Thursday, February 12, 2026
Thursday, February 12, 2026
Home Blog Page 1787

ಮೇಕೆದಾಟು ಪಾದಯಾತ್ರೆ:ಸಚಿವ ಕಾರಜೋಳ ಕಿಡಿನುಡಿ

0

ಕಾಂಗ್ರೆಸ್ ನವರು ಅಧಿಕಾರದಲ್ಲಿದ್ದಾಗ ಮೇಕೆದಾಟು ಯೋಜನೆ ಸಂಬಂಧ ಹೊಣೆಗೇಡಿತನದ ಸ್ಫೋಟಕ ಸಾಕ್ಷ್ಯ ನಮ್ಮ ಬಳಿ ಇದೆ. ಜನವರಿ 9ಕ್ಕೂ ಮೊದಲು ಬಿಡುಗಡೆ ಮಾಡಲಾಗುವುದು ಎಂದು ಸಚಿವ ಗೋವಿಂದ ಕಾರಜೋಳ ಅವರು ಹೇಳಿದ್ದಾರೆ.

“ಕಾಂಗ್ರೆಸ್ ನವರು ಈ ಹಿಂದೆ ಕೃಷ್ಣೆಗೆ ಕೂಡಲಸಂಗಮ, ಇಂದು ಕಾವೇರಿಗೆ ಮೇಕೆದಾಟು ಸಿಕ್ಕ ಅವಕಾಶವನ್ನು ವ್ಯರ್ಥಗೊಳಿಸಿ ಅರ್ಥಹೀನ ಪಾದಯಾತ್ರೆ ನಡೆಸುತ್ತಿದ್ದಾರೆ. ನೀರಾವರಿ ಯೋಜನೆಯಲ್ಲಿ ಕಾಂಗ್ರೆಸ್ ರಾಜಕಾರಣ ಮಾಡುತ್ತಿದೆ. ಜನವರಿ 3 ರಂದು ಕಾಂಗ್ರೆಸ್ ನಡಿಗೆ ಕೃಷ್ಣ ಕಡೆಗೆ ಎಂದು ಕಾಂಗ್ರೆಸ್ ಪಾದಯಾತ್ರೆ ಆರಂಭಿಸಿತ್ತು. ಅದು ಮಾಜಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಾ. ಪರಮೇಶ್ವರ್ ನಡುವಿನ ಪೈಪೋಟಿಗಾಗಿ ನಡೆದಿದ್ದ ವರ್ಷ ಅಧಿಕಾರದಲ್ಲಿದ್ದರೂ ‘ಕೃಷ್ಣ’ ಕೊಳದ ಯೋಜನೆಗೆ ವೆಚ್ಚ ಮಾಡಿದೆ. 7776 ಕೋಟಿ ರೂ. ಮಾತ್ರ ಎಂದು ಗೋವಿಂದ ಕಾರಜೋಳ ಅವರು ಹೇಳಿದರು.

ಈಗ ಮೇಕೆದಾಟು ಯೋಜನೆಗಾಗಿ ಪಾದಯಾತ್ರೆ ನಡೆಸುವುದಾಗಿ ಕಾಂಗ್ರೆಸ್ ನವರು ಹೇಳಿದ್ದಾರೆ. ರಾಜ್ಯ ಮತ್ತು ರಾಜ್ಯದ ಜನತೆಯ ಹಿತದೃಷ್ಟಿಯಿಂದ ಈ ಸತ್ಯವನ್ನು ಬಹಿರಂಗ ಪಡಿಸಬೇಕಿದೆ. ಕಾಂಗ್ರೆಸ್ ಗಿಮಿಕ್ ಮಾಡುತ್ತಿರುವುದು ಇದೇ ಮೊದಲಲ್ಲ ಎಂದು ಕಾರಜೋಳ ಅವರು ಹೇಳಿದ್ದಾರೆ.

ಅಧಿಕಾರದಲ್ಲಿದ್ದಾಗ ಆಲಸ್ಯ ತೋರುವುದು. ಕಡತ ಯಜ್ಞ ನಡೆಸದೆ ಕಾಲಹರಣ ಮಾಡುವುದು. ಪ್ರತಿಪಕ್ಷ ಸ್ಥಾನಕ್ಕೆ ಬಂದಾಗ ಅನಗತ್ಯ ಆಂದೋಲನ ಕೈಗೊಳ್ಳುವುದು. ಇದು ಕಾಂಗ್ರೆಸ್ ನ ಜಾಯಮಾನವಾಗಿದೆ. ಅಧಿಕಾರದಲ್ಲಿದ್ದಾಗ ಕಾವೇರಿ ಕಣಿವೆಯ ರೈತರ ಮತ್ತು ಜನಹಿತದ ಕಾರ್ಯವನ್ನು ವಿಳಂಬ ಗೃಹದಿಂದ ಮುಂದೂಡಿ ಈಗ ಪಾದಯಾತ್ರೆ ಮೂಲಕ ಗಿಮಿಕ್ ಮಾಡುತ್ತಿರುವುದು ಜನರಿಗೆ ಅರ್ಥವಾಗಿದೆ ಎಂದು ಗೋವಿಂದ ಕಾರಜೋಳ ಅವರು ಹೇಳಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಕ್ರಿಕೆಟ್ ಬೂಮ್ರ ಉಪನಾಯಕ:ಸೂಕ್ತ ಆಯ್ಕೆ- ಪ್ರಸಾದ್

0

ಡಿಸೆಂಬರ್ ಎಂಟರಂದು ರೋಹಿತ್ ಶರ್ಮಾ ಅವರನ್ನು ಭಾರತ ಕ್ರಿಕೆಟ್ ನ ಏಕದಿನ ತಂಡಕ್ಕೆ ನಾಯಕರನ್ನಾಗಿ ಆಯ್ಕೆಮಾಡಲಾಗಿತ್ತು ಹಾಗೂ ಕೆ.ಎಲ್.ರಾಹುಲ್ ಅವರಿಗೆ ಉಪನಾಯಕನ ಪಟ್ಟ ನೀಡಲಾಗಿತ್ತು. ಈಗ ರೋಹಿತ್ ಶರ್ಮಾ ಅವರು ಇಡೀ ಸರಣಿಗೆ ಅಲಭ್ಯವಾಗಿರುವುದರಿಂದ ರಾಹುಲ್ ಗೆ ನಾಯಕ ಪಟ್ಟ ಒಲಿದಿದೆ.

ಉಪನಾಯಕರಾಗಿ ಜಸ್ ಪ್ರೀತ್ ಬುಮ್ರಾಗೆ ಅವಕಾಶ ನೀಡಿದ್ದು ಮಾತ್ರ ಅನಿರೀಕ್ಷಿತ. ಕ್ರಿಕೆಟ್ ತಜ್ಞರ ಪ್ರಕಾರ, ಐಪಿಎಲ್ ತಂಡಗಳಲ್ಲಿ ನಾಯಕರಾಗಿದ್ದ ಶ್ರೇಯಸ್ ಅಯ್ಯರ್ ಹಾಗೂ ರಿಷಬ್ ಪಂತ್ ಲಭ್ಯವಿದ್ದ ಹೊರತಾಗಿಯೂ ಬುಮ್ರಾಗೆ ಆಯ್ಕೆ ಮಂಡಳಿ ಅವಕಾಶ ನೀಡುವುದರಲ್ಲಿ ಪರೋಕ್ಷ ಸಂದೇಶವನ್ನು ಅಡಗಿದೆ.

ಜಸ್ ಪ್ರೀತ್ ಬುಮ್ರಾ ಯುವ ಬೌಲರ್. ಈ ಹಂತದಲ್ಲೂ ಉತ್ತಮ ಪ್ರದರ್ಶನ ನೀಡಬಲ್ಲ ಸಾಮರ್ಥ್ಯ ಅವರಿಗಿದೆ. ಹೀಗಾಗಿ ಅವರನ್ನು ಉಪನಾಯಕರಾಗಿ ಆಯ್ಕೆ ಮಾಡಿರುವುದು ಸರಿಯಾದ ನಿರ್ಧಾರ ” ಎಂದು ಆಯ್ಕೆ ಸಮಿತಿ ಮಾಜಿ ಮುಖ್ಯಸ್ಥ ಎಂ ಎಸ್ ಕೆ ಪ್ರಸಾದ್ ಅಭಿಪ್ರಾಯ ವ್ಯಕ್ತಪಡಿಸಿದರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಪವರ್ ಲಿಫ್ಟಿಂಗ್ ಕ್ರೇತ್ರದ ಹೊಸ ಕಿರಣ. ಕನ್ನಡಿಗ ಕಿರಣ್ ಕುಮಾರ್

0

ಪವರ್ ಲಿಫ್ಟಿಂಗ್ ಕಾಂಗ್ರೆಸ್ ಹಾಗೂ ಅಮೆಚೂರು ವರ್ಲ್ಡ್ ಪವರ್ಲಿಫ್ತಿಂಗ್ ಕಾಂಗ್ರೆಸ್ ಇತ್ತೀಚಿಗೆ ರಷ್ಯಾದ ಬಿಶ್ಕೆಕ್ ನಲ್ಲಿ ಆಯೋಜಿಸಿದ್ದ ವಿಶ್ವಕಪ್ ನಲ್ಲಿ ಕರ್ನಾಟಕದ ಪವರ್ ಲಿಫ್ಟರ್ ಕಿರಣ್ ಕುಮಾರ್ ಪ್ರಕಾಶ್ ರೆಡ್ಡಿ ಅವರು ಪಾಲ್ಗೊಂಡು ಒಟ್ಟು ಐದು ವಿಭಾಗದಲ್ಲಿ ಚಿನ್ನದ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಮೂಲಕ ಅವರು ಭಾರತದ ಪವರ್ ಲಿಫ್ಟಿಂಗ್ ಇತಿಹಾಸದಲ್ಲಿ ಅವಿಸ್ಮರಣೀಯ ಸಾಧನೆ ಮಾಡಿದ್ದಾರೆ.

46 ಸದಸ್ಯರಾಷ್ಟ್ರಗಳ 600ಕ್ಕೂ ಅಧಿಕ ಸ್ಪರ್ಧಿಗಳು ಟೀ ವಿಶ್ವಕಪ್ ನಲ್ಲಿ ಭಾಗವಹಿಸಿದ್ದರು. ಭಾರತದಿಂದಲೂ 6 ಮಂದಿ ಸ್ಪರ್ಧಿಸಿದ್ದರು. ಹೊಸದಿಲ್ಲಿಯ ಮೂವರು, ಕರ್ನಾಟಕದಿಂದ ಇಬ್ಬರೂ ಹಾಗೂ ಉತ್ತರಪ್ರದೇಶದಿಂದ ಒಬ್ಬರು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಈ ತಂಡದಲ್ಲಿ ಕಿರಣ್ ಕುಮಾರ್ ಅವರು ತಾವು ಸ್ಪರ್ಧಿಸಿದ ಐದು ವಿಭಾಗಗಳನ್ನು ಬಂಗಾರದ ಪದಕ ಗೆಲ್ಲುವ ಮೂಲಕ ಸಾಧನೆ ಮಾಡಿದ್ದಾರೆ.

ಸ್ಕ್ವಾಟ್ ಬೆಂಚ್ ಡೆಡ್ ಲಿಫ್ಟ್ ಜೂನಿಯರ್ ವಿಭಾಗದಲ್ಲಿ ಸ್ಪರ್ಧಿಸಿದ್ದ ಕಿರಣ್ಕುಮಾರ್ ಪ್ರಕಾಶ್ ರೆಡ್ಡಿ ಎಡಬ್ಲ್ಯುಪಿಸಿ ಸ್ಕ್ವಾಟ್ ರಾ ವಿಭಾಗದಲ್ಲಿ (612.5 ಕೆ.ಜಿ), ಎಡಬ್ಲ್ಯುಪಿಸಿ ಡೆಡ್ ಲಿಫ್ಟ್ ರಾ (245 ಕೆ.ಜಿ), ಎಡಬ್ಲ್ಯುಪಿಸಿ ಬೆಂಚ್ ಪ್ರೆಸ್ (167.5 ಕೆ.ಜಿ), ಎಡಬ್ಲ್ಯುಪಿಸಿ ಓಪನ್ ಬೆಂಚ್ ಪ್ರೆಸ್ ರಾ (167.5 ಕೆ.ಜಿ), ಎಡಬ್ಲ್ಯುಪಿಸಿ ಓಪನ್ ಡೆಡ್ ಲಿಫ್ಟ್ ರಾ (250 ಕೆ.ಜಿ) ವಿಭಾಗದಲ್ಲಿ ಚಿನ್ನ ಗೆದ್ದಿದ್ದಾರೆ. ಈ ಮೂಲಕ ಒಂದೇ ಆವೃತ್ತಿಯಲ್ಲಿ 5 ಚಿನ್ನದ ಪದಕಗಳನ್ನು ಗೆದ್ದು ಮೊಟ್ಟ ಮೊದಲ ಭಾರತೀಯ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಕೋವಿಡ್ ಮೂರನೇ ಅಲೆ ಎದುರಿಸಲು ಸಿದ್ಧರಾಗೋಣ- ಸಿ.ಎಂ.

0

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು 2022ನೇ ಸಾಲಿನ ವರ್ಷವು ಆರ್ಥಿಕ ಹಾಗೂ ಆಡಳಿತದ ದೃಷ್ಟಿಯಿಂದ ಸವಾಲಿನ ವರ್ಷವಾಗಿದೆ. ಆದ್ದರಿಂದ ಉತ್ತಮ ಕಾರ್ಯ ನಿರ್ವಹಿಸುವ ಸಂಕಲ್ಪ ಮಾಡಬೇಕಿದೆ ಎಂದು ಅಧಿಕಾರಿಗಳಿಗೆ ತಿಳಿಸಿದ್ದಾರೆ.

‘ಕೋವಿಡ್ ಸಂಭಾವ್ಯ ಮೂರನೇ ಅಲೆ ಎದುರಿಸಲು ನಾವೆಲ್ಲಾ ಸಿದ್ಧರಾಗಬೇಕು. ಜೊತೆಗೆ ಆರ್ಥಿಕತೆಯು ಮುನ್ನಡೆಯಬೇಕಿದೆ. ಕೇವಲ ನಿರ್ಬಂಧಗಳನ್ನು ಹೇರಿ ಸುಮ್ಮನಿರಲಾಗದು. ಈ ಸವಾಲಿನ ಸಂದರ್ಭವನ್ನು ವಿಭಿನ್ನ ಕಾರ್ಯತಂತ್ರದಿಂದ ಎದುರಿಸಬೇಕು’ ಎಂದು ಅಧಿಕಾರಿಗಳಿಗೆ ಸಿಎಂ ಕಿವಿಮಾತು ಹೇಳಿದರು.

‘ರಾಜ್ಯದ ಆರ್ಥಿಕತೆಯನ್ನು ಉತ್ತಮಪಡಿಸಲು ಇಲಾಖೆಗಳಲ್ಲಿ ಅನವಶ್ಯಕ ವೆಚ್ಚಗಳನ್ನು ಕಡಿತಗೊಳಿಸಬೇಕು ಮುಖ್ಯವಾಗಿ ತೆರಿಗೆ ಸಂಗ್ರಹ ಇಲಾಖೆಗಳು ಮತ್ತಷ್ಟು ದಕ್ಷತೆಯಿಂದ ಕಾರ್ಯ ಕಾರ್ಯ ನಿರ್ವಹಿಸಬೇಕು. ಸಕಾರಾತ್ಮಕ ಭಾವನೆಯಿಂದ ಈ ಸವಾಲು ಎದುರಿಸಬೇಕು’ ಎಂದು ಸಿಎಂ ಬೊಮ್ಮಾಯಿ ಅಧಿಕಾರಿಗಳಿಗೆ ಹೇಳಿದರು.

ನಮ್ಮ ಸರ್ಕಾರ ಕಳೆದ 5 ತಿಂಗಳಲ್ಲಿ ಆಡಳಿತದಲ್ಲಿ ಅತಿ ಕಡಿಮೆ ಹಸ್ತಕ್ಷೇಪ ಮಾಡಿದೆ. ನೀವು ನಿಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಳ್ಳಬೇಕು. ನಿಮ್ಮ ಅನುಭವದ ಫಲ ರಾಜ್ಯದ ಬಡ ಜನತೆಗೆ ಅನುಕೂಲ ಮಾಡಿಕೊಡುವಂತಾಗಲಿ’ ಯು ಸಿಎಂ ಬಸವರಾಜ್ ಬೊಮ್ಮಾಯಿ ಅವರು ಆಶಿಸಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಹಲವು ಎನ್ ಜಿ ಓ ಗಳ ಪರವಾನಗಿ ರದ್ದತಿ

0

ದೇಶದಲ್ಲಿ 12 ಸಾವಿರ ಎನ್ ಜಿ ಓ ಸಂಸ್ಥೆಗಳ ವಿದೇಶಿ ಅನುದಾನವನ್ನು ರದ್ದುಗೊಳಿಸಿ ಆದೇಶ ಹೊರಡಿಸಲಾಗಿದೆ.

ವಿದೇಶದಿಂದ ಅನುದಾನ ಪಡೆಯಲು ಪರವಾನಗಿ ನವೀಕರಣ ಗಳಿಸಿಕೊಳ್ಳಲು ವಿಫಲವಾದ ಹಿನ್ನೆಲೆಯಲ್ಲಿ ದೇಶದ 12000 ಎನ್ ಜಿ ಒಗಳು ಹಾಗೂ ಇತರೆ ಸಂಸ್ಥೆಗಳು ಇನ್ಮುಂದೆ ವಿದೇಶಿ ದೇಣಿಗೆ ಪಡೆಯುವಂತಿಲ್ಲ. ವಿದೇಶಿ ದೇಣಿಗೆ ಕಾಯ್ದೆ ಅಡಿಯಲ್ಲಿ ಎನ್ ಜಿ ಒ ಗಳಿಗೆ ನೀಡಿದ್ದ ಎಫ್ ಸಿ ಆರ್ ಎ ಪರವಾನಗಿ ರದ್ದಾಗಿದೆ ಎಂದು ಗೃಹ ಸಚಿವಾಲಯ ಹೇಳಿದೆ.

ದೇಶದ ಒಟ್ಟು 18,778 ಎನ್ ಜಿ ಒ ತು ಇತರ ಸಂಸ್ಥೆಗಳ ಎಫ್ ಸಿ ಆರ್ ಎ ಪರವಾನಿಗೆ ಅವಧಿಯು 2020ರ ಸೆಪ್ಟೆಂಬರ್ 29 ರಿಂದ 2021 ಡಿಸೆಂಬರ್ 31ರ ನಡುವೆ ಮುಕ್ತಾಯಗೊಳ್ಳುತ್ತಿತ್ತು. ಆದರೆ 12,989 ಎನ್ ಜಿ ಒ ಗಳು ಮಾತ್ರವೇ ನವೀಕರಣಕ್ಕೆ ಅರ್ಜಿ ಸಲ್ಲಿಸಿದ್ದವು. ಆ ಪೈಕಿ 5,789 ಎನ್ ಜಿ ಒ ಗಳ ಪರವಾನಗಿ ಅವಧಿಯು ನಂಬರ್ 31ರ ನಡುರಾತ್ರಿಗೆ ಮುಕ್ತಾಯವಾಗಿದೆ. ಅವರ ನೋಂದಣಿ ಅನುಮತಿಯ ಅವಧಿ ಕೂಡಾ ಮುಗಿದಿದೆ. ಪೈಕಿ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್, ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ, ಆಕ್ಸ್ ಫ್ಯಾಮ್ ಇಂಡಿಯಾ ಟ್ರಸ್ಟ್, ಟ್ಯೂಬರ್ ಕುಲೊಸಿಸ್ ಅಸೋಸಿಯೇಷನ್ ಆಫ್ ಇಂಡಿಯಾ, ಇಸ್ಲಾಮಿಕ್ ಕಲ್ಚರಲ್ ಸೆಂಟರ್, ಡಿ ಲೆಪ್ರಸಿಮಿಷನ್, ದಿ ಇಂದಿರಾ ಗಾಂಧಿ ನ್ಯಾಷನಲ್ ಸೆಂಟರ್ ಫಾರ್ ಆರ್ಟ್ಸ್ ಪ್ರಮುಖ ಎನ್ ಜಿ ಒಗಳಾಗಿವೆ. ಮದರ್ ತೆರೆಸಾ ಮಿಷನರೀಸ್ ಆಫ್ ಚಾರಿಟಿಗೆ ಎಫ್ ಸಿ ಆರ್ ಎ ಪರವಾನಿಗಿಯನ್ನು ರದ್ದುಗೊಳಿಸಿದೆ. ಅಲ್ಲದೆ ಕೋಲ್ಕತ್ತ ಮೂಲದ ಎನ್ ಜಿ ಒಗೆ ಸಂಬಂಧಿತ ಬ್ಯಾಂಕ್ ಖಾತೆಗಳನ್ನು ಕೂಡ ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಭಜಿ ಅತೃಪ್ತಿಯಲ್ಲೇ ಕ್ರಿಕೆಟ್ ಜೀವನಕ್ಕೆ ನಿವೃತ್ತಿ

0

ಕೆಲದಿನಗಳ ಹಿಂದೆ ಭಾರತದ ಕ್ರಿಕೆಟ್ ತಂಡದ ಪ್ರಮುಖ ಸ್ಪಿನ್ ಬೌಲರ್ ಸಿಂಗ್ ಅವರನ್ನು ತಂಡದಿಂದ ಕೈಬಿಡಲಾಗಿತ್ತು. ಈ ಕುರಿತಂತೆ ಪ್ರತಿಕ್ರಿಯಿಸಿರುವ ಹರ್ಭಜನ್ ಸಿಂಗ್ ಅವರು ರಾಷ್ಟ್ರೀಯ ತಂಡದಿಂದ ತಮ್ಮನ್ನು ಕೈಬಿಡಲು ಬಿಸಿಸಿಐನ ಕೆಲವು ಅಧಿಕಾರಿಗಳೇ ಕಾರಣ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿ ಪಡೆದ ಬಳಿಕ ಹರ್ಭಜನ್ ಸಿಂಗ್ ಅವರು ಆರೋಪಿಸಿದ್ದಾರೆ.

ಅಲ್ಲದೆ ಭಾರತ ತಂಡದ ಮಾಜಿ ನಾಯಕ ಎಂ ಎಸ್ ಧೋನಿ ಅವರು ಈ ವಿಷಯದಲ್ಲಿ ಅಧಿಕಾರಿಗಳಿಗೆ ಬೆಂಬಲ ನೀಡಿರುವ ಸಾಧ್ಯತೆಗಳಿವೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

“ಅದೃಷ್ಟ ಸದಾ ನನ್ನೊಂದಿಗಿತ್ತು. ಆದರೆ ತೆಲುಗು ಭಾಷೆ ಶಕ್ತಿಗಳು ನನ್ನ ಪರ ಇರಲಿಲ್ಲ. ಬಹುಶಃ ಅವು ಸಂಪೂರ್ಣವಾಗಿ ನನ್ನ ವಿರುದ್ಧ ಇದ್ದವು ನಾನು ಬೌಲಿಂಗ್ ಮಾಡುತ್ತಿದ್ದ ರೀತಿ ಹಾಗೂ ತಂಡದಲ್ಲಿ ನಾನು ಕಳಿಸುತ್ತಿದ್ದ ಯಶಸ್ಸೇ ಅದಕ್ಕೆ ಕಾರಣ. 400 ವಿಕೆಟ್ ಉರುಳಿಸುವ ನನಗೆ 31 ವರ್ಷ. ಇನ್ನೂ 4-5 ವರ್ಷ ಆಗಿದ್ದಲ್ಲಿ, ಆಗ ನನ್ನಲ್ಲಿದ್ದ ಬೌಲಿಂಗ್ ನ ಗುಣಮಟ್ಟವನ್ನು ಪರಿಗಣಿಸಿ ಹೇಳುವುದಾದರೆ, ಇನ್ನೂ 100-150 ಅಥವಾ ಅದಕ್ಕೂ ಹೆಚ್ಚು ವಿಕೆಟ್ ಗಳಿಸುತ್ತಿದ್ದೆ” ಇಂದು ಹರ್ಭಜನ್ ಸಿಂಗ್ ಅವರು ತಿಳಿಸಿದ್ದಾರೆ .

‘ನಾಯಕ ಬಿಸಿಸಿಐ ಗಿಂತ ಮೇಲಲ್ಲ. ಯಾವತ್ತೂ ನಾಯಕ ಅಥವಾ ತರಬೇತುದಾರರ ಅಥವಾ ತಂಡಕ್ಕಿಂತ ಬಿಸಿಸಿಐ ಅಧಿಕಾರಿಗಳ ಮೇಲು’ ಎಂದು ಅಧಿಕಾರಿಗಳ ವಿರುದ್ಧ ಹರ್ಭಜನ್ ಸಿಂಗ್ ಕಿಡಿ ಕಾರಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ನಂದಿಬೆಟ್ಟದಲ್ಲಿ ಅಮಿತ್ ಶಾ ನೇತೃತ್ವ: ಚಿಂತನಾ ಸಭೆ

0

ಜನವರಿ 8 ಮತ್ತು 9ರಂದು ರಾಜ್ಯ ಪ್ರವಾಸ ಕೈಗೊಳ್ಳಲಿರುವ ಬಿಜೆಪಿ ನಾಯಕ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ನಂದಿಬೆಟ್ಟದಲ್ಲಿ ನಡೆಯಲಿರುವ ಚಿಂತನಾ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಸಭೆಯು ಪಕ್ಷ ಮತ್ತು ಸರ್ಕಾರದ ಮಟ್ಟದಲ್ಲಿ ಭಾರಿ ಸಂಚಲನಕ್ಕೆ ಕಾರಣವಾಗಿದೆ.

ಈ ಸಭೆಯಲ್ಲಿ ಅಮಿಷಾ ಅವರು ರಾಜ್ಯದ ಕೆಲ ಸಚಿವರು ಹಾಗೂ ಪಕ್ಷದಲ್ಲಿ ಹುದ್ದೆಗೆ ಅಂಟಿಕೊಂಡಿದ್ದ ನಾಯಕರಿಗೆ ಬಿಸಿ ಮುಟ್ಟಿಸುವ ಸಾಧ್ಯತೆಯಿದೆ ಮಾತು ಕೇಳಿಬರುತ್ತಿದೆ.

ಮುಂಬರುವ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ, ಬಿಬಿಎಂಪಿ ಚುನಾವಣೆ ಹಾಗೂ 2023ರ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸಂಘಟನಾತ್ಮಕವಾಗಿ ಪಕ್ಷ ಬಲವರ್ಧನೆಗೆ ಕೈಗೊಳ್ಳಬೇಕಾದ ಚಟುವಟಿಕೆಗಳ ಬಗ್ಗೆ ಚಿಂತನಾ ಸಭೆಯಲ್ಲಿ ಚರ್ಚೆ ನಡೆಯಲಿದೆ ಹಾಗೂ ಎಲ್ಲಾ ಸಚಿವರು ಪಕ್ಷದ ಪ್ರಮುಖರು ಕಡ್ಡಾಯವಾಗಿ ಈ ಸಭೆಯಲ್ಲಿ ಪಾಲ್ಗೊಳ್ಳಬೇಕು ಎಂದು ಸೂಚಿಸಲಾಗಿದೆ.

ಮುಂದಿನ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಟಾರ್ಗೆಟ್ 150 ಜಪ ಮಾಡುತ್ತಿರುವ ಬಿಜೆಪಿಗೆ ಪಂಚಮಸಾಲಿ ಭೀತಿ ಎದುರಾಗಿದೆ. ಈ ನಿಟ್ಟಿನಲ್ಲಿ ಲಿಂಗಾಯತ ಮತ ಚದುರದಂತೆ ನೋಡಿಕೊಳ್ಳಲು ಪಂಚಮಸಾಲಿ ಸಮಾಜದ ವಿಶ್ವಾಸಗಳು ನವೀಕರಣ ಮಾಡಿಕೊಳ್ಳಬೇಕಾದ ಅನಿವಾರ್ಯ ಬಿಜೆಪಿಗೆ ಇದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ತೀರ್ಥಹಳ್ಳಿ ಪ್ರಸಿದ್ಧ ಎಳ್ಳಮಾವಾಸ್ಯೆ ಜಾತ್ರೆ ಆರಂಭ.

0

ತೀರ್ಥಹಳ್ಳಿಯಲ್ಲಿ ಇರುವ ಪುರಾಣ ಪ್ರಸಿದ್ಧ ರಾಮೇಶ್ವರ ದೇವರ ಎಳ್ಳಮಾವಾಸ್ಯೆ ಜಾತ್ರೆ ಮೂರು ದಿನ ಸರಳವಾಗಿ ನಡೆಯಲಿದೆ.

ಜಾತ್ರಾ ಮಹೋತ್ಸವವು ಮೂರು ದಿನಗಳಕಾಲ ನಡೆಯಲಿದೆ. ನಾಳೆಗೆ ದಿನ ಅಂದರೆ ಸೋಮವಾರ ಶ್ರೀರಾಮೇಶ್ವರ ದೇವರ ರಥೋತ್ಸವ ನಡೆಯಲಿದೆ. ಮಂಗಳವಾರ ಸರಳವಾಗಿ ತೆಪ್ಪೋತ್ಸವ ನಡೆಯಲಿದೆ. ಈ ಬಾರಿಯ ಜಾತ್ರೆಯಲ್ಲಿ ವಿಶೇಷತೆ ಏನೆಂದರೆ ವ್ಯಾಪಾರ ವಹಿವಾಟು ನಿರೀಕ್ಷೆಯಂತೆ ಇಲ್ಲವಾಗಿದೆ.

ಕೋವಿಡ್ ಸೋಂಕು ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹೆಚ್ಚು ಜನ ಸೇರದಂತೆ ನಿರ್ಬಂಧವನ್ನು ವಿಧಿಸಿದೆ. ಶೀತ, ಕೆಮ್ಮು, ಜ್ವರದ ಲಕ್ಷಣ ಇದ್ದವರು ಜಾತ್ರೆಯಲ್ಲಿ ಭಾಗವಹಿಸಬಾರದು. ಮೂಗು ಮುಚ್ಚದಂತೆ ಮಾಸ್ ಧರಿಸದವರಿಗೆ ದಂಡ ವಿಧಿಸಲಾಗುತ್ತದೆ. ಸಾಮಾಜಿಕ ಅಂತರ ಕಾಪಾಡುವುದು ಕಡ್ಡಾಯ ಎಂದು ಪ. ಪಂ. ಸಾರ್ವಜನಿಕರಿಗೆ ಮಾಹಿತಿ ತಿಳಿಸಿದೆ.

ಈ ಬಾರಿಯ ಜಾತ್ರಮಹೋತ್ಸವ ಸರಳವಾಗಿ ನಡೆಯಲಿದ್ದು, ಬರುವ ಭಕ್ತಾದಿಗಳು ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಶಿವಮೊಗ್ಗ ಜಿಲ್ಲಾಡಳಿತ: ಲಸಿಕೆ ಕಾರ್ಯಕ್ರಮ

0

ದೇಶದಲ್ಲಿ ಕೋವಿಡ್ ಮತ್ತು ಒಮಿಕ್ರಾನ್ ರೂಪಾಂತರಿ ವೈರಸ್ ಸೋಂಕಿತರ ಪ್ರಮಾಣ ದಿನೇ ದಿನೇ ಹೆಚ್ಚಾಗುತ್ತಿರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ 15ರಿಂದ 18 ವರ್ಷದ ಮಕ್ಕಳಿಗೆ ಲಸಿಕೆ ನೀಡಲು ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತವು ಮಕ್ಕಳಿಗೆ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದೆ.

ಶಿವಮೊಗ್ಗ ಜಿಲ್ಲಾಡಳಿತವು ಜನವರಿ 3ರಿಂದ ಬೆಳಗ್ಗೆ 10 ಗಂಟೆಗೆ ನಗರದ ಸೈನ್ಸ್ ಮೈದಾನದ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ 15ರಿಂದ 18 ವರ್ಷದ ಮಕ್ಕಳಿಗೆ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮವನ್ನು ಆಯೋಜಿಸಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಕಾರಂತರ ಕಾದಂಬರಿ ಆಧರಿತ ನಾಟಕ:ಬಜೆಟ್ ನಲ್ಲಿ ಅನುದಾನ.

0

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಶಿವರಾಮ ಕಾರಂತ ಅವರ ಕಾದಂಬರಿಗಳನ್ನು ಆದರಿಸಿದ ನಾಟಕ ರಚನೆ ಮತ್ತು ಪ್ರದರ್ಶನಕ್ಕೆ ಮುಂದಿನ ಬಜೆಟ್ ನಲ್ಲಿ ಅನುದಾನ ಒದಗಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್ ಅವರು ಭರವಸೆ ನೀಡಿದ್ದಾರೆ.

ಶಿವಮೊಗ್ಗ ಸುವರ್ಣ ಸಂಸ್ಕೃತಿ ಭವನದಲ್ಲಿ ಸಿಟಿ ಯೋಜನೆಯಡಿ ರೂಪಿಸಲಾದ ಮ್ಯೂರಲ್ ಗ್ಯಾಲರಿಯನ್ನು ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್ ಅವರು ಉದ್ಘಾಟಿಸಿ ಮಾತನಾಡುತ್ತಿದ್ದರು.

ಶಿವಮೊಗ್ಗ ರಂಗಾಯಣದಿಂದ ಬೆಂಗಳೂರು ಎನ್ಎಸ್ ಡಿ , ಮೈಸೂರು ರಂಗಾಯಣ ಗಳ ಮಾದರಿಯಲ್ಲಿ ಶಿವಮೊಗ್ಗ ರಂಗಾಯಣವು ಶಿವರಾಮ ಕಾರಂತ ಅವರ ಕಾದಂಬರಿಗಳ ಆಧಾರಿತ ನಾಟಕ ರಚನೆ ಹಾಗೂ ಪ್ರದರ್ಶನಕ್ಕೆ ಅನುದಾನದ ಪ್ರಸ್ತಾವನೆ ಸಲ್ಲಿಸಿದೆ. ಮುಂದೆ ಬರುವ ಬಜೆಟ್ನಲ್ಲಿ ಅನುದಾನ ಒದಗಿಸಲಾಗುವುದು. ಸುವರ್ಣ ಸಂಸ್ಕೃತಿ ಭವನದಲ್ಲಿ ಸೋಲಾರ್ ಪ್ಯಾನಲ್ ಗಳನ್ನು ಅಳವಡಿಸಲಾಗುತ್ತದೆ. ವಿದ್ಯುತ್ ಸ್ವಾವಲಂಬನೆ ಸಾಧಿಸಲು ಪ್ರಸ್ತಾವನೆಗೆ ಅನುಮೋದನೆ ನೀಡಲಾಗುವುದು ಎಂದು ವಿ. ಸುನಿಲ್ ಕುಮಾರ್ ಅವರು ತಿಳಿಸಿದ್ದಾರೆ.

ಶಿವಮೊಗ್ಗ ಸ್ಮಾರ್ಟ್ ಸಿಟಿ ಅನುದಾನದಲ್ಲಿ ಕರ್ನಾಟಕ ಚಿತ್ರಕಲಾ ಪರಿಷತ್ ಸಹಯೋಗದಲ್ಲಿ 40ಕ್ಕೂ ಹೆಚ್ಚು ಮ್ಯೂರಲ್ ಕಲಾಕೃತಿಗಳನ್ನು ರಚಿಸಲಾಗಿದೆ. ಇವುಗಳು ವೀಕ್ಷಿಸಲು ಆಕರ್ಷಕವಾಗಿದೆ. ವಿವಿಧ ನಾಟಕಗಳ ದೃಶ್ಯಗಳು, ಸೂತ್ರದ ಗೊಂಬೆಯಾಟ, ವರ್ಲಿ ಪೈಂಟಿಂಗ್ ಕಲಾಕೃತಿಗಳು ಹೀಗೆ ಹತ್ತಾರು ಬಗೆಯ ಮುಖವಾಡಗಳು ಶಿವಮೊಗ್ಗ ರಂಗಾಯಣಕ್ಕೆ ಹೊಸ ರೂಪ ನೀಡಿವೆ. ಬೇರೆ ಯಾವುದೇ ರಂಗಾಯಣ ಗಳು ಮಾಡಿದ ಕಾರ್ಯವನ್ನು ಶಿವಮೊಗ್ಗ ರಂಗಾಯಣ ಮಾಡಿದೆ ಎಂದು ಸಚಿವರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭದಲ್ಲಿ ಶಿವಮೊಗ್ಗ ರಂಗಾಯಣ ನಿರ್ದೇಶಕ ಸಂದೇಶ ಜವಳಿ, ವಿಧಾನಪರಿಷತ್ ಸದಸ್ಯ ಡಿ. ಎಸ್. ಅರುಣ್, ಇನ್ನು ಮುಂತಾದವರು ಉಪಸ್ಥಿತರಿದ್ದರು.