Thursday, February 12, 2026
Thursday, February 12, 2026
Home Blog Page 1788

ವೈಷ್ಣೋದೇವಿ ಮಂದಿರ : ಕಾಲ್ತುಳಿತಕ್ಕೆ13 ಮಂದಿ ಬಲಿ.

0

ಹೊಸ ವರ್ಷದ ಪ್ರಥಮ ದಿನವೇ ಜಮ್ಮು-ಕಾಶ್ಮೀರದಲ್ಲಿ ದುರಂತವೊಂದು ನಡೆದಿದೆ. ರಾಜ್ಯದ ರಿಯಾಸಿ ಜಿಲ್ಲೆಯಲ್ಲಿರುವ ಏಳು ನೂರು ವರ್ಷ ಹಳೆಯ ಪವಿತ್ರ ಕ್ಷೇತ್ರವಾದ ವೈಷ್ಣೋದೇವಿ ಮಂದಿರದಲ್ಲಿ ರಾತ್ರಿಯ ವೇಳೆ ಕಾಲ್ತುಳಿತಕ್ಕೆ ಸಿಕ್ಕಿ 13 ಮಂದಿ ಯಾತ್ರಿಕರು ಮೃತಪಟ್ಟಿದ್ದಾರೆ. 14 ಜನ ಗಾಯಗೊಂಡಿದ್ದಾರೆ.

ದೇವಾಲಯದಿಂದ ಸುಮಾರು ಮುನ್ನೂರು ಮೀಟರ್ ದೂರದಲ್ಲಿ ಈ ದುರ್ಘಟನೆ ಸಂಭವಿಸಿದೆ. ಪ್ರಸಿದ್ಧ ಯಾತ್ರಾಸ್ಥಳ ವೈಷ್ಣೋದೇವಿ ಮಂದಿರದ ಆವರಣದಲ್ಲಿ ನೂಕುನುಗ್ಗಲು ಭಕ್ತಾದಿಗಳ ಮರಣಕ್ಕೆ ಕಾರಣವಾಗಿದೆ.

ಗಾಯಗೊಂಡವರಿಗೆ ಜಮ್ಮುವಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಪೈಕಿ ಮೂವರ ಸ್ಥಿತಿ ಗಂಭೀರವಾಗಿದೆ. ಮೃತಪಟ್ಟವರಲ್ಲಿ ಏಳುಮಂದಿ ಉತ್ತರಪ್ರದೇಶದ ವರಾಗಿದ್ದಾರೆ. ಹಾಗೂ ಮೂವರು ದೆಹಲಿಯ ವರೆಂದು ತಿಳಿದು ಬಂದಿದೆ. ಮತ್ತಿಬ್ಬರು ಜಮ್ಮು ಮತ್ತು ಕಾಶ್ಮೀರದ ರಜೋರಿ ಜಿಲ್ಲೆಯಲ್ಲಿರುವ ನೌಶೀರಾ ಪ್ರಾಂತ್ಯದ ವರಾಗಿದ್ದಾರೆ.

ಜಮ್ಮು-ಕಾಶ್ಮೀರದ ರಾಜ್ಯಪಾಲರಾದ ಮನೋಜ್ ಸಿನ್ಹಾ ಅವರು ಪ್ರಕರಣದ ತನಿಖೆಗೆ ಆದೇಶಿಸಿದ್ದಾರೆ. ತ್ರಿಸದಸ್ಯ ಸಮಿತಿ ತನಿಖೆ ನಡೆಸಲಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಆಸ್ತಿ ಖರೀದಿಗೆ ಉತ್ತೇಜನ : ಮಾರ್ಗಸೂಚಿ ದರ ಶೇ.10 ಇಳಿಕೆ

0

ರಾಜ್ಯ ಸರ್ಕಾರವು ಕೋವಿಡ್ ನಿಂದಾಗಿ ಆಗಿರುವ ಆದಾಯ ನಷ್ಟ ಭರಿಸಲು ಮತ್ತು ಆಸ್ತಿ ಖರೀದಿಗೆ ಉತ್ತೇಜಿಸುವ ನಿಟ್ಟಿನಲ್ಲಿ ಎಲ್ಲಾ ವಿವಿಧ ಸ್ಥಿರಾಸ್ತಿಗಳ ಮಾರ್ಗಸೂಚಿ ದರವನ್ನು ಶೇ.10ರಷ್ಟು ಇಳಿಸಿದೆ. ರಾಜ್ಯಾದ್ಯಂತ ಇದು ಏಕರೂಪವಾಗಿದೆ. ಈ ಮಾರ್ಗಸೂಚಿಯು ಜನವರಿ 1ರಿಂದ ಮಾರ್ಚ್ 31ರವರೆಗೆ ಅನ್ವಯವಾಗಲಿದೆ.

ಕೃಷಿ ಜಮೀನು ಕೃಷಿಯೇತರ ಜಮೀನು ನಿವೇಶನ ಕಟ್ಟಡ ಅಪಾರ್ಟ್ಮೆಂಟ್ ಫ್ಲಾಟ್ ಸೇರಿದಂತೆ ಎಲ್ಲಾ ವಿವಿಧ ಆಸ್ತಿಗಳಿಗೆ ಇದು ಅನ್ವಯವಾಗುತ್ತದೆ. ಶೇ.10 ರ ಕಡಿತಗೊಳಿಸಿದ ದರವನ್ನು ದಸ್ತಾವೇಜುಗಳ ನೋಂದಣಿಗೆ ಮಾರ್ಗದರ್ಶಿ ದರವೆಂದು ಪರಿಗಣಿಸಲು ಅಧಿಸೂಚನೆಯಲ್ಲಿ ಸೂಚಿಸಲಾಗಿದೆ.

ಕೆಐಎಎಡಿಬಿ ಮೂಲಕ ಕೈಗಾರಿಕಾ ಉದ್ದೇಶಗಳಿಗೆ ಹಂಚಿಕೆಯಾದ ಅಂತಹ 2 ಎಕರೆಗೂ ಹೆಚ್ಚಿನ ಭೂಮಿಯನ್ನು 10 ವರ್ಷಗಳ ಅವಧಿಯ ಭೋಗ್ಯ ಮತ್ತು ಮಾರಾಟಕ್ಕೆ ನೀಡಲು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ನಿರ್ಧರಿಸಿದೆ ಇದು ಕೈಗಾರಿಕೋದ್ಯಮಗಳಿಗೆ ಹೊಸವರ್ಷದ ಬಂಪರ್ ಕೊಡುಗೆಯಾಗಿದೆ.

‘ಹೂಡಿಕೆದಾರರು ಮತ್ತು ಕೈಗಾರಿಕಾ ಉದ್ಯಮಗಳು ರಾಜ್ಯದಲ್ಲಿ ವಹಿವಾಟು ನಡೆಸಲು ಅನುಕೂಲವಾಗುವಂತೆ ಶೀಘ್ರದಲ್ಲೇ ಹೊಸ ನೀತಿ ಜಾರಿಗೆ ಬರಲಿದೆ. ಕೆಐಎಡಿಬಿ ಜಮೀನುಗಳನ್ನು ಖಾಸಗಿ ಕೈಗಾರಿಕೆಗಳು/ಸಂಸ್ಥೆಗಳಿಗೆ ಹತ್ತುವರ್ಷಗಳಲ್ಲಿ ಲೀಸ್ ಸೇಲ್ ಡೀಡ್ ಆಧಾರದ ಮೇಲೆ ಹಂಚಲಾಗುವುದು’ ಎಂದು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರು ತಿಳಿಸಿದ್ದಾರೆ.

ಸರ್ಕಾರದ ಹೊಸ ಮಾರ್ಗಸೂಚಿ ಕುರಿತಂತೆ ನೋಂದಣಿ ಪರಿವೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತರಾದ ಪಿ.ಎನ್.ರವೀಂದ್ರ ಅವರು ‘ಮಾರ್ಗಸೂಚಿ ದರ ಇಳಿಕೆಯಿಂದ ಖರೀದಿದಾರರಿಗೆ ಲಾಭವಾಗಲಿದೆ. ಜೊತೆಗೆ ವ್ಯವಹಾರ ಹೆಚ್ಚುವುದರಿಂದ ಸರ್ಕಾರಕ್ಕೂ ಲಾಭವಾಗಲಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಮುದ್ರಾಂಕ ಮತ್ತು ನೋಂದಣಿ ಶುಲ್ಕದಿಂದ 12,500 ಕೋಟಿ ರೂ. ಆದಾಯ ಸಂಗ್ರಹವಾಗಿದೆ. ಮಾರ್ಚ್ ಅಂತ್ಯಕ್ಕೆ ನಿಗದಿತ ಗುರಿ ತಲುಪುವ ವಿಶ್ವಾಸವಿದೆ’ ಎಂದು ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ವಿವೇಚನಾಧಿಕಾರವನ್ನ ಬಡವರ ಹಿತಕ್ಕೆ ಬಳಸಿ- ಸಿ .ಎಂ.

0

ಜಿಲ್ಲಾಧಿಕಾರಿಗಳಿಗೆ ಸಿ ಎನ್ ಬಸವರಾಜ್ ಬೊಮ್ಮಾಯಿ ಅವರು ಬಾಸಿಸಂ ಬಿಡಿ, ಡಿಸ್ಟ್ರಿಕ್ಟ್ ಮ್ಯಾಜಿಸ್ಟ್ರೇಟ್ ಎಂಬ ಅಹಂ ನಿಂದ ಹೊರಬನ್ನಿ. ನೀವುಗಳು ಜನಸೇವಕರು ಎನ್ನುವುದನ್ನು ನೆನಪಿಟ್ಟುಕೊಂಡು ಜನರ ಕೆಲಸ ಮಾಡಿ ಬದಲಾವಣೆಯ ಬಗ್ಗೆ ಚಿಂತಿಸದೆ ವ್ಯವಸ್ಥೆಯ ಬದಲಾವಣೆ ತರಲು ಕಾರ್ಯನಿರ್ವಹಿಸಿ ಎಂದು ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ನಡೆದಂತಹ ಜಿಲ್ಲಾಧಿಕಾರಿಗಳ ಸಭೆಯಲ್ಲಿ ಸಿಎಂ ಬೊಮ್ಮಾಯಿ ಅವರು ‘ಸರ್ಕಾರದ ಯೋಜನೆ ಜನಪರ ಕಾರ್ಯಕ್ರಮ ಅನುಷ್ಠಾನಕ್ಕೆ ತ್ವರಿತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮುಲಾಜಿಲ್ಲದೆ ಶಿಸ್ತು ಕ್ರಮ ಜರುಗಿಸಲಾಗುವುದು’ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

ಜಿಲ್ಲಾಡಳಿತಗಳು ಶೀಘ್ರವಾಗಿ ಕಾರ್ಯ ನಿರ್ವಹಿಸಲು ಗುರಿ ನಿಗದಿ ಪಡಿಸಿದರು. ಸರ್ಕಾರಿ ವ್ಯವಸ್ಥೆಯಲ್ಲಿ ಜಿಲ್ಲಾಡಳಿತಗಳ ಉತ್ತರದಾಯಿತ್ವದ ಬಗ್ಗೆ ಮನವರಿಕೆ ಮಾಡಿಕೊಟ್ಟರು.

‘ಅಕಾಲಿಕ ಮಳೆಯಿಂದ ಉಂಟಾದ ಬೆಳೆ ಹಾನಿಗೆ ಪರಿಹಾರ ಆ ಮೂಲಕ 48 ಗಂಟೆಯೊಳಗೆ ಬೆಳೆ ಪರಿಹಾರ ನೀಡಲಾಗಿದೆ. ಜಿಲ್ಲಾಧಿಕಾರಿಗಳ ಕಾರ್ಯಕ್ಷಮತೆಯಿಂದ ಶೇ.83 ರಷ್ಟು ಪರಿಹಾರ ರೈತರಿಗೆ ನೀಡಲು ಸಾಧ್ಯವಾಗಿದೆ. ಒಂದು ತಿಂಗಳಲ್ಲಿ 14 ಲಕ್ಷ ರೈತರಿಗೆ ಪರಿಹಾರ ನೀಡಿರುವುದು ಗಣನೀಯ ಸಾಧನೆ’ ಎಂದು ಸಿಎಂ ಬೊಮ್ಮಾಯಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

‘ಡಿಸಿಗಳಿಗೆ ಹೆಚ್ಚಿನ ವಿವೇಚನಾಧಿಕಾರವಿದೆ. ಬಡವರ ಹಿತಕ್ಕಾಗಿ ಈ ವಿವೇಚನಾಧಿಕಾರವನ್ನು ಬಳಸಿ. ಹೆಚ್ಚಿನ ಅಧಿಕಾರ ಅಧಿಕಾರಿಗಳನ್ನು ವಿನಮ್ರನ್ನಾಗಿಸಬೇಕೇ ಹೊರತು ಅಹಂಕಾರಿಗಳನ್ನಾಗಿಸಬಾರದು’ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಹೇಳಿದರು.

‘ಐದು ವರ್ಷಗಳಿಂದ ಬಾಕಿ ಇರುವ ಜಮೀನು ವ್ಯಾಜ್ಯ ಹಾಗೂ ನ್ಯಾಯಾಲಯ ಪ್ರಕರಣಗಳು ರೈತರ ಆರ್ಥಿಕ ಸ್ಥಿತಿಗತಿಯನ್ನು ನಿರ್ಧರಿಸುತ್ತದೆ. ತಹಶೀಲ್ದಾರ್, ಉಪ ವಿಭಾಗಾಧಿಕಾರಿಗಳು, ಜಿಲ್ಲಾಧಿಕಾರಿಗಳ ಮಟ್ಟದಲ್ಲಿ ಬಾಕಿ ಇರುವ ಕೋರ್ಟ್ ಪ್ರಕರಣಗಳು ಶೀಘ್ರದಲ್ಲಿ ಇತ್ಯರ್ಥವಾಗಬೇಕು. ಇದಕ್ಕೆ ಅವಶ್ಯಕತೆ ಇದ್ದಲ್ಲಿ ಹೆಚ್ಚುವರಿ ತಹಶೀಲ್ದಾರ್, ಉಪ ವಿಭಾಗಾಧಿಕಾರಿಗಳನ್ನು ನಿಯೋಜನೆಗೆ ಪ್ರಸ್ತಾವನೆ ಸಲ್ಲಿಸಬೇಕು. ಒಟ್ಟಾರೆ ಕನಿಷ್ಠ 1 ವರ್ಷದೊಳಗೆಲ್ಲಾ ನ್ಯಾಯಾಲಯದ ಪ್ರಕರಣಗಳು ವಿಲೇವಾರಿ ಆಗಬೇಕೆಂದು’ ಸಿಎಂ ಬೊಮ್ಮಾಯಿ ಅವರು ಅಧಿಕಾರಿಗಳಿಗೆ ಸಭೆಯಲ್ಲಿ ತಿಳಿಸಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಸಂಸ್ಕಾರಯುತ ಶಿಕ್ಷಣ ಮಕ್ಕಳಿಗೆ ನೀಡಬೇಕು- ಹರತಾಳು ಹಾಲಪ್ಪ

0

ಶಿಕ್ಷಣ ಸಂಸ್ಥೆಗಳು ಸಂಸ್ಕಾರಯುತ ಶಿಕ್ಷಣವನ್ನು ಮಕ್ಕಳಿಗೆ ನೀಡಿದಾಗ ಮಾತ್ರ ಅವರು ಜವಾಬ್ದಾರಿಯುತ ಪ್ರಜೆಗಳಾಗಿ ಬೆಳೆಯಲು ಸಾಧ್ಯ ಎಂದು ಶಾಸಕ ಎಚ್.ಹಾಲಪ್ಪ ಹರತಾಳು ಹೇಳಿದರು.
ಸಾಗರ ತಾಲ್ಲೂಕಿನ ಯಡಜಿಗಳಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಾರದಾಪುರದ ಇಕ್ಕೇರಿ ವಿದ್ಯಾ ಸಂಸ್ಥೆಯಲ್ಲಿ ನಡೆದ ಸುವರ್ಣ ಮಹೋತ್ಸವ ವರ್ಷಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಅಂಕ ಗಳಿಕೆಯ ಜೊತೆಗೆ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಜೀವನದ ಪಾಠವನ್ನು ಕಲಿಸಬೇಕು ಎಂದು ಹೇಳಿದರು.
ಸುವರ್ಣ ಸಂಭ್ರಮ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಿದ ಮನೋವೈದ್ಯ ಡಾ.ಕೆ.ಆರ್. ಶ್ರೀಧರ್, ವಿದ್ಯಾ ದಾನಕ್ಕಿಂತ ಶ್ರೇಷ್ಠ ದಾನ ಮತ್ತೊಂದಿಲ್ಲ. ಜ್ಞಾನವನ್ನು ಹಂಚುವ ಮತ್ತು ಜ್ಞಾನವನ್ನು ವೃದ್ಧಿಸುವ ಕಾರ್ಯದಲ್ಲಿ ತೊಡಗುವುದು ಅತ್ಯಂತ ಪುಣ್ಯದ ಕೆಲಸ. ಇಂತಹ ಕಾರ್ಯಗಳಲ್ಲಿ ತೊಡಗುವ ವ್ಯಕ್ತಿ ಮತ್ತು ಸಂಸ್ಥೆಗಳನ್ನು ಪ್ರತಿಯೊಬ್ಬರು ಗೌರವಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸುವರ್ಣ ಮಹೋತ್ಸವ ಸಮಿತಿ ಗೌರವಾಧ್ಯಕ್ಷ ವಿ.ನಾ. ಕೃಷ್ಣಮೂರ್ತಿ, ಸ್ಮರಣ ಸಂಚಿಕೆ ಸಂಪಾದಕ ಮಾ.ವೆಂ.ಸ. ಪ್ರಸಾದ್, ಸಾಹಿತಿ ವಿಜಯಾ ಶ್ರೀಧರ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಾನಸ, ಉಪಾಧ್ಯಕ್ಷ ಗಿರೀಶ್ ಹೆಗಡೆ, ಶ್ರೀಧರ್ ಸೇವಾ ಮಂಡಳದ ಎಂ.ಜಿ. ಕೃಷ್ಣಮೂರ್ತಿ ಮತ್ತು ಜೆ.ಆರ್. ವೆಂಕಟೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಉಡುಪು -ಪಾದರಕ್ಷೆ ಜಿಎಸ್ ಟಿ ಪರಾಮರ್ಶೆ

0

ಕೇಂದ್ರ ಸರ್ಕಾರ ಕೆಲ ದಿನಗಳ ಹಿಂದೆ ಉಡುಪು ಮತ್ತು ಪಾದರಕ್ಷೆಗಳ ಮೇಲೆ ಶೇ.5 ರಿಂದ 12ಕ್ಕೆ ಜಿ ಎಸ್ ಟಿ ದರವನ್ನು ಹೆಚ್ಚಿಸಲು ನಿರ್ಧರಿಸಿತ್ತು. ಈ ಬಗ್ಗೆ ದೇಶದಲ್ಲೆಡೆ ಜವಳಿ ಉದ್ಯಮದಾರರು ಜಿಎಸ್ಟಿ ದರವನ್ನು ಹೆಚ್ಚಿಸಿದಂತೆ ಕೇಂದ್ರ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಪ್ರತಿಭಟನೆ ಮಾಡಿದ್ದರು.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ನೇತೃತ್ವದಲ್ಲಿ 46ನೇ ಜಿಎಸ್ಟಿ ಮಂಡಳಿ ಸಭೆಯಲ್ಲಿ ‘ತೆರಿಗೆ ಏರಿಕೆ ಪ್ರಸ್ತಾಪಕ್ಕೆ ಉದ್ಯಮ ವಲಯ ಮತ್ತು ಹಲವು ರಾಜ್ಯಗಳಿಂದ ತೀವ್ರ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಕುರಿತಂತೆ ಜನವರಿಯಲ್ಲಿ ನಡೆಯುವ ಮಂಡಳಿ ಸಭೆಯಲ್ಲಿ ಪರಾಮರ್ಶಿಸಲು ನಿರ್ಧರಿಸಲಾಗಿದೆ’ ಎಂದು ಹಿಮಾಚಲ ಪ್ರದೇಶದ ಕೈಗಾರಿಕಾ ಸಚಿವ ಬಿಕ್ರಮ್ ಸಿಂಗ್ ಈ ಕುರಿತು ಮಾಹಿತಿ ನೀಡಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಆಯಕರ ವಿವರ ಸಲ್ಲಿಕೆ ಗಡುವು ವಿಸ್ತರಣೆ ಇಲ್ಲ

0

ಕೇಂದ್ರ ಸರ್ಕಾರ ತೆರಿಗೆದಾರರಿಗೆ ಆದಾಯ ತೆರಿಗೆ ರಿಟರ್ನ್ ವಿಸ್ತರಣೆ ಮಾಡುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದೆ.

2020 21ರ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆಯಲ್ಲಿ ತಾಂತ್ರಿಕ ಸಮಸ್ಯೆ ಉಂಟಾದ ಪರಿಣಾಮ ಜೂನ್ 30 ಕೊನೆಯ ದಿನಾಂಕವಾಗಿತು. ನಂತರ ಸೆಪ್ಟೆಂಬರ್ 30 ಮತ್ತು ಡಿಸೆಂಬರ್ 31ಕ್ಕೆ ವಿಸ್ತರಿಸಲಾಗಿತ್ತು.

‘ಆದಾಯ ತೆರಿಗೆ ರಿಟರ್ನ್ ಸಲ್ಲಿಕೆಯ ಗಡುವನ್ನು ಹಲವು ಬಾರಿ ಮುಂದೂಡಿದ ಕಾರಣ ಮತ್ತೊಮ್ಮೆ ವಿಸ್ತರಣೆ ಮಾಡದಿರಲು ಸರ್ಕಾರ ನಿರ್ಧರಿಸಿದೆ’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೇಳಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಚೀನಾಕ್ಕೆ ಸಿಡಿದುತ್ತರಿಸಿದ ಭಾರತ

0

ಯಾಕೋ ನೆರೆಯ ಚೀನಾಕ್ಕೆ ಈಗೀಗ ನೆಮ್ಮದಿಯ ನಿದ್ರೆ ಕನಸಾಗಿದೆ. ಸುಖಾ ಸುಮ್ಮನೆ ಸದಾ ಭಾರತದ ಚಿತ್ತ ಕಲಕುವ ಕೆಲಸ ಮಾಡುತ್ತಿದೆ. ಗಡಿ ತಂಟೆ ಮಾಡದಿದ್ದರೆ ಅದಕ್ಕೆ ಸಮಾಧಾನವೇ ಇಲ್ಲ.
ಈಚೆಗಂತೂ ನಾವು
ಕ್ಷಿಪಣಿ ತಯಾರಿಸಿ ಯಶಸ್ವಿಯಾಗುತ್ತಿರುವುದೂ ಅದಕ್ಕೆ ಹೊಟ್ಟೆಕಿವುಚಿದಂತಾಗುತ್ತಿದೆ.
ಅರುಣಾಚಲ ಪ್ರದೇಶದ ಮೇಲೆ ಅದರದ್ದು ಕೆಕ್ಕರುಗಣ್ಣು. ಈಗ ಸಾಲದ್ದಕ್ಕೆ ಅಲ್ಲಿನ ಸ್ಥಳಗಳಿಗೆ ಚೀನಾದ ಹೆಸರುಗಳನ್ನ ಇರಿಸುತ್ತಿದೆ. ಭಾರತಕ್ಕೆ ಇರಿಸುಮುರಿಸು ಮಾಡುವುದೇ ಅದರ ಉದ್ದೇಶವಾದಂತಿದೆ.
ಅರುಣಾಚಲ ಪ್ರದೇಶದ ಹದಿನೈದು ಸ್ಥಳಗಳಿಗೆ ಬೇರೆಯೇ ಹೆಸರಿಟ್ಟಿದ್ದನ್ನು ಈಗ ಸಮರ್ಥಿಸಿಕೊಂಡಿದೆ.
ಟಿಬೆಟ್ ನ ದಕ್ಷಿಣ ಭಾಗ ಪ್ರಾಚೀನವಾಗಿಯೂ ತನ್ನದೇ ಗಡಿಯೆಂದು
ಹಕ್ಕು ಸ್ಥಾಪಿಸಿಕೊಂಡಿದೆ.
ಈ ಹೇಳಿಕೆಯನ್ನ ಭಾರತ ಪ್ರಬಲವಾಗಿ ತಿರಸ್ಕರಿಸಿದೆ.
ಯಾವಾಗಲೂ ಎಂದಿಗೂ ಈ ಪ್ರದೇಶಗಳು ಸಮಗ್ರಭಾರತದ್ದು .
ಹೆಸರು ಬದಲಿಸಿದ ಮಾತ್ರಕ್ಕೆ ಭಾರತದ್ದಲ್ಲ
ಎಂದು ತಿರುಚಲು ಸಾಧ್ಯವಿಲ್ಲ ಎಂದು
ಭಾರತ ಪ್ರತ್ಯುತ್ತರ ನೀಡಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ನನ್ನ ಪಾಲಿನ ಪ್ರಯತ್ನ ಮಾಡುವೆ- ಸಂಗಮೇಶ್ವರ

0

ಕೇಂದ್ರ ಸರ್ಕಾರಿ ನೌಕರರಿಗೆ ಸರಿ ಸಮಾನ ವೇತನ, ಹಿಂದಿನ ಪಿಂಚಣಿ ಯೋಜನೆ ಜಾರಿ, ಪ್ರಾಥಮಿಕ, ಪ್ರೌಢಶಾಲೆ ಶಿಕ್ಷಕರ ಸಮಸ್ಯೆಗಳ ಕುರಿತು ಹಲವು ಬೇಡಿಕೆಗಳ ಪಟ್ಟಿಯನ್ನು ನನಗೆ ನೀಡಿದ್ದು ಇದನ್ನು ಸರ್ಕಾರದ ಗಮನಕ್ಕೆ ತರುವ ಜೊತೆಗೆ ನಿಮ್ಮ ಪರವಾಗಿ ಹೋರಾಟ ಮಾಡಲು ಸಿದ್ಧನಿದ್ದೇನೆ ಎಂದು ಶಾಸಕ ಬಿ.ಕೆ. ಸಂಗಮೇಶ್ ಅವರು ತಿಳಿಸಿದ್ದಾರೆ.
ರಾಜ್ಯ ಸರ್ಕಾರಿ ನೌಕರರ ಸಂಘದ ಭದ್ರಾವತಿ ತಾಲೂಕು ಶಾಖೆಯ ನೇತೃತ್ವದಲ್ಲಿ ತಾಲ್ಲೂಕು ಕಚೇರಿಯ ಎದುರು ಜರುಗಿದ ವಿವಿಧ ಬೇಡಿಕೆಗಳ ಒತ್ತಾಯಕ್ಕೆ ಆಗ್ರಹಿಸುವ ಪ್ರತಿಭಟನೆ ಹಾಗೂ ಮನವಿ ಅರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮನವಿ ಸ್ವೀಕರಿಸಿದರು.
ರಾಜ್ಯ ಸರ್ಕಾರಿ ನೌಕರರ ವಿವಿಧ ಬೇಡಿಕೆಗಳ ಪಟ್ಟಿಯನ್ನು ಸರಕಾರದ ಮುಂದಿಟ್ಟಿದ್ದು ಅದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ತಮ್ಮ ಪರವಾಗಿ ಸರ್ಕಾರ ಮಟ್ಟದಲ್ಲಿ ಪ್ರಯತ್ನ ನಡೆಸುವೆ ಎಂದರು.
ಮನವಿ ಅರ್ಪಣೆಗೂ ಮುನ್ನ ನೂರಾರು ನೌಕರರು ತಾಲೂಕು ಕಚೇರಿಯ ಎದುರು ಜಮಾಯಿಸಿ ತಮ್ಮ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸುವ ಘೋಷಣೆ ಕೂಗಿದರು.
ನೌಕರರ ಸಂಘದ ಅಧ್ಯಕ್ಷ ಬಿ. ಸಿದ್ದಬಸಪ್ಪ, ಎ.ಜಿ. ರಂಗನಾಥ, ಡಿ.ಎಸ್.ರಾಜಪ್ಪ,ಎಸ್.ಕೆ.
ಮೋಹನ್,ಪ್ರಕಾಶ್, ಎಂ.ಎಸ್.ಬಸವರಾಜ್ ಇದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ದೇವಸ್ಥಾನದ ಹಣ ಶಾಲೆಗಳಿಗೆ ಮತ್ತು ಭಕ್ತರ ಅನುಕೂಲಕ್ಕೆ

0

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಬಿಜೆಪಿ ಸರ್ಕಾರ ರಾಜ್ಯದ ಜನರ ಆಸ್ತಿ ಆಗಿರುವಂತ ದೇವಾಲಯಗಳನ್ನು ತಮ್ಮ ಪಕ್ಷ ಹಾಗೂ ಸಂಘಪರಿವಾರದ ಕಾರ್ಯಕರ್ತರಿಗೆ ಹಂಚಲು ಮುಂದಾಗಿದೆ. ಇಂತಹ ನಿರ್ಧಾರದಿಂದ ಹಿಂದೆ ಸರಿಯಾಗಿದ್ದರೆ ಸರ್ಕಾರ ಸುಟ್ಟು ಭಸ್ಮವಾಗಲಿದೆ ಎಂದು ತಿಳಿಸಿದ್ದಾರೆ.

ಬಿಜೆಪಿಯ ಈ ನಿರ್ಧಾರದ ಬಗ್ಗೆ ಡಿಕೆ ಶಿವಕುಮಾರ್ ಅವರು ಇದು ಹಿಂದೂ ವಿರೋಧಿ ನೀತಿಯಾಗಿದ್ದು ರಾಜ್ಯದ ಜನರು ಹಾಗೂ ಆ ದೇವರು ಬಿಜೆಪಿಯನ್ನು ಎಂದಿಗೂ ಕ್ಷಮಿಸುವುದಿಲ್ಲ ಎಂದಿದ್ದಾರೆ.

ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ‘ದೇವಸ್ಥಾನಗಳನ್ನು ಭಕ್ತರಿಗೆ ನೀಡುವುದೆಂದರೆ ಯಾವುದೇ ಸಂಘ ಸಂಸ್ಥೆಗಳಿಗೆ ಒಪ್ಪಿಸುತ್ತೇವೆ ಎಂಬ ಅರ್ಥವಲ್ಲ’ ಎಂದು ಡಿಕೆಶಿ ಅವರ ಮಾತಿಗೆ ಪ್ರತಿಕ್ರಿಯಿಸಿದ್ದಾರೆ.

‘ಭಕ್ತರು ಎಂದರೆ ಅದು ಶಿವಕುಮಾರ ಆಗಿರಬಹುದು, ಆರ್ ಎಸ್ ಎಸ್, ಬಿಜೆಪಿಯೂ ಆಗಿರಬಹುದು. ಒಟ್ಟಿನಲ್ಲಿ ಸರ್ಕಾರದ ಹಿಡಿತದಿಂದ ತಪ್ಪಿಸಿ ಭಕ್ತರಿಗೆ ನೀಡಬೇಕು, ಅವರಿಂದಲೇ ನಿರ್ವಹಣೆ ಆಗಬೇಕು ಎಂಬುದು ನಮ್ಮ ಚಿಂತನೆ. ದೇವಾಲಯಗಳಲ್ಲಿ ಸಂಗ್ರಹವಾಗುವ ಹಣ ಶಾಲೆಗಳ ಅಭಿವೃದ್ಧಿಗೆ ಮತ್ತು ಭಕ್ತರ ಅನುಕೂಲಕ್ಕಾಗಿ ಬಳಸಲಾಗುವುದು’ ಎಂದು ವಿವರಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ರಾಜ್ಯದಲ್ಲಿ ನರೇಗಾ ಯೋಜನೆ ಪ್ರಗತಿಯಲ್ಲಿದೆ- ಸಚಿವ ಈಶ್ವರಪ್ಪ

0

ಈ ವರ್ಷ ನರೇಗಾ ಯೋಜನೆಯಡಿ ಕೂಲಿ ಪಾವತಿಗಾಗಿ ರೂ.3,738,95 ಕೋಟಿ ಮತ್ತು ಸಾಮಗ್ರಿಗಳ ಪಾವತಿಗೆ ರೂಂ. 1,354.30 ಕೋಟಿ ವೆಚ್ಚ ಮಾಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದರು.
ರಾಜ್ಯ ಸರ್ಕಾರದ ಬೇಡಿಕೆಯನ್ನು ಪರಿಗಣಿಸಿ ಕೇಂದ್ರ ಸರ್ಕಾರವು ಈ ಸಾಲಿಗೆ 1.40 ಕೋಟಿ ಮಾನವ ದಿನಗಳ ಹೆಚ್ಚುವರಿ ಉದ್ಯೋಗ ಸೃಷ್ಟಿಗೆ ಅವಕಾಶ ನೀಡಿದೆ. ಇದರಿಂದ ರಾಜ್ಯಕ್ಕೆ ಈ ಯೋಜನೆಯಡಿ ಹೆಚ್ಚುವರಿಯಾಗಿ ರೂ.715 ಕೋಟಿ ಅನುದಾನ ಲಭಿಸಿದೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರ ಯೋಜನೆಯಡಿ ಕೆಲಸ ಮಾಡಿದ ಕೂಲಿಕಾರರಿಗೆ ಕೂಲಿ ಪಾವತಿಸಲು ಇದೇ 24ರಂದು ಕೇಂದ್ರ ಸರ್ಕಾರ ರೂ.661.24 ಕೋಟಿ ಬಿಡುಗಡೆ ಮಾಡಿದೆ. ಈ ವರ್ಷ 13.09 ಲಕ್ಷ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು, 3.87 ಲಕ್ಷ ಕಾಮಗಾರಿಗಳನ್ನು ಪೂರ್ಣಗೊಳಿಸಿದೆ ಎಂದು ಮಾಹಿತಿ ನೀಡಿದರು.
ಸುಮಾರು 13 ಕೋಟಿ ಮಾನವ ದಿನಗಳ ಗುರಿಯನ್ನು ಮೀರಿ ಇಲ್ಲಿಯವರೆಗೆ 13.14 ಕೋಟಿ ಮಾನವ ದಿನಗಳ ಉದ್ಯೋಗ ಸೃಷ್ಟಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನರೇಗಾ ಯೋಜನೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅನುದಾನದಡಿ 2016-17 ರಿಂದ ಇಲ್ಲಿಯವರೆಗೆ 3275 ಅಂಗನವಾಡಿ ಕಟ್ಟಡಗಳ ನಿರ್ಮಾಣ ಕೈಗೆತ್ತಿಕೊಂಡಿದ್ದು, 2,335 ಕಟ್ಟಡ ಗಳನ್ನು ಪೂರ್ಣಗೊಳಿಸಲಾಗಿದೆ. ಉಳಿದ ಕಟ್ಟಡಗಳ ನಿರ್ಮಾಣ ಪ್ರಗತಿಯಲ್ಲಿದೆ ಎಂದರು.
ಈ ಸಾಲಿನಲ್ಲಿ 4.45 ಲಕ್ಷ ಹೊಸ ಉದ್ಯೋಗ ಚೀಟಿಗಳನ್ನು ವಿತರಿಸುವ ಮೂಲಕ 10.68 ಲಕ್ಷ ಜನರನ್ನು ಯೋಜನೆಗೆ ಸೇರ್ಪಡೆ ಮಾಡಲಾಗಿದೆ. ಅಲ್ಲದೇ, 31.45 ಲಕ್ಷ ಕುಟುಂಬಗಳ ಪೈಕಿ 58.96 ಲಕ್ಷ ಜನರಿಗೆ ಉದ್ಯೋಗ ಒದಗಿಸಲಾಗಿದೆ. ಕಳೆದ 5 ವರ್ಷಗಳಲ್ಲೇ ಅತಿ ಹೆಚ್ಚಿನ ಸಾಧನೆಯಾಗಿದ್ದು, ಈಗಾಗಲೇ 46 ಸಾವಿರ ಕುಟುಂಬಗಳು 100 ದಿನಗಳ ಕೆಲಸ ಪೂರೈಸಿವೆ ಎಂದರು.