Thursday, February 12, 2026
Thursday, February 12, 2026
Home Blog Page 1790

ಗುಜರಾತ್: ಹೈಸ್ಪೀಡ್ ರೈಲ್ವೆ ನಿಲ್ದಾಣಗಳಲ್ಲಿ ಸೋಲಾರ್ ಚಾವಣಿ

0

ಗುಜರಾತ್ ನ ಹೈ ಸ್ಪೀಡ್ ಮಾರ್ಗದ ರೈಲು ಯೋಜನೆಯ ಬಹುತೇಕ ರೈಲು ನಿಲ್ದಾಣಗಳ ಚಾವಣಿಗೆ ಪೂರ್ಣವಾಗಿ ಸೋಲಾರ್ ಪ್ಯಾನೆಲ್ ಗಳನ್ನು ಅಳವಡಿಸುವ ಮೂಲಕ ಸೌರವ್ಯೂಹ ಆಧರಿತ ನಿಲ್ದಾಣಗಳಾಗಿ ಮಾರ್ಪಡಿಸುವ ಕಾರ್ಯ ಪ್ರಗತಿಯಲ್ಲಿದೆ.
ಪ್ರಮುಖವಾಗಿ ಸಬರಮತಿ ಆಶ್ರಮದ ನಿಲ್ದಾಣವು ಈ ಮಾರ್ಗದಲ್ಲಿ ಬರಲಿದ್ದು, ಅದರ ಚಾವಣಿ ಮೇಲೆ ಸೋಲಾರ್ ಪ್ಯಾನೆಲ್ ಗಳು ಚರಕದ ಆಕಾರ ದಲ್ಲಿ ಅಳವಡಿಕೆ ಆಗಲಿವೆ.
ಈ ಸಂಬಂಧ ನ್ಯಾಷನಲ್ ಹೈ ಸ್ಪೀಡ್ ರೇಲ್ ಕಾರ್ಪೊರೇಷನ್ ವತಿಯಿಂದ ಈ ಸಂಬಂಧ ಕಾಮಗಾರಿಗೆ ಟೆಂಡರ್ ಆಹ್ವಾನಿಸಿದೆ. ಈ ಯೋಜನೆಯ ಒಟ್ಟು ಸಾಮರ್ಥ್ಯ 700 ಕಿ. ವ್ಯಾಟ್ ಪವರ್ ಆಗಿದ್ದು, 2030ರೊಳಗೆ ಇಂಗಾಲದ ಹೊರಸೂಸುವಿಕೆ ಪ್ರಮಾಣವನ್ನು ಶೂನ್ಯ ಗೊಳಿಸುವ ಗುರಿಯನ್ನು ಭಾರತೀಯ ರೈಲ್ವೆ ಇಲಾಖೆ ಹೊಂದಿದೆ. ದೇಶದ 835 ರೈಲು ನಿಲ್ದಾಣಗಳಲ್ಲಿ ಇದುವರೆಗೂ ಅಳವಡಿಸಲಾಗಿರುವ ಸೋಲಾರ್ ಚಾವಣಿಗಳಿಂದ 248.46 ಮೆಗಾವ್ಯಾಟ್ ಪ್ರಮಾಣದ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಅರಣ್ಯಭೂಮಿ ರೈತರನ್ನ ಒಕ್ಕಲೆಬ್ಬಿಸಬೇಡಿ- ಕಾಗೋಡು

0

ಸಾಗರ ತಾಲೂಕಿನ ಹಲವು ಗ್ರಾಮಗಳಲ್ಲಿ ಅರಣ್ಯ ಭೂಮಿ ಸಾಗುವಳಿ ಮಾಡುತ್ತಿರುವ ರೈತರನ್ನು ಒಕ್ಕಲೆಬ್ಬಿಸಲು ಮುಂದಾಗಿರುವ ತಾಲೂಕು ಆಡಳಿತದ ಕ್ರಮವನ್ನು ಖಂಡಿಸಿ ಸಾಗರದ ಖಾಸಗಿ ಬಸ್ ನಿಲ್ದಾಣದ ಆವರಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಈ ಪ್ರತಿಭಟನೆಯಲ್ಲಿ ಸಚಿವ ಕಾಗೋಡು ತಿಮ್ಮಪ್ಪ ಅವರು ‘ಭೂಮಿಯ ಸಮಸ್ಯೆಯನ್ನು ಅರ್ಥಮಾಡಿಕೊಳ್ಳದ ಸರ್ಕಾರ ಇದ್ದರೆಷ್ಟು ಬಿಟ್ಟರೆಷ್ಟು’ ಎಂದು ಪ್ರಶ್ನಿಸಿದರು. ‘ಕಂದಾಯ ಭೂಮಿಯನ್ನು ಅರಣ್ಯ ಭೂಮಿಯ ಪಟ್ಟಿಗೆ ಸೇರಿಸುವ ಮೂಲಕ ರೈತರನ್ನು ರಸ್ತೆಯ ಮೇಲೆ ಮಲಗಿಸಲು ಸರ್ಕಾರ ಮುಂದಾಗಿದೆ’ ಎಂದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಅಲ್ಲದೆ ‘ಅರಣ್ಯ ಭೂಮಿಗೆ ಸಂಬಂಧಪಟ್ಟ ಜ್ವಲಂತ ಸಮಸ್ಯೆಗಳ ಕುರಿತು ಬೆಳಗಾವಿ ಅಧಿವೇಶನದಲ್ಲಿ ಮಲೆನಾಡಿನ ಶಾಸಕರು ಧ್ವನಿ ಎತ್ತಬೇಕಿತ್ತು. ಆದರೆ ಮತದಾರರಿಗೆ ಹಣ ಕೊಟ್ಟು ಶಾಸಕರಾಗಿ ಆಯ್ಕೆಯಾಗಿರುವವರು ಚುನಾವಣಾ ಸಂದರ್ಭದಲ್ಲಿ ಖರ್ಚು ಮಾಡಿರುವ ಬಂಡವಾಳವನ್ನು ಮರಳಿ ಪಡೆಯಲು ಜನರ ಸಮಸ್ಯೆಯನ್ನು ಬಗೆಹರಿಸುವತ್ತ ಆಸಕ್ತಿ ತೋರುತ್ತಿಲ್ಲ’ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರು ಕಟುವಾಗಿ ಟೀಕಿಸಿದರು.

ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಆರ್.ಜಯಂತ್ ಅವರು ‘ಇಂಡೀಕರಣದ ಮೂಲಕ ಅರಣ್ಯವಿಲ್ಲದ ಪ್ರದೇಶವನ್ನು ಅರಣ್ಯ ಪ್ರದೇಶವೆಂದು ಘೋಷಿಸಿ ರುವುದು ಹಲವು ಸಮಸ್ಯೆಗಳಿಗೆ ಕಾರಣವಾಗಿದೆ. ಈ ಕಾರಣಕ್ಕಾಗಿ ಈ ಭಾಗದ ಅನೇಕ ಗ್ರಾಮಗಳ ಮನೆ, ಹಿತ್ತಲು, ಸಾಗುವಳಿ ಭೂಮಿ, ಸಮುದಾಯ ಭವನ, ರಸ್ತೆ ಇರುವ ಪ್ರದೇಶಗಳಿಗೆ ಸಂಚಕಾರ ಬಂದಿದೆ’ ಎಂದು ಮಾತನಾಡಿದರು.

ಈ ಪ್ರತಿಭಟನೆಯಲ್ಲಿ ಕಾಂಗ್ರೆಸ್ ನ ಪ್ರಮುಖರಾದ ಡಾ. ರಾಜನಂದಿನಿ ಕಾಗೋಡು, ಮಲ್ಲಿಕಾರ್ಜುನ ಹಕ್ರೆ, ಮಧು ಮಾಲತಿ ಸೇರಿದಂತೆ ಹಲವರು ಭಾಗಿಯಾಗಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಶ್ರೀನಗರ ಕಣಿವೆಯಲ್ಲಿ ಸೇನಾ ಕಾರ್ಯಾಚರಣೆ ಉಗ್ರರ ಹತ್ಯೆ.

0

ಶ್ರೀನಗರ ಕಣಿವೆಯಲ್ಲಿ ನಡೆದ ಎರಡು ಪ್ರತ್ಯೇಕ ಎನ್ಕೌಂಟರ್ ಗಳಲ್ಲಿ ಎರಡು ಮಂದಿ ಪಾಕಿಸ್ತಾನ ಪ್ರಜೆಗಳು ಸೇರಿದಂತೆ ಒಟ್ಟು ಆರು ಮಂದಿ ಉಗ್ರರನ್ನು ಹತ್ಯೆಗೈಯಲಾಗಿದೆ.

ನೌಗಾಮ್ ಮತ್ತು ಕುಲ್ಗಾಮ್ ಜಿಲ್ಲೆಯ ಮಿರ್ಹಮಾ ಗ್ರಾಮದಲ್ಲಿ ಅಡಗಿ ಕುಳಿತಿದ್ದ ಉಗ್ರರ ವಿರುದ್ಧ ಭದ್ರತಾಪಡೆಗಳು ಹಾಗೂ ಸ್ಥಳೀಯ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಸುಮಾರು ಒಂದು ದಿನದ ಕಾರ್ಯಾಚರಣೆಯಲ್ಲಿ ಮೊದಲು ಭದ್ರತಾಪಡೆಗಳ ಮೇಲೆ ಉಗ್ರರಿಂದ ದೊಡ್ಡ ಪ್ರಮಾಣದ ಗುಂಡಿನ ದಾಳಿ ನಡೆದಿದೆ. ಇದಕ್ಕೆ ಪ್ರತಿಯಾಗಿ ಸಣ್ಣ ತಂಡಗಳಾಗಿ ವಿಂಗಡಣೆ ಗೊಂಡು ಕಾರ್ಯಾಚರಣೆ ನಡೆಸಲಾಯಿತು. ಯೋಧರು ಹಾಗೂ ಪೊಲೀಸರು ಹಲವು ಸುತ್ತುಗಳ ಗುಂಡಿನ ಚಕಮಕಿ ನಡೆಸಿದ್ದಾರೆ. ಅನಂತರ ಎಲ್ಲಾ ಉಗ್ರರನ್ನು ಹತ್ಯೆಗೈಯುವ ಲ್ಲಿ ಯಶಸ್ವಿಯಾಗಿದ್ದಾರೆ.

ಸಾವನ್ನಪ್ಪಿದ ಉಗ್ರರ ಪೈಕಿ ಯಲ್ಲಿ ಇಬ್ಬರು ಪಾಕಿಸ್ತಾನದ ಪ್ರಜೆಗಳು ಎಂದು ಅವರ ಬಳಿ ದೊರೆತಿರುವ ದಾಖಲೆಗಳಿಂದ ಖಾತರಿಯಾಗಿದೆ. ಎಲ್ಲ ಉಗ್ರರು ಕೂಡ ಪಾಕ್ ಜೈಷೆ ಮೊಹಮದ್ ಸಂಘಟನೆಗೆ ಸೇರಿದವರು ಎನ್ನುವುದು ಖಚಿತವಾಗಿದೆ ಎಂದು ಕಾಶ್ಮೀರ ವಲಯ ಐಜಿಪಿ ವಿಜಯ್ ಕುಮಾರ್ ಅವರು ತಿಳಿಸಿದ್ದಾರೆ.

ಉಗ್ರರೊಂದಿಗೆ ಸಂಘರ್ಷದಲ್ಲಿ ಒಬ್ಬ ಪೊಲೀಸ್ ಸಿಬ್ಬಂದಿ ಹಾಗೂ ಇಬ್ಬರು ಭದ್ರತಾ ಪಡೆಯ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಸೇನೆಯ 15 ಕೋರ್ ಪಡೆಯ ಸಿಪಾಯ್ ಜಸ್ಬಿರ್ ಸಿಂಗ್ ಅವರು ಕಾರ್ಯಚರಣೆ ವೇಳೆ ತೀವ್ರವಾಗಿ ಗಾಯಗೊಂಡು ಹುತಾತ್ಮರಾಗಿದ್ದಾರೆ ಎಂದು ತಿಳಿದುಬಂದಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಭಾರದ ಬ್ರಹ್ಮೋಸ್ ಕ್ಷಿಪಣಿ ಖರೀದಿಗೆ ಫಿಲಿಪ್ಪೀನ್ಸ್ ಆಸಕ್ತಿ

0

ಭಾರತದಿಂದ ಸುಮಾರು 55.5 ದಶಲಕ್ಷ ಡಾಲರ್ ಮೌಲ್ಯದ ಬ್ರಹ್ಮೋಸ್ ಕ್ಷಿಪಣಿ ಗಳನ್ನು ಆಮದು ಮಾಡಿಕೊಳ್ಳಲು ಫಿಲಿಪ್ಪೀನ್ಸ್ ಒಪ್ಪಿಗೆ ನೀಡಿದೆ. ಇದರಿಂದಾಗಿ ರಕ್ಷಣಾ ಕ್ಷೇತ್ರದಲ್ಲೂ ಆತ್ಮ ನಿರ್ಭರ ಸಾಧಿಸುವ , ರಕ್ಷಣಾ ಉಪಕರಣ ರಫ್ತು ರಾಷ್ಟ್ರವಾಗಿ ಹೊರಹೊಮ್ಮುವ ಕೇಂದ್ರ ಸರ್ಕಾರದ ಉದ್ದೇಶ ಹೆಚ್ಚಿನ ಬಲ ಬಂದಂತಾಗಿದೆ.

ಮಧ್ಯಮ ಶ್ರೇಣಿ ಬ್ರಹ್ಮೋಸ್ ಕ್ಷಿಪಣಿಗಳು ವಿಶ್ವದಲ್ಲೇ ವೇಗವಾಗಿ ಚಲಿಸುವ ಸೂಪರ್ ಸಾನಿಕ್ ಕ್ರೂಸ್ ಕ್ಷಿಪಣಿ ಎನಿಸಿವೆ. ಇವು ಗಂಟೆಗೆ 4,300 ಕಿ.ಮೀ. ವೇಗದಲ್ಲಿ ಕಿ. ಮೀ. ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುವ ದಕ್ಷತೆ ಹೊಂದಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ವಿಮರ್ಶಕ ಡಿಎಸ್ಎನ್ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

0

ಹಿರಿಯ ಲೇಖಕ ಹಾಗೂ ಹೊಸಮನುಷ್ಯ ನಿಯತಕಾಲಿಕ ಸಂಪಾದಕರಾದ ಡಿ. ಎಸ್. ನಾಗಭೂಷಣ ಅವರ ‘ ಗಾಂಧಿ ಕಥನ’ ಕೃತಿಯು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಪಾತ್ರವಾಗಿದೆ. ಪ್ರಶಸ್ತಿಯು ಒಂದು ಲಕ್ಷ ರೂಪಾಯಿ ನಗದು ಬಹುಮಾನ ಮತ್ತು ಫಲಕವನ್ನು ಒಳಗೊಂಡಿದೆ.

ಬೋಳುವಾರ್ ಮೊಹಮದ್ ಕುಂಞಿ, ಅಮರೇಶ ನುಗಡೋಣಿ ಮತ್ತು ಸಬೀಹಾ, ಭೂಮಿಗೌಡ ಅವರನ್ನೊಳಗೊಂಡ ತೀರ್ಪುಗಾರರ ಸಮಿತಿ ಗಾಂಧಿ ಕಥನವನ್ನು ಆಯ್ಕೆ ಮಾಡಿದೆ.

ಇದಲ್ಲದೆ ಬಾಲ ಪುರಸ್ಕಾರ ವಿಭಾಗದಲ್ಲಿ ಬಸು ಬೇವಿನಗಿಡದ ಅವರ ‘ ಓಡಿ ಹೋದ ಹುಡುಗ’ ಮಕ್ಕಳ ಕಾದಂಬರಿ ಮತ್ತು ಯುವ ಪುರಸ್ಕಾರಕ್ಕೆ ಎಚ್. ಲಕ್ಷ್ಮೀನಾರಾಯಣ ಸ್ವಾಮಿ ಅವರ ತೊಗಲ ಚೀಲದ ಕರ್ಣ ಮಹಾಕಾವ್ಯ ಆಯ್ಕೆಯಾಗಿದೆ. ಯುವ ಹಾಗೂ ಬಾಲ ಪುರಸ್ಕಾರಗಳು ಐವತ್ತು ಸಾವಿರ ರೂಪಾಯಿ ನಗದು ಬಹುಮಾನವನ್ನು ಒಳಗೊಂಡಿದೆ.

ಪ್ರಶಸ್ತಿ ಪುರಸ್ಕೃತರಾದ ಡಿ. ಎಸ್. ನಾಗಭೂಷಣ್ ಅವರು “ಈ ಪ್ರಶಸ್ತಿ ನನಗೆ ಸಹಜವಾಗಿ ಖುಷಿ ತಂದಿದೆ. ನನ್ನಂಥವರಿಗೆ ಪ್ರಶಸ್ತಿ ಕೊಡುವ ಕಾಲ ಇನ್ನೂ ಇದೆ ಎಂಬ ಕಾರಣಕ್ಕೆ ನನಗೆ ಅಚ್ಚರಿಯೂ ಆಗಿದೆ” ಎಂದು ಹೇಳಿದರು.

ಇನ್ನೋರ್ವ ಪ್ರಶಸ್ತಿ ಪುರಸ್ಕೃತ ಸಾಹಿತಿ ಬಸು ಬೇವಿನಗಿಡದ ಅವರು ” ಈ ಪ್ರಶಸ್ತಿ ಬರಲಿದೆ ಎಂಬ ನಿರೀಕ್ಷೆ ಇರಲಿಲ್ಲ. ನನಗೆ ತುಂಬಾ ಸಂತೋಷವಾಯಿತು. ಮಕ್ಕಳಲ್ಲಿ ಸಾಹಿತಿ ಸೂಕ್ಷ್ಮತೆಯನ್ನು ಬೆಳೆಸುವ ಪ್ರಯತ್ನ ನನ್ನದು” ಎಂದು ತಿಳಿಸಿದರು.

ಪ್ರಶಸ್ತಿ ವಿಜೇತರನ್ನು ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಚಂದ್ರಶೇಖರ ಕಂಬಾರ ಅವರು ಅಭಿನಂದಿಸಿದ್ದಾರೆ. ಪ್ರಶಸ್ತಿಗಳನ್ನು ಫೆಬ್ರವರಿ ತಿಂಗಳಿನಲ್ಲಿ ದೆಹಲಿಯಲ್ಲಿ ನಡೆಯುವ ಸಮಾರಂಭದಲ್ಲಿ ಪ್ರದಾನ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಪ್ರಶಸ್ತಿ ಪುರಸ್ಕೃತರಿಗೆ
ಕೆ ಲೈವ್ ಮೀಡಿಯ ಬಳಗ ಹೃತ್ಪೂರ್ವಕ
ಅಭಿನಂದಿಸುತ್ತದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ರಾಜ್ಯದಲ್ಲಿ ಕೋವಿಡ್ ಹೊಸ ಪ್ರಕರಣ ಏರಿಕೆ

0

ರಾಜ್ಯದಲ್ಲಿ ಕೋವಿಡ್ ಹೊಸ ಪ್ರಕರಣಗಳ ಸಂಖ್ಯೆ ಮತ್ತಷ್ಟು ಏರಿಕೆಯಾಗಿದೆ ಗುರುವಾರ ಒಂದೇ ದಿನ ಬರೋಬ್ಬರಿ 707 ಮಂದಿಯಲ್ಲಿ ಕೋವಿಡ್ ಸೋಂಕು ದೃಡಪಟ್ಟಿದೆ.

ರಾಜ್ಯದ 20 ಜಿಲ್ಲೆಗಳಿಂದ 142 ಮಂದಿ ಕೋವಿಡ್ ಸೋಂಕಿತರಾದರೆ. ಬೆಂಗಳೂರಿನಲ್ಲಿ 565 ಮಂದಿಯಲ್ಲಿ ‌ ಸೋಂಕು ಪತ್ತೆಯಾಗಿದೆ.

ರಾಜ್ಯದಲ್ಲಿ ಕೋವಿಡ್ ಪರೀಕ್ಷೆಗಳ ಸಂಖ್ಯೆಯಲ್ಲೂ ಏರಿಕೆಯಾಗಿದೆ. ಒಂದು ದಿನದ ಅವಧಿಯಲ್ಲಿ 1.14 ಲಕ್ಷ ಮಾದರಿಗಳನ್ನು ಪರೀಕ್ಷೆ ಮಾಡಲಾಗಿದೆ. ಪರೀಕ್ಷೆಯಲ್ಲಿ ಶೇ.0.61 ರಷ್ಟು ಸೋಂಕು ದೃಡಪಟ್ಟಿದೆ.

ಉಡುಪಿಯಲ್ಲಿ 19, ಹಾಸನದಲ್ಲಿ, 17 ಮೈಸೂರಿನಲ್ಲಿ, 16 ಕೊಡಗಿನಲ್ಲಿ, 12 ಹಾಗೂ ದಕ್ಷಿಣಕನ್ನಡದಲ್ಲಿ 11 ಪ್ರಕರಣಗಳು ವರದಿಯಾಗಿದೆ. ಉಳಿದ ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳು 10ಕ್ಕಿಂತ ಕಡಿಮೆ ಇವೆ. ಈವರಿಗೆ ವರದಿಯಾದ ಒಟ್ಟು ಪ್ರಕರಣಗಳ ಸಂಖ್ಯೆ ಶೇ.30.06 ಲಕ್ಷ ದಾಟಿದೆ. ಸೋಂಕಿತರಲ್ಲಿ 252 ಮಂದಿ ಚೇತರಿಸಿಕೊಂಡಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದವರ ಸಂಖ್ಯೆ ಒಟ್ಟು 29.59 ಲಕ್ಷ ದಾಟಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಮೊದಲು ದೇವಾಲಯಗಳ ಆರ್ಥಿಕ ಸ್ಥಿತಿ ಪರಿಶೀಲಿಸಿ- ಸಿದ್ಧರಾಮಯ್ಯ

0

ವಿಧಾನಸಭಾ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಅವರು ‘ರಾಜ್ಯದಲ್ಲಿ ಆರ್ಥಿಕ ಸಂಕಷ್ಟದಲ್ಲಿರುವ ದೇವಾಲಯಗಳನ್ನು ಸ್ವತಂತ್ರಗೊಳಿಸಿದರೆ, ಅವುಗಳನ್ನು ನಡೆಸಿಕೊಂಡು ಹೋಗುವುದು ಕಷ್ಟವಾಗಿ ಉಪಕಾರಕ್ಕಿಂತ ತೊಂದರೆ ಹೆಚ್ಚಾಗಲಿದೆ’ ಎಂದು ತಿಳಿಸಿದ್ದಾರೆ.

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ರಾಜ್ಯದಲ್ಲಿನ ಹಿಂದೂ ದೇವಾಲಯಗಳಿಗೆ ಆರ್ಥಿಕ ನಿರ್ವಹಣೆಯ ಸ್ವಾತಂತ್ರ್ಯ ನೀಡುವ ಕುರಿತು ನೀಡಿರುವ ಹೇಳಿಕೆಗೆ ‘ಸಾಕಷ್ಟು ದೇವಾಲಯಗಳು ಆರ್ಥಿಕವಾಗಿ ಸಂಕಷ್ಟದಲ್ಲಿವೆ. ಹಿಂದೂ ದೇವಾಲಯಗಳು ಸರ್ಕಾರ ಅಭಿವೃದ್ಧಿ ಪಡಿಸುವ ಕೆಲಸ ಮಾಡಿದರೆ ನಮ್ಮ ತಕರಾರು ಇಲ್ಲ. ಸಾರಾಸಗಟಾಗಿ ಎಲ್ಲಾ ದೇವಾಲಯಗಳನ್ನು ಸ್ವತಂತ್ರಗೊಳಿಸುವ ಮೊದಲು ದೇವಾಲಯಗಳ ಆರ್ಥಿಕ ಪರಿಸ್ಥಿತಿಯನ್ನು ಪರಿಶೀಲಿಸಬೇಕು’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸಲಹೆ ನೀಡಿದ್ದಾರೆ.

ಈ ಕುರಿತಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ‘ಹಿಂದೂ ದೇವಾಲಯಗಳನ್ನು ಸ್ವತಂತ್ರಗೊಳಿಸುವ ಮೂಲಕ ರಾಜ್ಯ ಸರ್ಕಾರ ಅತಿ ದೊಡ್ಡ ತಪ್ಪು ಮಾಡುತ್ತಿದೆ’ ಎಂದು ಹೇಳಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಪಾಕ್ ನ ದೇವಾಲಯಕ್ಕೆ ಹಿಂದೂ ಯಾತ್ರಿಕರ ಭೇಟಿ

0

ಭಾರತ, ಯುಎಇ ಮತ್ತು ಅಮೇರಿಕಾ ದೇಶದ ಸುಮಾರು 250 ಸದಸ್ಯರನ್ನು ಒಳಗೊಂಡ ಹಿಂದೂ ಯಾತ್ರಿಕರ ತಂಡ ಕಳೆದ ವರ್ಷ ಇಸ್ಲಾಮಿಕ್ ಮೂಲಭೂತವಾದಿಗಳ ಪಕ್ಷವೊಂದು ಪಾಕಿಸ್ತಾನದ ಕೈವಾರ ಪಖ್ತುಂಖ್ವಾ ಪ್ರಾಂತ್ಯದಲ್ಲಿನ ಶತಮಾನಗಳಷ್ಟು ಹಳೆಯ ದೇವಾಲಯವೊಂದನ್ನು ಧ್ವಂಸಗೊಳಿಸಿದ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ.

1919 ರಲ್ಲಿ ಕಾರಕ್ ಜಿಲ್ಲೆಯ ತೇರಿ ಗ್ರಾಮದಲ್ಲಿ ದೇಹತ್ಯಾಗ ಮಾಡಿದ ಸನ್ಯಾಸಿ ಪರಮಹಂಸ ಮಹಾರಾಜರ ದೇಗುಲಕ್ಕೆ ಹಿಂದೂ ಯಾತ್ರಿಕರು ಭೇಟಿ ನೀಡಲಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಸಮಗ್ರ ವಚನ ಸಂಪುಟ- ಸತ್ಯಕಾಮರ ಸಾಹಿತ್ಯ ಸಂಪುಟ ಲೋಕಾರ್ಪಣೆ

0

ಸಾರಸ್ವತ ಲೋಕದ ಭಿನ್ನಾಭಿಪ್ರಾಯಗಳು ಕನ್ನಡ ಸಾಹಿತ್ಯ ಸಂವರ್ಧನೆಗೆ ಅಡ್ಡಿಯಾಗಿವೆ. ಕನ್ನಡ ಸಾರಸ್ವತ ಲೋಕ ಶ್ರೀಮಂತ ವಾಗಬೇಕಾದರೆ ಪೂರ್ವಗ್ರಹಗಳಿಂದ ಸಾಹಿತ್ಯಗಳು ಮುಕ್ತರಾಗಬೇಕು ಎಂದು ಸಾಹಿತ್ಯ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಅವರು ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರಿನಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಆಯೋಜಿಸಿದ್ದ 2020 ನೇ ಸಾಲಿನ ವಾರ್ಷಿಕ ಪ್ರಶಸ್ತಿ ಮತ್ತು ಪುಸ್ತಕ ಬಹುಮಾನ ಪ್ರದಾನ ಹಾಗೂ ನೂತನ ಕೃತಿಗಳ ಲೋಕಾರ್ಪಣೆ ಸಮಾರಂಭವನ್ನು ನಡೆಸಲಾಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

‘ಉತ್ತಮ ಸಾಹಿತ್ಯ ಸೃಷ್ಟಿಗೆ ಸಾಹಿತಿಗಳ ನಡುವಿನ ಭಿನ್ನಾಭಿಪ್ರಾಯಗಳು ಮುಳ್ಳಾಗಬಾರದು. ಸಾಹಿತ್ಯ ಸಂವರ್ಧನೆಗೆ ಸ್ಪಂದನೆ ಬಹುಮುಖ್ಯ. ಹಾಗಿದ್ದಾಗ ಮಾತ್ರ ಕನ್ನಡ ಎಲ್ಲ ಸಾಹಿತ್ಯ ಪ್ರಕಾರಗಳು ಬೆಳೆಯುತ್ತವೆ. ಇಂದು ಪ್ರಕಟವಾಗುತ್ತಿರುವ ಸಮಗ್ರ ವಚನ ಸಂಪುಟ ಗಳು ಮತ್ತು ಸತ್ಯಕಾಮರ ಸಾಹಿತ್ಯ ಸಂಚಯ ಸಂಪುಟಗಳು ಪ್ರಾಧಿಕಾರದ ಪ್ರಕಟಣೆಗಳಿಗೆ ವಿಶೇಷ ಗೌರವ ತಂದುಕೊಟ್ಟಿವೆ. ಇವು ಮರುಮುದ್ರಣ ಕಂಡಿಲ್ಲ. ಅದರಲ್ಲಿಯೂ ವಿಶೇಷವಾಗಿ ವಚನ ಸಂಪುಟಗಳು ಅಳವಾದ ವಿಷಯ ಅಧ್ಯಯನದಿಂದ ಕೂಡಿದ ಪರಿಷ್ಕರಣ ಸಂಪುಟ ಎಂದು ಕರೆಯುವುದು ಸಮಂಜಸ ಎಂದು ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಅವರು ಹೇಳಿದರು.

ಪ್ರಾಧಿಕಾರ ಹೊರತಂದಿರುವ ಪ್ರತಿಬಿಂಬ ಕಿರುತೆರೆಗೆ ಬಿಡುಗಡೆ ಮಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಎಸ್. ರಂಗಪ್ಪ ಅವರು ‘ಕನ್ನಡ ಪುಸ್ತಕ ಪ್ರಾಧಿಕಾರ ಹೊಸ ಲೇಖಕರ ಕೃತಿ ಪ್ರಕಟಣೆ ಮತ್ತು ಸಗಟು ಖರೀದಿಯಂತಹ ಯೋಜನೆಗಳ ಮೂಲಕ ಪುಸ್ತಕೋದ್ಯಮಕ್ಕೆ ಪೂರಕವಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಈ ಸಮಾರಂಭದಲ್ಲಿ ವೀರಣ್ಣ ರಾಜೂರ ಪ್ರಧಾನ ಸಂಪಾದಕತ್ವದ ಸಮಗ್ರ ವಚನ ಸಂಪುಟಗಳು, ಡಾ. ಶ್ರೀನಿವಾಸ ಹಾವನೂರ ಅವರ ಹೊಸ ಕನ್ನಡದ ಅರುಣೋದಯ, ಡಾ. ವೀಣಾ ಬನ್ನಂಜೆ ಸಂಪಾದಕತ್ವದ ಸತ್ಯಕಾಮರ ಸಂಗ್ರಹ ಸಾಹಿತ್ಯ ಸಂಪುಟಗಳು, ಇನ್ನು ಮುಂತಾದ ಕೃತಿಗಳು ಈ ಸಂದರ್ಭದಲ್ಲಿ ಲೋಕಾರ್ಪಣೆಗೊಂಡವು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ನಾಗಾಲ್ಯಾಂಡ್: ಸಶಸ್ತ್ರಪಡೆಗಳ ಕಾಯಿದೆ ಮುಂದುವರಿಕೆ

0

ಕೇಂದ್ರ ಸರ್ಕಾರವು ನಾಗಾಲ್ಯಾಂಡ್ ನಲ್ಲಿ ಡಿಸೆಂಬರ್ 30ರಿಂದ ಮತ್ತೆ ಆರು ತಿಂಗಳವರೆಗೆ ಸಶಸ್ತ್ರ ಪಡೆಗಳ ಕಾಯ್ದೆ ಆಫ್ ಸ್ಪ ವಿಸ್ತರಿಸಲಾಗಿದೆ ಎಂದು ತಿಳಿಸಿದೆ.

ನಾಗಾಲ್ಯಾಂಡ್ ನಲ್ಲಿ ಇತ್ತೀಚೆಗೆ ಪ್ರತ್ಯೇಕವಾದಿಗಳು ಎಂದು ತಪ್ಪಾಗಿ ತಿಳಿದು 13ಮಂದಿ ನಾಗರಿಕರನ್ನು ಸೇನಾ ಸಿಬ್ಬಂದಿ ಹತ್ಯೆಗೈದಿತ್ತು. ಆಫ್ ಸ್ಪ ಹಿಂದಕ್ಕೆ ಪಡೆಯಬೇಕು ಎಂದು ಸತತ ಪ್ರತಿಭಟನೆಗಳು ನಡೆದಿದ್ದಲ್ಲದೆ ನಾಗಾಲ್ಯಾಂಡ್ ವಿಧಾನಸಭೆಯಲ್ಲಿ ಈ ಬಗ್ಗೆ ಸರ್ವಾನುಮತದ ನಿರ್ಣಯ ಅಂಗೀಕರಿಸಲಾಗಿದೆ.

ಈ ಬೆಳವಣಿಗೆಯ ಬಳಿಕ ಗೃಹ ವ್ಯವಹಾರಗಳ ಸಚಿವಾಲಯ ಆಫ್ ಸ್ಪ ಅವಧಿ ವಿಸ್ತರಿಸಿ ಅಧಿಸೂಚನೆ ಹೊರಡಿಸಿದೆ.