Thursday, February 12, 2026
Thursday, February 12, 2026
Home Blog Page 1793

ಹುಟ್ಟಿನಿಂದ ಯಾರೂ ಅಪರಾಧಿಗಳಾಗಿರುವುದಿಲ್ಲ

0

ಸಾಗರದ ಉಪ ಕಾರಾಗೃಹದಲ್ಲಿ ಸ್ಪಂದನ ರಂಗ ತಂಡ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ರಂಗ ಗೀತೆಗಳ ಗಾಯನ ಹಾಗೂ ನಾಟಕ ಪ್ರದರ್ಶನ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಸಂವಿಧಾನದ ಪೀಠಿಕೆ ಯ ಪ್ರತಿಜ್ಞಾ ವಿಧಿಯನ್ನು ಬೋಧಿಸುವ ಮೂಲಕ ಶಿವಮೊಗ್ಗ ಕೇಂದ್ರ ಕಾರಾಗೃಹ ಅಧೀಕ್ಷಕ ಮಹೇಶ್ ಜಿಗಣಿ ಅವರು ಚಾಲನೆ ನೀಡಿದರು.

‘ಅಪರಾಧ ಮನಸ್ಥಿತಿ ಹೊಂದಿರುವವರು ಮನಃಪರಿವರ್ತನೆ ಮಾಡುವುದೇ ಕಾರಾಗೃಹಗಳ ಸ್ಥಾಪನೆಯ ಉದ್ದೇಶವಾಗಿದೆ’ ಎಂದು ಮಹೇಶ್ ಜಿಗಣಿ ಅವರು ತಿಳಿಸಿದರು.

ಹುಟ್ಟಿನಿಂದ ಯಾರೂ ಅಪರಾಧಿಗಳಾಗಿರುವುದಿಲ್ಲ. ಸಂದರ್ಭದ ಪರಿಸ್ಥಿತಿಗೆ ಸಿಲುಕಿ ಅನೇಕರು ತಮ್ಮ ತಾಳ್ಮೆಯನ್ನು ಕಳೆದುಕೊಂಡು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುತ್ತಾರೆ. ಅವರಲ್ಲಿ ಪಶ್ಚಾತಾಪದ ಭಾವನೆ ಮೂಡುವಂತೆ ಮಾಡಿ ಮತ್ತೆ ಅಂತಹ ತಪ್ಪು ಮಾಡದಂತೆ ನೋಡಿಕೊಳ್ಳುವುದು ಕಾರಾಗೃಹಗಳ ಉದ್ದೇಶವಾಗಿದೆ ಎಂದು ಮಹೇಶ್ ಅವರು ಹೇಳಿದರು.

‘ಅಪರಾಧಿಗಳ ಬದುಕಿನಲ್ಲಿ ಸುಧಾರಣೆ ತರುವುದಕ್ಕಾಗಿ ಕಾರಾಗೃಹ ಇಲಾಖೆಯ ಸ್ಥಾಪಿಸಲಾಗಿದೆ ಈ ಕಾರಣದಿಂದಲೇ ಇಲಾಖೆಯನ್ನು ಸುಧಾರಣೆ ಇಲಾಖೆ ಎಂದೆ ಇಡಲಾಗಿದೆ. ಒಮ್ಮೆ ಅಪರಾಧ ಪ್ರಕರಣಗಳಲ್ಲಿ ಭಾಗಿಯಾದವರು ಮತ್ತೊಮ್ಮೆ ಕಾರಾಗ್ರಹಕ್ಕೆ ಬಾರದೆ ಇದ್ದರೆ ಇಲಾಖೆಯ ಉದ್ದೇಶ ಈಡೇರಿದಂತೆ’ ಎಂದು ಶಿವಮೊಗ್ಗ ಮಹಿಳಾ ಕಾರಾಗೃಹದ ಅಧೀಕ್ಷಕಿ ಅನಿತಾ ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಸ್ಪಂದನ ರಂಗತಂಡದ ನಾಗೇಂದ್ರ ಕುಮಟಾ ಅವರು ರಂಗ ಗೀತೆಗಳ ಗಾಯನ ನಡೆಸಿದರು ಹಾಗೂ ಪಿ.ಲಂಕೇಶ್ ಅವರ ಕಥೆ ಆಧರಿಸಿದ ‘ಮುಟ್ಟಿಸಿಕೊಂಡವನು’ ನಾಟಕ ಪ್ರದರ್ಶನಗೊಂಡಿತು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ವಿಜ್ಞಾನ ಮನುಷ್ಯ‌ನ ಸ್ವಾರ್ಥಕ್ಕೆ ಬಳಕೆ ಕೂಡದು- ಕಿರಣ್ ಕುಮಾರ್

0

ಕುವೆಂಪು ರಂಗಮಂದಿರದಲ್ಲಿ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಆಯೋಜಿಸಿದ್ದ ರಾಜ್ಯ ಮಟ್ಟದ ಪ್ರಥಮ ವೈಜ್ಞಾನಿಕ ಸಮ್ಮೇಳನದಲ್ಲಿ ಇಸ್ರೋ ಮಾಜಿ ಅಧ್ಯಕ್ಷ ಡಾ.ಎ.ಎಸ್. ಕಿರಣ್ ಕುಮಾರ್ ಅವರು ಉದ್ಘಾಟಿಸಿದರು.

“ವಿಶ್ವದ ಎಲ್ಲಾ ವಿದ್ಯಮಾನಗಳು ವಿಜ್ಞಾನದ ಹಾದಿಯಲ್ಲೇ ಸಾಗುತ್ತಿವೆ. ಇನ್ನೊಂದೆಡೆ ಮನುಷ್ಯನ ಸ್ವಾರ್ಥಕ್ಕೆ ವಿಜ್ಞಾನ ಬಳಕೆಯಾಗುತ್ತಾ ನೆಮ್ಮದಿ ನಾಶವಾಗುತ್ತಿದೆ” ಎಂದು ಡಾ.ಎ.ಎಸ್.ಕಿರಣ್ ಕುಮಾರ್ ಅವರು ತಿಳಿಸಿದರು.

‘ವಿಜ್ಞಾನ ಗ್ರಾಮದ ಕಲ್ಪನೆ ಪರಿಷತ್ತಿನ ಬಹುಮುಖ್ಯ ಯೋಜನೆ. ಈಗಾಗಲೇ ಯೋಜನೆಗೆ ಹಲವರು ಕೈಜೋಡಿಸಿದ್ದಾರೆ. ಸರ್ಕಾರದ ನೆರವಿನ ಅಗತ್ಯವಿದೆ. ಕನಿಷ್ಠ 10 ಎಕರೆ ಜಮೀನನ್ನಾದರೂ ವಿಜ್ಞಾನ ಗ್ರಾಮಕ್ಕೆ ಸರ್ಕಾರ ನೀಡಬೇಕು’ ಎಂದು ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಅಧ್ಯಕ್ಷ ಡಾ. ಹುಲಿಕಲ್ ನಟರಾಜ್ ಹೇಳಿದರು.

ಈ ವೇಳೆ ಮಾತನಾಡಿದ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರು ಶಿವಮೊಗ್ಗದಲ್ಲಿ ವಿಜ್ಞಾನ ಕೇಂದ್ರಕ್ಕೆ ಜಾಗ ನೀಡಲು ಪ್ರಸ್ತಾವ ಸಲ್ಲಿಸಲಾಗಿದೆ. ಹುಲಿಕಲ್ ನಟರಾಜ್ ಅವರು ಯೋಜಿಸಿರುವ ವಿಜ್ಞಾನ ಗ್ರಾಮ ಜಿಲ್ಲೆಯಲ್ಲಿಯೇ ನಿರ್ಮಿಸಲು ಜಿಲ್ಲೆಯ ಜನಪ್ರತಿನಿಧಿಗಳು, ಸರ್ಕಾರದ ಜೊತೆ ಸಮಾಲೋಚನೆ ನಡೆಸಲಾಗುವುದು ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಬೆಕ್ಕಿನ ಕಲ್ಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ , ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ವೀರಭದ್ರಪ್ಪ, ಭದ್ರಕಾಳಿ ಅಧ್ಯಕ್ಷೆ ಪವಿತ್ರ ರಾಮಯ್ಯ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ, ಮುಖಂಡರಾದ ಎಸ್.ಕೆ.ಉಮೇಶ್, ವಿ.ಟಿ.ಸ್ವಾಮಿ, ದಾನಿ ಬಾಬೂರಾವ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಸುಡಾನ್ ನಲ್ಲಿ ಸುವರ್ಣ ಗಣಿ ಕುಸಿತ

0

ಸುಡಾನ್ ನ ರಾಜಧಾನಿ ಖಾಟೂರ್ಮ್ ನಿಂದ 700 ಕಿ. ಮೀ. ದೂರದ ವೆಸ್ಟ್ ಕಾರ್ಡೋಫಾನ್ ಪ್ರಾಂತ್ಯದ ಫುಜ ಎಂಬಲ್ಲಿ ಚಿನ್ನದ ಗಣಿ ಒಂದು ಕುಸಿದಿದ್ದರಿಂದ ಕನಿಷ್ಠ 38 ಮಂದಿ ಮೃತಪಟ್ಟಿದ್ದಾರೆ.

ಈ ಗಣಿಯಲ್ಲಿ ಹಿಂದೆ ಗಣಿಗಾರಿಕೆ ನಡೆಯುತ್ತಿತ್ತು. ನಂತರ ಅದನ್ನು ಮುಚ್ಚಲಾಗಿತ್ತು. ಇತ್ತೀಚಿಗೆ ಭದ್ರತಾ ಸಿಬ್ಬಂದಿ ಸಹ ಸ್ಥಳದಿಂದ ನಿರ್ಗಮಿಸಿದ್ದರು. ಸ್ಥಳೀಯರು ಹಾಗೂ ಗಣಿಯೊಳಗೆ ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ.

ಆಫ್ರಿಕಾ ಖಂಡದಲ್ಲಿ ಅತಿ ಹೆಚ್ಚು ಚಿನ್ನದ ಗಣಿಗಾರಿಕೆ ನಡೆಸುವ ಎರಡನೇ ದೊಡ್ಡ ದೇಶ ಸುಡಾನ್ ಆಗಿದೆ.

2020ರಲ್ಲಿ ಇಲ್ಲಿನ ಗಣಿಗಳಿಂದ 36.6 ಟನ್ ಚಿನ್ನವನ್ನು ಹೊರತೆಗೆಯಲಾಗಿತ್ತು. ಚಿನ್ನದ ಕಳ್ಳಸಾಗಣೆ ಪ್ರಕರಣಗಳು ಹೆಚ್ಚಿದ ಕಾರಣ ಕಳೆದೆರಡು ವರ್ಷಗಳಿಂದ ಚಿನ್ನದ ಗಣಿಗಾರಿಕೆ ಮೇಲೆ ನಿಯಂತ್ರಣ ಹೇರಲಾಗಿದೆ.

ಇಷ್ಟಾದರೂ ಸಹ ಸುಡಾನ್ ನಲ್ಲಿ ಮೇಲಿಂದಮೇಲೆ ಗಣಿ ದುರಂತಗಳು ಸಂಭವಿಸುತ್ತಲೇ ಇವೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಹೊಸವರಿಗೆ ಸ್ಥಾನ ಕೊಡಿ ಹಿರಿಯರಿಗೆ ಕರೆ- ರೇಣುಕಾಚಾರ್ಯ

0

ಹಿಂದೆ ಎರಡು ಮೂರು ಬಾರಿ ಸಚಿವರಾಗಿ ಈಗಲೂ ಮತ್ತೆ ಸಚಿವರಾಗಿ ಮುಂದುವರೆದಿರುವ ಕೆಲವರು ತಮ್ಮ ಸ್ಥಾನ ಬಿಟ್ಟು ಹೊಸಬರಿಗೆ ಅವಕಾಶ ನೀಡಲಿ ಎಂದು ಎಂ.ಪಿ.ರೇಣುಕಾಚಾರ್ಯ ಆಗ್ರಹಿಸಿದ್ದಾರೆ.

ಅವರು ಮುಂದುವರೆದು ‘ನನಗೆ ಸಚಿವ ಸ್ಥಾನ ಕೊಡಿ ಎಂದು ಕೇಳುವುದಿಲ್ಲ. ಅದರ ಆಸೆಯೂ ನನಗಿಲ್ಲ. ಹೊಸ ಶಾಸಕರಿಗೆ ಸಚಿವ ಸ್ಥಾನ ಕೊಟ್ಟು ಅನುಭವಿ ನಾಯಕರು ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳಬೇಕು. ಇದನ್ನು ಪಕ್ಷದ ಹಿರಿಯರಿಗೂ ತಿಳಿಸಿದ್ದೇನೆ ಎಂದು ಹೇಳಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಕೆ.ಎಸ್.ಈಶ್ವರಪ್ಪ ಅವರು “ಸಚಿವ ಸ್ಥಾನ ಧಾರಾಳವಾಗಿ ಬಿಟ್ಟು, ಪಕ್ಷದ ಸಂಘಟನೆಗಾಗಿ ದುಡಿಯಲು ಸಿದ್ಧನಿದ್ದೇನೆ” ಎಂದು ತಿಳಿಸಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಮತಾಂತರವೆಂದು ತಪ್ಪುಗ್ರಹಿಕೆ-ಜಾನ್ಸನ್ ಡಿ ಮಾರ್ಕ್

0

ಇಳಕಲ್ ನ ಸೆಂಟ್ರಲ್ ಪಾಲ್ ಕಾನ್ವೆಂಟ್ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಪಾಲಕರಿಗೆ ಆಮಿಷವೊಡ್ಡಿ ಮತಾಂ ತರ ಮಾಡಲಾಗುತ್ತಿದ್ದು ಕೂಡಲೇ ಶಾಲೆಯ ಮಾನ್ಯತೆ ರದ್ದು ಪಡಿಸಿ ಎಂದು ಬಿಜೆಪಿ ಹಾಗೂ ಆರ್ ಎಸ್ ಎಸ್ ನ ಪ್ರಮುಖರು ಪ್ರತಿಭಟನೆ ನಡೆಸಿದರು.

ಡಿಸೆಂಬರ್ 25ರಂದು ಸೆಂಟ್ ಪಾಲ್ ಕಾನ್ವೆಂಟ್ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆ ನೆಪದಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಮಾಂಸದ ಊಟ ಬಡಿಸಿ, ಪ್ರಸಾದವೆಂದು ವೈನ್ ಹಾಗೂ ಸತ್ಯವೇದ ಎನ್ನುವ ಪುಸ್ತಕ ನೀಡಿದ್ದಾರೆ ಎಂಬ ಆರೋಪದ ಮೇರೆಗೆ ಶಾಲೆಗೆ ಶಿಕ್ಷಣ ಸಂಯೋಜಕರು ಭೇಟಿ ನೀಡಿ ಬಿಇಓ ಅವರಿಗೆ ಈ ಕುರಿತಂತೆ ವರದಿ ನೀಡಿದ್ದಾರೆ.

ಈ ಕುರಿತಂತೆ ಪ್ರತಿಕ್ರಿಯಿಸಿರುವ ಆಡಳಿತ ಮಂಡಳಿಯ ಸದಸ್ಯ ಜಾನ್ಸನ್.ಡಿ.ಮಾರ್ಕ್ ‘ನಮ್ಮ ಮೇಲಿನ ಆರೋಪಗಳು ಸುಳ್ಳು ನಾವು ಮತಾಂತರ ಮಾಡುತ್ತಿಲ್ಲ ಶಾಲೆಗೆ ಹೊಂದಿಕೊಂಡಿರುವ ಬೇರೆ ಕಟ್ಟಡದಲ್ಲಿ ಕ್ರಿಸ್ಮಸ್ ಆಚರಣೆ ನಡೆದಿದ್ದನ್ನು ಕೆಲವರು ತಪ್ಪಾಗಿ ಗ್ರಹಿಸಿದ್ದಾರೆ’ ಎಂದಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಪ್ರಧಾನಿ ಬಳಕೆಗೆ ಐಷಾರಾಮಿ ಕಾರು: ಕಾಂಗ್ರೆಸ್ ಟೀಕೆ

0

ವಿಶೇಷ ರಕ್ಷಣಾ ಪಡೆಯು ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಓಡಾಟಕ್ಕೆ ಹೊಸ ಕಾರು ಕರಿದಿಸಿ ರುವುದನ್ನು ಕಾಂಗ್ರೆಸ್ ಟೀಕಿಸಿದೆ.

ಕಾಂಗ್ರೆಸ್ ಈ ಕುರಿತಂತೆ ‘ಐಷಾರಾಮಿ ಕಾರಿನಲ್ಲಿ ಓಡಾಡಲು ಬಯಸುವವರು ಪ್ರಧಾನಿ ನರೇಂದ್ರ ಮೋದಿ ಅವರಂತೆ ಫಕೀರರಾದರೆ ಸಾಕು’ ಎಂದು ಲೇವಡಿ ಮಾಡಿದೆ.

ಕಾಂಗ್ರೆಸ್ ವಕ್ತಾರ ಗೌರವ ವಲ್ಲಭ್ ಅವರು ‘ಮೋದಿಯವರು ತಮ್ಮನ್ನು ತಾವು ಫಕೀರ, ಅಂತ ಎಂದೆಲ್ಲಾ ಕರೆದು ಕೊಳ್ಳುತ್ತಾರೆ. ಆದರೆ ಮೋದಿ 20 ಕೋಟಿ ರೂ. ಕಾರಿನಲ್ಲಿ ಓಡಾಡುತ್ತಾರೆ. ಮನೆ ನಿರ್ಮಿಸಲು 2,000 ಕೋಟಿ ರೂ. ವೆಚ್ಚ ಮಾಡುತ್ತಾರೆ. ಹೀಗೆ ಐಷಾರಾಮಿ ಬದುಕು ಬದುಕಲು ಎಲ್ಲರೂ ಮೋದಿ ಅವರಂತೆ ಸಂತರಾಗಬೇಕು’ ಎಂದು ಲೇವಡಿ ಮಾಡಿದ್ದಾರೆ.

‘ಎರಡು ವರ್ಷಗಳಲ್ಲಿ ಲಕ್ಷಾಂತರ ಜನರು ಕೋವಿಡ್ ನಿಂದಾಗಿ ಕೆಲಸ ಕಳೆದುಕೊಂಡಿದ್ದಾರೆ. ಲಕ್ಷಾಂತರ ಜನರ ವೇತನ ಕಡಿತವಾಗಿದೆ. ದೇಶಕ್ಕಿಂತ ಉದ್ಯಮಗಳ ವಹಿವಾಟು ಕುಸಿದಿದೆ. ಆದರೆ ಪ್ರಧಾನಿ ಮೋದಿ ಅವರು ಆಗಾಗ್ಗೆ ಕಾರು ಬದಲಿಸುವ ಕ್ರಮ ಮಾತ್ರ ಬದಲಾಗಿಲ್ಲ. ಎಸ್ ಪಿಜಿ ನಿಯಮಗಳ ಪ್ರಕಾರ ಪ್ರಧಾನಿ ಅವರ‌ ಬಳಸುವ ಕಾರನ್ನು ಪ್ರತಿ 6 ವರ್ಷಕ್ಕೆ ಒಮ್ಮೆ ಬದಲಾಗುತ್ತದೆ. ಆದರೆ 2014ರಲ್ಲಿ ಅಧಿಕಾರಕ್ಕೆ ಬಂದ ನಂತರ ಪ್ರಧಾನಿ ಮೋದಿ ಅವರ ಓಡಾಟಕ್ಕೆ ಬಿ ಎಂ ಡಬ್ಲ್ಯೂ 7 ಸೀರಿಸ್ ಸೆಡಾನ್ ಬಳಸಲಾಗುತ್ತಿತ್ತು. 2017ರಲ್ಲಿ ಟೊಯೋಟಾ ಲ್ಯಾಂಡ್ ಕ್ರೂಸರ್ ಖರೀದಿಸಲಾಗಿತು. ಈಗ 2021ರಲ್ಲಿ ಮರ್ಸಿಡೆಸ್ ಬೆಂಜ್ ಎಸ್ ಕ್ಲಾಸ್ ಖರೀದಿಸಲಾಗಿದೆ. ನೀವು ಕಾರನ್ನು ಖರೀದಿಸುವುದು ಆದರೂ ಏಕೆ?’ ಎಂದು ಗೌರವ್ ವಲ್ಲಭ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ದೇಶದಲ್ಲಿ ಕೋವಿಡ್ ಒಮಿಕ್ರಾನ್ ಜುಗಲ್ ಬಂದಿ?

0

ದೇಶದಲ್ಲಿ ಕೊರೋನಾ ವೈರಸ್ ಪ್ರಕರಣಗಳ ಸಂಖ್ಯೆ ಏರಿಕೆ ಕಾಣುತ್ತಿದೆ. 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ 9,195 ಪ್ರಕರಣಗಳು ಪತ್ತೆಯಾಗಿವೆ. ಮಹಾರಾಷ್ಟ್ರ ಹಾಗೂ ದೆಹಲಿಯಲ್ಲಿ ಹೆಚ್ಚು ಪ್ರಕರಣಗಳು ಪತ್ತೆಯಾಗಿದ್ದು, ಮುಂಚೂಣಿಯಲ್ಲಿವೆ.

ಮುಂಬೈನಲ್ಲಿ ಶೇಕಡಾ 80 ರಷ್ಟು ಪ್ರಕರಣಗಳು ದಾಖಲಾಗಿವೆ. 1,377 ಸೋಂಕಿತರು ಕಂಡುಬಂದಿದ್ದ ನಗರದಲ್ಲಿ ಬುಧವಾರ 2,510 ಪ್ರಕರಣಗಳು ವರದಿಯಾಗಿವೆ. ದೆಹಲಿಯಲ್ಲಿ 923 ಪ್ರಕರಣಗಳು ಪತ್ತೆಯಾಗಿವೆ ಹಿಂದಿನ ದಿನಕ್ಕೆ ಹೋಲಿಸಿದರೆ ಕೊರೋನಾ ಪ್ರಕರಣಗಳ ಸಂಖ್ಯೆ ಶೇ.86 ರಷ್ಟು ಏರಿಕೆಯಾಗಿದೆ.

ದೇಶದಲ್ಲಿ ಕೋವಿಡ್ ಜೊತೆ ಓಮಿಕ್ರಾನ್ ಪ್ರಕರಣಗಳ ಸಂಖ್ಯೆಯಲ್ಲಿಯು ಏರಿಕೆಯಾಗಿದೆ. 21 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಂದ ಒಟ್ಟು 781 ಪ್ರಕರಣಗಳು ಪತ್ತೆಯಾಗಿವೆ. ಓಮಿಕ್ರಾನ್ ಸೋಂಕಿನ ಸಂಖ್ಯೆಯಲ್ಲೂ ಸಹ ದೆಹಲಿ ಮೊದಲ ಸ್ಥಾನದಲ್ಲಿದೆ. ದೆಹಲಿಯಲ್ಲಿ 238 ಓಮಿಕ್ರಾನ್ ಪ್ರಕರಣಗಳು ಪತ್ತೆಯಾಗಿವೆ. ಮಹಾರಾಷ್ಟ್ರದಲ್ಲಿ 167 ಓಮಿಕ್ರಾನ್ ಪ್ರಕರಣಗಳು ದೃಡಪಟ್ಟಿವೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಗೆಲುವಿನ ಮೆಟ್ಟಿಲಲ್ಲಿ ಭಾರತ ತಂಡ

0

ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಟೆಸ್ಟ್ ಸರಣಿಯು ನಡೆಯುತ್ತಿದ್ದು ದಕ್ಷಿಣಾ ಆಫ್ರಿಕಾ ತಂಡಕ್ಕೆ ಭಾರತ ತಂಡವು ಎರೆಡನೇ ಇನ್ನಿಂಗ್ಸ್ ನಲ್ಲಿ 305 ರನ್ ಗಳ ಗುರಿ ನೀಡಿದೆ.
ಸೆಂಚುರಿಯನ್ ನಲ್ಲಿರುವ ಸೂಪರ್ ಸ್ಪೋರ್ಟ್ ಪಾರ್ಕ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ನಲ್ಲಿ 4 ನೇ ದಿನದಾಟ ಹೊತ್ತಿಗೆ 50.3 ಓವರ್ ಗಳಲ್ಲಿ ಆಲ್ ಔಟ್ ಆಗಿ 174 ರನ್ ಗಳಿಸಿತು.
ರಾಹುಲ್ 23 ಮತ್ತು ಮಧ್ಯಮ ಕ್ರಮಾಂಕದಲ್ಲಿ ರಿಷಬ್ ಪಂತ್ 34 ಎಸೆತಗಳಲ್ಲಿ 34 ರನ್ ಗಳಿಸಿ ಇವರಿಬ್ಬರೇ ಹೆಚ್ಚು ರನ್ ಗಳಿಸಿದ ಬ್ಯಾಟರ್ ಗಳಾದರು.ವಿರಾಟ್ ಬಳಗವು ಮೊದಲ ಇನ್ನಿಂಗ್ಸ್ ನಲ್ಲಿ 130 ರನ್ ಗಳ ಮುನ್ನಡೆ ಪಡೆದಿತ್ತು.ಆದ್ದರಿಂದ,300 ಕ್ಕು ಹೆಚ್ಚು ರನ್ ಗಳ ಗುರಿಯೊಡ್ಡಲು ಸಾಧ್ಯವಾಯಿತು.
ಆಫ್ರಿಕಾ ತಂಡದ ಬೌಲರ್ ಗಳ ವೇಗಿಗಳ ಸ್ವರ್ಗದಂತಿರುವ ಪಿಚ್ ನಲ್ಲಿ ಭಾರತದ ಬ್ಯಾಟರ್ ಗಳು ರನ್ ಗಳಿಸಲು ಮಾರ್ಕೊ ಜೀಸನ್ (55 ಕ್ಕೆ 4) ಅವರ ಮೊನಚಾದ ದಾಳಿಯ ಮುಂದೆ ಭಾರತದ ಬ್ಯಾಟರ್ ಗಳು ರನ್ ಗಳಿಸಲು ಬಹಳಷ್ಟು ಶ್ರಮಪಡಬೇಕಾಯಿತು.ಇದರಿಂದಾಗಿ,ತಂಡವು ಎರೆಡನೇ ಇನ್ನಿಂಗ್ಸ್ ನಲ್ಲಿ 50.3 ಓವರ್ ಗಳಲ್ಲಿ 174 ರನ್ ಗಳನ್ನು ಗಳಿಸಿತು.
ಆದರೆ,ಬೌಲರ್ ಗಳಿಗೆ ನೆರವು ನೀಡುತ್ತಿರುವ ಪಿಚ್ ನಲ್ಲಿ ಭಾರತ ತಂಡವು 6 ವಿಕೆಟ್ ಕಿತ್ತು ಬುಟ್ಟಿಗೆ ಹಾಕಿಕೊಂಡರೆ ವಿಜಯದ ಧ್ವಜ ಹಾರಿಸಬಹುದು.ಜಸ್ ಪ್ರೀತ್ ಬುಮ್ರಾ (22 ಕ್ಕೆ 2) , ಮೊಹಮ್ಮದ್ ಶಮಿ (29 ಕ್ಕೆ 1) ಮತ್ತು ಮೊಹಮ್ಮದ್ ಸಿರಾಜ್ (25 ಕ್ಕೆ 1) ಉತ್ತಮ ಬೌಲಿಂಗ್ ಮಾಡಿರುವುದರಿಂದ ಪ್ರವಾಸಿ ತಂಡದ ಆತ್ಮವಿಶ್ವಾಸ ಇಮ್ಮೆಟ್ಟಿಸಿದೆ.
ಪಂದ್ಯದ ಕೊನೆಯ ದಿನವಾದ ಗುರುವಾರ 305 ರನ್ ಗಳ ಗುರಿ ಬೆನ್ನತ್ತಿರುವ ಅತೀಥೆಯ ತಂಡವು 40.5 ಓವರ್ ಗಳಲ್ಲಿ 4 ವಿಕೆಟ್ ಗಳಿಗೆ 94 ರನ್ ಗಳಿಸಿದೆ.ಕ್ರೀಸ್ ನಲ್ಲಿರುವ ನಾಯಕ ಡೀನ್ ಎಲ್ಲರ್ 122 ಎಸೆತಗಳಲ್ಲಿ 52 ಹಾಗೂ ಬರಬೇಕಿರುವ ತೆಂಬಾ ಬವುಮಾ ಮತ್ತು ಕ್ವಿಂಟನ್ ಡಿ ಕಾಕ್ ಇವರ ಮೇಲೆ ಬ್ಯಾಟಿಂಗ್ ಶಕ್ತಿ ನಿಂತಿದೆ.
ಭಾರತದ ಬೌಲರ್ ಗಳ ಚಾಣಾಕ್ಷ ಬೌಲಿಂಗ್ ಮುಂದೆ ಒಂದು ಕಡೆ ವಿಕೆಟ್ ಗಳು ಪತನವಾಗುತ್ತಿದ್ದರೂ. ನಾಯಕ ಡೀನ್ ಎಲ್ಲರ್ ತಾಳ್ಮೆಯಿಂದ ಆಟವಾಡಿ ಅರ್ಧಶತಕ ಬಾರಿಸಿ ಕ್ರೀಸ್ ನಲ್ಲಿ ಉಳಿದರು.
ಡೀನ್ ಜೊತೆಗೆ ಉತ್ತಮ ಜೊತೆಯಾಟ ಕುದುರಿಸಿದ್ದ ‘ರಸಿ ವ್ಯಾನ್ ಡರ್ ಡಸೆ, 37 ನೇ ಓವರ್ ನಲ್ಲಿ ಬುಮ್ರಾ ಇನ್ ಸ್ಟಿಂಗರ್ ಎಸೆತವನ್ನು ಅಂದಾಜಿಸುವಲ್ಲಿ ತಪ್ಪಿದರರು.ಆಘಾತ ಅನುಭವಿಸಿದರು.ಇನ್ನಿಂಗ್ಸ್ ನ ಕೊನೆಯ ಓವರ್ ನಲ್ಲಿ ಬುಮ್ರಾ ಹಾಕಿದ ಯಾರ್ಕರ್ ಗೆ ರಾತ್ರಿಕಾವಲುಗಾರ ಕೇಶವ್ ಮಹರಾಜ್ ಅವರು ಶರಣಾದರು.
ಇನ್ನಿಂಗ್ಸ್ ನ ಎರೆಡನೇ ಓವರ್ ನಲ್ಲಿಯೇ ಮೊಹಮ್ಮದ್ ಶಮಿಯ ಸ್ಟಿಂಗ್ ಎಸೆತಕ್ಕೆ ಏಡನ್ ಮಾರ್ಕರಮ್ ಕ್ಲೀನ್ ಬೌಲ್ಡ್ ಆದರು.15 ನೇ ಓವರ್ ನಲ್ಲಿ ಕೀಗನ್ ಪೀಟರ್ಸನ್ ಅವರು ಸಿರಾಜ್ ಎಸೆತವನ್ನು ಕೆಣಕಿ ರಿಷಬ್ ಪಂತ್ ಗೆ ಕ್ಯಾಚ್ ಕೊಟ್ಟರು.
ಇವೆಲ್ಲದರ ನಡುವೆಯೂ ಡೀನ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ಮಾಡಿದರು.

ಮಿಂಚು ಸುದ್ದಿ
ಭಾರತಕ್ಕೆ 113 ರನ್ ಅಂತರದಲ್ಲಿ ಮೊದಲ ಟೆಸ್ಟ್ ಜಯ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಪ್ರೊ ಕಬಡ್ಡಿ ಲೀಗ್ : ದಬಾಂಗ್ ಡೆಲ್ಲಿ ಅಜೇಯ ಮುನ್ನಡೆ

0

ಬೆಂಗಳೂರಿನ ವೈಟ್ ಫೀಲ್ಡ್ ನ ಗ್ರ್ಯಾಂಡ್ ಶೆರಟಾನ್ ಹೋಟೆಲ್ ಮೈದಾನದಲ್ಲಿ ನಡೆಯುತ್ತಿರುವ ಪ್ರೊ ಕಬಡ್ಡಿ ಲೀಗ್ ಟುರ್ನಿಯೂ ಬುಧವಾರ 4 ತಂಡಗಳ ನಡುವೆ 2 ಪಂದ್ಯಗಳು ನಡೆಯಿತು.
ಬೆಂಗಾಲ್ ವಾರಿಯರ್ಸ್ ವಿರುದ್ಧ ದಬಾಂಗ್ ಡೆಲ್ಲಿ ಅಮೋಘ ಜಯ
ಮೊದಲನೇ ಪಂದ್ಯವು:
ದಬಾಂಗ್ ಡೆಲ್ಲಿ(52) ಮತ್ತು ಬೆಂಗಾಲ್ ವಾರಿಯರ್ಸ್ (35) ತಂಡಗಳ ನಡುವೆ ಪಂದ್ಯ ನಡೆಯಿತು.
ರೇಡರ್ ನವೀನ್ ಕುಮಾರ್ ಚುರುಕಿನ ಆಟದಿಂದ 24 ಅಂಕಗಳನ್ನು ಗಳಿಸಿದರು.ಇದರಿಂದಾಗಿ ತಂಡವು ಮೊದಲಾರ್ಧದಲ್ಲಿಯೇ 33-15 ರಿಂದ ಪಂದ್ಯದ ಮೇಲೆ ಬಿಗಿ ಹಿಡಿತ ಸಾಧಿಸಿತು. ಜೊತೆಗೆ ನವೀನ್ ಆಲ್ ರೌಂಡರ್ ಆಗಿಯೂ ಕೂಡ ಮಿಂಚಿದರು.ಅವರಿಗೆ 10 ಅಂಕಗಳನ್ನು ಬಂದವು.
ಅಮೋಘ ಆಟವಾಡಿದ ನವೀನ್ ಕುಮಾರ್ ನೆರವಿನಿಂದ ದಬಾಂಗ್ ಡೆಲ್ಲಿ ತಂಡವು ಪ್ರೊ ಕಬಡ್ಡಿ ಲೀಗ್ ನಲ್ಲಿ ತನ್ನ ಅಜೇಯ ಓಟ ಮುಂದುವರೆಸಿತು.
ಡೆಲ್ಲಿ ತಂಡವು ಇದುವರೆಗೆ 4 ಪಂದ್ಯಗಳನ್ನು ಆಡಿದ.ಅದರಲ್ಲಿ 3 ಗೆದ್ದು ಒಂದರಲ್ಲಿ ಟೈ ಮಾಡಿಕೊಂಡಿದೆ.ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
ಬೆಂಗಾಲ್ ತಂಡದ ನಾಯಕ ಮಣಿಂದರ್ ಸಿಂಗ್ ತಕ್ಕ ತಿರುಗೇಟು ನೀಡುವ ಪ್ರಯತ್ನ ಮಾಡಿದರು.ಅವರು 12 ರೇಡ್ ಗಳಿಂದ 16 ಅಂಕಗಳನ್ನು ಗಳಿಸಿದರು.ಅವರಿಗೆ ಸುಖೇಶ್ ಹೆಗಡೆ 9 ಪಾಯಿಂಟ್ಸ್ ಕೂಡ ಉತ್ತಮ ಜೊತೆ ನೀಡಿದರು.ಆದರೆ,ಡೆಲ್ಲಿ ತಂಡದ ವೇಗಕ್ಕೆ ಬೆಂಗಾಲ್ ಆಟ ಸಾಟಿಯಾಗಲಿಲ್ಲ.

ಯೋಧಾ ಮತ್ತು ಗುಜರಾತ್ ತಂಡಗಳ ನಡುವೆ ರೋಚಕ ಪಂದ್ಯ ಡ್ರಾ
ಎರೆಡನೇ ಪಂದ್ಯವು:
ಯು.ಪಿ ಯೋಧಾ(30) ಮತ್ತು ಗುಜರಾತ್ ಜಯಂಟ್ಸ್(30) ತಂಡಗಳ ನಡುವೆ ಪಂದ್ಯ ನಡೆಯಿತು. ಎರಡು ತಂಡಗಳ ಸಮಬಲ ಹೋರಾಟದಿಂದಾಗಿ ಪಂದ್ಯ ಡ್ರಾ ಮಾಡಿಕೊಂಡಿವೆ.
ಯೋಧಾ ತಂಡದ ಪ್ರದೀಪ್ ನರ್ವಾಲ್(11) ಮತ್ತು ರಾಕೇಶ್ ನರ್ವಾಲ್(13) ಅವರ ನಡುವಣ ಪೈಪೋಟಿಯು ಆಕರ್ಷಕವಾಗಿತ್ತು ಇವರಿಬ್ಬರು ಹರಿಯಾಣ ಮೂಲದ ಆಟಗಾರರು ತಮ್ಮ ತಂಡದ ಸೋಲು ತಪ್ಪಿಸಲು ಹೆಣದಾಡಿದರು.ಅರ್ಧವಿರಾಮದ ವೇಳೆಗೆ ಗುಜರಾತ್ ತಂಡವು 20-14 ರಿಂದ ಮುಂದಿತ್ತು.ಅದಕ್ಕೆ ನಂತರದ ಆಟದಲ್ಲಿ ಸೇಡು ತೀರಿಸುವಲ್ಲಿ ಯೋಧಾ ಸಫಲವಾಯಿತು.
ಯೋಧಾ ಆಟಗಾರರು ಗುಜರಾತ್ ತಂಡವನ್ನು 2 ಬಾರಿ ಅಲ್ ಔಟ್ ಮಾಡಿದರು. ಎಲ್ಲಾ ವಿಭಾಗಗಳಲ್ಲಿಯೂ ಮೇಲುಗೈ ಪಡೆದಿದ್ದರು.ಪ್ರದೀಪ್ ಜೊತೆಗೆ ಸುರೇಂದರ್ ಗಿಲ್ ಅವರು ಕೂಡ ತಂಡಕ್ಕೆ 6 ಪಾಯಿಂಟ್ ಸೇರಿಸಿದರು.

ಇಂದು ನಡೆಯಲಿರುವ ಪಂದ್ಯಗಳು:
೧. ಜೈಪುರ್ ಪಿಂಕ್ ಪ್ಯಾಂಥರ್ಸ್ ಮತ್ತು ಯು.ಮುಂಬಾ
ಸಮಯ:7.30
೨.ಹರಿಯಾಣ ಸ್ಟೀಲರ್ಸ್ ಮತ್ತು ಬೆಂಗಳೂರು ಬುಲ್ಸ್
ಸಮಯ:8.30

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ತುಳಿತಕ್ಕೊಳಗಾದವರ ರಕ್ಷಣೆ ಬಯಕೆ ಕಾಣುತ್ತಿಲ್ಲ- ತೆಲುಗು ಸಾಹಿತಿ ಪಿ.ಸತ್ಯವತಿ

0

ವಿಶ್ವವಿಖ್ಯಾತ ದೇವಸ್ಥಾನಗಳಿಗೆ ಸಾವಿರಾರು ರೂಪಾಯಿಗಳ ದೇಣಿಗೆ ನೀಡುವ ಸಮಾಜದಲ್ಲಿ ತುಳಿತಕ್ಕೆ ಒಳಗಾದವರನ್ನು ರಕ್ಷಣೆ ಮಾಡುವ ಬಯಕೆಯೇ ಇಲ್ಲ. ಕವಿಗಳ ವಿಚಾರಧಾರೆ ಪ್ರತಿಮೆಗಳಿಗೆ ಸೀಮಿತವಾಗಬಾರದು ಎಂದು ತೆಲುಗು ಸಾಹಿತಿ ಪಿ. ಸತ್ಯವತಿಯವರು ತಿಳಿಸಿದ್ದಾರೆ.

ತೀರ್ಥಹಳ್ಳಿ ತಾಲೂಕಿನ ಕುಪ್ಪಳಿಯಲ್ಲಿ ನಡೆದ ರಾಷ್ಟ್ರಕವಿ ಕುವೆಂಪು ಅವರ 117ನೇ ಜನ್ಮದಿನೋತ್ಸವದ ನಿಮಿತ್ತ ನಡೆದ ಸಮಾರಂಭದಲ್ಲಿ ಕುವೆಂಪು ರಾಷ್ಟ್ರೀಯ ಪುರಸ್ಕಾರ ಸ್ವೀಕರಿಸಿ ಅವರು ಮಾತನಾಡಿದರು.
ಕುವೆಂಪು ನೆಲದಲ್ಲಿ ಕನ್ನಡ ಮಾತನಾಡುಲು ಸಾಧ್ಯವಾಗುತ್ತಿಲ್ಲ ಎಂಬ ನೋವಿದೆ. ಮುಂದೆ ಕನ್ನಡ ಮಾತನಾಡಲು ಪ್ರಯತ್ನಿಸ
ಸುತ್ತೆನೆ ಎನ್ನುವುದರ ಮೂಲಕ ಕನ್ನಡ ಕಲಿಯುವ ಅಪೇಕ್ಷೆ ವ್ಯಕ್ತಪಡಿಸಿದರು.
ಸುಳ್ಳು ಹೊಗಳಿಕೆಯಲ್ಲಿ ಸಮಾಜ ತೇಲುತ್ತಿದೆ. ಸಾಮಾನ್ಯರ ಮೇಲೆ ಅಧಿಕಾರ ಪ್ರಭುತ್ವ ಸಾಧಿಸಿದೆ. ಸಾರ್ವಜನಿಕವಾಗಿ ದೃಢತೆ, ಸ್ವಾಯತ್ತತೆ, ವಿಶ್ವಾಸಾರ್ಹತೆ ಕಳೆದುಕೊಳ್ಳುತ್ತಿದ್ದೇವೆ. ಧರ್ಮ ಮತ್ತು ರಾಜಕೀಯ ಹಾದಿ ತಪ್ಪಿದೆ ಎಂದು ಸಾಹಿತಿ,ಕೆಎಸ್ಎನ್ ಪ್ರತಿಷ್ಠಾನದ ಅಧ್ಯಕ್ಷ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ತಿಳಿಸಿದರು.

ಕಾರ್ಯಕ್ರಮದಲ್ಲಿ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ನಾಡೋಜ ಹಂಪಿ ನಾಗರಾಜಯ್ಯ, ನಾಟಕಕಾರ ಡಾ.ಕೆ.ವೈ. ನಾರಾಯಣಸ್ವಾಮಿ , ವಿಶ್ರಾಂತ ಕುಲಪತಿ ಡಾ.ಕೆ. ಚಿದಾನಂದಗೌಡ ಮತ್ತು ಇತರರು ಉಪಸ್ಥಿತರಿದ್ದರು.