Friday, March 20, 2026
Friday, March 20, 2026
Home Blog Page 1474

ವಿಶ್ವಸಂಸ್ಥೆ ಸಭೆಯಲ್ಲಿ ಪಾಕ್ ಭಯೋತ್ಪಾದಕರ ಮೇಲಿನ ನಿರ್ಬಂಧ ಪ್ರಸ್ತಾವಕ್ಕೆ ಚೀನಾ ವಿರೋಧ

0

ಸಂಯುಕ್ತ ರಾಷ್ಟ್ರದ ಭದ್ರತಾ ಮಂಡಳಿಯಲ್ಲಿ ಭಾರತ ಮತ್ತು ಅಮೇರಿಕಾಗಳು ಸೇರಿ ಪಾಕಿಸ್ತಾನಿ ಭಯೋತ್ಪಾದಕ ಸಂಘಟನೆಯ ಮುಖಂಡ ಮಸೂದ ಅಜಹರ ಇವರ ಕಿರಿಯ ಸಹೋದರ ಅಬ್ದುಲ ರೌಫ ಅಜಹರ ಮೇಲೆ ಜಾಗತಿಕ ಸ್ತರದಲ್ಲಿ ನಿರ್ಬಂಧ ವಿಧಿಸುವ ಪ್ರಸ್ತಾವನೆಯನ್ನು ಮಂಡಿಸಿದ್ದವು.

ಈ ಪ್ರಸ್ತಾವನೆಗೆ ನಿರ್ಬಂಧ ಸಮಿತಿ’ಯ 15 ಸದಸ್ಯರ ಸಹಮತವಿದ್ದರೆ, ಅದನ್ನು ಸಮ್ಮತಿಗೊಳಿಸಲಾಗುತ್ತಿತ್ತು; ಆದರೆ ಅದಕ್ಕೆ ಚೀನಾ ವಿರೋಧಿಸಿತು.ಅಬ್ದುಲ ರೌಫ ಅಜಹರ ಕಂದಹಾರ ವಿಮಾನ ಅಪಹರಣದ ಒಬ್ಬ ಆರೋಪಿಯಾಗಿದ್ದಾನೆ.

  1. ಚೀನಾದ ವಕ್ತಾರ ಹೇಳಿರುವುದೇನೆಂದರೆ, ನಮಗೆ ಈ ಪ್ರಸ್ತಾವನೆಯ ಮೇಲೆ ವಿಚಾರ ಮತ್ತು ಅಧ್ಯಯನ ಮಾಡಲು ಮತ್ತಷ್ಟು ಕಾಲಾವಕಾಶ ಬೇಕಾಗಿದೆ. ಸಮಿತಿಯಲ್ಲಿ ಇಂತಹ ಪ್ರಸ್ತಾಪನೆಯನ್ನು ತಡೆಯುವ ನಿಯಮವಿದ್ದು ಈ ರೀತಿ ಎಷ್ಟೋ ಪ್ರಸ್ತಾಪನೆಯನ್ನು ತಡೆಯಲಾಗಿದೆ.
  2. ಅಮೇರಿಕಕಾದ ವಕ್ತಾರರು ಹೇಳಿರುವುದೇನೆಂದರೆ, ಈ ವರ್ಷ ಚೀನಾ ಎರಡನೇಯ ಬಾರಿ ಪಾಕಿಸ್ತಾನಿ ಭಯೋತ್ಪಾದಕರ ಮೇಲಿನ ನಿರ್ಬಂಧವನ್ನು ವಿರೋಧಿಸಿದೆ. ಈ ಹಿಂದೆಯೂ ಲಷ್ಕರ-ಎ-ತೋಯಬಾದ ಭಯೋತ್ಪಾದಕ ಅಬ್ದುಲ ಅರ್ ರಹಮಾನ ಮಕ್ಕಿ ಇವನ ಮೇಲಿನ ನಿರ್ಬಂಧದ ಪ್ರಸ್ತಾವನೆಯನ್ನೂ ಚೀನಾವು ವಿರೋಧಿಸಿತ್ತು.

ರೈತರ ಉತ್ಪನ್ನಗಳಿಗೆ ಬೆಲೆ ಸ್ವಾತಂತ್ರ ಚಳವಳಿ

0

ಕೃಷಿಕರ ಉತ್ಪನ್ನಗಳಿಗೆ ಉತ್ತಮ ಬೆಲೆ ಸಿಗಲಿ ಎಂಬ ಒತ್ತಾಯದಿಂದ ರಾಜ್ಯ ಸಂಘ ಮತ್ತು ಹಸಿರು ಸೇನೆ ಚಳುವಳಿ ಹಮ್ಮಿಕೊಂಡಿದೆ. ಆಗಸ್ಟ್ 12ರಂದು ಬೆಳಗ್ಗೆ 11 ಗಂಟೆಗೆ ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಚಳವಳಿ ಆರಂಭವಾಗುವುದು ಎಂದು ಸಂಘಟನೆಗಳ ಅಧ್ಯಕ್ಷ ಎಚ್.ಆರ್. ಬಸವರಾಜಪ್ಪ ಅವರು ತಿಳಿಸಿದ್ದಾರೆ.

ದೇಶ ಸ್ವಾತಂತ್ರ್ಯ ಪಡೆದು 75 ವರ್ಷ ಸಂದ ಸಂಭ್ರಮವನ್ನು ರೈತರನ್ನು ಬಿಟ್ಟು ರಾಜಕಾರಣಿಗಳು, ಕೈಗಾರಿಕಾ ಮಾಲೀಕರು, ನೌಕರ ಶಾಹಿಗಳು, ಆಚರಿಸುತ್ತಿದ್ದಾರೆ. ರೈತರಿಗೆ ನಿಜವಾದ ಸ್ವಾತಂತ್ರ್ಯ ಸಿಕ್ಕಿಲ್ಲ. ಕಾರ್ಖಾನೆಯ ಉತ್ಪಾದನೆಗಿಂತ ರೈತರ ಉತ್ಪಾದನೆಗಳಿಗೂ ಬೆಲೆ ಭದ್ರತೆ ಕಾಯ್ದೆ ಜಾರಿಯಾಗಬೇಕು. ಕೃಷಿ ಆಯೋಗದ ಮಾರ್ಗದರ್ಶನದಲ್ಲಿಯೇ ಕಾಯ್ದೆ ಇರಬೇಕು. ಬೆಲೆಯ ಮೋಸದಿಂದಾಗಿ ರೈತರ ಮೇಲಿರುವ ಸಾಲದ ಹೊರೆಯನ್ನು ಸರ್ಕಾರವೇ ಭರಿಸಬೇಕು ಎಂದು ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

ದೆಹಲಿಯಲ್ಲಿ ಕೋವಿಡ್ ಆತಂಕ ಮಾಸ್ಕ್ ಕಡ್ಡಾಯ

0

ದೆಹಲಿಯಲ್ಲಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ದೆಹಲಿ ಸರ್ಕಾರವು ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಜನರು ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿದೆ.

ಉಲ್ಲಂಘನೆ ಮಾಡಿದರೆ, 500 ರೂಪಾಯಿ ದಂಡ ವಿಧಿಸಲಾಗುತ್ತದೆ ಎಂದು ಸೂಚನೆ ಹೊರಡಿಸಿದೆ.

ಅಧಿಸೂಚನೆಯ ಈ ನಿಬಂಧನೆಯ ಅಡಿಯಲ್ಲಿನ ದಂಡವು ಖಾಸಗಿ 4 ಚಕ್ರದ ವಾಹನಗಳಲ್ಲಿ ಒಟ್ಟಿಗೆ ಪ್ರಯಾಣಿಸುವ ವ್ಯಕ್ತಿಗಳಿಗೆ ಅನ್ವಯವಾಗುವುದಿಲ್ಲ ಎಂದು ಎಎನ್‌ಐ ವರದಿ ಮಾಡಿದೆ.

ಆರೋಗ್ಯ ಬುಲೆಟಿನ್ ಪ್ರಕಾರ, ರಾಷ್ಟ್ರೀಯ ರಾಜಧಾನಿಯಲ್ಲಿ ಬುಧವಾರ ಹೊಸ ಕೊರೋನಾ ಪ್ರಕರಣಗಳಲ್ಲಿ ಸ್ವಲ್ಪ ಇಳಿಕೆಯಾಗಿದೆ. ಹಿಂದಿನ ದಿನ ವರದಿಯಾದ 2,495 ಕ್ಕೆ ಹೋಲಿಸಿದರೆ 2,146 ಕ್ಕೆ ಇಳಿದಿದೆ, ಆದಾಗ್ಯೂ, ಸಾವಿನ ಸಂಖ್ಯೆ 8ಕ್ಕೆ ಏರಿದೆ.

ಕೊರೋನಾ ಪಾಸಿಟಿವಿಟಿ ದರವು ಶೇ. 17.83 ಕ್ಕೆ ಏರಿದೆ, ಮತ್ತು ಸಕ್ರಿಯ ಪ್ರಕರಣಗಳ ಸಂಖ್ಯೆ 8,205 ರಷ್ಟಿದೆ.ಇದರಲ್ಲಿ 5,549 ರೋಗಿಗಳು ಹೋಮ್ ಐಸೋಲೇಷನ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಉದ್ಯೋಗ ಖಾತರಿ ಯೋಜನೆಗೆ ₹15000 ಹೆಚ್ಚುವರಿ ನೀಡಲು ಚಿಂತನೆ

0

ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ (ಎಂಜಿಎನ್‌ಆರ್‌ಇಜಿಎಸ್‌)ಗೆ ಹೆಚ್ಚುವರಿಯಾಗಿ 15 ಸಾವಿರ ಕೋಟಿ ರೂ. ನೀಡಲು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ.
ಕೇಂದ್ರ ಗ್ರಾಮೀಣಾಭಿವೃದ್ಧಿ ಖಾತೆಯಿಂದ ಹೆಚ್ಚುವರಿಯಾಗಿ ಶೇ.20 ಮೊತ್ತ ನೀಡಬೇಕು ಎಂದು ಕೋರಿಕೆ ಸಲ್ಲಿಕೆಯಾಗಿದ್ದು, ಅದಕ್ಕೆ ಸಮ್ಮತಿ ನೀಡುವ ಸಾಧ್ಯತೆಗಳು ಅಧಿಕವಾಗಿವೆ.
ಕರ್ನಾಟಕ, ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶ ಸೇರಿದಂತೆ ಹಲವು ಸರ್ಕಾರಗಳಿಂದಲೂ ಕೂಡ ಹೆಚ್ಚುವರಿ ಮೊತ್ತ ನೀಡುವ ಬಗ್ಗೆ ಒತ್ತಡಗಳು ಹೆಚ್ಚುತ್ತಿವೆ.
ರಾಜ್ಯಗಳು 5,517.87 ಕೋಟಿ ರೂ. ಮೊತ್ತವನ್ನು ಪಾವತಿ ಮಾಡಲು ರಾಜ್ಯಗಳು ಬಾಕಿ ಉಳಿಸಿಕೊಂಡಿವೆ. ಕರ್ನಾಟಕ 462.78 ಕೋಟಿ ರೂ., ಪಶ್ಚಿಮ ಬಂಗಾಳ 2,636.71 ಕೋಟಿ ರೂ., ಬಿಹಾರ 1,160.77 ಕೋಟಿ ರೂ., ಉತ್ತರ ಪ್ರದೇಶ 661.42 ಕೋಟಿ ರೂ. ಪಾವತಿ ಮಾಡಲು ಇದೆ ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿವೆ.
ಪ್ರಸಕ್ತ ವರ್ಷದ ಮುಂಗಡ ಪತ್ರದಲ್ಲಿ ಎಂಜಿಎನ್‌ಆರ್‌ಇಜಿಎಸ್‌ಗೆ 73 ಸಾವಿರ ಕೋಟಿ ರೂ. ಮೀಸಲಾಗಿ ಇರಿಸಲಾಗಿತ್ತು. ನಂತರ ಈ ಮೊತ್ತವನ್ನು 98 ಸಾವಿರ ಕೋಟಿ ರೂ.ಗಳಿಗೆ ಹೆಚ್ಚಿಸಲಾಗಿತ್ತು. ಈ ಪೈಕಿ 37,500 ಕೋಟಿ ರೂ. ಮೊತ್ತವನ್ನು ರಾಜ್ಯಗಳಿಗೆ ನೀಡಲಾಗಿದೆ.

ಉಕ್ರೇನ್ ಮೇಲೆ ನಿಗಾ ಇರಿಸಲು ರಷ್ಯ ಉಪಗ್ರಹ ಉಡಾವಣೆ

0

ಮಂಗಳವಾರ ರಷ್ಯಾವು ಕಝಕ್ಸ್ತಾನದಿಂದ ಇರಾನ್ ನ ಉಪಗ್ರಹವನ್ನು ಅಂತರಿಕ್ಷಕ್ಕೆ ಉಡಾಯಿಸಿದ್ದು ಉಪಗ್ರಹ ಯಶಸ್ವಿಯಾಗಿ ಕಕ್ಷೆ ಪ್ರವೇಶಿಸಿದೆ ಎಂದು ವರದಿಯಾಗಿದೆ. ಉಕ್ರೇನ್ ನ ಮಿಲಿಟರಿ ನೆರೆಗಳ ಮೇಲೆ ನಿಗಾ ವಹಿಸಲು ಈ ಉಪಗ್ರಹವನ್ನು ಬಳಸುವ ಸಾಧ್ಯತೆಯಿದೆ ಎಂದು ರಕ್ಷಣಾ ತಜ್ಞರು ತಿಳಿಸಿದ್ದಾರೆ.

ಉಕ್ರೇನ್ ಮೇಲಿನ ಆಕ್ರಮಣದ ಬಳಿಕ ಪಾಶ್ಚಿಮಾತ್ಯ ದೇಶಗಳ ನಿರ್ಬಂಧದ ನಂತರ ಅಂತರಾಷ್ಟ್ರೀಯ ವೇದಿಕೆಯಲ್ಲಿ ಒಬ್ಬಂಟಿಯಾಗುವ ಪ್ರಮೇಯವನ್ನು ನಿವಾರಿಸಿಕೊಳ್ಳಲು ರಷ್ಯಾ ಮಧ್ಯಪ್ರಾಚ್ಯ, ಏಷ್ಯಾ ಮತ್ತು ಆಫ್ರಿಕಾ ದೇಶಗಳತ್ತ ಗಮನ ಕೇಂದ್ರೀಕರಿಸಿದ್ದು ಬಾಹ್ಯಾಕಾಶ ಕಾರ್ಯಕ್ರಮಗಳಿಗೆ ಹೊಸ ಗ್ರಾಹಕರನ್ನು ಸೆಳೆಯಲು ಪ್ರಯತ್ನಿಸುತ್ತಿದೆ.

ಕಝಕ್ಸ್ತಾನದಲ್ಲಿ ರಷ್ಯಾ ನಿಯಂತ್ರಣದಲ್ಲಿರುವ ಬೈಕೊನುರ್ ಬಾಹ್ಯಾಕಾಶ ಕೇಂದ್ರದಲ್ಲಿ ಉಡಾವಣೆ ಕಾರ್ಯ ಯಶಸ್ವಿಯಾದ ನಂತರ ಪ್ರತಿಕ್ರಿಯಿಸಿದ ರಷ್ಯಾ ಬಾಹ್ಯಾಕಾಶ ಯೋಜನೆ ಮುಖ್ಯಸ್ಥ ಯೂರಿ ಬೊರಿಸೋವ್ ಇದು ರಷ್ಯಾ ಇರಾನ್ ದ್ವಿಪಕ್ಷೀಯ ಸಹಕಾರ ಕ್ಷೇತ್ರದಲ್ಲಿನ ಪ್ರಮುಖ ಮೈಲುಗಲ್ಲಾಗಿದ್ದು, ನೂತನ ಹಾಗೂ ವಿಸ್ತತ ಯೋಜನೆಗಳ ಅನುಷ್ಟಾನಕ್ಕೆ ಮಾರ್ಗವನ್ನು ತೆರೆದಿದೆ ಎಂದು ಹೇಳಿದ್ದಾರೆ.

ಇದೊಂದು ಐತಿಹಾಸಿಕ ಉಪಕ್ರಮವಾಗಿದ್ದು 2 ದೇಶಗಳ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಸಂವಾದಕ್ಕೆ ಅವಕಾಶ ಮಾಡಿಕೊಟ್ಟಿದೆ ಎಂದು ಇರಾನ್ ನ ದೂರ ಸಂಪರ್ಕ ಸಚಿವ ಇಸ್ಸಾ ಝರೆಪೌರ್ ಹೇಳಿದ್ದಾರೆ.

ಉಪಗ್ರಹದ ನಿಯಂತ್ರಣವನ್ನು ಇರಾನ್ ಗೆ ವಹಿಸಿಕೊಡುವ ಮೊದಲು, ಹಲವು ತಿಂಗಳ ಕಾಲ ಇದನ್ನು ಉಕ್ರೇನ್ ಸೇನಾ ನೆಲೆಯ ಮೇಲೆ ನಿಗಾ ಇರಿಸಲು ಬಳಸಲು ರಷ್ಯಾ ಉದ್ದೇಶಿಸಿದೆ ಎಂದು ಪಾಶ್ಚಿಮಾತ್ಯ ದೇಶಗಳ ಗುಪ್ತಚರ ಇಲಾಖೆಯ ಮಾಹಿತಿಯನ್ನು ಉಲ್ಲೇಖಿಸಿ ಕಳೆದ ವಾರ ದಿ ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿತ್ತು.

ಆದರೆ,ಇದನ್ನು ನಿರಾಕರಿಸಿರುವ ಇರಾನ್ ಬಾಹ್ಯಾಕಾಶ ಸಂಸ್ಥೆ ಐಎಸ್‌ಎ, ಉಪಗ್ರಹದ ಮೊದಲ ಸಿಗ್ನಲ್ ಅನ್ನು ತನ್ನ ನಿಯಂತ್ರಣ ಕೇಂದ್ರ ಈಗಾಗಲೇ ಪಡೆದಿದೆ. ಯಾವುದೇ ಮೂರನೇ ದೇಶಕ್ಕೆ ಇದನ್ನು ಪಡೆಯಲು ಅವಕಾಶವಿಲ್ಲ ಎಂದು ಪ್ರತಿಕ್ರಿಯಿಸಿದೆ.

ಅನುಕಂಪಾಧಾರಿತ ಉದ್ಯೋಗ ಪಡೆಯುವುದು ಹಕ್ಕಲ್ಲ- ಸುಪ್ರೀಂಕೋರ್ಟ್

0

ಉದ್ಯೋಗಿ ಮರಣ ಹೊಂದಿದ ನಂತರ ಅವರ ಕುಟುಂಬದ ಓರ್ವ ಸದಸ್ಯನಿಗೆ ಅನುಕಂಪದ ಆಧಾರದಲ್ಲಿ ನೀಡುವ ಉದ್ಯೋಗ ಸ್ಥಾಪಿತವಾದ ಹಕ್ಕಲ್ಲ. ಈ ರೀತಿಯ ಉದ್ಯೋಗ ಪಡೆದವರಿಂದ ಕರ್ತವ್ಯ ಲೋಪಗಳಾದರೇ, ಅವರಿಗೆ ನೀಡಲಾದ ಹುದ್ದೆಯ ಅರ್ಹತೆಯನ್ನು ಹೊಂದುವಲ್ಲಿ ವಿಫಲವಾದರೇ, ಅಂತಹವರನ್ನು ಕೆಲಸದಿಂದ ತೆಗೆಯ ಬಹುದು ಎಂದು ಸುಪ್ರೀಂ ಕೋರ್ಟ ಅಭಿಪ್ರಾಯ ಪಟ್ಟಿದೆ.

ಈ ಸಂಬಂಧ ಪ್ರಕರಣವೊಂದರ ವಿಚಾರಣೆ ನಡೆಸಿದಂತ ನ್ಯಾಯಮೂರ್ತಿಗಳಾದ ಡಿವೈ ಚಂದ್ರಚೂಡ್ ಮತ್ತು ಎ.ಎಸ್ ಬೊಪಣ್ಣ ಅವರನ್ನು ಒಳಗೊಂಡಂತ ನ್ಯಾಯಪೀಠವು, ಅನುಕಂಪದ ಆಧಾರದ ಉದ್ಯೋಗವು ಸಾಮಾನ್ಯ ನೇಮಕಾತಿಯಲ್ಲಿ ಇರುವ ವಿನಾಯ್ತಿಯಷ್ಟೇ. ದುಡಿಯುವ ವ್ಯಕ್ತಿಯನ್ನು ಕಳೆದುಕೊಂಡ ಸಂತ್ರಸ್ತ ಕುಟುಂಬಕ್ಕೆ ಆರ್ಥಿಕ ಭದ್ರತೆ ಕಲ್ಪಿಸಲು ಇರುವ ಮಾನವೀಯ ನೆರವಾಗಿದೆ. ಈ ರೀತಿಯ ಸಹಾನುಭೂತಿಯ ಉದ್ಯೋಗ ಪಡೆದವರು, ಹುದ್ದೆ ಆಪೇಕ್ಷಿಸುವಂತಹ ಅರ್ಹತೆಗಳನ್ನು ಹೊಂದಿರಬೇಕು. ಕರ್ತವ್ಯಪರರಾಗಬೇಕು ಎಂದು ಹೇಳಿದೆ.

ಮೊಹಮ್ಮದ್ ರೆಹಮಾನ್ ಖಾನ್ ಅವರ ತಂದೆಯ ನಿಧನದ ನಂತರ, ಉತ್ತರ ಪ್ರದೇಶದ ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆಯಲ್ಲಿ ಬೆರಳಚ್ಚುಗಾರರ ಉದ್ಯೋಗವನ್ನು 2015ರಲ್ಲಿ ನೀಡಲಾಗಿತ್ತು. ಈ ಹುದ್ದೆಗೆ ಆಪೇಕ್ಷಿತವಾಗಿದ್ದ ಪ್ರತಿ ನಿಮಿಷಕ್ಕೆ 25 ಪದಗಳ ಟೈಪಿಂಗ್ ವೇಗವನ್ನು ಸಾಧಿಸುವಂತೆ ಅವರಿಗೆ ಇಲಾಖೆ ಕಾಲಾವಕಾಶ ನೀಡಿತ್ತು.

ಆದರೆ, ಮೊಹಮ್ಮದ್ ರೆಹಮಾನ್ ಖಾನ್, ನಿಗದಿತ ಸಮಯದಲ್ಲಿ ಈ ಸಾಮರ್ಥ್ಯ ಹೊಂದಲು ವಿಫಲವಾಗಿದ್ದರು. ಹೀಗಿದ್ದರೂ ಹೆಚ್ಚುವರಿ ಕಾಲಾವಕಾಶ ನೀಡಿದ್ದರೂ, ಅವರು ಕೌಶಲ್ಯ ಸಿದ್ದಿಸಲಿಲ್ಲ. ಹೀಗಾಗಿ ಪೂರ್ವ ಷರತ್ತಿನ ಅನ್ವಯದ ಕಾರಣ, ಕೆಲಸದಿಂದ ತೆಗೆದು ಹಾಕಲಾಗಿತ್ತು. ಇದನ್ನು ಪ್ರಶ್ನಿಸಿ ಅಲಹಾಬಾದ್ ಹೈಕೋರ್ಟ್ ಗೆ ಮೊರೆ ಹೋಗಿದ್ದರು.

ಅಲ್ಲಿ 4ನೇ ದರ್ಜೆಯ ಉದ್ಯೋಗ ನೀಡುವಂತೆ ಆದೇಶಿಸಲಾಗಿತ್ತು. ಇದರ ವಿರುದ್ಧ ಉತ್ತರ ಪ್ರದೇಶ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು.
ಈ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಈ ಅಭಿಪ್ರಾಯ ವ್ಯಕ್ತ ಪಡಿಸಿದೆ.

ಸಂಸ್ಕೃತ ಕಲಿಕೆಯಿಂದ ಭಾರತದ ಸಂಸ್ಕೃತಿ ತಿಳಿಯುತ್ತದೆ- ಭಾನು ಪ್ರಕಾಶ್

0

ಸಂಸ್ಕೃತ ದೇವ ಭಾಷೆ, ಅದು ಸುಂದರವಾದ ಸಂಸ್ಕರಿಸಿದ ಭಾಷೆ, ಇದನ್ನು ಎಲ್ಲರೂ ಕಲಿಯಬೇಕು ಎಂದು ಮಾಜಿ ವಿಧಾನ ಪರಿಷತ್ ಸಭಾ ಸದಸ್ಯ ಎಮ್.ಬಿ. ಭಾನುಪ್ರಕಾಶ್ ತಿಳಿಸಿದರು.
ಅವರು ಬುಧವಾರ ಸಂಜೆ ಕೋಟೆ ಪೋಲಿಸ್ ಠಾಣೆಯ ರಸ್ತೆಯಲ್ಲಿರುವ ಚಂಡಿಕ ದುರ್ಗ ಪರಮೇಶ್ವರಿ ದೇವಸ್ಥಾನದಲ್ಲಿ ಸಂಸ್ಕೃತ ಭಾರತಿ, ತರುಣೋದಯ ಸಂಸ್ಕೃತ ಸೇವಾ ಸಂಸ್ಥೆ ಮತ್ತು ದೇವಾಲಯದ ವತಿಯಿಂದ ಐದು ವರ್ಷಗಳ ಒಳಗಿನ ಮಕ್ಕಳಿಗೆ ಏರ್ಪಡಿಸಿದ್ದ ಸುಭಾಷಿತ ಕಂಠಪಾಠ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತ ಎಲ್ಲರೂ ಸಂಸ್ಕೃತವನ್ನು ಕಲಿಯಬೇಕು, ಈ ಭಾಷೆಯಲ್ಲಿ ಸಂಸ್ಕೃತಿಯ ಸೊಗಡಿದೆ, ಭಾರತ ದೇಶದ ಎರಡು ಪ್ರಮುಖಗಳಲ್ಲಿ ಸಂಸ್ಕೃತಿ ಮತ್ತು ಸಂಸ್ಕೃತ ಸೇರಿದೆ, ಸಂಸ್ಕೃತ ಕಲಿತರೆ ಸಂಸ್ಕೃತಿ ತಾನಾಗಿಯೇ ತಿಳಿಯುತ್ತದೆ. ಮಕ್ಕಳಿಗೆ ಬಾಲ್ಯದಲ್ಲಿಯೇ ಸಂಸ್ಕೃತ ಕಲಿಸಬೇಕು ಎಂದು ಪೋಷಕರಿಗೆ ಕರೆ ನೀಡಿದರು. ಸಂಸ್ಕೃತ ಕಲಿತರೆ ಇತರೇ ಭಾಷೆ ಕಲಿಯಲು ಸುಲಭವಾಗುತ್ತದೆ, ಭಾರತದ ವೈಶಿಷ್ಟ್ಯಗಳನ್ನು ತಿಳಿಯಬೇಕಾದರೆ ಪ್ರತಿಯೊಬ್ಬರೂ ಸಂಸ್ಕೃತ ಕಲಿಯಲೇ ಬೇಕು ಎಂದು ಈ ಸಂದರ್ಭದಲ್ಲಿ ಅವರು ತಿಳಿಸಿದರು. ಸುಭಾಷಿತಗಳು ನಮಗೆ ಉತ್ತಮವಾದ ಜೀವನವನ್ನು ನಡೆಸಲು ಸಹಕಾರಿಯಾಗುತ್ತದೆ, ಚಿಕ್ಕ ಚಿಕ್ಕ ಮಕ್ಕಳಲ್ಲಿ ಇಂತಹ ಕಾರ್ಯಕ್ರಮ ಹಮ್ಮಿಕೊಂಡ ಸಂಸ್ಥೆಗಳ ಕಾರ್ಯವನ್ನು ಶ್ಲಾಘಿಸಿದರು. ಸಮಾರಂಭದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಕಾರ್ಯಕರ್ತರಾದ ಪಟ್ಟಾಭಿರಾಮ್, ಚಂಡಿಕ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ವಿದ್ವಾನ್ ಶಂಕರಾನಂದ ಜೊಯಿಸ್, ಸಂಸ್ಕೃತ ಭಾರತಿ ಶಿವಮೊಗ್ಗ ಜಿಲ್ಲೆಯ ಸಂಯೋಜಕ ಟಿ.ವಿ.ನರಸಿಂಹ ಮೂರ್ತಿ, ಶಿವಮೊಗ್ಗ ನಗರ ಸಂಯೋಜಕಿ ಪ್ರೇಮಾ ವಿಜಯಕುಮಾರ್, ವಿದ್ವಾನ್ ಮಹೀಪತಿ ಎಸ್ ಜೊಯಿಸ್, ಉಪಸ್ಥಿತರಿದ್ದರು.

ಗ್ರಾಮ ಪಂಚಾಯತಿ ವ್ಯವಸ್ಥೆಯ ಅಧಿಕಾರ ಮೊಟಕು ಮಾಡುವ ಯತ್ನ ನಡೆಯುತ್ತಿದೆ- ಆರೋಪ

0

ಗ್ರಾಮ ಪಂಚಾಯಿತಿಗಳು ಹಳ್ಳಿಗಳಿಗೆ ಸರ್ಕಾರ ಇದ್ದಂತೆ. ಅಧಿಕಾರ ವಿಕೇಂದ್ರೀಕರಣ ಮಾಡಿ ಗ್ರಾಮ ಸ್ವರಾಜ್ಯಕ್ಕೆ ನಾಂದಿ ಹಾಡಿದ ಮೊದಲ ರಾಜ್ಯ ಕರ್ನಾಟಕ. ಆದರೆ, ಈಗ ಅದೇ ಸರ್ಕಾರ, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ 1993ರ 12ಎಲ್, 43ಎ , 48(4-5)ರ ಅನ್ವಯ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರನ್ನು ವಜಾಮಾಡುವ ಪ್ರಕ್ರಿಯೆ ನಿಯಮಗಳು-2022 ಕರಡು ಅಧಿಸೂಚನೆ ಹೊರಡಿಸುವ ಮೂಲಕ ಅವರ ಅಧಿಕಾರ ಮೊಟಕುಗೊಳಿಸುವ ಹುನ್ನಾರ ನಡೆಸಿದೆ ಎಂಬ ಆರೋಪ ಕೇಳಿ ಬರುತ್ತಿವೆ.

ದುರ್ನಡತೆ ಹೆಸರಿನಲ್ಲಿ ದೂರು ಸ್ವೀಕಾರ, ತನಿಖೆ, ವಿಚಾರಣೆ ಜವಾಬ್ದಾರಿಯನ್ನು ಕೆಳ ಹಂತದ ಅಧಿಕಾರಿಗಳಿಗೆ ನೀಡುವ ಮೂಲಕ ಸರ್ಕಾರ ಗ್ರಾಪಂ ಪ್ರತಿನಿಧಿಗಳ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಹಿಡಿತದಲ್ಲಿಟ್ಟುಕೊಳ್ಳಲು ಸರ್ಕಾರ ಹೊರಟಿದೆ ಎಂಬ ದೂರು ಕೇಳಿ ಬರುತ್ತಿವೆ. ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಅಧಿಕಾರಶಾಹಿ ವ್ಯವಸ್ಥೆಯ ಮೂಲಕ ಕಟ್ಟಿಹಾಕುವ ಹುನ್ನಾರ ಇದಾಗಿದೆ ಎಂದು ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ಸದಸ್ಯರ ಮಹಾ ಒಕ್ಕೂಟ ಟೀಕಿಸಿದೆ. ಪಿಡಿಒ ಹೊರತುಪಡಿಸಿ ಎಲ್ಲ ಹಂತದ ಅಧಿಕಾರಿಗಳ ಮೂಲಕ ಪಂಚಾಯಿತಿ ಸದಸ್ಯರನ್ನು ನಿಯಂತ್ರಿಸುವ ಪ್ರಯತ್ನದ ಫಲ ಈ ಅಧಿಸೂಚನೆಯಾಗಿದೆ. ಜೊತೆಗೆ ಚುನಾಯಿತ ಪ್ರತಿನಿಧಿಗಳ ಕರ್ತವ್ಯದಲ್ಲಿ ಅಧಿಕಾರಶಾಹಿ ಹಸ್ತಕ್ಷೇಪ ಮಾಡುವ ಅಧಿಕಾರ ಕೊಡುವ ಪ್ರಯತ್ನ ನಡೆದಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.

ನಮ್ಮ ಹೆಮ್ಮೆಯ ರಾಷ್ಡ್ರಧ್ವಜಕ್ಕೆ ಹೇಗೆ ಗೌರವ ಸಲ್ಲಿಸಬೇಕು?

0

ಈ ವರ್ಷದ ಸ್ವಾತಂತ್ರ್ಯ ದಿನ ಪ್ರತೀ ವರ್ಷದಂತೆ ಅಲ್ಲ. ನಮಗೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷಗಳು ಪೂರ್ಣಗೊಂಡು ಅಮೃತ ಮಹೋತ್ಸವ ಆಚರಿಸುತ್ತಿದ್ದೇವೆ. ಆ.13ರಿಂದ 15ರ ವರೆಗೆ ದೇಶದ ಮನೆ ಮನೆಗಳಲ್ಲಿ ತ್ರಿವರ್ಣ ಧ್ವಜ ಹಾರಿಸಲು ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಕರೆ ಕೊಟ್ಟಿದ್ದಾರೆ.

ಧ್ವಜದಲ್ಲಿ ಯಾವಾಗಲೂ ಕೇಸರಿ ಬಣ್ಣ ಮೇಲೆ ಬಂದು, ಹಸುರು ಬಣ್ಣ ಕೆಳಗಿರಬೇಕು.
ಹರಿದು ಹೋಗಿರುವ ಧ್ವಜ ಹಾರಿಸುವಂತಿಲ್ಲ. ತ್ರಿವರ್ಣ ಧ್ವಜಕ್ಕಿಂತ ಎತ್ತರದಲ್ಲಿ ಅಥವಾ ಅದಕ್ಕೆ ಸರಿ ಸಮನಾಗಿ ಬೇರೆ ಯಾವುದೇ ಧ್ವಜ ಹಾರಿಸುವಂತಿಲ್ಲ.
ಧ್ವಜವನ್ನು ಅಲಂಕಾರಿಕ ವಸ್ತುವಾಗಿ ಬಳಸುವಂತಿಲ್ಲ.
ತೊಡುವ ಬಟ್ಟೆಯಲ್ಲಿ ಸೊಂಟಕ್ಕಿಂತ ಕೆಳಭಾಗದಲ್ಲಿ ಧ್ವಜವಿರುವಂತಿಲ್ಲ.
ಒಂದೇ ದಾರದಲ್ಲಿ ಎರಡು ಧ್ವಜ ಹಾರಿಸುವಂತಿಲ್ಲ.
ಧ್ವಜವನ್ನು ಯಾವುದೇ ಕಾರಣಕ್ಕೂ ನೆಲಕ್ಕೆ ತಾಕಿಸುವಂತಿಲ್ಲ.

ಧ್ವಜವನ್ನು ಅತ್ಯಂತ ಗೌರವಯುತವಾಗಿ ಹಾರಿಸಬೇಕು. ಧ್ವಜಸ್ತಂಭಕ್ಕೆ ಏರಿಸುವಾಗ ವೇಗವಾಗಿ ಏರಿಸಬೇಕು ಹಾಗೆಯೇ ಸ್ತಂಭದಿಂದ ಇಳಿಸುವಾಗ ನಿಧಾನವಾಗಿ ಇಳಿಸಬೇಕು.

ಒಂದು ವೇಳೆ ಧ್ವಜವು ಹರಿದರೆ, ಅಥವಾ ಬಳಸಲಾರದ ಸ್ಥಿತಿಗೆ ಬಂದರೆ, ಅದನ್ನು ಖಾಸಗಿಯಾಗಿ ಗೌರವಯುತವಾಗಿ ಸುಟ್ಟು ಹಾಕಬೇಕು.

ಧ್ವಜವನ್ನು ಸ್ವಚ್ಛ, ಸಮತಟ್ಟಾದ ಸ್ಥಳದಲ್ಲಿ ಇಟ್ಟುಕೊಳ್ಳಿ. ಮೊದಲಿಗೆ ಕೇಸರಿ ಮತ್ತು ಹಸುರು ಬಣ್ಣದ ಬಟ್ಟೆಯನ್ನು ಬಿಳಿ ಬಣ್ಣದ ಬಟ್ಟೆಯ ಕೆಳಗೆ ಮಡಚಿ. ಆಯತಾಕಾರಾ ದಲ್ಲಿರುವ ಬಿಳಿ ಬಣ್ಣದ ಬಟ್ಟೆಯಲ್ಲಿ ಕೇವಲ ಅಶೋಕ ಚಕ್ರ ಕಾಣುವಂತೆ ಇನ್ನೆರೆಡು ತುದಿಗಳನ್ನು ಮಡಚಿ. ಅನಂತರ ಭದ್ರವಾದ ಸ್ಥಳದಲ್ಲಿ ಇಡಬೇಕು.

ರಾಜ್ಯವ್ಯಾಪಿ ಸುರಿದ ಮಳೆ ಕೆರೆಕಟ್ಟೆಗಳು ಭರ್ತಿ ರೈತರಿಗೆ ಹರ್ಷ

0

ರಾಜ್ಯದ ಕರಾವಳಿ, ಮಲೆನಾಡು ಮಾತ್ರವಲ್ಲದೆ ಬಯಲುಸೀಮೆಯಲ್ಲೂ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ನದಿ, ಹಳ್ಳ-ತೊರೆಗಳು ತುಂಬಿ ಹರಿಯುತ್ತಿರುವುದರೊಂದಿಗೆ ಶೇ.71ಕ್ಕೂ ಹೆಚ್ಚು ಪ್ರಮುಖ ಕೆರೆ, ಸರೋವರಗಳು ತುಂಬಿದ್ದು ಅಂತರ್ಜಲ ಮಟ್ಟವೂ ಹೆಚ್ಚಾಗುವ ಲಕ್ಷಣಗಳು ಕಂಡುಬಂದಿವೆ.

ಈ ಬಾರಿ ಉತ್ತಮ ವರ್ಷಧಾರೆಯಿಂದ ಎಲ್ಲ ಕೆರೆ- ಕಟ್ಟೆಗಳಲ್ಲೂ ನೀರು ನಳನಳಿಸುತ್ತಿದೆ. ಲಭ್ಯ ಮಾಹಿತಿಯ ಪ್ರಕಾರ, 25 ಜಿಲ್ಲೆಗಳಲ್ಲಿರುವ 10500ಕ್ಕೂ ಅಧಿಕ ದೊಡ್ಡ ಮತ್ತು ಸಣ್ಣ ಕೆರೆಗಳಲ್ಲಿ 7,522 ಪ್ರಮುಖ ಕೆರೆಗಳು ಮಳೆಗಾಲ ಮುಗಿಯುವ ಮುನ್ನವೇ ಭರ್ತಿಯಾಗಿ ಕೋಡಿ ಹರಿದಿದ್ದು ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

ರಾಜ್ಯದಲ್ಲಿ ಕೋಲಾರ ಜಿಲ್ಲೆಯಲ್ಲಿ 2500ಕ್ಕೂ ಹೆಚ್ಚು ಕೆರೆಗಳಿದ್ದು ಬಹುತೇಕ ಎಲ್ಲವೂ ಭರ್ತಿಯಾಗಿವೆ. ಕಳೆದ ವರ್ಷವೇ ಇಲ್ಲಿ ಕೆಸಿ ವ್ಯಾಲಿ ನೀರು ಹರಿದು ಬಂದಿದ್ದರಿಂದ ನೀರಿನ ಪ್ರಮಾಣ ಹೆಚ್ಚಿತ್ತು. ಈ ಬಾರಿ ನಿರಂತರ ಮಳೆಗೆ 1875ಕ್ಕೂ ಹೆಚ್ಚು ಕೆರೆಗಳು ಕೋಡಿ ಹರಿದಿವೆ. ಕಳೆದ ವರ್ಷ ಬಿದ್ದ ಮಳೆಯಿಂದಲೇ ಕೋಲಾರಮ್ಮನ ಕೆರೆ, ಕಣ್ಣೂರು ಕೆರೆಯೂ ಸೇರಿದಂತೆ ಇಲ್ಲಿನ ಬಹುತೇಕ ಕೆರೆಗಳು 25 ವರ್ಷಗಳ ಬಳಿಕ ಕೋಡಿ ಬಿದ್ದಿದ್ದವು. ಇದೀಗ ಮತ್ತೆ ಅದರ ಪುನರಾವರ್ತನೆಯಾಗಿದೆ.

ಇನ್ನು ರಾಮನಗರ ಜಿಲ್ಲೆಯಲ್ಲಿರುವ ಒಟ್ಟು 1451 ಕೆರೆಗಳಲ್ಲಿ ಕಳೆದೊಂದು ವಾರದಿಂದ ನಿರಂತರವಾಗಿ ಸುರಿದ ಮಳೆಗೆ 1281 ಭರ್ತಿಯಾಗಿವೆ. ಜಿಲ್ಲೆ​ಯಲ್ಲಿ ಅತಿ ದೊಡ್ಡ ಕೆರೆ​ಗ​ಳಾದ ಮಾಗಡಿ ತಾಲೂಕು ಕುದೂರು ಹೋಬ​ಳಿಯ ಮಾಯ​ಸಂದ್ರ ಕೆರೆ 20 ವರ್ಷ​ಗಳ ನಂತರ ಕೋಡಿ ಬಿದ್ದರೆ, ರಾಮ​ನ​ಗರ ತಾಲೂ​ಕಿನ ಕೇತೋ​ಹಳ್ಳಿ ಕೆರೆ 15 ವರ್ಷಗಳ ತರು​ವಾಯ ಮೈದುಂಬಿ​ಕೊಂಡಿದೆ.

ಮಂಡ್ಯ ಜಿಲ್ಲೆಯಲ್ಲಿ 1024 ಕೆರೆಗಳಿವೆ. ವರುಣಾರ್ಭಟಕ್ಕೆ ಬಹುತೇಕ ಕೆರೆಗಳು ಭರ್ತಿಯಾಗಿವೆ. ಸುಮಾರು 600ಕ್ಕೂ ಹೆಚ್ಚು ಕೆರೆಗಳು ಕೋಡಿ ಹರಿದಿದ್ದರೆ, ಮಳೆ ನೀರಿನ ರಭಸಕ್ಕೆ ನೂರಾರು ಕೆರೆಗಳು ಒಡೆದುಹೋಗಿವೆ. ಮಳೆಯಾಶ್ರಿತ ಪ್ರದೇಶದಲ್ಲಿದ್ದ ಕೆರೆಗಳೆಲ್ಲವೂ ತುಂಬಿ ಹರಿಯುತ್ತಿವೆ. ದುರ್ದೈವವೆಂದರೆ ಕೆ.ಆರ್‌.ಪೇಟೆ ತಾಲೂಕು ಸಂತೇಬಾಚಹಳ್ಳಿ ಹೋಬಳಿಯ ನಾಲ್ಕೈದು ಕೆರೆಗಳು ಭರ್ತಿಯಾದ ಸಂತಸದಲ್ಲಿ ರೈತರಿದ್ದರು. ಆದರೆ ಮಳೆಯ ಪ್ರಮಾಣ ಹೆಚ್ಚಾಗಿದ್ದರಿಂದ ಆ ಕೆರೆಗಳು ಒಡೆದು ಖಾಲಿಯಾಗಿವೆ.

ಹಾಸನ ಜಿಲ್ಲೆಯಲ್ಲಿ 250ರಲ್ಲಿ 200 ಕೆರೆಗಳು ಭರ್ತಿಯಾಗಿದ್ದರೆ, ತುಮಕೂರು ಜಿಲ್ಲೆಯ 371 ಕೆರೆಗಳ ಪೈಕಿ 240 ಕೆರೆಗಳು ಭರ್ತಿಯಾಗಿವೆ. ಚಾಮರಾಜನಗರ ಜಿಲ್ಲೆಯಲ್ಲಿ 64 ಪ್ರಮುಖ ಕೆರೆಗಳಲ್ಲಿ 17 ಕೆರೆಗಳು ಭರ್ತಿಯಾಗಿವೆ. ಇನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 49 ಕೆರೆಗಳು ಭರ್ತಿಯಾಗಿ ಕೋಡಿ ಹರಿದಿವೆ.

ಇದೇ ವೇಳೆ ಉತ್ತರ ಕರ್ನಾಟಕದ ಭಾಗದ ಬೆಳಗಾವಿ ಜಿಲ್ಲೆಯ ಒಟ್ಟು 288 ಕೆರೆಗಳಲ್ಲಿ 118 ಕೆರೆಗಳು ಭರ್ತಿಯಾಗಿದ್ದರೆ, ವಿಜಯಪುರ ಜಿಲ್ಲೆಯ ಒಟ್ಟು 156 ಕೆರೆಗಳಲ್ಲಿ 108 ಕೆರೆಗಳು ಭರ್ತಿಯಾಗಿವೆ. ಬಾಗಲಕೋಟೆ ಜಿಲ್ಲೆಯ ಒಟ್ಟು 62 ಕೆರೆಗಳಲ್ಲಿ 32 ಕೆರೆಗಳು ಭರ್ತಿಯಾಗಿವೆ. ಧಾರವಾಡ ಜಿಲ್ಲೆಯಲ್ಲಿ 260 ಕೆರೆಗಳಿದ್ದು 80 ಕೆರೆಗಳು ಸಂಪೂರ್ಣವಾಗಿ ಭರ್ತಿಯಾಗಿವೆ. ದಾವಣಗೆರೆ ಜಿಲ್ಲೆಯಲ್ಲಿ 492 ಕೆರೆಗಳಲ್ಲಿ 492 ಕೆರೆಗಳೂ ಭರ್ತಿಯಾಗಿದ್ದರೆ, ಹಾವೇರಿ ಜಿಲ್ಲೆಯ 1146 ಕೆರೆಗಳಲ್ಲಿ 300, ಗದಗ ಜಿಲ್ಲೆಯ 186ರಲ್ಲಿ 86 ಕೆರೆಗಳು ಭರ್ತಿಯಾಗಿವೆ.