Wednesday, March 26, 2025
Wednesday, March 26, 2025

ಮೋದೀಜಿಯವರ ಚಿಂತನೆಯಿಂದ ವಿದೇಶಾಂಗ ನೀತಿ ಆಕರ್ಷಣೆ ಪಡೆದಿದೆ-ಜೈಶಂಕರ್

Date:

ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ಪರಿಣಾಮವಾಗಿ ಕಳೆದ 8 ವರ್ಷಗಳಲ್ಲಿ ಜನಪರ ವಿದೇಶಾಂಗ ನೀತಿಯನ್ನು ಭಾರತ ಅನುಷ್ಠಾನಕ್ಕೆ ತಂದಿದೆ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ತಿಳಿಸಿದರು.

ಬಿಜೆಪಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ‘2014ರ ಬಳಿಕ ಭಾರತದ ವಿದೇಶಾಂಗ ನೀತಿ’ ಕುರಿತ ವಿಷಯದ ಮೇಲೆ ಅವರು ಮಾತನಾಡಿದರು.

ಬೆಂಗಳೂರು ನಗರವು ಭಾರತಕ್ಕೆ ಉತ್ತಮ ಹೆಸರು ಮತ್ತು ಬ್ರ್ಯಾಂಡಿಂಗ್‍ನಲ್ಲಿ ಮಹತ್ವದ ಕೊಡುಗೆ ನೀಡಿದೆ ಎಂದು ಸಿಲಿಕಾನ್ ಸಿಟಿಯನ್ನು ಶ್ಲಾಘಿಸಿದರು. ದೇಶದಲ್ಲಿ ಬೇಗನೆ ಪಾಸ್‍ಪೋರ್ಟ್ ಸಿಗುವಂತೆ ಮಾಡಿದ್ದು, ಸೇರಿದಂತೆ ಆದ್ಯತೆಗಳು ಕೂಡ ಬದಲಾಗಿವೆ. ಇದು ಮಹತ್ವದ ಕೊಡುಗೆಯಾಗಿದೆ.

ನೇಪಾಳದಲ್ಲಿ ಭೂಕಂಪ, ಯೆಮನ್‍ನಲ್ಲಿ ಯುದ್ಧ, ಮೊಜಾಂಬಿಕ್‍ನಲ್ಲಿ ನೆರೆ ಸೇರಿದಂತೆ ಹತ್ತಾರು ಸಮಸ್ಯೆಗಳಿಗೆ ಸ್ಪಂದಿಸುವ ಗುಣ ನಮ್ಮದಾಗಿತ್ತು. ಯೋಗವನ್ನು ವಿಶ್ವದಾದ್ಯಂತ ಹಬ್ಬಿಸುವಲ್ಲಿ ಪ್ರಧಾನಿ ಮೋದಿಯವರ ಚಿಂತನೆ ಮಹತ್ವದ ಪಾತ್ರ ವಹಿಸಿದೆ ಎಂದು ಮೆಚ್ಚುಗೆ ಸೂಚಿಸಿದರು. ಭಾರತದಿಂದ ವಿದೇಶಕ್ಕೆ ಪ್ರವಾಸ ಮತ್ತು ಹೊರದೇಶಗಳಿಂದ ಭಾರತಕ್ಕೆ ಬರಲು ಇದ್ದ ನೀತಿಯನ್ನು ಸರಳಗೊಳಿಸಿದ್ದರಿಂದ ಪ್ರವಾಸೋದ್ಯಮಕ್ಕೆ ಉತ್ತೇಜನ ಲಭಿಸಿದೆ ಎಂದು ವಿವರಿಸಿದರು.

ಹಿಂದೆ ಹಲವು ತಿಂಗಳ ಬಳಿಕ ಪಾಸ್‍ಪೋರ್ಟ್ ಸಿಗುತ್ತಿತ್ತು. ಈಗ ಬೇಗನೇ ಪಾಸ್‍ಪೋರ್ಟ್ ಸಿಗುವಂತಾಗಿದೆ. ಜನರ ನಿಟ್ಟಿನಲ್ಲಿ ನಿಂತು ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವ ಪ್ರಧಾನಿ ಇರುವ ಕಾರಣ ಇದೆಲ್ಲ ಸಾಧ್ಯವಾಗಿದೆ ಎಂದು ಜೈ ಶಂಕರ್​ ಹೇಳಿದರು.

ಕೋವಿಡ್ ಸಂದರ್ಭದಲ್ಲಿ ಹೊರದೇಶಗಳಿಂದ 70 ಲಕ್ಷ ಜನರನ್ನು ಕರೆತರಲಾಯಿತು. ಮಾಸ್ಕ್, ವೆಂಟಿಲೇಟರ್ ಮತ್ತು ಆಮ್ಲಜನಕ ಕೊರತೆಯ ಸಮಸ್ಯೆಯ ಪರಿಹಾರಕ್ಕೆ ಶ್ರಮಿಸಲಾಯಿತು. ಉಕ್ರೇನ್ ಯುದ್ಧಕಾಲದಲ್ಲಿ ಅಲ್ಲಿದ್ದ ಭಾರತೀಯ ವಿದ್ಯಾರ್ಥಿಗಳನ್ನು ಭಾರತಕ್ಕೆ ಕರೆತರುವುದರಲ್ಲೂ ಜನರ ಬಗೆಗಿನ ಕಳಕಳಿ ಇರುವ ನೀತಿಯನ್ನು ನಾವು ಕಾಣಬಹುದು ಎಂದು ವಿದೇಶಾಂಗ ಸಚಿವರು ವಿಶ್ಲೇಷಿಸಿದರು.

ಭಾರತದ ಏಕತೆ, ಸಮಗ್ರತೆ, ರಕ್ಷಣಾ ಕ್ಷೇತ್ರ ಮತ್ತು ಅಭಿವೃದ್ಧಿ ವಿಚಾರದಲ್ಲಿ ಕಳೆದ 8 ವರ್ಷಗಳಲ್ಲಿ ದೊಡ್ಡ ಸಾಧನೆ ಸಾಧ್ಯವಾಗಿದೆ.

ಜನಕಲ್ಯಾಣ ಮತ್ತು ಜಗಕಲ್ಯಾಣದ ನಿಟ್ಟಿನಲ್ಲಿ ನಮ್ಮ ಪ್ರಧಾನಿ ಮೋದಿಯವರು ಶ್ರಮಿಸಿದ್ದಾರೆ. ದೇಶದ ಪ್ರತಿಷ್ಠೆ, ಹೊರಜಗತ್ತಿನಲ್ಲಿ ಭಾರತಕ್ಕಿರುವ ಸ್ಥಾನ, ನಮ್ಮ ರಾಷ್ಟ್ರಕ್ಕಿರುವ ಪ್ರಭಾವ, ದೇಶದ ಸಾಮರ್ಥ್ಯವು ಕಳೆದ 8 ವರ್ಷಗಳಲ್ಲಿ ಉನ್ನತ ಸ್ಥಾನಕ್ಕೆ ಏರಿದೆ ಎಂದು ವಿವರಿಸಿದರು. ರಾಜ್ಯದ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್.ಅಶ್ವತ್ಥನಾರಾಯಣ್, ಸಂಸದ ಪಿ.ಸಿ.ಮೋಹನ್ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Department of School Education ಮಾರ್ಚ್ 27 & 28 ರಂದು ಜಿಲ್ಲಾಮಟ್ಟದ ದೈಹಿಕ ಶಿಕ್ಷಣ ಶಿಕ್ಷಕರ‌ ಕ್ರೀಡಾಕೂಟ

Department of School Education ಶಾಲಾ ಶಿಕ್ಷಣ ಇಲಾಖೆಯು 2024-25ನೇ ಸಾಲಿನ...

BJP Protest 18 ಶಾಸಕರ ಅಮಾನತು. ಸರ್ಕಾರದಿಂದ ಅಧಿಕಾರ ದುರುಪಯೋಗ. ಜಿಲ್ಲಾ ಬಿಜೆಪಿ‌‌ ಪ್ರತಿಭಟನೆ

BJP Protest ಮುಸ್ಲಿಮರಿಗೆ ಅಸಂವಿಧಾನಿಕ 4% ಮೀಸಲಾತಿ, SCP-TSP ನಿಧಿಗಳ ದುರ್ಬಳಕೆ,...

ಶೀಘ್ರ ಬಾಡಿಗೆ ಕರಾರನ್ನ ನವೀಕರಣಗೊಳಿಸಿ- ಪಿ.ಮಂಜುನಾಥ್

ಶಿವಮೊಗ್ಗ ನಗರದ ಬಸ್ ನಿಲ್ದಾಣದ ಅವರಣದಲ್ಲಿರುವ ಅಂಗಡಿ ಮಳಿಗೆಗಳ ಬಾಡಿಗೆ ಕರಾರು...

World Tuberculosis Day ಕ್ಷಯರೋಗವು ಹರಡುವ ರೋಗ ಕುಟುಂಬಸ್ಥರು ಬಹಳ ಎಚ್ಚರದಿಂದಿರಬೇಕು- ಡಾ.ಕೆ. ಎಸ್.ನಟರಾಜ್

World Tuberculosis Day ಕ್ಷಯರೋಗ ಒಬ್ಬರಿಂದ ಒಬ್ಬರಿಗೆ ಹರಡುವ ರೋಗವಾಗಿದ್ದು ಭಾರತ...