Monday, March 30, 2026
Monday, March 30, 2026
Home Blog Page 1360

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಕುಗ್ರಾಮ ವಾಸ್ತವ್ಯ

0

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಅಸ್ತಿತ್ವಕ್ಕೆ ಬಂದಾಗಿನಿಂದಲೂ ನೂತನ ಕಾರ್ಯಕ್ರಮಗಳಿಗೆ ನಾಂದಿ ಹಾಡಿದ್ದು, ಇದರ ಮುಂದುವರಿದ ಭಾಗವಾಗಿ ಜಿಲ್ಲೆಯಲ್ಲಿರುವ ಕುಗ್ರಾಮಗಳನ್ನು ಗುರುತಿಸಿ ಅಲ್ಲಿ ಗ್ರಾಮ ವಾಸ್ತವ್ಯವನ್ನು ಮಾಡುವ ಮೂಲಕ ಅಲ್ಲಿಯ ಸಮಸ್ಯೆಗಳನ್ನು ಸರ್ಕಾರಕ್ಕೆ ಮುಟ್ಟಿಸುವ ವಿಶೇಷ ಕಾರ್ಯಕ್ರಮವನ್ನು ರೂಪಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಗೋಪಾಲ್ ಎಸ್.ಯಡಗೆರೆ ಹೇಳಿದರು.

ಇಲ್ಲಿನ ಪ್ರೆಸ್‌ಟ್ರಸ್ಟ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ನಡೆ ಸಮಾಜ ಕಡೆ ಘೋಷಣೆಯಡಿ ಸಂಗವು ಈ ಕಾರ್ಯವನ್ನು ಕೈಗೆತ್ತಿಕೊಂಡಿದ್ದು, ಜ್ಲಿಲೆಯ ಅತ್ಯಂತ ಹಿಂದುಳಿದ ಗ್ರಾಮಗಳನ್ನು ಸಾರ್ವಜನಿಕರು, ವಿವಿಧ ಸಂಘಟನೆಗಳು, ಸಂಘ-ಸಂಸ್ಥೆಗಳು ತಿಳಿಸಿದರೆ, ಆ ಎಲ್ಲ ಗ್ರಾಮಗಳಿಗೆ ಪತ್ರಕರ್ತರ ತಂಡ ಭೇಟಿ ನೀಡಿ ಮೂರು ಗ್ರಾಮಗಳನ್ನು ಅಂತಿಮಗೊಳಿಸಲಾಗುವುದು. ಆ ಮೂರು ಕುಗ್ರಾಮಗಳಲ್ಲಿ ಪತ್ರಕರ್ತರು ಒಂದು ದಿನ ವಾಸ್ತವ್ಯ ಹೂಡಿ ಅಲ್ಲಿನ ಸಮಸ್ಯೆಗಳನ್ನು ಸುದ್ದಿರೂಪದಲ್ಲಿ ಪ್ರಕಟಿಸಲಾಗುವುದು. ಪ್ರಕಟಗೊಂಡ ಎಲ್ಲ ವರದಿಗಳನ್ನು ಕ್ರೋಢಿಕರಿಸಿ ಅಂತಿಮ ವರದಿಯನ್ನು ಸಿದ್ದಗೊಳಿಸಿ ಆಯಾ ಗ್ರಾಮದ ವ್ಯಾಪ್ತಿಯ ಶಾಸಕರು, ಜಿಲ್ಲಾಡಳಿತ, ಉಸ್ತುವಾರಿ ಸಚಿವರು ಹಾಗೂ ಸರ್ಕಾರಕ್ಕೆ ಗ್ರಾಮದ ಅಭಿವೃದ್ಧಿ ಕುರಿತು ಸಮಗ್ರ ವರದಿ ನೀಡಲಾಗುತ್ತದೆ.

ಅಷ್ಟೇ ಅಲ್ಲದೆ, ಸರ್ಕಾರಕ್ಕೆ ವರದಿ ನೀಡಿದ ಬಳಿಕ ಅದರ ಪ್ರಗತಿ ಕುರಿತು ಸಂಘ ನಿರಂತವಾಗಿ ಪ್ರಯತ್ನಿಸಲಿದೆ ಎಂದು ಮಾಹಿತಿ ನೀಡಿದರು.
ಪತ್ರಕರ್ತರ ಸಂಘಟನೆ ಇತಿಹಾಸದಲ್ಲಿ ಮೊದಲ ಬಾರಿ ಈ ರೀತಿಯ ಕಾರ್ಯಕ್ರಮ ನಡೆಸಲಾಗುತ್ತಿದೆ. ಇದರ ಜೊತೆ ಜಿಲ್ಲೆಯಲ್ಲಿ ಮಾದಕ ವಸ್ತುಗಳ ನಿಯಂತ್ರಣ ಉದ್ದೇಶದಿಂದ ವರ್ಷ ಪೂರ್ತಿ ಮಾದಕ ವಸ್ತು ವಿರೋಧಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಜೊತೆಗೆ ಸಾಂಸ್ಕೃತಿ, ಕ್ರೀಡಾ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಕುಗ್ರಾಮಗಳನ್ನು ತಿಳಿಸಲು ಸಾವರ್ಜನಿಕರು ಸಂಘದ ಅಧ್ಯಕ್ಷ ಗೋಪಾಲ್ ಎಸ್.ಯಡಗೆರೆ (9108825454), ಪ್ರಧಾನ ಕಾರ್ಯದರ್ಶಿ ಸಂತೋಷ್ ಕಾಚಿನಕಟ್ಟೆ(9341126340) ಅವರನ್ನು ಸಂಪರ್ಕಿಸಬಹುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಕೆ.ತಿಮ್ಮಪ್ಪ, ಪ್ರಧಾನ ಕಾರ್ಯದರ್ಶಿ ಸಂತೋಷ್ ಕಾಚಿನಕಟ್ಟೆ, ಖಜಾಂಚಿ ಶಿವಮೊಗ್ಗ ನಂದನ್ ಇದ್ದರು.

ಮೇಕಪ್ ಕಲಿಕೆಯಿಂದ ಮಹಿಳೆಯರಿಗೆ ಸ್ವ ಉದ್ಯೋಗ ಸೃಷ್ಟಿ

0

ಮೇಕಪ್ ಕಲಿಕೆಯಿಂದ ಮಹಿಳೆಯರು ಮತ್ತು ಯುವತಿಯರು ಸ್ವ ಉದ್ಯೋಗ ಸೃಷ್ಠಿಸಿಕೊಳ್ಳುವ ಜೊತೆಗೆ ಉತ್ತಮ ಬದುಕನ್ನು ಕಟ್ಟಿಕೊಳ್ಳಬಹುದು ಎಂದು ಅಶ್ವಿನೀಸ್ ಮೇಕೋವರ್ ಸಂಸ್ಥೆಯ ಮುಖ್ಯಸ್ಥೆ ಅಶ್ವಿನಿ ಎಂ.ಎಸ್. ಅವರು ಹೇಳಿದರು.

ಅವರು ಮೇಕಪ್ ತರಬೇತಿ ಪಡೆದ ಅಭ್ಯರ್ಥಿಗಳಿಗೆ ಪ್ರಶಸ್ತಿ ಪತ್ರಗಳನ್ನು ವಿತರಿಸಿ ಮಾತನಾಡುತ್ತಾ, ಶಿವಮೊಗ್ಗ ನಗರದಲ್ಲಿ ಮೊದಲ ಬಾರಿಗೆ ಅಶ್ವಿನೀಸ್ ಮೇಕೋವರ್ ಸ್ಟುಡಿಯೋ ಸಂಸ್ಥೆಯಿAದ ಹೊಸ ವರುಷದ ನಿಮಿತ್ತ ಮಹಿಳೆಯರಿಗೆ, ಯುವತಿಯರಿಗೆ ರಿಯಾಯಿತಿ ದರದಲ್ಲಿ ಮೇಕಪ್ ತರಬೇತಿ ನೀಡಲಾಗುತ್ತಿದೆ ಎಂದರು.

ಮಹಿಳೆಯರು ಎಲ್ಲಾ ರಂಗಗಳಲ್ಲಿ ಕೆಲಸ ಮಾಡಬಲ್ಲೆ ಎನ್ನುವುದನ್ನು ಸಾಧಿಸಿ ತೋರಿಸಿದ್ದಾರೆ. ಕೆಲವ ಮನೆ ಕೆಲಸಗಳಿಗೆ ಮಾತ್ರ ಸೀಮಿತವಾಗದೇ ಎಲ್ಲ ರಂಗಗಳಲ್ಲಿಯೂ ತೊಡಗಿಕೊಳ್ಳಬೇಕು ಎಂದು ಕರೆ ನೀಡಿದರು.
ಸಂಸ್ಥೆಯ ವತಿಯಿಂದ ಹೊಸ ವರುಷದಿಂದ ರಿಯಾಯಿತಿ ದರದಲ್ಲಿ ಹೊಸ ಬ್ಯಾಚ್ ಆರಂಭಗೊಳ್ಳುತ್ತಿದ್ದು, ಮೇಕಪ್ ಕೊರ್ಸ್ ಗೆ ಸೇರಬಯಸುವ ಯುವತಿಯರು ಮತ್ತು ಮಹಿಳಾ ವಿದ್ಯಾರ್ಥಿಗಳಿಗೆ ಅತಿ ಕಡಿಮೆ ದರದಲ್ಲಿ ಅತ್ಯುನ್ನತ ಗುಣಮಟ್ಟದ ಮೇಕಪ್ ತರಬೇತಿಯನ್ನು ಶಿವಮೊಗ್ಗ ಸಿಟಿಯಲ್ಲೆ ಹೇಳಿಕೊಡಲಾಗುವುದು ಎಂದರು.

ವಿದ್ಯಾರ್ಥಿಗಳಿಗೆ ಮೇಕಪ್ ಕೋರ್ಸ್ ನ ಸಿಲೆಬಸ್ ಪ್ರಿಂಟ್ ಬುಕ್ , ಮೇಕಪ್ ಕಲಿಕೆಗೆ ಅಗತ್ಯವಾಗಿ ಬೇಕಾದ ಅಭ್ಯಾಸಕರ ಉಪಕರಣಗಳು ಮತ್ತು ಸೌಂದರ್ಯ ವರ್ಧಕ ವಸ್ತುವನ್ನು ಸಹ ಸಂಸ್ಥೆಯೇ ನೀಡುತ್ತದೆ ಮತ್ತು ಅಶ್ವಿನಿಸ್ ಮೇಕೊವರ್ ಸಂಸ್ಥೆಯ ಕೋರ್ಸ್ ಅಂತಿಮದ ಆಯೋಜನೆಯ ಬೃಹತ್ ಸಮಾರೋಪ ವೇದಿಕೆಯಲ್ಲಿ, ಸ್ವತಃ ವಿದ್ಯಾರ್ಥಿಗಳಿಂದಲೆ ಸೆಲೆಬ್ರಿಟಿಗಳಿಗೆ ಅಥವಾ ಇತರರಿಗೆ ಮೇಕಪ್ ಮಾಡಲು ಅವಕಾಶ ಒದಗಿಸಿ, ಸರ್ಟಿಫಿಕೇಟ್ ಸಹ ನೀಡಿ ಗೌರವಿಸಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತರಬೇತಿ ಪಡೆದ‌ ಮಹಿಳೆಯರು ಉಪಸ್ಥಿತರಿದ್ದರು.

ಹೆಚ್ಚಿನ ಮಾಹಿತಿಗಾಗಿ ಕೂಡಲೇ ಕರೆ ಮಾಡಿ : 9901216093

ಸಾಗರದ ಗಣಪತಿ ಬ್ಯಾಂಕ್ ವಿರುದ್ದ ಗ್ರಾಹಕರ ಪ್ರತಿಭಟನೆ

0

ಸಾಗರ ಪಟ್ಟಣದಲ್ಲಿರುವ 100 ವರ್ಷ ಹಳೆಯ ಸಹಕಾರಿ ಗಣಪತಿ ಅರ್ಬನ್ ಬ್ಯಾಂಕ್‌ನ ಗ್ರಾಹಕರಿಗೆ ಮತ್ತು ಷೇರುದಾರರಿಗೆ ಆಗಿರುವ ವಂಚನೆಯ ವಿರುದ್ಧ ಗಣಪತಿ ಅರ್ಬನ್ ಬ್ಯಾಂಕಿನ ಗ್ರಾಹಕರ ಮತ್ತು ಷೇರುದಾರರ ಹಿತರಕ್ಷಣಾ ಸಮಿತಿ ಆಶ್ರಯದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದೆ.

ಗುರುವಾರ ಡಿ.15 ರಂದು ಸಾಗರದ ಉಪವಿಭಾಗಾಧಿಕಾರಿಗಳ ಕಛೇರಿ ಎದುರು ಬೆಳಿಗ್ಗೆ ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿಗಳ ಮೂಲಕ ಕೇಂದ್ರ ವಿತ್ತ ಸಚಿವರಿಗೆ ಹಾಗೂ ಕರ್ನಾಟಕದ ಮುಖ್ಯಮಂತ್ರಿಗಳಿಗೆ ಮತ್ತು ಆರ್‌ಬಿಐ ಹಾಗೂ ರಾಜ್ಯದ ಸಹಕಾರಿ ಸಚಿವರು ಸೇರಿದಂತೆ ವಿವಿಧ ಪ್ರಮುಖರುಗಳಿಗೆ ಮನವಿ ಸಲ್ಲಿಸಲಾಯಿತು.

ಗಣಪತಿ ಬ್ಯಾಂಕಿನಲ್ಲಿ ಬಂಗಾರ ಅಡಮಾನ ಇಟ್ಟು ಸಾಲ ಮಾಡುವವರಿಗೆ ತೀವ್ರ ಕಿರುಕುಳ ನೀಡಲಾಗುತ್ತಿದೆ. ಬಂಗಾರದ ಸಾಲ ಬಡ್ಡಿ ಸಮೇತ ಮರುಪಾವತಿ ಮಾಡಿದರೂ ಮರು ಸಾಲ ನೀಡಲು ಕಿರುಕುಳ ನೀಡುವುದಲ್ಲದೇ ಬಂಗಾರವನ್ನು ಹಿಂತಿರುಗಿಸದೇ ವಂಚಿಸುವ ಪ್ರಯತ್ನ ನಡೆಸುತ್ತಿರುವ ಬ್ಯಾಂಕಿನ ಗ್ರಾಹಕ ವಿರೋಧಿ ನಡೆಯನ್ನು ತೀವ್ರವಾಗಿ ಖಂಡಿಸಲಾಗುತ್ತಿದೆ.

ಗ್ರಾಮಾಂತರದ ಅವಿದ್ಯಾವಂತರೂ ಹೆಚ್ಚಾಗಿ ಸಾಗರದ ಗಣಪತಿ ಬ್ಯಾಂಕಿನ ಬಂಗಾರದ ಸಾಲಗಾರರಾಗಿರುತ್ತಾರೆ. ಸಾಲದ ಅರ್ಜಿ ತುಂಬಲು ಬಾರದ ಗ್ರಾಹಕರನ್ನು ವಿನಾಕಾರಣ ಸತಾಯಿಸುತ್ತಾರೆ. ಸಾಲದ ಅರ್ಜಿಯನ್ನು ಸಾಲಗಾರರೇ ಭರ್ತಿ ಮಾಡಬೇಕು ಎಂಬ ತಾಕೀತು ಮಾಡುವ ಮೂಲಕ ಬರೆಯಲು ಬಾರದ ಗ್ರಾಹಕರನ್ನು ಅವಮಾನಿಸುತ್ತಾರೆ ಎಂಬ ಆರೋಪವಿದೆ.

ಬ್ಯಾಂಕಿನ ನಿಯಮಾನುಸಾರ ಕಾರ್ಯನಿರ್ವಹಣಾಧಿಕಾರಿ ಹುದ್ದೆ ಇರುತ್ತದೆ. ಆದರೇ ಉಪ ಕಾರ್ಯನಿರ್ವಹಣಾಧಿಕಾರಿ(ಉಪಮ್ಯಾನೇಜರ್) ಹುದ್ದೆ ಅಕ್ರಮವಾಗಿ ಸೃಷ್ಟಿಸಿ ಬ್ಯಾಂಕಿನ ಆರ್ಥಿಕ ಹೊರೆಯನ್ನು ಹೆಚ್ಚಿಸಿರುವ ವಿರುದ್ಧ ತನಿಖೆಯಾಗಬೇಕು. ಈ ಹಿಂದೆ ಹೋರಾಟ ಮಾಡಿದ ಪರಿಣಾಮ 1 ಕೋಟಿ 90 ಲಕ್ಷ ರೂ. ಗಳ ಷೇರು ಡಿವಿಡೆಂಡ್ ಹಣವನ್ನು ಷೇರುದಾರರ ಖಾತೆಗೆ ವರ್ಗಾಯಿಸಿದ್ದರು. ಆದರೇ ಈಗ ಕೋವಿಡ್‌ನಿಂದ ನಷ್ಟದಲ್ಲಿರುವ ಬ್ಯಾಂಕುಗಳು ಡಿವಿಡೆಂಡ್ ನೀಡುವ ಅಗತ್ಯವಿಲ್ಲ ಎಂಬ ಆರ್‌ಬಿಐ ಸುತ್ತೋಲೆಯನ್ನೇ ನೆಪವಾಗಿಟ್ಟುಕೊಂಡು ಲಾಭದಲ್ಲಿದ್ದರೂ 2 ಕೋಟಿಗೂ ಹೆಚ್ಚು ಡಿವಿಡೆಂಡ್ ಹಣವನ್ನು ಷೇರುದಾರರಿಗೆ ನೀಡದೆ ವಂಚಿಸಿರುವ ವಿರುದ್ಧ ಹೋರಾಟ ನಡೆಸಲಾಗುತ್ತಿದೆ.

ಬಂಗಾರ ಅಡಮಾನವಿಟ್ಟಿರುವ ಕೆಲವು ಗ್ರಾಹಕರು ಮರಣ ಹೊಂದಿರುವ ಘಟನೆಗಳನ್ನು ದುರ್ಬಳಕೆ ಮಾಡಿಕೊಂಡು ಸಾಲದ ಮೇಲೆ ಚಕ್ರಬಡ್ಡಿ ವಿಧಿಸಿ ಹರಾಜು ಮಾಡುವ ಮೂಲಕ ಬ್ಯಾಂಕಿನ ಅಧಿಕಾರಿಗಳೇ ಬಂಗಾರ ಹರಾಜು ಹಿಡಿಯುವವರೊಂದಿಗೆ ಶಾಮೀಲಾಗಿ ಕಡಿಮೆ ಬೆಲೆಗೆ ಬಂಗಾರ ಗುಳುಂ ಮಾಡಿರುವ ಸಾಕಷ್ಟು ಪ್ರಕರಣಗಳಿವೆ.

ಹೆಚ್ಚುವರಿ ಬಡ್ಡಿ ವಸೂಲಿ ಮಾಡಿರುವ ಹಣ ಗ್ರಾಹಕನ ಖಾತೆಗೆ ಹಿಂತಿರುಗಿಸುವಲ್ಲಿಯೂ ಬ್ಯಾಂಕಿನ ನಿರ್ಲಕ್ಷ್ಯತನ ತೋರಿಸಿದ್ದು,ಅಂತಹ ಹಣ ಬ್ಯಾಂಕಿನಲ್ಲಿಯೇ ಉಳಿದುಕೊಂಡಿರುವುದು ಗ್ರಾಹಕನಿಗೆ ಮಾಡಿದ ವಂಚನೆಯಾಗಿದೆ.

ಪಿಗ್ಮಿ ಸಂಗ್ರಹಕಾರರನ್ನು ಅತ್ಯಂತ ಹೀನಾಯವಾಗಿ ನಡೆಸಿಕೊಳ್ಳುತ್ತಿರುವ ಗಣಪತಿ ಬ್ಯಾಂಕಿನ ಆಡಳಿತ ವ್ಯವಸ್ಥೆ ಯಾವ ರಾಷ್ಟ್ರೀಕೃತ ಬ್ಯಾಂಕಿನಲ್ಲೂ ಇಲ್ಲದ ನೀತಿಯನ್ನು ಗಣಪತಿ ಬ್ಯಾಂಕು ಅಳವಡಿಸಿಕೊಳ್ಳುವ ಮೂಲಕ 60 ವರ್ಷಕ್ಕೆ ಕಡ್ಡಾಯವಾಗಿ ನಿವೃತ್ತಿಗೊಳಿಸುವ ಜೊತೆಗೆ ಯಾವುದೇ ತಕರಾರು ತೆಗೆಯಬಾರದು ಎಂದು ಬಲವಂತವಾಗಿ ಮುಚ್ಚಳಿಕೆ ಬರೆಯಿಸಿಕೊಳ್ಳುವ ಮೂಲಕ ಪಿಗ್ಮಿ ಸಂಗ್ರಹಕಾರರ ಬದುಕಿಗೆ ಮರಣಶಾಸನ ಬರೆದಿರುವ ಆಡಳಿತದ ವಿರುದ್ಧ ಪ್ರತಿಭಟನೆ ಅನಿವಾರ್ಯ ಎಂದು ಹೋರಾಟ ಸಮಿತಿ ಸಂಚಾಲಕ ಹಿತಕರ ಜೈನ್ ಹೇಳಿದ್ದಾರೆ.

ಕಳುವಾದ ಆಭರಣ ಪತ್ತೆ ಮನೆಗಳ್ಳನ ದಸ್ತಗಿರಿ

0

ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣೆ ಮತ್ತು ಸಿಬ್ಬಂದಿಗಳ ತಂಡವು ಠಾಣಾ ವ್ಯಾಪ್ತಿಯ ಮನೆಗಳ್ಳತನ ಪ್ರಕರಣದ ಆರೋಪಿತನನ್ನು ದಸ್ತಗಿರಿ ಮಾಡಿ, ರೂ 2,50,000/- ಮೌಲ್ಯದ 60 ಗ್ರಾಂ ತೂಕದ ಬಂಗಾರದ ಆಭರಣಗಳನ್ನು ಅಮಾನತ್ತು ಪಡಿಸಿ ಕೊಂಡಿರುತ್ತಾರೆ ಎಂದು ಶಿವಮೊಗ್ಗ ಎಸ್ ಪಿ ಕಾರ್ಯಾಲಯ ತಿಳಿಸುತ್ತದೆ.

ಭದ್ರಾವತಿ ಮನೋಜ್ ಚಿತ್ರಕಲಾ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ

0

ಸಾರ್ವಜನಿಕ ಶಿಕ್ಷಣ ಇಲಾಖೆ ಭದ್ರಾವತಿಯಲ್ಲಿ ನಡೆಸಿದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಸಾಂಸ್ಕೃತಿಕ ಸ್ಪರ್ಧೆಯ ಪ್ರಾಥಮಿಕ ಶಾಲಾ ಹಂತದ ಚಿತ್ರಕಲೆ ಮತ್ತು ಬಣ್ಣ ಹಚ್ಚುವ ಸ್ಪರ್ಧೆಯಲ್ಲಿ ಭದ್ರಾವತಿ ಯ ಸೇಂಟ್ ಜೋಸೆಫ್ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿ ಅಮನ್ ಮನೋಜ್ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾನೆ.

ಮನೋಜ್ ಪಟ್ಟಣದ ಜೋಸೆಫ್‌ನಗರದ ಫ್ರಾನ್ಸಿಸ್ ಮನೋಜ್ ಮತ್ತು ಪ್ರಮೀಳ ಮನೋಜ್ ದಂಪತಿ ಪುತ್ರರಾಗಿದ್ದಾರೆ. ಇವರಿಗೆ ಶಾಲಾ ಆಡಳಿತ ಮಂಡಳಿ ಹಾಗೂ ಕುಟುಂಬಸ್ಥರು ಅಭಿನಂದನೆ ಸಲ್ಲಿಸಿದ್ದಾರೆ

ಸಂಸತ್ತಿನಲ್ಲಿ ಗಮನ ಸೆಳೆದ ಎರಡು ಪ್ರಸಂಗಗಳು

0

ಸಂಸತ್ತು ಮತ್ತು ಶಾಸನ ಸಭೆಯ ನಡಾವಳಿಗಳು‌ ಈಗ ಟಿವಿಯಲ್ಲಿ ನೇರಪ್ರಸಾರದಲ್ಲಿ ಲಭ್ಯವಿವೆ. ಪುರುಸೊತ್ತು ಮಾಡಿಕೊಂಡು ನಾವೆಲ್ಲಾ ವೀಕ್ಷಿಸಬೇಕು.

ಇಂದು ನಮ್ಮ ಸೆಳೆದ ಸಂಗತಿ.ಸದಾ ಮುಗುಳ್ನಗುತ್ತಲೇ ಮಾತಾಡುವ ಲೋಕಸಭಾಧ್ಯಕ್ಷರಾದ ಶ್ರೀ ಓಂ ಬಿರ್ಲಾ ಅವರು ಕೊಂಚ ವ್ಯಗ್ರರಾಗಿ ಮಾತಾಡಿದ ಪ್ರಸಂಗ.

ಅಷ್ಟೇ ಅಲ್ಲ ರಾಜ್ಯ ಸಭೆಯಲ್ಲೂ ಕೂಡ ಮೊದಲ ಬಾರಿಗೆ ಅಧ್ಯಕ್ಷರಾಗಿ
ಪೀಠ ಅಲಂಕರಿಸಿರುವ ಶ್ರೀ ಜಗದೀಶ ಧನಕರ್ ಕೂಡ ಅದೇ ರೀತಿ ಸಂಸದರಿಗೆ ಮಾತಿನ ಚಾಟಿ ಬೀಸಿದ ಸಂಗತಿ.

ಲೋಕಸಭೆಯಲ್ಲಿ ಸಂಸದರಾದ ಎ.ಆರ್ .ರೆಡ್ಡಿ ಅವರು ವಿತ್ತ ಸಚಿವರು ತಮ್ಮನ್ನ ಹಿಂದಿ ಮಾತಾಡಲು ಬಾರದ ಹಾಗೂ
ಕೆಳಜಾತಿಯವರೆಂದೂ ಗ್ರಹಿಸಿ
ಮಾತಾಡಿದ್ದಾರೆ ಎಂದು ಆರೋಪಿಸಿದರು.
ಜಾತಿಯ ಪ್ರಸ್ತಾಪ ಬಂದಾಕ್ಷಣ
ಲೋಕಸಭಾಧ್ಯಕ್ಷರು ಸಂಸದ ರೆಡ್ಡಿಯವರಿಗೆ ಸದಸ್ಯರು ಜಾತಿ ಧರ್ಮ ಉಲ್ಲೇಖಿಸಿ ಮಾತಾಡಬೇಡಿ ಎಂದು ಕಿವಿಮಾತು ಹೇಳಿದರು.
ಇನ್ನು ಮುಂದೆ ಯಾವ ಸದಸ್ಯರೂ ಆ ಪದಗಳನ್ನ ಉಪಯೋಗಿಸಬಾರದು.
ಅಂತಹ ಪದಗಳನ್ನ ಪ್ರಯೋಗಿಸಿದ್ದೇ ಆದರೆ ಕಠಿಣ ಕ್ರಮ
ಕೈಗೊಳ್ಳಲಾಗುತ್ತದೆ.ಎಂದು ಎಚ್ಚರಿಸಿದ್ದಾರೆ.
ಸದಸ್ಯರನ್ನ ಎಚ್ಚರಿಸುವ ಇನ್ನೊಂದು ಪ್ರಸಂಗ ರಾಜ್ಯಸಭೆಯಲ್ಲಿ ನಡೆದಿದಿದೆ.
ರಾಜ್ಯಸಭೆ ಅಧ್ಯಕ್ಷರಾದ ಉಪರಾಷ್ಟ್ರಪತಿ ಶ್ರೀ ಜಗದೀಶ್ ಧನಕರ್ ಸಂಸದ ಎಎಪಿ ಪಕ್ಷದ ಸಂಜಯ್ ಸಿಂಗ್ ಅವರು ಕೇಂದ್ರ ಸರ್ಕಾರವು ತನಿಖಾ ಸಂಸ್ಥೆಗಳನ್ನ ದುರ್ಬಳಕೆ ಮಾಡುತ್ತಿದೆ.ಅವುಗಳ ಮೂಲಕ ವಿರೋಧ ಪಕ್ಷದ ನಾಯಕರ ಮೇಲೆ ದಾಳಿ ನಡೆಸುತ್ತಿದೆ.
ಎಂದು ಆರೋಪಿಸಿದರು.

ಇದಕ್ಕೆ ಆಡಳಿತ ಪಕ್ಷದವರು ಆಕ್ಷೇಪ ವ್ಯಕ್ತಪಡಿಸಿದರಿ.ಸಭಾಧ್ಯಕ್ಷರನ್ನ ನಡುವೆ ಪ್ರವೇಶಿಸಿ ಮಾತಾಡಲು ಕೋರಿದರು.
ಶ್ರೀಧನಕರ್ ಅವರು ಎಲ್ಲಾ ಸದಸ್ಯರಿಗೂ ಸೇರಿ ಕಿವಿಮಾತು ಹೇಳಬೇಕಾಯಿತು. ಯಾವುದೇ ಆರೋಪ ಮಾಡುವಾಗ ಆಧಾರಸಹಿತ ಮಾಡಬೇಕು. ಮಾಧ್ಯಮ ವರದಿ, ಸಂಸತ್ತಿನಿಂದ ಹೊರಗೆ ನೀಡಿದ ಹೇಳಿಕೆಗಳನ್ನ ಆಧಾರಾವಾಗಿಟ್ಟು ಮಾತಾಡುವುದು ಪ್ರಯೋಜನಕ್ಕೆ ಬರುವುದಿಲ್ಲ. ಮಾತಾಡುವಾಗ ಸೂಕ್ತ ದಾಖಲೆಗಳನ್ನ ಇರಿಸಿಕೊಂಡಿರಿ ಎಂದು ಹೇಳಿದರು.
ನಂತರ ಸಂಸದರ ಮಾತಿಗೆ ಸಭಾನಾಯಕ ಪೀಯುಷ್ ಗೋಯಲ್ ಉತ್ತರಿಸಲು ಸಭಾಧ್ಯಕ್ಷರು ಸೂಚಿಸಿದರು.

ಈ ಎರಡೂ ಪ್ರಸಂಗಗಳು ನಮ್ಮಿಂದ ಆಯ್ಕೆಯಾಗಿ ಹೋಗುವ ಪ್ರತಿನಿಧಿಗಳು ಮಾತಿಗೆ ಮುನ್ನ ಎಷ್ಟು
ಪೂರ್ವತಯಾರಿ ಹಾಗೂ ಯಾವರೀತಿ ನಮ್ಮ ಮಾತಿನ ಧಾಟಿ ಇರಬೇಕು? ಎನ್ನುವ ಬಗ್ಗೆ ತಿಳಿಸುತ್ತದೆ ಅಲ್ಲವೆ ?

ಪ್ರಧಾನಿಯೊಂದಿಗೆ ಮಾಜಿ ಪ್ರಧಾನಿ

0

ಇತ್ತೀಚೆಗೆ ಮಾಜಿ ಪ್ರಧಾನಿಗಳಾದ ಶ್ರೀದೇವೇಗೌಡರು ಪ್ರಧಾನಿ ಮೋದಿಯವರನ್ನ ಭೇಟಿ ಮಾಡಿದ್ದರು.
‌ಈ ಭೇಟಿಯ ಅನುಭವವನ್ನ ಮಾನ್ಯ‌ ದೇವೇಗೌಡರು  ಟ್ವಿಟರ್ ಮೂಲಕ ತಾಜಾತನದಿಂದ ಹಂಚಿಕೊಂಡಿದ್ದಾರೆ.

ಯಾವಾಗಲೇ ಭೇಟಿಯಾದರೂ ಅತ್ಯಂತ
ವಿಶ್ವಾಸ ಮತ್ತು ಹಾರ್ದಿಕವಾಗಿ ತಮ್ಮನ್ನು
ಸ್ವಾಗತಿಸುತ್ತಾರೆ.

ಒಕ್ಕಲಿಗರ ಉಪ ಪಂಗಡವಾಗಿರುವ ಕುಂಚುಟಿಗ ವರ್ಗವನ್ನು ಓಬಿಸಿ ಪಟ್ಟಿಗೆ ಸೇರ್ಪಡೆಗೊಳಿಸಲು‌ ಮನವಿ ಅರ್ಪಿಸಿದೆ
ಜೊತೆಗೆ ರಾಜ್ಯದ ವಿವಿಧ ಯೋಜನೆಗಳು ಮುಖ್ಯವಾಗಿ ಕಾವೇರಿ ಜಲಯೋಜನೆ ಮತ್ತು ಹಾಸನ ವಿಮಾನ ನಿಲ್ದಾಣದ ಬಗ್ಗೆಯೂ ಮೋದಿಯವರೊಂದಿಗೆ ಚರ್ಚಿಸಿದೆ ಎಂದೂ ತಿಳಿಸಿದ್ದಾರೆ.

ಡಿಸೆಂಬರ್ 17 ರಂದು ಶಿಕಾರಿಪುರ ತಾಲ್ಲೂಕು ಮಳೂರಿನಲ್ಲಿ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ

0

ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ-ಕಂದಾಯ ಇಲಾಖೆ’ ಕಾರ್ಯಕ್ರಮದಡಿ ಜಿಲ್ಲಾಧಿಕಾರಿ
ಡಾ.ಆರ್ ಸೆಲ್ವಮಣಿ ಇವರು ಡಿಸೆಂಬರ್ 17 ರಂದು ಶಿಕಾರಿಪುರ ತಾಲ್ಲೂಕಿನ ತಾಳಗುಂದ ಹೋಬಳಿಯ ಮಳೂರು ಗ್ರಾಮಕ್ಕೆ(ಮಾರಿಕಾಂಬ ಸಮುದಾಯ ಭವನ) ಭೇಟಿ ನೀಡಿ, ಗ್ರಾಮ ವಾಸ್ತವ್ಯ ಮಾಡುವರು.

ಅಂದು ಬೆಳಿಗ್ಗೆ 11 ಗಂಟೆಯಿಂದ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆಯುವ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಕಂದಾಯ ಮತ್ತು ಇತರೆ ಎಲ್ಲಾ ಇಲಾಖೆಯ ಅಧಿಕಾರಿಗಳೊಂದಿಗೆ ಅವರು ಸಾರ್ವಜನಿಕರನ್ನು ಭೇಟಿ ಮಾಡಿ, ಅವರ ಕುಂದು ಕೊರತೆಗಳನ್ನು ಆಲಿಸಿ ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡು ಗ್ರಾಮ ವಾಸ್ತವ್ಯ ಮಾಡುವರು. ಗ್ರಾಮದ ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಮುಂಚಿತವಾಗಿ ತಮ್ಮ ಗ್ರಾಮದಲ್ಲಿಯೇ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸಲ್ಲಿಸಿ ಡಿಸೆಂಬರ್ 15 ರಂದು ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಅಪರ ಜಿಲ್ಲಾಧಿಕಾರಿ ಡಾ.ನಾಗೇಂದ್ರ ಎಫ್ ಹೊನ್ನಳ್ಳಿ ತಿಳಿಸಿದ್ದಾರೆ.

ಸ್ಟೇಟ್ ಬ್ಯಾಂಕ್ ನಿಂದ ಕ್ಷಯ ರೋಗ ಪತ್ತೆಮಾಡುವ ಟ್ರೂನ್ಯಾಟ್ ಯಂತ್ರದ ಕೊಡುಗೆ

0

ಡಿ.14 ರಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇವರು ಸಿಎಸ್‍ಆರ್ ಚಟುವಟಿಕೆ ಅಡಿಯಲ್ಲಿ ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮಕ್ಕೆ ಕ್ಷಯ ರೋಗಿಗಳ ಶೀಘ್ರ ಪತ್ತೆ ಮತ್ತು ಚಿಕಿತ್ಸೆಗಾಗಿ ಆಧುನಿಕ ಯಂತ್ರವಾದ ಟ್ರೂನ್ಯಾಟ್ ಯಂತ್ರವನ್ನು ಕೊಡುಗೆಯಾಗಿ ನೀಡಿದರು.

ಎಸ್‍ಬಿಐ ಡೆಪ್ಯೂಟಿ ಜನರಲ್ ಮ್ಯಾನೇಜರ್ ಜೋಬಿ ಜೋಶ್ ಹಾಗೂ ಶಿವಮೊಗ್ಗ ವಿಭಾಗದ ರೀಜನಲ್ ಮ್ಯಾನೇಜರ್ ಶ್ರೀಜಿತ್ ಇವರು ಟಿಬಿ ಮುಕ್ತ ಭಾರತ ಮಾಡುವ ಉದ್ದೇಶದಿಂದ ಟಿಬಿ ರೋಗಿಗಳ ಶೀಘ್ರ ಪತ್ತೆ ಮತ್ತು ಚಿಕಿತ್ಸೆಗಾಗಿ ಈ ಆಧುನಿಕ ಯಂತ್ರವನ್ನು ನೀಡಿದರು.

ಈ ವೇಳೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ್ ಸುರಗಿಹಳ್ಳಿ ಮಾತನಾಡಿ, ಇಂತಹ ಕಾರ್ಯಕ್ರಮವನ್ನು ಅಧಿಕಾರಿಗಳು ಮಾಡುತ್ತಿರುವುದು ಪವಿತ್ರವಾದ ಕರ್ತವ್ಯವೆಂದು ಹೇಳಿದರು.

ಆರ್‍ಸಿಹೆಚ್‍ಓ ಡಾ. ನಾಗರಾಜ್ ನಾಯಕ್, ಡಿ ಟಿ ಓ ಡಾ. ದಿನೇಶ್ ಜಿ ಸಿ, ಡಾ. ಗುಡದಪ್ಪ ಕಸಬಿ, ಸಿಡಿಪಿಓ ಚಂದ್ರಪ್ಪ ಹಾಗೂ ಎಸ್ ಬಿ ಐ ನ ವ್ಯವಸ್ಥಾಪಕರಾದ ನಿಶಾಂತ್ ಗೌರವ್ ಉಪಸ್ಥಿತರಿದ್ದರು.

ಶ್ರೀಆದಿಚುಂಚನಗಿರಿ ಮಠದಲ್ಲಿ ರಾಜ್ಯಮಟ್ಟದ ಅರ್ಚಕರ ತರಬೇತಿ ಶಿಬಿರ

0

ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ.ಡಾ. ಬಾಲಗಂಗಾಧರನಾಥ ಮಹಾಸ್ವಾಮಿಜಿ ದಿವ್ಯಾರ್ಶಿವಾದದೊಂದಿಗೆ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ದಿವ್ಯಸಾನಿಧ್ಯದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನಕಾರ್ಯದರ್ಶಿಗಳಾದ ಶ್ರೀ.ಪ್ರಸನ್ನನಾಥ ಸ್ವಾಮೀಜಿ ಅವರ ದಿವ್ಯ ಉಪಸ್ಥಿತಿಯಲ್ಲಿ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಆಶ್ರಯದಲ್ಲಿ ಡಿಸೆಂಬರ್ 13 ರಿಂದ ಡಿ.24 ರವರೆಗೆ ರಾಜ್ಯಮಟ್ಟದ 15ನೇ ಅರ್ಚಕರ ವೃತ್ತಿಶಿಕ್ಷಣ ತರಬೇತಿ ಶಿಬಿರ ಆಯೋಜಿಸಲಾಗಿದೆ.

ಜಾತಿ, ಮತ, ಲಿಂಗ ಮತ ಭೇದವಿಲ್ಲದೆ ಅರ್ಚಕರಿಗೆ ಮೂಲಭೂತ ವೈದಿಕ ಶಿಕ್ಷಣವನ್ನು ಕಲಿಸುವುದು, ಕರ್ಮ ಶ್ರದ್ಧೆ, ಶಿಸ್ತು, ಸಮಯಪಾಲನೆ, ಸ್ವಚ್ಛತೆ ಮೊದಲಾದ ವಿಚಾರಗಳಲ್ಲಿ ಜಾಗೃತಿ ಮೂಡಿಸುವುದು. ಶುದ್ಧವಾದ ಆಚಾರಗಳ ಪರಿಚಯ ಮಾಡಿಸುವುದು. ಅರ್ಚಕರು ಸಂಸ್ಕಾರವಂತರಾಗಿ ಸಮಾಜಕ್ಕೂ ಭಕ್ತರಿಗೂ ಸಂಬಂಧದ ಕೊಂಡಿ ಯಾಗುವಂತೆ ಪ್ರೇರೇಪಿಸುವುದು ಅರ್ಚಕ ತರಬೇತಿ ಶಿಬಿರದ ಪ್ರಮುಖ ಉದ್ದೇಶಗಳಾಗಿವೆ.
ಭಕ್ತರು ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ತಿಳಿಸಲಾಗಿದೆ.

ಆಸಕ್ತರು ಮೊ:9481492311, 9448124141, 9886958585 ಅನ್ನು ಸಂಪರ್ಕಿಸಬಹುದು.