Thursday, February 12, 2026
Thursday, February 12, 2026
Home Blog Page 1792

ಮೆಡಿಕ್ಲೈಮ್ ಪ್ರಕರಣ: ಪಾಲಿಸಿದಾರರ ಪರ ಸುಪ್ರೀಂ ಆದೇಶ

0

ವಿಮೆ ಕಂಪನಿಗಳು ಪಾಲಿಸಿದಾರರಿಗೆ ಪ್ರಸ್ತುತ ಇರುವ ಕಾಯಿಲೆಗೆ ವೈದ್ಯಕೀಯ ವೆಚ್ಚ ಬಾರಿಸುವುದಕ್ಕೆ ಸಂಬಂಧಿಸಿದ ಮೆಡಿಕ್ಲೇಮ್ ಅನ್ನು ನಿರಾಕರಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ.

ಯಾವುದೇ ವಿಮೆ ಕಂಪನಿಯು ಪಾಲಿಸಿದಾರರಿಗೆ ಒಪ್ಪಂದಕ್ಕೆ ಸಹಿ ಹಾಕುವ ಸಂದರ್ಭ ವಿಧಿಸಿದ ಷರತ್ತು ಅಥವಾ ನಿಬಂಧನೆ ಗಳಲ್ಲಿ ವಿವರಿಸಿದ ನಿರ್ದಿಷ್ಟ ವೈದ್ಯಕೀಯ ಪರಿಸ್ಥಿತಿಗೆ ಹೊರತುಪಡಿಸಿ ಉಳಿದ ಕಾಯಿಲೆಗೆ ಮೆಡಿಕ್ಲೇಮ್ ಅನ್ನು ತಿರಸ್ಕರಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.

ನ್ಯಾಯಮೂರ್ತಿ ಚಂದ್ರಚೂಡ್ ಹಾಗೂ ನಾಗರತ್ನ ಅವರನ್ನು ಒಳಗೊಂಡ ಪೀಠದಲ್ಲಿ ಈ ಆದೇಶ ಹೊರಡಿಸಿದೆ. ಮನಮೋಹನ್ ನಂದ ಎಂಬುವರು ಅಮೆರಿಕಕ್ಕೆ ಪ್ರಯಾಣ ಮಾಡುವ ಮುಂಚೆ ಓವರ್ ಸೀಸ್ ಮೆಡಿಕ್ಲೇಮ್ ಬಿಸಿನೆಸ್ ಅಂಡ್ ಹಾಲಿಡೇ ಪಾಲಿಸಿಯನ್ನು ಖರೀದಿಸಿದ್ದರು. ಅಮೆರಿಕಕ್ಕೆ ಬಂದ ನಂತರ ಹೃದಯಾಘಾತವಾಗಿ ಚಿಕಿತ್ಸೆ ಪಡೆದಿದ್ದರು. ಚಿಕಿತ್ಸೆ ವೆಚ್ಚವನ್ನು ಭರಿಸಲು ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ ಒಪ್ಪಿರಲಿಲ್ಲ. ಆರೋಗ್ಯ ಪರಿಸ್ಥಿತಿಯನ್ನು ಮೊದಲೇ ತಿಳಿಸಿರಲಿಲ್ಲ ಎಂಬ ಕಾರಣ ಮುಂದಿಟ್ಟಿತ್ತು.

ಮೆಡಿಕ್ಲೇಮ್ ಪಾಲಿಸಿ ಉದ್ದೇಶವು ಅನಾರೋಗ್ಯ ಒಳಗಾದ ಸಂದರ್ಭದಲ್ಲಿ ವಿಮೆ ಪರಿಹಾರ ಪಡೆಯಬಹುದಾಗಿದೆ. ಅನಾರೋಗ್ಯವು ಅನಿರೀಕ್ಷಿತವಾಗಿ, ವಿದೇಶದಲ್ಲಿ ಆದರೂ ಬರಬಹುದು. ಅನಿರೀಕ್ಷಿತವಾಗಿ ಅನಾರೋಗ್ಯ ವಾದರೆ ಪರಿಹಾರದಿಂದ ಹೊರಗಿಡಲಾಗುವುದು ಎಂಬ ಅಂಶವು ಪಾಲಿಸಿಯಲ್ಲಿ ಇಲ್ಲ ಎಂದು ಸುಪ್ರೀಂಕೋರ್ಟ್ ಪ್ರತಿಪಾದಿಸಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಸಿ ಎಂ ಬೊಮ್ಮಾಯಿ ಸಂಪುಟಕ್ಕೆ ಸರ್ಜರಿ?

0

ಮುಂದಿನ ವಿಧಾನಸಭೆ ಚುನಾವಣೆಯನ್ನು ಗುರಿಯಾಗಿಸಿಕೊಂಡು ಎಲೆಕ್ಷನ್ ಕ್ಯಾಬಿನೆಟ್ ರಚಿಸಲು ಬಿಜೆಪಿ ಹೈಕಮಾಂಡ್ ನಿರ್ಧರಿಸಿದೆ.
ಅದರಂತೆ ಹೊಸವರ್ಷ ಆರಂಭದಲ್ಲೇ ಸಿಎಂ ಬಸವರಾಜ ಬೊಮ್ಮಾಯಿ ಸಂಪುಟಕ್ಕೆ ಮೇಜರ್ ಸರ್ಜರಿಯಾಗುವುದು ಖಚಿತವಾಗಿದೆ.
ಹುಬ್ಬಳ್ಳಿ ಕಾರ್ಯಕಾರಿಣಿಯ ನೇಪಥ್ಯದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಸೇರಿದಂತೆ ಪಕ್ಷದ ಹಿರಿಯರೊಂದಿಗೆ ಮಾತುಕತೆ ನಡೆಸಿರುವ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಈ ಸುಳಿವು ನೀಡಿದ್ದಾರೆ.
ನಾಯಕತ್ವದ ಬಗ್ಗೆ ಎದ್ದಿದ್ದ ವದಂತಿಗೆ ಈಗಾಗಲೇ ತೆರೆ ಎಳೆಯಲಾಗಿದೆ. ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಜನಪರ ಆಡಳಿತ ನಡೆಸುವಂತೆ ಸಿಎಂ ಬೊಮ್ಮಾಯಿ ಅವರಿಗೂ ಸೂಚನೆ ನೀಡಲಾಗಿದೆ.
ಇದರೊಂದಿಗೆ 2023ರ ಚುನಾವಣೆಯನ್ನು ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿದೆ. ಅದಕ್ಕೆ ಪೂರಕವಾದ ಸಂಪುಟ ರಚಿಸಿ ಚುನಾವಣೆ ಸಿದ್ಧತೆಗೆ ಉತ್ಸಾಹ ತುಂಬಲಾಗುತ್ತದೆ ಎಂಬ ಸಂದೇಶ ರವಾನೆಯಾದಂತಾಗಿದೆ.
ಮಾಜಿ ಸಿಎಂ ಯಡಿಯೂರಪ್ಪ ಅವರ ಪುತ್ರ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಸಂಪುಟಕ್ಕೆ ಸೇರ್ಪಡೆಗೊಳಿಸಲು ಹೈಕಮಾಂಡ್ ತೀರ್ಮಾನಿಸಿದೆ. ವಿಜಯೇಂದ್ರ ಅವರಿಗೆ ರಾಜ್ಯಾದ್ಯಂತ ಜನಪ್ರಿಯತೆ ಇದೆ. ಅವರು ಹೋದ ಕಡೆಯಲ್ಲೆಲ್ಲ ದೊಡ್ಡ ಸಂಖ್ಯೆಯಲ್ಲಿ ಜನ ಸೇರುತ್ತಾರೆ. ವಿಜಯೇಂದ್ರ ಅವರಲ್ಲಿರುವ ಈ ನಾಯಕತ್ವದ ಗುಣವನ್ನು ವರಿಷ್ಠರು ಗುರುತಿಸಿದ್ದಾರೆ. ಈ ಮೂಲಕ ಬಿಎಸ್ ವೈ ರಾಜೀನಾಮೆ ಬಳಿಕ ಅವರ ಕುಟುಂಬದ ಸದಸ್ಯರಿಗೆ ಮಹತ್ವದ ಜವಾಬ್ದಾರಿ ನೀಡಿದಂತಾಗುತ್ತದೆ. ಬಿಎಸ್ ವೈ ಅವರನ್ನು ಕಡೆಗಣಿಸಿಲ್ಲ ಎಂಬ ಸಂದೇಶವೂ ರವಾನೆಯಾಗಲಿದೆ ಎನ್ನುವುದು ವರಿಷ್ಠರ ಆಲೋಚನೆ ಎನ್ನಲಾಗಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಮೊದಲು ಮಾನವರಾಗಬೇಕು

0

ನಾವೆಲ್ಲರೂ ಜಾತಿ, ಧರ್ಮ, ಗುಂಪು, ವರ್ಣ ವೆಂಬ ಸಂಕುಚಿತ ದೃಷ್ಟಿಕೋನವನ್ನು ತೊರೆದು ವಿಶ್ವಮಾನವ ರಾಗಬೇಕು ಎಂದು ಪಿಇಎಸ್ ಪದವಿ ಪೂರ್ವ ವಿಭಾಗದ ಉಪ ಪ್ರಾಂಶುಪಾಲರಾದ ಭುವನೇಶ್ವರಿ ಅವರು ಹೇಳಿದ್ದಾರೆ.

ಶಿವಮೊಗ್ಗದ ಪಿಇಎಸ್ ಪಬ್ಲಿಕ್ ಶಾಲೆ ಆವರಣದಲ್ಲಿ ನಡೆದ ವಿಶ್ವ ಮಾನವ ದಿನಾಚರಣೆಯಲ್ಲಿ ಅವರು ಮಾತನಾಡುತ್ತಿದ್ದರು.

“ಅಂಧಶ್ರದ್ಧೆಯನ್ನು ಬೇರುಸಹಿತ ಕಿತ್ತೊಗೆದು ವೈಜ್ಞಾನಿಕ ದೃಷ್ಟಿಕೋನವನ್ನು ಬೆಳೆಸಿಕೊಂಡಾಗ ಮಾತ್ರ ಪ್ರತಿಯೊಂದು ಆಚರಣೆಯು ಸಾರ್ಥಕವಾಗುತ್ತದೆ. ನಾವು ನೋಡುವ ದೃಷ್ಟಿಕೋನ ಬದಲಾಗಬೇಕು. ವ್ಯಕ್ತಿಯನ್ನು ವ್ಯಕ್ತಿಯನ್ನಾಗಿಯೇ ನೋಡಬೇಕೇ ಹೊರತು, ಅವನನ್ನು ಯಾವುದೇ ಚೌಕಟ್ಟಿನಿಂದ ಗುರುತಿಸಬಾರದು. ದಾರ್ಶನಿಕರು, ಕವಿಗಳ ಕಾವ್ಯಗಳು ತಿಳಿಸಿರುವುದು ಇದನ್ನೇ.

ನಾವೆಲ್ಲರೂ ಮೊದಲು ಮಾನವ ರಾಗಬೇಕು. ಸಂಕುಚಿತ ಮನೋಭಾವನೆಯಿಂದ ಹೊರಬಂದಾಗ ಮಾತ್ರ ಪ್ರತಿಯೊಬ್ಬ ವ್ಯಕ್ತಿಯೂ ವಿಶ್ವಮಾನವನಾಗಲು ಸಾಧ್ಯ ಎಂದು ಭುವನೇಶ್ವರಿ ಅವರು ಹೇಳಿದರು.

ಈ ಸಂದರ್ಭದಲ್ಲಿ ಶಾಲೆಯ ಪ್ರಾಂಶುಪಾಲರು, ಸಂಯೋಜಕರು, ಶಿಕ್ಷಕ ವೃಂದದವರು, ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ರಂಗಾಯಣ ರಂಗಚಟುವಟಿಕೆ ಕಾರ್ಯರೂಪಕ್ಕೆ- ಸಂದೇಶ್ ಜವಳಿ

0

ವಿದ್ಯಾರ್ಥಿಗಳಿಗೆ ಶಾಸ್ತ್ರ ಮತ್ತು ಪ್ರಯೋಗ ಪತ್ರಿಕೆಗಳು ಅರ್ಥವಾಗುವ ಹಾಗೆ ಪರೀಕ್ಷೆಗೆ ಪೂರಕವಾಗಿ ಪಠ್ಯಪುಸ್ತಕವನ್ನು ರೂಪಿಸಿರುವುದು ಅಧ್ಯಯನಕ್ಕೆ ಸಹಕಾರಿಯಾಗಲಿದೆ ಎಂದು ರಂಗಾಯಣದ ನಿರ್ದೇಶಕ ಸಂದೇಶ್ ಜವಳಿ ಅವರು ಹೇಳಿದ್ದಾರೆ.

ಶಿವಮೊಗ್ಗದ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ರಂಗಾಯಣ, ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು ವತಿಯಿಂದ ,ಇತ್ತೀಚಿಗೆ ಹಮ್ಮಿಕೊಂಡಿದ್ದ 3ತಿಂಗಳ ರಂಗಶಿಕ್ಷಣ ಸರ್ಟಿಫಿಕೇಟ್ ಕೋರ್ಸ್ ಪಠ್ಯ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡುತ್ತಿದ್ದರು.

“ವಿದ್ಯಾರ್ಥಿಗಳನ್ನು ಕೇಂದ್ರವಾಗಿಟ್ಟುಕೊಂಡು ಶಿವಮೊಗ್ಗ ರಂಗಾಯಣ ಹಲವಾರು ಚಟುವಟಿಕೆಗಳನ್ನು ಕಾರ್ಯರೂಪಗೊಳಿಸಿದೆ. ಅದರಲ್ಲಿ ಬಹುಮುಖ್ಯವಾಗಿ ಮೂರು ತಿಂಗಳ ಸರ್ಟಿಫಿಕೇಟ್ ಕೋರ್ಸ್ ಅನ್ನು ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಜೊತೆಗೂಡಿ ಆಯೋಜಿಸಿರುವುದು ಹೆಮ್ಮೆಯ ವಿಚಾರ ಎಂದು ಸಂದೇಶ್ ಜವಳಿ ಅವರು ಹೇಳಿದರು.

ಎರಡು ತಿಂಗಳಿಗೂ ಅಧಿಕ ಕಾಲ ಹಲವಾರು ರಂಗಭೂಮಿಗೆ ಸಂಬಂಧಿಸಿದಂತಹ ಪುಸ್ತಕಗಳನ್ನು ಓದಿ ವಿದ್ಯಾರ್ಥಿಗಳಿಗೆ ಸರಳವಾಗಿ ಅರ್ಥವಾಗುವ ಹಾಗೆ ಪಠ್ಯಪುಸ್ತಕವನ್ನು ರೂಪಿಸಲಾಗಿದೆ. ಪ್ರಸ್ತುತ ಇದು ಮಾರಾಟಕ್ಕೆ ಲಭ್ಯವಿಲ್ಲ. ಆದರೆ ಮುಂದಿನ ದಿನಗಳಲ್ಲಿ ಇದು ಎಲ್ಲಾ ವಿದ್ಯಾರ್ಥಿಗಳಿಗೂ ಕೈಸೇರುವ ಹಾಗೆ ಯೋಜನೆಯನ್ನು ರೂಪಿಸಲಾಗಿದೆ ಎಂದು ಪಠ್ಯಪುಸ್ತಕದ ಸಂಗ್ರಹಕಾರ ಮಂಜುನಾಥ್ ಸ್ವಾಮಿ ಅವರು ತಿಳಿಸಿದರು.

ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಪ್ರಾಂಶುಪಾಲರಾದ ಡಾ. ಕೆ. ಸಂಧ್ಯಾ ಕಾವೇರಿ, ರಂಗಕರ್ಮಿ ಪ್ರವೀಣ್ ಎಸ್. ಹಾಲ್ಮತ್ತೂರು, ಪಠ್ಯಪುಸ್ತಕಕ್ಕೆ ಸಹಕಾರ ನೀಡಿದ ವಿಭಾ ಎಂ. ಡೊಂಗ್ರೆ, ಚೇತನ್ ಕುಮಾರ್, ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಸರ್ಕಾರದ ಮಾರ್ಗಸೂಚಿ: ಜೋಗ ಸಂಜೆ 7 ಗಂಟೆಗೆ ಪ್ರವೇಶ ಬಂದ್

0

ರಾಜ್ಯ ಸರ್ಕಾರದ ಮಾರ್ಗಸೂಚಿಯನ್ನು ಕಟ್ಟುನಿಟ್ಟಿನಿಂದ ಅನುಷ್ಠಾನಗೊಳಿಸಲಾಗುವುದು. ಶಿವಮೊಗ್ಗ ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಹೊಸ ವರ್ಷಾಚರಣೆಗೆ ಅವಕಾಶವಿಲ್ಲ. ಜೋಗ ಕೂಡ ಸಂಜೆ 7 ಗಂಟೆಯ ನಂತರ ಬಂದ್ ಮಾಡಲಾಗುತ್ತದೆ ಎಂದು ಶಿವಮೊಗ್ಗ ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕರಾದ ಎಚ್. ಎಸ್. ರಾಮಕೃಷ್ಣ ಅವರು ಹೇಳಿದ್ದಾರೆ.

ಕೊರೊನಾ ಕಳೆದೆರಡು ವರ್ಷಗಳಿಂದ ಮಲೆನಾಡಿನ ಪ್ರವಾಸೋದ್ಯಮಕ್ಕೆ ಬಿಟ್ಟು ಬಿಡದೆ ಕಾಡುತ್ತಿದೆ. ಇದರಿಂದ ಕೋಟ್ಯಂತರ ಹಣ ಹೂಡಿಕೆ ಮಾಡಿ ಹೋಂ ಸ್ಟೇ, ಫಾರ್ಮ್ ಸ್ಟೇ ಗಳನ್ನು ಮಾಡಿರುವ ಉದ್ದಿಮೆದಾರರು ನಿರಂತರವಾಗಿ ನಷ್ಟವನ್ನು ಅನುಭವಿಸುತ್ತಿದ್ದಾರೆ.

2022 ರ ವರ್ಷದಲ್ಲಾದರೂ ಈ ಸಮಸ್ಯೆಗಳಿಗೆ ಪೂರ್ಣ ವಿರಾಮ ಬೀಳಬಹುದು ಎಂಬ ಆಕಾಂಕ್ಷೆಯಲ್ಲಿದ್ದ ಉದ್ದಿಮೆದಾರರಿಗೆ ವರ್ಷಾರಂಭದಲ್ಲೇ ರಾಜ್ಯ ಸರ್ಕಾರ ಮತ್ತೊಂದು ಶಾಕ್ ನೀಡಿದೆ.

ಬೆಂಗಳೂರು ಸೇರಿದಂತೆ ಹಲವು ಭಾಗಗಳಿಂದ ಜನರು ಪ್ರಕೃತಿಯ ಸೌಂದರ್ಯವನ್ನು ವೀಕ್ಷಿಸಲು ಹೊಸ ವರ್ಷಕ್ಕೆ ಕಾಲಿಡುವ ಸಂತೋಷದೊಂದಿಗೆ ಮಲೆನಾಡಿಗೆ ಆಗಮಿಸುವುದು ಪ್ರತೀತಿ. ಆದರೆ ಈ ಕೊರೋನಾ ಇದಕ್ಕೆ ಕಳೆದೆರಡು ವರ್ಷಗಳಿಂದ ಅಡ್ಡಿಯಾಗಿದೆ. ದೊಡ್ಡ ದೊಡ್ಡ ಉದ್ದಿಮೆದಾರರು ಮಾತ್ರವಲ್ಲದೇ, ಪ್ರವಾಸೋದ್ಯಮವನ್ನೇ ನಂಬಿರುವ ಸಣ್ಣ ಪುಟ್ಟ ವ್ಯಾಪಾರಿಗಳು ಕೂಡ ಇದ್ದಾರೆ.

ತೀರ್ಥಹಳ್ಳಿ, ಕೊಡಚಾದ್ರಿ, ಸಾಗರ ಹೀಗೆ ಹಲವೆಡೆ ಕೆಲ ಕುಟುಂಬಗಳ ಜೀವನಾಧಾರವೇ ಪ್ರವಾಸಿಗಳು ನೀಡುವ ಹಣ ವಾಗಿದೆ. ಮನೆಯಲ್ಲಿಯೇ ಸಣ್ಣ ಅತಿಥಿ ಗೃಹಗಳನ್ನು ಮಾಡಿಕೊಂಡು ಅಲ್ಲಿ ಪ್ರವಾಸಿಗಳಿಗೆ ಸೇವೆ ನೀಡುತ್ತಾ ಬರಲಾಗುತ್ತಿದೆ. ಹೊಸ ವರ್ಷದ ಅದ್ದೂರಿ ಆಚರಣೆಗೆ ತಡೆಯೊಡ್ಡಿದ ರಿಂದ ಅವರ ಆದಾಯದ ಮೇಲೆ ಪರಿಣಾಮ ಬೀರಲಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಗೂಗಲ್ ಕಂಪನಿ ಪ್ರಕರಣ: ಹೈಕೋರ್ಟ್ ವಿಚಾರಣೆ

0

ಪ್ಲೇ ಸ್ಟೋರ್ ನಿಯಮಗಳ ಕುರಿತ ತನಿಖೆ ಸಂಬಂಧ ಗೂಗಲ್ ಕಂಪನಿ ವಿರುದ್ಧ ಜನವರಿ 5ರ ವರೆಗೆ ಯಾವುದೇ ಜಾರಿಗೊಳಿಸುವುದಿಲ್ಲ ಎಂದು ಭಾರತೀಯ ಸ್ಪರ್ಧ ಆಯೋಗವು ಕರ್ನಾಟಕ ಹೈಕೋರ್ಟ್ ಗೆ ಭರವಸೆ ನೀಡಿದೆ.

ಈ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಬಿ .ಎಂ.ಶ್ಯಾಮ್ ಪ್ರಸಾದ್ ಅವರಿದ್ದ ಹೈಕೋರ್ಟ್ ನ ರಜಾಕಾಲದ ನ್ಯಾಯಪೀಠದ ವಿಚಾರಣೆಯನ್ನು ಜನವರಿ 5ಕ್ಕೆ ಮುಂದೂಡಿದೆ.

ಸ್ವಲ್ಪ ಕಾಲ ನಡೆದ ವಿಚಾರಣೆಯ ವೇಳೆ ಗೂಗಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಪರವಾಗಿ ಸುಪ್ರೀಂಕೋರ್ಟ್ ನ ಹಿರಿಯ ನ್ಯಾಯವಾದಿ ಗೋಪಾಲ್ ಸುಬ್ರಮಣ್ಯಂ ವಾದ ಮಂಡಿಸಿದರು. ಅವರು ಸಿಸಿಐ ಹೊರಡಿಸಿರುವ ಆದೇಶದ ಸಿಂಧುತ್ವವನ್ನು ಪ್ರಶ್ನಿಸಿದ್ದಾರೆ.

ಸಿಸಿಎಲ್ ಪರ ವಾದ ಮಂಡಿಸಿದ ಅಡಿಷನಲ್ ಸಾಲಿಸಿಟರ್ ಜನರಲ್ ಎನ್. ವೆಂಕಟರಾಮನ್, ಸಿಸಿಐ ಕ್ರಮವನ್ನು ಸಮರ್ಥಿಸಿಕೊಂಡರು. ಮುಂದಿನ ವಿಚಾರಣೆ ಯವರೆಗೆ ಗೂಗಲ್ ವಿರುದ್ಧ ಯಾವುದೇ ಬಲವಂತ ಕ್ರಮ ಜಾರಿಗೊಳಿಸುವುದಿಲ್ಲ ಎಂದು ಮುಚ್ಚಳಿಕೆ ನೀಡಿದರು. ಅದನ್ನು ದಾಖಲಿಸಿಕೊಂಡ ನ್ಯಾಯಪೀಠ, ಮುಂದಿನ ವಿಚಾರಣೆವರೆಗೆ ಆತುರದ ಕ್ರಮ ಜಾರಿಗೊಳಿಸುವುದಿಲ್ಲ ಎಂದು ಸಿಸಿಐ ಪರ ವಕೀಲರು ಭರವಸೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ವಿಚಾರವನ್ನು ಮುಂದೂಡಲಾಗಿದೆ ಎಂದು ಆದೇಶ ನೀಡಿತು.

ಅಲಯನ್ಸ್ ಆಫ್ ಡಿಜಿಟಲ್ ಇಂಡಿಯಾ ಫೌಂಡೇಶನ್ ಎಂಬ ನವೋದ್ಯಮ ಸಂಸ್ಥೆಯು ಗೂಗಲ್ ಒಡೆತನದ ಪ್ಲೇ ಸ್ಟೋರ್ ಕಂಪನಿಯ ಹೊಸ ನೀತಿಯನ್ನು ಪ್ರಶ್ನಿಸಿ ಸಿಸಿಐ ಮೊರೆ ಹೋಗಿತ್ತು. ಅದನ್ನು ಆಲಿಸಿದ್ದ ಸಿಸಿಐ, ಪ್ಲೇಸ್ಟೋರ್ ನಿಯಮಾವಳಿಗಳ ಬಗ್ಗೆ ತನಿಖೆಗೆ ಆದೇಶಿಸಿತ್ತು. ಅಲ್ಲದೆ ಕೆಲವು ಪ್ರಶ್ನೆಗಳಿಗೆ ಉತ್ತರ ನೀಡುವಂತೆ ಕೋರಿತ್ತು.

ಡಿಸೆಂಬರ್ 31ರವರೆಗೆ ತನ್ನ ಪ್ರಶ್ನೆಗಳಿಗೆ ಉತ್ತರಿಸಬೇಕೆಂದು ಸಿಸಿಐ ಗಡುವು ವಿಧಿಸಿತ್ತು. ಆ ಹಿನ್ನೆಲೆಯಲ್ಲಿ ಹೈಕೋರ್ಟ್ ಮೊರೆ ಹೋಗಿದ್ದ ಗೂಗಲ್, ತನಗೆ ಉತ್ತರಿಸಲು ಇನ್ನು 8 ವಾರ ಕಾಲಾವಕಾಶ ನೀಡಬೇಕೆಂದೂ ಕೋರಿತ್ತು. ಅಲ್ಲದೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಐ ಸಮಿತಿಗೆ ನ್ಯಾಯಿಕ ಸದಸ್ಯರನ್ನು ನೇಮಿಸುವಂತೆ ಹೇಳಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಮನುಜ ಮತವೇ ಮುಖ್ಯ ಕುವೆಂಪು ವಾಣಿ ಪ್ರೊ.ವೀರಭದ್ರಪ್ಪ

0

ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯ ಶಂಕರಘಟ್ಟದಲ್ಲಿ ಆಯೋಜಿಸಲಾಗಿದ್ದ ಕುವೆಂಪು ಅವರ 117ನೇ ಜನ್ಮ ದಿನಾಚರಣೆ ಕಾರ್ಯಕ್ರಮ ನಡೆಯಿತು.

ಮನುಜ ಮತವೇ ಮುಖ್ಯ ಎಂಬ ಆದರ್ಶ ಕ್ಷೀಣಿಸಿ ಇಂದು ಜಾತಿ, ಧರ್ಮಗಳ ಸಂಕುಚಿತತೆ ಹೆಚ್ಚಿದೆ ಎಂದು ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಪಿ. ವೀರಭದ್ರಪ್ಪ ಅವರು ವಿಷಾದ ವ್ಯಕ್ತಪಡಿಸಿದರು.

ಮನುಷ್ಯ ಊರು, ರಾಜ್ಯ, ದೇಶಗಳಿಗೆ ಅಂಟಿಕೊಂಡು ವಿಶ್ವ ಪಥವನ್ನು ಮರೆತಿದ್ದಾನೆ ಎಂದು ಪ್ರೊ. ಬಿ.ಪಿ.ವೀರಭದ್ರಪ್ಪ ಅವರು ಹೇಳಿದರು.

‘ಕುವೆಂಪು ಅವರು ಸರ್ವಸ್ತರದ ಅಭಿವೃದ್ಧಿ ಬಯಸಿದವರು. ಈ ದಿಸೆಯಲ್ಲಿ ತಾವು ನಡೆಯುತ್ತಿರುವ ಹಾದಿಯೆಡೆಗೆ ವಿಮರ್ಶಾತ್ಮಕ ದೃಷ್ಟಿಕೋನವನ್ನು ರೂಡಿಸಿಕೊಂಡು ಸಮನ್ವಯತೆಯ ಸೂತ್ರವನ್ನು ಜಗತ್ತಿಗೆ ನೀಡಿದವರು ಎಂದು ಕುಲಸಚಿವರಾದ ಜಿ. ಅನುರಾಧ ಅವರು ಹೇಳಿದರು.

ಈ ಸಂದರ್ಭದಲ್ಲಿ ಹಣಕಾಸು ಅಧಿಕಾರಿ ಎಸ್. ರಾಮಕೃಷ್ಣ, ಕಾರ್ಯನಿರ್ವಾಹಕ ಇಂಜಿನಿಯರ್ ರಘು ಶಂಕರ್, ಡಾ. ಎಂ.ಆರ್. ಸತ್ಯಪ್ರಕಾಶ್ ಇನ್ನು ಮುಂತಾದವರು ಉಪಸ್ಥಿತರಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಪ್ರೊ ಕಬಡ್ಡಿ ಲೀಗ್ : ದಬಾಂಗ್ ಡೆಲ್ಲಿ ಅಜೇಯ ಮುನ್ನಡೆ

0

ಬೆಂಗಳೂರಿನ ವೈಟ್ ಫೀಲ್ಡ್ ನ ಗ್ರ್ಯಾಂಡ್ ಶೆರಟಾನ್ ಹೋಟೆಲ್ ಮೈದಾನದಲ್ಲಿ ನಡೆಯುತ್ತಿರುವ ಪ್ರೊ ಕಬಡ್ಡಿ ಲೀಗ್ ಟುರ್ನಿಯೂ ಬುಧವಾರ 4 ತಂಡಗಳ ನಡುವೆ 2 ಪಂದ್ಯಗಳು ನಡೆಯಿತು.
ಬೆಂಗಾಲ್ ವಾರಿಯರ್ಸ್ ವಿರುದ್ಧ ದಬಾಂಗ್ ಡೆಲ್ಲಿ ಅಮೋಘ ಜಯ
ಮೊದಲನೇ ಪಂದ್ಯವು:
ದಬಾಂಗ್ ಡೆಲ್ಲಿ(52) ಮತ್ತು ಬೆಂಗಾಲ್ ವಾರಿಯರ್ಸ್ (35) ತಂಡಗಳ ನಡುವೆ ಪಂದ್ಯ ನಡೆಯಿತು.
ರೇಡರ್ ನವೀನ್ ಕುಮಾರ್ ಚುರುಕಿನ ಆಟದಿಂದ 24 ಅಂಕಗಳನ್ನು ಗಳಿಸಿದರು.ಇದರಿಂದಾಗಿ ತಂಡವು ಮೊದಲಾರ್ಧದಲ್ಲಿಯೇ 33-15 ರಿಂದ ಪಂದ್ಯದ ಮೇಲೆ ಬಿಗಿ ಹಿಡಿತ ಸಾಧಿಸಿತು. ಜೊತೆಗೆ ನವೀನ್ ಆಲ್ ರೌಂಡರ್ ಆಗಿಯೂ ಕೂಡ ಮಿಂಚಿದರು.ಅವರಿಗೆ 10 ಅಂಕಗಳನ್ನು ಬಂದವು.
ಅಮೋಘ ಆಟವಾಡಿದ ನವೀನ್ ಕುಮಾರ್ ನೆರವಿನಿಂದ ದಬಾಂಗ್ ಡೆಲ್ಲಿ ತಂಡವು ಪ್ರೊ ಕಬಡ್ಡಿ ಲೀಗ್ ನಲ್ಲಿ ತನ್ನ ಅಜೇಯ ಓಟ ಮುಂದುವರೆಸಿತು.
ಡೆಲ್ಲಿ ತಂಡವು ಇದುವರೆಗೆ 4 ಪಂದ್ಯಗಳನ್ನು ಆಡಿದ.ಅದರಲ್ಲಿ 3 ಗೆದ್ದು ಒಂದರಲ್ಲಿ ಟೈ ಮಾಡಿಕೊಂಡಿದೆ.ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
ಬೆಂಗಾಲ್ ತಂಡದ ನಾಯಕ ಮಣಿಂದರ್ ಸಿಂಗ್ ತಕ್ಕ ತಿರುಗೇಟು ನೀಡುವ ಪ್ರಯತ್ನ ಮಾಡಿದರು.ಅವರು 12 ರೇಡ್ ಗಳಿಂದ 16 ಅಂಕಗಳನ್ನು ಗಳಿಸಿದರು.ಅವರಿಗೆ ಸುಖೇಶ್ ಹೆಗಡೆ 9 ಪಾಯಿಂಟ್ಸ್ ಕೂಡ ಉತ್ತಮ ಜೊತೆ ನೀಡಿದರು.ಆದರೆ,ಡೆಲ್ಲಿ ತಂಡದ ವೇಗಕ್ಕೆ ಬೆಂಗಾಲ್ ಆಟ ಸಾಟಿಯಾಗಲಿಲ್ಲ.

ಯೋಧಾ ಮತ್ತು ಗುಜರಾತ್ ತಂಡಗಳ ನಡುವೆ ರೋಚಕ ಪಂದ್ಯ ಡ್ರಾ
ಎರೆಡನೇ ಪಂದ್ಯವು:
ಯು.ಪಿ ಯೋಧಾ(30) ಮತ್ತು ಗುಜರಾತ್ ಜಯಂಟ್ಸ್(30) ತಂಡಗಳ ನಡುವೆ ಪಂದ್ಯ ನಡೆಯಿತು. ಎರಡು ತಂಡಗಳ ಸಮಬಲ ಹೋರಾಟದಿಂದಾಗಿ ಪಂದ್ಯ ಡ್ರಾ ಮಾಡಿಕೊಂಡಿವೆ.
ಯೋಧಾ ತಂಡದ ಪ್ರದೀಪ್ ನರ್ವಾಲ್(11) ಮತ್ತು ರಾಕೇಶ್ ನರ್ವಾಲ್(13) ಅವರ ನಡುವಣ ಪೈಪೋಟಿಯು ಆಕರ್ಷಕವಾಗಿತ್ತು ಇವರಿಬ್ಬರು ಹರಿಯಾಣ ಮೂಲದ ಆಟಗಾರರು ತಮ್ಮ ತಂಡದ ಸೋಲು ತಪ್ಪಿಸಲು ಹೆಣದಾಡಿದರು.ಅರ್ಧವಿರಾಮದ ವೇಳೆಗೆ ಗುಜರಾತ್ ತಂಡವು 20-14 ರಿಂದ ಮುಂದಿತ್ತು.ಅದಕ್ಕೆ ನಂತರದ ಆಟದಲ್ಲಿ ಸೇಡು ತೀರಿಸುವಲ್ಲಿ ಯೋಧಾ ಸಫಲವಾಯಿತು.
ಯೋಧಾ ಆಟಗಾರರು ಗುಜರಾತ್ ತಂಡವನ್ನು 2 ಬಾರಿ ಅಲ್ ಔಟ್ ಮಾಡಿದರು. ಎಲ್ಲಾ ವಿಭಾಗಗಳಲ್ಲಿಯೂ ಮೇಲುಗೈ ಪಡೆದಿದ್ದರು.ಪ್ರದೀಪ್ ಜೊತೆಗೆ ಸುರೇಂದರ್ ಗಿಲ್ ಅವರು ಕೂಡ ತಂಡಕ್ಕೆ 6 ಪಾಯಿಂಟ್ ಸೇರಿಸಿದರು.

ಇಂದು ನಡೆಯಲಿರುವ ಪಂದ್ಯಗಳು:
೧. ಜೈಪುರ್ ಪಿಂಕ್ ಪ್ಯಾಂಥರ್ಸ್ ಮತ್ತು ಯು.ಮುಂಬಾ
ಸಮಯ:7.30
೨.ಹರಿಯಾಣ ಸ್ಟೀಲರ್ಸ್ ಮತ್ತು ಬೆಂಗಳೂರು ಬುಲ್ಸ್
ಸಮಯ:8.30

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಗೆಲುವಿನ ಮೆಟ್ಟಿಲಲ್ಲಿ ಭಾರತ ತಂಡ

0

ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಟೆಸ್ಟ್ ಸರಣಿಯು ನಡೆಯುತ್ತಿದ್ದು ದಕ್ಷಿಣಾ ಆಫ್ರಿಕಾ ತಂಡಕ್ಕೆ ಭಾರತ ತಂಡವು ಎರೆಡನೇ ಇನ್ನಿಂಗ್ಸ್ ನಲ್ಲಿ 305 ರನ್ ಗಳ ಗುರಿ ನೀಡಿದೆ.
ಸೆಂಚುರಿಯನ್ ನಲ್ಲಿರುವ ಸೂಪರ್ ಸ್ಪೋರ್ಟ್ ಪಾರ್ಕ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ನಲ್ಲಿ 4 ನೇ ದಿನದಾಟ ಹೊತ್ತಿಗೆ 50.3 ಓವರ್ ಗಳಲ್ಲಿ ಆಲ್ ಔಟ್ ಆಗಿ 174 ರನ್ ಗಳಿಸಿತು.
ರಾಹುಲ್ 23 ಮತ್ತು ಮಧ್ಯಮ ಕ್ರಮಾಂಕದಲ್ಲಿ ರಿಷಬ್ ಪಂತ್ 34 ಎಸೆತಗಳಲ್ಲಿ 34 ರನ್ ಗಳಿಸಿ ಇವರಿಬ್ಬರೇ ಹೆಚ್ಚು ರನ್ ಗಳಿಸಿದ ಬ್ಯಾಟರ್ ಗಳಾದರು.ವಿರಾಟ್ ಬಳಗವು ಮೊದಲ ಇನ್ನಿಂಗ್ಸ್ ನಲ್ಲಿ 130 ರನ್ ಗಳ ಮುನ್ನಡೆ ಪಡೆದಿತ್ತು.ಆದ್ದರಿಂದ,300 ಕ್ಕು ಹೆಚ್ಚು ರನ್ ಗಳ ಗುರಿಯೊಡ್ಡಲು ಸಾಧ್ಯವಾಯಿತು.
ಆಫ್ರಿಕಾ ತಂಡದ ಬೌಲರ್ ಗಳ ವೇಗಿಗಳ ಸ್ವರ್ಗದಂತಿರುವ ಪಿಚ್ ನಲ್ಲಿ ಭಾರತದ ಬ್ಯಾಟರ್ ಗಳು ರನ್ ಗಳಿಸಲು ಮಾರ್ಕೊ ಜೀಸನ್ (55 ಕ್ಕೆ 4) ಅವರ ಮೊನಚಾದ ದಾಳಿಯ ಮುಂದೆ ಭಾರತದ ಬ್ಯಾಟರ್ ಗಳು ರನ್ ಗಳಿಸಲು ಬಹಳಷ್ಟು ಶ್ರಮಪಡಬೇಕಾಯಿತು.ಇದರಿಂದಾಗಿ,ತಂಡವು ಎರೆಡನೇ ಇನ್ನಿಂಗ್ಸ್ ನಲ್ಲಿ 50.3 ಓವರ್ ಗಳಲ್ಲಿ 174 ರನ್ ಗಳನ್ನು ಗಳಿಸಿತು.
ಆದರೆ,ಬೌಲರ್ ಗಳಿಗೆ ನೆರವು ನೀಡುತ್ತಿರುವ ಪಿಚ್ ನಲ್ಲಿ ಭಾರತ ತಂಡವು 6 ವಿಕೆಟ್ ಕಿತ್ತು ಬುಟ್ಟಿಗೆ ಹಾಕಿಕೊಂಡರೆ ವಿಜಯದ ಧ್ವಜ ಹಾರಿಸಬಹುದು.ಜಸ್ ಪ್ರೀತ್ ಬುಮ್ರಾ (22 ಕ್ಕೆ 2) , ಮೊಹಮ್ಮದ್ ಶಮಿ (29 ಕ್ಕೆ 1) ಮತ್ತು ಮೊಹಮ್ಮದ್ ಸಿರಾಜ್ (25 ಕ್ಕೆ 1) ಉತ್ತಮ ಬೌಲಿಂಗ್ ಮಾಡಿರುವುದರಿಂದ ಪ್ರವಾಸಿ ತಂಡದ ಆತ್ಮವಿಶ್ವಾಸ ಇಮ್ಮೆಟ್ಟಿಸಿದೆ.
ಪಂದ್ಯದ ಕೊನೆಯ ದಿನವಾದ ಗುರುವಾರ 305 ರನ್ ಗಳ ಗುರಿ ಬೆನ್ನತ್ತಿರುವ ಅತೀಥೆಯ ತಂಡವು 40.5 ಓವರ್ ಗಳಲ್ಲಿ 4 ವಿಕೆಟ್ ಗಳಿಗೆ 94 ರನ್ ಗಳಿಸಿದೆ.ಕ್ರೀಸ್ ನಲ್ಲಿರುವ ನಾಯಕ ಡೀನ್ ಎಲ್ಲರ್ 122 ಎಸೆತಗಳಲ್ಲಿ 52 ಹಾಗೂ ಬರಬೇಕಿರುವ ತೆಂಬಾ ಬವುಮಾ ಮತ್ತು ಕ್ವಿಂಟನ್ ಡಿ ಕಾಕ್ ಇವರ ಮೇಲೆ ಬ್ಯಾಟಿಂಗ್ ಶಕ್ತಿ ನಿಂತಿದೆ.
ಭಾರತದ ಬೌಲರ್ ಗಳ ಚಾಣಾಕ್ಷ ಬೌಲಿಂಗ್ ಮುಂದೆ ಒಂದು ಕಡೆ ವಿಕೆಟ್ ಗಳು ಪತನವಾಗುತ್ತಿದ್ದರೂ. ನಾಯಕ ಡೀನ್ ಎಲ್ಲರ್ ತಾಳ್ಮೆಯಿಂದ ಆಟವಾಡಿ ಅರ್ಧಶತಕ ಬಾರಿಸಿ ಕ್ರೀಸ್ ನಲ್ಲಿ ಉಳಿದರು.
ಡೀನ್ ಜೊತೆಗೆ ಉತ್ತಮ ಜೊತೆಯಾಟ ಕುದುರಿಸಿದ್ದ ‘ರಸಿ ವ್ಯಾನ್ ಡರ್ ಡಸೆ, 37 ನೇ ಓವರ್ ನಲ್ಲಿ ಬುಮ್ರಾ ಇನ್ ಸ್ಟಿಂಗರ್ ಎಸೆತವನ್ನು ಅಂದಾಜಿಸುವಲ್ಲಿ ತಪ್ಪಿದರರು.ಆಘಾತ ಅನುಭವಿಸಿದರು.ಇನ್ನಿಂಗ್ಸ್ ನ ಕೊನೆಯ ಓವರ್ ನಲ್ಲಿ ಬುಮ್ರಾ ಹಾಕಿದ ಯಾರ್ಕರ್ ಗೆ ರಾತ್ರಿಕಾವಲುಗಾರ ಕೇಶವ್ ಮಹರಾಜ್ ಅವರು ಶರಣಾದರು.
ಇನ್ನಿಂಗ್ಸ್ ನ ಎರೆಡನೇ ಓವರ್ ನಲ್ಲಿಯೇ ಮೊಹಮ್ಮದ್ ಶಮಿಯ ಸ್ಟಿಂಗ್ ಎಸೆತಕ್ಕೆ ಏಡನ್ ಮಾರ್ಕರಮ್ ಕ್ಲೀನ್ ಬೌಲ್ಡ್ ಆದರು.15 ನೇ ಓವರ್ ನಲ್ಲಿ ಕೀಗನ್ ಪೀಟರ್ಸನ್ ಅವರು ಸಿರಾಜ್ ಎಸೆತವನ್ನು ಕೆಣಕಿ ರಿಷಬ್ ಪಂತ್ ಗೆ ಕ್ಯಾಚ್ ಕೊಟ್ಟರು.
ಇವೆಲ್ಲದರ ನಡುವೆಯೂ ಡೀನ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ಮಾಡಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಮೀಸಲಾತಿಗೆ ಪಂಚಮಸಾಲಿ ಸಮಾಜದ ಒತ್ತಾಯ

0

ಕೂಡಲಸಂಗಮ ಪಂಚಮಸಾಲಿ ಪೀಠದ ಅಧ್ಯಕ್ಷ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರು ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ‘2ಎ ಮೀಸಲಾತಿ ದೊರೆಯುವವರೆಗೂ ನಿರಂತರ ಹೋರಾಟ ನಡೆಸುವುದಾಗಿ’ ತಿಳಿಸಿದ್ದಾರೆ.

ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾ ಜಿಲ್ಲಾ ಹಾಗೂ ತಾಲ್ಲೂಕು ಗಟ್ಟದ ಆಶ್ರಯದಲ್ಲಿ ಶಿಕಾರಿಪುರ ತಾಲೂಕಿನ ಕಣಿವೆ ಮನೆ ಗ್ರಾಮದಲ್ಲಿ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಒತ್ತಾಯಿಸಿ ನಾಲ್ಕನೇ ಹಂತದ ಪ್ರತಿಜ್ಞಾವಿಧಿ ಜಾಗೃತಿ ಕಾರ್ಯಕ್ರಮ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ‘ನಮ್ಮ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ದೊರೆಯುವುದರಿಂದ ಸಮಾಜದ ಮಕ್ಕಳು ಶೈಕ್ಷಣಿಕವಾಗಿ ಹಾಗೂ ಸಾಮಾಜಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ಉದ್ಯೋಗ ಪಡೆಯಲು ಮೀಸಲಾತಿ ಅನಿವಾರ್ಯ ನಾವು ಆರಂಭಿಸಿದ ಮೀಸಲಾತಿ ಹೋರಾಟ ಜನರನ್ನ ಜಾಗೃತಗೊಳಿಸಿದೆ. ಆದ್ದರಿಂದ ಸಮಾಜದ ಜನರು ಹಾನಗಲ್ ಹಾಗೂ ವಿಧಾನಪರಿಷತ್ ಚುನಾವಣೆಯಲ್ಲಿ ಪಕ್ಷಗಳಿಗೆ ಬಿಸಿ ಮುಟ್ಟಿಸಿದ್ದಾರೆ’ ಎಂದು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಯವರು ತಿಳಿಸಿದರು.

ನಿವೃತ್ತ ಕೆಎಎಸ್ ಅಧಿಕಾರಿ ಹೆಚ್ ಟಿ ಬಳಿಗಾರ್, ಸಾಗರ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ಶಿಕಾರಿಪುರ ಪುರಸಭೆ ಸದಸ್ಯ ಎಸ್.ಪಿ.ನಾಗರಾಜ್ ಗೌಡ್ರು ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.