Thursday, February 12, 2026
Thursday, February 12, 2026
Home Blog Page 1786

ಯೆಲ್ಲೋ,ಆರೇಂಜ್ ರೆಡ್ ಅಲರ್ಟ್ ಎಂದರೇನು? ಮಾಹಿತಿ ಇಲ್ಲಿದೆ

0

ಕರ್ನಾಟಕದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದೆ. ಮತ್ತೆ ಲಾಕ್ಡೌನ್ ಆಗುತ್ತದೆ ಎಂಬ ಭೀತಿ ಕಾಡುತ್ತಿದೆ. ಈ ಮಧ್ಯೆ, ಲಾಕ್ಡೌನ್ ಯಾವಾಗ ಮಾಡಬೇಕು ಎನ್ನುವ ಕುರಿತಾಗಿ ಸರ್ಕಾರಕ್ಕೆ ರಾಜ್ಯ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಕೆಲವು ಸಲಹೆಗಳನ್ನು ನೀಡಿದೆ.

ರಾಜ್ಯದಲ್ಲಿ ಪಾಸಿಟಿವ್ ದರ ಶೇ.5 ಕ್ಕಿಂತ ಹೆಚ್ಚಾದರೆ ಹಾಗೂ ಆಸ್ಪತ್ರೆಗಳಲ್ಲಿ ಐಸಿಯು ಮತ್ತು ಆಕ್ಸಿಜನ್ ಹಾಸಿಗೆಗಳು ಶೇ. 40 ರಷ್ಟು ಭರ್ತಿಯಾದರೆ ಲಾಕ್ ಡೌನ್ ಮಾಡುವುದು ಅನಿವಾರ್ಯ ಎಂದು ಸರ್ಕಾರಕ್ಕೆ ಸಮಿತಿ ಸೂಚಿಸಿದೆ. ಈಗ ಪಾಸಿಟಿವ್ ದರ ಶೇ. 1.08 ರಷ್ಟಿದೆ.

ಪ್ರಸ್ತುತ ರಾಜ್ಯದಲ್ಲಿ ಕೊರೊನಾ ಸೋಂಕು ಎಚ್ಚರವಾಗದಂತೆ ತಡೆಯಲು ಹಳದಿ, ಕಿತ್ತಳೆ, ಕೆಂಪು ಬಣ್ಣಗಳ ಕೋಡ್ ಆಧಾರದ ಮೇಲೆ ನಿರ್ಬಂಧ ವಿಧಿಸುವಂತೆ ಯು ಸಲಹೆ ನೀಡಿದೆ.

ಸೋಂಕು ಶೇ.1ಕ್ಕಿಂತ ಕಡಿಮೆ ಇದ್ದರೆ ಯೆಲ್ಲೋ ಅಲರ್ಟ್, ಶೇ. 1 ರಿಂದ 2 ರಷ್ಟಿದ್ದರೆ ಆರೆಂಜ್ ಹಾಗೂ ಸೋಂಕು 2 ಕ್ಕಿಂತ ಹೆಚ್ಚಿದ್ದರೆ ರೆಡ್ ಅಲರ್ಟ್ ನೀಡಿ ಚಟುವಟಿಕೆಗಳ ಮೇಲೆ ನಿರ್ಬಂಧ ಹೇರಲು ಸೂಚಿಸಲಾಗಿದೆ.

ಯೆಲ್ಲೊ, ಆರೆಂಜ್, ಹಾಗೂ ರೆಡ್ ಅಲರ್ಟ್ ಗಳನ್ನು ಸೂಚಿಸಿದಾಗ ಏನೆಲ್ಲ ಮಾಡಬಹುದು ಎಂಬುದನ್ನು ಸೂಚಿಸಲಾಗಿದೆ.

ಎಲ್ಲೊ ಅಲರ್ಟ್ ಇದ್ದಾಗ ಕಡ್ಡಾಯವಾಗಿ ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಧರಿಸಬೇಕು. 1ಮೀಟರ್ ಅಂತರ ಕಾಯ್ದುಕೊಳ್ಳಬೇಕು. ಇತರ ಚಟುವಟಿಕೆಗಳಾದ ಮಾಲ್, ಶಾಪಿಂಗ್ ಕಾಂಪ್ಲೆಕ್ಸ್, ಸಿನಿಮಾ, ಆಡಿಟೋರಿಯಂ, ಶಾಲಾ-ಕಾಲೇಜು, ರೆಸ್ಟೋರೆಂಟ್ ಸೇರಿದಂತೆ ಸಲೂನ್, ಜಿಮ್ ಸೆಂಟರ್, ಮೆಟ್ರೋ ರೈಲ್, ಈಜುಕೊಳ, ಪಾರ್ಕ್ ಇವುಗಳನ್ನು ಆರಂಭ ಮಾಡಬಹುದು. ಆದರೆ ವಿವಾಹ ಮತ್ತು ಸಾಮಾಜಿಕ ಕಾರ್ಯಕ್ರಮಗಳಲ್ಲಿ 200 ರಿಂದ 300 ಜನರಿಗೆ ಸೀಮಿತಗೊಳಿಸಬೇಕು. ಅಂತ್ಯಕ್ರಿಯೆ ಸಂದರ್ಭದಲ್ಲಿ 100 ರಿಂದ 200 ಮಂದಿ ಸೇರಲು ಮಾತ್ರ ಅವಕಾಶ ಕಲ್ಪಿಸಬೇಕು.

ಆರೆಂಜ್ ಅಲರ್ಟ್ ಇರುವ ಸಂದರ್ಭದಲ್ಲಿ ಇದು ಲಾಕ್ಡೌನ್ ಎಚ್ಚರಿಕೆ ಗಂಟೆ ಎಂದು ಭಾವಿಸಬೇಕು. ಇದರಲ್ಲಿ ಮಾಲ್, ಶಾಪಿಂಗ್ ಕಾಂಪ್ಲೆಕ್ಸ್ ಗಳಲ್ಲಿ ಜನ ನೊಂದಣಿ ಕಡಿಮೆ ಮಾಡುವ ನಿಟ್ಟಿನಲ್ಲಿ ಬೆಳಿಗ್ಗೆ 6 ರಿಂದ ಮಧ್ಯಾಹ್ನ 1ರ ತನಕ ಅವಕಾಶ ಕಲ್ಪಿಸಬೇಕು. ಸಿನಿಮಾ ಹಾಗೂ ಆಡಿಟೋರಿಯಂ, ಶಾಲಾ ಕಾಲೇಜು, ಸಾರ್ವಜನಿಕ ಸಾರಿಗೆ, ಬಾರ್ ಹಾಗೂ ಪಬ್, ಕಚೇರಿಗಳಲ್ಲಿ 50 ರಿಂದ 50 ಸೂತ್ರ ಜಾರಿ ಮಾಡಬೇಕು. ಸಭೆ-ಸಮಾರಂಭಗಳಲ್ಲಿ ಇನ್ನೂರ ರಿಂದ ನೂರು ಮಂದಿ, ಅಂತ್ಯಕ್ರಿಯೆಯಲ್ಲಿ ನೂರರಿಂದ 50 ಜನರಿಗೆ ಮಾತ್ರ ಅವಕಾಶವಿರುತ್ತದೆ.

ರೆಡ್ ಅಲರ್ಟ್ ಅಂತಹ ಸಂದರ್ಭದಲ್ಲಿ ಇದು ಅಪಾಯಕಾರಿ ಯ ಪರಿಸ್ಥಿತಿ. ರೆಡ್ ಅಲರ್ಟ್ ಗೆ ತಲುಪಿದಾಗ, ವಾಣಿಜ್ಯ ಚಟುವಟಿಕೆಗಳಿಗೆ ಬೇಕಾಗುವಂತೆ ಸೂಚಿಸಲಾಗಿದೆ. ವೀಕೆಂಡ್ ಕರ್ಫ್ಯೂ, ನೈಟ್ ಕರ್ಫ್ಯೂ ಮತ್ತು ಎರಡು ಡೋಸ್ ಲಸಿಕೆ ಕಡ್ಡಾಯ ಮಾಡುವುದು. ಈ ಸಂದರ್ಭದಲ್ಲಿ ಯಾವುದೇ ವಾಣಿಜ್ಯ ಚಟುವಟಿಕೆ, ಶಾಲಾ ಕಾಲೇಜು ಸೇರಿದಂತೆ ಯಾವುದೇ ಚಟುವಟಿಕೆಗಳಿಗೆ ಅವಕಾಶ ನೀಡಬಾರದೆಂದು ಸಮಿತಿಯು ಸರ್ಕಾರಕ್ಕೆ ಸೂಚಿಸಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

15 ರಿಂದ 18 ವರ್ಷದ ಎಲ್ಲ ಮಕ್ಕಳಿಗೆ ಲಸಿಕೆ ಆಭಿಯಾನ ಆರಂಭ

0

ಕೊರೊನಾದಿಂದ ಮಕ್ಕಳಿಗೆ ರಕ್ಷಣೆ ನೀಡುವ ಮಹತ್ವದ ಕ್ರಮದ ಭಾಗವಾಗಿ ರಾಜ್ಯಾದ್ಯಂತ 15 ರಿಂದ 18 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಲಸಿಕೆ ನೀಡುವ ಅಭಿಯಾನ ಆರಂಭವಾಗಿದೆ.

ರಾಜ್ಯ ಮತ್ತು ದೇಶದಲ್ಲಿ ಕೊರೋನಾ ಪ್ರಕರಣಗಳು ಮತ್ತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಅಭಿಯಾನಕ್ಕೆ ಹೆಚ್ಚಿನ ಮಹತ್ವ ದೊರೆತಿದೆ.

ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಬೆಂಗಳೂರಿನ ಬೈರವೇಶ್ವರ ನಗರದಲ್ಲಿ ಚಾಲನೆ ನೀಡಿದ್ದಾರೆ. ಜಿಲ್ಲಾಮಟ್ಟದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ತಾಲೂಕು ಮಟ್ಟದಲ್ಲಿ ಶಾಸಕರು ಅಭಿಯಾನ ಉದ್ಘಾಟಿಸಲಿದ್ದಾರೆ. ಲಸಿಕೆ ಅಭಿಯಾನಕ್ಕೆ ಎಲ್ಲಕಡೆ ಸಿದ್ದತೆ ನಡೆಸಲಾಗಿದೆ.

ಇಂದು ನಿಗದಿತ ಸ್ಥಳಗಳಲ್ಲಿ ಮಾತ್ರ ಮಕ್ಕಳಿಗೆ ಲಸಿಕೆ ನೀಡಲಾಗುತ್ತದೆ. ಜನವರಿ 4ರಿಂದ ಶಾಲಾ-ಕಾಲೇಜುಗಳಲ್ಲಿ ಲಸಿಕೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಸ್ಥಳೀಯವಾಗಿ ತಾಲೂಕು ಆರೋಗ್ಯ ಅಧಿಕಾರಿಗಳು, ಜಿಲ್ಲಾ ಆರೋಗ್ಯಾಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಲಸಿಕೆ ನೀಡಲಾಗುತ್ತದೆ. ಪ್ರತಿದಿನ 5ರಿಂದ 6 ಲಕ್ಷ ಮಕ್ಕಳಿಗೆ ಲಸಿಕೆ ನೀಡುವ ಗುರಿ ಹಾಕಿಕೊಳ್ಳಲಾಗಿದೆ ಎಂದು ಆರೋಗ್ಯ ಇಲಾಖೆಯ ಆಯುಕ್ತರಾದ ರಂದೀಪ್ ಅವರು ಹೇಳಿದ್ದಾರೆ.

ಹತ್ತು ದಿನಗಳಿಗಾಗುವಷ್ಟು ಲಸಿಕೆ ಲಭ್ಯವಿದೆ. ಮಧ್ಯಂತರದಲ್ಲಿ ಲಸಿಕೆ ಸರಬರಾಜಾಗುತ್ತದೆ. ಇದರಿಂದ ಲಸಿಕೆ ಕೊರತೆ ಉಂಟಾಗುವುದಿಲ್ಲ. 15ರಿಂದ 18 ವರ್ಷದ ಮಕ್ಕಳಿಗೆ ಆದ್ಯತೆ ಮೇರೆಗೆ ಲಸಿಕೆ ನೀಡಲಾಗುತ್ತದೆ ಅವರು ಹೇಳಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಸಂಕ್ಷಿಪ್ತ ಸುದ್ದಿ

0

ಶಾಸಕರಾದ ಹೆಚ್.ಹಾಲಪ್ಪ ನವರು ಇತ್ತಿಚೆಗೆ ಹಲವಾರು ಅಭಿವೃದ್ಧಿಪರ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.

ಕಚ್ಚಿಗೆಬೈಲು ಸ.ಹಿ.ಪ್ರಾ ಶಾಲೆಯಲ್ಲಿ *ಕೇಡಲಸರದ ಕಾಕಾಲ್ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ಆಯೋಜಿಸಿದ್ದ NSS ವಾರ್ಷಿಕ ಶಿಬಿರದ ಸಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿದರು.
ಎಲ್ಲರೂ ಪರಿಸರವನ್ನು ಪ್ರೀತಿಸಬೇಕು. ಪರಿಸರ ಪ್ರೀತಿಯು ಕೇವಲ ಎನ್ಎಸ್ಎಸ್ ನಿಂದ ಮಾತ್ರ ಪಡೆಯಲು ಸಾಧ್ಯ. ನಾನು ಇಂದು ಈ ವೇದಿಕೆ ಮೇಲೆ ನಿಂತು ಮಾತನಾಡಲು ಸಾಧ್ಯವಾಗಿದ್ದು ಕೇವಲ ಎನ್ಎಸ್ಎಸ್ ನಿಂದ ಮಾತ್ರ. ಎನ್ ಎಸ್ ಎಸ್ ಶಿಬಿರವು ನಾಯಕತ್ವ ಗುಣವನ್ನು ವೃದ್ಧಿಸಲು ಸಹಕಾರಿಯಾಗಿದೆ.
ಎಲ್ಲರೂ ಮನುಷ್ಯರಾಗಿ ಬದುಕಿ ಎಂದರು.
ಕಾರ್ಯಕ್ರಮದಲ್ಲಿ ಚುನಾಯಿತ ಪ್ರತಿನಿಧಿಗಳು, ಅಧ್ಯಾಪಕ ವೃಂದದವರು, ಗ್ರಾಮಸ್ಥರು, ಪಕ್ಷದ ವಿವಿಧ ಹಂತದ ಮುಖಂಡರು ಉಪಸ್ಥಿತರಿದ್ದರು.

ಯಡಜಿಗಳೇಮನೆ ಗ್ರಾ.ಪಂ ವರದಹಳ್ಳಿ-ಕಾನುಸರದಿಂದ ಮಧ್ಯಕುಟಿರ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಗ್ರಾ.ಪಂ ಉಪಾಧ್ಯಕ್ಷರು, ಸದಸ್ಯರುಗಳು, ಅಧಿಕಾರಿಗಳು, ಪಕ್ಷದ ಮುಖಂಡರು ಉಪಸ್ಥಿತರಿದ್ದರು.

ಕೋಳೂರು ಗ್ರಾ.ಪಂ ಬಾಳೆಕೊಪ್ಪ ಸಮುದಾಯ ಭವನದಿಂದ ಎಸ್.ಸಿ ಕಾಲೋನಿ ಹೋಗುವ ರಸ್ತೆ ಅಭಿವೃದ್ಧಿ ಕಾಮಗಾರಿ ಪರಿಶೀಲಿಸಿ, ಗ್ರಾಮಸ್ಥರಿಂದ ಅಭಿನಂದನೆ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು, ಪಕ್ಷದ ಮುಖಂಡರು ಉಪಸ್ಥಿತರಿದ್ದರು.

ಯಡಜಿಗಳೇಮನೆ ಗ್ರಾ.ಪಂ ಸಾಗರ-ಬಾಳೆಗೆರೆ ಮುಖ್ಯ ರಸ್ತೆಯಿಂದ ರಾಮನಗದ್ದೆ ಮುಖಾಂತರ ಬಲಿಕೇವಿ ಎಸ್.ಸಿ ಕಾಲೋನಿಗೆ ಸಂಪರ್ಕಿಸುವ 30 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣಗೊಂಡ ರಸ್ತೆ ಕಾಮಗಾರಿ ಪರಿಶೀಲಿಸಿ, ಗ್ರಾಮಸ್ಥರಿಂದ ಸನ್ಮಾನ ಸ್ವೀಕರಿಸಿದರು. ಈ ಸಂದರ್ಭದಲ್ಲಿ
ಗ್ರಾ.ಪಂ ಉಪಾಧ್ಯಕ್ಷರು, ಸದಸ್ಯರುಗಳು, ಪಕ್ಷದ ವಿವಿಧ ಹಂತದ ಮುಖಂಡರು ಉಪಸ್ಥಿತರಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಕೋವಿಡ್ ವಿರುದ್ಧ ಎಲ್ಲರೂ ಲಸಿಕೆ ಪಡೆದುಕೊಳ್ಳಿ – ಬಿ.ಸಿ. ಪಾಟೀಲ

0

ಕೋವಿಡ್ ನಿಂದ ಮಕ್ಕಳಿಗೆ ರಕ್ಷಣೆ ನೀಡುವ, ಕೋರೋನಾ ವಿರುದ್ಧ ಲಸಿಕೆಗಳನ್ನು ಕರ್ನಾಟಕದಾದ್ಯಂತ ಮಹಾಬಿ ಯಾನ ನಡೆಯುತ್ತಿದೆ.

ಮಾನ್ಯ ಮುಖ್ಯಮಂತ್ರಿಗಳ ಸೂಚನೆಯಂತೆ ಕೃಷಿ ಸಚಿವ ಹಾಗೂ ಹಾವೇರಿ‌ ಉಸ್ತುವಾರಿ ಸಚಿವರಾದ ಬಿ.ಸಿ. ಪಾಟೀಲ ಅವರು ವಿಧಾನ ಸಭಾ ಕ್ಷೇತ್ರ ಹಿರೇಕೆರೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 15 ರಿಂದ 18 ವರ್ಷದ ಮಕ್ಕಳಿಗೆ ಕೋವಿಡ್-19 ಲಸಿಕಾಕರಣಕ್ಕೆ ಚಾಲನೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಮಕ್ಕಳಿಗೆ ಕೋವಿಡ್ ಸೋಂಕಿನ ಕುರಿತು ಮಾಹಿತಿಯನ್ನು ತಿಳಿಸಿದರು. ಅಲ್ಲದೇ, ಕೊರೋನಾ ಮಹಾಮಾರಿಯ ವಿರುದ್ಧ ಹೋರಾಡಲು ಎಲ್ಲರೂ ತಪ್ಪದೇ ಕೋವಿಡ್-19 ಲಸಿಕೆಗಳನ್ನು ಪಡೆದುಕೊಳ್ಳಬೇಕೆಂದು ಕರೆ ನೀಡಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಒಮಿಕ್ರಾನ್ ಸೋಂಕು: ಪಶ್ಚಿಮ ಬಂಗಾಳದಲ್ಲಿ ಬಿಗಿ ಕ್ರಮ

0

ಸುಮಾರು 14 ಸಾವಿರ ಸಕ್ರಿಯ ಸೋಂಕಿತರು ವರದಿಯಾಗುವ ಮೂಲಕ ದೇಶದಲ್ಲೇ ಕೊರೊನಾದಿಂದ ಗರಿಷ್ಠ ಬಾಧಿತ ರಾಜ್ಯಗಳಲ್ಲಿ ಒಂದಾಗಿರುವ ಪಶ್ಚಿಮ ಬಂಗಾಳದಲ್ಲಿ ಸೋಮವಾರದಿಂದ ಭಾಗಶಃ ಲಾಕ್ ಡೌನ್ ಜಾರಿಗೊಂಡಿದೆ.
ವಿಶ್ವವಿದ್ಯಾಲಯ ಹಾಗೂ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಸ್ವಿಮ್ಮಿಂಗ್ ಪೂಲ್, ಜಿಮ್, ಸ್ಪಾ, ಬ್ಯೂಟಿ ಸಲೂನ್ ಕೂಡ ಬಂದ್ ಆಗಲಿವೆ. ಸರ್ಕಾರಿ ಮತ್ತು ಖಾಸಗಿ ಕಚೇರಿಗಳಲ್ಲಿ ಶೇ.50ರಷ್ಟು ಸಿಬ್ಬಂದಿ ಹಾಜರಾತಿ ಮಿತಿಗೊಳಿಸಲಾಗಿದೆ.
ಆದಷ್ಟು ವರ್ಕ್ ಫ್ರಮ್ ಹೋಮ್ ಸೌಲಭ್ಯವನ್ನು ಉದ್ಯೋಗಿಗಳಿಗೆ ಎಲ್ಲಾ ಕಂಪನಿಗಳು ನೀಡಬೇಕು. ಸರ್ಕಾರಿ ಕಚೇರಿಗಳಲ್ಲಿ ಆಡಳಿತಕ್ಕೆ ಸಂಬಂಧಿಸಿದ ಸಭೆಗಳನ್ನು ವರ್ಚುವಲ್ ಆಗಿ ನಡೆಸಬೇಕು ಎಂದು ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿ ಎಚ್.ಕೆ. ದ್ವಿವೇದಿ ಆದೇಶ ಹೊರಡಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಓಮಿಕ್ರಾನ್ ಪ್ರಕರಣಗಳೂ ಹೆಚ್ಚುತ್ತಿದ್ದು, ನಿತ್ಯದ ಹೊಸ ಪ್ರಕರಣಗಳ ಸಂಖ್ಯೆ 6 ಸಾವಿರದ ಗಡಿ ದಾಟಿದೆ ಎನ್ನಲಾಗುತ್ತಿದೆ.
ಇವೆಲ್ಲದರ ಜೊತೆಗೆ ಇಡೀ ರಾಜ್ಯದಲ್ಲಿ 10ರಿಂದ ಮುಂಜಾನೆ ಐದರವರೆಗೆ ನೈಟ್ ಕರ್ಫ್ಯೂ ಜಾರಿಗೊಳಿಸಲಾಗಿದೆ. ಈ ಎಲ್ಲಾ ನಿರ್ಬಂಧಗಳು ಜ.15ರವರೆಗೆ ಮುಂದುವರಿಯಲಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ನಾಡಿನ ಪ್ರಮುಖ ಸಾಂಸ್ಕೃತಿಕ ತಾಣಗಳ ಗ್ರಂಥ ಸರಣಿ- ಸೀ.ಎಂ.

0

ಸಾಂಸ್ಕೃತಿಕವಾಗಿ, ಚಾರಿತ್ರಿಕವಾಗಿ ಮಹತ್ವ ಪಡೆದಿರುವ ಧಾರವಾಡ ಸೇರಿದಂತೆ ಹಲವು ಪ್ರಮುಖ ಸ್ಥಳಗಳ ಕುರಿತು ಗ್ರಂಥಗಳ ಸರಣಿ ಪ್ರಕಟಿಸುವ ಯೋಜನೆಯನ್ನು ರೂಪಿಸಿ ಮುಂಬರುವ ಬಜೆಟ್ ನಲ್ಲಿ ಹಣ ಮೀಸಲಿಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ.

ಚನ್ನವೀರ ಗೌಡ ಅಣ್ಣಾ ಪಾಟೀಲ ಸಂಸ್ಮರಣಾ ದತ್ತಿ ಹಾಗೂ ಟ್ರಸ್ಟ್ ಉದ್ಘಾಟನೆ ನೆರವೇರಿಸಿ ಮುಖ್ಯಮಂತ್ರಿಗಳು ಮಾತನಾಡುತ್ತಿದ್ದರು. ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ನಾಡೋಜ ಪಾಟೀಲ್ ಪುಟ್ಟಪ್ಪ ಸಭಾಂಗಣದಲ್ಲಿ ಕಾರ್ಯಕ್ರಮವನ್ನ ಆಯೋಜಿಸಲಾಗಿತ್ತು.

ಕರ್ನಾಟಕ ವಿದ್ಯಾವರ್ಧಕ ಸಂಘಕ್ಕೆ ಅಗತ್ಯವಿರುವ ಅನುದಾನ, ನಿವೇಶನ ಮತ್ತಿತರ ಬೇಡಿಕೆಗಳಿಗೆ ಸರ್ಕಾರ ಸಕಾರಾತ್ಮಕವಾಗಿ ಬೆಂಬಲಿಸಲಿದೆ. ನಾಡೋಜ ಪಾಟೀಲ ಪುಟ್ಟಪ್ಪ ನವರು ಸುಮಾರು 52 ವರ್ಷ ಸುದೀರ್ಘ ಅವಧಿಗೆ ಅಧ್ಯಕ್ಷರಾಗಿ ಹೋರಾಟ ಮಾಡಿದ್ದಾರೆ. ಅವರ ಸಾಧನೆಯನ್ನು ಗೌರವಿಸಲು ಸರ್ಕಾರ ರಾಣೆಬೆನ್ನೂರು ತಾಲೂಕಿನ ಹಲಗೇರಿಯಲ್ಲಿ ಸ್ಮಾರಕ ನಿರ್ಮಿಸಲಿದೆ. ಹಿರಿಯರನ್ನ ಸ್ಮರಿಸುವುದು ಸ್ಪೂರ್ತಿದಾಯಕ ವಾಗಿರುತ್ತದೆ ಎಂದು ಬಸವರಾಜ ಬೊಮ್ಮಾಯಿ ಅವರು ಹೇಳಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಗೆಲುವಿನ ಅಲೆಯಲ್ಲಿ ತೆಲುವುದೆ ಭಾರತ

0

ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಏಕದಿನ ಸರಣಿಯ ಮೊದಲ ಟೆಸ್ಟ್ ಈಚೇಗಷ್ಟೇ ನಡೆದಿದ್ದು ದಕ್ಷಿಣಾ ಆಫ್ರಿಕಾ ವಿರುದ್ಧ ಭಾರತ ರೋಚಕ ಜಯ ಸಾಧಿಸಿದೆ.
ಇಂದಿನಿಂದ ವಾಂಡರರ್ಸ್ ಕ್ರೀಡಾಂಗಣದಲ್ಲಿ ಎರೆಡನೇ ಟೆಸ್ಟ್ ಆರಂಭವಾಗಲಿದೆ.
ಮೊದಲ ಟೆಸ್ಟ್ ನಲ್ಲಿ 113 ರನ್ ಗಳಿಂದ ಗೆದ್ದು ಬೀಗಿದ ಭಾರತ ತಂಡ ಎರೆಡನೇ ಟೆಸ್ಟ್ ಆಡಲು ಸಿದ್ಧವಾಗಿದೆ. ಈ ಟೆಸ್ಟ್ ನಲ್ಲಿ ಜಯಿಸಿದರೆ,ಇತಿಹಾಸ ದಾಖಲಾಗಲಿದೆ.1992 ರಿಂದ ಇಲ್ಲಿಯವರೆಗೆ ಪ್ರವಾಸ ಮಾಡಿರುವ ಭಾರತ ತಂಡವು ಇಲ್ಲಿ ಟೆಸ್ಟ್ ಸರಣಿಯ ಯಾವುದೇ ಪಂದ್ಯಗಳಲ್ಲಿ ಗೆರುವು ಕಂಡಿಲ್ಲ.
ಆದರೆ, ಆಸ್ಟ್ರೇಲಿಯಾ,ಇಂಗ್ಲೆಂಡ್,ಜಯ ಭೇರಿಯ ನಂತರ ದಕ್ಷಿಣ ಆಫ್ರಿಕಾದಲ್ಲಿಯೂ ಸರಣಿ ಗೆದ್ದ ತಂಡ ಎಂಬ ಕೀರ್ತಿಗೆ ಭಾಜನವಾಗುತ್ತದೆ.
ಭಾರತ ತಂಡದ ಬ್ಯಾಟಿಂಗ್ ವಿಭಾಗದಲ್ಲಿಯೂ ಕೆಲವು ಬದಲಾವಣೆಗಳಾಗುವ ಸಾಧ್ಯತೆಗಳಿವೆ. ಬ್ಯಾಟಿಂಗ್ ಲಯ ಕಂಡುಕೊಳ್ಳುವಲ್ಲಿ ವಿಫಲರಾದ ಅಜಿಂಕ್ಯ ರಹಾನೆ ಮತ್ತು ಚೇತೇಶ್ವರ ಪೂಜಾರ ಬದಲಿಗೆ ಹನುಮವಿಹಾರಿ ಹಾಗೂ ಶ್ರೇಯಸ್ ಅಯ್ಯರ್ ಆಡಬಹುದು.ರಿಷಬ್ ಪಂತ್ ಬ್ಯಾಟಿಂಗ್ ನಲ್ಲಿ ಉತ್ತಮ ಕಾಣಿಕೆ ನೀಡುತ್ತಿಲ್ಲ.ಆದರೂ, ಈ ಪಂದ್ಯದಲ್ಲಿ ಅವರು ಮತ್ತೊಂದು ಅವಕಾಶ ಪಡೆಯಬಹುದು.ಬೌಲಿಂಗ್ ವಿಭಾಗದಲ್ಲಿ ಹೆಚ್ಚಿನ ಬದಲಾವಣೆ ಆಗಲಿಕ್ಕಿಲ್ಲ. ವಾಂಡರರ್ಸ್ ನಲ್ಲಿ ಈ ಹಿಂದೆ ಭಾರತವು ಆಡಿದ ಯಾವುದೇ ಟೆಸ್ಟ್ ಪಂದ್ಯಗಳಲ್ಲಿ ಸೋಲು ಕಂಡಿಲ್ಲ.
ಈಚೆಗೆ ಸೆಂಚುರಿಯನ್ ನಲ್ಲಿ ಬಾಕ್ಸಿಂಗ್ ಡೇ ಟೆಸ್ಟ್ ನಲ್ಲಿ ಏಷ್ಯಾದ ಮೊದಲ ಜಯ ಸಾಧಿಸಿದ ತಂಡವೆಂಬ “ಹೆಗ್ಗಳಿಕೆಗೆ” ಭಾರತ ಪಾತ್ರವಾಗುತ್ತದೆ.
ಈಗಿನ ದಕ್ಷಿಣ ಆಫ್ರಿಕಾ ತಂಡವು ಮೊದಲಿನಂತೆ ಬಲಿಷ್ಠವಾಗಿ ಉಳಿದಿಲ್ಲ.ಆದ್ದರಿಂದ ಭಾರತವೇ ಈ ಪಂದ್ಯದಲ್ಲಿ ಗೆಲ್ಲುವ ಆತ್ಮವಿಶ್ವಾಸದ ತಂಡವಾಗಿ ಅಂಕಣಕ್ಕಿಳಿದು ಪಂದ್ಯ ಆಡುತ್ತಿದೆ

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಹೆಡ್ ಮೇಡಮ್ ಅಂದ್ರೆ ಹೆಡ್ ಮೇಡಮ್

0

ಹೆಡ್ ಮೇಡಮ್ ಅಂದ್ರೆ ಹೆಡ್ ಮೇಡಮ್
ಬರ್ತಾ ಇದ್ರೆ ಗೇಟ್‌ನಲ್ಲೇ ಢಂ ಢಮಾರ್ ಢಮ್
ಬಲೂನೆಲ್ಲಾ ತಮ್ಮಷ್ಟಕ್ಕೆ ಒಡದ್ಹೋಗತ್ವೆ ಏಕ್‌ದಮ್
ಮೇಡಮ್ ಬರೋವರ್ಗೆ ಮಾತ್ರ ಹಾರಾಡಿಕೊಂಡಿರೋಕೆ ಫ್ರೀಡಮ್

ಯಾವ ಜಾದೂಗಾರನಿಂದ ಕೊಂಡು ತಂದ್ರೋ ಇದನ್ನ
ಮೇಡಮ್ಮೇ ಹಚ್ಚಿದ್ದಿದು ವನ ಮಹೋತ್ಸವದ ದಿನ
ಹೂವು ಹಣ್ಣು ಏನೂ ಇಲ್ಲ ಬಲೂನ್ ಬರಿ ಬಲೂನ್
ಬಣ್ಣ ಬಣ್ಣದ ದುಂಡನೆ ಉದ್ದನೆ ನಾನಾ ಸೈಜಿನ ಬಲೂನ್

ಅವರ ಬರೋವಾಗ ಅನಬೇಕಂತೆ ಢಮ್ಮಾರೆ ಢಮ್ ಢಮ್
ತಿಳಿದ್ಹೋಗ್ಬೇಕಂತೆ ಎಲ್ರಿಗೂ ಬಂದ್ರು ಮೇಡಮ್ ಮೇಡಮ್
ಎಲ್ಲಿದ್ರೂ ಅಲ್ಲೇ ಸುಮ್ನೆ ನಿಂತಬಿಡಬೇಕಂತೆ ಹಾಂ
ಸೆಲ್ಯೂಟ್ ಮಾಡಬೇಕಂತೆ ನಿಂತನಿಂತಲ್ಲೇ ಹೂಂ

ಮೇಡಮ್ ಆರ್ಡರ್ ಮಾಡಿದ ಹಾಗೇ ನಡಕೊಳ್ಳತ್ತೆ ಮರಾನೂ
ನಮ್ ಹಾಗೆ ಅದು ಅದು ಸೌಂಡ್ ಮಾಡಿಕೊಂಡು ದಿನಾನೂ !
ಬೇಜರಾದ್ರೂ ಬಲೂನಗೆಲ್ಲಾ ಕೇಳ್ತಾ ಇಲ್ಲ ದೇವರೂನೂ
ಹುಟ್ಟೋದೇ ಸಾಯೋಕಾ ? ಅಂತ ಅನಕೊಂಡು ಊಂ ಊಂ
ಢಮ್ ಢಮ್ ಢೂಮ್ !

ಅಳ್ಳಿಗೊಂಬಿ

ಅಟ್ಟದ ಮ್ಯಾಲಿಂದ
ಬುಟ್ಟೀಯ ಒಳಗಿಂದ
ಹ್ಯಾಂಗರ ಬಂದವಿವು
ಜಾದೂ ಮಾಡಿದ ಹಂಗ
ಚಿಂವ್ ಚಿಂವ್ ಚಿಂವ್ ಚಿಂವ್
ಅಳ್ಳೀಗೊಂಬಿ ಹಾಂಗ
ಪಿಳಿ ಪಿಳಿ ಕಣ್ಣು
ಕನಡಿ ಹಳ್ಳಿನ ಹಾಂಗ
ಈಟೀಟ ಮರಿ ಇವು
ಸುತ್ಹರಿತಾವ
ಮುಟ್ಟಾಕ ಭಯಾ ಅಯ್ಯ
ಮ್ಯಾಗ ಬರತಾವ !

ಡಾ.ಆನಂದ ಪಾಟೀಲ
ಪರಿಚಯ:
ಆಕಾಶವಾಣಿಯಲ್ಲಿ 30 ವರ್ಷಗಳ ಸೇವೆ. ಮಕ್ಕಳ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ. ಇದುವರೆಗೆ ಮಕ್ಕಳಿಗಾಗಿ ಕವಿತೆಗಳ 8 ಕೃತಿಗಳು, ಗದ್ಯ-ಕಥೆಯ 7 ಸಂಕಲನಗಳು, 4 ನಾಲ್ಕು ಕಾದಂಬರಿಗಳು, ಅಲ್ಲದೆ 6 ಅನುವಾದಗಳು ಬಂದಿವೆ. ಮಕ್ಕಳ ಸಾಹಿತ್ಯದ ಅಧ್ಯಯನದಲ್ಲಿ ಒಂದು ಕೃತಿ ಮುದ್ರಣದಲ್ಲಿರುವುದು ಸೇರಿ 8 ಕೃತಿಗಳು, ಇಂಗ್ಲೀಷಿನಲ್ಲಿ 1, ಮಕ್ಕಳಿಗಾಗಿ ನಾಟಕ ಸಂಕಲನ 1. ಇದಲ್ಲದೆ ಮಕ್ಕಳ ಸಾಹಿತ್ಯದ ಅಧ್ಯಯನ, ವಿಮರ್ಶೆಗಾಗಿ ‘children’s Literature : A sear Love’ ಹಾಗೂ ‘ಮಕ್ಕಳ ಸಾಹಿತ್ಯ: ಓದು ಒಲವು’ ಎನ್ನುವ ಅಂತರ್ಜಾಲ ಪತ್ರಿಕೆಗಳನ್ನು ತರುತ್ತಿರುವುದು. ರಾಜ್ಯ ಹಾಗೂ ರಾಷ್ಟçಮಟ್ಟದ ಹಲವು ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿರುವುದು, ಮಕ್ಕಳ ಸಾಹಿತ್ಯ ಕುರಿತು ಅನೇಕ ವಿಚಾರ ಸಂಕಿರಣ, ಮಾತುಕತೆ, ಚರ್ಚೆಗಳನ್ನು ನಡೆಸುತ್ತಿರುವುದು, ಹಾಗೆಯೇ ಶಾಲೆಗಳಿಗೆ ಭೇಟಿ ನೀಡುತ್ತ ಮಕ್ಕಳ ನಡುವೆ ಸಾಹಿತ್ಯದ ಸಮಯ ಏರ್ಪಡಿಸುತ್ತಿರುವುದು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಜಿನೋಮ್ ಸಿಕ್ವೆನ್ಸಿಂಗ್ : ಪ್ರತೀ ವಿಭಾಗದಲ್ಲಿ ಲ್ಯಾಬ್

0

ಕೊರೋನಾ ರೂಪಾಂತರ ತಳಿ ಓಮಿಕ್ರಾನ್ ಸೋಂಕು ರಾಜ್ಯದಲ್ಲಿ ತೀವ್ರಗತಿಯಲ್ಲಿ ಹರಡುತ್ತಿದೆ. ಆದರೆ ದೃಢೀಕರಿಸುವ ಜಿನೋಮ್ ಸಿಕ್ವೆನ್ಸಿಂಗ್ ಪರೀಕ್ಷೆಯ ವರದಿ ವಿಳಂಬವಾಗುತ್ತಿದೆ. ಸೋಂಕು ನಿಯಂತ್ರಣಕ್ಕೆ ಇದು ಅಡ್ಡಿ ಉಂಟಾಗುತ್ತದೆ ಎಂಬ ಆತಂಕ ಸೃಷ್ಟಿಯಾಗಿದೆ.

ಓಮಿಕ್ರಾನ್ ತೀವ್ರವಾಗಿ ಹರಡುವ ಗುಣ ಹೊಂದಿದೆ ಎಂಬುದು ತಜ್ಞರು ಸ್ಪಷ್ಟಪಡಿಸಿದ್ದಾರೆ. ಆದ್ದರಿಂದ ಸೋಂಕಿತ ವ್ಯಕ್ತಿಗಳು ಸಾರ್ವಜನಿಕ ಸಂಪರ್ಕವನ್ನು ಸಂಪೂರ್ಣ ನಿಲ್ಲಿಸಲು ನಿರ್ದೇಶಿಸಲಾಗಿದೆ. ಕೊರೋನಾ ಧೃಡಪಟ್ಟ ಎಲ್ಲರ ಮಾದರಿಗಳನ್ನು ಜಿನೋಮ್ ಸಿಕ್ವೆನ್ಸಿಂಗ್ ಪರೀಕ್ಷೆಗೆ ರಾಜ್ಯದಲ್ಲಿ ಲ್ಯಾಬ್ ಗಳ ಕೊರತೆ ಕಾಣಿಸಿಕೊಂಡಿದೆ. ಒಬ್ಬ ರೋಗಿಯ ವರದಿ ಬರಲು ಎಂಟರಿಂದ ಹತ್ತು ದಿನಗಳು ಕಾಯುವ ಅನಿವಾರ್ಯತೆ ಎದುರಾಗಿದೆ. ಕೆಲ ಪ್ರಕರಣಗಳಲ್ಲಿ 19 ದಿನಗಳ ನಂತರ ವರದಿ ಬಂದಿರುವ ನಿದರ್ಶನ ಗಳಿವೆ.

ಜೀನೊಮ್ ಸಿಕ್ವೆನ್ಸಿಂಗ್ ಮಾದರಿಗಳನ್ನು ಪರೀಕ್ಷಿಸುವ ಅನಿವಾರ್ಯತೆ ಎದುರಾಗಿ ಒತ್ತಡ ಹೆಚ್ಚಾಗುತ್ತಿದೆ. ಆದ್ದರಿಂದ ಪ್ರತಿ ವಿಭಾಗದಲ್ಲಿ ಒಂದು ಲ್ಯಾಬ್ ಆರಂಭಿಸಲು ಸಜ್ಜುಗೊಳಿಸಲಾಗಿದೆ. ಇದಕ್ಕೆ ಸರ್ಕಾರ ಅನುಮತಿ ಒಂದೇ ಬಾಕಿ ಇದೆ ಎಂದು ಆರೋಗ್ಯ ಇಲಾಖೆ ಆಯುಕ್ತರಾದ ಡಿ. ರಂದೀಪ್ ಅವರು ಹೇಳಿದ್ದಾರೆ.

ರಾಜ್ಯದಲ್ಲಿ ಎರಡು ಲ್ಯಾಬ್ ಗಳಲ್ಲಿ ಮಾತ್ರ ಈ ಪರೀಕ್ಷೆ ನಡೆಸಲಾಗುತ್ತಿದೆ. ಕಳೆದ ಡಿಸೆಂಬರ್ ತಿಂಗಳಿನಲ್ಲಿ 10,035 ಕೊರೋನಾ ಪಾಸಿಟಿವ್ ದೃಡಪಟ್ಟಿದೆ.3 ಸಾವಿರ ಜನರ ಮಾದರಿಗಳಿಗೆ ಜಿನೋಮ್ ಸಿಕ್ವೆನ್ಸಿಂಗ್ ಪರೀಕ್ಷೆ ನಡೆಸಿ ವರದಿ ನೀಡಲಾಗಿದೆ. ಉಳಿದ ಏಳು ಸಾವಿರದಷ್ಟು ಜನರಿಗೆ ಈ ಪರೀಕ್ಷೆಯನ್ನೇ ನಡೆಸಿಲ್ಲ.

ದಕ್ಷಿಣ ಆಫ್ರಿಕಾದಲ್ಲಿ ಪ್ರಥಮ ಪತ್ತೆಯಾದ ರೂಪಾಂತರಿ ಓಮಿಕ್ರಾನ್ ಆರಂಭಿಕವಾಗಿ ವಿದೇಶದಿಂದ ಬಂದವರಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿತ್ತು. ಆದರೆ ಈಗ 43 ಪ್ರಕರಣಗಳಲ್ಲಿ ವಿದೇಶ ಪ್ರಯಾಣ ಮಾಡದ ವರಲ್ಲಿ,ಹಾಗೂ ಸೋಂಕಿತರ ಸಂಪರ್ಕಕ್ಕೆ ಹೋಗದ ಕೆಲವರಲ್ಲಿ ಸೋಂಕು ದೃಢಪಟ್ಟಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಜಕಣಾಚಾರಿ ಶಿಲ್ಪಕಲೆಯಿಂದ ಅಮರ ಶಿಲ್ಪಿಯಾಗಿ ಪ್ರಸಿದ್ದಿ

0

ಶಿಲ್ಪಕಲೆಗೆ ಮತ್ತೊಂದು ಹೆಸರೇ ಜಕಣಾಚಾರಿ. ಆದ್ದರಿಂದ ನಾಡಿನ ಪಾಲಿಗೆ ಅವರು ಅಮರಶಿಲ್ಪಿಯಾಗಿ ಉಳಿದಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ಹೇಳಿದರು.

ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ನೆಡೆಯಿತು. ಈ ಕಾರ್ಯಕ್ರಮದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ. ಎಸ್. ಈಶ್ವರಪ್ಪ ಅವರು ಜಕಣಾಚಾರಿ ಅವರನ್ನು ಕುರಿತು ಮಾತನಾಡುತ್ತಿದ್ದರು.

ಬೇಲೂರು, ಹಳೇಬೀಡು, ಶೃಂಗೇರಿ ಸೇರಿದಂತೆ ಹಲವಾರು ಕಡೆ ಕೆತ್ತಿರುವ ಶಿಲ್ಪಕಲೆಗಳು ಅವರ ಕಲೆಯ ಶ್ರೀಮಂತಿಕೆಯನ್ನು ಸಾರುತ್ತವೆ. ಜೀವನವನ್ನೇ ಕಲೆಗಾಗಿ ಮುಡಿಪಿಟ್ಟ ಅವರ ಬದುಕು ಇಂದಿನ ಶಿಲ್ಪಿಗಳಿಗೆ ಮಾರ್ಗದರ್ಶನವಾಗಿದೆ ಎಂದು ಸಚಿವರು ಹೇಳಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್. ರುದ್ರೇಗೌಡ, ಜಿಲ್ಲಾ ವಿಶ್ವಕರ್ಮ ಮಹಾಸಭಾ ಅಧ್ಯಕ್ಷ ನಿರಂಜನಮೂರ್ತಿ ಆಗರದಳ್ಳಿ,ಜಿ. ಪಂ. ಮಾಜಿ ಸದಸ್ಯ ಕಾಂತೇಶ್ ಇನ್ನು ಮುಂತಾದವರು ಹಾಜರಿದ್ದರು.