Wednesday, April 30, 2025
Wednesday, April 30, 2025

ಎಲ್ಲ ಕೃಷಿ ವಿವಿಗಳು ರೈತಮುಖಿಯಾಗಬೇಕು-ಸಚಿವ ಬಿ.ಸಿ.ಪಾಟೀಲ್

Date:

ಕೃಷಿ ವಿಶ್ವವಿದ್ಯಾಲಯಗಳು ಅನ್ನದಾತರಿಗೆ ವೈದ್ಯರಂತೆ ಕಾರ್ಯನಿರ್ವಹಿಸಬೇಕು. ಹೊಸ ಹೊಸ ಕೃಷಿ ತಾಂತ್ರಿಕತೆಗಳನ್ನು ರೈತರಿಗೆ ಪರಿಚಯಿಸಬೇಕು. ಪ್ರಧಾನಿ ನರೇಂದ್ರ ಮೋದಿ ಅವರ ರೈತ ರೈತೋದ್ಯಮಿ ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಎಲ್ಲರೂ ದುಡಿಯಬೇಕು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಖಡಕ್ ಆಗಿ ಸೂಚಿಸಿದರು.

ವಿಕಾಸಸೌಧದಲ್ಲಿಂದು ಕೃಷಿ ಸಚಿವರ ಅಧ್ಯಕ್ಷತೆಯಲ್ಲಿ ರೈತರ ಆದಾಯ ದ್ವಿಗುಣಗೊಳಿಸಲು ರಾಜ್ಯದ ಕೃಷಿ ವಿಶ್ವವಿದ್ಯಾಲಯಗಳ ಮೂಲಕ ಅನುಕೂಲವಾಗುವಂತೆ ತಾಂತ್ರಿಕತೆಗಳನ್ನು ಅಭಿವೃದ್ಧಿಸುವ ಕುರಿತು ಪರಿಶೀಲನೆ ನಡೆಸುವ ನಿಟ್ಟಿನಲ್ಲಿ ಉನ್ನತಾಧಿಕಾರದ ಸಮಿತಿ ಸಭೆ ನಡೆಯಿತು.

ಸಭೆಯಲ್ಲಿ ಕೃಷಿಯಲ್ಲಿ ಡ್ರೋನ್ ಬಳಕೆ ಮೂಲಕ ಕೀಟನಾಶಕ,ಲಘುಪೋಷಕಾಂಶಗಳು ಹಾಗೂ ಬೆಳೆ ಪ್ರಚೋದಕಗಳ ಸಿಂಪಡಣೆ, ಅವುಗಳ ಪ್ರಮಾಣ ಬೆಳೆವಾರು ಬಳಕೆ ಕುರಿತು ಸಂಶೋಧನೆಯನ್ನು ನಡೆಸಲು ಅನುಕೂಲವಾಗುವಂತೆ ನೂತನ ಪದ್ಧತಿಗಳನ್ನು ಅಭಿವೃದ್ಧಿ ಪಡಿಸಿ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲು ಹಾಗೂ ಕ್ರೋಡೀಕರಿಸಿ ಯೋಜನಾ ವರದಿ ನೀಡಲು ಕೃಷಿ ವಿಶ್ವವಿದ್ಯಾಲಯಗಳಲ್ಲಿ ವಿಜ್ಞಾನಿಗಳ ತಂಡ ರಚಿಸುವ ಬಗ್ಗೆ ಈ ಹಿಂದಿನ ಸಭೆಯಲ್ಲಿ ಸೂಚಿಸಿದಂತೆ ಅದರ ಅನುಷ್ಠಾನದ ಬಗ್ಗೆ ಸಭೆಯಲ್ಲಿ ಸಚಿವರು ಕೃಷಿ ವಿಶ್ವವಿದ್ಯಾಲಯಗಳ ಕುಲಪತಿಗಳ ಜೊತೆ ಚರ್ಚಿಸಿದರು.

ಕೆಲ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಅನುಷ್ಠಾನ ವಿಳಂಬವಾಗುತ್ತಿರುವುದನ್ನು ಗಮನಿಸಿದ ಸಚಿವರು ಗರಂ ಆದರು. ಸಭೆಯಲ್ಲಿ ಬರೀ ಉಪಸ್ಥಿತರಾದರಷ್ಟೇ ಸಾಲದು,ಸಭೆಯ ಸೂಚನೆಗಳನ್ನು ತಪ್ಪದೇ ಪಾಲಿಸಬೇಕು.ವಿಶ್ವವಿದ್ಯಾಲಯಗಳು ಪುಸ್ತಕದ ಪಠ್ಯವನ್ನಷ್ಟೇ ಬೋಧಿಸಲು ಮೀಸಲಾಗದೇ ಕೃಷಿ ಹೊಲ ಜಮೀನು ರೈತರ ಬಗ್ಗೆ ವಾಸ್ತವ ತಿಳಿಯಬೇಕು.ಕೃಷಿ ವಿಶ್ವವಿದ್ಯಾಲಯಗಳ ಕುಲಪತಿಗಳು ಅಧಿಕಾರಿಗಳು ವಿಜ್ಞಾನಿಗಳು ಸಹ ಪ್ರಾತ್ಯಕ್ಷಿಕೆಗಳಲ್ಲಿ ಭಾಗವಹಿಸಿ ಹೊಸತನ್ನು ಕಲಿಯಬೇಕು.ಪ್ರಗತಿಪರ ರೈತರನ್ನು ಇಲಾಖೆಯನ್ನು ಸಹ ಹೆಚ್ಚು ಬಳಸಿಕೊಳ್ಳಬೇಕು.ವಿದ್ಯಾರ್ಥಿಗಳ ಜೊತೆ ರೈತರ ಹೊಲಗಳಿಗೆ ಭೇಟಿ ನೀಡಿ ವಾಸ್ತವ ತಿಳಿದು ರೈತರ ಸಮಸ್ಯೆ ಬೆಳೆಗಳ ಬಗ್ಗೆ ಮಾಹಿತಿ ತಿಳಿದು ಹೊಸ ಹೊಸ ಸಂಶೋಧನೆಗಳನ್ನು ಮಾಡಬೇಕು. ರೈತರ ಹೊಲಗಳಿಗೆ ಸಮಸ್ಯೆಗಳಿಗೆ ಚಿಕಿತ್ಸೆ ನೀಡುವ ವೈದ್ಯರಂತೆ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.


ಎಲ್ಲಾ ವಿಶ್ವವಿದ್ಯಾಲಯಗಳು ಬೇರೆಬೇರೆ ಎನ್ನುವ ಭಾವನೆ ತೊರೆದು ಎಲ್ಲರ ಉದ್ದೇಶ ರೈತರ ಏಳಿಗೆ ಎಂದಾಗಬೇಕು.ಕೃಷಿ ವಿಶ್ವವಿದ್ಯಾಲಯಗಳು ಕಾಲಕ್ಕೆ ತಕ್ಕಂತೆ ರೈತರ ಅಭಿರುಚಿಗೆ ತಕ್ಕಂತೆ ಹೊಸ ತಳಿಗಳನ್ನು ಕಂಡುಹಿಡಿದು ಅದರ ಮಾಹಿತಿ ಪ್ರತಿ ಗ್ರಾಮಪಂಚಾಯಿತಿ ಮಟ್ಟಕ್ಕೂ ತಲುಪುವಂತಾಗಬೇಕು. ವಿಶ್ವವಿದ್ಯಾಲಯಗಳ ಅಧಿಕಾರಿಗಳು ಜೊತೆ ಪ್ರಗತಿಪರ ರೈತರನ್ನು ಕರೆದುಕೊಂಡು ರೈತರ ಹೊಲಗಳಿಗೆ ಹೋಗಿ ರೈತರಿಗೆ ಪ್ರೇರಣೆ ಮಾಡುವ ಕೆಲಸ ಮಾಡಬೇಕು ಎಂದರು.
ಇದೇ ವೇಳೆ ರಾಜ್ಯದ ರೈತ ಸಂಪರ್ಕ ಕೇಂದ್ರಗಳಿಗೆ ಯಾವ್ಯಾವ ವಿಶ್ವವಿದ್ಯಾಗಳ ವಿಜ್ಞಾನಿಗಳು ಅಧಿಕಾರಿಗಳು ಎಷ್ಟು ಬಾರಿ ಭೇಟಿ ನೀಡಿದ್ದಾರೆ.ರೈತರ ಅಭಿಪ್ರಾಯವೇನು? ಎಂಬುದನ್ನು ಪರಿಶೀಲಿಸಲು ಅಧಿಕಾರಿಗಳಿಗೆ ತಿಳಿಸಿದರು. ಅಲ್ಲದೇ ಕೃಷಿ ಆಯುಕ್ತರು ಎಲ್ಲಾ ಕೃಷಿ ವಿಶ್ವವಿದ್ಯಾಲಯಗಳಿಗೆ ಭೇಟಿ ನೀಡಿ ವಿಶ್ವವಿದ್ಯಾಲಯಗಳಿಗೆ ಕೇಂದ್ರದಿಂದ ಬಂದಿರುವ ಅನುದಾನಗಲೆಷ್ಟು? ಅದರ ಸದ್ಬಳಕೆಯಾಗಿದೆಯೇ? ವಿಶ್ವವಿದ್ಯಾಲಯಗಳ ಪ್ರಗತಿಯ ವಿವರ ಪಡೆದು ವರದಿ ನೀಡುವಂತೆ ಸೂಚಿಸಿದರು.
ಕೃಷಿ ಇಲಾಖೆ ಸರ್ಕಾರದ ಕಾರ್ಯದರ್ಶಿ ಶಿವಯೋಗಿ ಸಿ.ಕಳಸದ ಮಾತನಾಡಿ, ಡ್ರೋನ್ ಬಳಕೆ ತಂತ್ರಜ್ಞಾನ ಬಳಕೆಯ ವರದಿ ನೀಡುವಂತೆ ಕೃಷಿ ವಿಶ್ವವಿದ್ಯಾಲಯಗಳಿಗೆ ಒಂದು ತಿಂಗಳ ಕಾಲಾವಕಾಶ ನೀಡಿದರು ಹಾಗೂ ಜುಲೈ ತಿಂಗಳ ಮೊದಲ ವಾರದಲ್ಲಿ ಸೆಕೆಂಡರಿ ಕೃಷಿ ಅಗ್ರಿಕಲ್ಚರ್ ಕುರಿತು ಕಾರ್ಯಾಗಾರ ಮಾಡುವ ಬಗ್ಗೆ ಚರ್ಚಿಸಿದರು.
ಸಭೆಯಲ್ಲಿ ಕೃಷಿ ಆಯುಕ್ತ ಶರತ್ ಪಿ. ಕೃಷಿ ಇಲಾಖೆ ನಿರ್ದೇಶಕಿ ನಂದಿನಿ ಕುಮಾರಿ ಅಪರ ಕೃಷಿಉ ನಿರ್ದೇಶಕ ವೆಂಕಟರಮಣರೆಡ್ಡಿ ಸೇರಿದಂತೆ ಕೃಷಿ ವಿಶ್ವವಿದ್ಯಾಲಯಗಳ ಕುಲಪತಿಗಳು ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

SRNM College ಯುವಜನರು ರಕ್ತದಾನದ ಮಹತ್ಕಾರ್ಯಕ್ಕೆ ಕೈಜೋಡಿಸಬೇಕು-ಡಾ.ಕೆ.ಎಲ್.ಅರವಿಂದ್

SRNM College ರಕ್ತದಾನಕ್ಕಿಂತ ಬೇರೆ ದಾನ ಇನ್ನೊಂದಿಲ್ಲ, ಕೇವಲ ಒಂದು...

Yadav School of Chess Institute ಯಾದವ ಸಂಸ್ಥೆಯಿಂದ ಚೆಸ್ ತರಬೇತಿ ಶಿಬಿರ

Yadav School of Chess Institute ರವೀದ್ರನಗರದ ಯಾದವ ಸ್ಕೂಲ್ ಆಫ್...

Shivaganga Yoga Center ನಗರದ ಅತಿದೊಡ್ಡ ಬಾಡಾವಣೆಗಳಿಗೆ ₹140 ಕೋಟಿ ಅನುದಾನದಿಂದ ಅಭಿವೃದ್ಧಿ- ವಿಶ್ವಾಸ್

Shivaganga Yoga Center ಶಿವಗಂಗಾ ಯೋಗ ಕೇಂದ್ರದ ಅಧ್ಯಕ್ಷರಾಗಿ ಆಯ್ಕೆಯಾದ ನಂತರ...