Thursday, February 12, 2026
Thursday, February 12, 2026
Home Blog Page 1794

ಗೋವಾದತ್ತ ಪ್ರವಾಸಿಗರ ಚಿತ್ತ

0

ರಾಜ್ಯದಲ್ಲಿ ನೈಟ್ ಕರ್ಫ್ಯೂ ಸೇರಿದಂತೆ ಹಲವು ನಿರ್ಬಂಧಗಳನ್ನು ವಿಧಿಸಿರುವುದರಿಂದ ಹೊಸ ವರ್ಷಾಚರಣೆಗಾಗಿ ಪ್ರವಾಸಿಗರು ಹೊರ ರಾಜ್ಯಕ್ಕೆ ಅದರಲ್ಲೂ ಮುಖ್ಯವಾಗಿ ಗೋವಾದತ್ತ ಮುಖ ಮಾಡಿದ್ದಾರೆ.
ಗೋವಾದಲ್ಲಿ ಯಾವುದೇ ನಿರ್ಬಂಧ ಇಲ್ಲದೆ ಇರುವುದರಿಂದ ಬೇರೆ ಬೇರೆ ರಾಜ್ಯಗಳ ಪ್ರವಾಸಿಗರು ಆಗಮಿಸುತ್ತಿದ್ದು, ಈಗಾಗಲೇ ಬೀಚ್ ಗಳಲ್ಲಿ ದೊಡ್ಡಮಟ್ಟದ ಪ್ರವಾಸಿಗರ ದಟ್ಟಣೆ ಕಾಣಿಸಿದೆ.
ಗೋವಾದಲ್ಲಿ ಇದುವರೆಗೆ ಒಂದು ಓಮಿಕ್ರಾನ್ ಕೇಸು ಪತ್ತೆಯಾಗಿದೆ. ಸರ್ಕಾರ ಹೊಸ ವರ್ಷಾಚರಣೆಗೆ ಯಾವುದೇ ಹೆಚ್ಚುವರಿ ನಿರ್ಬಂಧ ವಿಧಿಸಿಲ್ಲ. ಎರಡು ಡೋಸ್ ಲಸಿಕೆ ಪಡೆದ ಎಲ್ಲರಿಗೂ ಪ್ರವೇಶವಿದೆ. ಹೀಗಾಗಿ ಯುವಕರ ದಂಡು ಡಿ.31ರಂದು ರಾತ್ರಿ ಹಬ್ಬ ಮಾಡಲು ಗೋವಾ ಕಡೆಗೆ ಹೊರಟಿದೆ.
ಪ್ರವಾಸೋದ್ಯಮದಿಂದ ಆದಾಯ ನಿರೀಕ್ಷಿಸುವ ಗೋವಾ ಜ.3ರ ನಂತರ ನಿರ್ಬಂಧ ಹೇರುವ ಬಗ್ಗೆ ಚಿಂತನೆ ಮಾಡಿದೆ.
ರಾಜ್ಯದಲ್ಲಿ ಡಿ.27ರಿಂದಲೇ ರಾತ್ರಿ ಕರ್ಫ್ಯೂ ವಿಧಿಸಲಾಗಿದ್ದು, 10 ಗಂಟೆಯ ನಂತರ ಯಾವುದೇ ಓಡಾಟಕ್ಕೆ ಅನುಮತಿ ಇಲ್ಲ. ಇದು ಹೊಸ ವರ್ಷಾಚರಣೆಗೆ ಸಿದ್ಧತೆ ನಡೆಸಿದ್ದ ಹೋಟೆಲ್, ರೆಸಾರ್ಟ್ ಗಳಿಗೆ ದೊಡ್ಡ ಹೊಡೆತ ನೀಡಿದೆ. ಮೈಸೂರು, ಕೊಡಗು, ಹಾಸನ ಸೇರಿದಂತೆ ರಾಜ್ಯದ ನಾನಾ ಕಡೆಗಳಲ್ಲಿ ರೆಸಾರ್ಟ್ ಬುಕ್ಕಿಂಗ್ ಕ್ಯಾನ್ಸಲ್ ಆಗಿದೆ. ಕಠಿಣ ನಿಯಮಗಳಿಂದಾಗಿ ಇಲ್ಲಿನ ಉದ್ಯಮಗಳು ಮತ್ತು ಒಟ್ಟಾರೆಯಾಗಿ ರಾಜ್ಯ ದೊಡ್ಡ ಮೊತ್ತದ ಆದಾಯವನ್ನು ಕಳೆದುಕೊಳ್ಳುವಂತಾಗಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಮೇಕೆದಾಟು ಪಾದಯಾತ್ರೆ : ಕುಮಾರಣ್ಣನ ಕುಟುಕು

0

ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ ಎಂಬ ಪಾದಯಾತ್ರೆ ಮಾಡಿ ಉತ್ತರ ಕರ್ನಾಟಕಕ್ಕೆ ಟೋಪಿ ಹಾಕಿದಂತೆಯೇ, ಮೇಕೆದಾಟು ವಿಚಾರದಲ್ಲಿಯೂ ಕೆಪಿಸಿಸಿ ಅಧ್ಯಕ್ಷರು ನನ್ನನ್ನು ಸೇರಿದಂತೆ 83 ತಾಲೂಕುಗಳ ಜನರಿಗೆ ಮೇಕೆದಾಟು ಮಕ್ಮಲ್ ಟೋಪಿ ಹಾಕಲು ಹೊರಟಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರು ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರಣಿ ಟ್ವೀಟ್ ನಲ್ಲಿ ‘ ನೀರಾವರಿ ವಿಷಯದಲ್ಲಿ ರಾಜ್ಯಕ್ಕೆ ಎಚ್. ಡಿ. ದೇವೇಗೌಡರು ಕೊಟ್ಟ ಕಾಣಿಕೆ ಅಗಣಿತ. ಮೇಕೆದಾಟು ಮೂಲ ರುವಾರಿಯೇ ಅವರು. ಅವರನ್ನೇ ಮರೆತ ಕಾಂಗ್ರೆಸ್ ನಾಯಕರು ಸತ್ಯಕ್ಕೆ ಸಮಾಧಿ ಕಟ್ಟುತ್ತಿದ್ದಾರೆ. ಅವರಿಗೆ ಸತ್ಯ ಹೇಳಲು ನಾಲಿಗೆ ಹೊರಳುತ್ತದೆ. ಆದರೆ, ಸತ್ಯಕ್ಕೆ ನಾಲಿಗೆ ಪ್ರಮೇಯವಿಲ್ಲ. ನೀರಾವರಿಗಾಗಿ ಗೌಡರು ಅವಿರತವಾಗಿ ಶ್ರಮಿಸಿದ್ದಾರೆ. ಅವರ ನೀರಾವರಿ ಕನಸನ್ನು ಬುಲ್ಡೋಜ್ ಮಾಡುವಂತಹ ರಾಜಕಾರಣವನ್ನು ಕೈ ಮಾಡುತ್ತಿದೆ ಎಂದು ಜರಿದಿದ್ದಾರೆ.

ಬೆಂಗಳೂರಿನ ನ್ಯಾಯಯುತ ಪಾಲು ಕಾವೇರಿ ನಾಲ್ಕನೇ ಹಂತದ 9 ಟಿಎಂಸಿ ನೀರನ್ನು ತಮಿಳುನಾಡಿನ ಮಣಿದು ಕಾಂಗ್ರೆಸ್ ತಡೆದಿತ್ತು. ಆಗ ನರಸಿಂಹರಾವ್ ಪ್ರಧಾನಿಯಾಗಿದ್ದರು. ಕನ್ನಡಿಗರ ಕನಸುಗಳಿಗೆ ಕೊಳ್ಳಿ ಇಟ್ಟ ಅದೇ ಪಕ್ಷ ಈಗ ಸತ್ಯಗಳನ್ನು ಹೂತು ಮುಜುಗರವಿಲ್ಲದೆ ಮತ ಯಾತ್ರೆಗೆ ಹೊರಟಿದೆ. ಆಗ ಮುಖ್ಯಮಂತ್ರಿ ಆಗಿದ್ದ ದೇವೇಗೌಡರನ್ನು ತಡೆದ ಪಕ್ಷಕ್ಕೆ ಪ್ರಧಾನಿಯಾದ ಗೌಡರನ್ನು ತಡೆಯಲು ಧೈರ್ಯ ಸಾಲಲಿಲ್ಲ ಎಂದು ಕುಮಾರಸ್ವಾಮಿ ಅವರು ಹೇಳಿದರು.

ಬೆಂಗಳೂರಿಗೆ ಕಾವೇರಿ ನೀರು ಕೊಟ್ಟವರು ದೇವೇಗೌಡರು ಭಗೀರಥನನ್ನೇ ಮರೆತ ಕಾಂಗ್ರೆಸ್ ನ ಕೃತಘ್ನ ರಾಜಕಾರಣಕ್ಕೆ ಏನು ಹೇಳುವುದು? ಕಾಂಗ್ರೆಸ್ ನ ಐದುವರ್ಷದ ಸರ್ಕಾರದಲ್ಲಿ ಸಿದ್ಧಹಸ್ತರೇ ಮುಖ್ಯಮಂತ್ರಿಯಾಗಿದ್ದರು. ಆಗ ಕೇಂದ್ರದ ಮುಂದೆ ಪ್ರತಾಪ ತೋರಬಹುದಿತ್ತು. ಆಗ ಗಾಂಧಿ ಪ್ರತಿಮೆ ಮುಂದೆ ಉಪವಾಸ ಕೂತ ಮಣ್ಣಿನ ಮಗನ ಖದರಿಗೆ ಕೇಂದ್ರವೇ ನಡುಗಿತ್ತು. ದೆಹಲಿಯಿಂದ ಸಚಿವರು ಓಡಿಬಂದರು. ಅದೆಲ್ಲವನ್ನು ಕಾಂಗ್ರೆಸ್ ಮರೆತಿದೆಯೇ ಎಂದು ಕುಮಾರಸ್ವಾಮಿ ಅವರು ಪ್ರಶ್ನಿಸಿದರು.

ರಾಜ್ಯದ ಹಿತದ ಪ್ರಶ್ನೆ ಬಂದಾಗ ಗೌಡರು ರಾಜ್ಯದ ವರಲ್ಲ. ಅವರೊಬ್ಬರಿಂದಲೇ ಮೇಕೆದಾಟು ಯೋಜನೆ ಸಾಕಾರ ಸಾಧ್ಯ. ಇಲ್ಲಿ 30ವರ್ಷ ಆಳಿದವರು ಕಾವೇರಿ ಕೃಷ್ಣ ವಿಚಾರದಲ್ಲಿ ಕೊಟ್ಟ ಕೊಡುಗೆ ಏನು ಎಂದು ಕುಮಾರಸ್ವಾಮಿ ಅವರು ಪ್ರಶ್ನಿಸಿದ್ದಾರೆ.

ದೇವೇಗೌಡರು ಕೃಷ್ಣೆ, ಕಾವೇರಿ ಕೊಳ್ಳದಲ್ಲಿ ಮಾಡಿದ ಸಾಧನೆ ತಿಳಿಯಲು ಇತಿಹಾಸದ ಪುಟಗಳನ್ನು ನೋಡಬೇಕು. ಪಾಪ ತೊಳೆಯುವ ತಾಯಿ ಲೋಕಪಾವನಿ ಈಗ ಓಟಿನ ದಾಳವಾಗುತ್ತಿರುವುದು ನಾಡಿನ ದುರ್ದೈವ. ನೀರಿನ ಮುಂದೆ ಕಪಟನಾಟಕ ಮಾಡುವ ಸಿದ್ಧಹಸ್ತ, ಡಿಸೈನ್ ಶೂರರಿಗೆ ಮುಂದೆ ಕಾದಿದೆ ಶಾಸ್ತಿ. ಭೂತಾಯಿ ಒಡಲಿನ ಮಣ್ಣು ಬಗೆದ, ಕಲ್ಲುಬಂಡೆಗಳನ್ನು ನುಂಗಿದ ರಾಕ್ಷಸ ರಾಜಕಾರಣದ ಕಾಕದೃಷ್ಟಿ ಈಗ ತಾಯಿ ಕಾವೇರಿ ಮೇಲೆ ಬಿದ್ದಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರು ಕುಟುಕಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಹಿಂದೂ ದೇವಾಲಯಗಳಿಗೆ ಆದಾಯ ಸ್ವಾಯತ್ತತೆ

0

ಕರ್ನಾಟಕದ ಹಿಂದೂ ದೇವಸ್ಥಾನಗಳನ್ನು ಸರ್ಕಾರ ಹಿಡಿತದಿಂದ ಮುಕ್ತಗೊಳಿಸಿ ಅಲ್ಲಿ ಸಂಗ್ರಹವಾಗುವ ಹಣವನ್ನು ಅಲ್ಲಿನ ಅಭಿವೃದ್ಧಿಗೆ ಬಳಸಲು ಅನುವು ಮಾಡಿಕೊಡಬೇಕು ಎಂಬ ಸುಳಿವನ್ನು ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ನೀಡಿದ್ದಾರೆ.

ಹುಬ್ಬಳ್ಳಿಯ ಡೆನಿಸನ್ಸ್ ಬಿಜೆಪಿ ಕಾರ್ಯಕಾರಿಣಿಯ ಸಮಾರೋಪದಲ್ಲಿ ಅವರು ಮಾತನಾಡುತ್ತಿದ್ದರು. ” ರಾಜ್ಯದ ಹಿಂದೂ ದೇವಾಲಯಗಳನ್ನು ಕಾನೂನು ಕ್ರಮದಿಂದ ಬಿಡುಗಡೆಗೊಳಿಸಲಾಗುವುದು. ಈ ಸಂಬಂಧ ಬಜೆಟ್ ಅಧಿವೇಶನ ದೊಳಗೆ ಕಾಯ್ದೆ ತಯಾರಾಗುತ್ತದೆ ಎಂದು ಮಾನ್ಯ ಮುಖ್ಯಮಂತ್ರಿ ಅವರು ಭರವಸೆ ನೀಡಿದ್ದಾರೆ.

ಹಿಂದೂ ದೇವಾಲಯಗಳನ್ನು ಸರ್ವ ರೀತಿಯಿಂದಲೂ ಸ್ವತಂತ್ರ ಗೊಳಿಸುವುದು ನಮ್ಮ ಸರ್ಕಾರದ ಉದ್ದೇಶ. ರಾಜ್ಯದ ಅನ್ಯ ಧರ್ಮಗಳ ಪ್ರಾರ್ಥನಾ ಮಂದಿರಗಳಿಗೆ ಬೇರೆಬೇರೆ ಕಾನೂನು ಅಡಿ ರಕ್ಷಣೆ ನೀಡಲಾಗಿದೆ. ಧಾರ್ಮಿಕ ಆಚರಣೆಗೆ ಅವರಿಗೆ ಸ್ವಾತಂತ್ರ್ಯ ಇದೆ. ಆದರೆ, ಹಿಂದೂ ದೇವಾಲಯಗಳ ನಿಯಂತ್ರಣಕ್ಕೆ ಕಾನೂನು ಕಟ್ಟುಪಾಡು ವಿಧಿ ಸಿದ್ದರಿಂದ ಬಂದ ಆದಾಯವನ್ನು ಅಧಿಕಾರಿಗಳ ಅನುಮತಿ ಇಲ್ಲದೆ ದೇಗುಲದ ಅಭಿವೃದ್ಧಿಗೆ ಬಳಸಿಕೊಳ್ಳಲಾಗುತ್ತಿಲ್ಲ. ಇದನ್ನು ಮುಕ್ತಗೊಳಿಸುವುದು ನಮ್ಮ ಉದ್ದೇಶ. ಬಜೆಟ್ ಅಧಿವೇಶನದ ಒಳಗೆ ಈ ಸಂಬಂಧ ಕಾನೂನು ತರಲಾಗುತ್ತದೆ ಎಂದು ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ತಿಳಿಸಿದರು.

ಧಾರ್ಮಿಕ ದತ್ತಿ ಇಲಾಖೆ ಅಧೀನದ ದೇವಾಲಯಗಳಲ್ಲಿ ಸಂಗ್ರಹವಾದ ಆದಾಯ ಸರ್ಕಾರದ ಸುಪರ್ದಿಗೆ ಹೋಗುತ್ತದೆ. ನಂತರ ಸರ್ಕಾರವು ದೇವಸ್ಥಾನಗಳ ಮೂಲಸೌಕರ್ಯ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡುತ್ತದೆ. ಆದರೆ ದೇವಸ್ಥಾನಗಳಿಂದ ಬರುವ ಆದಾಯವನ್ನು ಬೇರೆ ಉದ್ದೇಶಕ್ಕೆ ಬಳಸಲಾಗುತ್ತದೆ. ಇದರಿಂದ ಧಾರ್ಮಿಕ ಭಾವನೆಯಿಂದ ಭಕ್ತರು ದೇವಾಲಯಗಳಿಗೆ ನೀಡಿದಂತಾಗುತ್ತದೆ ಎಂಬ ಆಕ್ಷೇಪವಿದೆ.

ಈ ಹಿನ್ನೆಲೆಯಲ್ಲಿ ದೇಗುಲಗಳಲ್ಲಿ ಸಂಗ್ರಹವಾದ ಆದಾಯವನ್ನು ಅದೇ ಉದ್ದೇಶಕ್ಕೆ ವಿನಿಯೋಗ ಮಾಡುವುದು ಬಿಡಬೇಕು ಅಗತ್ಯ ಕಂಡರೆ ಈ ನಿಟ್ಟಿನಲ್ಲಿ ಕಾಯ್ದೆ ತರಬೇಕು ಎಂಬ ಒತ್ತಾಯ ಕೇಳಿಬಂದಿತ್ತು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಓಮಿಕ್ರಾನ್ ಗೆ ಪ್ರತಿರೋಧ ತಪ್ಪಿಸುವ ಲಕ್ಷಣ !

0

ಕೇಂದ್ರ ಸರ್ಕಾರದ ವೈರಾಣು ಸಂರಚನೆಯ ವಿಶ್ಲೇಷಣೆ ಸಂಸ್ಥೆ ‘ಐಎನ್ಎಸ್ಎಸಿಒಜಿ’ ಕೋವಿಡ್ ಲಸಿಕೆ ಪಡೆದಿರುವುದರಿಂದ ಮತ್ತು ಈ ಹಿಂದೆ ಕೋವಿಡ್ ತಗುಲಿದ್ದರಿಂದ ಬಂದಿರುವ ಪ್ರತಿರೋಧಕ ಶಕ್ತಿಯನ್ನು ತಪ್ಪಿಸಿ, ಕೋವಿಡ್ ಹರಡುವ ಸಾಮರ್ಥ್ಯವು ರೂಪಾಂತರಿ ತಳಿ ಓಮಿಕ್ರಾನ್ ಗೆ ಅಧಿಕವಾಗಿದೆ ಎಂದು ವೈಜ್ಞಾನಿಕ ಅಧ್ಯಯನಗಳು ತಿಳಿಸಿವೆ.

ವಿಜ್ಞಾನ ಇಲಾಖೆಯ ಅಡಿಯಲ್ಲಿ ‘ಐಎನ್ಎಸ್ಎಸಿಒಜಿ’ ಸಂಸ್ಥೆಯು ದೇಶಾದ್ಯಂತ ಓಮಿಕ್ರಾನ್ ಪ್ರಕರಣಗಳ ಪತ್ತೆ ನಡೆಸುತ್ತಿರುವ ವೈರಾಣು ಸಂರಕ್ಷಣೆ ವಿಶ್ಲೇಷಣೆ ಪರೀಕ್ಷೆಗಳನ್ನು ಈ ಸಂಸ್ಥೆ ಮಾರ್ಗಸೂಚಿಯ ಅಡಿಯಲ್ಲಿಯೇ ನಡೆಸಲಾಗುತ್ತಿದೆ.

ಆಫ್ರಿಕಾ ದಕ್ಷಿಣ ದೇಶಗಳು, ಯುರೋಪ್ ನ ದೇಶಗಳು ಹಾಗೂ ಅಮೆರಿಕಾದಲ್ಲಿ ಡೆಲ್ಟಾ ರೂಪಾಂತರ ತಳಿ ಓಮಿಕ್ರಾನ್ ವ್ಯಾಪಕವಾಗಿ ಹರಡಿದೆ. ಈ ದೇಶಗಳಲ್ಲಿ ಓಮಿಕ್ರಾನ್ ತಳಿಯೇ, ಪ್ರಧಾನ ತಳಿಯಾಗಿದೆ. ಲಸಿಕೆಯಿಂದ ಬಂದಿರುವ ಪ್ರತಿರೋಧಕ ಶಕ್ತಿಯನ್ನು ತಪ್ಪಿಸುವ ಸಾಮರ್ಥ್ಯ ಓಮಿಕ್ರಾನ್ ತಳಿಗೆ ಇದೆ ಎಂಬುದನ್ನ ಪ್ರಾಯೋಗಿಕ ಅಧ್ಯಯನಗಳಲ್ಲಿ ಪತ್ತೆಯಾಗಿದೆ. ಈ ಕಾರಣದಿಂದಲೇ ಡೆಲ್ಟಾವನ್ನು ಮೀರಿ , ತೀವ್ರವಾಗುವ ಸಾಮರ್ಥ್ಯ ಈ ತಳಿಗೆ ಇರುವ ಸಾಧ್ಯತೆ ಇದೆ ಎಂದು ‘ಐಎನ್ಎಸ್ಎಸಿಒಜಿ’ ಸಂಸ್ಥೆಯು ತನ್ನ ದಿನದ ಪ್ರಕಟಣೆಯಲ್ಲಿ ತಿಳಿಸಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಮತಾಂತರ ನಿಷೇಧ ಕಾಯಿದೆ ಅನಗತ್ಯ- ಮಾಜಿ ಪ್ರಧಾನಿ

0

ಇತ್ತೀಚೆಗೆ ಕರ್ನಾಟಕ ಸರ್ಕಾರವು ವಿಧಾನ ಸಭ ಅಧಿವೇಶನದಲ್ಲಿ ಮಂಡಿಸಿದ
ಮತಾಂತರ ನಿಷೇಧ ಕಾಯಿದೆ
ಅಂಗೀಕೃತವಾದ ಬಗ್ಗೆ
ಮಾಜಿ ಪ್ರಧಾನಿ ಶ್ರೀ ಎಚ್ .ಡಿ. ದೇವೇಗೌಡರು ” ಈ ಕಾಯಿದೆ ಅನಗತ್ಯವಿತ್ತು “ಎಂದು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ತಾವು ಪ್ರಧಾನಿಯಾದ ಹತ್ತು ತಿಂಗಳ ಅವಧಿಯಲ್ಲಿ ಒಂದೂ ಕೋಮು ಹಿಂಸಾಚಾರ ಘಟಿಸಿಲ್ಲ. ಬಿಜೆಪಿ ಚಾಲಿತ ಸರ್ಕಾರವು ಈ ಹಿಂದೆ ಸಿದ್ಧರಾಮಯ್ಯ ನವರು ಮುಖ್ಯಮಂತ್ರಿಗಳಾಗಿದ್ದಾಗ ಸಿದ್ಧಪಡಿಸಿದ್ದ ಕರಡನ್ನ ಈಗ ಅಂಗೀಕರಿಸುತ್ತಿದ್ದೇವೆ
ಎಂದು ಹೇಳುತ್ತಿದ್ದಾರೆ. ಕುಮಾರ ಸ್ವಾಮಿ ಅವರು ಅದನ್ನ ವಿರೋಧಿಸಿದ್ದಾರೆ. ತಾವು ಪ್ರಧಾನಿಯಾಗಿದ್ದಾಗ
ಕಾಶ್ಮೀರದಲ್ಲಿ ನಾಲ್ಕು ದಿನ ತಂಗಿದ್ದೆ. ಆಡಳಿತದಲ್ಲಿದ್ದವರು ಪ್ರತಿಯೊಬ್ಬರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು.ಎಲ್ಲರನ್ನೂ ರಕ್ಷಿಸಬೇಕು. ಅಹಿತಕರ ಘಟನೆಗಳಾಗುವುದನ್ನ ತಪ್ಪಿಸಲು ಕ್ರಮಕೈಗೊಳ್ಳಬೇಕು
ಎಂದಿದ್ದಾರೆ.

ಮೇಕೆದಾಟಿಗೆ ಕಾಂಗ್ರೆಸ್ ಪಾದಯಾತ್ರೆಯ ಬಗ್ಗೆ
ಪ್ರಸ್ತಾಪಿಸಿ, ಡಿ.ಕೆ ಶಿವಕುಮಾರ್ ಅವರು ಕಾಂಗ್ರೆಸ್ ಜೆಡಿಎಸ್ ಅಧಿಕಾರದಲ್ಲಿದ್ದಾಗ
ನೀರಾವರಿ ಇಲಾಖೆ ಸಚಿವರಾಗಿದ್ದರು. ಆಗಲೇ ಅವರು ಅದರ ಬಗ್ಗೆ ಮುಂದುವರೆಯುವ ಬಗ್ಗೆ ಯಾಕೆ ಯೋಚಿಸಲಿಲ್ಲ ? ಎಂದು ಕೇಳಿದರು. ಆದರೂ ಈ ಸಮಸ್ಯೆ ಬಗೆಹರಿದರೆ ರಾಜ್ಯದ ಜನಕ್ಕೆ ಒಳಿತಾಗುತ್ತದೆ ಎಂಬ ಸಮಾಧಾನ ವ್ಯಕ್ತಪಡಿಸಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಚಂಚಲತೆಯಲ್ಲಿ ಕರ್ನಾಟಕ ಬಂದ್ ತೀರ್ಮಾನ

0

ಕನ್ನಡ ಚಳುವಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ ನಿಷೇಧಕ್ಕೆ ಆಗ್ರಹಿಸಿ ಕನ್ನಡಪರ ಸಂಘಟನೆಗಳ ಒಕ್ಕೂಟ ಶುಕ್ರವಾರದಂದು ಕರ್ನಾಟಕ ಬಂದ್ ಗೆ ಕರೆ ನೀಡಿದೆ. ಕರ್ನಾಟಕ ಬಂದ್ ಕುರಿತಂತೆ ಕನ್ನಡ ಪರ ಸಂಘಟನೆಗಳಲ್ಲಿ ಬಿನ್ನಾಭಿಪ್ರಾಯ ಇರುವುದರಿಂದ ಸಂಪೂರ್ಣ ರಾಜ್ಯ ಬಂದ್ ಸಾಧ್ಯತೆ ಕುರಿತು ಅನುಮಾನ ವ್ಯಕ್ತವಾಗಿದೆ.

ಮಹಾರಾಷ್ಟ್ರದಲ್ಲಿ ಕನ್ನಡ ಬಾವುಟ ಸುಟ್ಟಿರುವುದು ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಭಗ್ನ ಬಸವೇಶ್ವರ ಭಾವಚಿತ್ರಕ್ಕೆ ಸಗಣಿ ಬಳಿದಿರುವುದು ಖಂಡಿಸಿ ಬಗ್ಗೆ ಕರೆನೀಡಲಾಗಿದೆ. ರಾಜ್ಯದಲ್ಲಿ ಎಂ ಇ ಎಸ್ ನಿಷೇಧ ಹಾಗೂ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕನ್ನಡಪರ ಸಂಘಟನೆಗಳು ಪ್ರತಿಭಟನೆಗೆ ಮುಂದಾಗಿದ್ದಾರೆ.

ಕರ್ನಾಟಕ ಬಂದ್ ಕುರಿತಂತೆ ಕರ್ನಾಟಕ ರಕ್ಷಣಾ ವೇದಿಕೆಯ ಟಿ.ಎ.ನಾರಾಯಣಗೌಡ ಬಣವು ‌ ಬಂದ್ಗೆ ಬೆಂಬಲಿಸುವುದಿಲ್ಲ ಎಂದು ತಿಳಿಸಿದೆ. ವಾಟಾಳ್ ನಾಗರಾಜ್ ಅವರಿಗೆ ಪ್ರವೀಣ್ ಕುಮಾರ್ ಶೆಟ್ಟಿ ಅವರು ಜನರು ಕೋವಿಡ್ ನಿಂದ ಆರ್ಥಿಕ ಸಂಕಷ್ಟದಲ್ಲಿರುವ ಕಾರಣದಿಂದ ಬಂದ್ ಕೈಬಿಡುವಂತೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.

ಕರ್ನಾಟಕ ಬಂದ್ ಕುರಿತಂತೆ ಗೃಹಸಚಿವ ಆರಗ ಜ್ಞಾನೇಂದ್ರ ಅವರು “ಕೋವಿಡ್ ನಿಂದಾಗಿ ಎರಡು ವರ್ಷಗಳಿಂದ ವಾಣಿಜ್ಯ ಚಟುವಟಿಕೆಗಳು ಸರಿಯಾಗಿ ನಡೆಯುತ್ತಿಲ್ಲ. ಬಲವಂತದ ಬಂದ್ ಗೆ ಕಾನೂನು ಕ್ರಮ ಅನಿವಾರ್ಯ” ಎಂದು ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಪ್ರಧಾನಿಗೆ ವಿಶೇಷ ಭದ್ರತೆಯ ವಿಶಿಷ್ಟ ಕಾರು

0

ದೇಶದ ಮಾನ್ಯ ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತೆಯನ್ನು ಹೆಚ್ಚಿಸುವ ಸಲುವಾಗಿ ‘ವಿಶೇಷ ಭದ್ರತಾ ಪಡೆ’ಯು ಅತ್ಯಂತ ಸುಸಜ್ಜಿತ ಮರ್ಸಿಡಿಸ್ ಮೆಬ್ಯಾಷ್ ಎಸ್650 ಕಾರನ್ನು ಒದಗಿಸಿದೆ.

ಈ ಕಾರು ಬುಲೆಟ್ ಪ್ರೂಫ್ ಮಾತ್ರವಲ್ಲದೆ ಸ್ಪೋಟದಿಂದಲೂ ರಕ್ಷಣೆ ಒದಗಿಸಬಲ್ಲದು. ಎಕೆ-47 ನಂತಹ ರೈಫಲ್ ನ ಗುಂಡುಗಳನ್ನು ತಡೆಯಲು ಪಾಲಿಕಾರ್ಬೊನೇಟ್ ಕೋಟಿಂಗ್ ಹೊಂದಿರುವಂತಹ ಸದೃಢ ಕಿಟಕಿ ಗಾಜುಗಳನ್ನು ಹೊಂದಿದೆ. 2 ಮೀಟರ್ ವ್ಯಾಪ್ತಿಯಲ್ಲಿ 15 ಕೆಜಿ ಟಿ ಎನ್ ಟಿ ಸ್ಫೋಟಗೊಂಡರೂ ಸಹ ಈ ಕಾರು ರಕ್ಷಣೆ ಒದಗಿಸಬಲ್ಲದು.

ಕಾರಿನ ಇಂಧನದ ಟ್ಯಾಂಕಿ ವಿಶೇಷ ಕೋಟಿಂಗ್ ಮಾಡಲಾಗಿದೆ. ಈ ಕೋಟಿಂಗ್ ಸದಾನಂದ ಉಂಟಾದರೆ ತಾನಾಗಿಯೇ ಮತ್ತೆ ಫೀಲ್ ಆಗುತ್ತದೆ.

12 ಕೋಟಿ ರೂ ಬೆಲೆಬಾಳುವ ಈ ಕಾರು 6.0 ಲೀಟರ್ ನ ಟ್ವಿನ್ ಟರ್ಬೊ ಎಂಜಿನ್ ಹೊಂದಿದೆ. 516 ಬಿ ಎಚ್ ಪಿ ಶಕ್ತಿ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಆದರೆ ಇದರ ಗರಿಷ್ಠ ವೇಗವನ್ನು ಗಂಟೆಗೆ 160 ಕಿಲೋಮೀಟರ್ ಗೆ ಸೀಮಿತಗೊಳಿಸಲಾಗಿದೆ.

ವಿಷಾನಿಲ ಧಾಳಿ ವೇಳೆ ಕಾರಿನಲ್ಲಿ ಸಿಲುಕಿಕೊಂಡ ವ್ಯಕ್ತಿಯ ಉಸಿರಾಟಕ್ಕೆ ವಿಶೇಷ ವ್ಯವಸ್ಥೆಯನ್ನು ಈ ಕಾರು ಹೊಂದಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಆಗಿರುವ ತಪ್ಪು ಸರಿಪಡಿಸಿ ಚುನಾವಣೆಗೆ ಸಿದ್ಧರಾಗೋಣ

0

ಪರಿಷತ್ ಹಾಗೂ ವಿಧಾನಸಭೆ ಉಪಚುನಾವಣೆಯಲ್ಲಿ ಆಗಿರುವ ತಪ್ಪು ಸರಿಪಡಿಸಿಕೊಂಡು ಪಂಚಾಯಿತಿ ಚುನಾವಣೆಗಳನ್ನು ಗಂಭೀರವಾಗಿ ಸ್ವೀಕರಿಸಿ ಗೆಲುವು ಸಾಧಿಸಬೇಕೆಂದು ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಸಂದೇಶವನ್ನು ನೀಡಿದ್ದಾರೆ.

2 ದಿನಗಳ ಪಕ್ಷದ ರಾಜ್ಯ ಕಾರ್ಯಕಾರಣಿ ಉದ್ಘಾಟಿಸಿ ಮಾತನಾಡುತ್ತಿದ್ದರು.”ಪಂಚಾಯಿತಿ ಚುನಾವಣೆ ವಿಧಾನಸಭೆಗೆ ದಿಕ್ಸೂಚಿ ಎಂದು ಭಾವಿಸಿ ಶತಾಯಗತಾಯ ಗೆಲ್ಲಬೇಕು” ಎಂದು ಅರುಣ್ ಸಿಂಗ್ ಸುಚಿತ ಅವರು ಹೇಳಿದರು.

ಹುಬ್ಬಳ್ಳಿ ಯು ಬಿಜೆಪಿ ವಿಚಾರಗಳ ಕೇಂದ್ರವಾಗಿದೆ. ಕರ್ನಾಟಕದಲ್ಲಿ ಬಿಜೆಪಿ ಬಲವರ್ಧನೆಯಲ್ಲಿ ಈ ಭಾಗದ ಕೊಡುಗೆ ಅನನ್ಯ ಎಂದು ಹೊಗಳಿದರು.

‘ಕೊರೋನೋತ್ತರದಲ್ಲಿ ದೇಶದ ಆರ್ಥಿಕ ವ್ಯವಸ್ಥೆ ಹಳಿಗೆ ಬರುತ್ತಿದೆ. ಕೊರೋನಾ ಲಾಕ್ಡೌನ್ ಸಮಯದಲ್ಲಿ ದೇಶದ ಜನರು ಹಸಿವಿನಿಂದ ಯಾರು ಸಾವಿಗೀಡಾಗಿಲ್ಲ. ಈ ಅವಧಿಯಲ್ಲಿ ಉಚಿತ ಲಸಿಕೆ ನೀಡಿದ್ದರ ಬಗ್ಗೆ ಇಡೀ ವಿಶ್ವದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಅರುಣ್ ಸಿಂಗ್ ಅವರು ಹೇಳಿದರು.

ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ, ಮಾಜಿ ಸಿಎಂ ಜಗದೀಶ್ ಶೆಟ್ಟರ್, ಸಂಸದ ಸದಾನಂದಗೌಡ ಇನ್ನು ಮುಂತಾದವರು ಉಪಸ್ಥಿತರಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಕೋವಿಡ್ ನಡುವೆ ಎಸ್ಕಾಂಗಳ ದರ ಏರಿಕೆ ಯತ್ನ ಖಂಡನೆ

0

ರಾಜ್ಯದಲ್ಲಿ ಕೋವಿಡ್ ನಿಂದಾಗಿ ಜನಸಾಮಾನ್ಯರು ಆರ್ಥಿಕವಾಗಿ ಸಂಕಷ್ಟವನ್ನು ಎದುರಿಸುತ್ತಿದ್ದು ಇದರ ನಡುವೆಯೇ ಎಸ್ಕಾಂ ಗಳು ವಿದ್ಯುತ್ ದರ ಏರಿಕೆ ಮಾಡಲು ತಯಾರಿ ನಡೆಸಿವೆ.

ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣಾ ಆಯೋಗಕ್ಕೆ ಮೆಸ್ಕಾಂ ಪ್ರತಿ ಯುನಿಟ್ ಗೆ 1.33 ರೂ. ಹೆಚ್ಚಿಸಲೆಂದು ಪ್ರಸ್ತಾವನೆಯನ್ನು ಸಲ್ಲಿಸಿದೆ.

ಉಡುಪಿ ದಕ್ಷಿಣ ಕನ್ನಡ ಶಿವಮೊಗ್ಗ ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಯಲ್ಲಿ ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪನಿಯು 2020 21 ನೇ ಸಾಲಿನಲ್ಲಿ 5,268.53 ಮಿಲಿಯನ್ ಯುನಿಟ್ ವಿದ್ಯುತ್ ಮಾರಾಟದಿಂದ 4,011 ಕೋಟಿ ರು ಕಂದಾಯವನ್ನು ನಿರೀಕ್ಷಿಸಿದ್ದರು. ಆದರೆ 5,057.96 ಮಿಲಿಯನ್ ಯುನಿಟ್ ವಿದ್ಯುತ್ ಮಾರಾಟವಾಗಿದ್ದು, 3,649.87 ಕೋಟಿ ರೂ. ಆದಾಯ ದೊರೆತಿದೆ. 473.25 ಕೋಟಿ ರೂ. ಕೊರತೆಯಾಗಿದೆ ಎಂದು ತಿಳಿದುಬಂದಿದೆ.

ಉಡುಪಿ ಜಿಲ್ಲಾ ಕೃಷಿ ಸಂಘದ ಪ್ರಧಾನ ಕಾರ್ಯದರ್ಶಿ ಕುದಿ ಶ್ರೀನಿವಾಸ್ ಭಟ್ ಪ್ರತಿವರ್ಷದಂತೆ ಈ ವರ್ಷವೂ ಆಕ್ಷೇಪಣೆ ಸಲ್ಲಿಸುತ್ತೇವೆ. ಕಳೆದ ವರ್ಷ 500 ಆಕ್ಷೇಪ ಸಲ್ಲಿಕೆಯಾಗಿತ್ತು. “ಪ್ರತಿವರ್ಷವೂ ಏರಿಕೆಯೊಂದೇ ಗುರಿಯಾಗಿದೆ. ಸೋರಿಕೆ ವಿದ್ಯುತ್ ಗುಣಮಟ್ಟದಲ್ಲಿ ಆಸಕ್ತಿಯಿಲ್ಲ. ಮೆಸ್ಕಾಂ ಲಾಭದಲ್ಲಿದ್ದರೂ ಎಸ್ಕಾಂಗಳ ನಷ್ಟ ಸರಿದೂಗಿಸಿ, ದರ ಏರಿಕೆ ಮಾಡಲಾಗುತ್ತಿದೆ. ಗ್ರಾಹಕರು ಸಂಕಷ್ಟದಲ್ಲಿರುವ ಹಿನ್ನೆಲೆಯಲ್ಲಿ ಕೆ ಇ ಆರ್ ಸಿ ದರ ಇಳಿಸಿ ಆದೇಶ ಹೊರಡಿಸಬೇಕು” ಎಂದು ಆಗ್ರಹಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಸೈಕಲ್ ಸವಾರಿ ಆರೋಗ್ಯಕ್ಕೆ ರಹದಾರಿ

0

ಸೈಕಲ್ ತುಳಿಯುವುದರಿಂದ ಮನಸ್ಸು ಸದೃಢವಾಗುತ್ತದೆ. ವ್ಯಕ್ತಿಯು ಲವಲವಿಕೆಯಿಂದ ಇರಲು ಸಾಧ್ಯ ಎಂದು ರೋಟರಿ ಮಾಜಿ ಸಹಾಯಕ ಗವರ್ನರ್ ಜಿ. ವಿಜಯ್ ಕುಮಾರ್ ಅವರು ಹೇಳಿದ್ದಾರೆ.

ಶಿವಮೊಗ್ಗದ ನೆಹರೂ ಕ್ರೀಡಾಂಗಣದಲ್ಲಿ ಶಿವಮೊಗ್ಗ ಸೈಕಲ್ ಕ್ಲಬ್ ಮತ್ತು ಡೆಕತ್ ಲಾನ್ ಸಂಸ್ಥೆ ವತಿಯಿಂದ ಹಮ್ಮಿಕೊಳ್ಳಲಾದ ಸೈಕಲ್ ಜಾಥಾದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

ಸಾಮಾಜಿಕ, ಆರೋಗ್ಯ ಜಾಗೃತಿ, ಎಚ್ ಐಬಿ, ಏಡ್ಸ್ ಜಾಗೃತಿ, ಪರಿಸರ ಜಾಗೃತಿ, ಮಧುಮೇಹ ವಿವಿಧ ರೀತಿಯ ಚಟುವಟಿಕೆಗಳಲ್ಲಿ ಶಿವಮೊಗ್ಗ ಸೈಕಲ್ ಕ್ಲಬ್ ನಿರಂತರವಾಗಿ ತೊಡಗಿಸಿಕೊಂಡು ಬರುತ್ತಿದೆ. 39 ಜನರು ಗಿನ್ನಿಸ್ ದಾಖಲೆ ಪ್ರಶಸ್ತಿ ಪಡೆದಿದ್ದಾರೆ ಎಂದು ಜಿ. ವಿಜಯ್ ಕುಮಾರ್ ಅವರು ಹೇಳಿದರು.

ಸೈಕಲ್ ಜಾಥವನ್ನು ಹಿರಿಯ ಸೈಕಲ್ ಪಟ್ಟು ಜಗನ್ನಾಥ್ ಆರಾಧ್ಯ ಅವರು ಚಾಲನೆ ನೀಡಿದರು.

ಈ ಜಾಥಾದಲ್ಲಿ ಶಿವಮೊಗ್ಗ ಸೈಕಲ್ ಕ್ಲಬ್ ಕಾರ್ಯದರ್ಶಿ ಗಿರೀಶ್ ಕಾಮತ್, ಸಂಜಯ್, ವಿಜಯ್ ಕುಮಾರ್, ಪ್ರೀತಮ್, ಅರುಣ್, ಹರ್ಷ ಇನ್ನು ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.