ಕೃಷಿಕರ ಉತ್ಪನ್ನಗಳಿಗೆ ಉತ್ತಮ ಬೆಲೆ ಸಿಗಲಿ ಎಂಬ ಒತ್ತಾಯದಿಂದ ರಾಜ್ಯ ಸಂಘ ಮತ್ತು ಹಸಿರು ಸೇನೆ ಚಳುವಳಿ ಹಮ್ಮಿಕೊಂಡಿದೆ. ಆಗಸ್ಟ್ 12ರಂದು ಬೆಳಗ್ಗೆ 11 ಗಂಟೆಗೆ ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಚಳವಳಿ ಆರಂಭವಾಗುವುದು ಎಂದು ಸಂಘಟನೆಗಳ ಅಧ್ಯಕ್ಷ ಎಚ್.ಆರ್. ಬಸವರಾಜಪ್ಪ ಅವರು ತಿಳಿಸಿದ್ದಾರೆ.
ದೇಶ ಸ್ವಾತಂತ್ರ್ಯ ಪಡೆದು 75 ವರ್ಷ ಸಂದ ಸಂಭ್ರಮವನ್ನು ರೈತರನ್ನು ಬಿಟ್ಟು ರಾಜಕಾರಣಿಗಳು, ಕೈಗಾರಿಕಾ ಮಾಲೀಕರು, ನೌಕರ ಶಾಹಿಗಳು, ಆಚರಿಸುತ್ತಿದ್ದಾರೆ. ರೈತರಿಗೆ ನಿಜವಾದ ಸ್ವಾತಂತ್ರ್ಯ ಸಿಕ್ಕಿಲ್ಲ. ಕಾರ್ಖಾನೆಯ ಉತ್ಪಾದನೆಗಿಂತ ರೈತರ ಉತ್ಪಾದನೆಗಳಿಗೂ ಬೆಲೆ ಭದ್ರತೆ ಕಾಯ್ದೆ ಜಾರಿಯಾಗಬೇಕು. ಕೃಷಿ ಆಯೋಗದ ಮಾರ್ಗದರ್ಶನದಲ್ಲಿಯೇ ಕಾಯ್ದೆ ಇರಬೇಕು. ಬೆಲೆಯ ಮೋಸದಿಂದಾಗಿ ರೈತರ ಮೇಲಿರುವ ಸಾಲದ ಹೊರೆಯನ್ನು ಸರ್ಕಾರವೇ ಭರಿಸಬೇಕು ಎಂದು ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.