Monday, March 30, 2026
Monday, March 30, 2026
Home Blog Page 1359

ಶಿವಮೊಗ್ಗದ ರೈಲ್ವೆ ಪ್ರಯಾಣಿಕರಿಗೆ ಇಲಾಖೆಯಿಂದ ಮಾಹಿತಿ

0

ಶಿವಮೊಗ್ಗ ಟೌನ್ ರೈಲು ಸಂಚಾರವನ್ನು ಇನ್ನು ಮೂರು ತಿಂಗಳು ವಿಸ್ತರಿಸಲಾಗುವುದು ಎಂದು ರೈಲ್ವೆ ಇಲಾಖೆ ತಿಳಿಸಿದೆ.

ಶಿವಮೊಗ್ಗ ಟೌನ್ – ಎಂಜಿಆರ್ ಚೆನ್ನೈ ಸೆಂಟ್ರಲ್ (ರೈಲು ಸಂಖ್ಯೆ 06223) ರೈಲು 2023ರ ಜನವರಿ 1 ರಿಂದ 2023ರ ಮಾರ್ಚ್ 28ರವರೆಗೆ ವಿಸ್ತರಿಸಲಾಗಿದೆ.

ಇನ್ನು, ಎಂಜಿಆರ್ ಚೆನ್ನೈ ಸೆಂಟ್ರಲ್ – ಶಿವಮೊಗ್ಗ ಟೌನ್ ರೈಲು (ರೈಲು ಸಂಖ್ಯೆ 06224) ಸೇವೆಯನ್ನು 2023ರ ಜನವರಿ 2 ರಿಂದ 2023ರ ಮಾರ್ಚ್ 29ರವರೆಗೆ ವಿಸ್ತರಿಸಲಾಗಿದೆ.

ವಾರದಲ್ಲಿ ಎರಡು ಬಾರಿ ಸಂಚರಿಸುವ ಶಿವಮೊಗ್ಗ – ಎಂಜಿಆರ್ ಚೆನ್ನೈ ಸೆಂಟ್ರಲ್ ವಿಶೇಷ ಎಕ್ಸ್ ಪ್ರೆಸ್ ರೈಲು ಸೇವೆ 2022ರ ಡಿ.27ಕ್ಕೆ ಕೊನೆಯಾಗಬೇಕಿತ್ತು.

ರೈಲ್ವೆ ಇಲಾಖೆ 2023ರ ಮಾರ್ಚ್ ಕೊನೆಯವರೆಗೆ ವಿಸ್ತರಣೆ ಮಾಡಿದೆ.

ಶಿವಮೊಗ್ಗ ಜಿಲ್ಲೆಯ ತಾಲ್ಲೂಕುಗಳಿಗೆ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳ ಭೇಟಿ

0

ಶಿವಮೊಗ್ಗ ಜಿಲ್ಲೆಯ ಕರ್ನಾಟಕ ಲೋಕಾಯುಕ್ತ ಪೊಲೀಸ್ ವಿಭಾಗದ ಅಧಿಕಾರಿಗಳು ಕೆಳಕಂಡ ದಿನಾಂಕಗಳಂದು ತಾಲ್ಲೂಕುಗಳಿಗೆ ಭೇಟಿ ನೀಡಿ ಸಾರ್ವಜನಿಕರಿಂದ ಕುಂದು ಕೊರತೆಗಳ ಬಗ್ಗೆ ಅರ್ಜಿ ಸ್ವೀಕಾರ ಮಾಡಲಿದ್ದಾರೆ.


ಸರ್ಕಾರಿ ಯೋಜನೆಗಳನ್ನು ಫಲಾನುಭವಿಗಳಿಗೆ ದೊರಕಿಸುವಲ್ಲಿ ಬೇಜವಾಬ್ದಾರಿತನ, ಸರ್ಕಾರಿ ಕರ್ತವ್ಯ ನಿರ್ವಹಿಸುವಲ್ಲಿ ನಿರ್ಲಕ್ಷ್ಯ, ವಿಳಂಬ ಮತ್ತು ಅಧಿಕೃತ ಕೆಲಸಕ್ಕಾಗಿ ಲಂಚಕ್ಕೆ ಬೇಡಿಕೆ ಇಟ್ಟಂತಹ ಅಧಿಕಾರಿ ಹಾಗೂ ಸಿಬ್ಬಂದಿಗಳ ವಿರುದ್ದ ಸಾರ್ವಜನಿಕರು ಲಿಖಿತ ಅಹವಾಲು ಸಲ್ಲಿಸಬಹುದು.
ದಿ: 19-12-2022 ರಂದು ತಾಲ್ಲೂಕು ಕಚೇರಿ ಸಭಾಂಗಣ ಸಾಗರ ತಾಲ್ಲೂಕು. ದಿ: 20-12-2022 ರಂದು ತಾಲ್ಲೂಕು ಕಚೇರಿ ಸಭಾಂಗಣ ತೀರ್ಥಹಳ್ಳಿ ತಾಲ್ಲೂಕು. ದಿ: 21-12-2022 ರಂದು ತಾಲ್ಲೂಕು ಕಚೇರಿ ಸಭಾಂಗಣ ಶಿಕಾರಿಪುರ. ದಿ: 22-12-2022 ರಂದು ತಾಲ್ಲೂಕು ಕಚೇರಿ ಸಭಾಂಗಣ ಹೊಸನಗರ ತಾಲ್ಲೂಕು. ದಿನಾಂಕ: 23-12-2022 ರಂದು ತಾಲ್ಲೂಕು ಕಚೇರಿ ಸಭಾಂಗಣ ಭದ್ರಾವತಿ. ದಿನಾಂಕ: 28-12-2022 ರಂದು ತಾಲ್ಲೂಕು ಕಚೇರಿ ಸಭಾಂಗಣ ಸೊರಬ ತಾಲ್ಲೂಕು ಇಲ್ಲಿಗೆ ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆವರೆಗೆ ಭೇಟಿ ನೀಡಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆಯುವಂತೆ ಶಿವಮೊಗ್ಗ ಕರ್ನಾಟಕ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕರು ತಿಳಿಸಿದ್ದಾರೆ.

ಕುವೆಂಪು ವಿವಿ ಸ್ನಾತಕೋತ್ತರ ಮತ್ತು ಡಿಪ್ಲೊಮಾ ಕೋರ್ಸ್ಗಳ ಪ್ರವೇಶಾತಿ ಮುಂದೂಡಲಾಗಿದೆ

0

ಕುವೆಂಪು ವಿವಿಯ 2022-23ನೇ ಶೈಕ್ಷಣಿಕ ಸಾಲಿನ ವಿವಿಧ ಸ್ನಾತಕೋತ್ತರ ಪದವಿ, ಸ್ನಾತಕೋತ್ತರ ಡಿಪ್ಲೊಮಾ ಕೋರ್ಸ್ಗಳ ಪ್ರವೇಶಾತಿಯನ್ನು ಡಿಸೆಂಬರ್ 19 ಮತ್ತು 20ರಂದು ನಡೆಸುವುದಾಗಿ ವಿವಿ ತಿಳಿಸಿದೆ.

ವಿವಿಯ 2022-23 ನೇ ಶೈಕ್ಷಣಿಕ ಸಾಲಿನ ಎಲ್ಲ ಸ್ನಾತಕೋತ್ತರ ಕೇಂದ್ರಗಳು ಮತ್ತು ವಿಭಾಗಗಳ ಸ್ನಾತಕೋತ್ತರ ಪದವಿ ಮತ್ತು ಡಿಪ್ಲೊಮಾ ಕೋರ್ಸುಗಳ ಪ್ರವೇಶಾತಿಗಾಗಿ ಡಿ. 16ರಂದು ಮೆರಿಟ್ ಆಧರಿತ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ. ಡಿ.19 ರಂದು ಮೆರಿಟ್ ಹಾಗೂ ಸ್ಪೆಷಲ್ ಕೆಟಗರಿ ಸೀಟುಗಳ ಪ್ರವೇಶಾತಿ ನಡೆಯಲಿದ್ದು, ಮರುದಿನ ಡಿ. 20 ರಂದು ಮೆರಿಟ್ ಕಮ್ ಪೇಮೆಂಟ್ ಸೀಟುಗಳ ಪ್ರವೇಶಾತಿಯು ನಡೆಯಲಿದೆ.

ಈ ಸಾಲಿನ ಪ್ರವೇಶಾತಿಯನ್ನು ಡಿಸೆಂಬರ್ 17ರಂದು ನಡೆಸುವುದಾಗಿ ಈ ಮೊದಲು ತಿಳಿಸಲಾಗಿತ್ತು. 17ರಂದು ರಾಜ್ಯಾದ್ಯಂತ ಎನ್.ಎಸ್.ಯು.ಐ. ವತಿಯಿಂದ ವಿದ್ಯಾರ್ಥಿಗಳ ಮುಷ್ಕರ ಇರುವುದರಿಂದ ಕೌನ್ಸಿಲಿಂಗ್ ದಿನಾಂಕಗಳನ್ನು ಮುಂದೂಡಲಾಗಿದೆ ಎಂದು ವಿವಿಯ ಪ್ರಕಟಣೆ ತಿಳಿಸಿದೆ.

ಎಲ್ಲರೂ ಒಟ್ಟಾಗಿ ಕಾನೂನು ಅನುಸರಿಸಿದಾಗ ಅನುಷ್ಠಾನ ಸುಲಭ- ನ್ಯಾ.ರಾಜಣ್ಣ ಸಂಕಣ್ಣನವರ್

0

ಸಮಾಜದಲ್ಲಿ ಎಲ್ಲರೂ ಕೈಜೋಡಿಸಿದರೆ ಮಾತ್ರ ಮಹಿಳೆಯರ ಸಂರಕ್ಷಣಾ ಕಾಯ್ದೆ ಕಾನೂನುಗಳನ್ನು ಅಚ್ಚುಕಟ್ಟಾಗಿ ಅನುಷ್ಟಾನಗೊಳಿಸಲು ಸಾಧ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಜಣ್ಣ ಸಂಕಣ್ಣನವರ ನುಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ವಿವಿಧ ಸ್ವಯಂ ಸೇವಾಸಂಸ್ಥೆಗಳ ಮತ್ತು ದಿ ಶಿವಮೊಗ್ಗ ಮಲ್ಟಿಪರ್ಪಸ್ ಸೋಷಿಯಲ್ ಸರ್ವಿಸ್ ಸೊಸೈಟಿ ಇವರ ಸಂಯುಕ್ತಾಶ್ರಯದಲ್ಲಿ ಆಲ್ಕೊಳದ ‘ಚೈತನ್ಯ’ ದಲ್ಲಿ ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣೆ ಕಾಯ್ದೆ-2022 ರ ಅನುಷ್ಟಾನದಲ್ಲಿ ಭಾಗೀದಾರ ಇಲಾಖೆಗಳ ಪಾತ್ರದ ಕುರಿತು ಹಮ್ಮಿಕೊಳ್ಳಲಾಗಿರುವ ಎರಡು ದಿನಗಳ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಎಲ್ಲರೂ ಕೂಡಿದಾಗ ಹೊಸ ಹೊಸ ಕಾಯ್ದೆಗಳು, ತಿದ್ದುಪಡಿಗಳು, ನಿಯಮಗಳ ಕುರಿತು ಚರ್ಚಿಸಿ, ಪರಿಣಾಮಕಾರಿಯಾಗಿ ಅವನ್ನು ಜಾರಿಗೆ ತರಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳ ಅಗತ್ಯವಿದ್ದು, ಕಾರ್ಯಕ್ಷೇತ್ರದಲ್ಲಿ ಎದುರಾಗುವ ಕ್ಲಿಷ್ಟಕರ ಸನ್ನಿವೇಶಗಳನ್ನು ಬಗೆಹರಿಸಲು ಇಂತಹ ಕಾರ್ಯಾಗಾರಗಳು ಸಹಕಾರಿಯಾಗಿದೆ.

ನಾವು ಕಾಯ್ದೆ ಕಾನೂನುಗಳ ಕುರಿತು ಎಷ್ಟೇ ತಿಳಿದರೂ ಕಡಿಮೆಯೇ. ಆದ್ದರಿಂದ ಇಂದು ಇಲ್ಲಿ ಭಾಗಿಯಾದ ಎಲ್ಲರೂ ಕಾಯ್ದೆಯ ಬಗ್ಗೆ ತಿಳಿದು, ಮನನ ಮಾಡಿಕೊಂಡು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಎಂದ ಅವರು ಮಹಿಳೆಯರು ಮಕ್ಕಳು ಸೇರಿದಂತೆ ಯಾವುದೇ ರೀತಿಯ ಕಾನೂನಿನ ತೊಡಕುಗಳ ಪರಿಹಾರಕ್ಕೆ ಸಹಕಾರ, ಸೌಲಭ್ಯಗಳು ಬೇಕಾದಲ್ಲಿ ಕಾನೂನು ಸೇವೆಗಳ ಪ್ರಾಧಿಕಾರವನ್ನು ಸಂಪರ್ಕಿಸಿದಲ್ಲಿ ನಾವು ಸೇವೆಗೆ ಸದಾ ಸಿದ್ದವಾಗಿದ್ದು, ಇದರ ಸದುಪಯೋಗ ಪಡೆಯಬೇಕೆಂದರು.

ಅಧ್ಯಕ್ಷತೆ ವಹಿಸಿದ್ದ ದಿ ಶಿವಮೊಗ್ಗ ಮಲ್ಟಿಪರ್ಪಸ್ ಸೋಷಿಯಲ್ ಸರ್ವಿಸ್ ಸೊಸೈಟಿಯ ನಿರ್ದೇಶಕರಾದ ಫಾ.ಕ್ಲಿಫರ್ಡ್ ರೋಶನ್ ಪಿಂಟೋ ಮಾತನಾಡಿ, ಕಲಿಕೆಯು ಸದಾ ನಮ್ಮ ಬಾಳ ಪಯಣದ ಸಂಗಾತಿ ಇದ್ದಂತೆ. ನಾವು ನಿರಂತರ ಕಲಿಕೆಯಲ್ಲಿ ತೊಡಗಿರಬೇಕು. ಕಲಿಕೆ ಮುಗಿದ ದಿನ ಸಾವು ಬಂದಂತೆ ಎಂದು ಭಾವಿಸಬಹುದು. ಸೇವೆ ನೀಡುವವರಿಗೆ ಈ ರೀತಿಯ ತರಬೇತಿ ಕಾರ್ಯಕ್ರಮಗಳು ಬಹು ಉಪಯುಕ್ತವಾಗಿದ್ದು, ಇವು ನಮ್ಮ ಕರ್ತವ್ಯವನ್ನು ಇನ್ನಷ್ಟು ಚೆನ್ನಾಗಿ ನಿರ್ವಹಿಸುವಂತೆ ಮಾಡುತ್ತವೆ ಎಂದರು.

ಮಹಿಳೆಯರ ಸಂರಕ್ಷಣೆ ಕುರಿತು ಹಲವಾರು ಕಾಯ್ದೆ, ಕಾನೂನುಗಳಿವೆ ಹಾಗೂ ಅವು ಅಷ್ಟೇ ಉಲ್ಲಂಘನೆಯಾಗುತ್ತಿವೆ. ಮಹಿಳೆ ಭಯದಿಂದ ಕಾಲ ಕಳೆಯುವಂತಾಗಿದೆ. ಸಮಾಜ ಮತ್ತು ಕುಟುಂಬಗಳಲ್ಲಿ ಆಕೆ ಶಾಂತಿ ನೆಮ್ಮದಿಯಿಂದ ಜೀವನ ಸಾಗಿಸುವ ವಾತಾವರಣವನ್ನು ಕಲ್ಪಿಸಬೇಕು. ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣೆ ಕಾಯ್ದೆ ಸೇರಿದಂತೆ ಮಹಿಳೆಯರಿಗೆ ಸಂಬಂಧಿಸಿದ ಕಾಯ್ದೆಗಳನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಿದಲ್ಲಿ ಸಮಾಜದಲ್ಲಿ ಶಾಂತಿಯ ವಾತಾವರಣವನ್ನು ಕಲ್ಪಿಸಬಹುದು ಎಂದು ಅಭಿಪ್ರಾಯಪಟ್ಟರು.

ಮಹಿಳೆಯರು ಮತ್ತು ಮಕ್ಕಳು ತುರ್ತು ಸಂದರ್ಭದಲ್ಲಿ ಸಂಪರ್ಕಿಸಬಹುದಾದ ಸಂಖ್ಯೆಗಳು ಹೀಗಿವೆ.

ಜಿಲ್ಲಾ ಮಕ್ಕಳ ರಕ್ಷಣಾ ಘಟಕ : 08182-251114, ಮಹಿಳಾ ವಿಶೇಷ ಚಿಕಿತ್ಸಾ ಘಟಕ: 181, ಮಕ್ಕಳ ಸಹಾಯವಾಣಿ(ಚಿತ ಕರೆ) 1098, ಪೊಲೀಸ್ ಇಲಾಖೆ ಸಹಾಯವಾಣಿ: 100

ಸಿಡಿಪಿಓ ಮತ್ತು ಸಾಂತ್ವನ ಕೇಂದ್ರ ಸಂಖ್ಯೆಗಳು ಕ್ರಮವಾಗಿ ಶಿವಮೊಗ್ಗ 08182-255139, 08182-271628. ಭದ್ರಾವತಿ 08282-266384, 08282-261077, ತೀರ್ಥಹಳ್ಳಿ 08181-228940, 08181-220024. ಹೊಸನಗರ 08182-221485, 08185-201268. ಸಾಗರ 08183-226804, 08183-221177. ಸೊರಬ 08184-272387, 08184-293617. ಶಿಕಾರಿಪುರ 08187-222593, 08187-222471.

ತರಬೇತಿ ಕಾರ್ಯಾಗಾರದಲ್ಲಿ ವಿವಿಧ ತಾಲ್ಲೂಕುಗಳ ಸಿಡಿಪಿಓ, ಎಸಿಡಿಪಿಓ ಗಳು, ಸಂರಕ್ಷಣಾಧಿಕಾರಿಗಳು, ಸ್ವಾಧಾರಾ, ಸಾಂತ್ವನ, ಉಜ್ವಲ ಕೇಂದ್ರದ ಪ್ರತಿನಿಧಿಗಳು, ನ್ಯಾಯಾಂಗ, ಪೊಲೀಸ್ ಇಲಾಖೆ ಅಧಿಕಾರಿ/ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು. ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜಣ್ಣ ಸಂಕಣ್ಣನವರ್, ಪೊಲೀಸ್ ಇಲಾಖೆಯ ಮುಖ್ಯ ಪೇದೆ ಮಂಜುನಾಥ್ ಪಾಟೀಲ್ ಕೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಗಾಯತ್ರಿ ಡಿ ಎಸ್ ಇವರು ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆ, ಪೊಲೀಸರ ಪಾತ್ರ, ಸಮಾಲೋಚನೆ ವಿಧಿ ವಿಧಾನ ಇತರೆ ವಿಷಯಗಳ ಕುರಿತು ಮಾಹಿತಿ ನೀಡಿದರು.

ವೇದಿಕೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಅಧಿಕಾರಿ(ಪ್ರಭಾರ) ಹಾಗೂ ಜಿಲ್ಲಾ ನಿರೂಪಣಾಧಿಕಾರಿ ಚಂದ್ರಪ್ಪ ಎನ್ ಇದ್ದರು. ಜಿಲ್ಲಾ ಸಂಯೋಜಕ ತಾಜುದ್ದೀನ್ ಖಾನ್ ನಿರೂಪಿಸಿದರು.
ಭದ್ರಾವತಿ ಸಿಡಿಪಿಓ ಸುರೇಶ್ ವಂದಿಸಿದರು.

ಶಿವಮೊಗ್ಗದ ತೇಜಸ್ವಿನಿಗೆ ಕಾಶಿ ವಿವಿ ಘಟಿಕೋತ್ಸವದಲ್ಲಿ 3 ಚಿನ್ನದ ಪದಕ ಪ್ರದಾನ

0

ದೇಶದ ಪ್ರತಿಷ್ಠಿತ ಕೇಂದ್ರೀಯ ವಿವಿ ವಾರಾಣಸಿಯ ಕಾಶಿ ಹಿಂದೂ ವಿಶ್ವವಿದ್ಯಾಲಯದ 102ನೇ ವರ್ಷದ ಘಟಿಕೋತ್ಸವದಲ್ಲಿ ತೇಜಸ್ವಿನಿ ದಿಗಂಬರ್ ವೆರ್ಣೇಕರ್ 3 ಚಿನ್ನದ ಪದಕಗಳನ್ನು ಪಡೆದಿದ್ದಾಳೆ.

ಕಾಶಿ ಹಿಂದೂ ವಿಶ್ವವಿದ್ಯಾಲಯದ ಹಿಂದೂಸ್ತಾನಿ ಶಾಸ್ತಿçÃಯ ಸಂಗೀತದ ಸ್ನಾತಕೋತ್ತರ ಪದವಿಯಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿ ಪ್ರಥಮ ಸ್ಥಾನ ಪಡೆದ ತೇಜಸ್ವಿನಿಗೆ 3 ಚಿನ್ನದ ಪದಕಗಳು, 2ನಗದು ಬಹುಮಾನ ಹಾಗೂ ಜೊತೆಗೆ  5 ಪ್ರಶಸ್ತಿ ಪತ್ರಗಳು ದೊರೆತಿವೆ. ಇವಳು ತನ್ನ ಪದವಿ ಶಿಕ್ಷಣವನ್ನು ಶಿವಮೊಗ್ಗದ ಕುವೆಂಪು ವಿವಿ ಯಲ್ಲಿ ಪಡೆದಿದ್ದಳು. ಈ ಪ್ರತಿಭಾನ್ವಿತೆಯು ಶಿವಮೊಗ್ಗದ ಲಕ್ಷ್ಮೀ ಬಾಯಿ ಹಾಗೂ ದಿ| ಹೆಚ್.ಎಸ್. ಪ್ರಭಾಕರ್ ಶೇಟ್ ಅವರ ಮೊಮ್ಮಗಳಾಗಿದ್ದಾಳೆ.

ದೊಡ್ಡೇರಿಯಲ್ಲಿ ಆರೋಗ್ಯ ತಪಾಸಣಾ ಶಿಬಿರ

0

SAI-VISLವತಿಯಿಂದ VISL ಆಸ್ಪತ್ರೆ, ಸಹ್ಯಾದ್ರಿ ನಾರಾಯಣಾ ಮಲ್ಟಿ
ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಶಂಕರ ಕಣ್ಣಿನ ಆಸ್ಪತ್ರೆ ಶಿವಮೊಗ್ಗ
ಇವರುಗಳ ಸಹಯೋಗದಲ್ಲಿ ದಿನಾಂಕ 14-12-2022 ರಂದು
ದೊಡ್ಡೇರಿ ಗ್ರಾಮ ಪಂಚಾಯತ್ ಗ್ರಾಮದಲ್ಲಿ ಆರೋಗ್ಯ ತಪಾಸಣಾ
ಶಿಬಿರವನ್ನು ಆಯೋಜಿಸಲಾಗಿತ್ತು.

ಸಾಮಾನ್ಯ ಆರೋಗ್ಯ ತಪಾಸಣೆ,
ಹೃದಯ ಮತ್ತು ಕಣ್ಣಿನ ತಪಾಸಣೆ, ಮೂಳೆ ಚಿಕಿತ್ಸೆಯ
ತಪಾಸಣೆಯನ್ನು ಏರ್ಪಡಿಸಲಾಗಿತ್ತು.

ಕಾರ್ಯಕ್ರಮವನ್ನು SAIL -VISL ಕಾರ್ಯಪಾಲಕ ನಿರ್ದೇಶಕರಾದ ಶ್ರೀ ಬಿ.ಎಲ್. ಚಂದ್ವಾನಿ, ಜೊತೆಗೆ
ಶ್ರೀ ಕೆ.ಎಸ್. ಸುರೇಶ್, ಮುಖ್ಯ ಮಹಾಪ್ರಬಂಧಕರು ,
ಶ್ರೀಮತಿ ದುಲಾರಿ ಚಂದ್ವಾನಿ, ದೊಡ್ಡೇರಿ ಗ್ರಾಮ ಪಂಚಾಯತ್
ಅಧ್ಯಕ್ಷೆ ಶ್ರೀಮತಿ ಮಧು ಸಿ. ಲೇಪಾಕ್ಷ, ಪಂಚಾಯಿತಿ ಅಭಿವೃದ್ಧಿ
ಅಧಿಕಾರಿ ಶ್ರೀ ಮಧುಸೂಧನ್ ಉದ್ಘಾಟಿಸಿದರು. ಸುಮಾರು 165 ಗ್ರಾಮಸ್ಥರು ಮತ್ತು ಗ್ರಾಮೀಣ ವಿದ್ಯಾರ್ಥಿಗಳು ಈ ಶಿಬಿರದ
ಸದುಪಯೋಗ ಪಡೆದರು.
VISLಐ ಆಸ್ಪತ್ರೆಯ ತಜ್ಞರಾದ ಡಾ|| ಎಚ್.ಶೋಭಾ, ಡಾ||
ಎಮ್.ವೈ.ಸುರೇಶ್ ಮತ್ತು ಡಾ|| ಎಸ್.ಎನ್. ಸುರೇಶ್, ಸಾಮಾನ್ಯ
ಆರೋಗ್ಯ, ಮೂಳೆ ಮತ್ತು ದಂತ ಸಮಸ್ಯೆಗಳ ಬಗ್ಗೆ ತಜ್ಞರ
ಸಲಹೆಯನ್ನು ನೀಡಿದರು.

ಇದರಲ್ಲಿ ಶ್ರೀಮತಿ ಲಿಲ್ಲಿ ಮರಿಯ, ಶ್ರೀ ಟಿ.ಎನ್.
ಕೃಷ್ಣ, ಶ್ರೀ ಅಲೆನ್ ಜುಡೊ ಪಿಂಟೊ, ಶ್ರೀ ಮಧುಕರ್ ಮತ್ತು ಶ್ರೀ
ಆರ್. ಮಂಜುನಾಥ್ ಸಹಕರಿಸಿದರು.
ಶಂಕರ ಕಣ್ಣಿನ ಆಸ್ಪತ್ರೆಯ ತಜ್ಞರಾದ ಡಾ|| ಮೊಹಮ್ಮದ್
ಶಹಬಾಜ್, ಶ್ರೀ ರವೀಂದ್ರ, ಶ್ರೀ ಅನ್ಶಾದ್ ಮತ್ತು ಕು.ಭೂಮಿಕಾ
ನೇತ್ರ ಪರೀಕ್ಷೆಗಳನ್ನು ನಡೆಸಿ ನೇತ್ರ ಆರೈಕೆಯ ಬಗ್ಗೆ
ತಜ್ಞರ ಸಲಹೆಯನ್ನು ನೀಡಿದರು.

ಸಹ್ಯಾದ್ರಿ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ತಜ್ಞರಾದ ಡಾ||
ಶರತ್, ಡಾ|| ಮಾವಿಶ್ ಎಂ. ಕರಕ, ಕು.ಅಶ್ವಿನಿ, ಶ್ರೀಮತಿ ತಾಸಿನಾ,
ಜೆನ್ನಿಫರ್, ಶ್ರೀ ಗಣೇಶ್ ಅವರು ಹೃದಯ ಸಂಬಂಧಿ
ಪರೀಕ್ಷೆಗಳನ್ನು ನಡೆಸಿ, ಹೃದ್ರೋಗ ಆರೈಕೆಯ ಬಗ್ಗೆ ತಜ್ಞರ
ಸಲಹೆಯನ್ನು ನೀಡಿದರು.

ಈ ವೇಳೆಯಲ್ಲಿ ಉಪಾಧ್ಯಕ್ಷೆ ಶ್ರೀಮತಿ ಹೇಮಾವತಿ, ದೊಡ್ಡೇರಿ
ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಮಂಜು.ಕೆ, ಶ್ರೀಮತಿ
ರಾಮಕ್ಕ, ಶ್ರೀ ಆಗಶರೀಫ್, ಶ್ರೀಮತಿ ಗೌರಿಬಾಯಿ, ಶ್ರೀಮತಿ ಗಂಗಮ್ಮ, ಶ್ರೀಮತಿ ಜಾನಿ.ಜೆ.ಬಿ, ಶ್ರೀಮತಿ ಲಲಿತಾ ಗಣೇಶ್ ಡಿ.ಬಿ, ಶ್ರೀ ಶ್ರೀನಿವಾಸ್‌ರಾವ್,
ಗ್ರಾಮ ಪಂಚಾಯತ್ ಸಿಬ್ಬಂದಿಗಳಾದ ಶ್ರೀ ಪಾಂಡುರಂಗ, ಶ್ರೀ
ಅಣ್ಣಪ್ಪ, ಶ್ರೀ ಮಲ್ಲೇಶ್, ಶ್ರೀ ಪ್ರವೀಣ್ ಕುಮಾರ್.ಎಲ್, ಮಹಾ
ಪ್ರಬಂಧಕರು ಮತ್ತು ಶ್ರೀಮತಿ ಶೋಭ.ಕೆ.ಎಸ್, ಸಹಾಯಕ ಪ್ರಬಂಧಕರು ಉಪಸ್ಥಿತರಿದ್ದರು.

ಕಳವಾದ ಸ್ವತ್ತನ್ನ ಪತ್ತೆಹಚ್ಚಿ ವಾಪಸುಮಾಡಿದ ಪೋಲೀಸ್ ಇಲಾಖೆ

0

2022ನೇ ಸಾಲಿನಲ್ಲಿ ಒಟ್ಟು 283 ಸ್ವತ್ತು ಕಳವು ಪ್ರಕರಣಗಳನ್ನ ಪತ್ತೆಹಚ್ಚಲಾಗಿತ್ತು.

ಅಂದಾಜು 4,32,71,203ರೂಗಳ ಸ್ವತ್ತನ್ನ ವಶಪಡಿಸಿಕೊಳ್ಳಲಾಗಿತ್ತು.

ದಿ:15-12-22ರಂದು ಶಿವಮೊಗ್ಗ DAR ಕವಾಯತು ಮೈದಾನದಲ್ಲಿ ಪ್ರಾಪರ್ಟಿ ರಿಟರ್ನ್ ಪರೇಡ್ ನಡೆಸಿ, ವಶಪಡಿಸಿಕೊಂಡ ಸ್ವತ್ತನ್ನು ಸಂಬಂಧಪಟ್ಟವರಿಗೆ ಹಿಂತಿರುಗಿಸಲಾಯಿತು.

ಋತುಚಕ್ರದ ಸಮಯದಲ್ಲಿ ಮಹಿಳೆಯರು ಸ್ವಚ್ಛತೆ ಕಾಪಾಡಬೇಕು- ಡಾ.ಸೀಮಾ

0

ಮಹಿಳೆಯರಲ್ಲಿ ಋತುಚಕ್ರವು ಒಂದು ನೈಸರ್ಗಿಕ ಪ್ರಕ್ರಿಯೆ ಯಾಗಿದ್ದು ಸಾಮಾನ್ಯವಾಗಿ ಹೆಣ್ಣುಮಕ್ಕಳ ಹದಿಹರೆಯದ ವಯಸ್ಸಿಗೆ ಬಂದಾಗ ಅದು ಪ್ರಾರಂಭವಾಗುವ ಜೊತೆಗೆ ಅನೇಕ ವರ್ಷಗಳವರೆಗೆ ಇರುವುದರಿಂದ ಪ್ರತಿಯೊಬ್ಬರೂ ಈ ಬಗ್ಗೆ ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ|| ಸೀಮಾ ಹೇಳಿದರು.

ಚಿಕ್ಕಮಗಳೂರಿನ ಮಲ್ಲಂದೂರು ರಸ್ತೆಯ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ರೋಟರಿ ಕ್ಲಬ್ ಹಾಗೂ ಕಾಲೇಜು ಆಡಳಿತ ಮಂಡಳಿ ಸಂಯುಕ್ತಾಶ್ರಯದಲ್ಲಿ ನಡೆದ ಅಂಗಾಂಗ ದಾನ ಮತ್ತು ಸ್ತ್ರೀಶಕ್ತಿ ಸಬಲೀಕರಣ ಕುರಿತ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಋತುಸ್ರಾವ ಸಮಯದಲ್ಲಿ ಬಳಸಿರುವ ಪ್ಯಾಡ್‌ಗಳನ್ನು ಸೂಕ್ತ ರೀತಿಯಲ್ಲಿ ವೈಜ್ಞಾನಿಕವಾಗಿ ವಿಲೇ ವಾರಿ ಮಾಡಲು ಕ್ರಮ ಕೈಗೊಳ್ಳಬೇಕು. ಮಹಿಳೆಯರು ಹಾಗೂ ಯುವತಿಯರು ಋತುಚಕ್ರ ದಿನಗಳಲ್ಲಿ ಹೆಚ್ಚಿನ ಮಟ್ಟದಲ್ಲಿ ಶುಚಿತ್ವಕ್ಕೆ ಆದ್ಯತೆ ನೀಡಬೇಕು ಎಂದು ಸಲಹೆ ಮಾಡಿದರು.

ಋತುಚಕ್ರ ಸಮಯದಲ್ಲಿ ಸ್ವಚ್ಚತೆ ಪಾಲಿಸುವುದರ ಜೊತೆಗೆ ನಿಮ್ಮ ಸುತ್ತಮುತ್ತಲಿನ ಮಹಿಳೆಯರಿಗೆ ಅರಿವು ಮೂಡಿಸುವ ಕೆಲಸ ಮಾಡಬೇಕು. ಗ್ರಾಮಿಣ ಮಟ್ಟದಲ್ಲಿ ಈ ಕುರಿತು ಸ್ವಲ್ಪ ಅರಿವಿನ ಕೊರತೆ ಇರು ವುದರಿಂದ ಆರೋಗ್ಯ ಇಲಾಖೆಯು ಗ್ರಾಮಸ್ಥರಲ್ಲಿ ಅರಿವು ಮೂಡಿಸುವ ಕಾರ್ಯದಲ್ಲಿ ತೊಡಗಿಸಿ ಕೊಂಡಿದೆ ಎಂದರು.
ಮಹಿಳಾ ಕಾಲೇಜು ಪ್ರಾಂಶುಪಾಲ ಎಸ್.ಎಂ.ನಟೇಶ್ ಮಾತನಾಡಿ ರೋಟರಿ ಕಾಫಿ ಲ್ಯಾಂಡ್ ಹಾಗೂ ಆರೋಗ್ಯ ಇಲಾಖೆಯಿಂದ ಶಾಲೆಗೆ ಅತ್ಯುತ್ತಮವಾದ ಕಾರ್ಯಕ್ರಮ ಆಯೋಜನೆ ಮಾಡಿರು ವುದು ಬಹಳಷ್ಟು ಉಪಯೋಗವಾಗಿದ್ದು ಈ ಬಗ್ಗೆ ವಿದ್ಯಾರ್ಥಿಗಳಲ್ಲಿರುವ ಕೆಲವು ಅನುಮಾನಗಳು ಬಗೆ ಹರಿಯಲಿದೆ ಎಂದು ತಿಳಿಸಿದರು.

ಇದೇ ವೇಳೆ ರೋಟರಿ ಕ್ಲಬ್ ನಿರ್ದೇಶಕ ಸೂರಜ್ ಸುಮಾರು ೬೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉಪಯುಕ್ತ ವಸ್ತುಗಳನ್ನು ಕೊಡುಗೆಯಾಗಿ ನೀಡಿದರು. ನಂತರ ಮಹಿಳಾ ವೈದ್ಯರ ತಜ್ಞರಿಂದ ವಿದ್ಯಾರ್ಥಿಗಳಿಗೆ ಸ್ತ್ರೀಶಕ್ತಿ ಸಬಲೀಕರಣ ಕುರಿತು ವಿಶೇಷ ಚರ್ಚೆಗಳು ನಡೆದವು.

ಈ ಸಂದರ್ಭದಲ್ಲಿ ರೋಟರಿ ಕಾಫಿ ಲಾಂಡ್ ಅಧ್ಯಕ್ಷ ಹೆಚ್.ಎಂ.ಪ್ರಕಾಶ್, ಸಹಾಯಕ ರಾಜ್ಯಪಾಲ ಗುರುಮೂರ್ತಿ, ಕಾಲೇಜು ಅಭಿವೃದ್ದಿ ಮಂಡಳಿ ಸದಸ್ಯ ರುದ್ರೇಶ್, ಡಾ|| ಭಾರತಿ ರಾಜಶೇಖರ್, ಡಾ|| ಸುಶ್ಮಾ, ಕಾಲೇಜು ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಕೃತಕ ಬುದ್ಧಿಮತ್ತೆ ಮತ್ತು ಹೊಸ ತಂತ್ರಜ್ಞಾನವು ಮನುಷ್ಯನಿಗೆ ಸಹಾಯಕ-ಡಾ.ಅಶೋಕ ರಾವ್

0

ಕೃತಕ ಬುದ್ದಿ ಮತ್ತೆ ಹಾಗೂ ಯಂತ್ರ ಕಲಿಕೆಯ ಹೊಸತಂತ್ರಜ್ಞಾನ ವನ್ನು ಮನುಷ್ಯನಿಗೆ ಸಹಾಯಕರಾಗಿ ಉಪಯೋಗಿಸಿಕೊಂಡಲ್ಲಿ ನಾಲ್ಕು ಮಂದಿಯ ಅನುಭವದ ಕೆಲಸವನ್ನು ಯಂತ್ರದ ಮೂಲಕ ಪಡೆಯಲು ಸಹಾಯವಾಗಲಿದೆ ಎಂದು ವಿದ್ಯಾಕೋಶ ಎಜುಕೇಷನ್ ಟೆಕ್ನಾಲಜಿ ಕಂಪನಿಯ ಸ್ಥಾಪಕ ಡಾ.ಅಶೋಕ್ ರಾವ್ ಹೇಳಿದರು.

ಚಿಕ್ಕಮಗಳೂರಿನ ಶ್ರೀ ಆದಿಚುಂಚನಗಿರಿ ಕಾಲೇಜು ಸಂಯುಕ್ತಾಶ್ರಯದಲ್ಲಿ ಕೃತಕ ಜ್ಞಾನ ಮತ್ತು ಗಣಿತ ಶಾಸ್ತç ಪ್ರತಿಷ್ಟಾನ ಹಾಗೂ ಕೃತಕ ಬುದ್ದಿ ಮತ್ತೆ ಮತ್ತು ಯಂತ್ರ ಕಲಿಕೆಯ ಕುರಿತ ಕಾರ್ಯಕ್ರಮವನ್ನು ಕಾಲೇಜಿನ ಪಾಲಿಟೆಕ್ನಿಕ್ ಸಭಾಂಗಣದಲ್ಲಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಪ್ರಸ್ತುತ ದಿನಗಳಲ್ಲಿ ವಿವಿಧ ಸಂಸ್ಥೆಗಳಲ್ಲಿ ಅನುಭವ ಹೊಂದಿ ಕಾರ್ಯನಿರ್ವಹಿಸುವವರ ಸಂಖ್ಯೆ ಕ್ಷಿಣಿಸುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ಕಾಲಘಟ್ಟಕ್ಕೆ ಯಂತ್ರಗಳಿಗೆ ಸಂಪೂರ್ಣ ಮಾಹಿತಿಗಳನ್ನು ಕೊಡುವ ಮುಖಾಂತರ ಸಹಾಯಕರಾಗಿ ಕಾರ್ಯನಿರ್ವಹಿಸಿಕೊಳ್ಳಬಹುದು ಎಂದು ತಿಳಿಸಿದರು.

ಮುಂದಿನ ದಿನಗಳಲ್ಲಿ ಕೆಲಸ ಹಾಗೂ ಮಾಹಿತಿಗಳು ಲಭಿಸುವುದು ಕಷ್ಟಸಾಧ್ಯವಾಗಿರುವ ಹಿನ್ನೆಲೆಯಲ್ಲಿ ಈ ಕಲಿಕೆಯನ್ನು ಎಲ್ಲೆಡೆ ಬೆಳೆಸಲು ಆಯಾ ಕಾಲೇಜುಗಳು ತಯಾರಿಗಳು ನಡೆಸುತ್ತಿವೆ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕಾಳಜಿ ವಹಿಸಿ ಸೂಕ್ಮತೆ ಹಾಗೂ ಶ್ರದ್ದೆಯಿಂದ ಅಭ್ಯಾಸಿಸಿದ್ದಲ್ಲಿ ಮಾತ್ರ ಮುಂದೆ ಉನ್ನತಮಟ್ಟದ ಉದ್ಯೋಗವು ಲಭಿಸಲಿದೆ ಎಂದರು.

ಎಐಟಿ ಕಾಲೇಜು ಪ್ರಾಂಶುಪಾಲ ಡಾ|| ಸಿ.ಟಿ.ಜಯದೇವ ಮಾತನಾಡಿ ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರವನ್ನು ಗಮನದಲ್ಲಿಟ್ಟುಕೊಂಡು ಎಐಟಿ ಕಾಲೇಜಿನಲ್ಲಿ ಕಳೆದ ವರ್ಷದಿಂದ ಕೃತಕ ಬುದ್ದಿ ಮತ್ತೆ ಹಾಗೂ ಯಂತ್ರ ಕಲಿಕೆಯ ತರಬೇತಿಯನ್ನು ಪ್ರಾರಂಭಿಸಲಾಗಿದ್ದು ವಿದ್ಯಾರ್ಥಿಗಳು ಈ ಕಲಿಕೆಯಲ್ಲಿ ಹೆಚ್ಚು ಜ್ಞಾನವನ್ನು ಪಡೆದುಕೊಳ್ಳುವ ಅವಶ್ಯವಿದೆ ಎಂದು ಹೇಳಿದರು.

ಯಂತ್ರಗಳಿಗೆ ಸಂಪೂರ್ಣ ಮಾಹಿತಿಗಳನ್ನು ಕೊಡುವ ಮೂಲಕ ಮನುಷ್ಯನ ರೀತಿಯಲ್ಲಿ ಯೋಚನೆ ಮಾಡುವ ಹಾಗೂ ನಿರ್ಧಾರವನ್ನು ಕೈಗೊಳ್ಳುವ ಸಾಧ್ಯತೆಯಿರುವ ಪರಿಣಾಮ ವಿದ್ಯಾರ್ಥಿಗಳು ಈ ಕ್ಷೇತ್ರದಲ್ಲಿ ಅತ್ಯಂತ ಶ್ರಮವಹಿಸಿದ್ದಲ್ಲಿ ಯಶಸ್ಸು ದೊರೆಯಲಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಎಐಎಂಎಲ್‌ನ ವಿಭಾಗದ ಮುಖ್ಯಸ್ಥೆ ಡಾ. ಎಂ.ಆರ್.ಸುನೀತಾ, ಸಹಾಯಕ ಪ್ರಾಧ್ಯಾಪಕ ವಿವೇಕಾನಂದ, ಡಾ.ಶ್ರೀಕಾಂತ್ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದಪ್ರತಿಭಾ ಪುರಸ್ಕಾರ

0

ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಶಿವಮೊಗ್ಗ ಪ್ರೆಸ್‌ಟ್ರಸ್ಟ್‌ ಸಹಯೋಗದಲ್ಲಿ ಡಿ.17ರಂದು ಸಂಜೆ 5.30ಕ್ಕೆ ಪತ್ರಿಕಾ ಭವನದಲ್ಲಿ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಗೋಪಾಲ್ ಎಸ್. ಯಡಗೆರೆ ಹೇಳಿದರು.

ಶಿವಮೊಗ್ಗದ ಪ್ರೆಸ್‌ಟ್ರಸ್ಟ್‌‌ನಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕಾರ್ಯಕ್ರಮವನ್ನು ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಉದ್ಘಾಟಿಸುವರು.

ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಪ್ರತಿಭಾ ಪುರಸ್ಕಾರ ನೀಡುವರು. ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪತ್ರಕರ್ತರ ಮಾಸಾಶನ ಸಮಿತಿ ಸದಸ್ಯರಾಗಿ ನೇಮಕಗೊಂಡ ಎನ್. ಮಂಜುನಾಥ್ ಅವರನ್ನು ಸನ್ಮಾನಿಸಲಾಗುತ್ತಿದೆ. ಸಂಘದ ಗೌರವಾಧ್ಯಕ್ಷ ಎಸ್. ಚಂದ್ರಕಾಂತ್, ಪ್ರಧಾನ ಕಾರ್ಯದರ್ಶಿ ಸಂತೋಷ್ ಕಾಚಿನಕಟ್ಟೆ, ಪ್ರೆಸ್ ಟ್ರಸ್ಟ್ ಕಾರ್ಯದರ್ಶಿ ನಾರಾಜ್ ನೇರಿಗೆ ಭಾಗವಹಿಸುವರು ಎಂದು ಮಾಹಿತಿ ನೀಡಿದರು.

ಅನೇಕ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ:

ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದಿಂದ ಮಕ್ಕಳ ದಿನಾಚರಣೆ ಅಂಗವಾಗಿ ಮಕ್ಕಳು ಮತ್ತು ವಿದ್ಯಾರ್ಥಿಗಳಿಗಾಗಿ ಅನೇಕ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.

ಈ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದವರಿಗೆ ಶನಿವಾರ ಇಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಬಹುಮಾನ ವಿತರಣೆ ನಡೆಯಲಿದೆ.
ಬಹುಮಾನ ಪಡೆದವರ ಜೊತೆಗೆ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಸ್ಪರ್ಧೆಯ ಪ್ರಮಾಣಪತ್ರವನ್ನು ನೀಡಲಾಗುತ್ತಿದೆ. ಜೊತೆಗೆ ಮುದ್ದು ಕಂದ ಸ್ಪರ್ಧೆಗೆ ಬಂದ ಪೋಟೊ ಹಾಗೂ ಚಿತ್ರಕಲೆಯ ಸ್ಪರ್ಧೆಗೆ ಬಂದ ಚಿತ್ರಕಲೆಗಳನ್ನು ಪ್ರದರ್ಶಿಸಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ಸಾರ್ವಜನಿಕರು ಹಾಗೂ ಸಂಘದ ಸದಸ್ಯರು ಹೆಚ್ಚಿಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.

1ರಿಂದ 3ವರ್ಷದೊಳಗಿನ ಮಕ್ಕಳಿಗೆ ನಡೆದ ಮುದ್ದು ಕಂದ ಸ್ಪರ್ಧೆಯಲ್ಲಿ ಯುಕ್ತಾವಿ ಶಿವಮೊಗ್ಗ- ಪ್ರಥಮ ಸ್ಥಾನ, ವಂಶಿಕಾ ವಿ. ಶ್ಯಾನಬೋಗ್- ದ್ವಿತೀಯ ಸ್ಥಾನ, ಸುವ್ಯಕ್ತ ಎಸ್.- ಹೊಳ್ಳಗೆ ತೃತೀಯ ಸ್ಥಾನ ಲಭಿಸಿದೆ. 1 ರಿಂದ 4 ಮತ್ತು 5 ರಿಂದ 7 ತರಗತಿಯ ಮಕ್ಕಳಿಗೆ ಪ್ರಕೃತಿ ಕುರಿತು ಪ್ರತ್ಯೇಕ ವಿಭಾಗದಲ್ಲಿ ಚಿತ್ರಕಲೆ ಸ್ಪರ್ಧೆ ನಡೆದಿದೆ.

ಇದರಲ್ಲಿ 1ರಿಂದ 5ನೇ ತರಗತಿ ವಿಭಾಗದಲ್ಲಿ ಎಸ್. ಸಮೃದ್- ಪ್ರಥಮ ಸ್ಥಾನ, ಮಹಮ್ಮದ್ ಸೌದ್ ತಲ್ಹಾ- ದ್ವಿತೀಯ ಸ್ಥಾನ, ಎಸ್.ಪಿ. ದೃತಿ- ತೃತೀಯ ಸ್ಥಾನ ಗಳಿಸಿದ್ದಾರೆ. 5ರಿಂದ 7ತರಗತಿ ವಿಭಾಗದಲ್ಲಿ ಯು.ಕೆ. ಯಶಿಕಾ- ಪ್ರಥಮ, ಟಿ.ಎನ್. ಪ್ರಥಮ್- ದ್ವಿತೀಯ, ಮಹತಿ ಎಂ. ದೀಕ್ಷಿತ್- ತೃತೀಯ ಸ್ಥಾನ ಗಳಿಸಿದ್ದಾರೆ. ಪ್ರೌಢ ಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಪ್ರತ್ಯೇಕ ವಿಭಾಗದಲ್ಲಿ ನಡೆದ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಭಾರತಿ ವಿದ್ಯಾಭವನದ ವಿದ್ಯಾರ್ಥಿನಿ ಧನ್ಯ ಎಸ್. ಉಮರಾಣಿ, ದ್ವಿತೀಯ ಸ್ಥಾನವನ್ನು ಸಾಗರದ ಪ್ರಜ್ಞಾ ಭಾರತಿ ಶಾಲೆಯ ಚಿರಾತನ ಭಡ್ತಿ, ತೃತೀಯ ಸ್ಥಾಾನವನ್ನು ಪೋದಾರ್ ಇಂಟರ್ ನ್ಯಾಷನಲ್ ಸ್ಕೂಲ್‌ನ ಎಸ್.ಎಸ್. ಅಕ್ಷತಾ ಪಡೆದಿದ್ದಾಾರೆ ಎಂದು ವಿವರಿಸಿದರು.