ್ಕೆ ಕರೆತರಲಾಗಿದೆ. ಇನ್ನು 24 ಗಂಟೆಯೊಳಗೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

“ಮಹಾತ್ಮ ಗಾಂಧೀಜಿ ಅವರು ದೇಶವನ್ನು ಹಾಳು ಮಾಡಿದವರು. ಅವರನ್ನು ಕೊಂದ ನಾಥೂರಾಮ್ ಗೋಡ್ಸೆ ಅವರಿಗೆ ನಮನಗಳು” ಎಂದು ಕಾಳಿ ಚರಣ್ ಅವರು ಹೇಳಿಕೆಯನ್ನು ನೀಡಿದ್ದಾರೆ.

ಗಾಂಧೀಜಿಯವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದೆ ಬಿಡುವುದಿಲ್ಲ ಎಂದು ಉತ್ತರಖಂಡ ಸರ್ಕಾರ ತಿಳಿಸಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಲಸಿಕೆ ವಿತರಣೆ ವೇಗ ಹೆಚ್ಚಿಸಿ- ಕೇಂದ್ರದಿಂದ ರಾಜ್ಯಗಳಿಗೆ ತಾಕೀತು

0

ಕೊರೋನಾದ ರೂಪಾಂತರಿ ತಳಿ ಓಮಿಕ್ರಾನ್ ವೈರಸ್ ಸೋಂಕು ಜಗತ್ತಿನಾದ್ಯಂತ ಗಣನೀಯವಾಗಿ ಏರುತ್ತಿದೆ. ಭಾರತದಲ್ಲೂ ಸಹ ಓಮಿಕ್ರಾನ್ ಸೋಂಕಿತರ ಪ್ರಕರಣಗಳು ಹೆಚ್ಚಾಗುತ್ತಿದೆ. ಇದು ಕೊರೋನಾದ ಮೂರನೇ ಅಲೆ ಆರಂಭವಾಗಿರುವ ಸಂಕೇತವಾಗಿದೆ ಎಂದು ವಿಶ್ಲೇಷಿಸಲಾಗಿದೆ.

ಒಂದೇ ದಿನ ಭಾರತದಲ್ಲಿ 13,154 ಹೊಸ ಪ್ರಕರಣಗಳು ದಾಖಲಾಗಿದೆ. 43 ದಿನಗಳಲ್ಲಿ ಇದೇ ಮೊದಲ ಬಾರಿಗೆ 13 ಸಾವಿರಕ್ಕೂ ಹೆಚ್ಚಿನ ನಿತ್ಯ ಪ್ರಕರಣಗಳು ದಾಖಲಾಗಿವೆ. ಸತತವಾಗಿ ಎರಡನೇ ದಿನವೂ ನಿತ್ಯ ಕೇಸ್ ಗಳ ಸಂಖ್ಯೆ ಹೆಚ್ಚಾಗುತ್ತಿದೆ ಶೇ.40 ಕ್ಕಿಂತ ಹೆಚ್ಚಾಗಿದೆ. ದೇಶವು ಮೂರನೇ ಅಲೆಯ ಆರಂಭದ ಹಂತದಲ್ಲಿದೆ ಎನ್ನಲಾಗುತ್ತಿದೆ.

ಕೋವಿಡ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕಾರಣ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ಕರ್ನಾಟಕ ಸೇರಿ 8 ರಾಜ್ಯಗಳಿಗೆ ಪತ್ರ ಬರೆದಿದ್ದಾರೆ. ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಗುಜರಾತ್, ಹರಿಯಾಣ, ದೆಹಲಿ, ಜಾರ್ಖಂಡ್ ಗೆ ಪತ್ರ ಬರೆದಿದ್ದಾರೆ. ಕೋವಿಡ್ ತಪಾಸಣೆ ಹೆಚ್ಚಿಸುವ ಜೊತೆಗೆ ಆಸ್ಪತ್ರೆಗಳಲ್ಲಿ ಮೂಲಸೌಕರ್ಯ ಹೆಚ್ಚಿಸಿ ಮತ್ತು ಕೊರೋನಾ ನಿರೋಧಕ ಲಸಿಕೆ ವಿತರಣೆಗೆ ವೇಗ ನೀಡಿ ಎಂದು ಸೂಚನೆ ನೀಡಿದ್ದಾರೆ.

ಡೆಲ್ಟಾ ರೂಪಾಂತರಿ ಜೊತೆಗೆ ಓಮಿಕ್ರಾನ್ ರೂಪಾಂತರಿಯ ಪ್ರಕರಣಗಳು ಕೂಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದು ಮೂರನೇ ಅಲೆಯು ಆರಂಭವಾಗಿರುವುದರ ಸಂಕೇತವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಮೂಲಗಳು ತಿಳಿಸಿದೆ. ಆದ್ದರಿಂದ ಸೋಂಕು ಹೆಚ್ಚಿರುವ ಎಲ್ಲ ರಾಜ್ಯಗಳಲ್ಲೂ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಸಿ ಎಂ ಬೊಮ್ಮಾಯಿ ಸಂಪುಟಕ್ಕೆ ಸರ್ಜರಿ?

0

ಮುಂದಿನ ವಿಧಾನಸಭೆ ಚುನಾವಣೆಯನ್ನು ಗುರಿಯಾಗಿಸಿಕೊಂಡು ಎಲೆಕ್ಷನ್ ಕ್ಯಾಬಿನೆಟ್ ರಚಿಸಲು ಬಿಜೆಪಿ ಹೈಕಮಾಂಡ್ ನಿರ್ಧರಿಸಿದೆ.
ಅದರಂತೆ ಹೊಸವರ್ಷ ಆರಂಭದಲ್ಲೇ ಸಿಎಂ ಬಸವರಾಜ ಬೊಮ್ಮಾಯಿ ಸಂಪುಟಕ್ಕೆ ಮೇಜರ್ ಸರ್ಜರಿಯಾಗುವುದು ಖಚಿತವಾಗಿದೆ.
ಹುಬ್ಬಳ್ಳಿ ಕಾರ್ಯಕಾರಿಣಿಯ ನೇಪಥ್ಯದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಸೇರಿದಂತೆ ಪಕ್ಷದ ಹಿರಿಯರೊಂದಿಗೆ ಮಾತುಕತೆ ನಡೆಸಿರುವ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಈ ಸುಳಿವು ನೀಡಿದ್ದಾರೆ.
ನಾಯಕತ್ವದ ಬಗ್ಗೆ ಎದ್ದಿದ್ದ ವದಂತಿಗೆ ಈಗಾಗಲೇ ತೆರೆ ಎಳೆಯಲಾಗಿದೆ. ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಜನಪರ ಆಡಳಿತ ನಡೆಸುವಂತೆ ಸಿಎಂ ಬೊಮ್ಮಾಯಿ ಅವರಿಗೂ ಸೂಚನೆ ನೀಡಲಾಗಿದೆ.
ಇದರೊಂದಿಗೆ 2023ರ ಚುನಾವಣೆಯನ್ನು ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿದೆ. ಅದಕ್ಕೆ ಪೂರಕವಾದ ಸಂಪುಟ ರಚಿಸಿ ಚುನಾವಣೆ ಸಿದ್ಧತೆಗೆ ಉತ್ಸಾಹ ತುಂಬಲಾಗುತ್ತದೆ ಎಂಬ ಸಂದೇಶ ರವಾನೆಯಾದಂತಾಗಿದೆ.
ಮಾಜಿ ಸಿಎಂ ಯಡಿಯೂರಪ್ಪ ಅವರ ಪುತ್ರ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಸಂಪುಟಕ್ಕೆ ಸೇರ್ಪಡೆಗೊಳಿಸಲು ಹೈಕಮಾಂಡ್ ತೀರ್ಮಾನಿಸಿದೆ. ವಿಜಯೇಂದ್ರ ಅವರಿಗೆ ರಾಜ್ಯಾದ್ಯಂತ ಜನಪ್ರಿಯತೆ ಇದೆ. ಅವರು ಹೋದ ಕಡೆಯಲ್ಲೆಲ್ಲ ದೊಡ್ಡ ಸಂಖ್ಯೆಯಲ್ಲಿ ಜನ ಸೇರುತ್ತಾರೆ. ವಿಜಯೇಂದ್ರ ಅವರಲ್ಲಿರುವ ಈ ನಾಯಕತ್ವದ ಗುಣವನ್ನು ವರಿಷ್ಠರು ಗುರುತಿಸಿದ್ದಾರೆ. ಈ ಮೂಲಕ ಬಿಎಸ್ ವೈ ರಾಜೀನಾಮೆ ಬಳಿಕ ಅವರ ಕುಟುಂಬದ ಸದಸ್ಯರಿಗೆ ಮಹತ್ವದ ಜವಾಬ್ದಾರಿ ನೀಡಿದಂತಾಗುತ್ತದೆ. ಬಿಎಸ್ ವೈ ಅವರನ್ನು ಕಡೆಗಣಿಸಿಲ್ಲ ಎಂಬ ಸಂದೇಶವೂ ರವಾನೆಯಾಗಲಿದೆ ಎನ್ನುವುದು ವರಿಷ್ಠರ ಆಲೋಚನೆ ಎನ್ನಲಾಗಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಜಿಲ್ಲೆಯಲ್ಲಿ ಕ್ರಿಮಿನಲ್ ಪ್ರಕರಣ ಹೆಚ್ಚಾಗಿದೆ – ಹೆಚ್.ಎಸ್.ಸುಂದರೇಶ್

0

ರಾಜ್ಯ ಬಿಜೆಪಿ ಸರ್ಕಾರದ ಆಡಳಿತದಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಗಂಭೀರಸ್ವರೂಪದಲ್ಲಿ. ಹೆಚ್ಚುತ್ತಿರುವ ಕ್ರಿಮಿನಲ್ ಪ್ರಕರಣಗಳು ಹತೋಟಿಯಲ್ಲಿಡ ಬೇಕಾಗಿದೆ. ಈ ಬಗ್ಗೆ ಅಸಹಾಯಕ ಸ್ಥಿತಿಯಲ್ಲಿರುವ ಪೊಲೀಸ್ ಇಲಾಖೆಯ
ವೈಫಲ್ಯವನ್ನು ವಿರೋಧಿಸಿ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಹೆಚ್.ಎಸ್.ಸುಂದರೇಶ್ ಅವರು ನೇತೃತ್ವದಲ್ಲಿ ಗುರುವಾರ ಬೆಳಿಗ್ಗೆ ಶಿವಮೊಗ್ಗ ನಗರ ಬಿ.ಹೆಚ್.ರಸ್ತೆಯಲ್ಲಿರುವ
ಬಸ್ ನಿಲ್ದಾಣ ಬಳಿ ಪ್ರತಿಭಟನೆಯನ್ನು ನಡೆಸಲಾಯಿತು.

ಶಿವಮೊಗ್ಗ ಜಿಲ್ಲೆಯಲ್ಲಿ ಗಾಂಜಾ ,ಇಸ್ಪೀಟು,ಕಳ್ಳತನ
ದರೋಡೆ ಭದ್ರತಾ ವ್ಯವಸ್ಥೆಯ ಲೋಪ ಇನ್ನೂಮುಂತಾದ ಕ್ರಿಮಿನಲ್ ಪ್ರಕರಣಗಳು ಕಳೆದ ಕೆಲವು ತಿಂಗಳುಗಳಿಂದ
ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿದೆ. ಈ ಸಂಖ್ಯೆ ದಿನನಿತ್ಯ ಹೆಚ್ಚಾಗುತ್ತಿದ್ದನ್ನು ಪೊಲೀಸ್
ಇಲಾಖೆ ಹತೋಟಿಗೆ ತೆಗೆದುಕೊಳ್ಳಲು
ಸಂಪೂರ್ಣ ವಿಫಲವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಹೆಚ್.ಎಸ್ ಸುಂದರೇಶ್ ಅವರು ಆಕ್ರೋಶ ವ್ಯಕ್ತಪಡಿಸಿದರು.

ಈ ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಸೇರಿದಂತೆ ಹಲವರು ಭಾಗವಹಿಸಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ವಾಟ್ಸ್ಯಾಪ್ ಗ್ರೂಪ್: ಇ ಪತ್ರಿಕೆ ಹಂಚಿಕೆ ತಾತ್ಕಾಲಿಕ ತಡೆ

0

ವಾಟ್ಸಾಪ್ ಗ್ರೂಪ್ ಗಳಲ್ಲಿ ಕಾನೂನುಬಾಹಿರವಾಗಿ ಇ ಪತ್ರಿಕೆಗಳನ್ನು ಪ್ರಸಾರ ಮಾಡುವುದನ್ನು ರದ್ದುಪಡಿಸುವಂತೆ ವಾಟ್ಸಾಪ್ಗೆ ದೆಹಲಿ ಹೈಕೋರ್ಟ್ ಆದೇಶ ನೀಡಿದೆ.

ದೈನಿಕ್ ಭಾಸ್ಕರ್ ಸಮೂಹದ ಆನ್ಲೈನ್ ಪತ್ರಿಕೆಗಳನ್ನು ವಾಟ್ಸಪ್ ಗ್ರೂಪ್ ಗಳಲ್ಲಿ ಅಕ್ರಮವಾಗಿ ಪ್ರಸಾರ ಮಾಡಲಾಗುತ್ತಿತ್ತು. ಈ ಪ್ರಕರಣದಲ್ಲಿ ದೈನಿಕ್ ಭಸ್ಕರ್ ಸಮೂಹಕ್ಕೆ ನಷ್ಟವಾಗಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ನ್ಯಾಯಮೂರ್ತಿ ಸಂಜೀವ್ ನರುಲಾ ಅವರು ಹೇಳಿದ್ದಾರೆ.

ದೈನಿಕ್ ಭಾಸ್ಕರ್ ಕಾರ್ಪ್. ಲಿಮಿಟೆಡ್, ದೈನಿಕ್ ಭಾಸ್ಕರ್, ದಿವ್ಯ ಭಾಸ್ಕರ್, ದಿವ್ಯ ಮರಾಠಿ, ಭಾಸ್ಕರ್ ಗ್ರೂಪ್ ನ ಮಾಲಿಕತ್ವವನ್ನು ಹೊಂದಿದೆ. ಹಲವಾರು ವ್ಯಕ್ತಿಗಳು ವಾಟ್ಸಪ್ ಗ್ರೂಪ್ ಗಳನ್ನು ರಚಿಸಿ ಕಾನೂನು ಬಾಹಿರವಾಗಿ ಇ ಸುದ್ದಿ ಪತ್ರಿಕೆಗಳನ್ನು ವಿತರಿಸುತ್ತಿದ್ದರು.

ಇ ನ್ಯೂಸ್ ಪತ್ರಿಕೆಗಳಲ್ಲಿರುವ ಸಾಹಿತ್ಯ, ವರದಿಗಳು, ಲೇಖನ, ವೆಬ್ಸೈಟ್ಗಳಲ್ಲಿ ಪ್ರಕರವಾಗಿದ್ದರೂ , ಸಂಸ್ಥೆಯ ಮೊಬೈಲ್ ಅಪ್ಲಿಕೇಶನ್ ಗಳಲ್ಲಿ ಲಭ್ಯವಿದ್ದರೂ ಅವುಗಳನ್ನು ಹಾಗೆಯೇ ಬೇರೆಯವರು ಅನಧಿಕೃತವಾಗಿ ಪ್ರಸಾರ ಮಾಡುವಂತಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.

ಮುಂದಿನ ವಿಚಾರಣೆಯವರೆಗೆ ವಾಟ್ಸಪ್ ಗ್ರೂಪ್ ಗಳ ಮೂಲಕ ಅನಧಿಕೃತವಾಗಿ ಪ್ರಸಾರ ಮಾಡದಂತೆ ಕೋರ್ಟ್ ತಡೆಯಾಜ್ಞೆ ವಿಧಿಸಿದೆ.

ಕೇವಲ ದೈನಿಕ್ ಭಾಸ್ಕರ್ ಸಮೂಹಕ್ಕೆ ಮಾತ್ರ ಈ ಸಮಸ್ಯೆ ಉಂಟಾಗಿಲ್ಲ. ಇತರ ಹಲವು ಮಾಧ್ಯಮ ಸಂಸ್ಥೆಗಳ ಪತ್ರಿಕೆಗಳನ್ನು ಅನಧಿಕೃತವಾಗಿ ವಾಟ್ಸಪ್ ಗ್ರೂಪ್ ಗಳಲ್ಲಿ ಹಂಚಲಾಗುತ್ತಿದೆ ಎಂದು ವರದಿಯಾಗಿದೆ.