Thursday, February 12, 2026
Thursday, February 12, 2026
Home Blog Page 1789

ಆನವಟ್ಟಿ ಬೀದಿಬದಿ ವ್ಯಾಪಾರಿಗಳ ಅಳಲು

0

ಆನವಟ್ಟಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ರಸ್ತೆಬದಿಗಳಲ್ಲಿ ಹಲವು ವರ್ಷಗಳಿಂದ ಬೀದಿ ಬದಿ ವ್ಯಾಪಾರ ಮಾಡಿ ಜೀವನ ಸಾಗಿಸುವ ವ್ಯಾಪಾರಿಗಳಿಗೆ ಗುರುತಿನ ಚೀಟಿ ಹಾಗೂ ಫುಡ್ ಕೋರ್ಟ್ ಮಾಡಿಕೊಡುವಂತೆ ಬೀದಿ ಬದಿ ವ್ಯಾಪಾರಿಗಳ ಸಂಘವು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರವಿ ಕುಮಾರ್ ಅವರಿಗೆ ಮನವಿ ಸಲ್ಲಿಸಿದೆ.
ಕೊರೋನಾ ಲಾಕ್ ಡೌನ್ ನಿಂದಾಗಿ ಜೀವನ ನಿರ್ವಹಣೆ ಮಾಡುವುದು ಕಷ್ಟ ಸಾಧ್ಯವಾಗಿತ್ತು. ನಮಗೆ ಗುರುತಿನ ಚೀಟಿ ಸಿಕ್ಕಿದ್ದರೆ, ಬ್ಯಾಂಕ್ ಸಾಲ ಸೇರಿದಂತೆ ಇಲಾಖೆಯಿಂದ ಸಿಗುವ ಸೌಲಭ್ಯಗಳು ನಮಗೆ ಲಭಿಸುತ್ತಿದ್ದವು ಎಂದು ಸಂಘದ ಕಾರ್ಯದರ್ಶಿ ಅಲ್ಲಾಭಕ್ಷ ಅವರು ತಿಳಿಸಿದರು.
ಆನವಟ್ಟಿ ಪಟ್ಟಣ ಪಂಚಾಯಿತಿ ಮಾನ್ಯತೆ ಪಡೆಯುವ ಮೊದಲು ರಸ್ತೆಬದಿಯ ವ್ಯಾಪಾರ ಮಾಡುವ ನಾವು ನಮಗೆ ಗುರುತಿನ ಚೀಟಿ ನೀಡುವಂತೆ ಹಲವು ಬಾರಿ ಗ್ರಾಮ ಪಂಚಾಯಿತಿಗೆ ಮನವಿ ಪತ್ರ ನೀಡಲಾಗಿತ್ತು. ಆದರೆ ಬೀದಿಬದಿ ವ್ಯಾಪಾರಿಗಳು ಸಂಕಷ್ಟಕ್ಕೆ ಸ್ಪಂದಿಸಿದ ಅಂದಿನ ಅಧಿಕಾರಿಗಳು ನಮಗೆ ಭರವಸೆ ಮಾತ್ರ ನೀಡಿದರು.
ನಮಗೆ ಭದ್ರತೆ ಒದಗಿಸಿಲ್ಲ ಎಂದು ಸಂಘದ ಅಧ್ಯಕ್ಷ ರವಿ ಎಂ.ಪಿ. ಬೇಸರ ವ್ಯಕ್ತಪಡಿಸಿದರು.
ಬೀದಿಬದಿ ವ್ಯಾಪಾರಿಗಳ ಹಲವು ವರ್ಷದ ಬೇಡಿಕೆಯನ್ನು ಜನಪ್ರತಿನಿಧಿಗಳು ಹಾಗೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಒದಗಿಸಲು ಮುಂದಾಗಬೇಕು. ನಮಗೆ ಭದ್ರತೆ ಒದಗಿಸುವುದಕ್ಕಾಗಿ ಗುರುತಿನ ಚೀಟಿ ಮತ್ತು ಹೆಚ್ಚು ಸಾರ್ವಜನಿಕ ಸಂಪರ್ಕವಿರುವ ಸ್ಥಳದಲ್ಲಿ ಫುಡ್ ಕೋರ್ಟ್ ನಿರ್ಮಿಸಿಕೊಡಬೇಕು ಎಂದು ಸಂಘದ ಖಜಾಂಚಿ ಮಾಲತೇಶ, ಎಸ್.ಕೆ. ಸದಸ್ಯರಾದ ಮಂಜಮ್ಮ, ಶಾರದಮ್ಮ, ಸತೀಶ್, ಜಗದೀಶ್, ವೀರೇಶ್, ಸಾಧಿಕ್ ಸಾಬ್, ರಫೀಕ್ ಅಹ್ಮದ್, ಸುನಿಲ್ ಕಲಾಲ್, ಸೇರಿದಂತೆ ಇನ್ನಿತರರು ಒತ್ತಾಯಿಸಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಆಪ್ ಪಕ್ಷದ ವತಿಯಿಂದ ಒಮಿಕ್ರಾನ್ ಜಾಗೃತಿ

0

ಆಮ್ ಆದ್ಮಿ ಪಕ್ಷದ ಜಿಲ್ಲಾ ಘಟಕ ಜ.2 ಮತ್ತು 4ರಂದು ಒಮಿಕ್ರಾನ್ ನಿಯಂತ್ರಣಕ್ಕಾಗಿ ಜನಜಾಗೃತಿ ಅಭಿಯಾನ ಹಮ್ಮಿಕೊಂಡಿದೆ.
ಕೋವಿಡ್ ಮಹಾಮಾರಿ ಜನಸಾಮಾನ್ಯರ ಜೀವ ಹಾಗೂ ಜೀವನದ ಮೇಲೆ ತೀವ್ರ ಪ್ರಭಾವ ಬೀರಿದೆ. ಲಕ್ಷಾಂತರ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಅಷ್ಟೇ ಸಂಖ್ಯೆಯ ಜನರು ಉದ್ಯೋಗ ಮತ್ತು ದುಡಿಮೆಯಿಲ್ಲದೆ ನರಳಿದ್ದಾರೆ. ಮತ್ತೆ ಇಂತಹ ಆಪತ್ತು ಮರುಕಳಿಸದಂತೆ ತಡೆಯಲು ಜನಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಮನೋಹರ್ ಗೌಡ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಜ.2ರಂದು ಬೆಳಿಗ್ಗೆ 7.30ಕ್ಕೆ ಶಿವಮೊಗ್ಗದ ಎಪಿಎಂಸಿ ತರಕಾರಿ ಮಾರುಕಟ್ಟೆಯಲ್ಲಿ ಒಮಿಕ್ರಾನ್ ತಡೆಗಟ್ಟಲು ಜನರಲ್ಲಿ ಜಾಗೃತಿ ಮೂಡಿಸಲಾಗುವುದು. ಅಲ್ಲಿ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರಿಗೆ ಉಚಿತವಾಗಿ ಮಾಸ್ಕ್ ವಿತರಿಸಲಾಗುವುದು ಹಾಗೂ ಜ.4ರಂದು ಗಾಂಧಿ ಬಜಾರ್ ಮತ್ತು ಸಂತೆ ಮೈದಾನದಲ್ಲಿ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.
ಪಕ್ಷದ ಮುಖಂಡರಾದ ಎಂ.ರಮೇಶ್, ಎಸ್.ಎಲ್.ಧನಂಜಯ, ಸತೀಶ್ ಜಟ್ಟಿ,ಅಮೃತ್ ಎಸ್. ಭರತ್ ಇದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಜಿಲ್ಲಾಧಿಕಾರಿಗಳ ಸಭೆ: ಪ್ರಮುಖ ನಿರ್ಧಾರಕೈಗೊಂಡ ಸಿ.ಎಂ.

0

ಅಕ್ರಮ ಸಕ್ರಮದಡಿಯಲ್ಲಿ ಗೋಮಾಳ ಜಮೀನನ್ನು ಸಕ್ರಮ ಮಾಡಲು ನಮೂನೆ 53 ಮತ್ತು 67 ನಲ್ಲಿ ಬಾಕಿ ಇರುವ ಅರ್ಜಿಗಳನ್ನು ಕಾನೂನಿನಡಿಯಲ್ಲಿ ಕೆಲವೊಂದು ತಿದ್ದುಪಡಿಯ ಅವಶ್ಯಕತೆ ಇರುವ ಬಗ್ಗೆ ಚರ್ಚಿಸಲಾಗಿದೆ. ಮುಂದಿನ ದಿನಗಳಲ್ಲಿ ಕಾನೂನು ಇಲಾಖೆಯಿಂದ ಪರಿಶೀಲನೆ ನಡೆಸಿ ಸೂಕ್ತ ತಿದ್ದುಪಡಿ ತರುವ ಬಗ್ಗೆ ಚರ್ಚಿಸಲಾಗುವುದು ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಜಿಲ್ಲಾಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಸ್ವಾಮಿತ್ವ ಯೋಜನೆಯಡಿ ಡ್ರೋನ್ ಸರ್ವೆ ಈ ವರ್ಷದ ಗುರಿಗೆ ಶೇ.59ರಷ್ಟು ಸಾಧನೆಯಾಗಿದೆ. ಇದನ್ನು ಚುರುಕುಗೊಳಿಸಲು 20 ಕೋಟಿ ರೂಪಾಯಿ ಅಗತ್ಯವಿದೆ. ಪ್ರಸ್ತಾವನೆ ಸಲ್ಲಿಸಲು ಸೂಚಿಸಲಾಗಿದೆ. ಸುಮಾರು 4,370 ಸ್ಮಶಾನ ಭೂಮಿ ಅಗತ್ಯವಿದ್ದು, ಒಂದು ವರ್ಷದಲ್ಲಿ ವಿಶೇಷ ಅಭಿಯಾನದ ಮೂಲಕ ಸ್ಮಶಾನ ಭೂಮಿ ಒದಗಿಸಲು ಮತ್ತು ಸರಕಾರಿ ಭೂಮಿ ಇರುವಲ್ಲಿ ನೀಡಬೇಕು. ಲಭ್ಯವಿಲ್ಲದ ಕಡೆಗಳಲ್ಲಿ ಖಾಸಗಿ ಜಮೀನು ಖರೀದಿ ಮಾಡಿ ಸ್ವಾಧೀನ ಪಡಿಸಿಕೊಳ್ಳಲು ಸೂಚನೆ ನೀಡಲಾಗಿದೆ ಎಂದರು.
ಸಾಮಾಜಿಕ ಭದ್ರತಾ ಪಿಂಚಣಿ ಸೌಲಭ್ಯದಡಿಯಲ್ಲಿ ಸುಮಾರು ಮೂರು ಲಕ್ಷಕ್ಕೂ ಹೆಚ್ಚು ಫಲಾನುಭವಿಗಳ ಆಧಾರ್ ಜೋಡಣೆ ಬಾಕಿ ಇದೆ. ಒಂದು ತಿಂಗಳಲ್ಲಿ ಜೋಡಣೆ ಕಾರ್ಯ ಆಗಬೇಕು ಮತ್ತು ನಿಜವಾದ ಫಲಾನುಭವಿಗಳಿಗೆ ದೊರೆಯಬೇಕು. ಪಿಂಚಣಿ ಸೌಲಭ್ಯ ಡಿಬಿಟಿ ಮೂಲಕವೇ ತಲುಪಬೇಕು ಎಂಬ ಸೂಚನೆ ನೀಡಲಾಗಿದೆ ಎಂದರು.
ಡೀಮ್ಡ್ ಫಾರೆಸ್ಟ್ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಕೇಸ್ ವಿಚಾರವಾಗಿ ಅರಣ್ಯ ಪ್ರದೇಶದಲ್ಲಿರುವ ಜಮೀನುಗಳು ಮತ್ತು ಅರಣ್ಯ ಪ್ರದೇಶದಲ್ಲಿಲ್ಲದ ಜಮೀನುಗಳ ದಾಖಲೆಗಳನ್ನು ಪರಿಶೀಲಿಸಿ ಮತ್ತೊಮ್ಮೆ ಸಮೀಕ್ಷೆ ಮಾಡಿಕೊಡಲಿ ವರದಿ ನೀಡಿದರೆ ಸರ್ಕಾರ ತೀರ್ಮಾನ ಕೈಗೊಳ್ಳಲು ಸಾಧ್ಯವಾಗುವುದಾಗಿ ಚರ್ಚಿಸಲಾಯಿತು. ಸಹಾಯಕ ಕಮಿಷನರ್ ಹಾಗೂ ತಶೀಲ್ದಾರ್ ಕೋರ್ಟ್ ನಲ್ಲಿ 10-15 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಬಾಕಿ ಇವೆ. ಇದನ್ನು ಕೂಡಲೇ ವಿಲೇವಾರಿ ಮಾಡಲು ಸೂಚಿಸಿದೆ. ಭೂ ಪರಿವರ್ತನೆಗೆ ಕಂದಾಯ ಸಚಿವರು ಹೊಸ ನಿಯಮಗಳನ್ನು ತರಲು ಘೋಷಣೆ ಮಾಡಿದ್ದಾರೆ.
ವಿಶೇಷವಾಗಿ ಭೂಪರಿವರ್ತನೆ ಸಂದರ್ಭದಲ್ಲಿ ಮಾಸ್ಟರ್ ಪ್ಲಾನ್ ಸಿದ್ಧಪಡಿಸಲು ಉದ್ದೇಶಿಸಿರುವ ನಗರ ಪ್ರದೇಶಗಳಿಗೆ ಸಂಬಂಧಿಸಿದಂತೆ ನಗರಾಭಿವೃದ್ಧಿ ಪ್ರಾಧಿಕಾರಗಳು ಅಭಿಪ್ರಾಯ ನೀಡಲು ಸಾಧ್ಯವಾಗುತ್ತಿಲ್ಲ.ಈ ಹಿನ್ನೆಲೆಯಲ್ಲಿ ಮಾಸ್ಟರ್ ಪ್ಲಾನ್ ಗಳನ್ನು 3 ತಿಂಗಳ ಅವಧಿಯಲ್ಲಿ ಪೂರ್ಣಗೊಳಿಸುವಂತೆ ಸೂಚನೆ ನೀಡಲಾಗಿದೆ ಎಂದರು.
ಜಿಲ್ಲಾಧಿಕಾರಿಗಳು ಜನರು ಮತ್ತು ಸರಕಾರದ ನಡುವಿನ ಬಹುಮುಖ್ಯ ಕೊಂಡಿ. ಹಾಗಾಗಿ ಸ್ಪಂದನಶೀಲರಾಗಿ ಆಡಳಿತ ನಡೆಸುವಂತೆ ಸೂಚಿಸಲಾಗಿದೆ ಎಂದು ಸಿಎಂ ತಿಳಿಸಿದರು.
ಜಿಲ್ಲಾಧಿಕಾರಿಗಳು ಸ್ಪಂದನ ಶೀಲರಾಗಿ ಕೆಲಸ ನಿರ್ವಹಿಸದಿದ್ದರೆ , ಕೆಲವರ ಹಿತಾಸಕ್ತಿಗೆ ಕೆಲಸ ನಿರ್ವಹಿಸಿದ್ದಲ್ಲಿ ಜಿಲ್ಲಾಧಿಕಾರಿಗಳಾಗಿರುವ ಅರ್ಹತೆ ಕಳೆದುಕೊಳ್ಳುವುದಾಗಿ ತಿಳಿಸಲಾಗಿದೆ ಎಂದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ದೂರು ಸಲ್ಲಿಸಿದ 24 ಗಂಟೆಯೊಳಗೆ ಟಿಸಿ ಬದಲಾವಣೆ-ಸಚಿವ ಸುನೀಲ್ ಕುಮಾರ್

0

ರಾಜ್ಯ ಇಂಧನ ಇಲಾಖೆಯು ವಿಫಲಗೊಂಡ ವಿದ್ಯುತ್ ಪರಿವರ್ತಕ ಬದಲಾವಣೆಗಾಗಿ ವರ್ಷಾನುಗಟ್ಟಲೆ ಹೋರಾಟ ಮಾಡಬೇಕಿದ್ದರೆ ರೈತರ ಕಷ್ಟಕ್ಕೆ ಈಗ ಕೊನೆ ಸಿಕ್ಕಿದೆ.

ರಾಜ್ಯ ಇಂಧನ ಸಚಿವ ವಿ.ಸುನಿಲ್ ಕುಮಾರ್ ಅವರು ‘ರೈತರ ಸಮಸ್ಯೆ ಕುರಿತಂತೆ ಮಾತನಾಡಿದ್ದು, ದೂರ ಸಲ್ಲಿಸಿದ 24ಗಂಟೆಯೊಳಗೆ ಬದಲಾವಣೆ ಸೂಚಿಸಿದ ಪ್ರಕಾರ ಇಲ್ಲಿಯತನಕ ಶೇಕಡ ನೂರರಷ್ಟು ಗುರಿ ಸಾಧಿಸಲಾಗಿದೆ. ಎಲ್ಲಾ ವಿದ್ಯುತ್ ಸರಬರಾಜು ಕಂಪನಿ ವ್ಯಾಪ್ತಿಯಲ್ಲಿ ಟ್ರಾನ್ಸ್ ಫಾರ್ಮರ್ ಬ್ಯಾಂಕ್ ಸ್ಥಾಪನೆ ಮಾಡಲಾಗಿತ್ತು ರೈತರ ಮನವಿಗೆ ತಕ್ಷಣ ಸ್ಪಂದಿಸುವ ಮೂಲಕ ಜನಸ್ನೇಹಿ ಕಾರ್ಯಕ್ರಮ ನಡೆಸಲಾಗುತ್ತಿದೆ’ ಎಂದು ತಿಳಿಸಿದರು.

‘ಯಾವುದೇ ಜಿಲ್ಲೆಯಲ್ಲೂ ಸಮಸ್ಯೆ ಆದರೆ ತಕ್ಷಣ ಪರಿವರ್ತಿಸಲು ರಾಜ್ಯದಲ್ಲಿ ಸದ್ಯ 10248 ಟ್ರಾನ್ಸ್ ಫಾರ್ಮರ್ ಸಂಗ್ರಹವಿದೆ. ಈ ಹಿಂದೆ ಟ್ರಾನ್ಸ್ ಫಾರ್ಮರ್ ವೈಫಲ್ಯವಾದಾಗ ಅದರ ದುರಸ್ತಿ ಬದಲಾವಣೆ ದೊಡ್ಡ ಸಮಸ್ಯೆಯಾಗಿತ್ತು ತಕ್ಷಣವೇ ಪರಿಹಾರ ದೊರೆಯುವಂತೆ ರೂಪಿಸಲು ವಿದ್ಯುತ್ ಸರಬರಾಜು ಕಂಪನಿ ವ್ಯಾಪ್ತಿಯಲ್ಲಿ ಪರಿವರ್ತಕಗಳ ಬ್ಯಾಂಕ್ ಸ್ಥಾಪನೆ ಮಾಡಲಾಗಿದೆ’ ಎಂದು ಸಚಿವರು ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಶ್ರೀನಗರ ಸೇನಾ ಚಕಮಕಿ: ಉಗ್ರರ ಹತ್ಯೆ

0

ಶ್ರೀನಗರ ದಲ್ಲಿ ಜೈಷೆ-ಇ-ಮೊಹಮ್ಮದ್ ಸಂಘಟನೆಯ ಮೂವರು ಉಗ್ರರನ್ನು ಭದ್ರತಾ ಸಿಬ್ಬಂದಿ ಹತ್ಯೆಗೈದಿದ್ದಾರೆ.

ಶ್ರೀನಗರ ಹೊರವಲಯದ ಪ್ಯಾಂಥಾ ಚೌಕ ಪ್ರದೇಶದಲ್ಲಿ ಉಗ್ರರು ಅಡಗಿರುವ ಕುರಿತು ಬಂದಂತಹ ಖಚಿತ ಮಾಹಿತಿಯ ಮೇರೆಗೆ ಭದ್ರತಾ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮೂವರು ಉಗ್ರರನ್ನ ಹೊಡೆದುರುಳಿಸಿದ್ದು, ಈ ಗುಂಡಿನ ಚಕಮಕಿಯಲ್ಲಿ ಮೂವರು ಪೊಲೀಸರು ಹಾಗೂ ಇಬ್ಬರು ಸಿಆರ್ ಪಿಎಫ್ ಯೋಧರು ಐವರು ಸಿಬ್ಬಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಕಾಶ್ಮೀರದ ಡಿಜಿಪಿ ದಿಲ್ಬಾಗ್ ಸಿಂಗ್ ತಿಳಿಸಿದ್ದಾರೆ.

ಹತ್ಯೆಗೀಡಾದ ಮೂವರು ಉಗ್ರರಲ್ಲಿ ಒಬ್ಬನನ್ನು ಸುಹೇಲ್ ಅಹ್ಮದ್ ಎಂದು ಗುರುತಿಸಲಾಗಿದೆ. ಸುಹೇಲ್ ಅಹ್ಮದ್ ಕಳೆದ ಡಿಸೆಂಬರ್ 13ರಂದು ಜವಾನ್ ಪ್ರದೇಶದಲ್ಲಿ ನಡೆದ ದಾಳಿಯಲ್ಲಿ ಭಾಗಿಯಾಗಿದ್ದಾರೆ ತಿಳಿದುಬಂದಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಉಡುಪಿಯಲ್ಲಿ ಶೀಘ್ರ ಜವಳಿ ಪಾರ್ಕ್

0

ಬೆಳಗಾವಿ ಅಧಿವೇಶನದಲ್ಲಿ ನೇಕಾರರನ್ನು ರೈತರು ಎಂದು ಪರಿಗಣಿಸುವ ನಿಯಮ ಜಾರಿಗೆ ತರಲಾಗಿದೆ. ನೇಕಾರರಿಗೆ ಕೂಡ ರೈತರಿಗೆ ದೊರಕುವ ಪರಿಹಾರಗಳು ದೊರಕಲಿದೆ. ನೇಕಾರರ ಸಮಗ್ರ ಅಭಿವೃದ್ಧಿಗಾಗಿ ನೇಕಾರ್ ಸಮ್ಮಾನ್ ಯೋಜನೆ ಅನುಷ್ಠಾನಗೊಳಿಸಲಾಗಿದೆ ಎಂದು ಕೈಮಗ್ಗ ಮತ್ತು ಜವಳಿ ಇಲಾಖೆ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಅವರು ತಿಳಿಸಿದ್ದಾರೆ.
ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ , ಪಾರ್ಕ್ ಗೆ ಬೇಕಾದ ಯೋಜನೆ ಸಿದ್ಧಪಡಿಸಲಾಗಿದೆ. ನಿಯಮಗಳನ್ನು ಶೀಘ್ರ ರೂಪಿಸಿ ಜವಳಿ ಪಾರ್ಕ್ ಕಾಮಗಾರಿ ಆರಂಭಗೊಳ್ಳಲಿದೆ. ನೇಕಾರರಿಗೆ ಮತ್ತು ಇತರರಿಗೆ ನೇಕಾರಿಕೆಯ ಕೌಶಲ್ಯ ಅರಿತುಕೊಳ್ಳಲು ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗುವುದು ಎಂದರು.
ಉಡುಪಿಯಲ್ಲಿ ಸುಮಾರು 20 ಎಕರೆಯಲ್ಲಿ ಶೀಘ್ರವೇ ಬೃಹತ್ ಜವಳಿ ಪಾರ್ಕ್ ನಿರ್ಮಿಸಲಾಗುವುದು ಎಂದು ತಿಳಿಸಿದರು.
2020-21ರ ಅವಧಿಯಲ್ಲಿ ಸುಮಾರು 120 ಕೋಟಿ ರೂ. ಮೊತ್ತವನ್ನು ರಿಯಾಯಿತಿ ರೂಪದಲ್ಲಿ ನೇಕಾರರಿಗೆ ನೀಡಲಾಗಿದೆ. ಕೈಮಗ್ಗ, ಟೆಕ್ಸ್ ಟೈಲ್ , ಪವರ್ ಲೂಮ್ ಅಭಿವೃದ್ಧಿಗೊಳಿಸಿ ಅವುಗಳನ್ನು ಉಳಿಸುವತ್ತ ಸರಕಾರ ಗಮನ ಹರಿಸಿದೆ. ಆಧುನಿಕ ತಂತ್ರಜ್ಞಾನದ ನಡುವೆಯೂ ಹಳೆ ಪರಂಪರೆ ಉಳಿಸಿ ಬೆಳೆಸಿಕೊಂಡು ಹೋಗುವುದು ನಮ್ಮ ಜವಾಬ್ದಾರಿ ಎಂದರು.
ನೇಕಾರರನ್ನು ದೊಡ್ಡ ಉದ್ಯಮಿಗಳನ್ನಾಗಿ ಮಾಡುವ ಇರಾದೆ ಸರಕಾರದ್ದು. ದೇಶದಲ್ಲಿ ಕೈಯಿಂದ ಮಾಡಿದ ಬಟ್ಟೆಗಳಿಗೆ ಹೆಚ್ಚಿನ ಬೇಡಿಕೆಯಿದೆ. ಆದರೆ ಅದೇ ಪ್ರಮಾಣದಲ್ಲಿ ಉತ್ಪಾದನೆ ಆಗುತ್ತಿಲ್ಲ. ಆದುದರಿಂದ ಹೆಚ್ಚು ಉತ್ಪಾದನೆ ಮಾಡಲು ನೇಕಾರರನ್ನು ಪ್ರೋತ್ಸಾಹಿಸಲಾಗುವುದು. ಕಚ್ಚಾ ವಸ್ತುಗಳನ್ನು ಆಮದು ಮಾಡಿಕೊಂಡು ಹೆಚ್ಚು ಉತ್ಪಾದನೆ ಮಾಡಿ ಅವುಗಳನ್ನು ರಫ್ತುಮಾಡುವತ್ತ ಗಮನಹರಿಸಲಾಗುವುದು.
ಮಂಗಳೂರು ಮತ್ತು ಉಡುಪಿಯಲ್ಲಿ ಬಂದರು ಇರುವುದರಿಂದ ನಮ್ಮ ಉತ್ಪಾದನೆಗಳನ್ನು ಪ್ರಪಂಚದಾದ್ಯಂತ ಪಸರಿಸಲು ಬೇಕಾದ ಸೂಕ್ತ ವ್ಯವಸ್ಥೆ ಮಾಡಲಾಗುವುದು ಎಂದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

4000 ಅತಿಥಿ ಶಿಕ್ಷಕರ ನೇಮಕ

0

ಸಾರ್ವಜನಿಕ ಶಿಕ್ಷಣ ಇಲಾಖೆಯು ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳ ಬದಲಿಗೆ 4000 ಅತಿಥಿ ಶಿಕ್ಷಕರನ್ನು ಎರಡನೇ ಹಂತದಲ್ಲಿ ನೇಮಕ ಮಾಡಿಕೊಳ್ಳಲು ಅನುಮತಿ ನೀಡಿದೆ.

ಮೊದಲ ಹಂತದಲ್ಲಿ 2021 ರ ಸೆಪ್ಟೆಂಬರ್ ನಿಂದ 2022 ಮಾರ್ಚ್ ವರೆಗೆ ಹುಟ್ಟು 18000 ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಶಿಕ್ಷಣ ಇಲಾಖೆಯ ಅನುಮತಿ ನೀಡಿತ್ತು. ಆದರೆ ಇದೀಗ ಎರಡನೇ ಹಂತದಲ್ಲಿ ಹೆಚ್ಚುವರಿಯಾಗಿ 400 ಅತಿಥಿ ಶಿಕ್ಷಕರನ್ನು ಷರತ್ತಿಗೆ ಒಳಪಟ್ಟು ನೇಮಕ ಮಾಡಿಕೊಳ್ಳುವಂತೆ ಶಿಕ್ಷಣ ಇಲಾಖೆ ಆಯುಕ್ತ ಡಾ.ಆರ್.ವಿಶಾಲ್ ಅವರು ಆಯಾ ಜಿಲ್ಲೆಯ ಉಪ ನಿರ್ದೇಶಕರಿಗೆ ಸೂಚಿಸಿದ್ದಾರೆ.

2021ರ ನವೆಂಬರ್ ಅಂತ್ಯಕ್ಕೆ ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಒಟ್ಟು 30,606 ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಈ ಪೈಕಿ ಪ್ರಥಮ ಹಂತದಲ್ಲಿ 18,000 ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಆದರೆ 12,606 ಹುದ್ದೆಗಳು ಖಾಲಿ ಉಳಿದಿವೆ. ಈಗ ಎರಡನೇ ಹಂತದಲ್ಲಿ 4000 ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವ ಮೂಲಕ ಶಿಕ್ಷಕರ ಕೊರತೆಯನ್ನು ತಾತ್ಕಾಲಿಕವಾಗಿ ಸರಿದೂಗಿಸಲು ಇಲಾಖೆ ಮುಂದಾಗಿದೆ ಎಂದು ತಿಳಿದುಬಂದಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ರಾಗಿ,ಭತ್ತ ಜೋಳ ಖರೀದಿ ಕೇಂದ್ರ ಆರಂಭ

0

ರಾಜ್ಯ ಸರ್ಕಾರ ರಾಜ್ಯಾದ್ಯಂತ ರೈತರಿಂದ ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ರಾಗಿ ಭತ್ತ ಮತ್ತು ಜೋಳ ಖರೀದಿಗೆ ಖರೀದಿ ಕೇಂದ್ರಗಳನ್ನು ಆರಂಭಿಸಿದೆ. ಈ ಕೇಂದ್ರಗಳು ಜನವರಿ 1ರಿಂದ ಮಾರ್ಚ್ 31ರವರೆಗೆ ಕಾರ್ಯನಿರ್ವಹಿಸಲಿವೆ.

ಬಿಳಿ ಜೋಳ ಮಾಲ್ದಂಡಿ ಪ್ರತಿ ಕ್ವಿಂಟಾಲ್ಗೆ 2758 ರೂ , ಬಿಳಿ ಜೋಳ ಹೈಬ್ರಿಡ್ ಗೆ 2738 ರೂ., ಗ್ರೇಡ್ ಎ ಭತ್ತಕ್ಕೆ 1960 ರೂ, ಕ್ವಿಂಟಾಲ್ ಸಾಮಾನ್ಯ ಗ್ರೇಡ್ ಭತ್ತಕ್ಕೆ 1940 ರೂ. ಕ್ವಿಂಟಾಲ್ ರಾಗಿಗೆ 3377 ರೂ. ದರ ನಿಗದಿ ಪಡಿಸಲಾಗಿದೆ.

ಖರೀದಿ ಕೇಂದ್ರಗಳಿಗೆ ಮಿತಿ ಸೇರುವ ಸರ್ಕಾರ ಪ್ರತಿ ಎಕರೆಗೆ 25 ಕ್ವಿಂಟಾಲ್ ಭತ್ತ , ಪ್ರತಿ ರೈತರಿಂದ 40 ಕ್ವಿಂಟಾಲ್ ಗರಿಷ್ಠ ಭತ್ತ ಖರೀದಿ ಮಿತಿ ನಿಗದಿ ಗೊಳಿಸಲಾಗಿದೆ. ಅದರಂತೆ ರಾಗಿ ಮತ್ತು ಬಿಳಿ ಜೋಳಕ್ಕೆ ಮಿತಿ ನಿಗದಿ ಪಡಿಸಲಾಗಿದೆ. ಪ್ರತಿ ಎಕರೆಗೆ ಕ್ರಮವಾಗಿ 10 ಕ್ವಿಂಟಾಲ್, ಪ್ರತಿ ರೈತರಿಂದ ತಲಾ 20 ಕ್ವಿಂಟಾಲ್ ರಾಗಿ, ಬಿಳಿ ಜೋಳ ಖರೀದಿ ಮಿತಿ ಗೊಳಿಸಲಾಗಿದೆ ಎಂದು ಸಚಿವ ಉಮೇಶ್ ಕತ್ತಿ ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

19 ವರ್ಷದೊಳಗಿನವರ ಕ್ರಿಕೆಟ್ ಏಷ್ಯಾಕಪ್ ಭಾರತದ್ದೇ ಮತ್ತೆ ಪಾರಮ್ಯ

0

19 ವರ್ಷದೊಳಗಿನವರ ಏಷ್ಯಾ ಕಪ್ ಕ್ರಿಕೆಟ್ ಫೈನಲ್ ಪಂದ್ಯವು ಭಾರತ ಮತ್ತು ಶ್ರೀಲಂಕಾ ತಂಡಗಳ ನಡುವೆ ಪಂದ್ಯ ನಡೆಯಿತು.ಶ್ರೀಲಂಕಾ ವಿರುದ್ಧ ಭಾರತ ಜಯ ಸಾಧಿಸಿ ಚಾಂಪಿಯನ್ ಆಗಿದೆ.
ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು.38 ಓವರ್ ಗಳಲ್ಲಿ 9 ವಿಕೆಟ್ ಪತನಕ್ಕೆ 106 ರನ್ ಗಳಿಸಿಕೊಂಡಿತು.19 ವರ್ಷದೊಳಗಿನವರ ಶ್ರೀಲಂಕಾ ತಂಡ 33 ಓವರ್ ಗಳಲ್ಲಿ 74 ರನ್ ಗಳಿಗೆ 7 ವಿಕೆಟ್ ಕಳೆದುಕೊಂಡಿದ್ದಾಗ ಮಳೆ ಸುರಿಯಿತು ಮಳೆಯ ಅಭವಾದಿಂದ 2 ಗಂಟೆಗೂ ಹೆಚ್ಚು ಸಮಯ ಪಂದ್ಯ ಸ್ಥಗಿತಗೊಳಿಸಲಾಯಿತು.ನಂತರ ಪಂದ್ಯವನ್ನು 38 ಓವರ್ ಗಳಿಗೆ ಸೀಮಿತಗೊಳಿಸಲಾಯಿತು.ರಾಜ್ಯವರ್ಧನ್ ಹಂಗರ್ ಗೇಕರ್ ಮತ್ತು ರವಿ ಕುಮಾರ್ ಅವರು ಭಾರತದ ಬೌಲಿಂಗ್ ವಿಭಾಗದಲ್ಲಿ ಕ್ರೀಡಾ ಪ್ರೇಮಿಗಳ ಮನಸೆಳೆದರು. ಓಸ್ತವಾಲ್ ಅವರು ಕೂಡ 3 ವಿಕೆಟ್ ಪಡೆದು ಅತ್ಯುತ್ತಮ ಕೊಡುಗೆ ನೀಡಿದರು.
106 ರನ್ ಗಳ ಗೆಲುವಿನ ಗುರಿ ಬೆನ್ನತ್ತಿ ಆಡಿದ ಭಾರತ ಅಂಕೃಷ್ ತಾಳ್ಮೆಯ ಬ್ಯಾಟಿಂಗ್ ಮೂಲಕ 67 ಎಸೆತಗಳಲ್ಲಿ 56 ರನ್ ಗಳಿಸಿದರೆ.ಶೇಕ್ 49 ಎಸೆತಗಳಲ್ಲಿ 31 ರನ್ ಗಳಿಸಿ ಇವರಿಬ್ಬರ ಇವರಿಬ್ಬರು 95 ರನ್ ಗಳ ಜೊತೆಯಾಟವಾಡಿ ಭಾರತ ತಂಡಕ್ಕೆ 21.3 ಓವರ್ ಗಳಲ್ಲಿ 104 ಗಳಿಸಿ ಸುಲಭ ಜಯಕ್ಕೆ ಕಾಣಿಕೆ ನೀಡಿದರು.
ಇಡೀ ಟೂರ್ನಿಯಲ್ಲಿ ಭಾರತ ಪ್ರಬಲ ಕ್ರಿಕೆಟ್ ಆಡಿತು.ಒಂದೇ ಒಂದು ಪಂದ್ಯ ಪಾಕಿಸ್ತಾನದ ಕೈ ಯಲ್ಲಿ ಸೋಲುಣ್ಣಬೇಕಾಯಿತು. ಅದೊಂದು ಕಹಿ ಪ್ರಸಂಗ ಏಷ್ಯಾ ಕಪ್ ಭಾರತಕ್ಕೆ ಅತ್ಯಂತ ಮಧುರ ನೆನಪನ್ನು ಉಳಿಸಿದೆ.
ಹಿಂದಿನ ಪಂದ್ಯಗಳಲ್ಲಿ ಮಿಂಚಲು ವಿಫಲರಾಗಿದ್ದ ಆತ್ಮವಿಶ್ವಾಸದಲ್ಲಿ ಆಡಿದರು.ಬ್ಯಾಕ್ ಫುಟ್ ಪಂಚ್ ಗಳ ಮೂಲಕ ಆರಂಭದಲ್ಲೇ ಸುಲಭವಾಗಿ ರನ್ ಕಲೆ ಹಾಕಿದ ಅವರು ವೇಗದ ಬೌಲರ್ ಗಳನ್ನು . ಸ್ಪಿನ್ನರ್ ಗಳನ್ನು ದಿಟ್ಟವಾಗಿ ಗದರಿಸಿದರು.
8 ನೇ ಬಾರಿಗೆ “ಏಷ್ಯಾಕಪ್” ತನ್ನ ಮಡಿಲಿಗೆ ಹಾಕಿಕೊಂಡ ಭಾರತ.ಹೊಸ ವರ್ಷವನ್ನು ಸಂತೋಷ ಸಂಭ್ರಮದಿಂದ ಬರಮಾಡಿಕೊಂಡಿತು.
19 ವರ್ಷದೊಳಗಿನವರ “ವಿಶ್ವಕಪ್” ಟೂರ್ನಿಯು ಜನವರಿ 14 ರಿಂದ ವೆಸ್ಟ್ ಇಂಡೀಸ್ ನಲ್ಲಿ ನಡೆಯಲಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಪ್ರೊ ಕಬಡ್ಡಿ ಲೀಗ್ ತಲೈವಾರ್ಸ್ ಮತ್ತು ಪೈರೇಟ್ಸ್ ವಿಜಯ

0

ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿರುವ ಗ್ರ್ಯಾಂಡ್ ಶೆರಟಾನ್ ಹೋಟೆಲ್ ಆವರಣದಲ್ಲಿ ನಡೆಯುತ್ತಿರುವ ಪ್ರೊ ಕಬಡ್ಡಿ ಲೀಗ್ ಪಂದ್ಯಗಳಲ್ಲಿ ಶುಕ್ರವಾರ 4 ತಂಡಗಳು ಭಾಗವಹಿಸಿದ್ದವು.
ಪಲ್ಟನ್ ವಿರುದ್ಧ ತಲೈವಾರ್ಸ್ ಗೆ ಮೊದಲ ಜಯ.
ಮೊದಲನೇ ಪಂದ್ಯವು:
ತಮಿಳ್ ತಲೈವಾರ್ಸ್ (36) ಮತ್ತು ಪುಣೇರಿ ಪಲ್ಟನ್(26) ವಿರುದ್ಧ ರೋಚಕ ಆಟವಾಡಿ ಪ್ರೊ ಕಬಡ್ಡಿ ಲೀಗ್ ನ 8 ನೇ ಆವೃತ್ತಿಯಲ್ಲಿ ಮೊದಲ ಜಯ ಸಾಧಿಸಿ ತನ್ನ ಖಾತೆಯನ್ನು ತೆರೆದುಕೊಂಡಿದೆ.ಬದಲಿ ಆಟಗಾರನಾಗಿ ಕಣಕ್ಕೆ ಇಳಿದ ಅಜಿಂಕ್ಯ ಚುರುಕಿನ ದಾಳಿ ಮತ್ತು ಎದುರಾಳಿಗಳ ಕೈ ಯಿಂದ ತಪ್ಪಿಸಿಕೊಳ್ಳುವ ಚಾಕಚಕ್ಯತೆ ಮೂಲಕ ಅಜಿಂಕ್ಯ ರೇಡಿಂಗ್ ನಲ್ಲಿ 9 ಟಚ್ ಪಾಯಿಂಟ್ ಸೇರಿದಂತೆ ಅವರು ಒಟ್ಟು 11 ಪಾಯಿಂಟ್ ಗಳನ್ನು ತಂಡಕ್ಕೆ ಸೇರಿಸಿದರು.ಪಂದ್ಯ ಮುಂದುವರಿದಂತೆ ಅವರು ತಂಡದ ‘ಮಾಡು ಇಲ್ಲವೇ ಮಡಿ ರೇಡ್ ನ ಸ್ಪೆಷಲಿಸ್ಟ್’ ಆದರು.
ಟ್ಯಾಕ್ಲಿಂಗ್ ನಲ್ಲಿ 2 ತಂಡಗಳು ಸಮಬಲ ಆಟವಾಡಿದವು.ಆದರೆ, ತಲೈವಾರ್ಸ್ ಆಟಗಾರರು ರೇಡಿಂಗ್ ನಲ್ಲಿ ಮಿಂಚಿದರು.ಹಾಗೆಯೇ 5 ಟಚ್ ಪಾಯಿಂಟ್ ಬಳಿಕ ಮಂಜಿತ್ ಒಟ್ಟು 8 ಪಾಯಿಂಟ್ ಗಳಿಸಿದರು.ನಾಯಕ ಸುರ್ಜಿತ್ ಸಿಂಗ್ 3 ಪಾಯಿಂಟ್ ಗಳಿಸಿದರು.
ಪುಣೇರಿ ಪಲ್ಟನ್ ವಿರುದ್ಧ ಅಧಿಪತ್ಯ ಸ್ಥಾಪಿಸಿದ ತಮಿಳ್ ತಲೈವಾರ್ಸ್ ತಂಡ ಲೀಗ್ ನಲ್ಲಿ ಮೊದಲ ಜಯದ ಸಂಭ್ರಮದಲ್ಲಿ ಮುಳುಗಿತು.ಶುಕ್ರವಾರದ ಮೊದಲ ಪಂದ್ಯದಲ್ಲಿ ತಂಡ 36-26 ರ ಅಂತರದಿಂದ ಗೆಲುವು ಪಡೆದಿತ್ತು.
ಬೆಂಗಾಲ್ ವಿರುದ್ದ ಪಟ್ನಾ ಭರ್ಜರಿ ಜಯ.
ಎರೆಡನೇ ಪಂದ್ಯವು:
ಪಟ್ನಾ ಪೈರೇಟ್ಸ್ (44) ಮತ್ತು ಬೆಂಗಾಲ್ ವಾರಿಯರ್ಸ್ (30) ತಂಡಗಳ ನಡುವೆ ಪಂದ್ಯ ನಡೆಯಿತು.ವಾರಿಯರ್ಸ್ ವಿರುದ್ಧ ಪೈರೇಟ್ಸ್ ರೋಚಕ ಜಯ ಸಾಧಿಸಿತು.
ಆರಂಭದಲ್ಲೇ ಉಭಯ ತಂಡಗಳು ಸಮಬಲದ ಪೈಪೋಟಿ ನಡೆಸಿದವು. ಮೋನು ಮತ್ತು ಸಚಿನ್ ಪಟ್ನಾ ಪೈರೇಟ್ಸ್ ಗೆ ಹಾಗೂ ಮಣಿಂದರ್ ಸಿಂಗ್ ಬೆಂಗಾಲ್ ಗೆ ಪಾಯಿಂಟ್ಸ್ ಗಳನ್ನು ಗಳಿಸಿಕೊಟ್ಟರು.
ಮೋನು ಮತ್ತು ಸಚಿನ್ ಇವರಿಬ್ಬರ ಅಮೋಘ ರೇಡ್ ಮೂಲಕ ಎದುರಾಳಿ ಪಾಳ್ಯದಲ್ಲಿ ಆತಂಕ ಮೂಡಿಸಿದರು.ಹೀಗಾಗಿ ಪಟ್ನಾ ಪೈರೇಟ್ಸ್ ಗೆಲುವಿನ ನಗೆ ಬೀರಿತು.
ಪಟ್ನಾ ತಂಡಕ್ಕಾಗಿ ಸುನೀಲ್ 4 ಮತ್ತು ಪ್ರಶಾಂತ್ 3 ಪಾಯಿಂಟ್ ಗಳಿಸಿಕೊಟ್ಟರು.

ಇಂದು ನಡೆಯಲಿರುವ ಪಂದ್ಯಗಳು:
೧. ಯು.ಮುಂಬಾ ಮತ್ತು ಯು.ಪಿ ಯೋಧಾ
ಸಮಯ:7.30
೨. ಬೆಂಗಳೂರು ಬುಲ್ಸ್ ಮತ್ತು ತೆಲುಗು ಟೈಟನ್ಸ್
ಸಮಯ:8.30
೩. ದಬಾಂಗ್ ಡೆಲ್ಲಿ ಮತ್ತು ತಮಿಳ್ ತಲೈವಾರ್ಸ್
ಸಮಯ:9.30