ರಾಜ್ಯಸಭಾ ಚುನಾವಣೆ ಮುಗಿದಿದೆ. ಈಗ ಮುಂದಿನ ಕುತೂಹಲ ರಾಷ್ಟ್ರಪತಿ ಚುನಾವಣೆ. ದೇಶದ ಪ್ರಥಮ ಪ್ರಜೆಯ ಆಯ್ಕೆಗೆ ಜುಲೈ 18 ಅನ್ನು ನಿಗದಿ ಮಾಡಲಾಗಿದೆ.
ಜುಲೈ 21ಕ್ಕೆ ಮತ ಎಣೆಕೆ ನಡೆದು, ದೇಶದ ಹೊಸ ರಾಷ್ಟ್ರಪತಿ ಯಾರು ಎಂಬ ಮಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರ ಸಿಗಲಿದೆ.
ಹಾಗಾದರೆ, ರಾಷ್ಟ್ರಪತಿ ಯಾರಾಗ್ತಾರೆ? ಹಾಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ನಂತರ ದೇಶದ ಪ್ರಥಮ ಪ್ರಜೆಯ ಗೌರವ ಪಡೆಯಲಿರುವವರು ಯಾರು?
ಹೊಸ ರಾಷ್ಟ್ರಪತಿ ಯಾರು ಎನ್ನುವುದನ್ನು ನಿರ್ಧರಿಸಿರುವ
ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಯಾರ ಹೆಸರನ್ನು ಫೈನಲ್ ಮಾಡುತ್ತಾರೋ ಅವರೇ ರಾಷ್ಟ್ರಪತಿ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಯಾಗಲಿದ್ದಾರೆ.
ಆಡಳಿತದಲ್ಲಿರುವ ಕಾರಣ ಎನ್‌ಡಿಎ ಅಭ್ಯರ್ಥಿಯೇ ಚುನಾವಣೆ ಗೆದ್ದು ರಾಷ್ಟ್ರಪತಿಯಾಗುವುದು ಖಚಿತವಾಗಿದೆ. ಹಾಗಾದರೆ ಮೋದಿಯವರ ಆಯ್ಕೆ ಯಾರು? ರಾಷ್ಟ್ರಪತಿ ಚುನಾವಣೆ ಸುತ್ತ ಎದ್ದು ಕುಳಿತಿರುವ ಈ ಎಲ್ಲಾ ಕುತೂಹಲದ ಪ್ರಶ್ನೆಗಳಿಗೆ ಸಿಗಬೇಕಿದೆ.