ಅಂತರಾಷ್ಟ್ರೀಯ ಯುವ ದಿನ ವಿಶ್ವಸಂಸ್ಥೆಯು ಗೊತ್ತುಪಡಿಸಿದ ಜಾಗೃತಿ ದಿನವಾಗಿದೆ.
ಯುವಜನರ ಸುತ್ತಲಿನ ಸಾಂಸ್ಕೃತಿಕ ಮತ್ತು ಕಾನೂನು ಸಮಸ್ಯೆಗಳ ಬಗ್ಗೆ ಗಮನ ಸೆಳೆಯುವುದು ದಿನದ ಉದ್ದೇಶವಾಗಿದೆ.
ಮೊದಲು ಅಂತಾರಾಷ್ಟ್ರೀಯ ಯುವ ದಿನವನ್ನ ಅನ್ನು 12 ಆಗಸ್ಟ್ 2000 ರಂದು ಆಚರಿಸಲಾಯಿತು.
ವಿಶ್ವಾದ್ಯಂತ ಯುವಜನರ ಸಮಸ್ಯೆಗಳತ್ತ ಗಮನ ಸೆಳೆಯಲು ಸರ್ಕಾರಗಳು ಇದೊಂದು ಅವಕಾಶವಾಗಿದೆ ಎನ್ನಬಹುದು.
ಅಂತಾರಾಷ್ಟ್ರೀಯ ಯುವ ದಿನದಂದು ಸಂಗೀತ ಕಚೇರಿಗಳು, ಕಾರ್ಯಾಗಾರಗಳು, ಸಾಂಸ್ಕೃತಿಕ ಕಛೇರಿಗಳು ಮತ್ತು ರಾಷ್ಟ್ರೀಯ ಮತ್ತು ಸ್ಥಳೀಯ ಸರ್ಕಾರಿ ಅಧಿಕಾರಿಗಳು ಮತ್ತು ಯುವ ಸಂಸ್ಥೆಗಳನ್ನು ಒಳಗೊಂಡ ಸಭೆಗಳು ಪ್ರಪಂಚದಾದ್ಯಂತ ನಡೆಯುತ್ತವೆ.
ಈ ವರ್ಷದ ಯುವ ದಿನದ ಥೀಮ್ “ಆಹಾರ ವ್ಯವಸ್ಥೆಗಳನ್ನು ಪರಿವರ್ತಿಸುವುದು: ಮಾನವ ಮತ್ತು ಗ್ರಹ ಆರೋಗ್ಯಕ್ಕಾಗಿ ಯುವ ನಾವೀನ್ಯತೆ” ಎಂದು ನಿರ್ಧರಿಸಲಾಗಿದೆ.
ಈ ಥೀಮ್ ಅನ್ನು ಆಯ್ಕೆಮಾಡುವುದರ ಹಿಂದಿನ ಕಾರಣವೆಂದರೆ ಆಹಾರ ವ್ಯವಸ್ಥೆಗಳ ರೂಪಾಂತರದಲ್ಲಿ ಯುವಜನರು ಮಾಡಿರುವ ಪ್ರಯತ್ನದ ಪ್ರಭಾವವನ್ನು ಎತ್ತಿ ತೋರಿಸುವುದಾಗಿದೆ
ಗ್ರಹದ ಸಾಮೂಹಿಕ ಸಂರಕ್ಷಣೆಗಾಗಿ ಪ್ರಯತ್ನಗಳು ಮತ್ತು ಆಲೋಚನೆಗಳನ್ನು ಹಾಕುವಲ್ಲಿ ಹಿರಿಯರ ಮತ್ತು ಯುವ ಜನರ ಒಳಗೊಳ್ಳುವಿಕೆಯ ಅಗತ್ಯತೆಯ ಬಗ್ಗೆ ಜನರಿಗೆ ಅರಿವು ಮೂಡಿಸುವ ಗುರಿಯನ್ನೂ ಈ ಥೀಮ್ ಹೊಂದಿದೆ.
ಪ್ರಪಂಚದ ಅನೇಕ ರಾಷ್ಟ್ರಗಳಲ್ಲಿ ಯುವಜನರು ಇಲ್ಲಿಯವರೆಗೆ ಆರೋಗ್ಯ, ಶಿಕ್ಷಣ ಮತ್ತು ಉದ್ಯೋಗದಂತಹ ಮೂಲ ಸೌಕರ್ಯಗಳಿಗಾಗಿ ಹೋರಾಡುತ್ತಿದ್ದಾರೆ. ಈ ದಿನವು ಅಂತಹ ಸಂಬಂಧಿತ ಸಮಸ್ಯೆಗಳನ್ನು ಚರ್ಚಿಸಲು ಮತ್ತು ಮುಂದಿನ ದಿನಗಳಲ್ಲಿ ಈ ರೀತಿಯ ಸನ್ನಿವೇಶಗಳನ್ನು ಉತ್ತಮಗೊಳಿಸಲು ಸಹಾಯ ಮಾಡುವ ಯೋಜನೆಗಳು ಮತ್ತು ಆಲೋಚನೆಗಳನ್ನು ರೂಪಿಸಲು ವೇದಿಕೆ ಒದಗಿಸುತ್ತದೆ.
ಮಾನಸಿಕ ಆರೋಗ್ಯದ ಬಗ್ಗೆ ಪ್ರಮುಖ ಚರ್ಚೆಗಳು ಮತ್ತು ಯುವಜನರು ಹಾದುಹೋಗುವ ಹೋರಾಟಗಳ ಬಗ್ಗೆಯೂ ಸಹ ಮಾತನಾಡಲಾಗುತ್ತದೆ.
ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವವರಿಗೆ ಸಹಾಯ ಮಾಡಲು ನವೀನ ಕಾರ್ಯವಿಧಾನಗಳನ್ನು ಚರ್ಚಿಸಲಾಗುತ್ತದೆ.