Friday, March 20, 2026
Friday, March 20, 2026
Home Blog Page 1473

ಸಾಗರ ಶಾಸಕ ಹರತಾಳು ಹಾಲಪ್ಪ ಅವರಿಂದ ಮಳೆಹಾನಿ ಪ್ರದೇಶಕ್ಕೆ ಭೇಟಿ

0

ಸಾಗರ ಶಾಸಕರಾದ ಹೆಚ್.ಹಾಲಪ್ಪ ನವರು,
ಅತಿವೃಷ್ಟಿಯಿಂದಾಗಿ ಯಡೇಹಳ್ಳಿ ಗ್ರಾ.ಪಂ, ಇರುವಕ್ಕಿ ರಾಮಪ್ಪನವರ ಮನೆ ಕುಸಿದು ಬಿದ್ದಿರುವ ಬಗ್ಗೆ ಮಾಹಿತಿ ಪಡೆದರು. ಹಾನಿಗೊಳಗಿರುವುದನ್ನು ಪರಿಶೀಲಸಿ, ಪರಿಹಾರ ಕಲ್ಪಿಸಿ ಕೊಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಚುನಾಯಿತ ಪ್ರತಿನಿಧಿಗಳು, ಪಕ್ಷದ ಮುಖಂಡರು ಉಪಸ್ಥಿತರಿದ್ದರು.

ಭದ್ರಾವತಿ ಎಂಪಿಎಂ ಶಿಕ್ಷಣ ಸಂಸ್ಥೆಯನ್ನು ಸರ್ಕಾರದ ಅಧೀನ ಪಡೆಯಲು ಮನವಿ

0

ಎಂ ಪಿ ಎಂ ಶಿಕ್ಷಣ ಸಂಸ್ಥೆಗಳನ್ನು ಸರ್ಕಾರದ ಅದೀನಕ್ಕೆ ಒಳಪಡಿಸುವಂತೆ ಕಾಲೇಜು ಮತ್ತು ಶಾಲೆಯ ಸಿಬ್ಬಂದಿ ವರ್ಗದವರಿಂದ ಶಿವಮೊಗ್ಗ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಮೈಸೂರು ಕಾಗದ ಕಾರ್ಖಾನೆಯು ಕಾರ್ಮಿಕರ ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ 1986ರಲ್ಲಿ ಮೈಸೂರು ಪೇಪರ್ ಮಿಲ್ಸ್ ಎಜುಕೇಶನ್ ಸೊಸೈಟಿಯನ್ನು ಸ್ಥಾಪಿಸಿತ್ತು. ಈ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು ಕಾರ್ಖಾನೆಯ ಅಧಿಕಾರಿಗಳೇ ಆಗಿದ್ದರು. ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳ ಶುಲ್ಕದಿಂದ ಸಂಗ್ರಹವಾಗುವ ಹಣದಿಂದ ಶಾಲಾ ಕಾಲೇಜು ಸಿಬ್ಬಂದಿಗೆ ವೇತನ ನೀಡಲಾಗುತ್ತಿತ್ತು.

ಈಗಿನ ಸಂದರ್ಭದಲ್ಲಿ ಸರ್ಕಾರವು ಕಾರ್ಖಾನೆಯ ಉತ್ಪಾದನೆಯನ್ನು ನಿಲ್ಲಿಸಿ ಕಾರ್ಖಾನೆಯನ್ನು ಖಾಸಗಿಕರಣ ಮಾಡಲು ಮುಂದಾಗಿದೆ. ಆದ್ದರಿಂದ ಕಾರ್ಖಾನೆಗೆ ಸೇರಿದ ಈ ಶಿಕ್ಷಣ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುವ ಸಿಬ್ಬಂದಿಗೆ ಉದ್ಯೋಗದ ಭದ್ರತೆ ಇಲ್ಲ. ಶಾಲಾ ಕಟ್ಟಡ, ಪೀಠೋಪಕರಣ, ಪಾಠೋಪಕರಣ ಹಾಗೂ ಸಿಬ್ಬಂದಿಗಳ ವೇತನಕ್ಕೂ ತೊಂದರೆ ಉಂಟಾಗುತ್ತಿರುವುದರಿಂದ ಎಂ ಪಿ ಎಂ ಶಿಕ್ಷಣ ಸಂಸ್ಥೆಗಳನ್ನು ಸರ್ಕಾರದ ಅಧೀನಕ್ಕೆ ಒಳಪಡಿಸುವಂತೆ ಮನವಿ ಸಲ್ಲಿಸಲಾಯಿತು.

ಹರ್ ಘರ್ ತಿರಂಗಾ ಅಭಿಯಾನಕ್ಕೆ ಪೂರಕ ಮಾಹಿತಿ ನಿಮಗಾಗಿ

0

ಭಾರತದ ಸ್ವಾತಂತ್ರ್ಯಕ್ಕೆ ಇದು ಅಮೃತಕಾಲ. 75 ವಸಂತಗಳ ಸಂಭ್ರಮದಲ್ಲಿರುವ ಭಾರತದ 20 ಕೋಟಿಗೂ ಅಧಿಕ ಮನೆ , ಕಟ್ಟಡಗಳ ಮೇಲೆ ರಾಷ್ಟ್ರಧ್ವಜವನ್ನು ಹಾರಿಸುವುದಕ್ಕೆ ಕೇಂದ್ರ “ ಹರ್ ‌ ಘರ್ ‌ ತಿರಂಗಾ ‘ ಅಭಿಯಾನ ಆರಂಭಿಸಿದೆ . 13 ರ ಬೆಳಗ್ಗೆ ನಿಮ್ಮ ಮನೆಯ ಮುಂದೆ ಹಾರಿಸಿದ ಧ್ವಜವನ್ನು 15 ರ ಸಂಜೆ ಇಳಿಸಿ . ನೀವೂ ಧ್ವಜ ಹಾರಿಸಿ ; ಹಾರಿಸುವಾಗ ಅನುಸರಿಸಬೇಕಾದ ಕೆಲವು ಅಂಶಗಳು ಹೀಗಿವೆ.

ಧ್ವಜ ಹೇಗಿರಬೇಕು?,
ತ್ರಿವರ್ಣ ಧ್ವಜವು ಆಯತಾಕಾರದಲ್ಲಿಯೇ ಇರಬೇಕು. ಅದರಲ್ಲೂ ಧ್ವಜದ ಗಾತ್ರ 3:2 (ಅಗಲ:ಉದ್ದ) ಅನುಪಾತದಲ್ಲಿಯೇ ಇರಬೇಕು. ಧ್ವಜವು ಕೈಯಲ್ಲಿ ನೇಯ್ದಿರುವ ಉಣ್ಣೆ, ಹತ್ತಿ ಅಥವಾ ರೇಷ್ಮೆ ಬಟ್ಟೆಯದ್ದೇ ಆಗಿರಬೇಕು ಎನ್ನುವ ನಿಯಮ ಈ ಹಿಂದೆ ಇತ್ತಾದರೂ ಇತ್ತೀಚೆಗೆ ಇದರಲ್ಲಿ ಬದಲಾವಣೆ ತರಲಾಗಿದೆ. ಪಾಲಿಸ್ಟರ್‌ ಧ್ವಜಕ್ಕೂ ಅನುಮತಿ ಸಿಕ್ಕಿದೆ. ಹಾಗೆಯೇ ಮಿಷನ್‌ಗಳಲ್ಲಿ ನೇಯ್ದಿರುವ ಬಟ್ಟೆಯ ಧ್ವಜಕ್ಕೂ ಅನುಮತಿ ನೀಡಲಾಗಿದೆ.

ಧ್ವಜಾರೋಹಣ ಹೇಗೆ?
ಧ್ವಜವನ್ನು ಅತ್ಯಂತ ಗೌರವಯುತವಾಗಿ ಹಾರಿಸಬೇಕು. ಧ್ವಜವನ್ನು ಸ್ತಂಭಕ್ಕೆ ಏರಿಸುವಾಗ ವೇಗವಾಗಿ ಏರಿಸಬೇಕು ಹಾಗೆಯೇ ಸ್ತಂಭದಿಂದ ಇಳಿಸುವಾಗ ನಿಧಾನವಾಗಿ ಇಳಿಸಬೇಕು.

ಧ್ವಜ ಮಡಚುವುದು ಹೇಗೆ?
ಧ್ವಜವನ್ನು ಸ್ವತ್ಛ, ಸಮತಟ್ಟಾದ ಸ್ಥಳದಲ್ಲಿ ಇಟ್ಟುಕೊಳ್ಳಿ. ಮೊದಲಿಗೆ ಕೇಸರಿ ಮತ್ತು ಹಸುರು ಬಣ್ಣದ ಬಟ್ಟೆಯನ್ನು ಬಿಳಿ ಬಣ್ಣದ ಬಟ್ಟೆಯ ಕೆಳಗೆ ಮಡಚಿ. ಆಯತಾ ಕಾರಾದಲ್ಲಿರುವ ಬಿಳಿ ಬಣ್ಣದ ಬಟ್ಟೆಯಲ್ಲಿ ಕೇವಲ ಅಶೋಕ ಚಕ್ರ ಕಾಣುವಂತೆ ಇನ್ನೆರೆಡು ತುದಿಗಳನ್ನು ಮಡಚಿ.

ಹರಿದರೆ ಏನು ಮಾಡಬೇಕು?
ಒಂದು ವೇಳೆ ಧ್ವಜವು ಹರಿದರೆ ಅಥವಾ ಬಳಸಲಾರದ ಸ್ಥಿತಿಗೆ ಬಂದರೆ, ಅದನ್ನು ಖಾಸಗಿ ಯಾಗಿ ಗೌರವಯುತವಾಗಿ ಸುಟ್ಟು ಹಾಕಬೇಕು. ಹಾಗೆಯೇ ವಿಶೇಷ ದಿನಗಳಂದು(ಸ್ವಾತಂತ್ರ್ಯ ದಿನ, ಗಣರಾಜ್ಯೋತ್ಸವ ದಿನ) ಪೇಪರ್‌ ಧ್ವಜಗಳನ್ನು ಬಳಸಬಹುದು. ಅವುಗಳನ್ನೂ ಕೂಡ ಅಷ್ಟೇ ಗೌರವಯುತವಾಗಿ ಖಾಸಗಿಯಾಗಿ ಸುಟ್ಟು ಹಾಕಬೇಕು.

ವಾಹನದ ಮೇಲೆ ಬಳಸುವುದಕ್ಕೂ ಮುನ್ನ
ತ್ರಿವರ್ಣ ಧ್ವಜವನ್ನು ವಾಹನದ ಮೇಲೆ ಬಳಸುವುದಕ್ಕೆ ಎಲ್ಲರಿಗೂ ಅನುಮತಿಯಿಲ್ಲ. ರಾಷ್ಟ್ರಪತಿ, ಉಪ ರಾಷ್ಟ್ರಪತಿ, ರಾಜ್ಯಪಾಲರುಗಳು, ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಹಾಗೂ ನ್ಯಾಯಮೂರ್ತಿಗಳು, ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿ ಹಾಗೂ ನ್ಯಾಯ ಮೂರ್ತಿಗಳು, ಕೇಂದ್ರ ಸಚಿವರು ಮತ್ತು ಸಹಾ ಯಕ ಸಚಿವರು, ಭಾರತದ ಕಾರ್ಯಾಚರಣೆಗಳ ಮುಖ್ಯಸ್ಥರು, ಕೇಂದ್ರ ಮಟ್ಟದ ಉಪ ಮಂತ್ರಿಗಳು, ಮುಖ್ಯಮಂತ್ರಿಗಳು, ಲೋಕ ಸಭೆಯ ಸ್ಪೀಕರ್‌, ರಾಜ್ಯಸಭೆಯ ಉಪಾಧ್ಯಕ್ಷರು, ಲೋಕಸಭೆಯ ಉಪ ಸಭಾಧ್ಯಕ್ಷರು, ರಾಜ್ಯ ವಿಧಾನ ಪರಿಷತ್‌ಗಳ ಅಧ್ಯಕ್ಷರು, ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ವಿಧಾನಸಭೆಯ ಅಧ್ಯಕ್ಷರು, ಉಪಾಧ್ಯಕ್ಷರಿಗೆ ಮಾತ್ರವೇ ತಮ್ಮ ಕಾರಿನ ಮುಂಭಾಗದಲ್ಲಿ ಧ್ವಜ ಇರಿಸಿಕೊಳ್ಳುವುದಕ್ಕೆ ಅವಕಾಶವಿದೆ.

ಎಲ್ಲರೂ ಧ್ವಜ ಹಾರಿಸಬಹುದು
ಹಿಂದೆ ಪ್ರಮುಖ ಹುದ್ದೆಯಲ್ಲಿದ್ದವರಿಗೆ ಮಾತ್ರ ರಾಷ್ಟ್ರೀಯ ಧ್ವಜ ಹಾರಿಸಲು ಅವಕಾಶ ಇತ್ತು. ಹರ್‌ಘರ್‌ ತಿರಂಗಾ ಅಭಿಯಾನಕ್ಕಾಗಿ ಧ್ವಜಸಂಹಿತೆಗೆ ತಿದ್ದುಪಡಿ ತರಲಾಗಿದ್ದು, ಎಲ್ಲರೂ ತಮ್ಮ ತಮ್ಮ ಮನೆಗಳಲ್ಲೂ ಹಾರಿಸಬಹುದು.

ಭಾರತದ ತ್ರಿವರ್ಣದ ಧ್ವಜಾರೋಹಣ ಮಾಡುವಾಗ ಯಾವಾಗಲೂ ಕೇಸರಿ ಬಣ್ಣ ಮೇಲೆ ಬರುವಂತೆ, ಹಸುರು ಬಣ್ಣ ಕೆಳಗೆ ಬರುವಂತೆ ನೋಡಿಕೊಳ್ಳಿ
ಯಾವುದೇ ಕಾರಣಕ್ಕೂ ಹರಿದಿರುವ ಹಾಗೂ ಅಶುಭ್ರ ಧ್ವಜ ಹಾರಿಸುವಂತಿಲ್ಲ.

ಯಾವುದೇ ಕಾರಣಕ್ಕೆ ತ್ರಿವರ್ಣ ಧ್ವಜಕ್ಕಿಂತ ಎತ್ತರದಲ್ಲಿ ಅಥವಾ ಅದಕ್ಕೆ ಸರಿ ಸಮನಾಗಿ ಬೇರೆ ಇನ್ನು ಯಾವುದೇ ಧ್ವಜವನ್ನು ಹಾರಿಸುವುದು ನಿಷಿದ್ಧ.
ಧ್ವಜವನ್ನು ಆಲಂಕಾರಿಕ ವಸ್ತುವಾಗಿ ಯಾವುದೇ ಕಾರಣಕ್ಕೆ ಬಳಸಕೂಡದು.
ತೊಡುವ ಬಟ್ಟೆಯಲ್ಲಿ ಸೊಂಟಕ್ಕಿಂತ ಕೆಳಭಾಗದಲ್ಲಿ ಧ್ವಜವಿರುವಂತಿಲ್ಲ.
ಒಂದೇ ದಾರದಲ್ಲಿ ಎರಡು ಧ್ವಜ ಹಾರಿಸುವಂತಿಲ್ಲ. ನೆಲಕ್ಕೆ ತಾಕಿಸುವಂತಿಲ್ಲ.
ಯಾವುದೇ ಕಾರಣಕ್ಕೂ ತ್ರಿವರ್ಣ ಧ್ವಜವನ್ನು ಬಂಡಲ್‌ ರೀತಿ ಬಳಸುವಂತಿಲ್ಲ.

ಶ್ವೇತ ವರ್ಣದ ಮಧ್ಯ 24 ಗೆರೆಗಳ ನೀಲಿ ಬಣ್ಣದ ಅಶೋಕ ಚಕ್ರವಿರಬೇಕು.
ಧ್ವಜದ ಮೇಲೆ ಬರಹ ಇರಬಾರದು; ಧ್ವಜವನ್ನು ಜಾಹೀರಾತಿಗೆ ಬಳಸಬೇಡಿ
ಧ್ವಜವನ್ನು ಹಾರಿಸುವ ಕಂಬ/ಸ್ತಂಭದ ಮೇಲೆ ಜಾಹೀರಾತು ಇರಬಾರದು.
ಅಸುರಕ್ಷಿತ ಅಥವಾ ಧ್ವಜಕ್ಕೆ ಹಾನಿಯುಂಟಾಗಬಹುದಾದ ಸ್ಥಳದಲ್ಲಿ ಧ್ವಜಾರೋಹಣ ಮಾಡುವಂತಿಲ್ಲ.

ರಾಷ್ಟ್ರೀಯತೆಯನ್ನ ಎಂದಿಗೂ ಮಾರಲು ಸಾಧ್ಯವಿಲ್ಲ-ರಾಹುಲ್ ಗಾಂಧಿ

0

ರೇಷನ್ ಕಾರ್ಡ್​ ಇರುವ ಎಲ್ಲರಿಗೂ ರಾಷ್ಟ್ರಧ್ವಜ ಖರೀದಿಸುವಂತೆ ರೇಷನ್ ಅಂಗಡಿಯವರು ಒತ್ತಾಯಿಸುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

“ರಾಷ್ಟ್ರೀಯತೆಯನ್ನು ಎಂದಿಗೂ ಮಾರಲು ಸಾಧ್ಯವಿಲ್ಲ. ರೇಷನ್ ನೀಡುವಾಗ ಬಡವರಿಂದ ತ್ರಿವರ್ಣ ಧ್ವಜಕ್ಕಾಗಿ 20 ರೂ. ವಸೂಲಿ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ” ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಬಿಜೆಪಿಯು ಧ್ವಜದ ಹೆಸರಿನಲ್ಲಿ ರಾಷ್ಟ್ರೀಯತೆಯನ್ನು ಮಾರಾಟ ಮಾಡುತ್ತಿದೆ. ಇದರಿಂದ ಬಡವರ ಆತ್ಮಗೌರವಕ್ಕೆ ಧಕ್ಕೆ ಉಂಟಾಗಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಈ ಬಗ್ಗೆ ಹಿಂದಿಯಲ್ಲಿ ಫೇಸ್‌ಬುಕ್ ಪೋಸ್ಟ್‌ ಮಾಡಿರುವ ರಾಹುಲ್ ಗಾಂಧಿ ಭಾರತದ ತ್ರಿವರ್ಣ ಧ್ವಜ ನಮ್ಮ ಹೆಮ್ಮೆಯಾಗಿದೆ. ತ್ರಿವರ್ಣ ಧ್ವಜ ಪ್ರತಿಯೊಬ್ಬ ಭಾರತೀಯನ ಹೃದಯದಲ್ಲಿ ನೆಲೆಸಿದೆ ಎಂದು ಹೇಳಿದ್ದಾರೆ.

“ತ್ರಿವರ್ಣ ಧ್ವಜದ ಜೊತೆಗೆ ಬಿಜೆಪಿ ಸರ್ಕಾರವು ನಮ್ಮ ದೇಶದ ಬಡವರ ಸ್ವಾಭಿಮಾನದ ಮೇಲೂ ದಾಳಿ ಮಾಡುತ್ತಿದೆ” ಎಂದಿರುವ ರಾಹುಲ್ ಗಾಂಧಿ ಕೆಲವು ಪಡಿತರ ಚೀಟಿದಾರರು ತಮ್ಮ ಬಳಿ ರೇಷನ್ ಅಂಗಡಿಯವರು 20 ರೂ. ಕೊಟ್ಟು ಬಾವುಟ ಖರೀದಿಸಲು ಒತ್ತಾಯಿಸಿದ್ದಾರೆ ಎಂದು ದೂರುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಯುವಜನರೇ ಜಾಗೃತರಾಗಿ

0

ಅಂತರಾಷ್ಟ್ರೀಯ ಯುವ ದಿನ ವಿಶ್ವಸಂಸ್ಥೆಯು ಗೊತ್ತುಪಡಿಸಿದ ಜಾಗೃತಿ ದಿನವಾಗಿದೆ.
ಯುವಜನರ ಸುತ್ತಲಿನ ಸಾಂಸ್ಕೃತಿಕ ಮತ್ತು ಕಾನೂನು ಸಮಸ್ಯೆಗಳ ಬಗ್ಗೆ ಗಮನ ಸೆಳೆಯುವುದು ದಿನದ ಉದ್ದೇಶವಾಗಿದೆ.

ಮೊದಲು ಅಂತಾರಾಷ್ಟ್ರೀಯ ಯುವ ದಿನವನ್ನ ಅನ್ನು 12 ಆಗಸ್ಟ್ 2000 ರಂದು ಆಚರಿಸಲಾಯಿತು.
ವಿಶ್ವಾದ್ಯಂತ ಯುವಜನರ ಸಮಸ್ಯೆಗಳತ್ತ ಗಮನ ಸೆಳೆಯಲು ಸರ್ಕಾರಗಳು ಇದೊಂದು ಅವಕಾಶವಾಗಿದೆ ಎನ್ನಬಹುದು.
ಅಂತಾರಾಷ್ಟ್ರೀಯ ಯುವ ದಿನದಂದು ಸಂಗೀತ ಕಚೇರಿಗಳು, ಕಾರ್ಯಾಗಾರಗಳು, ಸಾಂಸ್ಕೃತಿಕ ಕಛೇರಿಗಳು ಮತ್ತು ರಾಷ್ಟ್ರೀಯ ಮತ್ತು ಸ್ಥಳೀಯ ಸರ್ಕಾರಿ ಅಧಿಕಾರಿಗಳು ಮತ್ತು ಯುವ ಸಂಸ್ಥೆಗಳನ್ನು ಒಳಗೊಂಡ ಸಭೆಗಳು ಪ್ರಪಂಚದಾದ್ಯಂತ ನಡೆಯುತ್ತವೆ.

ಈ ವರ್ಷದ ಯುವ ದಿನದ ಥೀಮ್‌ “ಆಹಾರ ವ್ಯವಸ್ಥೆಗಳನ್ನು ಪರಿವರ್ತಿಸುವುದು: ಮಾನವ ಮತ್ತು ಗ್ರಹ ಆರೋಗ್ಯಕ್ಕಾಗಿ ಯುವ ನಾವೀನ್ಯತೆ” ಎಂದು ನಿರ್ಧರಿಸಲಾಗಿದೆ.

ಈ ಥೀಮ್ ಅನ್ನು ಆಯ್ಕೆಮಾಡುವುದರ ಹಿಂದಿನ ಕಾರಣವೆಂದರೆ ಆಹಾರ ವ್ಯವಸ್ಥೆಗಳ ರೂಪಾಂತರದಲ್ಲಿ ಯುವಜನರು ಮಾಡಿರುವ ಪ್ರಯತ್ನದ ಪ್ರಭಾವವನ್ನು ಎತ್ತಿ ತೋರಿಸುವುದಾಗಿದೆ

ಗ್ರಹದ ಸಾಮೂಹಿಕ ಸಂರಕ್ಷಣೆಗಾಗಿ ಪ್ರಯತ್ನಗಳು ಮತ್ತು ಆಲೋಚನೆಗಳನ್ನು ಹಾಕುವಲ್ಲಿ ಹಿರಿಯರ ಮತ್ತು ಯುವ ಜನರ ಒಳಗೊಳ್ಳುವಿಕೆಯ ಅಗತ್ಯತೆಯ ಬಗ್ಗೆ ಜನರಿಗೆ ಅರಿವು ಮೂಡಿಸುವ ಗುರಿಯನ್ನೂ ಈ ಥೀಮ್ ಹೊಂದಿದೆ.

ಪ್ರಪಂಚದ ಅನೇಕ ರಾಷ್ಟ್ರಗಳಲ್ಲಿ ಯುವಜನರು ಇಲ್ಲಿಯವರೆಗೆ ಆರೋಗ್ಯ, ಶಿಕ್ಷಣ ಮತ್ತು ಉದ್ಯೋಗದಂತಹ ಮೂಲ ಸೌಕರ್ಯಗಳಿಗಾಗಿ ಹೋರಾಡುತ್ತಿದ್ದಾರೆ. ಈ ದಿನವು ಅಂತಹ ಸಂಬಂಧಿತ ಸಮಸ್ಯೆಗಳನ್ನು ಚರ್ಚಿಸಲು ಮತ್ತು ಮುಂದಿನ ದಿನಗಳಲ್ಲಿ ಈ ರೀತಿಯ ಸನ್ನಿವೇಶಗಳನ್ನು ಉತ್ತಮಗೊಳಿಸಲು ಸಹಾಯ ಮಾಡುವ ಯೋಜನೆಗಳು ಮತ್ತು ಆಲೋಚನೆಗಳನ್ನು ರೂಪಿಸಲು ವೇದಿಕೆ ಒದಗಿಸುತ್ತದೆ.

ಮಾನಸಿಕ ಆರೋಗ್ಯದ ಬಗ್ಗೆ ಪ್ರಮುಖ ಚರ್ಚೆಗಳು ಮತ್ತು ಯುವಜನರು ಹಾದುಹೋಗುವ ಹೋರಾಟಗಳ ಬಗ್ಗೆಯೂ ಸಹ ಮಾತನಾಡಲಾಗುತ್ತದೆ‌.

ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವವರಿಗೆ ಸಹಾಯ ಮಾಡಲು ನವೀನ ಕಾರ್ಯವಿಧಾನಗಳನ್ನು ಚರ್ಚಿಸಲಾಗುತ್ತದೆ.

ಬೇರಡೆಗಿಂತ ನಮ್ಮದೇಶದಲ್ಲಿಯೇಆಧ್ಯಾತ್ಮಿಕ ಸ್ವಾತಂತ್ರ್ಯ ಹೆಚ್ಚಿದೆ-ಮಂಜುನಾಥ್

0

ಬಹು ದೇವತಾ ಉಪಾಸನೆಯ ನಮ್ಮ ಭಾರತದ ಸನಾತನ ಸಂಸ್ಕೃತಿಯು ನಿಯಮಗಳನ್ನು ಹೇಳಿದೆ ವಿನಹ ನಿರ್ಬಂಧಗಳನ್ನು ಹೇರಿಲ್ಲ. ಹೀಗಾಗಿ ಧಾರ್ಮಿಕ ಮತ್ತು ಆಧ್ಯಾತ್ಮಿಕ ಸ್ವಾತಂತ್ರವು ನಮ್ಮ ಭಾರತದಲ್ಲಿ ಇದ್ದಷ್ಟು ಮತ್ತಾವ ದೇಶದಲ್ಲೂ ಲಭ್ಯವಿಲ್ಲ ಎಂದು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ಎಚ್.ಬಿ. ಮಂಜುನಾಥ ಅಭಿಪ್ರಾಯಪಟ್ಟರು.

ಅವರು ದಾವಣಗೆರೆಯ ನಗರದ ಶಂಕರ ವಿಹಾರ ಬಡಾವಣೆಯಲ್ಲಿ ಶ್ರೀ ಸರ್ವಸಿದ್ಧಿ ವಿನಾಯಕ ದೇವಸ್ಥಾನದ ಉದ್ಘಾಟನೆ, ಶಿಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಮುಖ್ಯ ಉಪನ್ಯಾಸಕರಾಗಿ ಮಾತನಾಡುತ್ತಾ ಧರ್ಮ ಭೂಮಿಯಾದ ಭಾರತದಲ್ಲಿ ದೇವತೆಗಳ ಅವತಾರಗಳು ಅರ್ಥವತ್ತಾಗಿವೆ. ದೇವಸ್ಥಾನಗಳು ಆಸ್ತಿ ಅಂತಸ್ತು ಅಧಿಕಾರ ಪರಿ ಭೇದಗಳನ್ನು ಬದಿಗಿಟ್ಟು ಸರ್ವರೂ ಸಮಾನವೆಂಬ ಭಾವನೆಯಲ್ಲಿ ಭಗವಂತನಿಗೆ ಶರಣಾಗಬೇಕು ಎಂಬುದನ್ನು ಸಾರುತ್ತವೆ. ನಮ್ಮ ಆಧ್ಯಾತ್ಮಿಕ ಮೌಲ್ಯಗಳು ಪ್ರಪಂಚದ ಎಲ್ಲ ದೇಶಗಳಲ್ಲಿ ಆಕರ್ಷಣೆಗೆ ಒಳಗಾಗಿದ್ದು ಅನೇಕ ದೇಶಗಳಲ್ಲಿ ನಮ್ಮ ಭಾರತೀಯ ದೇವಸ್ಥಾನಗಳು ಹೆಚ್ಚುಹೆಚ್ಚಾಗಿ ಸ್ಥಾಪನೆಯಾಗುತ್ತಿವೆ ಎಂದರು.

ಭಗವಂತನ ಸನ್ನಿಧಾನ ದಲ್ಲಾಗಲಿ ಸಮಾಜದಲ್ಲಾಗಲಿ ನಾವು ಅಹಂಕಾರದಿಂದ ಬೀಗದೆ ಸೌಜನ್ಯದಿಂದ ಬಾಗಬೇಕು ಆಗ ಪರಮಾತ್ಮನಿಗೆ ಪ್ರಿಯವಾಗುತ್ತೇವೆ ಎಂಬುದನ್ನು ಸ್ವಾರಸ್ಯಕರ ಉದಾಹರಣೆಯೊಂದಿಗೆ ಎಚ್.ಬಿ.ಮಂಜುನಾಥ್ ವಿವರಿಸಿದರು.

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರಗೊಳ್ಳ ಪುರವರ್ಗ ಮಠದ ಓಂಕಾರ ಶಿವಾಚಾರ್ಯ ಸ್ವಾಮೀಜಿಯವರು ದೇಹಕ್ಕಿಂತ ದೈವತ್ವಕ್ಕೆ ಮಹತ್ವ ಕೊಟ್ಟಿರುವುದು ಭಾರತದೇಶ, ಬದುಕನ್ನು ದೇವರ ಕಾರ್ಯದಲ್ಲಿ ಕಟ್ಟಿಕೊಳ್ಳಬೇಕು‌. ಭಾರತದ ಧಾರ್ಮಿಕ ಮೌಲ್ಯಗಳು ದೇವಸ್ಥಾನಗಳಲ್ಲಿ ಬೆಂಬಿತವಾಗಬೇಕೇ ಹೊರತು ಅಲ್ಲಿ ಸಂಪತ್ತಿನ ಕ್ರೋಢೀಕರಣವಾಗಬಾರದು ಎಂದರು.

ಮುಖ್ಯ ಅತಿಥಿಗಳಾಗಿ ನಗರಸಭೆಯ ಮಾಜಿ ಅಧ್ಯಕ್ಷ ಶಿವನಹಳ್ಳಿ ರಮೇಶ್ ದಾವಣಗೆರೆ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಶ್ರೀಮತಿ ನಾಗರತ್ನ ಮಲ್ಲೇಶಪ್ಪ, ಮಹಾನಗರಪಾಲಿಕೆಯ ಸದಸ್ಯೆ ಶ್ರೀಮತಿ ಆಶಾ ಉಮೇಶ್ ಹಾಗೂ ಶ್ರೀಯುತ ಉಮೇಶ್ ಮಾತುಗಳನ್ನಾಡಿದರು.

ದೇವಸ್ಥಾನ ಸಮಿತಿಯ ಅಧ್ಯಕ್ಷರಾದ ಎಂ. ಮಹೇಶ್ವರಯ್ಯ ನವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ದಾವಣಗೆರೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಮಂಜುನಾಥ್ ಏಕಬೋಟೆ ಮುಂತಾದವರು ಉಪಸ್ಥಿತರಿದ್ದರು.

ಖಜಾಂಚಿ ಹೆಚ್.ಡಿ. ಕರಿಬಸಪ್ಪ ನವರು ನಿರೂಪಿಸಿದ ಕಾರ್ಯಕ್ರಮದಲ್ಲಿ ಸ್ವಾಗತವನ್ನು ಕಾರ್ಯದರ್ಶಿ ಬಿ.ಪಿ.ಹರೀಶ್ ಕೋರಿದರು. ದಾನಿಗಳನ್ನು ಸನ್ಮಾನಿಸಲಾಯಿತು.

ಸಂಗೀತ ಸೇವೆಯನ್ನು ಅಜಯನಾರಾಯಣ, ಭರತೇಶ ಹಾಗೂ ಸಮಿತಿಯ ಉಪಾಧ್ಯಕ್ಷ ಕಲ್ಲಪ್ಪ ಅರಳಿ ನೆರವೇರಿಸಿದರು. ದೇವಸ್ಥಾನ ಸಮಿತಿಯ ಚಂದ್ರಪ್ಪ, ಟಿ. ವೆಂಕಟೇಶಪ್ಪ, ರಾಕೇಶ್ ಹಾದಿಮನಿ, ಬಿ.ಜಿ. ಚಂದ್ರಶೇಖರ್,ಹೆಚ್.ಎನ್. ಶ್ರೀಧರ್,ವಿ.ಡಿ. ಪ್ರಕಾಶ್, ರುದ್ರಪ್ಪ ಕೆ.ಆರ್, ರಾಜು ಮರಿಗೌಡರ್, ಗಿರೀಶ್ ಜವಳಿ, ಎಸ್.ಈರೇಶ್, ಪ್ರಕಾಶ್ ಕುಮಾರ್,ಕೆ.ಎಂ. ವೀರಯ್ಯಸ್ವಾಮಿ, ಶ್ರೀಮತಿ ಇಂದ್ರಮ್ಮ, ವಿ. ರಾಕೇಶ್, ರಘು ಎಸ್. ಪಾಲಂಕರ್, ಎನ್. ಮಲ್ಲಯ್ಯ ಮುಂತಾದವರು ಭಾಗವಹಿಸಿದ್ದರು.
ಬಡಾವಣೆಯ ಮಹಿಳೆಯರು ಭಕ್ತಿ ಸಂಗೀತ ಸೇವೆ ನೆರವೇರಿಸಿದರು .

ಎಲ್ಲರಂತಲ್ಲ ಸುಬ್ಬಣ್ಣ

0

ಖ್ಯಾತ ಪತ್ರಕರ್ತ ಎಂಬಿ ಸಿಂಗ್ ರವರು ಸುಗಮ ಸಂಗೀತ ಸಾಧಕ ಮಲೆನಾಡಿನ ಗಾಯಕ ಶಿವಮೊಗ್ಗ ಸುಬ್ಬಣ್ಣನನ್ನು ಕುರಿತು ಈಗ್ಯೆ ಸುಮಾರು 44 ವರುಷಗಳ ಹಿಂದೆ ಹೇಳಿದ ಮಾತಿದು. ಆಗ ಸುಬ್ಬಣ್ಣನಿಗೆ 40 ವರುಷ.

ಸಿಂಗ್ ರವರು ‘ಸುಧಾ’ವಾರ ಪತ್ರಿಕೆಯ ಸಂಪಾದಕರಾಗಿದ್ದಾಗ ಆಡಿದ ಮೆಚ್ಚುಗೆ ಮಾತಿದು. ಚಲನಚಿತ್ರ ಜಗತ್ತಿನ ಸಕಲ ಆಗು ಹೋಗುಗಳನ್ನು ಹಲವಾರು ವರ್ಷಗಳ ಕಾಲ ಅವಲೋಕನ ಮಾಡಿದ ಈ ಮಹನೀಯರು ಶಿವಮೊಗ್ಗ ಸುಬ್ಬಣ್ಣನನ್ನು ಪ್ರಶಂಸಿಸಲು ಕಾರಣವಿತ್ತು.

ಸರ್ವೇಸಾಮಾನ್ಯವಾಗಿ ಪ್ರವರ್ಧಮಾನಕ್ಕೆ ಬರಲು ಕಾತುರರಾಗಿರುವ ಯುವ ಪ್ರತಿಭೆಗಳು, ಸಿನಿಮಾ ರಂಗದಲ್ಲಿ ಪ್ರಚಾರ ಪ್ರಸಿದ್ಧಿಯನ್ನು ಮೆಟ್ಟಿಲಾಗಿ ಬಳಸುವುದು ಸಿದ್ಧಿ ಸಹಜ.ಪ್ರಚಾರ ಹೆಚ್ಚಿದಂತೆಲ್ಲ ನಟ, ನಟಿ ,ನಿರ್ದೇಶಕ, ಚಿತ್ರಕಥಾ ಲೇಖಕ, ಹಿಂಬದಿ ಗಾಯಕ, ತಂತ್ರಜ್ಞ ಪ್ರಸಿದ್ಧಿ ಪುರುಷರಾಗುವುದು ಲಾಗಾಯ್ತು ವಿಧಾನ. ಪ್ರಶಸ್ತಿ ಬಂದ ಬಳಿಕ ತಾನೇ ತಾನಾಗಿ ಪ್ರಚಾರ ಸಿಗುವುದು ಚಿತ್ರಜಗತ್ತಿನ ಸಂಪ್ರದಾಯ.

ಕನ್ನಡಕ್ಕೆ ಗಾಯಕ ಪ್ರಶಸ್ತಿ
ಅನುಭವಿ ವಿಮರ್ಶಕ ಮತ್ತು ಪತ್ರಕರ್ತ ಎಂಬಿ ಸಿಂಗ್ ರವರು ಪ್ರತಿಭಾವಂತ ಸುಗಮ ಸಂಗೀತಜ್ಞ ಶಿವಮೊಗ್ಗ ಸುಬ್ಬಣ್ಣನನ್ನು ಗುರ್ತಿಸಿದಾಗ ಈತನಿಗೆ ಯಾವುದೇ ಪ್ರಚಾರವಾಗಲಿ, ಈಗಿನ ಭಾಷೆಯಲ್ಲಿ ಹೇಳುವಂತೆ ‘ಬಿಲ್ಡಪ್ ‘ ಇರ್ಲಿಲ್ಲ. ಅನರ್ಘ್ಯ ಕುಸುಮ ಈ ಕಲಾವಿದ ಎಂದು ಖಚಿತ ಮಾಡಿಕೊಂಡರು ಎಂಬಿ ಸಿಂಗ್. ಎಲೆ ಮರೆಯ ಕಾಯಿ ಇದು ಎಂದು ನಂಬಿದರು.

ಶಿವಮೊಗ್ಗ ಸುಬ್ಬಣ್ಣ ಕನ್ನಡ ಚಲನಚಿತ್ರರಂಗಕ್ಕೆ ರಾಷ್ಟ್ರೀಯ ಪ್ರಶಸ್ತಿ ತಂದಿತ್ತ ಸುದ್ದಿಯನ್ನು ನನಗೆ ಮೊದಲು ತಿಳಿಸಿದವರೇ ಎಂಬಿ ಸಿಂಗ್ ಸಾಹೇಬರು.
ಇದೇ ಸಮಯದಲ್ಲಿ ಖ್ಯಾತ ಚಿಂತಕ, ಬರಹಗಾರ ಪ್ರೊ ಚಂದ್ರಶೇಖರ ಕಂಬಾರರ ‘ಕಾಡು ಕುದುರೆ’ ಚಲನಚಿತ್ರದ ಅದೇ ಹೆಸರಿನ ಭಾವ ಸಂಪೂರ್ಣತೆಯ ಹಾಡು ಭಾರತೀಯ ಚಲನಚಿತ್ರರಂಗದ ರಾಷ್ಟ್ರೀಯ ಪ್ರಶಸ್ತಿ ತಂದಿತ್ತಿತು. 40 ವರುಷದ ಸಾಧಕ ಶಿವಮೊಗ್ಗ ಸುಬ್ಬಣ್ಣ ಅನಾಯಾಸವಾಗಿ ಅಷ್ಟೇ ಕಾತರತೆಯಿಂದ ಕನ್ನಡ ಚಿತ್ರಕ್ಕೆ ಮೊತ್ತಮೊದಲ ರಾಷ್ಟ್ರೀಯ ಗೌರವ ತಂದಿತ್ತದ್ದು, ಚಿತ್ರ ಸಂಗೀತ ವಿಭಾಗಕ್ಕೆ ರಾಷ್ಟ್ರೀಯ ಪುರಸ್ಕಾರ ದೊರೆತದ್ದು ರಾಷ್ಟ್ರಮಟ್ಟದ ಸುದ್ದಿಯಾಯ್ತು.

‘ಸುಧಾ’ದಲ್ಲಿ ಸಂದರ್ಶನ
1978 ನವೆಂಬರ್ ಡಿಸೆಂಬರ್ ತಿಂಗಳ ಮುಸ್ಸಂಜೆ ಶಿವಮೊಗ್ಗೆಯ ಕರ್ನಾಟಕ ಸಂಘದ ಎದುರು ಮಹಡಿಯಲ್ಲಿ ಸುಬ್ಬಣ್ಣ ಲಾಯರ್ ಚೇಂಬರ್ ನಾನು ಭಾರತ ಸರ್ಕಾರದ ವಾರ್ತಾ ಸೇವೆಯ ಅಧಿಕಾರಿ.

ನಾನು ಶಿವಮೊಗ್ಗ ಸುಬ್ಬಣ್ಣ 1950ರ ದಶಕದಿಂದ ಮಿತ್ರರು ಮೈಸೂರಿನ ಮಾಧ್ವ ಹಾಸ್ಟೆಲ್ಲಿನ ಎದುರು ಪೂಜ್ಯ ಪೇಜಾವರ ವಿಶ್ವೇಶ್ವರ ತೀರ್ಥರ ಕೃಪಾಪೋಷಿತರು.ವಿದ್ಯಾರ್ಥಿಯಾಗಿದ್ದಾಗಲೇ ಸುಬ್ಬಣ್ಣನ ಭಕ್ತಿ ಸಂಗೀತಕ್ಕೆ ತಲೆದೂಗಿ ಆಶೀರ್ವದಿಸಿದ್ದರು ಪೇಜಾವರ ಶ್ರೀಗಳು.

ಎಂ ಬಿ ಸಿಂಗ್ ರವರು ಟ್ರಂಕ್ ಕಾಲ್ ಮಾಡಿ ನನ್ನನ್ನು ಸಂಪರ್ಕಿಸಿದಾಗ ಸೂರ್ಯ ಮುಳುಗಲಿದ್ದ.ಸಿಹಿ ಸುದ್ದಿಯೊಂದಿಗೆ ಸುಧಾ ಸಂಪಾದಕರು ನನಗೆ ಮತ್ತೊಂದು ಆದೇಶ — ಜವಾಬ್ದಾರಿ ಹೊರಿಸಿದವರು.

“…….ಕೂಡಲೇ ಶಿವಮೊಗ್ಗ ಸುಬ್ಬಣ್ಣನನ್ನು ಸಂದರ್ಶಿಸುವ, ಈ ಪ್ರತಿಭಾವಂತನ ಅನಿಸಿಕೆಗಳನ್ನು ಕಲೆಹಾಕು.ದೀರ್ಘವಾಗಿ ಮಾತನಾಡಿಸು. ಪ್ರತಿ ಮಾತನ್ನು ಮರೆಯದೇ ಬರೆ. ಶಿವಮೊಗ್ಗ ಸುಬ್ಬಣ್ಣ ‘ಎಲ್ಲರಂತಲ್ಲ’ ಎಂದು ಒತ್ತಿ ಹೇಳಿದರು ಸುಧಾ ಸಂಪಾದಕರು.ಅವರ ಉತ್ಸಾಹ ಇಷ್ಟಕ್ಕೇ ನಿಂತಿರಲಿಲ್ಲ”

ಮುಂದಿನ ವಾರದ ಸುಧಾ ಸಂಚಿಕೆ ನಾಳೆ ಮುದ್ರಣಕ್ಕೆ ಹೋಗುವುದಿದೆ. ಕೊನೆಯ ಪುಟವನ್ನು ಶಿವಮೊಗ್ಗ ಸುಬ್ಬಣ್ಣನ ಸಂದರ್ಶನ ಪ್ರಕಟಿಸಲು ಮೀಸಲಾಗಿಟ್ಟಿದ್ದೇನೆ. ನಾಡಿನ ಉಳಿದ ಎಲ್ಲ ಪತ್ರಿಕೆಗಳಿಗಿಂತ ಈ ಅಸಾಧಾರಣ ಕಲಾವಿದನ ಸಾಧನೆ ಸುಧಾ ದಲ್ಲಿ ಅಚ್ಚಾಗಬೇಕು ಹೀಗೆಂದು ಟ್ರಂಕ್ ಕಾಲ್ ಕಟ್ಟು ಮಾಡಿದ್ದರು ಎಂ ಬಿ ಸಿಂಗ್.

ಗೋಪಿ ಹೊಟೇಲಿನಲ್ಲಿ ಸಂದರ್ಶನ
ಅಂದಿನ ದಿನಗಳಲ್ಲಿ ಗೋಪಿ ಸರ್ಕಲ್ ಮತ್ತು ಗೋಪಿ ಹೋಟೆಲ್ ಶಿವಮೊಗ್ಗೆಯ ಪ್ರಸಿದ್ಧ ಲ್ಯಾಂಡ್ಮಾರ್ಕ್ಗಳು.ಅಂದು ಸಂಜೆಯ ಕ್ಷಣ ಹೊಸನಗರದ ಹನಿಯ ಸ್ವಗ್ರಾಮದಿಂದ ಹಿಂತಿರುಗಿದ್ದ ಶಿವಮೊಗ್ಗ ಸುಬ್ಬಣ್ಣ ಸರ್ಕಲ್ಲಿನ ಸುತ್ತುಗಟ್ಟಿ ಮತ್ತು ಗೋಪಿ ಹೋಟೆಲಿನ ಮೇಲೆ ಬೆಂಚುಗಳೇ ನಮ್ಮ ಪ್ರೆಸ್ ರೂಂ ಆಯಿತು. ಸುಬ್ಬಣ್ಣನಿಗೆ ರಾಷ್ಟ್ರಪ್ರಶಸ್ತಿಯ ಪೂರ್ಣ ಮಾಹಿತಿಯನ್ನು ಮೊದಲು ತಿಳಿಸಿದವನೇ ನಾನು.
ಶಿವಮೊಗ್ಗ ಸುಬ್ಬಣ್ಣ ಬಹು ಸಾದಾ ಸೀದಾ ಮನುಷ್ಯ. ಮಲೆನಾಡಿನ ಕಿರಿಕ್ ಭಾಷೆಯಲ್ಲಿ ಹೇಳುವುದಾದರೆ ‘ಬೋಳೇಶಂಕರ’ ತನ್ನನ್ನು ಮೇಲೆ ತಂದ ಕೆ ಕೆ ಶಾಮಣ್ಣನವರಿಂದ ಹಿಡಿದು ಪ್ರೊ ಚಂದ್ರಶೇಖರ್ ಕಂಬಾರರವರೆಗೆ ತನಗೆ ಮಾರ್ಗದರ್ಶನವಿತ್ತ ಮಹನೀಯರೆಲ್ಲರನ್ನೂ ಸ್ಮರಿಸಿದ.ತನ್ನ ಬದುಕಿಗೆ ತೊಟ್ಟಿಲಾದ ಶಿವಮೊಗ್ಗೆಯ ಕರ್ನಾಟಕ ಸಂಘದ ಅಂದಿನ ಹಿರಿಯ ತಲೆಗಳಾದ ದತ್ತಾತ್ರಿಶಾಸ್ತ್ರಿಗಳು, ವೆಂಕಟರಾಮ ಶಾಸ್ತ್ರಿಗಳು,ಮಹಿಷಿ ಶಿವಮೂರ್ತಿ,ಇಬ್ರಾಹಿಂ ಸಾಹೇಬರು, ಮಹೇಶ್ವರಪ್ಪ ,ಕೆ ಜಿ ಸುಬ್ರಹ್ಮಣ್ಯ ಮತ್ತಿತರರು ನೀಡಿದ ಸಹಕಾರವನ್ನು ಮನಸಾರೆ ಸ್ಮರಿಸಿದ.

ಸಂದರ್ಶನವೋ ಸಿದ್ಧವಾಯಿತು. ಆದರೆ ಬೆಂಗ್ಳೂರಿಗೆ ಮುಟ್ಟಿಸುವುದು ಹೇಗೆ?

ಶಿವಮೊಗ್ಗೆ ಬೆಂಗ್ಳೂರಿಗೆ ಆಗಷ್ಟೇ ರಾತ್ರಿವೇಳೆ ಲಗ್ಜರಿ ಬಸ್ ಸಂಚಾರ ಆರಂಭವಾಗಿತ್ತು.ರಾತ್ರಿ ಒಂಭತ್ತರ ಲಗ್ಜರಿ ಬಸ್ಸಿನ ಡ್ರೈವರ್ ಗೆ ಸಲಾಂ ಹೊಡೆದೆ.ಆತ ಈ ಜವಾಬ್ದಾರಿಯನ್ನು ಸೌಭಾಗ್ಯವೆಂದೇ ಭಾವಿಸಿದ. ಆತನ ಬೆಂಗ್ಳೂರ್ ವಿಳಾಸ ಪಡೆದು ಬೆಂಗ್ಳೂರ್ ಮಿತ್ರರಿಗೆ ವಿವರಕೊಟ್ಟೆ.

ಕೊನೆಯದಾಗಿ ಇನ್ನೊಂದು ವಿಷಯ ಹೇಳಲೇಬೇಕು ನಾಡಿನ ಪ್ರಸಿದ್ಧ ಪತ್ರಕರ್ತ ಶ್ರೀ ಎಂ ಬಿ ಸಿಂಗ್ ರವರು ಸ್ವತಃ ಮೆಜೆಸ್ಟಿಕ್ ನಲ್ಲಿ ಬಸ್ಸಿಗಾಗಿ ಕಾದಿದ್ದು ಸಂದರ್ಶನ ಪ್ಯಾಕೆಟ್ ಸಂಗ್ರಹಿಸಿದ್ದರು.

ಗಣೇಶ ಹಬ್ಬದ ಸಂದರ್ಭದಲ್ಲಿ ಕೋವಿಡ್ ಪ್ರಸರಣಕ್ಕೆ ಕಡಿವಾಣಕ್ಕೆ ಚಿಂತನೆ

0

ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಗಣೇಶ ಹಬ್ಬಕ್ಕೆ ಕಠಿಣ ನಿಯಮಗಳನ್ನು ಜಾರಿಗೆ ತರಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗುತ್ತಿದೆ.

ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚಳವಾಗುತ್ತಿದೆ. ಜನಜಂಗುಳಿ ಸೇರದಂತೆ ಗಣೇಶ ಹಬ್ಬಕ್ಕೆ ಕಟ್ಟೆಚ್ಚರ ವಹಿಸುವಂತೆ ಕೇಂದ್ರ ಆರೋಗ್ಯ ಇಲಾಖೆ ಕರ್ನಾಟಕಕ್ಕೆ ಎಚ್ಚರಿಕೆ ನೀಡಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಈ ಬಾರಿಯೂ ಗಣೇಶ ಹಬ್ಬಕ್ಕೆ ಹಲವು ನಿರ್ಬಂಧಗಳನ್ನು ಹೇರಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ.

ಕರ್ನಾಟಕ ಸೇರಿ ದೇಶಾದ್ಯಂತ ಮತ್ತೆ ಕೊರೊನಾ ಸೋಂಕಿತರ ಪ್ರಕರಣಗಳಲ್ಲಿ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿವೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಗಣೇಶ ಹಬ್ಬಕ್ಕೆ ಕಠಿಣ ನಿಯಮ ಜಾರಿಗೆ ತರಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.

ರಾಜ್ಯದ ಎಲ್ಲಾ ಗ್ರಾಪಂ ಗಳಲ್ಲಿ ಪಂಚತಂತ್ರ 2.0 ತಂತ್ರಾಂಶ ಅನುಷ್ಠಾನಕ್ಕೆ ಆದೇಶ

0

ರಾಜ್ಯದ ಎಲ್ಲಾ ಗ್ರಾ.ಪಂಗಳಲ್ಲಿ ಪಂಚತಂತ್ರ 2.0 ತಂತ್ರಾಂಶದ ಫೈನಾನ್ಸ್ & ಅಕೌಟಿಂಗ್ ಮತ್ತು Hrms ಮಾಡ್ಯೂಲಗಳ ಅನುಷ್ಟಾನ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಪ್ರಸ್ತುತ ಪಂಚತಂತ್ರ 2.0 ತಂತ್ರಾಂಶದ ಫೈನಾನ್ಸ್ & ಅಕೌಟಿಂಗ್ ಮತ್ತು Hrms ಮಾಡ್ಯೂಲಗಳನ್ನು ಅಭಿವೃದ್ಧಿಪಡಿಸಲಾಗಿದ್ದು, ಸದರಿ ಮಾಡ್ಯೂಲ್ ಗಳನ್ನು ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಅನುಷ್ಠಾನಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಗ್ರಾಮ ಪಂಚಾಯಿತಿಗಳ ಪ್ರತಿನಿತ್ಯದ ಕಾರ್ಯಗಳನ್ನು ಮತ್ತು ಕಾರ್ಯಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡಲು ಸೇವೆಗಳ ವಿಲೇವಾರಿಗೆ ಬೇಕಾದ ಯೋಜನೆಗಳ ಅನುಷ್ಠಾನ ಮತ್ತು ತೀರ್ಮಾನಗಳನ್ನು ಕೈಗೊಳ್ಳವಲ್ಲಿ ಮತ್ತು ಗ್ರಾಮ ಪಂಚಾಯಿತಿಗಳಲ್ಲಿ 2011 ರಿಂದ ಬಳಸಲಾಗುತ್ತಿರುವ ಪಂಚತಂತ್ರ ತಂತ್ರಾಂಶವನ್ನು ಉನ್ನತೀಕರಣಗೊಳಿಸಿ ಪಂಚತಂತ್ರ 2.0 ತಂತ್ರಾಂಶವನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಅಭಿವೃದ್ಧಿಪಡಿಸಲಾಗಿದೆ.

ಸಿಹಿಮೊಗೆಯ ಸವಿದನಿ ಶಿವಮೊಗ್ಗ ಸುಬ್ಬಣ್ಣ

0

ಶಿವಮೊಗ್ಗ ಸುಬ್ಬಣ್ಣ. ನನಗೆ ಆಕಾಶವಾಣಿ ಸೇವೆಯಲ್ಲಿ ಸಿಕ್ಕ ಆತ್ಮೀಯ ಸ್ನೇಹಿತರು. ನೀವು ಯಾವಾಗಾದರೂ ಕರೀರಿ ನಾನು ಭದ್ರಾವತಿ ನಿಲಯಕ್ಕೆ ಬರ್ತೀನಿ ಅಂತ ಹೇಳುತ್ತಿದ್ದರು.
ಭದ್ರಾವತಿ ಆಕಾಶವಾಣಿಯಲ್ಲಿ
ಆಹ್ವಾನಿತ ಶ್ರೋತೃಗಳ ಸಮ್ಮುಖ ನಡೆದ ಭಾವಗೀತೆಗಳ ಕಾರ್ಯಕ್ರಮದಲ್ಲೂ ಅವರು ಪಾಲ್ಗೊಂಡಿದ್ದರು. ಅವರು ಹಾಡಿದ
ಏನ ಮೀಸಲು ಮಾಡಲೋ ಎಂಬ ಗೀತೆ ನನ್ನ ಕಿವಿಯಲ್ಲಿ ಗಂಯ್ ಗುಟ್ಟುತ್ತಿದೆ.

“ಏನು ಸುಧೀಂದ್ರ ನೀವಿನ್ನೂ ಚತುರ್ಭುಜರಾಗಿಲ್ಲವ?” ಎಂದು ನನಗೆ ಸಲಿಗೆಯಿಂದಲೂ ಮಾತಾಡಿಸಿದ್ದುಂಟು. ಸ್ಟುಡಿಯೋದಲ್ಲಿ ರೆಕಾರ್ಡಿಂಗ್ ಮಾಡುವ ಸಂದರ್ಭದಲ್ಲಿ ಹಾಡಿನ ಆರಂಭ ರೆಕಾರ್ಡಿಂಗ್ ಸ್ಯಾಂಪಲ್
ಕೇಳಿ ಇಲ್ಲಿ ಬಿಜಿಎಂ ಕಡಿಮೆ ಲೆವೆಲ್ ಇದೆ. ನಂದು ಮೈಕು ಸ್ವಲ್ಪದೂರ ಇದೆ”;ಎಂದೆಲ್ಲಾ ಅತ್ಯಂತ ಕಾಳಜಿಯಿಂದ ಮಾತನಾಡಿ ನಂತರ ಫೈನಲ್ ರೆಕಾರ್ಡಿಂಗ್ ಆಗುತ್ತಿತ್ತು. ಅವರಿಗೆ ಸಹ ಕಲಾವಿದರ ಬಗ್ಗೆಯೂ ಅತ್ಯಂತ ಗೌರವ.

ಭದ್ರಾವತಿಯಲ್ಲಿ ಸಂಗೀತ ವಿಭಾಗ ಪೂರ್ಣ ಆರಂಭವಾಗಿರಲಿಲ್ಲ. ಅಷ್ಟರಲ್ಲಿ ಅವರು ಶಿವಮೊಗ್ಗದಿಂದ ಬೆಂಗಳೂರಿಗೆ ಸ್ಥಳಾಂತರ‌ಗೊಂಡರು. ಅಲ್ಲಿ ತಮ್ಮ ಲೆಕ್ಕಪರಿಶೋಧಕ ವೃತ್ತಿಯನ್ನ ಮುಂದುವರೆಸಿದರು.
ಅವಕಾಶಗಳ ಬಾಗಿಲು ಅವರ ಪ್ರತಿಭೆಗೆ ವಿಶಾಲವಾಗಿ ತೆರೆದುರಕೊಂಡವು.
ಹಾಡಿನ ಡಿಸ್ಕುಗಳು, ಶರೀಫರು, ಕುವೆಂಪು, ಬೇಂದ್ರೆ ಲಕ್ಷ್ಮೀನಾರಾಯಣ ಭಟ್ಟರು..
ಹೀಗೆ ಅನೇಕ ಕವಿಗಳ ಕವಿತೆಗಳಿಗೆ ಅವರು ಕಂಠಶ್ರೀ ನೀಡಿದರು. ಕಾಡು ಕುದುರೆ ಚಿತ್ರದ ಹಾಡಿನ ಗಾಯನಕ್ಕೆ ರಾಷ್ಟ್ರ ಪ್ರಶಸ್ತಿಯ ಮನ್ನಣೆಯೂ ಅರಸಿ ಬಂದಿತು.
ನಾನು ಅವರಿಗೆ ಒಮ್ಮೆ ಎದುರಿಗೇ
ಹೇಳಿದ್ದೆ” ನೀವು ಪೂರ್ಣ ಸಿನಿಮಾ ಕ್ಷೇತ್ರಕ್ಕೆ ಹೋಗಿಬಿಟ್ಟರೆ ಕನ್ನಡ ಭಾವಗೀತೆಗಳ ಗಾಯನ ಕ್ಷೇತ್ರಕ್ಕೆ ಬಡತನ ಬರುತ್ತೆ ಅಂತ.ಅದೇನು ಅವರ ಮನಸ್ಸಿಗೆ ನಾಟಿತೋ ಗೊತ್ತಿಲ್ಲ. ಅಥವಾ ಆಲೋಚನೆಯೇ ಹಾಗಿತ್ತೋ ಏನೋ ಕನ್ನಡ ಭಾವಗೀತಾಕಾಶದ ಧೃವತಾರೆಯಾದರು. .
ನೀವೀಗ ಅವರು‌ ಹಾಡಿದ ಕುವೆಂಪು ಅವರ ಆನಂದಮಯ ಈ ಜಗ ಹೃದಯ… ಹಾಡು ಕೇಳಿರಿ. ನಿಮಗೆ
ಸೂರ್ಯೋದ ,ಚಂದ್ರೋದಯದ ಅನನ್ಯ ಕಲ್ಪನೆ ನಿಮ್ಮನ್ನ ಬಾಚಿ ತಬ್ಬುತ್ತದೆ. ಬೇಂದ್ರೆ ಅವರ ನಾರಿ ನಿನ್ನ ಮಾರಿ ಮ್ಯಾಗ ನಗೀ ನವಿಲು ಆಡತಿತ್ತ.. ಗಾಯನ ಕೇಳಿರಿ
ನಿಮಗೆ ಕವಿಯ ಭಾವವೇ ಮೈಯೊಳಗೆ ಸಂಚರಿಸಿದ ಅನುಭವವಾಗುತ್ತದೆ.

ಸುಬ್ರಹ್ಮಣ್ಯ…ಸುಬ್ಬಣ್ಣ ಆಗಿ ಕನ್ನಡ
ಗಾಯನ ಜಗತ್ತಿಗೆ ಶಿವಮೊಗ್ಗ ಸುಬ್ಬಣ್ಣ ಆಗಿ ನೀವೀಗ ಅಮರ ಧ್ವನಿ ಮೂಲಕ ಚಿರಂಜೀವಿ.
ನಿಮಗಿದೋ ನಮ್ಮ ನುಡಿ ನಮನ.