Wednesday, March 4, 2026
Wednesday, March 4, 2026
Home Blog Page 1546

ನಿಷೇಧಿತ ಸೆಟಲೈಟ್ ಫೋನ್ ಸಿಗ್ನಲ್ ಬಳಕೆ ಪತ್ತೆ

0

ರಾಜ್ಯದ ಕರಾವಳಿ ಮತ್ತು ಚಿಕ್ಕಮಗಳೂರು ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ನಿಷೇಧಿತ ಸ್ಯಾಟಲೈಟ್ ಸಿಗ್ನಲ್ ಗಳು ಅಕ್ರಮವಾಗಿ ಕಾರ್ಯಾಚರಣೆ ಪತ್ತೆಯ ಹಿನ್ನೆಲೆಯಲ್ಲಿ, ಕರ್ನಾಟಕ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ನಿಷೇಧಿತ ಸ್ಯಾಟಲೈಟ್ ಫೋನ್ ಸಿಗ್ನಲ್ ಕಾರ್ಯಾಚರಣೆ ಕುರಿತು ರಾಜ್ಯದ ಪೊಲೀಸರು ಕೇಂದ್ರದ ಐ ಬಿ ಸಂಸ್ಥೆ ಸಿಬ್ಬಂದಿಗಳ ಜತೆಗೆ ಮಾಹಿತಿ ಹಂಚಿಕೊಳ್ಳಲಾಗಿದ್ದು ಜಂಟಿಯಾಗಿ ತನಿಖೆ ನಡೆಸಲಾಗುತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಹೇಳಿದ್ದಾರೆ.

ಮಂಗಳೂರು ಕಿನಾರೆ ಮತ್ತು ಉತ್ತರ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಯ ಕೆಲವು ನಿರ್ದಿಷ್ಟ ಪ್ರದೇಶಗಳಲ್ಲಿ ಸ್ಯಾಟಲೈಟ್ ಫೋನ್ ಬಳಕೆ ಬಗ್ಗೆ ಕೇಂದ್ರ ಗುಪ್ತಚರ ಇಲಾಖೆ ಪತ್ತೆ ಮಾಡಿದೆ. ರಾಜ್ಯ ಆಂತರಿಕ ಭದ್ರತಾ ವಿಭಾಗದ ಸಿಬ್ಬಂದಿಗಳು ತನಿಖೆಯಲ್ಲಿ ಕೈ ಜೋಡಿಸಿದ್ದಾರೆ.

ನಿಷೇಧಿತ ಸ್ಯಾಟಲೈಟ್ ಫೋನ್ ಕಾರ್ಯಾಚರಣೆಯ ಹಿಂದಿನ ದುಷ್ಟರು ಯಾರಿದ್ದಾರೆ ಹಾಗೂ ಯಾರ ಜೊತೆ ಕಾರ್ಯಾಚರಣೆ ನಡೆಯುತ್ತಿದೆ ಎಂಬುದರ ಬಗ್ಗೆ ತೀವ್ರ ತನಿಖೆ ನಡೆಯುತ್ತಿದೆ ಎಂದು ಸಚಿವರು ಹೇಳಿದ್ದಾರೆ.

ಸರ್ಕಾರಿ ನೌಕರನ 2 ನೇ ಪತ್ನಿಗೆ ಪಿಂಚಣಿ ಹಕ್ಕಿಲ್ಲ

0

ಗುವಾಹಟಿ ಹೈಕೋರ್ಟ್ ಸರ್ಕಾರಿ ಪಿಂಚಣಿಗೆ ಸಂಬಂಧಿಸಿದಂತೆ ಮಹತ್ವದ ತೀರ್ಪು ನೀಡಿದೆ. ಹಿಂದೂ ವಿವಾಹ ಕಾಯ್ದೆಯಲ್ಲಿ 2 ಬಾರಿ ಮದುವೆಯಾಗಲು ಯಾವುದೇ ಅವಕಾಶವಿಲ್ಲದ ಕಾರಣ ಸರ್ಕಾರಿ ನೌಕರನ 2ನೇ ಪತ್ನಿಗೆ ಕುಟುಂಬ ಪಿಂಚಣಿಗೆ ಹಕ್ಕಿಲ್ಲ ಎಂದು ಹೈಕೋರ್ಟ್ ತಿಳಿಸಿದೆ.

ಅದೇ ಸಮಯದಲ್ಲಿ, ಉಚ್ಚ ನ್ಯಾಯಾಲಯವು ಕುಟುಂಬದ ಪಿಂಚಣಿಯ ಪ್ರಯೋಜನವನ್ನು ವಿಸ್ತರಿಸಲು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.

ಗುವಾಹಟಿ ಹೈಕೋರ್ಟ್ನ ನ್ಯಾಯಮೂರ್ತಿ ಸಂಜಯ್ ಕುಮಾರ್ ಮೇಧಿ ಅವರ ಪೀಠವು ಇತ್ತೀಚೆಗೆ ನೀಡಿದ ತೀರ್ಪಿನಲ್ಲಿ ಪ್ರತಿಮಾ ದೇಕಾ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ. ದಿ ಪಿಟಿಷನ್ನಲ್ಲಿ, ಅವರು ಬಿರೇನ್ ದೇಕಾ ಅವರ ಪತ್ನಿ ಎಂದು ಹೇಳಿಕೊಂಡು ಕುಟುಂಬ ಪಿಂಚಣಿಯನ್ನು ಕೋರಿದ್ದರು. ಬಿರೇನ್ ದೇಕಾ ನೀರಾವರಿ ಇಲಾಖೆಯ ಉದ್ಯೋಗಿಯಾಗಿದ್ದು, 2016 ರಲ್ಲಿ ನಿಧನರಾಗಿದ್ದರು. ಪತಿಯ ಮರಣದ ನಂತರ ಕುಟುಂಬ ಪಿಂಚಣಿಯನ್ನು ಪಡೆಯದ ಬಗ್ಗೆ ಸಂತ್ರಸ್ತ ಅರ್ಜಿದಾರರು 2019 ರಲ್ಲಿ ಗುವಾಹಟಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಅವರ ಹೇಳಿಕೆಯನ್ನು ಬಿರೇನ್ ಅವರ ಮೊದಲ ಪತ್ನಿ ಗೋಲಾಪಿ ದೇಕಾ ವಿರೋಧಿಸಿದರು.

ಇದೇ ವೇಳೆ ಅರ್ಜಿಯ ವಿಚಾರಣೆ ನಡೆಸಿದ ಗುವಾಹಟಿ ಹೈಕೋರ್ಟ್ ಅರ್ಜಿದಾರರು ಧರ್ಮದಿಂದ ಹಿಂದೂಗಳಾಗಿದ್ದಾರೆ. ಹಿಂದೂ ವಿವಾಹ ಕಾಯ್ದೆಯ ಪ್ರಕಾರ, ಎರಡು ವಿವಾಹಗಳನ್ನು ಮಾಡುವ ಸಂಪ್ರದಾಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ.

ಅದೇ ವೇಳೆಯಲ್ಲಿ, ಇದು ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ಅಪರಾಧವಾಗಿದೆ ಮತ್ತು ವಿಚ್ಛೇದನಕ್ಕೆ ಒಂದು ಆಧಾರವಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಉಚ್ಚ ನ್ಯಾಯಾಲಯಕ್ಕೆ ಅರ್ಜಿಯನ್ನು ವಜಾಗೊಳಿಸದೆ ಬೇರೆ ಆಯ್ಕೆ ಇರಲಿಲ್ಲ. ಮೊದಲ ಹೆಂಡತಿಯ ವಶದಲ್ಲಿ ವಾಸಿಸುವಾಗ ಎರಡನೇ ಪತ್ನಿಗೆ ಕುಟುಂಬ ಪಿಂಚಣಿಗೆ ಹಕ್ಕಿಲ್ಲ ಎಂದು ಹೈಕೋರ್ಟ್ ಹೇಳಿದೆ. ಅರ್ಜಿಯನ್ನು ತಿರಸ್ಕರಿಸಿಧರ್ಮದಿಂದ ಹಿಂದೂಗಳಾಗಿದ್ದು, ಹಿಂದೂ ವಿವಾಹ ಕಾಯ್ದೆಯ ಪ್ರಕಾರ, ಎರಡು ವಿವಾಹಗಳನ್ನು ಮಾಡುವ ಸಂಪ್ರದಾಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ. ಅದೇ ಸಮಯದಲ್ಲಿ, ಇದು ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ಅಪರಾಧವಾಗಿದೆ ಮತ್ತು ವಿಚ್ಛೇದನಕ್ಕೆ ಒಂದು ಆಧಾರವಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಉಚ್ಚ ನ್ಯಾಯಾಲಯಕ್ಕೆ ಅರ್ಜಿಯನ್ನು ವಜಾಗೊಳಿಸದೆ ಬೇರೆ ಆಯ್ಕೆ ಇರಲಿಲ್ಲ. ಮೊದಲ ಹೆಂಡತಿಯ ವಶದಲ್ಲಿ ವಾಸಿಸುವಾಗ ಎರಡನೇ ಪತ್ನಿಗೆ ಕುಟುಂಬ ಪಿಂಚಣಿಗೆ ಹಕ್ಕಿಲ್ಲ ಎಂದು ಹೈಕೋರ್ಟ್ ಹೇಳಿದೆ. ಅರ್ಜಿಯನ್ನು ತಿರಸ್ಕರಿಸಿದೆ.

ಕೋವಿಡ್ ಆತಂಕ: ಮಹಾರಾಷ್ಟ್ರದಲ್ಲಿ ಲಾಕ್ ಡೌನ್ ಸಾಧ್ಯತೆ

0

ಕೋವಿಡ್‌ ನಾಲ್ಕನೇ ಅಲೆಯ ಆತಂಕ ಎದುರಾಗಿದೆ. ಕಳೆದ 24 ಗಂಟೆಗಳಲ್ಲಿ ಮಹಾರಾಷ್ಟ್ರದಾದ್ಯಂತ ಅತಿ ಹೆಚ್ಚು 889 ಮಂದಿ ಕೋವಿಡ್‌ ಸೋಂಕಿಗೆ ತುತ್ತಾಗಿದ್ದಾರೆ ಎಂದು ಬೃಹನ್‌ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ತಿಳಿಸಿದೆ.

ಕೋವಿಡ್‌ ಪ್ರಕರಣಗಳ ಹಠಾತ್ ಏರಿಕೆಯಿಂದಾಗಿ, ರಾಜ್ಯದಲ್ಲಿ ಇದುವರೆಗೆ ಮಾಸ್ಕ್‌ಗಳನ್ನು ಕಡ್ಡಾಯಗೊಳಿಸಲಾಗಿಲ್ಲ, ಆದರೆ ಅವುಗಳನ್ನು ಬಳಸುವುದು ಸೂಕ್ತ ಎಂದು ರಾಜ್ಯ ಆರೋಗ್ಯ ಸಚಿವ ರಾಜೇಶ್ ಟೋಪೆ ಸೂಚನೆ ನೀಡಿದ್ದರು. ಆರೋಗ್ಯ ಸಚಿವಾಲಯದ ಪತ್ರದಲ್ಲಿ ಮಾಸ್ಕ್ ಬಳಕೆ ಕಡ್ಡಾಯ ಎಂದು ಹೇಳಿದ್ದರೂ. ಕೂಡ ಮಾಸ್ಕ್ ಧರಿಸಲು ಜನರಿಗೆ ಮನವಿಯಾಗಿದೆ. ಅವುಗಳನ್ನು ಧರಿಸದವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ಟೋಪೆ ತಿಳಿಸಿದ್ದರು.

ದಿನೇ ದಿನೇ ಕೋವಿಡ್‌ ಸೋಂಕಿತ ಪ್ರಕರಣಗಳ ಸಂಖ್ಯೆ ಏರಿಕೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಜಾರಿ ಮಾಡುವ ಸಾಧ್ಯತೆಯಿದೆ.

ನವಿ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ 104 ಹೊಸ ಪ್ರಕರಣಗಳನ್ನು ವರದಿ ಮಾಡಿದೆ ಮತ್ತು ಥಾಣೆ ಮತ್ತು ಪುಣೆ ನಗರಗಳು ಕ್ರಮವಾಗಿ 91 ಮತ್ತು 68 ಪ್ರಕರಣಗಳನ್ನು ಸೇರಿಸಿವೆ. ನಗರದಲ್ಲಿ ಫೆಬ್ರವರಿ 4 ರಂದು 846 ಪ್ರಕರಣಗಳು ದಾಖಲಾಗಿದ್ದವು, ನಂತರ ಪ್ರಕರಣಗಳು ಇಳಿಮುಖವಾಗಿವೆ.

ಮುಂಬೈನಲ್ಲಿ ಮೇ 28 ಮತ್ತು ಜೂನ್ 3 ರ ನಡುವೆ ಕೋವಿಡ್‌ ಪಾಸಿಟಿವಿಟಿ (Covid-19 cases ) ದರ 0.049% ರಷ್ಟು ಏರಿಕೆ ಕಂಡಿದೆ.

ನೂಪುರ್ ಶರ್ಮ ಅವು ಅಪಮಾನಕರ ಹೇಳಿಕೆಯನ್ನ ಬೇಷರತ್ ಹಿಂಪಡೆದಿದ್ದಾರೆ

0

ಪ್ರವಾದಿ ಮೊಹಮ್ಮದರ ವಿರುದ್ಧ ಟೀವಿ ಚರ್ಚೆಯಲ್ಲಿ ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿದ್ದ ಅಮಾನತಾಗಿರುವ ಬಿಜೆಪಿ ವಕ್ತಾರೆ ನೂಪುರ್‌ ಶರ್ಮಾ, ತಮ್ಮ ಹೇಳಿಕೆಯನ್ನು ಬೇಷರತ್ತಾಗಿ ಹಿಂಪಡೆಯುವುದಾಗಿ ಹೇಳಿದ್ದಾರೆ.

ಗ್ಯಾನವಾಪಿಯಲ್ಲಿ ಪತ್ತೆ ಆಗಿದ್ದ ಶಿವಲಿಂಗ ಉದ್ದೇಶಿಸಿ, ‘ಅದು ಶಿವಲಿಂಗವಲ್ಲ, ಬದಲಾಗಿ ನೀರಿನ ಕಾರಂಜಿ’ ಎಂದೆಲ್ಲಾ ಹೇಳಲಾಗಿತ್ತು. ಜೊತೆಗೆ ಶಿವಲಿಂಗವನ್ನು ದೆಹಲಿ ರಸ್ತೆಯ ಬದಿಯಲ್ಲಿ ಹಾಕಿರುವ ಕಂಬಗಳಿಗೂ ಹೋಲಿಸಲಾಗಿತ್ತು. ಇಂಥ ಅವಮಾನ ಸಲ್ಲಿಸಲಾಗದೇ, ಅದಕ್ಕೆ ಪ್ರತಿಯಾಗಿ ನಾನು ‘ಕೆಲವೊಂದು ಮಾತು’ಗಳನ್ನು ಆಡಿದ್ದೆ. ನನ್ನ ಮಾತುಗಳು ಯಾರ ಧಾರ್ಮಿಕ ನಂಬಿಕೆಗಳಿಗಾದರೂ ನೋವು ತಂದಿದ್ದರೆ, ನಾನು ನನ್ನ ಹೇಳಿಕೆಯನ್ನು ಬೇಷರತ್‌ ಹಿಂಪಡೆಯುತ್ತೇನೆ’ ಎಂದಿದ್ದಾರೆ.

ಪ್ರವಾದಿ ಮೊಹಮ್ಮದರನ್ನು ಉದ್ದೇಶಿಸಿ ಟೀವಿ ಚರ್ಚೆಯಲ್ಲಿ ನೂಪುರ್‌ ಹೇಳಿಕೆ ನೀಡುತ್ತಿದ್ದಂತೆಯೇ ಅವರ ವಿರುದ್ಧ ಪುಣೆ, ಹೈದರಾಬಾದ್‌, ಮುಂಬೈ ಹಾಗೂ ದೇಶದ ಇನ್ನೂ ಕೆಲವು ಕಡೆ ಪ್ರಕರಣ ದಾಖಲಾಗಿದ್ದವು. ಇದರ ನಡುವೆ, ‘ನನಗೆ ಜೀವ ಬೆದರಿಕೆ ಬರುತ್ತಿದೆ’ ಎಂದೂ ನೂಪುರ್‌ ದಿಲ್ಲಿ

ಗ್ರಂಥಾಲಯ ಮೇಲ್ವಿಚಾರಕರಿಗೆ ಸರ್ಕಾರದ ಗುಡ್ ನ್ಯೂಸ್

0

ರಾಜ್ಯ ಸರ್ಕಾರವು ಗ್ರಾಮಪಂಚಾಯಿತಿಗಳ ಗ್ರಂಥಾಲಯ ಮೇಲ್ವಿಚಾರಕರಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ.

ಗೌರವಧನವನ್ನು 7 ಸಾವಿರ ರೂ.ನಿಂದ 12 ಸಾವಿರ ರೂ. ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಇದರೊಂದಿಗೆ ಗ್ರಾಮ ಪಂಚಾಯಿತಿ ಗ್ರಂಥಾಲಯ ಹೆಸರನ್ನು ಗ್ರಾಮ ಪಂಚಾಯಿತಿ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರ ಹೆಸರು ಮರು ಪದ ನಮೀಕರಿಸಲಾಗಿದೆ.

ಗ್ರಾಮ ಪಂಚಾಯಿತಿ ಗ್ರಂಥಾಲಯಗಳ ಮೇಲ್ವಿಚಾರಕರ ಕೆಲಸದ ಅವಧಿಯನ್ನು 6 ಗಂಟೆಯವರೆಗೆ ನಿಗಧಿಪಡಿಸಿದೆ.
ಈ ಹಿನ್ನೆಲೆಯಲ್ಲಿ ಹೆಚ್ಚಿದ ಗಂಟೆಗಳು ಮತ್ತು ವಿಭಜಿತ ಸಮಯವನ್ನು ಗಮನದಲ್ಲಿಟ್ಟುಕೊಂಡು ಗ್ರಾಮ ಪಂಚಾಯಿತಿ ಗ್ರಂಥಾಲಯ ಮೇಲ್ವಿಚಾರಕರ ಗೌರವಧನವನ್ನು 7 ಸಾವಿರ ರೂ.ಗಳಿಂದ 12 ಸಾವಿರ ರೂ.ಗಳಿಗೆ ಹೆಚ್ಚಿಸಲು ಹಾಗೂ ಗ್ರಂಥಾಲಯ ಮೇಲ್ವಿಚಾರಕರಿಗೆ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆ ಕಲ್ಪಿಸಿ ಬಯೋಮೆಟ್ರಿಕ್ ಹಾಜರಾತಿ ಆಧಾರದ ಮೇಲೆ ಗೌರವಧನ ಪಾವತಿಸಲು ಮತ್ತು ಹೆಚ್ಚುವರಿ ಗೌರವಧನ ಪಾವತಿಸುವ ಬಗ್ಗೆ ಪ್ರತ್ಯೇಕ ಆದೇಶ ಹೊರಡಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಹೊಸಪೇಟೆಯಲ್ಲಿ ಪುನೀತ್ ಪುತ್ಥಳಿ ಸ್ಥಾಪನೆ

0

ಮನುಷ್ಯ ಇದ್ದಾಗ ಎಷ್ಟು ಜನರ ಪ್ರೀತಿ ಗಳಿಸಿರುತ್ತಾರೋ ಆ ವ್ಯಕ್ತಿ ಮೃತಪಟ್ಟ ಮೇಲೆ ಆ ಪ್ರೀತಿ ದುಪ್ಪಟ್ಟು ಮಾಡಿಕೊಂಡಿರುವ ರಾಜ್ಯದ ಏಕೈಕ ವ್ಯಕ್ತಿ ಡಾ.
ಪುನೀತ್ ರಾಜ್‌ಕುಮಾರ್ ಎಂದರೆ ತಪ್ಪಾಗಲಾರದು.

ಯಾಕಂದ್ರೆ ಮನುಷ್ಯ ಮೃತಪಟ್ಟ ಮೇಲೆ ದೇವರಾಗ್ತಾರೆ ಅನ್ನೋ ಮಾತಿನಂತೆ ಪುನೀತ್ ಇದೀಗ ಅಭಿಮಾನಿಗಳ ಪಾಲಿನ ದೇವರಾಗಿದ್ದಾರೆ. ಅದಕ್ಕೆ ಸಾಕ್ಷಿ ಹೊಸಪೇಟೆಯ ಈ ಜನರು.

ಪುನೀತ್ ಮೇಲಿನ ಪ್ರೀತಿಗೆ ಹೊಸಪೇಟೆಯ ಅವರ ಅಭಿಮಾನಿಗಳು ಎಳುವರೆ ಅಡಿ ಎತ್ತರದ ಪುತ್ತಳಿಯನ್ನು ಅನಾವರಗೊಳಿಸಿದ್ದಾರೆ.

ಸಾವಿರಾರು ಅಭಿಮಾನಿಗಳ ಹರ್ಷೋದ್ಘಾರದ ಮಧ್ಯೆ ಹೊಸಪೇಟೆಯಲ್ಲಿ ನಟ ದಿವಂಗತ ಪುನೀತ್ ರಾಜ್‌ಕುಮಾರ್‌ ಅವರ 7.4 ಅಡಿ ಎತ್ತರದ ಪುತ್ಥಳಿಯನ್ನು ಅನಾವರಣಗೊಳಿಸಲಾಯಿತು.

ಪುನೀತ್ ರಾಜಕುಮಾರ ನಮ್ಮನ್ನು ಬಿಟ್ಟು ಹೆಚ್ಚು ಕಡಿಮೆ ಏಳು ತಿಂಗಳುಗಳೇ ಕಳೆದಿವೆ. ಆದರೆ, ಅವರ ಮೇಲಿನ ಪ್ರೀತಿ ಮಾತ್ರ ಇನ್ನೂ ಕಡಿಮೆಯಾಗಿಲ್ಲ. ಹೊಸಪೇಟೆಯಲ್ಲಿ ರಾಜ್ ಕುಟುಂಬಕ್ಕೆ ಅದರಲ್ಲೂ ಪುನೀತ್ ಬಗ್ಗೆ ಅತಿ ಹೆಚ್ಚು ಅಭಿಮಾನಗಳಿದ್ದಾರೆ ಎಂದು ದೊಡ್ಡ ಮನೆಯವರು ಹೇಳುತ್ತಿದ್ದರು. ಅದರಲ್ಲೂ ಯಾರೇ ಕೈಬಿಟ್ಟರು ಹೊಸಪೇಟೆ ಜನರು ನಮ್ಮ ಕೈಬಿಡಲ್ಲ ಎಂದು ಪುನೀತ್ ಹೊಸಪೇಟೆಯಲ್ಲಿ ಘಂಟಾಘೋಷವಾಗಿ ಹೇಳಿದ್ದರು.

ಕಾರ್ಡೇಲಿಯಾ ಈಗ ವೈಜಾಗ್ ಟು ಚೆನ್ನೈ ಜಲಯಾನಕ್ಕೆ ಸಜ್ಜು

0

ದೇಶದ ಅತಿ ಐಷಾರಾಮಿ ಹಡಗಾದ ಕಾರ್ಡೇಲಿಯಾ ಕ್ರೂಸ್​ ಲೈನರ್​ ವಿಶಾಖಪಟ್ಟಣಂದಿಂದ ಜೂನ್​ 8ರಿಂದ ಮೂರು ದಿನಗಳ ಪ್ರಯಾಣಕ್ಕೆ ಸಜ್ಜಾಗಿದೆ.

ವಿಶಾಖಪಟ್ಟಣದಿಂದ ಚೆನ್ನೈ, ಪುದುಚೇರಿಗೆ ಇದೇ ತಿಂಗಳ 8, 15 ಮತ್ತು 22ರಂದು ಪ್ರಯಾಣ ನಡೆಸಲಿದೆ.
ಜೂನ್‌ 8ರಂದು ಪ್ರಯಾಣ ಆರಂಭಿಸುವ ಕ್ರೂಸ್​ ಚೆನ್ನೈ ತಲುಪಿ ಬಳಿಕ ಪುದುಚೇರಿ ಸೇರಲಿದೆ. ಅಲ್ಲಿಂದ ವಾಪಸ್​ ವಿಶಾಖಪಟ್ಟಣಕ್ಕೆ ಬರಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಶಾಖಪಟ್ಟಣಂನಿಂದ ಪುದುಚೇರಿಗೆ ಪ್ರಯಾಣಿಸಲು ಸಾಮಾನ್ಯವಾಗಿ ರೈಲು ಅಥವಾ ರಸ್ತೆ ಮಾರ್ಗವಾಗಿ ಹೊರಟರೆ 15 ಗಂಟೆಗಳು ಬೇಕಾಗುತ್ತದೆ. ಆದರೆ, ಈ ಹಡಗು 36 ಗಂಟೆಗಳನ್ನು ತೆಗೆದುಕೊಳ್ಳುತ್ತದೆ.

ಅಲ್ಲಿಂದ ಚೆನ್ನೈಗೆ ಪ್ರಯಾಣಿಸಿ ಮತ್ತೆ ವಿಶಾಖಪಟ್ಟಣಕ್ಕೆ ಬರಲು ಇನ್ನೆರಡು ದಿನ ಹೆಚ್ಚುವರಿಯಾಗಿ ಬೇಕು. ಪ್ರಯಾಣ ತಡವಾದರೂ ಪ್ರವಾಸಿಗರು ಈ ಹಡಗಿನಲ್ಲಿ ಪ್ರಯಾಣಿಸಲು ಕಾತರರಾಗಿದ್ದಾರೆ.

ಈ ಐಶಾರಾಮಿ ಹಡಗಿನಲ್ಲಿ ಮೂಲಸೌಲಭ್ಯಗಳಲ್ಲದೇ, ಫುಡ್ ಕೋರ್ಟ್, ಸ್ಟಾರ್‌ಲೈಟ್ ರೆಸ್ಟೋರೆಂಟ್, ಈಜುಕೊಳ, ಫಿಟ್‌ನೆಸ್ ಸೆಂಟರ್, ಲಾಂಜ್‌ಗಳು, ಡಿಜೆ ಮನರಂಜನೆ, ಕ್ಯಾಸಿನೋ, ಲೈವ್ ಶೋಗಳು, ಕಾರ್ಡೆಲಿಯಾ ಅಕಾಡೆಮಿ ಫಾರ್ ಕಿಡ್ಸ್, ಜೈನ್ ಫುಡ್ ಮತ್ತು ರಾಕ್ ಕ್ಲಿಂಬಿಂಗ್, ಹಾಸ್ಯ ಪ್ರದರ್ಶನಗಳಿಗಾಗಿ ಆಡಿಟೋರಿಯಂಗಳು, ಚಲನಚಿತ್ರಗಳ ಥಿಯೇಟರ್‌ಗಳು ಮತ್ತು 24 ಗಂಟೆಗಳ ಸೂಪರ್‌ಮಾರ್ಕೆಟ್ ಅನ್ನೂ ಕೂಡ ಇದು ಹೊಂದಿದೆ.

ಪ್ರವಾದಿ ನಿಂದನೆ ಸೌದಿ ಸ್ಟೋರ್ಸ್ ಗಳಲ್ಲಿ ಭಾರತೀಯ ಉತ್ಪನ್ನಗಳ ಎತ್ತಂಗಡಿ

0

ಪ್ರವಾದಿ ಮೊಹಮ್ಮದ್ ನಿಂದನೆ ಮಾಡಲಾಗಿದೆ ಎನ್ನುವ ಆರೋಪದ ಮೇಲೆ ಕಾನ್ಪುರದಲ್ಲಿ ಭಾರಿ ಹಿಂಸಾಚಾರವೇ ನಡೆದು ಹೋಗಿದೆ. ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಪ್ರವಾದಿಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಗಲಭೆ ನಡೆದಿದೆ.

ನೂಪುರ್ ಶರ್ಮಾ ಖಾಸಗಿ ವಾಹಿನಿ ಕಾರ್ಯಕ್ರಮದಲ್ಲಿ ಪ್ರವಾದಿ ಮೊಹಮ್ಮದ್‌ಗೆ ಅವಮಾನ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಇದರ ಪರಿಣಾಮ ಕಾನ್ಪುರದಲ್ಲಿ ಭಾರಿ ಗಲಭೆ ಸೃಷ್ಟಿಯಾಗಿತ್ತು. ಇದರ ಬಿಸಿ ಅರಬ್ ರಾಷ್ಟ್ರಕ್ಕೂ ತಟ್ಟಿದೆ.

ಸೌದಿ ಅರೇಬಿಯಾ, ಬಹ್ರೇನ್ ಹಾಗು ಕುವೈಟ್ ಸೂಪರ್‌ಸ್ಟೋರ್ಸ್‌ಗಳಿಂದ ಭಾರತ ಉತ್ಪನ್ನವನ್ನು ತೆಗೆದು ಹಾಕಲಾಗಿದೆ ಎಂದು ತಿಳಿದುಬಂದಿದೆ.

ಪ್ರವಾದಿ ನಿಂದನೆ ಕಾರಣದಿಂದ ಸೌದಿ ಸ್ಟೋರ್‌ಗಳಲ್ಲಿ ಭಾರತ ಉತ್ಪನ್ನವನ್ನು ತೆಗೆದು ಹಾಕಲಾಗಿದೆ. ಇದರ ಬೆನ್ನಲ್ಲೇ ಭಾರತ ರಾಯಭಾರಿ ಅಧಿಕಾರಿಗಳು ಸಭೆ ನಡೆಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

ಹೀಗಾಗಿ ಸೌದಿಯಲ್ಲಿನ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳು ಸೌದಿ ವಿದೇಶಾಂಗ ಸಚಿವಾಲಯ ಕಚೇರಿಯಲ್ಲಿ ಸಭೆ ಸೇರಿ ಭಾರತದ ನಿಲುವು ಸ್ಪಷ್ಟಪಡಿಸಿದ್ದಾರೆ.

ಪಠ್ಯಪುಸ್ತಕ ಪರಿಷ್ಕರಣೆ ಯತ್ನ ಸರಿಯಲ್ಲ- ಹೊರಟ್ಟಿ

0

ಈ ಹಿಂದಿನ ಪಠ್ಯಪುಸ್ತಕಗಳೇ ಸತ್ಯದಿಂದ ಕೂಡಿತ್ತು. ಈಗ ಶಾಲಾ ಪಠ್ಯಪುಸ್ತಕ ಪರಿಷ್ಕರಣೆ ಮಾಡಿದ್ದು ಸರಿಯಲ್ಲ ಎಂಬುದಾಗಿ ಬಿಜೆಪಿ ಪಕ್ಷದ ವಿರುದ್ಧವೇ, ಬಿಜೆಪಿ ಸೇರ್ಪಡೆಗೊಂಡಿರುವ ಮಾಜಿ ಸಭಾಪತಿ ಬಸವರಾಜ ಹೊರಟ್ಟಿಯವರು ಗುಡುಗಿದ್ದಾರೆ.

ಹುಬ್ಬಳ್ಳಿ ನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.ರಾಜ್ಯ ಸರ್ಕಾರ ಈ ವಿವಾದಕ್ಕೆ ಆದಷ್ಟು ಬೇಗ ಅಂತ್ಯವಾಡಬೇಕು. ಶಾಲಾ ಪಠ್ಯಪರಿಷ್ಕರಣೆ ಮಾಡಿದ್ದು ಸರಿಯಿಲ್ಲ. ಈ ಹಿಂದಿನ ಪಠ್ಯದಲ್ಲಿಯೇ ಸತ್ಯಾಂಶವಿತ್ತು. ಪರಿಷ್ಕರಣೆಯಿಂದ ವಿವಾದಕ್ಕೆ ಕಾರಣವಾಗಿದೆ ಎಂದರು.

ಮಲ್ಲಿಕಾರ್ಜುನ ಖರ್ಗೆ ಅವರು ಸಿಎಂ ಆಗುವುದಾದರೆ ಜೆಡಿಎಸ್ ಬೆಂಬಲ

0

ಮುಂದಿನ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆಗೆ ನಾಯಕತ್ವ ಕೊಟ್ಟರೆ ಕಾಂಗ್ರೆಸ್‌ ಜತೆಗೆ ಕೈ ಜೋಡಿಸುವ ಬಗ್ಗೆ ಯೋಚಿಸಲಾಗುವುದು ಎಂದು ಎಚ್‌. ಡಿ. ಕುಮಾರಸ್ವಾಮಿ ಹೇಳಿದರು.

ಸುದ್ದಿಗಾರರ ಜತೆ ಮಾತನಾಡಿದ ಅವರು, ಪ್ರವಾಹದಲ್ಲಿ ಮನೆ ಬಿದ್ದವರಿಗೆ ಇನ್ನೂ ಮನೆ ನಿರ್ಮಿಸಿ ಕೊಟ್ಟಿಲ್ಲ. ಕೊಡಗು, ಚಿಕ್ಕಮಗಳೂರಿನಲ್ಲಿ ಮನೆ ಕಟ್ಟಲಿಲ್ಲ. ಪ್ರಚಾರ ಮಾತ್ರ ದೊಡ್ಡ ದೊಡ್ಡ ಜಾಹೀರಾತುಗಳ ಮೂಲಕ ಮಾಡಿಕೊಂಡಿದ್ದಾರೆ.
ಖರ್ಗೆ ಹಿರಿಯ ನಾಯಕರು.
ಆ ಪಕ್ಷಕ್ಕೆ ನಿಷ್ಠೆ ಯಿಂದ ಕೆಲಸ ಮಾಡಿದ್ದಾರೆ. ಹಲವು ಬಾರಿ ಅವರಿಗೆ ಅನ್ಯಾಯ ಆಗಿದ್ದರೂ ನಿಷ್ಠೆಯಿಂದ ನಡೆದುಕೊಂಡಿದ್ದಾರೆ ಎಂದರು.

ನರೇಂದ್ರ ಮೋದಿ ಗಿಂತಲೂ ದೊಡ್ಡ ಮಟ್ಟದ ಘೋಷಣೆ ಮಾಡಿಕೊಂಡರು. ನವ ಕರ್ನಾಟಕ ಕಟ್ಟುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದಾರೆ

ರಾಜ್ಯದ ಖಜಾನೆಯನ್ನು ಹಿಟಾಚಿ ಮೂಲಕ ಬಗೆಯುವುದೇ ನವ ಕರ್ನಾಟಕ ನಿರ್ಮಾಣವೇ ಎಂದು ಪ್ರಶ್ನಿಸಿದರು.