ಇತ್ತೀಚೆಗೆ ಮಾಜಿ ಪ್ರಧಾನಿಗಳಾದ ಶ್ರೀದೇವೇಗೌಡರು ಪ್ರಧಾನಿ ಮೋದಿಯವರನ್ನ ಭೇಟಿ ಮಾಡಿದ್ದರು.
ಈ ಭೇಟಿಯ ಅನುಭವವನ್ನ ಮಾನ್ಯ ದೇವೇಗೌಡರು ಟ್ವಿಟರ್ ಮೂಲಕ ತಾಜಾತನದಿಂದ ಹಂಚಿಕೊಂಡಿದ್ದಾರೆ.
ಯಾವಾಗಲೇ ಭೇಟಿಯಾದರೂ ಅತ್ಯಂತ
ವಿಶ್ವಾಸ ಮತ್ತು ಹಾರ್ದಿಕವಾಗಿ ತಮ್ಮನ್ನು
ಸ್ವಾಗತಿಸುತ್ತಾರೆ.

ಒಕ್ಕಲಿಗರ ಉಪ ಪಂಗಡವಾಗಿರುವ ಕುಂಚುಟಿಗ ವರ್ಗವನ್ನು ಓಬಿಸಿ ಪಟ್ಟಿಗೆ ಸೇರ್ಪಡೆಗೊಳಿಸಲು ಮನವಿ ಅರ್ಪಿಸಿದೆ
ಜೊತೆಗೆ ರಾಜ್ಯದ ವಿವಿಧ ಯೋಜನೆಗಳು ಮುಖ್ಯವಾಗಿ ಕಾವೇರಿ ಜಲಯೋಜನೆ ಮತ್ತು ಹಾಸನ ವಿಮಾನ ನಿಲ್ದಾಣದ ಬಗ್ಗೆಯೂ ಮೋದಿಯವರೊಂದಿಗೆ ಚರ್ಚಿಸಿದೆ ಎಂದೂ ತಿಳಿಸಿದ್ದಾರೆ.