Thursday, February 12, 2026
Thursday, February 12, 2026
Home Blog Page 1796

ಪದವೀಧರರಿಗೆ ಅಭಿವೃದ್ದಿ ದೂರದೃಷ್ಟಿ ಇರಲಿ-ಪ್ರಧಾನಿ

0

ಮುಂದಿನ 25 ವರ್ಷಗಳಲ್ಲಿ ಭಾರತ ಯಾವ ರೀತಿ ಅಭಿವೃದ್ಧಿ ಹೊಂದಬೇಕು ಎಂದು ಬಯಸುತ್ತೀರೋ, ಅದನ್ನು ಸಾಧಿಸುವ ನಿಟ್ಟಿನಲ್ಲಿ ಈಗಿನಿಂದಲೇ ಐಐಟಿ ಪದವೀಧರರು ಕಾರ್ಯಪ್ರವೃತ್ತರಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿಯವರು ತಿಳಿಸಿದ್ದಾರೆ.
ಐಐಟಿ-ಕಾನ್ಪುರದ 54ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸ್ವಾತಂತ್ರ್ಯಾ ನಂತರ ಭಾರತವು ಹೊಸ ಪಯಣ ಆರಂಭಿಸಿದೆ. ಮುಂದಿನ 25 ವರ್ಷಗಳ ನಂತರ ದೇಶ ಸಂಪೂರ್ಣ ಸ್ವಾವಲಂಬಿಯಾಗಬೇಕು. ಈ ಗುರಿ ಸಾಧನೆಗೆ ಸಾಕಷ್ಟು ಕಾರ್ಯವಾಗಬೇಕಾಗುತ್ತದೆ. ಆದರೆ, ಎರಡು ಪೀಳಿಗೆಗಳನ್ನು ಕಂಡಿರುವ ದೇಶ, ಸಾಕಷ್ಟು ಸಮಯವನ್ನೂ ವ್ಯರ್ಥ ಮಾಡಿದೆ. ಇನ್ನು ಮುಂದೆ ಎರಡು ನಿಮಿಷ ವನ್ನು ಸಹ ನಾವು ವ್ಯರ್ಥಮಾಡಬಾರದು ಎಂದರು.
ಕಾನ್ಪುರದಲ್ಲಿನ ಮೆಟ್ರೋ ರೈಲು ಯೋಜನೆಯ ಪೂರ್ಣಗೊಂಡ ಮೊದಲ ಹಂತವನ್ನು ಪ್ರಧಾನಿಯವರು ಉದ್ಘಾಟಿಸಿದರು.
ಇದೇ ವೇಳೆ ಅವರು, ಬ್ಲಾಕ್ ಚೈನ್ ಆಧಾರಿತ ಡಿಜಿಟಲ್ ವಿಷಯಗಳ ಪದವಿ ಕೋರ್ಸ್ ಗಳಿಗೆ ಚಾಲನೆ ನೀಡಿದರು.
ದೇಶವು ಈಗ ವಿಪುಲ ಅವಕಾಶಗಳ ಹೊಸ್ತಿಲಲ್ಲಿದೆ. ಈ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳುವ ಜವಾಬ್ದಾರಿಯನ್ನು ವಿದ್ಯಾರ್ಥಿಗಳು ಹೊತ್ತುಕೊಳ್ಳಬೇಕು ಎಂದರು.
ಉತ್ತರಪ್ರದೇಶ ರಾಜ್ಯಪಾಲರಾದ ಆನಂದಿಬೆನ್ ಪಟೇಲ್, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಅಡಿಕೆ ಕೃಷಿಕರಿಗೆ ಫೈಬರ್ ದೋಟಿ ವರದಾನ- ಜ್ಞಾನೇಂದ್ರ

0

ರೈತರು ಎದುರಿಸುತ್ತಿರುವ ಅಡಿಕೆ ಕೊನೆ ತೆಗೆಯುವ ಸಮಸ್ಯೆಗೆ ಕಾರ್ಬನ್ ಫೈಬರ್ ದೋಟಿ ವರವಾಗಲಿದೆ ಎಂದು ಗೃಹ ಸಚಿವ ಆರೋಗ್ಯ ಕೇಂದ್ರ ಅವರು ಹೇಳಿದ್ದಾರೆ.

ಕೃಷಿ ಮಲೆನಾಡು ಕೃಷಿಕರ ಸಮುದಾಯ, ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಮಲೆನಾಡು ಅಡಿಕೆ ಮಾರಾಟ ಸಹಕಾರ ಸಂಘ ಆಶ್ರಯದಲ್ಲಿ ಆಯೋಜಿಸಿದ್ದ ಕಾರ್ಬನ್ ಫೈಬರ್ ದೋಟಿಯಲ್ಲಿ ಕೊನೆ ತೆಗೆಯುವ ತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಿದ್ದರು.

ಇತ್ತೀಚಿನ ದಿನಗಳಲ್ಲಿ ರೈತರು ಪಡೆಯುವ ವಿಚಾರದಲ್ಲಿ ಬಹಳ ಸಮಸ್ಯೆಗಳನ್ನ ಎದುರಿಸುತ್ತಿದ್ದಾರೆ. ಕೊನೆ ತೆಗೆಯುವ ಕಾಯಕದಲ್ಲಿ ಹಲವಾರು ಕಾರ್ಮಿಕರು ಆಕಸ್ಮಿಕವಾಗಿ ಮರದ ಮೇಲಿಂದ ಬಿದ್ದು ಅಮೂಲ್ಯ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಇದಕ್ಕೆಲ್ಲ ವರದಾನ ವೆಂಬಂತೆ ಅತ್ಯಂತ ಹಗುರ ಹಾಗೂ ಉಪಯುಕ್ತವಾಗಬಲ್ಲ ಕಾರ್ಬನ್ ಫೈಬರ್ ದೋಟಿಯ ಆವಿಷ್ಕಾರ ಆಗಿದೆ ಎಂದು ಗೃಹ ಸಚಿವರಾದ ಆರಗ ಜ್ಞಾನೇಂದ್ರ ಅವರು ತಿಳಿಸಿದ್ದಾರೆ

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷರಾಗಿ ಎನ್. ಗೋಪಿನಾಥ್ ಆಯ್ಕೆ

0

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ನೂತನ ಅಧ್ಯಕ್ಷರಾಗಿ ಮಥುರಾ ಪ್ಯಾರಡೈಸ್ ಹೋಟೆಲ್ ಮಾಲೀಕ ಎನ್. ಗೋಪಿನಾಥ್ ಅವರು ಆಯ್ಕೆಯಾಗಿದ್ದಾರೆ.

ಶಿವಮೊಗ್ಗದ ಕೈಗಾರಿಕಾ ಸಂಘದಲ್ಲಿ ಸಭೆಯನ್ನು ನಡೆಸಲಾಯಿತು. ಈ ಸಭೆಯಲ್ಲಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ನೂತನ ಪದಾಧಿಕಾರಿಗಳನ್ನು ನೇಮಿಸಲಾಯಿತು. ಉಪಾಧ್ಯಕ್ಷರಾಗಿ ಬಿ. ಗೋಪಿನಾಥ್, ಕಾರ್ಯದರ್ಶಿಯಾಗಿ ವಸಂತ್ ಹೋಬಳಿದಾರ್, ಜಂಟಿ ಸಹ ಕಾರ್ಯದರ್ಶಿಯಾಗಿ ಜಿ. ವಿಜಯ್ ಕುಮಾರ್, ಖಜಾಂಚಿಯಾಗಿ ಮಧುಸೂದನ್ ಐತಾಳ್ ಆಯ್ಕೆ ಮಾಡಲಾಯಿತು.

ಇದರ ಜೊತೆಗೆ ಸಂಘದ ವಿವಿಧ ಸಂಸ್ಥೆಗಳ ಜವಾಬ್ದಾರಿಯನ್ನು ಹಂಚಿಕೆ ಮಾಡಲಾಯಿತು.

ಕಾರ್ಯಕ್ರಮಗಳ ಸಮಿತಿಗೆ ಬಿ. ಆರ್. ಸಂತೋಷ್, ರೈಲ್ವೆ ಅಭಿವೃದ್ಧಿ ಮತ್ತು ಬುಲೆಟಿನ್ ಸಮಿತಿಗೆ ಎಸ್ .ಎಸ್. ಉದಯ್ ಕುಮಾರ್, ಕೈಗಾರಿಕಾ ಅಭಿವೃದ್ಧಿ ಮತ್ತು ಬೈಲಾ ಸಮಿತಿಗೆ ಎಂ.ರಾಜು, ಮೆಂಬರ್ಸ್ ಗ್ರೀವೆನ್ಸ್ ಹಾಗೂ ಸ್ವಚ್ಛ ಶಿವಮೊಗ್ಗ ಮತ್ತು ಮೂಲಭೂತ ಸೌಕರ್ಯ, ಸ್ಮಾರ್ಟ್ ಸಿಟಿ ಸಮಿತಿಗೆ ಕೆ.ಎಸ್. ಸುಕುಮಾರ್, ತೆರಿಗೆ ಸಲಹಾ ಸಮಿತಿಗೆ ಇ. ಪರಮೇಶ್ವರ್, ಪ್ರವಾಸೋದ್ಯಮ ಸಮಿತಿಗೆ ಪ್ರದೀಪ್ ವಿ.ಎಲ್, ಕಟ್ಟಡ ಅಭಿವೃದ್ಧಿ ಸಮಿತಿಗೆ ಮರಿಸ್ವಾಮಿ, ಸದಸ್ಯತ್ವ ಅಭಿವೃದ್ಧಿ ಸಮಿತಿಗೆ ಜಗದೀಶ್ ಮಾತನವರ್, ಮಾಹಿತಿ ತಂತ್ರಜ್ಞಾನ ಮತ್ತು ಕೌಶಲ್ಯ ಅಭಿವೃದ್ಧಿ ಸಮಿತಿಗೆ ಗಣೇಶ ಎಂ. ಅಂಗಡಿ, ತಾಲೂಕು ಚೇಂಬರ್ ಆಫ್ ಕಾಮರ್ಸ್ ಗಳ ಅಭಿವೃದ್ಧಿ ಸಮಿತಿಗೆ ಮಂಜೇಗೌಡ, ಎಪಿಎಂಸಿ ಸಮಿತಿಗೆ ಟಿ.ಎನ್. ಲಕ್ಷ್ಮಿಕಾಂತ್ ಹೀಗೆ ಹಲವಾರು ಉಪ ಸಮಿತಿಗಳಿಗೆ ಅಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆ.

ಈ ಸಂದರ್ಭದಲ್ಲಿ ಜಂಟಿ ಕಾರ್ಯಕಾರಿ ಸಮಿತಿ ಸಭೆಯಲ್ಲಿ ನಿರ್ಗಮಿತ ಅಧ್ಯಕ್ಷ ಜೆ .ಆರ್. ವಾಸುದೇವ್, ಮಾಜಿ ಅಧ್ಯಕ್ಷರಾದ ಎಂ. ಭಾರದ್ವಾಜ್, ಎ. ಆರ್. ಅಶ್ವಥ್ ನಾರಾಯಣ ಶೆಟ್ಟಿ ಇನ್ನು ಮುಂತಾದವರು ಉಪಸ್ಥಿತರಿದ್ದರು.

ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಶ್ರೀ. ಎನ್. ಗೋಪಿನಾಥ್ ಅವರಿಗೆ ಮತ್ತು ಎಲ್ಲಾ ಪದಾಧಿಕಾರಿಗಳಿಗೆ ಕೆ ಲೈವ್ ಮೀಡಿಯಾ ಬಳಗ ಅಭಿನಂದಿಸುತ್ತದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಕೊವೊವ್ಯಾಕ್ಸ್ ಕಾರ್ಬಿವ್ಯಾಕ್ಸ್ ಮತ್ತೆರಡು ಲಸಿಕೆಗಳು

0

ದೇಶಾದ್ಯಂತ ಓಮಿಕ್ರಾನ್ ಸೋಂಕು ದಿನೇ ದಿನೇ ಅಧಿಕವಾಗುತ್ತಿದೆ. ಇದರ ನಡುವೆ ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಪ್ರಾಧಿಕಾರವು ಮತ್ತೆರಡು ದೇಶಿಯ ಲಸಿಕೆಗಳು ಹಾಗೂ ಕೋವಿಡ್ ಪ್ರತಿರೋಧಕ ಮಾತ್ರೆಯ ತುರ್ತು ಬಳಕೆಗೆ ಅನುಮೋದನೆ ನೀಡಿದೆ.

ಭಾರತದ ಕೋವಿಡ್-19 ಲಸಿಕೆಗಳ ಪಟ್ಟಿಯಲ್ಲಿ ಈಗ ಪುಣಿಯ ಸೀರಂ ಇನ್ಸ್ಟಿಟ್ಯೂಟ್ ತಯಾರಿಸಿರುವಂತಹ ‘ಕೊವೊವ್ಯಾಕ್ಸ್’ ಮತ್ತು ‘ಬಯಾಲಾಜಿಕಲ್ ಇ’ ಸಂಸ್ಥೆಯ ಕಾರ್ಬಿವ್ಯಾಕ್ಸ್ ಅನ್ನು ಸೇರಿಸಲಾಗಿದೆ. ಇದರೊಂದಿಗೆ ಮರ್ಕ್ ಸಂಸ್ಥೆ ತಯಾರಿಸಿರುವ ಕೊರೋನಾ ವೈರಸ್ ಸೋಂಕು ನಿರೋಧಕ ಮಾತ್ರೆ ‘ಮೊಲ್ನುಪಿರಾವಿರ್’ ತುರ್ತು ಬಳಕೆಗೂ ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಪ್ರಾಧಿಕಾರ ಒಪ್ಪಿಗೆ ನೀಡಿದೆ.

ಕೇಂದ್ರ ಸರ್ಕಾರವು ಬೂಸ್ಟರ್ ಡೋಸ್ ಪಡೆಯಲು 60 ವರ್ಷ ಮೀರಿದ ಮತ್ತು ಇತರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ವ್ಯಕ್ತಿಗಳು ವೈದ್ಯರ ಪ್ರಮಾಣ ಪತ್ರ ಕಡ್ಡಾಯ ಎಂಬ ಷರತ್ತನ್ನು ಸಡಿಲಗೊಳಿಸಿದೆ.

ಮೊಲ್ನುಪಿರಾವಿರ್ ಮಾತ್ರೆಯನ್ನು ಈಗಾಗಲೇ 13 ಸಂಸ್ಥೆಗಳು ದೇಶದಲ್ಲಿ ಉತ್ಪಾದಿಸುತ್ತಿದೆ. ಯುವ ಸಮುದಾಯದಲ್ಲಿ ಕೋವಿಡ್ ಸಂಬಂಧಿತ ಅನಾರೋಗ್ಯ ನಿಯಂತ್ರಿಸಲು ಮಾತ್ರೆಗಳು ಉಪಯುಕ್ತವಾಗಿದೆ. ಮೊಲ್ನುಪಿರಾವಿರ್ ಬಳಕೆಗೆ ಅನುಮತಿ ನೀಡಲು ಡಾ.ರೆಡ್ಡೀಸ್ ಲ್ಯಾಬೊರೆಟರೀಸ್ ಸಂಸ್ಥೆಯ ನೇತೃತ್ವದಲ್ಲಿ ಸಿಪ್ಲಾ, ಮೈಲಾನ್, ಟೊರ್ರೆಂಟ್, ಎಮ್ ಕ್ಯೂರ್ ಹಾಗೂ ಸನ್ ಫಾರ್ಮಾ ಸಂಸ್ಥೆಗಳು ಕೇಂದ್ರ ಸರ್ಕಾರಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದವು. ಈಗ ಸಂಸ್ಥೆಗಳ ಮನವಿಗೆ ಪ್ರಾಧಿಕಾರ ಒಪ್ಪಿಗೆ ನೀಡಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಪಿರಮಿಡ್ ಸ್ಕೀಮ್ ನಿಷೇಧ

0

ಕೇಂದ್ರ ಸರ್ಕಾರವು ಗ್ರಾಹಕರ ಹಿತರಕ್ಷಣೆ ವಾಗಿ ಪಿರಮಿಡ್ ಸ್ಕೀಮ್ ಗಳನ್ನು ನಿಷೇಧಿಸಿದೆ. ಟಪ್ಪರ್ ವೇರ್, ಆ್ಯಮ್ ವೇ ಮತ್ತು ಒರಿಫ್ಲೇಮ್ ಸೇರಿದಂತೆ ಹಲವು ಕಂಪನಿಗಳು ಜಾರಿಗೊಳಿಸಿರುವ ಪಿರಮಿಡ್ ಸ್ಕೀಮ್ ಗಳನ್ನು ಇನ್ನು ಮುಂದೆ ನಿಷೇಧಿಸಲಾಗಿದೆ.

ಈ ಕುರಿತಂತೆ 90 ದಿನಗಳೊಳಗೆ ಉದ್ಯಮ ವಲಯ ನಿಯಮಗಳನ್ನು ಅನುಸರಿಸಬೇಕಾಗಿದೆ. 2021ರ ಗ್ರಾಹಕ ರಕ್ಷಣಾ ನಿಯಮಾವಳಿ ಅಧಿಸೂಚನೆ ಪ್ರಕಟವಾಗಿದೆ. ಈ ಅಧಿಸೂಚನೆಯಂತೆ ಮಾರಾಟಗಾರರಿಂದ ಮಾರಾಟವಾಗುವ ಸರಕು ಮತ್ತು ಸೇವೆಗಳಿಗೆ ಸಂಬಂಧಿಸಿದ ಅಹವಾಲುಗಳಿಗೆ ಆ ಕಂಪನಿಗಳೇ ಜವಾಬ್ದಾರಿ ವಹಿಸಿಕೊಳ್ಳಬೇಕಾಗುತ್ತದೆ.

ಈ ನಿಯಮಗಳ ಪ್ರಕಾರ ರಾಜ್ಯ ಸರ್ಕಾರಗಳು ನೇರ ಮಾರಾಟ ಚಟುವಟಿಕೆಗಳ ಮೇಲೆ ನಿಗಾ ವಹಿಸಲಾಗುತ್ತದೆ. ಗ್ರಾಹಕ ಹಿತರಕ್ಷಣೆ ಕಾಯ್ದೆ ಅಡಿಯಲ್ಲಿ ಇದೇ ಮೊದಲ ಬಾರಿಗೆ ನೇರ ಮಾರಾಟ ಉದ್ದಿಮೆಗೆ ಸಂಬಂಧಿಸಿದ ನಿಯಮಗಳನ್ನು ರಚಿಸಲಾಗಿದೆ. ಈ ನಿಯಮಗಳನ್ನು ಅನುಸರಿಸದಿದ್ದರೆ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬಹುದು ಎಂದು ಗ್ರಾಹಕ ವ್ಯವಹಾರಗಳ ಅಧಿಕಾರಿಗಳು ಹೇಳಿದ್ದಾರೆ.

ಹೊಸ ಅಧಿಸೂಚನೆಯ ನಿಯಮಗಳ ಪ್ರಕಾರ ಕಂಪನಿಗಳು ನೇರ ಮಾರಾಟಕ್ಕೆ ಸಂಬಂಧಿಸಿದ ಇದೇ ರೀತಿಯಲ್ಲಿ ಪಿರಮಿಡ್ ಸ್ಕೀಮ್ ಗಳನ್ನು ಹಮ್ಮಿಕೊಳ್ಳುವುದು, ಅದಕ್ಕಾಗಿ ಜನರನ್ನು ನೇಮಕ ಮಾಡುವುದನ್ನು ನಿಷೇಧಿಸಲಾಗಿದೆ. ನೇರ ಮಾರಾಟ ಕುರಿತು ಚಲಾವಣೆಯಲ್ಲಿ ಒಳಗೊಂಡಿರುವ ಸ್ಕೀಮ್ ಗಳನ್ನು ಕೂಡ ನಡೆಸುವಂತಿಲ್ಲ. ಈ ನಿಯಮಗಳು ಭಾರತದಲ್ಲಿರುವಂತಹ ಎಲ್ಲಾ ಮಾದರಿಯ ನೇರ ಮಾರಾಟ ಸಂಸ್ಥೆಗಳಿಗೆ ಅನ್ವಯಿಸಲಿವೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಹೊಸನಗರ ಪಟ್ಟಣ ಪಂಚಾಯತಿ ಸಭೆ

0

ನ್ಯಾಯಾಲಯದಲ್ಲಿರುವ ಪಟ್ಟಣ ಪಂಚಾಯಿತಿಯ ಬಹುತೇಕ ವ್ಯಾಜ್ಯಗಳು ನಮ್ಮ ಪರವಾಗಿ ಬರುವುದಿಲ್ಲ . ಇದಕ್ಕೆ ಕಾರಣ ಏನಿರಬಹುದು? ಎಂದು ಸದಸ್ಯ ಎಚ್.ಎನ್. ಶ್ರೀಪತಿ ರಾವ್ ಅವರು ಪ್ರಶ್ನಿಸಿದರು.
ಹೊಸನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಗುಲಾಬಿ ಮರಿಯಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಈ ಚರ್ಚೆ ನಡೆಯಿತು.
ಪಟ್ಟಣ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಶಾಲೆಗಳಿಗೆ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿಯಲ್ಲಿ ಶೌಚಾಲಯ ನಿರ್ಮಿಸಿ ಕೊಡುವ ಬಗ್ಗೆ ಸದಸ್ಯರು ಒಪ್ಪಿಗೆ ಸೂಚಿಸಿದರು.
ಪಟ್ಟಣದ ಬಹುತೇಕ ರಸ್ತೆಗಳಲ್ಲಿ ಗುಂಡಿ ಬಿದ್ದಿದೆ. ಇದಕ್ಕೆ ಸೂಕ್ತ ಕ್ರಮ ಜರುಗಿಸುವಂತೆ ಸದಸ್ಯರು ಮನವಿ ಮಾಡಿದರು.
ಹೊಸನಗರ ಪಟ್ಟಣದ ಹೃದಯ ಭಾಗದಲ್ಲಿ ಜೀವ ವಿಮಾ ನಿಗಮಕ್ಕೆ ಮಂಜೂರು ಮಾಡಿರುವ ನಿವೇಶನದಲ್ಲಿ ಇದುವರೆಗೆ ಕಛೇರಿ ಕಟ್ಟಡ ನಿರ್ಮಿಸಿಲ್ಲ. ಈ ಬಗ್ಗೆ ಸೂಕ್ತ ಉತ್ತರವನ್ನು ಸಹ ಸಂಸ್ಥೆಯ ನೀಡುತ್ತಿಲ್ಲವಾದ ಕಾರಣ ಮಂಜೂರಾತಿಯನ್ನು ರದ್ದುಪಡಿಸಬೇಕು ಎಂದು ಸದಸ್ಯರು ಒತ್ತಾಯಿಸಿದರು.
ಸಭೆಯಲ್ಲಿ ಉಪಾಧ್ಯಕ್ಷೆ ಕೃಷ್ಣವೇಣಿ, ಸದಸ್ಯರಾದ ಹಾಲಗದ್ದೆ ಉಮೇಶ, ಅಶ್ವಿನಿ ಕುಮಾರ್, ಸುರೇಂದ್ರ ಕೋಟ್ಯಾನ್, ಸಿಂಥಿಯಾ ಸೆರಾವೋ, ಚಂದ್ರಕಲಾ ನಾಗರಾಜ್, ಸರ್ಕಾರಿ ನಾಮನಿರ್ದೇಶಿತ ಸದಸ್ಯರಾದ ಎಚ್.ಎನ್. ಶ್ರೀಪತಿ ರಾವ್ ,ಎಂ.ಎನ್ ಸುಧಾಕರ ಇದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಜಿಲ್ಲಾಧಿಕಾರಿಗಳ ಸಭೆ: ವಿವಿಧ ಸಮಸ್ಯೆಗಳಿಗೆ ಪರಿಹಾರ ಚರ್ಚೆ

0

ಜಿಲ್ಲೆಯ ಗ್ರಾಮೀಣ ಪ್ರದೇಶದ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಮಾಹಿತಿಯ ಕೊರತೆಯಿಂದಾಗಿ ಸರ್ಕಾರವು ನೀಡುತ್ತಿರುವ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುತ್ತಿರುವವರ ಸಂಖ್ಯೆ ಕಡಿಮೆ ಇದೆ.ಅಂತಹ ವಿದ್ಯಾರ್ಥಿಗಳನ್ನು ಗುರುತಿಸಿ ಅರಿವು ಮೂಡಿಸಿ ಸಕಾಲದಲ್ಲಿ ಅರ್ಜಿ ಸಲ್ಲಿಸಲು ಮಾಹಿತಿ ಒದಗಿಸುವಂತೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಸಮಾಜ ಕಲ್ಯಾಣ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಅವರು ತಮ್ಮ ಕಚೇರಿಯ ನ್ಯಾಯಾಲಯ ಸಭಾಂಗಣದಲ್ಲಿ ಸಮಾಜ ಕಲ್ಯಾಣ ಇಲಾಖೆಯು ಏರ್ಪಡಿಸಿದ್ದ ಜಿಲ್ಲಾ ಜಾಗೃತಿ ಸಮಿತಿ ಹಾಗೂ ಉಸ್ತುವಾರಿ(ದೌರ್ಜನ್ಯ ಪ್ರತಿಬಂಧ) ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶಿವಮೊಗ್ಗ ತಾಲೂಕಿನ ಶಾಲೆಯೊಂದರಲ್ಲಿ ಶಿಕ್ಷಕರು ಮಕ್ಕಳಿಗೆ ಕುಂಕುಮ ಇಡದಂತೆ ಹಾಗೂ ಬಳೆ ಧರಿಸದಂತೆ ಸೂಚಿಸಿರುವುದನ್ನು ಗಮನಿಸಲಾಗಿದ್ದು, ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ್ ಅವರಿಗೆ ಸೂಚಿಸಿದರು.

ಶಿವಮೊಗ್ಗ ಸಮೀಪದ ಗಾಜನೂರಿನ ನವೋದಯ ವಸತಿ ಶಾಲೆಯ ಪರಿಸರದಲ್ಲಿ ಭಾರೀ ಪ್ರಮಾಣದ ಕುರುಚಲು ಗಿಡ-ಗಂಟೆಗಳು ಬೆಳೆದಿದ್ದು ಸ್ವಚ್ಛತೆ ಕಾಣದಾಗಿದೆ ಎಂದು ಸಮಿತಿ ಸದಸ್ಯರು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಾಗ, ಸದರಿ ಶಾಲೆಗೆ ಖುದ್ದು ಭೇಟಿ ನೀಡಿ, ಪರಿಶೀಲನೆ ನಡೆಸಲಾಗಿದ್ದು, ಅಗತ್ಯ ಕ್ರಮ ಕೈಗೊಳ್ಳುವಂತೆ ತಿಳಿಸಿದರು. ಪಾಠೋಪಕರಣ, ಬೀದಿದೀಪ, ನೈರ್ಮಲ್ಯ ಮುಂತಾದ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸುವಂತೆ ಸೂಚನೆ ನೀಡಲಾಗಿದ್ದು, ಶೀಘ್ರದಲ್ಲಿ ಎಲ್ಲವೂ ಸುಗಮವಾಗಲಿದೆ ಎಂದರು.
ಉಪವಿಭಾಗಾಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ತಮ್ಮ ಕಾರ್ಯಕ್ಷೇತ್ರದ ವ್ಯಾಪ್ತಿಯಲ್ಲಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅರ್ಜಿಗಳನ್ನು ತ್ವರಿತವಾಗಿ ವಿಲೇ ಮಾಡುವಂತೆ ಸೂಚಿಸಿದ ಅವರು, ಸೊರಬ ತಾಲೂಕಿನ ಬೆನ್ನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎಸ್.ಸಿ. ಸಮುದಾಯದ ಜನರಿಗೆ ಸ್ಮಶಾನ ಭೂಮಿಯನ್ನು ಮಂಜೂರು ಮಾಡುವ ಕುರಿತಂತೆ, ಈಗಾಗಲೇ ಜಿಲ್ಲೆಗೆ 150 ಗ್ರಾಮಗಳಲ್ಲಿ ಸ್ಮಶಾನ ಭೂಮಿ ಮಂಜೂರು ಮಾಡಲಾಗಿದೆ. ಪ್ರಸ್ತುತ 150 ಗ್ರಾಮಗಳ ಪಟ್ಟಿಯಲ್ಲಿ ಈ ಗ್ರಾಮದ ಹೆಸರಿರುವುದನ್ನು ಪರಿಶೀಲಿಸಿದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ಕಳೆದ ಒಂದು ವರ್ಷಗಳ ಅವಧಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವ್ಯಕ್ತಿಗಳ ಮೇಲೆ ಸುಮಾರು 91 ದೌರ್ಜನ್ಯ ಪ್ರಕರಣಗಳು ದಾಖಲಾಗಿದ್ದು, ಆ ಪೈಕಿ 48ಪ್ರಕರಣಗಳಲ್ಲಿ ಕ್ರಮ ವಹಿಸಲಾಗಿದೆ. ಉಳಿದ ಪ್ರಕರಣಗಳ ಕುರಿತು ಮಾಹಿತಿ ಒದಗಿಸುವಂತೆ ಹಾಗೂ ತುರ್ತು ಕ್ರಮ ಕೈಗೊಳ್ಳುವಂತೆ ಸಂಬಂಧಿತ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್ ಅವರು ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವ್ಯಕ್ತಿಗಳ ಮೇಲೆ ನಡೆಯುವ ದೌರ್ಜನ್ಯ ಪ್ರಕರಣಗಳಿಗೆ ಹಲವು ಕಾರಣಗಳಿದ್ದು, ಅವುಗಳನ್ನು ಸಕಾಲದಲ್ಲಿ ಗುರುತಿಸಿ, ಅಹಿತಕರ ಘಟನೆಗಳು ಮರುಕಳಿಸದಂತೆ ಹಾಗೂ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದಲ್ಲದೇ ಪೊಲೀಸ್ ಸಿಬ್ಬಂಧಿಗಳನ್ನು ಕರ್ತವ್ಯಕ್ಕೆ ನಿಯೋಜಿಸಲಾಗುವುದು ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಮತಿ ಎಂ.ಎಲ್.ವೈಶಾಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ನಾಗರಾಜ್, ಉಪವಿಭಾಗಾಧಿಕಾರಿ ಟಿ.ಬಿ.ಪ್ರಕಾಶ್, ಜಿಲ್ಲಾ ಜಾಗೃತಿ ಸಮಿತಿಯ ಸದಸ್ಯರಾದ ನಾಗರಾಜ್, ರಾಜ್‍ಕುಮಾರ್ ಸೇರಿದಂತೆ ಸಂಬಂಧಿತ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಸರಳ ಮತ್ತು ಸಹಜ ಜೀವನ- ಜೈನಧರ್ಮದ ತಿರುಳು

0

ತಾನೊಬ್ಬ ಬದುಕಿದರೆ ಸಾಲದು. ಇತರರದ ಬದುಕಿಗೂ ದಾರಿದೀಪವಾಗಬೇಕು ಎಂದು ಹೊಂಬುಜ ಮಠದ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿಯವರು ತಿಳಿಸಿದರು.
ಸಾಗರದ ನೆಹರು ಮೈದಾನದಲ್ಲಿರುವ ಪಾರ್ಥ್ವನಾಥ ದಿಗಂಬರ ಜೈನ ಮಂದಿರ ಆವರಣದಲ್ಲಿ ಸನ್ಮತಿ ವಿದ್ಯಾರ್ಥಿನಿಲಯದ ಭೂಮಿಯನ್ನು ನೆರವೇರಿಸಿದರು.
ಇಂದು ಪ್ರಕೃತಿ ನಮಗೆ ಸಾಕಷ್ಟು ಪಾಠವನ್ನು ಕಲಿಸುತ್ತಿದೆ. ಹಾಗಾಗಿ ಸಹಜವಾದ ಹಾಗೂ ಸರಳವಾದ ಜೀವನವನ್ನು ಹೇಳಿಕೊಟ್ಟಿದ್ದು ಜೈನಧರ್ಮ ವಾಗಿದೆ. ವೈಜ್ಞಾನಿಕ ನೆಲೆಗಟ್ಟಿನಲ್ಲಿ ಹೇಗೆ ಬದುಕಬೇಕು ಎನ್ನುವುದನ್ನು ಸಾವಿರಾರು ವರ್ಷಗಳ ಹಿಂದೆಯೇ ಹೇಳಿದ್ದು ವಿಶೇಷವಾಗಿದೆ. ಇಂದು ನಾವು ಪ್ರಕೃತಿಯ ವಿರುದ್ಧವಾಗಿ ಸಾಗುತ್ತಿರುವುದರಿಂದ ಅನೇಕ ಸವಾಲುಗಳನ್ನು ಎದುರಿಸಬೇಕಾಗಿದೆ ಎಂದರು.
ನಾವು ಧಾರ್ಮಿಕವಾಗಿ ಇತಿಹಾಸವನ್ನು ತಿರುಚುವಂತಹ ಕಾರ್ಯವನ್ನು ಮಾಡುತ್ತಿದ್ದೇವೆ. ಅನಾದಿಯಿಂದಲೂ ನಡೆದುಕೊಂಡು ಬಂದಿರುವ ಜೈನ ಧರ್ಮದ ಆಚರಣೆಗಳು ಪ್ರಾಕೃತಿಕವಾಗಿದ್ದವು. ಸಾಗರ ಜೈನ ಧರ್ಮದ ಮೂಲ ನೆಲೆಯಾಗಿತ್ತು. ಈಗಲೂ ಸಹ ತಾಲ್ಲೂಕಿನ ಅನೇಕ ಕಡೆ ಮುನಿಗುಡ್ಡೆಗಳನ್ನು ಪೂಜಿಸುವ ಸಂಪ್ರದಾಯ ಜಾನಪದೀಯವಾಗಿ ಕಂಡುಬರುತ್ತದೆ ಎಂದು ಸಾಹಿತಿಗಳಾದ ವಿ.ಟಿ. ಸ್ವಾಮಿಯವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಹೊಯ್ಸಳ ಜೈನ್, ನಾಗರಾಜ್ ಜೈನ್, ರಾಜಕುಮಾರ್ ಜೈನ್, ಭರತ್ ರಾಜ್, ಪದ್ಮಾವತಿ ಮಹಿಳಾ ಸಮಾಜದ ಸದಸ್ಯರು, ಹಾಗೂ ಇನ್ನಿತರರು ಉಪಸ್ಥಿತರಿದ್ದರು

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಭದ್ರಾ ನಾಲೆಗಳಲ್ಲಿ ನೀರಿನ ಹರಿವು- ಮಾಹಿತಿ

0

ಭದ್ರಾ ಜಲಾಶಯದಿಂದ ಡಿಸೆಂಬರ್ 29ರಂದು ಎಡ ದಂಡೆ ಮತ್ತು ಡಿಸೆಂಬರ್ 30ರಿಂದ ಬಲದಂಡೆ ನಾಲೆಗಳಿಗೆ 120 ದಿನಗಳು ನಿರಂತರವಾಗಿ ನೀರು ಹರಿಸಲು ನಡೆದ ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ ಸಭೆ ಒಮ್ಮತದ ನಿರ್ಧಾರ ತೆಗೆದುಕೊಂಡಿತು.
ಅಚ್ಚುಕಟ್ಟು ಪ್ರದೇಶದ ನಾಲೆಗಳ ಎಲ್ಲಾ ಭಾಗದ ರೈತರಿಗೂ ಅನುಕೂಲವಾಗುವಂತೆ ನೀರು ಹರಿಸಲು ಕ್ರಮ ಕೈಗೊಳ್ಳಲಾಗಿದೆ. ದಾವಣಗೆರೆ, ಮಲೇಬೆನ್ನೂರು ಶಾಖಾ ನಾಲೆಗಳಿಗೆ ಸ್ವಲ್ಪ ತಡವಾಗಿ ಅಂದರೆ ಜ.6 ಅಥವಾ 7ರಿಂದ ನೀರು ಹರಿಸುವಂತೆ ಅಧಿಕಾರಿಗಳು ಕೇಳಿಕೊಂಡಿದ್ದಾರೆ. ಅಲ್ಲಿ ಮರಳಿನ ತಡೆ ಒಡ್ಡಿ ನೀರು ಹರಿಸುವಂತೆ ಸೂಚನೆ ನೀಡಲಾಗಿದೆ ಎಂದು ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ಪವಿತ್ರಾ
ರಾಮಯ್ಯ ಅವರು ತಿಳಿಸಿದ್ದಾರೆ.

ಭದ್ರಾ ನಾಲೆಗಳಲ್ಲಿ ನೀರಿನ ಹರಿವು- ಮಾಹಿತಿ
ಭದ್ರಾ ನಾಲೆಗಳಲ್ಲಿ ನೀರಿನ ಹರಿವು- ಮಾಹಿತಿ

ಭದ್ರಾ ಜಲಾಶಯದಲ್ಲಿ ಡಿ. 28ರಂದು 57.703 ಟಿಎಂಸಿ ಅಡಿ ನೀರು ಬಳಕೆಗೆ ಲಭ್ಯವಿದೆ. ಬೇಸಿಗೆ ಅವಧಿಗೆ 51.97 ಟಿಎಂಸಿ ಅಡಿ ನೀರು ಬೇಕಿದೆ. 5.733 ಟಿಎಂಸಿ ಅಡಿ ನೀರು ಜಲಾಶಯದಲ್ಲಿ ಉಳಿಯಲಿದೆ ಎಂದು ವಿವರ ನೀಡಿದರು.
ಭದ್ರಾ ಅಚ್ಚುಕಟ್ಟು ಪ್ರದೇಶ ಭಿನ್ನವಾದ ಹವಾಮಾನ ಮತ್ತು ಮಣ್ಣಿನ ಗುಣ ಹೊಂದಿದೆ. ಈ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಏಕಕಾಲದಲ್ಲಿ ನೀರು ಹರಿಸುವುದು, ನಿಲುಗಡೆ ಮಾಡುವುದು ಕಷ್ಟ. ಭದ್ರಾವತಿಯ ಸುತ್ತಮುತ್ತಲಿನ ಪ್ರದೇಶದಲ್ಲಿ ಕಲ್ಲು ಭೂಮಿ, ಕೆಂಪು ಮಿಶ್ರಿತ ಮಣ್ಣಿನಲ್ಲಿ ಅಡಿಕೆ ಬೆಳೆಯಲಾಗುತ್ತಿದೆ. ಈ ಮಣ್ಣು 20ರಿಂದ 25 ದಿನಕ್ಕೆ ಮಾತ್ರ ನೀರು ಹಿಡಿದಿಡಲು ಸಾಧ್ಯ. ಅದೇ ದಾವಣಗೆರೆ, ಮಲೇಬೆನ್ನೂರು, ಹರಿಹರ ಭಾಗದಲ್ಲಿ ಇರುವ ಎರೆಮಣ್ಣು ಒಂದು ತಿಂಗಳವರೆಗೆ ನೀರು ತಡೆಹಿಡಿಯುವ ಸಾಮರ್ಥ್ಯ ಹೊಂದಿದೆ. ಹಾಗಾಗಿ ಆ ಭಾಗಕ್ಕೆ ಸ್ವಲ್ಪ ತಡವಾಗಿ ನೀರು ಹರಿಸಬೇಕು ಎಂದು ರೈತ ಮುಖಂಡರಾದ ಬಸವರಾಜಪ್ಪನವರು ತಿಳಿಸಿದರು.
ಪ್ರಾಧಿಕಾರದ ನಿರ್ದೇಶಕ ಷಡಕ್ಷರಪ್ಪನವರು ಮಾತನಾಡಿ, 25 ದಿನಗಳಿಗೆ ಒಮ್ಮೆ ಸಭೆ ಕರೆದು ನಿರ್ಧಾರ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ಸಭೆಯಲ್ಲಿ ಅಧೀಕ್ಷಕ ಇಂಜಿನಿಯರ್ ಚಂದ್ರಹಾಸ್, ಕಾಡಾ ನಿರ್ದೇಶಕರಾದ ರುದ್ರಮೂರ್ತಿ, ವಿನಾಯಕ್, ಹನುಮಂತಪ್ಪ, ಸದಾಶಿವಪ್ಪ ಗೌಡ್ರು, ರಾಜಪ್ಪ, ದೇವಪ್ಪ ರೆಡ್ಡಿ, ಡಾಣಾಯಕಪುರದ ಪರಮೇಶ್ ಗೌಡ್ರು, ಆಡಳಿತಾಧಿಕಾರಿ ಅರುಣ್, ಇಂಜಿನಿಯರ್ ಗಳಾದ ರವಿಚಂದ್ರ, ಪ್ರಸನ್ನ, ಮತ್ತು ಇನ್ನಿತರರು ಉಪಸ್ಥಿತರಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಕಾಂಗ್ರೆಸ್ ಪಕ್ಷಕ್ಕೆ ಸುದೀರ್ಘ ಇತಿಹಾಸವಿದೆ- ಡಿಕೆಶಿ

0

ತ್ಯಾಗ ಬಲಿದಾನದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಕಾಂಗ್ರೆಸ್ ಗೆ ಸುದೀರ್ಘ ಇತಿಹಾಸ ಇದೆ. ಕಾಂಗ್ರೆಸ್ ನ ಘನತೆ ಮತ್ತಷ್ಟು ಹೆಚ್ಚಿಸಲು ನಾವೆಲ್ಲರೂ ಪಣ ತೊಡೋಣ. 2023 ರ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಪ್ರತಿಜ್ಞೆ ಮಾಡೋಣ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಿಗೆ ಹುರಿದುಂಬಿಸಿದರು.

ಮದ್ದೂರು ಶಿವಪುರದ ಶ್ರೀ ವೆಂಕಟೇಶ್ವರ ಕಲ್ಯಾಣ ಮಂಟಪ ಆವರಣದಲ್ಲಿ ಕಾಂಗ್ರೆಸ್ ಪಕ್ಷದ 137ನೇ ಸಂಸ್ಥಾಪನಾ ದಿನಾಚರಣೆಯನ್ನು ನಡೆಸಲಾಯಿತು. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

“ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡುವ ಜೊತೆಗೆ ದೇಶದ ಅಭ್ಯುದಯಕ್ಕಾಗಿ ನಿರಂತರ 60 ವರ್ಷಗಳ ಅಧಿಕಾರ ನಡೆಸಿದ ಹಿರಿಮೆಯನ್ನು ಕಾಂಗ್ರೆಸ್ ಹೊಂದಿದೆ ಎಂದು ಶಿವಕುಮಾರ್ ಅವರು ಹೇಳಿದರು.

ಸ್ವಾತಂತ್ರ್ಯಪೂರ್ವದಲ್ಲಿ ದೇಶಕ್ಕೆ ರಾಷ್ಟ್ರಧ್ವಜ, ರಾಷ್ಟ್ರಗೀತೆ, ಮತ್ತು ಸಂವಿಧಾನ ವಿಲ್ಲದ ಕಾಲದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಮೂಲಕ ಸಂಸ್ಥಾನಗಳ ರಾಜರ ಆಳ್ವಿಕೆಯಿಂದ ಹೊರಬಂದು ದೇಶಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆ ಕಲ್ಪಿಸಿದ ಹಿರಿಮೆ ಕಾಂಗ್ರೆಸ್ ನದು ಎಂದು ಶಿವಕುಮಾರ್ ಅವರು ತಿಳಿಸಿದರು.

ಕೊರೋನಾ ಸಂಕಷ್ಟದ ಸಮಯ ಪಕ್ಷದ ಕಾರ್ಯಕರ್ತರು ಜನಸೇವೆ ಜೊತೆಗೆ ರೈತರನ್ನು ಸಂಪರ್ಕಿಸಿ ಅವರ ಜಮೀನಿನಲ್ಲಿದ್ದ ಹೂ, ಹಣ್ಣು, ತರಕಾರಿ ಮತ್ತಿತರ ಕೃಷಿ ಉತ್ಪನ್ನಗಳನ್ನು ಖರೀದಿಸಿ ಅಗತ್ಯವುಳ್ಳವರಿಗೆ ವಿತರಿಸುವ ಮೂಲಕ ನಿಸ್ವಾರ್ಥದಿಂದ ಸೇವೆ ನಿರ್ವಹಿಸಿರುವುದು ಶ್ಲಾಘನೀಯ ಎಂದು ಡಿ.ಕೆ. ಶಿವಕುಮಾರ್ ಅವರು ಹೇಳಿದರು.

ಬಿಜೆಪಿಯು ಯಾವುದೇ ತ್ಯಾಗ, ಬಲಿದಾನ ವಿಲ್ಲದೆ ಇತ್ತೀಚಿನ ದಶಕಗಳಲ್ಲಿ ಅಸ್ತಿತ್ವಕ್ಕೆ ಬಂದು ಸಲ್ಲದ ಹೇಳಿಕೆಗಳ ಮೂಲಕ ದೇಶ, ರಾಜ್ಯದಲ್ಲಿ ಭಯೋತ್ಪಾದನೆಗೆ ಪ್ರೇರೇಪಣೆ ನೀಡುತ್ತಿದೆ. ಒಡೆದು ಆಳುವ ನೀತಿ ಅನುಸರಿಸುತ್ತಿದೆ. ಕೋವಿಡ್ ಸಂಕಷ್ಟ ಕಾಲದಲ್ಲಿ ಗಂಟೆ ಬಾರಿಸುವ, ಜಾಗಟೆ ಬಡಿಯುವ, ಚಪ್ಪಾಳೆ ತಟ್ಟುವ, ದೀಪ ಹಚ್ಚುವ ಹೇಳಿಕೆ ನೀಡಿ ಜನರನ್ನು ದಾರಿ ತಪ್ಪಿಸುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.