Thursday, February 12, 2026
Thursday, February 12, 2026
Home Blog Page 1795

ಆನಂದಪುರಂ ವಿದ್ಯಾರ್ಥಿಗಳಿಗೆ ಬಸ್ ಸಂಚಾರ ಅಸಮರ್ಪಕ

0

ಆನಂದಪುರಂ ಶಾಲಾ-ಕಾಲೇಜುಗಳ ತರಗತಿಗೆ ವಿದ್ಯಾರ್ಥಿಗಳು ಹಾಜರಾಗಲು ಅನುಕೂಲವಾಗುವಂತಹ ಸಮಯ ನಿಗದಿಪಡಿಸಿ ಸರ್ಕಾರಿ ಬಸ್ ಸಂಚಾರ ವ್ಯವಸ್ಥೆ ಮಾಡುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಶಾಲಾ-ಕಾಲೇಜು ಸಮಯಕ್ಕೆ ಸರಿಯಾಗಿ ಬಸ್ ಬರುತ್ತಿಲ್ಲ. ಮೂರು ಬಸ್ ಅಗತ್ಯವಿರುವಷ್ಟು ವಿದ್ಯಾರ್ಥಿಗಳು ಬಸ್ ನಿಲ್ದಾಣದ ಸಮೀಪ ನಿಂತಿರುತ್ತಾರೆ. ಪ್ರೌಢಶಾಲೆಯಿಂದ ಡಿಗ್ರಿ ಡಿಪ್ಲೋಮೋ ತರಗತಿಯವರೆಗಿನ 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಾಗರಕ್ಕೆ ತೆರಳುತ್ತಾರೆ. ಬೆಳಿಗ್ಗೆ 8.30 ರಿಂದ 9.30 ರವರೆಗೆ ಬಸ್ ಸಂಚಾರ ಅಗತ್ಯವಿದೆ.

ನೂರಾರು ವಿದ್ಯಾರ್ಥಿಗಳಿಗೆ ಬಸ್ ಪಾಸ್ ನೀಡಲಾಗಿದೆ. 9:00 ಗಂಟೆ ಸುಮಾರಿಗೆ ಬರುವ ಬಸ್ ಗೆ ವಿದ್ಯಾರ್ಥಿಗಳು ನೂಕು ನುಗ್ಗಲಿನಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಕೊರೋನಾ ನಿಯಮಾನುಸಾರ ಗುಂಪಾಗಿ ಬಸ್ ಪ್ರಯಾಣ ಮಾಡುವುದು ಸೂಕ್ತವಲ್ಲ. ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಇದೆ. ತಕ್ಷಣ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಅತಿಥಿ ಉಪನ್ಯಾಸಕರ ಸಮಸ್ಯೆ ಇತ್ಯರ್ಥಪಡಿಸಲು ಆಗ್ರಹ

0

ಪದವಿ ಕಾಲೇಜಿನಲ್ಲಿ ಪೂರ್ವ ಪ್ರಮಾಣದ ತರಗತಿಯನ್ನು ಆರಂಭಿಸಬೇಕೆಂದು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಜಿಲ್ಲಾ ಘಟಕದಿಂದ ಶಿವಮೊಗ್ಗದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ರಾಜ್ಯದಲ್ಲಿ ಕೊರೋನಾ ಎರಡನೇ ಲಾಕ್ಡೌನ್ ನಂತರ ಶಾಲಾ ಕಾಲೇಜುಗಳು ಪ್ರಾರಂಭವಾಗಿ ತಿಂಗಳುಗಳೇ ಕಳೆದಿವೆ. ಈಗಾಗಲೇ ಶೈಕ್ಷಣಿಕ ಚಟುವಟಿಕೆಗಳು ಭರದಿಂದ ಸಾಗಿವೆ. ಇದರ ಜೊತೆಗೆ ಅನೇಕ ವಿದ್ಯಾರ್ಥಿಗಳು ವಿವಿಧ ಕೋರ್ಸ್ ಗಳಿಗೆ ಪ್ರವೇಶವನ್ನು ಪಡೆಯಲು ತಯಾರಿ ನಡೆಸುತ್ತಿದ್ದಾರೆ. ಇಂತಹ ಸಮಯದಲ್ಲಿ ಅತಿಥಿ ಉಪನ್ಯಾಸಕರು ತರಗತಿಗಳನ್ನು ಬಹಿಷ್ಕರಿಸಿ ಸುವುದರಿಂದ ಪೂರ್ಣ ಪ್ರಮಾಣದ ತರಗತಿಗಳು ನಡೆಯುತ್ತಿಲ್ಲ ಎಂದು ಪ್ರತಿಭಟನಾಕಾರರು ಮನವಿ ಪತ್ರದಲ್ಲಿ ತಿಳಿಸಲಾಗಿದೆ.

ಸರ್ಕಾರ ಇಂಜಿನಿಯರಿಂಗ್ ಪ್ರವೇಶ ಶುಲ್ಕ ಏರಿಕೆ ಮಾಡಿದೆ. ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿದೆ. ಕೂಡಲೇ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಡಳಿತ ಮೂಲಕ ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಲಾಗಿದೆ.

ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರು ತಮ್ಮ ಹಲವಾರು ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ತರಗತಿಗಳನ್ನು ಬಹಿಷ್ಕರಿಸಿ ಸುವುದರಿಂದ ತರಗತಿಗಳು ನಡೆಯದೇ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಈ ನಿಟ್ಟಿನಲ್ಲಿ ಸರ್ಕಾರ ಆದಷ್ಟು ಬೇಗ ಕ್ರಮವಹಿಸಿ ಉಪನ್ಯಾಸಕರ ಬೇಡಿಕೆಗಳನ್ನು ಈಡೇರಿಸಬೇಕು. ತರಗತಿಗಳನ್ನು ಪೂರ್ಣಪ್ರಮಾಣದಲ್ಲಿ ಆರಂಭಿಸಬೇಕೆಂದು ಆಗ್ರಹಿಸಿದ್ದಾರೆ.

ಈ ಸಂದರ್ಭದಲ್ಲಿ ಎಬಿವಿಪಿ ಮುಖಂಡರಾದ ದರ್ಶನ್, ಮನೋಹರ, ಚಂದನ್,ವಿದ್ಯಾರ್ಥಿಗಳು ಭಾಗವಹಿಸಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಪ್ರಕರಣ ಕೋರ್ಟಿನಲ್ಲಿದೆ ಮುಷ್ಕರ ಕೈಬಿಡಿ- ಕೇಂದ್ರಸಚಿವ

0

ವೈದ್ಯಕೀಯ ಸ್ನಾತಕೋತ್ತರ ಕೋರ್ಸ್ ಗಳ ಪ್ರವೇಶಕ್ಕೆ ಸಂಬಂಧಿಸಿದ ಕೌನ್ಸಿಲಿಂಗ್ (ನೀಟ್ -ಪಿಜಿ ಕೌನ್ಸಿಲಿಂಗ್) ವಿಳಂಬವಾಗುತ್ತಿರುವುದನ್ನು ಖಂಡಿಸಿ ಮುಷ್ಕರ ನಡೆಸುತ್ತಿರುವ ಸ್ಥಾನಿಕ ವೈದ್ಯರುಗಳ ನಿಯೋಗದ ಜೊತೆ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಮಾತುಕತೆ ನಡೆಸಿದರು.
ಸಾರ್ವಜನಿಕರ ಹಿತದೃಷ್ಟಿಯಿಂದ ಮುಷ್ಕರವನ್ನು ಕೈಬಿಡುವಂತೆ ಒತ್ತಾಯಿಸಿದರು.
ಪ್ರಕರಣವು ಸುಪ್ರೀಂ ಕೋರ್ಟ್ ನಲ್ಲಿರುವುದರಿಂದ ಕೌನ್ಸಿಲಿಂಗ್ ನಡೆಸಲು ನಮಗೆ ಸಾಧ್ಯವಿಲ್ಲ. ಜನವರಿ 6ರಂದು ನಿಗದಿಯಾಗಿರುವ ವಿಚಾರಣೆಗೂ ಮುನ್ನ ಸರ್ಕಾರವು ನ್ಯಾಯಾಲಯಕ್ಕೆ ಪ್ರತಿಕ್ರಿಯೆ ಸಲ್ಲಿಸಲಿದೆ. ಶೀಘ್ರ ಸಮಸ್ಯೆ ಪರಿಹರಿಸಿ ಕನ್ಸಿಲಿಂಗ್ ಆರಂಭಿಸಲು ಅನುವು ಮಾಡಿಕೊಡಬೇಕೆಂದು ಮನವಿ ಮಾಡಲಿದ್ದೇವೆ ಎಂದರು.
ಸ್ಥಾನಿಕ ವೈದ್ಯರ ಸಂಘಗಳ ಒಕ್ಕೂಟದ ಪ್ರತಿನಿಧಿಗಳ ಜೊತೆ ಮಾತುಕತೆ ನಡೆಸಿದರು. ಈ ವಿಷಯದ ಕುರಿತು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ. ಆರ್ಥಿಕವಾಗಿ ದುರ್ಬಲ ವರ್ಗದ ವರದಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಗೆ ಪ್ರತಿಕ್ರಿಯೆ ನೀಡಲಾಗುವುದು ಎಂದು ತಿಳಿಸಿದರು.
ಕೋವಿಡ್ ಬಿಕ್ಕಟ್ಟಿನ ಸಮಯದಲ್ಲಿ ಸ್ಥಾನಿಕ ವೈದ್ಯರು ಹಾಗೂ ಆರೋಗ್ಯ ಕಾರ್ಯಕರ್ತರು ಮಾಡಿರುವ ಕೆಲಸಕ್ಕೆ ಸಚಿವರು ಕೃತಜ್ಞತೆ ಸಲ್ಲಿಸಿದರು.
ಪ್ರತಿಭಟನೆ ಸಮಯದಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಮುಂಜಾಗೃತಾ ಕ್ರಮವಾಗಿ ದೆಹಲಿಯ ಸಫ್ದರ್ ಜಂಗ್ ಆಸ್ಪತ್ರೆಯ ಆವರಣದಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಭಾರತ ಚೀನಾ ಗಡಿಯಲ್ಲಿ ಸೇತುವೆಗಳ ನಿರ್ಮಾಣ

0

ಗಡಿಪರವಾಗಿ ಪದೇಪದೇ ಕ್ಯಾತೆ ತೆಗೆಯುವ ಚುನಾಕ್ಕೆ ತಕ್ಕಪಾಠ ಕಲಿಸುವ ನಿಟ್ಟಿನಲ್ಲಿ ಭಾರತವು ಗಡಿ ರಸ್ತೆಗಳ ಸಂಸ್ಥೆಯ ಮೂಲಕ ಚೀನಾ ಗಡಿಯಲ್ಲಿ ರಸ್ತೆಗಳನ್ನು ಅಭಿವೃದ್ಧಿಪಡಿಸಿ ಸೇತುವೆಗಳನ್ನು ನಿರ್ಮಿಸಿದೆ.

ಚೀನಾ ಗಡಿಯಲ್ಲಿ ಛಿಸುಮ್ಲಿ-ಡೆಮ್ ಛಾಕ್ ರಸ್ತೆ ಸೇರಿದಂತೆ ಒಟ್ಟು 2,245 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ 24 ಸೇತುವೆಗಳು ಹಾಗೂ 3 ರಸ್ತೆಗಳು ಸೇರಿ 27 ಯೋಜನೆಗಳನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಂಚಾರಕ್ಕೆ ಮುಕ್ತಗೊಳಿಸಿದರು.

ಪ್ರಸ್ತುತ ಜಗತ್ತಿನಲ್ಲಿ ದೂರವನ್ನು ಕಿಲೋಮೀಟರ್ ಗಳಲ್ಲಿ ಅಳೆಯಲಾಗುತ್ತಿಲ್ಲ. ಬದಲಿಗೆ ದೂರವನ್ನು ಎಷ್ಟು ಗಂಟೆಗಳಲ್ಲಿ ಕ್ರಮಿಸಬಹುದು ಎಂದು ಲೆಕ್ಕ ಹಾಕುತ್ತಾರೆ. ಗಡಿಯಲ್ಲಿನ ರಸ್ತೆ, ಸೇತುವೆಗಳು ಅಲ್ಲಿನ ಜನರನ್ನು ದೆಹಲಿಗೆ ಹತ್ತಿರವಾಗಿಸುತ್ತದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ದಾಖಲೆಗಳನ್ನೂ ದಾಟುತ್ತಿರುವ ಕೋವಿಡ್ ಸೋಂಕು

0

ದೈನಂದಿನ 1.44 ಮಿಲಿಯನ್ ಜಾಗತಿಕ ಕೋವಿಡ್ -19 ಪ್ರಕರಣಗಳು ಡಿಸೆಂಬರ್ 2020 ರಲ್ಲಿ ಸೋಂಕಿನ ಹಿಂದಿನ ದೈನಂದಿನ ದಾಖಲೆಯನ್ನು ದಾಟಿದೆ. ಟರ್ಕಿಯು ಗಮನಾರ್ಹ ಸಂಖ್ಯೆಯ ಸಕಾರಾತ್ಮಕ ಪ್ರಕರಣಗಳನ್ನು ಹಿಮ್ಮೆಟ್ಟಿಸಿದೆ. ಸೋಮವಾರದಂದು ಏಳು ದಿನಗಳ ಸರಾಸರಿ ಕೋವಿಡ್ ಪ್ರಕರಣಗಳು ಸುಮಾರು 841,000 ಆಗಿತ್ತು.
ಆಫ್ರಿಕಾದಲ್ಲಿ ಓಮಿಕ್ರಾನ್ ಅನ್ನು ಮೊದಲು ಗುರುತಿಸಿದಾಗ ನವೆಂಬರ್ 24 ರಿಂದ 49 ರಷ್ಟು ಏರಿಕೆಯಾಗಿದೆ. ರೂಪಾಂತರದ ಹೊಸ ಪ್ರಕರಣಗಳಲ್ಲಿ ದಾಖಲೆಯ ಏರಿಕೆಯ ವರದಿಗಳ ಮಧ್ಯೆ ಜಗತ್ತಿನಾದ್ಯಂತ 11,500 ಕ್ಕೂ ಹೆಚ್ಚು ಅಂತರಾಷ್ಟ್ರೀಯ ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಯುಕೆ ಪ್ರಸ್ತುತ ದಿನಕ್ಕೆ 100,000 ಕ್ಕೂ ಹೆಚ್ಚು ಹೊಸ ಸೋಂಕುಗಳನ್ನು ವರದಿ ಮಾಡುತ್ತಿದೆ. ಗ್ರೀಕ್ ಆರೋಗ್ಯ ಸಚಿವ ಥಾನೋಸ್ ಪ್ಲೆವ್ರಿಸ್ ಅವರು ಕೋವಿಡ್ -19 ಎಸ್‌ಡಿಎನ್ ಹರಡುವುದನ್ನು ತಡೆಯಲು ಕಠಿಣ ನಿರ್ಬಂಧಗಳನ್ನು ಘೋಷಿಸಿದ್ದಾರೆ. ಪ್ರತಿದಿನ ಹೊಸ ಪ್ರಕರಣಗಳ ಸಂಖ್ಯೆ ದೇಶದಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿದೆ.
ಫ್ರೆಂಚ್ ಪ್ರಧಾನ ಮಂತ್ರಿ ಜೀನ್ ಕ್ಯಾಸ್ಟೆಕ್ಸ್ ಮತ್ತು ಆರೋಗ್ಯ ಸಚಿವ ಆಲಿವರ್ ವೆರಾನ್ ಅವರು ಹೊಸ ವರ್ಷದ ಹಬ್ಬಗಳಲ್ಲಿ ಕೋವಿಡ್ -19 ರ ಸ್ಪ್ರಿಂಟ್ ಅನ್ನು ನಿಗ್ರಹಿಸಲು ಹೊಸ ಕ್ರಮಗಳ ಸರಣಿಯನ್ನು ಘೋಷಿಸಿದ್ದಾರೆ. ಆಚರಣೆಯ ಸಮಯದಲ್ಲಿ ತಡೆಗಟ್ಟುವ ಕ್ರಮಗಳನ್ನು ಗೌರವಿಸುವಂತೆ ತಮ್ಮ ದೇಶದ ಪ್ರಜೆಗಳನ್ನು ಒತ್ತಾಯಿಸಿದ್ದಾರೆ. ಕೋವಿಡ್ -19 ರ ಓಮಿಕ್ರಾನ್ ರೂಪಾಂತರದ 514 ಪ್ರಕರಣಗಳು ಪತ್ತೆಯಾದ ನಂತರ ಥೈಲ್ಯಾಂಡ್‌ನ ಸಾರ್ವಜನಿಕ ಆರೋಗ್ಯ ಸಚಿವಾಲಯವು ರಾಷ್ಟ್ರವ್ಯಾಪಿ ಮಟ್ಟದ 3 ಎಚ್ಚರಿಕೆಯನ್ನು ನೀಡಿದೆ.
ಹೊಸ ಓಮಿಕ್ರಾನ್ ರೂಪಾಂತರವು ಕೋವಿಡ್ -19 ಪ್ರಕರಣಗಳಲ್ಲಿ ಚಳಿಗಾಲದ ಉಲ್ಬಣವನ್ನು ಉಂಟುಮಾಡಿದೆ. ಯುಎಸ್‌ನಾದ್ಯಂತ ಆಸ್ಪತ್ರೆಗಳು ಮತ್ತು ಸಾವುಗಳು, ಜನವರಿಯಿಂದ ದೈನಂದಿನ ಸೋಂಕುಗಳು ದಾಖಲೆಯ ಎತ್ತರವನ್ನು ತಲುಪಿವೆ. ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆಗಾಗಿ ಯುಎಸ್ ಕೇಂದ್ರಗಳ ಇತ್ತೀಚಿನ ಮಾಹಿತಿಯ ಪ್ರಕಾರ, ದೇಶವು ಪ್ರತಿದಿನ ಸರಾಸರಿ 176,000 ಹೊಸ ಪ್ರಕರಣಗಳನ್ನು ಹೊಂದುತ್ತಿದೆ. ಸೋಮವಾರ ಸುಮಾರು 300,000 ಹೊಸ ಪ್ರಕರಣಗಳು ವರದಿಯಾಗಿವೆ.
ಪ್ರಸ್ತುತ, ಯುಎಸ್ ಪ್ರತಿ ದಿನ ಕೋವಿಡ್ -19 ನಿಂದ ಸುಮಾರು 1,200 ಹೊಸ ಸಾವುಗಳಿಗೆ ಸಾಕ್ಷಿಯಾಗುತ್ತಿದೆ ಎಂದು ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ದತ್ತಾಂಶದ ಕೇಂದ್ರಗಳು ತೋರಿಸಿವೆ. ಓಮಿಕ್ರಾನ್ ರೂಪಾಂತರವು ಡೆಲ್ಟಾ ರೂಪಾಂತರದ ಸ್ಥಾನವನ್ನು ಪಡೆದುಕೊಂಡು ದೇಶದಲ್ಲಿ ಹೆಚ್ಚು ಪ್ರಚಲಿತವಾದ ರೂಪಾಂತರವಾಗಿದೆ. ಓಮಿಕ್ರಾನ್ ರೂಪಾಂತರವು ಆಸ್ಪತ್ರೆಗಳು ಮತ್ತು ಆರೋಗ್ಯ ಕಾರ್ಯಕರ್ತರನ್ನು ಮುಳುಗಿಸಲು ಮುಂದುವರಿಯುತ್ತದೆ ಎಂದು ಆರೋಗ್ಯ ಅಧಿಕಾರಿಗಳು ಎಚ್ಚರಿಸಿದ್ದಾರೆ.
ಓಮಿಕ್ರಾನ್ ಉಲ್ಬಣದಿಂದಾಗಿ ಸೋಮವಾರ ದೇಶದಲ್ಲಿ 1,000 ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಕೆನಡಾ 18,230 ಹೊಸ ಕೋವಿಡ್ -19 ಪ್ರಕರಣಗಳನ್ನು ವರದಿ ಮಾಡಿದೆ, CTV ಪ್ರಕಾರ, 30,172 ಸಾವುಗಳೊಂದಿಗೆ ಸಂಚಿತ ಒಟ್ಟು ಪ್ರಕರಣಗಳನ್ನು 2,026,249 ಕ್ಕೆ ಏರಿಸಿದೆ. ಭಾರತದಾದ್ಯಂತ ಓಮಿಕ್ರಾನ್ ಸೋಂಕಿನ ಸಂಖ್ಯೆ 653 ಕ್ಕೆ ಏರಿದೆ. ಆದಾಗ್ಯೂ, ಒಟ್ಟು ಪ್ರಕರಣಗಳಲ್ಲಿ, 186 ಆಸ್ಪತ್ರೆಗಳಿಂದ ಬಿಡುಗಡೆಯಾಗಿದೆ. ಇಲ್ಲಿಯವರೆಗೆ, 21 ರಾಜ್ಯಗಳು ಓಮಿಕ್ರಾನ್ ಸೋಂಕುಗಳನ್ನು ವರದಿ ಮಾಡಿದೆ. ಆಸ್ಟ್ರೇಲಿಯಾ ತನ್ನ ಅತಿದೊಡ್ಡ ದೈನಂದಿನ ಕೋವಿಡ್ -19 ಮೊತ್ತವನ್ನು ವರದಿ ಮಾಡಿದೆ. ಕೇವಲ ಒಂದು ತಿಂಗಳಲ್ಲಿ, 108 ದೇಶಗಳು 151,368 ಕ್ಕೂ ಹೆಚ್ಚು ಓಮಿಕ್ರಾನ್ ಪ್ರಕರಣಗಳನ್ನು ವರದಿ ಮಾಡಿದೆ ಮತ್ತು 26 ಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ. ಅಂದರೆ, ಯುಎಸ್ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳು ಕೋವಿಡ್ -19 ಸೋಂಕಿತ ಅಮೆರಿಕನ್ನರ ಪ್ರತ್ಯೇಕತೆಯ ಸಮಯವನ್ನು 10 ರಿಂದ ಐದು ದಿನಗಳವರೆಗೆ ಕಡಿಮೆ ಮಾಡಿದೆ. ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಪ್ರಕಾರ, ಜಾಗತಿಕ ಕರೋನವೈರಸ್ ಕೇಸ್‌ಹೋಲ್ಡ್ 281,3 ಮಿಲಿಯನ್‌ಗೆ ಏರಿದೆ.ಆದರೆ ಸಾವುಗಳು 5.40 ಮಿಲಿಯನ್‌ಗಿಂತಲೂ ಹೆಚ್ಚು ಮತ್ತು ವ್ಯಾಕ್ಸಿನೇಷನ್‌ಗಳು 8.97 ಬಿಲಿಯನ್‌ಗೆ ಏರಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಸಾಮಾನ್ಯರಿಗೆ ಅಭದ್ರತೆ-ಭಯದ ಬದುಕು

0

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಕಾಂಗ್ರೆಸ್ಸಿನ 137ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಬಿಜೆಪಿ ವಿರುದ್ಧ “ದ್ವೇಷ ಮತ್ತು ಪೂರ್ವಗ್ರಹಪೀಡಿತರಾಗಿ ನೆಲೆಗೊಂಡಿರುವ ವಿಭಜಕ ಸಿದ್ಧಾಂತಗಳು ದೇಶದ ಭದ್ರ ಅಡಿಪಾಯವನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿವೆ” ಎಂದು ವಾಗ್ದಾಳಿ ನಡೆಸಿದ್ದಾರೆ.

ದೇಶದ ಭವ್ಯ ಇತಿಹಾಸವನ್ನು ಅಳಿಸಿಹಾಕಿ ಹೊಸ ಇತಿಹಾಸ ಬರೆಯುವ ಪ್ರಯತ್ನ ನಡೆಯುತ್ತಿದೆ. ‘ಗಂಗಾ-ಜಮುನಾ’ ಪರಂಪರೆಯನ್ನು ಅಳಿಸಿಹಾಕಲಾಗುತ್ತಿದೆ. ಸಾಮಾನ್ಯ ಜನ ಅಭದ್ರತೆ ಹಾಗೂ ಭಯದಲ್ಲಿ ಬದುಕುವಂತಾಗಿದೆ. ದೇಶದಲ್ಲಿ ಸರ್ವಾಧಿಕಾರ ಇರುವುದರಿಂದ ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಆಶಯಗಳನ್ನು ಕಡೆಗಣಿಸಲಾಗುತ್ತಿದೆ ಎಂದು ಸೋನಿಯಾ ಗಾಂಧಿ ಅವರು ಟೀಕಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಕಾಂಗ್ರೆಸ್ ಪಕ್ಷಕ್ಕೆ ಸುದೀರ್ಘ ಇತಿಹಾಸವಿದೆ- ಡಿಕೆಶಿ

0

ತ್ಯಾಗ ಬಲಿದಾನದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಕಾಂಗ್ರೆಸ್ ಗೆ ಸುದೀರ್ಘ ಇತಿಹಾಸ ಇದೆ. ಕಾಂಗ್ರೆಸ್ ನ ಘನತೆ ಮತ್ತಷ್ಟು ಹೆಚ್ಚಿಸಲು ನಾವೆಲ್ಲರೂ ಪಣ ತೊಡೋಣ. 2023 ರ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಪ್ರತಿಜ್ಞೆ ಮಾಡೋಣ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ಹುರಿದುಂಬಿಸಿದರು.

ಮದ್ದೂರು ಶಿವಪುರದ ಶ್ರೀ ವೆಂಕಟೇಶ್ವರ ಕಲ್ಯಾಣ ಮಂಟಪ ಆವರಣದಲ್ಲಿ ಕಾಂಗ್ರೆಸ್ ಪಕ್ಷದ 137ನೇ ಸಂಸ್ಥಾಪನಾ ದಿನಾಚರಣೆಯನ್ನು ನಡೆಸಲಾಯಿತು. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

“ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡುವ ಜೊತೆಗೆ ದೇಶದ ಅಭ್ಯುದಯಕ್ಕಾಗಿ ನಿರಂತರ 60 ವರ್ಷಗಳ ಅಧಿಕಾರ ನಡೆಸಿದ ಹಿರಿಮೆಯನ್ನು ಕಾಂಗ್ರೆಸ್ ಹೊಂದಿದೆ ಎಂದು ಶಿವಕುಮಾರ್ ಅವರು ಹೇಳಿದರು.

ಸ್ವಾತಂತ್ರ್ಯಪೂರ್ವದಲ್ಲಿ ದೇಶಕ್ಕೆ ರಾಷ್ಟ್ರಧ್ವಜ, ರಾಷ್ಟ್ರಗೀತೆ, ಮತ್ತು ಸಂವಿಧಾನ ವಿಲ್ಲದ ಕಾಲದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಮೂಲಕ ಸಂಸ್ಥಾನಗಳ ರಾಜರ ಆಳ್ವಿಕೆಯಿಂದ ಹೊರಬಂದು ದೇಶಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆ ಕಲ್ಪಿಸಿದ ಹಿರಿಮೆ ಕಾಂಗ್ರೆಸ್ ನದು ಎಂದು ಶಿವಕುಮಾರ್ ಅವರು ತಿಳಿಸಿದರು.

ಕೊರೋನಾ ಸಂಕಷ್ಟದ ಸಮಯ ಪಕ್ಷದ ಕಾರ್ಯಕರ್ತರ ಜನಸೇವೆ ಜೊತೆಗೆ ರೈತರನ್ನು ಸಂಪರ್ಕಿಸಿ ಅವರ ಜಮೀನಿನಲ್ಲಿದ್ದ ಹೂ, ಹಣ್ಣು, ತರಕಾರಿ ಮತ್ತಿತರ ಕೃಷಿ ಉತ್ಪನ್ನಗಳನ್ನು ಖರೀದಿಸಿ ಅಗತ್ಯವುಳ್ಳವರಿಗೆ ವಿತರಿಸುವ ಮೂಲಕ ನಿಸ್ವಾರ್ಥದಿಂದ ರೈತರ ನಿರ್ವಹಿಸಿರುವುದು ಶ್ಲಾಘನೀಯ ಎಂದು ಡಿ.ಕೆ. ಶಿವಕುಮಾರ್ ಅವರು ಹೇಳಿದರು.

ಬಿಜೆಪಿಯು ಯಾವುದೇ ತ್ಯಾಗ, ಬಲಿದಾನ ವಿಲ್ಲದೆ ಇತ್ತೀಚಿನ ದಶಕಗಳಲ್ಲಿ ಅಸ್ತಿತ್ವಕ್ಕೆ ಬಂದು ಸಲ್ಲದ ಹೇಳಿಕೆಗಳ ಮೂಲಕ ದೇಶ, ರಾಜ್ಯದಲ್ಲಿ ಭಯೋತ್ಪಾದನೆಗೆ ಪ್ರೇರೇಪಣೆ ನೀಡುತ್ತಿದೆ. ಒಡೆದು ಆಳುವ ನೀತಿ ಅನುಸರಿಸುತ್ತಿದೆ. ಕೋವಿಡ್ ಸಂಕಷ್ಟ ಕಾಲದಲ್ಲಿ ಗಂಟೆ ಬಾರಿಸುವ, ಜಾಗಟೆ ಬಡಿಯುವ, ಚಪ್ಪಾಳೆ ತಟ್ಟುವ, ದೀಪ ಹಚ್ಚುವ ಹೇಳಿಕೆ ನೀಡಿ ಜನರನ್ನು ದಾರಿ ತಪ್ಪಿಸುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಆಯಕರ ಸಲ್ಲಿಕೆಗೆ ತಾಂತ್ರಿಕ ಅಡಚಣೆ

0

ಐಟಿ ರಿಟರ್ನ್ ಸಲ್ಲಿಸುವ ಪ್ರಕ್ರಿಯೆಯಲ್ಲಿ ತಾಂತ್ರಿಕ ಅಡಚಣೆಯು ಮುಂದುವರೆದಿದೆ.ಈ ನಡುವೆ ಡಿಸೆಂಬರ್ 31 ಐಟಿ ರಿಟರ್ನ್ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದೆ.

2021- 22ರ ಐಟಿ ರಿಟರ್ನ್ ಸಲ್ಲಿಕೆಗೆ ಜೂನ್ 30 ಕೊನೆಯ ದಿನಾಂಕವಾಗಿತ್ತು. ಆದಾಯ ತೆರಿಗೆ ಇಲಾಖೆಯ ವೆಬ್ಸೈಟ್ನಲ್ಲಿ ತಾಂತ್ರಿಕ ಅಡಚಣೆ ಹಾಗೂ ಬಿಕ್ಕಟ್ಟಿನ ಪರಿಣಾಮ ಸೆಪ್ಟೆಂಬರ್ 10 ನಂತರ ಡಿಸೆಂಬರ್ 31ಕ್ಕೆ ಮುಂದೂಡಲಾಗಿತ್ತು. ಆದರೆ ಈಗ ಐಟಿ ರಿಟರ್ನ್ಸ್ ಸಲ್ಲಿಸಲು ತಾಂತ್ರಿಕ ಸಮಸ್ಯೆ ತಲೆದೋರಿದೆ.

ಚಾರ್ಟರ್ಡ್ ಅಕೌಂಟೆಂಟ್ ವಿಜಯ್ ಸಾಗರ್ ಅವರು ಈ ಕುರಿತಂತೆ “ಐಟಿ ರಿಟರ್ನ್ ಸಲ್ಲಿಕೆಯ ಸಂದರ್ಭ ಹಲವಾರು ತಾಂತ್ರಿಕ ಅಡಚಣೆಗಳು ಈಗಲೂ ಮುಂದುವರೆದಿವೆ. ಆದ್ದರಿಂದ ಈ ಬಗ್ಗೆ ಸೂಕ್ತ ಕ್ರಮವನ್ನು ಸರಕಾರ ಕೈಗೊಳ್ಳಬೇಕು. ಚಾರ್ಟರ್ಡ್ ಅಕೌಂಟೆಂಟ್ ವಲಯವು ಈ ಬಗ್ಗೆ ಈಗಾಗಲೇ ಮನವಿ ಸಲ್ಲಿಸಿದೆ” ಎಂದು ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಪ್ರೊ ಕಬಡ್ಡಿ ಲೀಗ್ ಪಾಟ್ನಾ – ಹರಿಯಾಣ ಜಯ ಭೇರಿ

0

ಬೆಂಗಳೂರಿನ ವೈಟ್ ಫೀಲ್ಡ್ ನ ಶೆರಟಾನ್ ಗ್ರ್ಯಾಂಡ್ ಹೋಟೆಲ್ ನ ಮೈದಾನದಲ್ಲಿ ನಡೆಯುತ್ತಿರುವ ಪ್ರೊ ಕಬಡ್ಡಿ ಲೀಗ್ ಟೂರ್ನಿಯ ಪಂದ್ಯಾವಳಿಯು ಮಂಗಳವಾರ 4 ತಂಡಗಳ ನಡುವೆ 2 ಪಂದ್ಯಗಳು ನಡೆಯಿತು.

ಪಲ್ಟನ್ ವಿರುದ್ಧ ಪಾಟ್ನಾ ಜಯ ಸಾಧಿಸಿದೆ.ಮೊದಲನೇ ಪಂದ್ಯವು ಪುಣೆರಿ ಪಲ್ಟನ್ (26) ಮತ್ತು ಪಾಟ್ನಾ ಪೈರೇಟ್ಸ್(38) ತಂಡಗಳ ನಡುವೆ ಪಂದ್ಯ ನಡೆಯಿತು. ಪುಣೆ ವಿರುದ್ಧ ಪಾಟ್ನಾ ರೋಚಕ ಜಯ ಸಾಧಿಸಿದೆ.

ಪಂದ್ಯದ ಮೊದಲಾರ್ಧದಲ್ಲಿ ಉಭಯ ತಂಡಗಳು ಸಮಬಲದ ರೋಚಕ ಹೋರಾಟವಿತ್ತು. ವಿರಾಮದ ಸಮಯಕ್ಕೆ 14-14 ರಿಂದ ತಂಡಗಳು ಸಮ ಅಂಕೆ ಗಳಿಸಿದವು.

ವಿರಾಮದ ನಿರಂತದಲ್ಲೂ ಪಾಟ್ನಾ ಆಟಗಾರರ ಆಟದ ವೇಗಕ್ಕೆ ಪುಣೆ ಆಟಗಾರರು ಬಿರುಸಾಗಿ ಆಟ ಆಡಿದರು. ಪಲ್ಟನ್ ತಂಡವು 4 ಆಲ್ ಔಟ್ ಪಾಯಿಂಟ್ಸ್ ಗಳಿಸಿತು. ಇದರಿಂದಾಗಿ ಪುಣೆ ಮೇಲಿನ ಒತ್ತಡ ಹೆಚ್ಚಿತು.

ದ್ವಿತಿಯಾರ್ಧದಲ್ಲಿ ಪೈರೇಟ್ಸ್ ತಂಡವು 24 ಅಂಕಗಳನ್ನು ಸೂರೆ ಮಾಡಿತು. ಪುಣೆರಿ ತಂಡವು ಕೇವಲ 12 ಅಂಕ ಗಳಿಸಿತು.ಸಚಿನ್ 10 ಮತ್ತು ಪ್ರಶಾಂತ್ ಕುಮಾರ್ 5 ಅಂಕ ಗಳಿಸಿ ಇದರಿಂದ ಪಾಟ್ನಾ ಜಯದತ್ತ ಸಾಗಲು ನೆರವಾದರು. ಟೈಟಾನ್ಸ್ ವಿರುದ್ಧ ಸ್ಟೀಲರ್ಸ್ ಗೆ ಜಯ

ಎರೆಡನೇ ಪಂದ್ಯವು ತೆಲುಗು ಟೈಟಾನ್ಸ್(37) ಮತ್ತು ಹರಿಯಾಣ ಸ್ಟೀಲರ್ಸ್(39) ತಂಡಗಳ ನಡುವೆ ಪಂದ್ಯ ನಡೆಯಿತು.ತೆಲುಗು ವಿರುದ್ಧ ಸ್ಟೀಲರ್ಸ್ ಭರ್ಜರಿ ಜಯ ಸಾಧಿಸಿತು.

ಅರ್ಧವಿರಾಮದ ವೇಳೆಗೆ ಹರಿಯಾಣ ತಂಡವು 23-19 ರಿಂದ ಮುನ್ನಡೆ ಸಾಧಿಸಿತು.ಆದರೆ,ವಿರಾಮದ ನಂತರ ತೆಲುಗು ತಂಡದ ರೈಡ ರ್ ಗಳು ಮಿಂಚಿನ ಆಟವಾಡಿದರು.ಸಿದ್ದಾರ್ಥ್ ದೇಸಾಯಿ(9) ಮತ್ತು ನಾಯಕ ರಾಕೇಶ್ ಗೌಡ(7) ತೀವ್ರ ಸೇ
ಸೆಣೆಸಾಡಿದರು. ಈ ಅವಧಿಯಲ್ಲಿ ಟೈಟಾನ್ಸ್ 18 ಮತ್ತು ಸ್ಟೀಲರ್ಸ್ 16 ಅಂಕಗಳನ್ನು ಗಳಿಸಿತು.ಆಲ್ ರೌಂಡರ್ ಮೀಟು ಮತ್ತು ರೋಹಿತ್ ಗುಲಿಯಾ ಅವರು ಕ್ರಮವಾಗಿ 12 ಮತ್ತು 8 ಅಂಕಗಳನ್ನು ಗಳಿಸಿ ತಂಡದ ಗೆಲುವಿಗೆ ಕಾರಣರಾದರು.

ಇಂದು ನಡೆಯಲಿರುವ ಪಂದ್ಯಗಳು:
೧. ದಬಾಂಗ್ ಡೆಲ್ಲಿ ಮತ್ತು ಬೆಂಗಾಲ್ ವಾರಿಯರ್ಸ್
ಸಮಯ: 7.30
೨. ಯು.ಪಿ ಯೋಧಾ ಮತ್ತು ಗುಜರಾತ್ ಜಯಂಟ್ಸ್
ಸಮಯ: 8.30

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಭಾರತ – ದಕ್ಷಿಣಾ ಆಫ್ರಿಕಾ ಕ್ರಿಕೆಟ್ ಭಾರತಕ್ಕೆ 130 ರನ್ ಮುನ್ನಡೆ

0

ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಟೆಸ್ಟ್ ಸರಣಿಯ ಮೊದಲನೇ ಮತ್ತು ಮೊದಲ ಇನ್ನಿಂಗ್ಸ್ ನಲ್ಲಿ ಭಾರತ 130 ರನ್ ಗಳ ಅಂತರದಿಂದ ಭರ್ಜರಿ ಮುನ್ನಡೆ ಸಾಧಿಸಿದೆ.

ಸೆಂಚುರಿಯನ್ ಸ್ಪೋರ್ಟ್ ಪಾರ್ಕ್ ಸ್ಟೇಡಿಯಂ ನಲ್ಲಿ ಮಂಗಳವಾರ 3 ಕ್ಕೇ 272 ರನ್ ಗಳಿಂದ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಮುಂದುವರೆಸಿದ ಭಾರತ 327 ರನ್ ಗಳಿಗೆ ಆಲ್ ಔಟ್ ಆಯಿತು.

ಪಂದ್ಯದ ಎರೆಡನೇ ದಿನವಾದ ಸೋಮವಾರ ಮಳೆಯಿಂದಾಗಿ ಉಭಯ ತಂಡಗಳ ಆಟಗಾರರಿಗೆ ಮೈ ದಾನಕ್ಕಿಳಿಯಲು ಸಾಧ್ಯವಾಗಿರಲಿಲ್ಲ ಮರುದಿನ ಆಟ ಪ್ರಾರಂಭಿಸಿದ ಭಾರತ 327 ರನ್ ಗಳಿಗೆ ಆಲ್ ಔಟ್ ಆಗಿ ಡಿಕ್ಲೇರ್ ಮಾಡಿಕೊಂಡಿತು.

327 ರನ್ ಗಳ ಗೆಲುವಿನ ಗುರಿ ಬೆನ್ನತ್ತಿ ಆಡಿದ ದಕ್ಷಿಣಾ ಆಫ್ರಿಕಾದ ಬ್ಯಾಟ್ಸ್ ಮನ್ ಗಳು ಭಾರತ ತಂಡದ ಬೌಲರ್ ಗಳಿಗೆ ನಡುಗಿದರು.ಟೀಮ್ ಇಂಡಿಯಾ ದಿನದ ಮೊದಲ ಅವಧಿಯ ಒಂದು ಗಂಟೆಯೊಳಗೆ 55 ರನ್ ಗಳಿಗೆ ಉಳಿದ 7 ವಿಕೆಟ್ ಗಳನ್ನು ಕಳೆದುಕೊಂಡಿತು.

ರಬಾಡ (77 ಕ್ಕೆ 3) ಹಾಗೂ ಎನ್ ಗಿಡಿ (71 ಕ್ಕೆ 6) ವೇಗಕ್ಕೆ ತತ್ತರಿಸಿದ ಇತರ ಬ್ಯಾಟ್ಸ್ ಮನ್ ಗಳು ಪೆವಿಲಿಯನ್ ಪರೇಡ್ ಕಡೆ ನಡೆದರು.

ಬಳಿಕ ಮೊದಲ ಇನ್ನಿಂಗ್ಸ್ ಆರಂಭಿಸಿದ ದಕ್ಷಿಣಾ ಆಫ್ರಿಕಾದ ಬ್ಯಾಟ್ಸ್ ಮನ್ ಗಳಿಗೆ ಶಮಿ 44 ರನ್ ಗಳಿಗೆ 5 ವಿಕೆಟ್ ಕಬಳಿಸಿದರು.ಜಸ್ ಪ್ರಿತ್ ಬುಮ್ರಾ 16 ರನ್ ಗಳಿಗೆ 2 ವಿಕೆಟ್ ಹಾಗೂ ಶಾರ್ದೂಲ್ ಠಾಕೂರ್ 51 ರನ್ ಗಳಿಗೆ 2 ವಿಕೆಟ್ ಗಳಿಸಿದರು.ನಿರಂತರ ವಿಕೆಟ್ ಕಳೆದು ಕೊಂಡು ಸಾಗಿದ ದಕ್ಷಿಣಾ ಆಫ್ರಿಕಾ ತಂಡಕ್ಕೆ ತೆಂಬಾ ಬಹುಮಾ (52) ಆಧಾರವಾದರು ಕಗಿಸೊ ರಬಾಡ ಅವರ 25 ರನ್ ಗಳು ಹಿನ್ನಡೆಯ ಅಂತರ ತಗ್ಗಿಸಲು ಆತಿಥೇಯ ತಂಡಕ್ಕೆ ನೆರವಾಯಿತು.ಆದಾಗ್ಯೂ 200 ರ ಗಡಿ ದಾಟಲು ಹರಿಣ ಪಡೆಗೆ ಸಾಧ್ಯವಾಗಲಿಲ್ಲ ದಿನದಾಟದಲ್ಲಿ ಭಾರತದ ಬೌಲರ್ ಗಳು ಮೇಲು ಗೈ ಸಾಧಿಸಿದರು.

ಈ ಪಂದ್ಯದಲ್ಲಿ ಬೌಲರ್ ಶಮಿ ಉತ್ತಮ ಸಾಧನೆ ಮಾಡಿದ್ದಾರೆ.5 ವಿಕೆಟ್ ಪಡೆಯುವ ಮೂಲಕ ಟೆಸ್ಟ್ ಕ್ರಿಕೆಟ್ ನಲ್ಲಿ 200 ವಿಕೆಟ್ ಪಡೆದ ಖ್ಯಾತಿಗೆ ಪಾತ್ರರಾಗಿದ್ದಾರೆ.

ಭಾರತ ಮತ್ತು ದಕ್ಷಿಣ ಆಫ್ರಿಕಾ ಕ್ರಿಕೆಟ್ ಭಾರತಕ್ಕೆ 130 ರನ್ ಮುನ್ನಡೆ ಮಾಡಲು ಅವರು 55 ಟೆಸ್ಟ್ ಗಳಲ್ಲಿ ಬೌಲಿಂಗ್ ಮಾಡಿದ್ದಾರೆ ಟೆಸ್ಟ್ ಕ್ರಿಕೆಟ್ ನಲ್ಲಿ 200 ವಿಕೆಟ್ ಗಳಿಸಿದ ಭಾರತೀಯ ಬೌಲರ್ ಗಳ ಸಾಲಿನಲ್ಲಿ ಇವರು 5 ನೇಯವರಾಗಿದ್ದರೆ. ಮಿಕ್ಕ ನಾಲ್ವರಲ್ಲಿ ಕಪಿಲ್ ದೇವ್ (50 ಟೆಸ್ಟ್) , ಜಾವ್ ಗಲ್ ಶ್ರೀನಾಥ್ (54 ಟೆಸ್ಟ್) , ಜಾಹೀರ್ ಖಾನ್ (63 ಟೆಸ್ಟ್) , ಈಶಾಂತ್ ಶರ್ಮ (63 ಟೆಸ್ಟ್) , ಈ ನಾಲ್ವರು ಇತರ ಭಾರತೀಯ ಬೌಲರ್ ಗಳಾಗಿದದ್ದಾರೆ.

2 ನೇ ಇನ್ನಿಂಗ್ಸ್ ಆರಂಭಿಸಿದ ಭಾರತ ತಂಡ ದಿನದಾಟದ ಕೊನೆಯಲ್ಲಿ 6 ಓವರ್ ಗಳಲ್ಲಿ 1 ವಿಕೆಟ್ ಕಳೆದುಕೊಂಡು 16 ರನ್ ಗಳಿಸಿತು.