Thursday, August 6, 2026
Thursday, August 6, 2026
Home Blog Page 101

ಶಿವಮೊಗ್ಗದ ಎನ್‌ ಇ ಎಸ್ ಮೈದಾನದಲ್ಲಿ ಭಗೀರಥ ಜಯಂತೋತ್ಸವ

0

ಶಿವಮೊಗ್ಗ ಭಗೀರಥ ಜಯಂತೋತ್ಸವದ ಅಂಗವಾಗಿ ಭಗೀರಥ ಕಪ್ ಶಿವಮೊಗ್ಗದ ಎನ್‌ ಇ ಎಸ್ ಮೈದಾನದಲ್ಲಿ ಶನಿವಾರ ಹಾಗೂ ಭಾನುವಾರ ನಡೆಯಿತು.
ಪರಮಪೂಜ್ಯ ಶ್ರೀ ಪುರುಷೋತ್ತಮ ಪುರಿ ಮಹಾಸ್ವಾಮಿಗಳ ಆಶೀರ್ವಾದದಡಿಯಲ್ಲಿ 4ನೇ ವರ್ಷದ ಅದ್ದೂರಿ ಭಗೀರಥ ಕಪ್ 2 ದಿನಗಳ ಕಾಲ ನಡೆದಿದ್ದು ಶಿವಮೊಗ್ಗ ಜಿಲ್ಲೆಗಳಿಂದ 13 ತಂಡಗಳು ಆಗಮಿಸಿದ್ದವು, ನೇರ ಹಣಾಹಣಿಯಲ್ಲಿ 2026ರ ಚಾಂಪಿಯನ್ ಆಗಿ ಪ್ರಥಮ ಸ್ಥಾನ ಶಿವಮೊಗ್ಗ ಸಿಟಿ ಪಡೆದರೆ, ದ್ವಿತೀಯ ಸ್ಥಾನ ಭದ್ರಾವತಿ ತಂಡ, ತೃತೀಯ ಸ್ಥಾನ ಬೊಮ್ಮನಕಟ್ಟೆ ತಂಡ ಪಡೆದವು.
ಇದೇ ವೇಳೆ ರಾಷ್ಟ್ರಮಟ್ಟದ ಸನ್ಮಾನಿತ ಕ್ರೀಡಾಪಟುಗಳಾದ ಲೇಖನ ಸಗರ್, ಸಮರ್ಥ್ ಎಂ ಸಗರ್, ಪೂರ್ಣೇಶ್, ದರ್ಶನ್ ಇವರುಗಳಿಗೆ ಸನ್ಮಾನಿಸಲಾಯಿತು. ಕಾರ್ಯಕ್ರಮದ ಯಶಸ್ವಿಗೆ ಕಾರಣಕರ್ತರಾದ ಭಗೀರಥ ಉಪ್ಪಾರ ಸ್ಪೋರ್ಟ್ಸ್ ಅಕಾಡೆಮಿಯ ಸಂಸ್ಥಾಪಕ ಅಧ್ಯಕ್ಷರು ಹಾಗೂ ಉಸ್ತುವಾರಿ ವಹಿಸಿದ ಮುರಳಿ ಹೆಚ್ ಸಣ್ಣಕ್ಕಿ ,ಪ್ರಧಾನ ಕಾರ್ಯದರ್ಶಿಗಳಾದ ಗುರುಪ್ರಸಾದ್, ಕಾರ್ತಿಕ್, ಸಂಜು, ಮಂಜುನಾಥ್, ಭರತ್, ಮಂಜು, ಕಾರ್ತಿಕ್ ಇವರುಗಳ ಶ್ರಮ ಕಾರ್ಯಕ್ರಮದ ಯಶಸ್ವಿಗೆ ಕಾರಣವಾಯಿತು.
ಕಾರ್ಯಕ್ರಮಕ್ಕೆ ಶುಭ ಕೋರಲು ಆಗಮಿಸಿದಂತಹ ಕೆ ಎಸ್ ಈಶ್ವರಪ್ಪ , ಎಂ ಶ್ರೀಕಾಂತ್, ಉಪ್ಪಾರ ನಿಗಮ ಅಧ್ಯಕ್ಷ ಭರಮಣ್ಣ ಉಪ್ಪಾರ, ಕೆ ಇ ಕಾಂತೇಶ್, ನಲ್ಲೂರು ವಿಶ್ವನಾಥ್, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಉಮೇಶ್ ಆರ್, ಮಾಜಿ ಮಹಾಪೌರರು ಹಾಗೂ ಸದಸ್ಯ ನಾಗರಾಜ್ ಕಂಕಾರಿ, ಮಾಜಿ ಮಹಾನಗರ ಪಾಲಿಕೆಯ ಸದಸ್ಯ ಬೊಮ್ಮನಕಟ್ಟೆ ಮಂಜುನಾಥ್, ಹಾಪ್ ಕಾಮ್ಸ್ ನಿರ್ದೇಶಕರಾದ ಶರತ್ ಮರಿಯಪ್ಪ,ಭದ್ರಾವತಿ ಶ್ರೀಧರ್, ಸಾಗರ ರವಿ, ಸಿಟಿ ಕೋ ಆಪರೇಟಿವ್ ನಿರ್ದೇಶಕ ಪ್ರಸನ್ನ ಕುಮಾರ್, ಎಂ ಎನ್ ಲೋಕೇಶ್, ಗೊಲ್ಲರಹಳ್ಳಿ ಪ್ರಭು,ಚಂದ್ರು ಕಾಶಿಪುರ, ಹಾರನಹಳ್ಳಿ ರವಿ, ಭದ್ರಾವತಿ ರವೀಶ್, ಶ್ರೀನಿವಾಸ್, ದಿವಾಕರ್, ಆರ್ ಟಿ ಓ ದಿನೇಶ್, ಮಂಜುನಾಥ್ ಸಣ್ಣಕ್ಕಿ, ಚಂದ್ರು ಬನ್ನಿಕೆರೆ, ಶಿವಮೊಗ್ಗ ಜಿಲ್ಲಾ ಅಧ್ಯಕ್ಷರು ಮಾಲತೇಶ್ ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ , ಅಣ್ಣಪ್ಪ, ವರುಣ್ ಕುಂಸಿ, ಹಾಗೂ ಶಿವಮೊಗ್ಗ ಜಿಲ್ಲಾ ಪತ್ರಿಕಾ ಸ್ನೇಹಿತರಗಳಿಗೂ, ಆರಕ್ಷಕ ಸಿಬ್ಬಂದಿಯವರಿಗೂ, ಎನ್‌ ಇ ಎಸ್ ಸಂಸ್ಥೆಯ ಆಡಳಿತ ವರ್ಗದವರಿಗೂ, ಹಾಗೂ ಕಾಲೇಜಿನ ಭದ್ರತಾ ಸಿಬ್ಬಂದಿ ವರ್ಗದವರಿಗೂ ಕಾರ್ಯಕ್ರಮದ ನಿರೂಪಕರಾದ ಚೇತನ್ ಸರ್, ಕಾರ್ಯಕ್ರಮ ವೀಕ್ಷಿಸಲು ಬಂದಂತಹ ಶಿವಮೊಗ್ಗ ಜಿಲ್ಲಾ ಸಮಸ್ತ ಕುಲಬಾಂಧವರುಗಳು ಹಾಗೂ ಕ್ರೀಡಾ ಪ್ರೇಮಿಗಳಿಗೆ ಭಗೀರಥ ಸ್ಪೋರ್ಟ್ಸ್ ಅಕಾಡೆಮಿಯ ಅಧ್ಯಕ್ಷರಾದ ಮುರಳಿ ಹೆಚ್ ಸಣ್ಣಕ್ಕಿರವರು ತುಂಬು ಹೃದಯದ ಅನಂತಾನಂತ ಧನ್ಯವಾದಗಳು ಕೋರಿದ್ದಾರೆ

ಮೇ 16ಕ್ಕೆ ಯುರೋಪಿನಲ್ಲಿ ಬಸವ ಜಯಂತಿ ಸಮಾವೇಶ

0

ಜಗಜ್ಯೋತಿ ಶ್ರೀ ಬಸವೇಶ್ವರರ ಸಮಾನತೆಯ ಸಂದೇಶವನ್ನು ವಿಶ್ವದಾದ್ಯಂತ ಹರಡುವ ಮಹತ್ತರ ಉದ್ದೇಶದೊಂದಿಗೆ, ಯುರೋಪಿನ ವಿವಿಧ ದೇಶಗಳಲ್ಲಿ ನೆಲೆಸಿರುವ ಕನ್ನಡಿಗರು ಹಾಗೂ ಬಸವಭಕ್ತರು ಒಂದಾಗಿ ಮತ್ತೊಮ್ಮೆ ಐತಿಹಾಸಿಕ ಹೆಜ್ಜೆ ಇಟ್ಟಿದ್ದಾರೆ.
ಬಸವ ಸಮಿತಿ ಯುರೋಪ್ ವತಿಯಿಂದ ಎರಡನೇ ಬಸವ ಜಯಂತಿ ಸಮಾವೇಶವನ್ನು 2026ರ ಮೇ 16ರಂದು ಜರ್ಮನಿಯ ಎರ್ಲಾಂಗನ್ ನಗರದಲ್ಲಿ ಭಕ್ತಿಭಾವ ಹಾಗೂ ಸಾಂಸ್ಕೃತಿಕ ವೈಭವದೊಂದಿಗೆ ಆಯೋಜಿಸಲಾಗಿದೆ.
ಮೇ 16ರಂದು ಬೆಳಗ್ಗೆ 9.30ರಿಂದ ಎರ್ಲಾಂಗನ್‌ನ ಫ್ರೌನಾರಾಚ್ ಸಮುದಾಯ ಕೇಂದ್ರದಲ್ಲಿ ಬಸವ ಜಯಂತಿ ಸಮಾವೇಶ ನಡೆಯಲಿದೆ. ಐತಿಹಾಸಿಕ ಸಮಾರಂಭಕ್ಕೆ ಚಿಕ್ಕಮಗಳೂರಿನ ಶ್ರೀ ಬಸವತತ್ವ ಪೀಠ ಹಾಗೂ ಶಿವಮೊಗ್ಗ ಬಸವಕೇಂದ್ರದ ಡಾ. ಬಸವ ಮರುಳಸಿದ್ಧ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದಾರೆ.
ಫೆಡರಲ್ ರಿಪಬ್ಲಿಕ್ ಆಫ್ ಜರ್ಮನಿ ಭಾರತದ ರಾಯಭಾರಿ ಅಜಿತ್ ವಿನಾಯಕ್ ಗುಪ್ತೆ, ಭಾರತ ಶಾಸ್ತ್ರಜ್ಞ ಪ್ರೊ. ಡಾ. ರಾಬರ್ಟ್ ಜೆ. ಝೈಡೆನ್‌ಬೋಸ್, ವಿಶ್ವ ಹಿಂದೂ ಪರಿಷತ್ ಯುರೋಪ್ ಪ್ರತಿನಿಧಿ ರಾಹುಲ್ ನಾರಾಯಣ್ ಜಿ., ಚಿಕ್ಕಮಗಳೂರು ಐಸಿರಿ ಫೌಂಡೇಶನ್ ಅಧ್ಯಕ್ಷ ರೋಹನ್ ಭಾರ್ಗವಪುರಿ ಉಪಸ್ಥಿತರಿರುವರು.
ಬೆಳಿಗ್ಗೆ 09.30ಕ್ಕೆ ಪ್ರಾರಂಭವಾಗುವ ಸಮಾರಂಭದಲ್ಲಿ ಬಸವೇಶ್ವರರ ಭಾವಚಿತ್ರದ ಭವ್ಯ ಮೆರವಣಿಗೆ, ಕಲಾತಂಡಗಳ ಪ್ರದರ್ಶನ, ಪುಸ್ತಕ ಬಿಡುಗಡೆ ಹಾಗೂ ದಾಸೋಹ ಕಾರ್ಯಕ್ರಮಗಳು ನಡೆಯಲಿವೆ. ಮಕ್ಕಳಿಂದ ವಚನ ವಾಚನ, ವಚನ ನೃತ್ಯ ಹಾಗೂ ಶಾಸ್ತ್ರೀಯ ನೃತ್ಯಗಳು ಕಾರ್ಯಕ್ರಮದ ಮೆರುಗು ಹೆಚ್ಚಿಸಲಿವೆ. ವಿಶೇಷ ಆಕರ್ಷಣೆಯಾಗಿ ತಂಡಗಳಿಂದ ವಚನ ಗಾಯನ ಮತ್ತು ಸಂಗೀತ ಸಂಜೆ ಏರ್ಪಡಿಸಲಾಗಿದೆ.

ಹೊಳೆಹೊನ್ನೂರು: ಮೆಸ್ಕಾಂ ಜನ ಸಂಪರ್ಕ ಸಭೆ

0

ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಮೇ. 14 ರಂದು ಬೆಳಿಗ್ಗೆ 11.00 ರಿಂದ 01.00 ರವರೆಗೆ ಜನ ಸಂಪರ್ಕ ಸಭೆ ನಡೆಯಲಿದೆ. ಈ ಸಭೆಯಲ್ಲಿ ಮೆಸ್ಕಾಂನ ಅಧಿಕಾರಿಗಳು ಭಾಗವಹಿಸಲ್ಲಿದ್ದು, ಸಂಬಂಧಪಟ್ಟ ಪ್ರದೇಶದ ಗ್ರಾಹಕರ ಅಹವಾಲುಗಳನ್ನು ಸ್ವೀಕರಿಸುವುದರಿಂದ ಈ ಅವಕಾಶವನ್ನು ಗ್ರಾಹಕರು ಸದುಪಯೋಗಪಡಿಸಿಕೊಳ್ಳುವಂತೆ ಮೆಸ್ಕಾಂ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ದೂ.ಸಂ.;.9480833052 ನ್ನು ಸಂಪರ್ಕಿಸುವುದು.

ಏ.13 ಮತ್ತು 14 ರಂದು ವಿದ್ಯುತ್ ವ್ಯತ್ಯಯ

0

ಶಿವಮೊಗ್ಗ ನಗರ ಉಪವಿಭಾಗ-1, ಘಟಕ-2ರ ವ್ಯಾಪ್ತಿಯಲ್ಲಿ ಏ.13 ಮತ್ತು 14 ರಂದು ಬೆಳಗ್ಗೆ 10.00 ರಿಂದ ಮಧ್ಯಾಹ್ನ 2.00ರವರೆಗೆ ವಿದ್ಯುತ್ ಕಂಬ ತೆರವುಗೊಳಿಸುವ ಕಾಮಗಾರಿ ಇರುವುದರಿಂದ ಸೀತಾರಾಮ ಕಲ್ಯಾಣ ಮಂದಿರ ಅಡ್ಡರಸ್ತೆ, ಶನಿ ಮಹಾತ್ಮ ದೇವಸ್ಥಾನ ಅಡ್ಡರಸ್ತೆ, ವಿದ್ಯುತ್ ಪರೀವೀಕ್ಷಕರ ಕಚೇರಿ ರಸ್ತೆ, ವಾತ್ಸಲ್ಯ ಆಸ್ಪತ್ರೆ, ಮಲ್ಲಿಕಾರ್ಜುನ ಚಿತ್ರಮಂದಿರ ಅಡ್ಡರಸ್ತೆ, ಪಾರ್ಕ್ ಬಡಾವಣೆ ಹಾಗೂ ದುರ್ಗಿಗುಡಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ತಿಳಿಸಿದೆ.

Sri Adichunchanagiri Education Trustee ಜಪಾನ್ ನಲ್ಲಿ ನಡೆಯುವ ಏಷ್ಯನ್ ಗೇಮ್ಸ್ ಚಾಂಪಿಯನ್ ಗೆ | ಪವನ್, ಪುನೀತ್ ಅವಳಿ ಸಹೋದರರು ಭಾರತ ತಂಡಕ್ಕೆ ಆಯ್ಕೆ

0

Sri Adichunchanagiri Education Trustee ಷಟಲ್ ಬ್ಯಾಡ್ಮಿಂಟನ್ ನಲ್ಲಿ ಉತ್ತಮ ಸಾಧನೆ ಮಾಡಿರುವ ಪವನ್, ಪುನೀತ್, ಅವಳಿ ಸಹೋದರರು,ದೇಶದ ಪ್ರಮುಖ ಆಟಗಾರರಾಗುವ ಭರವಸೆ ಮೂಡಿಸಿದ್ದಾರೆ.
ಶಿವಮೊಗ್ಗ ನಗರದ ಪ್ರತಿಷ್ಠಿತ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟಿನ ಶಿವಮೊಗ್ಗ ಶಾಖೆಯ ಗುರುಪುರದ ಬಿಜಿಎಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ಓದುತ್ತಿರುವ ಅವಳಿ ಸಹೋದರರು,10ನೇ ತರಗತಿಯಲ್ಲಿ ವ್ಯಾಸಂಗಮಾಡುತ್ತಿದ್ದು, ಆಟದ ಜೊತೆಗೆ ಓದಿನಲ್ಲಿಯೂ ಮುಂದಿದ್ದಾರೆ.
ಪುನೀತ್.ಎಸ್. ಮತ್ತು ಪವನ್.ಎಸ್.ಬೆಂಗಳೂರಿನಲ್ಲಿ ನಡೆದಂತಹ 19ವರ್ಷ ವಯೋಮಿತಿಯೊಳಗಿನ ರಾಷ್ಟ್ರೀಯ ಷಟಲ್ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನಲ್ಲಿ ಇದೇ ತಿಂಗಳು 3 ರಿಂದ 10 ರವರೆಗೆ ನಡೆದ ಷಟಲ್ ಬ್ಯಾಡ್ಮಿಂಟನ್ ನಲ್ಲಿ ಭಾಗವಹಿಸಿ ಉತ್ತಮ ಸಾಧನೆ ಮಾಡಿರುವ ಪ್ರತಿಭೆಗಳು.
ರಾಷ್ಟ್ರೀಯ ಡಬಲ್ಸ್ ರ‌್ಯಾಂಕಿಂಗ್ ನಲ್ಲಿ ರಾಷ್ಟ್ರ ಮಟ್ಟದ ಷಟಲ್ ಬ್ಯಾಡ್ಮಿಂಟನ್ ನಲ್ಲಿ ಭಾಗವಹಿಸಿ, ಚಾಕ ಚಕ್ಕತೆಯ ಆಟದ ಪ್ರದರ್ಶನ ನೀಡಿ, ಡಬಲ್ಸ್ ನಲ್ಲಿ ಅಂತಿಮ ಪಂದ್ಯದಲ್ಲಿ ಅಸ್ಸಾಮಿನ ಅನಯನ್ ಬೋರ್ ಮತ್ತು ಕೇರಳದ ಬಿಜಾರ್ನ್ ಜೈಸನ್ ರನ್ನು, 21-19,21-10 ರ ಅಂತರದಿಂದ ಸೋಲಿಸಿ, ಮಿಕ್ಸಡ ಡಬಲ್ಸ್ ನಲ್ಲಿ ಪ್ರಥಮ ಸ್ಥಾನ ಪಡೆದು.ಹಾಗೂ ಅತ್ಯಾಕರ್ಷಕ ಪಾರಿತೋಷಕ ಮತ್ತು ಬಂಗಾರದ ಪದಕ, 82 ಸಾವಿರ ನಗದು ಬಹುಮಾನ ಪಡೆದು, ಜಿಲ್ಲೆ ಮತ್ತು ರಾಜ್ಯಕ್ಕೆ ಹಾಗೂ ಸಂಸ್ಥೆಯ ಮಡಿಲಿಗೆ ಕೀರ್ತಿ ತಂದು ಕೊಟ್ಟಿರುತ್ತಾರೆ.
ರಾಷ್ಟ್ರೀಯ ಷಟಲ್ ಬ್ಯಾಡ್ಮಿಂಟನ್ ಡಬಲ್ಸ್ ರ‍್ಯಾಂಕಿಂಗ್ ನಲ್ಲಿ ರ‍್ಯಾಂಕಿಂಗ್ ಪಟ್ಟಿಯಲ್ಲಿ ನಂಬರ್ ಒನ್ ಸ್ಥಾನವನ್ನು ಪಡೆದು,ಭಾರತ ತಂಡಕ್ಕೆ ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿ.
Sri Adichunchanagiri Education Trustee ಮುಂದಿನ ತಿಂಗಳು ಜೂನ್ 26 ರಿಂದ ಜಪಾನ್ ನಲ್ಲಿ ನಡೆಯುವ ಅಂಡರ್ 19 ವಯೋ ಮಿತಿಯೊಳಗಿನ ಏಷ್ಯನ್ ಗೇಮ್ಸ್ ಷಟಲ್ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನಲ್ಲಿ ಭಾರತ ತಂಡದ ಪರವಾಗಿ ಆಡಲಿದ್ದಾರೆ.
ಈ ಪ್ರತಿಭೆಗಳು ಶಿವಮೊಗ್ಗದ ಪುರಲೆಯ ವೆಂಕಟೇಶ ನಗರದಲ್ಲಿ ವಾಸವಿರುವ ಸುರೇಶ್ ಮತ್ತು ಶಕುಂತಲಾ ದಂಪತಿಗಳ ಪುತ್ರ ರಾಗಿರುತ್ತಾರೆ. ಇವರು ಪ್ರಸ್ತುತ ಬೆಂಗಳೂರಿನ ಸೆಲೆನೈಟ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ, ಶ್ರೀ ಮಧುಸೂಧನ್ ಅವರ ಗರಡಿಯಲ್ಲಿ ತರಬೇತಿಯನ್ನು ಪಡೆಯುತ್ತಿದ್ದು, ಕ್ರೀಡೆಯ ಜೊತೆಗೆ ಓದಿನಲ್ಲೂ ಪ್ರತಿಭಾನ್ವಿತ ರಾಗಿರುತ್ತಾರೆ
ಈ ಕ್ರೀಡಾ ಪ್ರತಿಭೆಗಳು ರಾಷ್ಟ ಮತ್ತು ಅಂತರ್ ರಾಷ್ಟ್ರಮಟ್ಟದ ಕ್ರೀಡೆಗಳಲ್ಲಿ ಉತ್ತಮ ಸಾಧನೆ ಮಾಡಲಿ ಎಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳಾದ ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರು, ಪೂಜ್ಯ ಶ್ರೀಶ್ರೀ ನಾದಮಯಾನಂದನಾಥ ಸ್ವಾಮೀಜಿಯವರು, ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು, ಶಾಲಾ ಕಾಲೇಜಿನ ಪ್ರಾಂಶುಪಾಲರಾದ ಸುರೇಶ್ ಎಸ್. ಎಚ್. ಹಾಗೂ ಅಧ್ಯಾಪಕ ವೃಂದದವರು, ಸಿಬ್ಬಂದಿವರ್ಗ ಹಾಗೂ ವಿದ್ಯಾರ್ಥಿಗಳು ಶುಭ ಹಾರೈಸಿದ್ದಾರೆ.

ಶಿವಮೊಗ್ಗದ ಎನ್‌ ಇ ಎಸ್ ಮೈದಾನದಲ್ಲಿ ಭಗೀರಥ ಕಪ್

0

ಶಿವಮೊಗ್ಗ ಭಗೀರಥ ಜಯಂತೋತ್ಸವದ ಅಂಗವಾಗಿ ಭಗೀರಥ ಕಪ್ ಶಿವಮೊಗ್ಗದ ಎನ್‌ ಇ ಎಸ್ ಮೈದಾನದಲ್ಲಿ ಶನಿವಾರ ಹಾಗೂ ಭಾನುವಾರ ನಡೆಯಿತು.
ಪರಮಪೂಜ್ಯ ಶ್ರೀ ಪುರುಷೋತ್ತಮ ಪುರಿ ಮಹಾಸ್ವಾಮಿಗಳ ಆಶೀರ್ವಾದದಡಿಯಲ್ಲಿ 4ನೇ ವರ್ಷದ ಅದ್ದೂರಿ ಭಗೀರಥ ಕಪ್ 2 ದಿನಗಳ ಕಾಲ ನಡೆದಿದ್ದು ಶಿವಮೊಗ್ಗ ಜಿಲ್ಲೆಗಳಿಂದ 13 ತಂಡಗಳು ಆಗಮಿಸಿದ್ದವು, ನೇರ ಹಣಾಹಣಿಯಲ್ಲಿ 2026ರ ಚಾಂಪಿಯನ್ ಆಗಿ ಪ್ರಥಮ ಸ್ಥಾನ ಶಿವಮೊಗ್ಗ ಸಿಟಿ ಪಡೆದರೆ, ದ್ವಿತೀಯ ಸ್ಥಾನ ಭದ್ರಾವತಿ ತಂಡ, ತೃತೀಯ ಸ್ಥಾನ ಬೊಮ್ಮನಕಟ್ಟೆ ತಂಡ ಪಡೆದವು.
ಇದೇ ವೇಳೆ ರಾಷ್ಟ್ರಮಟ್ಟದ ಸನ್ಮಾನಿತ ಕ್ರೀಡಾಪಟುಗಳಾದ ಲೇಖನ ಸಗರ್, ಸಮರ್ಥ್ ಎಂ ಸಗರ್, ಪೂರ್ಣೇಶ್, ದರ್ಶನ್ ಇವರುಗಳಿಗೆ ಸನ್ಮಾನಿಸಲಾಯಿತು. ಕಾರ್ಯಕ್ರಮದ ಯಶಸ್ವಿಗೆ ಕಾರಣಕರ್ತರಾದ ಭಗೀರಥ ಉಪ್ಪಾರ ಸ್ಪೋರ್ಟ್ಸ್ ಅಕಾಡೆಮಿಯ ಸಂಸ್ಥಾಪಕ ಅಧ್ಯಕ್ಷರು ಹಾಗೂ ಉಸ್ತುವಾರಿ ವಹಿಸಿದ ಮುರಳಿ ಹೆಚ್ ಸಣ್ಣಕ್ಕಿ ,ಪ್ರಧಾನ ಕಾರ್ಯದರ್ಶಿಗಳಾದ ಗುರುಪ್ರಸಾದ್, ಕಾರ್ತಿಕ್, ಸಂಜು, ಮಂಜುನಾಥ್, ಭರತ್, ಮಂಜು, ಕಾರ್ತಿಕ್ ಇವರುಗಳ ಶ್ರಮ ಕಾರ್ಯಕ್ರಮದ ಯಶಸ್ವಿಗೆ ಕಾರಣವಾಯಿತು.
ಕಾರ್ಯಕ್ರಮಕ್ಕೆ ಶುಭ ಕೋರಲು ಆಗಮಿಸಿದಂತಹ ಕೆ.ಎಸ್. ಈಶ್ವರಪ್ಪ , ಎಂ ಶ್ರೀಕಾಂತ್, ಉಪ್ಪಾರ ನಿಗಮ ಅಧ್ಯಕ್ಷ ಭರಮಣ್ಣ ಉಪ್ಪಾರ, ಕೆ ಇ ಕಾಂತೇಶ್, ನಲ್ಲೂರು ವಿಶ್ವನಾಥ್, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಉಮೇಶ್ ಆರ್, ಮಾಜಿ ಮಹಾಪೌರರು ಹಾಗೂ ಸದಸ್ಯ ನಾಗರಾಜ್ ಕಂಕಾರಿ, ಮಾಜಿ ಮಹಾನಗರ ಪಾಲಿಕೆಯ ಸದಸ್ಯ ಬೊಮ್ಮನಕಟ್ಟೆ ಮಂಜುನಾಥ್, ಹಾಪ್ ಕಾಮ್ಸ್ ನಿರ್ದೇಶಕರಾದ ಶರತ್ ಮರಿಯಪ್ಪ,ಭದ್ರಾವತಿ ಶ್ರೀಧರ್, ಸಾಗರ ರವಿ, ಸಿಟಿ ಕೋ ಆಪರೇಟಿವ್ ನಿರ್ದೇಶಕ ಪ್ರಸನ್ನ ಕುಮಾರ್, ಎಂ ಎನ್ ಲೋಕೇಶ್, ಗೊಲ್ಲರಹಳ್ಳಿ ಪ್ರಭು,ಚಂದ್ರು ಕಾಶಿಪುರ, ಹಾರನಹಳ್ಳಿ ರವಿ,
ಭದ್ರಾವತಿ ರವೀಶ್, ಶ್ರೀನಿವಾಸ್, ದಿವಾಕರ್, ಆರ್ ಟಿ ಓ ದಿನೇಶ್, ಮಂಜುನಾಥ್ ಸಣ್ಣಕ್ಕಿ, ಚಂದ್ರು ಬನ್ನಿಕೆರೆ, ಶಿವಮೊಗ್ಗ ಜಿಲ್ಲಾ ಅಧ್ಯಕ್ಷರು ಮಾಲತೇಶ್ ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ , ಅಣ್ಣಪ್ಪ, ವರುಣ್ ಕುಂಸಿ, ಹಾಗೂ ಶಿವಮೊಗ್ಗ ಜಿಲ್ಲಾ ಪತ್ರಿಕಾ ಸ್ನೇಹಿತರಗಳಿಗೂ, ಆರಕ್ಷಕ ಸಿಬ್ಬಂದಿಯವರಿಗೂ, ಎನ್‌ ಇ ಎಸ್ ಸಂಸ್ಥೆಯ ಆಡಳಿತ ವರ್ಗದವರಿಗೂ, ಹಾಗೂ ಕಾಲೇಜಿನ ಭದ್ರತಾ ಸಿಬ್ಬಂದಿ ವರ್ಗದವರಿಗೂ ಕಾರ್ಯಕ್ರಮದ ನಿರೂಪಕರಾದ ಚೇತನ್ ಸರ್, ಕಾರ್ಯಕ್ರಮ ವೀಕ್ಷಿಸಲು ಬಂದಂತಹ ಶಿವಮೊಗ್ಗ ಜಿಲ್ಲಾ ಸಮಸ್ತ ಕುಲಬಾಂಧವರುಗಳು ಹಾಗೂ ಕ್ರೀಡಾ ಪ್ರೇಮಿಗಳಿಗೆ ಭಗೀರಥ ಸ್ಪೋರ್ಟ್ಸ್ ಅಕಾಡೆಮಿಯ ಅಧ್ಯಕ್ಷರಾದ ಮುರಳಿ ಹೆಚ್ ಸಣ್ಣಕ್ಕಿ ರವರು ತುಂಬು ಹೃದಯದ ಅನಂತಾನಂತ ಧನ್ಯವಾದಗಳು ಕೋರಿದ್ದಾರೆ.

ಮಾರ್ಗಸೂಚಿ ಫಲಕವಿಲ್ಲದೇ ವಾಹನಸವಾರರ ಪರದಾಟ: ಜೆ.ಎಸ್. ಚಿದಾನಂದಗೌಡ

0

ಪ್ರವಾಸಿಗರಿಗೆ, ವಾಹನ ಸವಾರರಿಗೆ ನಿಗದಿತ ಸ್ಥಳ ತಲುಪಲು ಮಾರ್ಗಸೂಚಿ ಫಲಕಗಳು ಸಾಕಷ್ಟು ಸಹಾಯ ಮಾಡುತ್ತವೆ, ಆದರೆ, ಪಟ್ಟಣದ ಆಯಕಟ್ಟಿನ ವೃತ್ತಗಳಲ್ಲಿ ಮಾರ್ಗಸೂಚಿ ಫಲಕಗಳು ಇಲ್ಲದೇ ಸಾರ್ವಜನಿಕರಿಗೆ ಸಮಸ್ಯೆ ಎದುರಾಗಿದೆ.

ಪಟ್ಟಣದ ಪುರಸಭೆ ಮುಂಭಾಗದ ವೃತ್ತ, ಆನವಟ್ಟಿ ರಸ್ತೆಯ ಬ್ರಹ್ಮಶ್ರೀ ನಾರಾಯಣಗುರು ವೃತ್ತ, ಹೊಸಬಾಳೆ ರಸ್ತೆಯ ಶ್ರೀ ಸ್ವಾಮೀ ವಿವೇಕಾನಂದ ವೃತ್ತ, ತೋಗರ್ಸಿ ರಸ್ತೆಯ ಬಂಗಾರಧಾಮದ ಬಳಿ ಮಾರ್ಗಸೂಚಿ ಫಲಕಗಳು ಇಲ್ಲದೇ ವಾಹನಸವಾರರು ಹಾದಿಹೋಕರನ್ನು ಕಾಯುವ ಸ್ಥಿತಿ ನಿರ್ಮಾಣವಾಗಿದೆ.

ತಾಲೂಕು ಕೇಂದ್ರವಾದ ಪಟ್ಟಣದಿಂದ ಶಿರಾಳಕೊಪ್ಪ, ಹಾವೇರಿ, ದಾವಣಗೆರೆ, ಶಿವಮೊಗ್ಗ, ಆನವಟ್ಟಿ, ಹುಬ್ಬಳ್ಳಿ, ಬನವಾಸಿ, ಶಿರಸಿ, ಕುಮಟಾ, ಸಾಗರ, ಪ್ರವಾಸಿ ಸ್ಥಳಗಳಾದ ಸಿಗಂದೂರು, ವಿಶ್ವ ವಿಖ್ಯಾತ ಜೋಗ ಜಲಪಾತಕ್ಕೆ ಸಂಪರ್ಕ ಲಭಿಸುತ್ತದೆ. ಆದರೆ, ಸಮರ್ಪಕವಾದ ಮಾರ್ಗಸೂಚಿ ಫಲಕಗಳು ಇಲ್ಲದೇ ಇರುವುದರಿಂದ ದೂರದ ಊರಿಂದ ಆಗಮಿಸುವ ವಾಹನ ಸವಾರರಿಗೆ ಮಾರ್ಗ ತಿಳಿಯದಂತಾಗಿದ್ದು, ರಸ್ತೆ ಬದಿಯಲ್ಲಿನ ಹಾದಿ ಹೋಕರಿಂದ ನಿಗದಿತ ಸ್ಥಳ ತಲುಪಲು ಮಾಹಿತಿ ಪಡೆಯುವಂತಾಗಿದೆ. ಅಲ್ಲದೇ, ರಾಜ್ಯದಲ್ಲಿಯೇ ಹೆಚ್ಚಿನ ಪ್ರಮಾಣದಲ್ಲಿ ಅನಾನಸ್ ಬೆಳೆಯನ್ನು ತಾಲೂಕಿನಲ್ಲಿ ಬೆಳೆಯಲಾಗುತ್ತದೆ. ಸಗಟು ಲಾರಿಗಳು ಮುಂಬೈ, ದೆಹಲಿಗೆ ಸಂಚರಿಸುತ್ತವೆ. ಅವರಿಗೂ ಸಹ ಮಾರ್ಗಸೂಚಿ ಫಲಕಗಳಿಲ್ಲದಿರುವುದು ಗೊಂದಲಕ್ಕೆ ಎಡೆಮಾಡಿಕೊಡುತ್ತಿದೆ. ಅಧುನಿಕತೆಯ ಜ್ಞಾನ ಉಳ್ಳವರು ಗೂಗಲ್ ಮ್ಯಾಪ್ ಮೊರೆ ಹೋಗುತ್ತಾರೆ. ಆದರೆ, ಅದರ ಅರಿವಿಲ್ಲದವರಿಗೆ ತೀವ್ರ ಸಮಸ್ಯೆ ಭಾದಿಸುತ್ತಿದೆ.

ವಾಹನ ಸವಾರರಿಗೆ ಸ್ಪಷ್ಟವಾಗಿ ಕಾಣುವಂತೆ, ಗಾಳಿ-ಮಳೆಗೆ ಭಾಗದಂತೆ ಬಲವಾದ ಕಂಬಗಳ ಮೂಲಕ ಅಳವಡಿಸಬೇಕು. ಸಂಬಂಧಪಟ್ಟ ಇಲಾಖೆಯವರು ಕೂಡಲೇ ಎಚ್ಚೆತ್ತಕೊಂಡು ಪ್ರಮುಖ ವೃತ್ತಗಳಲ್ಲಿ ಮಾರ್ಗಸೂಚಿ ಫಲಕಗಳನ್ನು ಹಾಕುವ ಮೂಲಕ ವಾಹನ ಸವಾರರಿಗೆ ಅನುಕೂಲ ಕಲ್ಪಿಸಬೇಕು ಎಂಬುದು ಪ್ರಜ್ಞಾವಂತ ನಾಗರೀಕರ ಒತ್ತಾಯವಾಗಿದೆ.

ಬಾಕ್ಸ್:

ಸೊರಬ ಪಟ್ಟಣವು ತಾಲೂಕು ಕೇಂದ್ರವಾಗಿದ್ದು, ಪಟ್ಟಣದಿಂದ ಹಲವು ಜಿಲ್ಲೆಗಳಿಗೆ ಹಾಗೂ ಪ್ರವಾಸಿ ಸ್ಥಳಗಳಿಗೆ ಸಂಪರ್ಕ ದೊರೆಯುತ್ತದೆ. ಆದರೆ, ಪ್ರಮುಖ ವೃತ್ತಗಳಲ್ಲಿ ಮಾರ್ಗಸೂಚಿ ಫಲಕಗಳು ಇಲ್ಲದೇ ಇರುವುದು ವಾಹನ ಸವಾರರಿಗೆ ತೊಂದರೆಯಾಗಿದೆ. ಸಂಬಂಧಪಟ್ಟ ಪಿಡಬ್ಲ್ಯುಡಿ ಇಲಾಖೆ ಅಥವಾ ಪುರಸಭೆಯಿಂದ ಮಾರ್ಗಸೂಚಿ ಫಲಕಗಳನ್ನು ಅಳವಡಿಸಬೇಕು.

ಜೆ.ಎಸ್. ಚಿದಾನಂದಗೌಡ, ಅಧ್ಯಕ್ಷರು, ಸಾರ್ವಜನಿಕ ಹಿತರಕ್ಷಣಾ ಹೋರಾಟ ಸಮಿತಿ, ಸೊರಬ.

Chamber of Commerce Shivamogga ಹೈಕೋರ್ಟ್ ಸಂಚಾರಿ ಪೀಠ ಶಿವಮೊಗ್ಗದಲ್ಲಿ ಸ್ಥಾಪಿಸಲಿ :ಬಿ.ಗೋಪಿನಾಥ್

0

Chamber of Commerce Shivamogga ಹೈಕೋರ್ಟ್ ಸಂಚಾರಿ ಪೀಠ ಶಿವಮೊಗ್ಗದಲ್ಲಿ ಸ್ಥಾಪನೆಯಾಗಬೇಕು ಎಂದು ಶಿವಮೊಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಒತ್ತಾಯಿಸಿದ್ದಾರೆ.
ಹೈಕೋರ್ಟ್ ಸಂಚಾರಿ ಪೀಠ ಶಿವಮೊಗ್ಗದಲ್ಲಿ ಸ್ಥಾಪನೆ ಆಗಬೇಕು. ಬೇರೆ ಜಿಲ್ಲೆಗೆ ಯಾವುದೇ ಕಾರಣಕ್ಕೂ ವರ್ಗಾವಣೆ ಆಗಬಾರದು ಎನ್ನುವ ವಕೀಲರ ಸಂಘದ ಹೋರಾಟಕ್ಕೆ ಶಿವಮೊಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಪೂರ್ಣ ಬೆಂಬಲವಿದೆ ಎಂದು ತಿಳಿಸಿದ್ದಾರೆ.
ಕಂಠೀರವ ಸ್ಟುಡಿಯೋಸ್ ಅಧ್ಯಕ್ಷರ ಆಶಯದಂತೆ ಸ್ಟುಡಿಯೋದ ನೂತನ ಘಟಕ ಸ್ಥಾಪಿಸಲು ಹಾರನಹಳ್ಳಿ ಹೋಬಳಿಯ ಜಾಜುಹಳ್ಳಿ ಗ್ರಾಮದಲ್ಲಿ ಲಭ್ಯವಿರುವ 25 ಎಕರೆ ಜಮೀನು ಮಂಜೂರಾತಿ ಪ್ರಸ್ತಾಪಕ್ಕೆ ಒಪ್ಪಿಗೆ ನೀಡಬೇಕು. ಶಿವಮೊಗ್ಗದ ನೈಸರ್ಗಿಕ ಸೌಂದರ್ಯವು ಹೊರಾಂಗಣ ಚಿತ್ರೀಕರಣಕ್ಕೆ ಪೂರಕವಾಗಿದೆ. ಉಡುಪಿ, ಮಂಗಳೂರು, ಚಿಕ್ಕಮಗಳೂರು ಮತ್ತು ಕಾರವಾರ ಜಿಲ್ಲೆಗಳು ಸಮೀಪ ಇರುವ ಕಾರಣ ಈ ಸ್ಥಳ ಆಯ್ಕೆ ಮಾಡಲಾಗಿದೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಾರ್ಯದರ್ಶಿ ಪತ್ರ ಬರೆದಿದ್ದು, ಜಿಲ್ಲಾಧಿಕಾರಿಗಳು ಆದಷ್ಟು ಬೇಗ ಜಮೀನು ಮಂಜೂರು ಮಾಡಬೇಕು ಎಂದಿದ್ದಾರೆ.
ಬೆಂಗಳೂರು ಶಿವಮೊಗ್ಗ ನಡುವೆ ವಿಮಾನ ಸಂಚಾರ ಸೇವೆ ಮುಂದುವರೆಯಬೇಕು. ಶಿವಮೊಗ್ಗ ನಗರದಲ್ಲಿ ರಾಜ್ಯ ನೌಕರರ ವಿಮಾ ನಿಗಮದ ಉಪ ಪ್ರಾದೇಶಿಕ ಕಚೇರಿ ತೆರೆಯಬೇಕು. ಸರಕು ಮತ್ತು ಸೇವಾ ತೆರಿಗೆ ಮೇಲ್ಮನವಿಯ ನ್ಯಾಯಮಂಡಳಿ ಸ್ಥಾಪಿಸಬೇಕು. ಶಿವಮೊಗ್ಗದಲ್ಲಿ ಶುದ್ಧ ಕುಡಿಯ ನೀರು ಸರಬರಾಜು ಆಗಬೇಕು. ಮಹಾನಗರ ಪಾಲಿಕೆ ವ್ಯಾಪ್ತಿಯ ದೀಪಗಳ ನಿರ್ವಹಣೆಯನ್ನು ಸರಿಪಡಿಸಬೇಕು. ಸೋಗಾನೆ ವಿಮಾನ ನಿಲ್ದಾಣದಲ್ಲಿ ನೈಟ್ ಲ್ಯಾಂಡಿಂಗ್ ಸೌಲಭ್ಯ ಆದಷ್ಟು ಬೇಗ ಪೂರ್ಣಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
Chamber of Commerce Shivamogga ವಿಜಯ ಸೌಹಾರ್ದ ಕ್ರೆಡಿಟ್ ಸಹಕಾರ ಸಂಘದ 71ನೇ ಶಾಖೆಯನ್ನು ಶಿವಮೊಗ್ಗದಲ್ಲಿ ತೆರೆಯುವ ಮೂಲಕ ರಾಜ್ಯದ ಪ್ರಮುಖ ಕೈಗಾರಿಕಾ ಸಂಸ್ಥೆಯಾದ ನಿರಾಣಿ ಗ್ರೂಪ್ ಶಿವಮೊಗ್ಗದಲ್ಲಿ ಕಾಲಿಟ್ಟಿದೆ. ಶಿವಮೊಗ್ಗದಲ್ಲಿ ವಿದ್ಯುತ್ ಕೃಷಿ ಆಧಾರಿತ ಕೈಗಾರಿಕೆ ಶಿಕ್ಷಣ ಮತ್ತು ಆರೋಗ್ಯ, ಬಯೋ ಫುಲ್, ಎಥೆನಾಲ್ , ಜೈವಿಕ ಪ್ಲಾಸ್ಟಿಕ್ ಉತ್ಪಾದನಾ ಹೀಗೆ ಪರಿಸರ ಸ್ನೇಹಿ ಕೈಗಾರಿಕಾ ಕ್ಷೇತ್ರದಲ್ಲಿ ಬಂಡವಾಳವನ್ನು ಹೂಡುವಂತೆ ನಿರಾಣಿ ಗ್ರೂಪ್‌ಗೆ ಮನವಿ ಮಾಡುತ್ತೇವೆ ಎಂದಿದ್ದಾರೆ.
ಶಿವಮೊಗ್ಗ ಜಿಲ್ಲಾ ಕೈಗಾರಿಕಾ ಬೆಳವಣಿಗೆಗೆ ಅನುಕೂಲ ವಾತಾವರಣ ಮುಂದುವರಿಯಲು ಸರ್ಕಾರದೊಂದಿಗೆ ಸಹಕರಿಸಲು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಸದಾ ಸಿದ್ಧವಿದೆ ಎಂದು ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

S. N. Channabasappa ದೇಶದ ಬೊಕ್ಕಸ ಲೂಟಿ ಮಾಡಿದ ಕಾಂಗ್ರೆಸ್ಸಿಗರಿಗೆ ಮೋದಿಯವರ ರಾಷ್ಟ್ರಭಕ್ತಿಯ ಮಿತವ್ಯಯದ ಪಾಠ ಅರ್ಥವಾಗದು: ಶಾಸಕ ಎಸ್. ಎನ್. ಚನ್ನಬಸಪ್ಪ

0

S. N. Channabasappa ದೇಶದ ಹಿತದೃಷ್ಟಿಯಿಂದ ಹಾಗೂ ಮುಂಬರುವ ಪೀಳಿಗೆಯ ಸುಸ್ಥಿರ ಭವಿಷ್ಯಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರು ಜನರಲ್ಲಿ ಶಿಸ್ತು ಮತ್ತು ಮಿತವ್ಯಯದ ಬಗ್ಗೆ ಮಾಡಿರುವ ಮನವಿಯನ್ನು ಕಾಂಗ್ರೆಸ್ ನಾಯಕರು “ವೈಫಲ್ಯ” ಎಂದು ಕರೆಯುತ್ತಿರುವುದು ಅತ್ಯಂತ ಹಾಸ್ಯಾಸ್ಪದ ಸಂಗತಿಯಾಗಿದೆ ಎಂದು ಶಾಸಕರಾದ ಎಸ್.ಎನ್‌. ಚೆನ್ನಬಸಪ್ಪ ಅವರು ತಿಳಿಸಿದ್ದಾರೆ.

ಚುನಾವಣೆ ಮುಗಿದ ಮೇಲೆ ದೇಶದ ವಾಸ್ತವ ಸ್ಥಿತಿಯನ್ನು ಮರೆಮಾಚದೆ, ಜನರನ್ನು ಜವಾಬ್ದಾರಿಯುತವಾಗಿ ಮುನ್ನಡೆಸುವ ಸಾಹಸ ಕೇವಲ ಮೋದಿಯವರಿಗೆ ಮಾತ್ರ ಸಾಧ್ಯ. ಆದರೆ ಸ್ವಾರ್ಥ ರಾಜಕಾರಣದಲ್ಲಿ ಮುಳುಗಿರುವ ಕಾಂಗ್ರೆಸ್ಸಿಗರಿಗೆ ದೇಶದ ಆರ್ಥಿಕ ಸ್ವಾವಲಂಬನೆ ಎನ್ನುವುದು ವೈಫಲ್ಯದಂತೆ ಕಾಣುತ್ತಿರುವುದು ಅವರ ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ನಾಯಕರು ಮೋದಿಯವರನ್ನು ಪ್ರಶ್ನಿಸುವ ಮೊದಲು ತಮ್ಮ ಪಕ್ಷದ ಆಡಳಿತಾವಧಿಯ ಕರಾಳ ಇತಿಹಾಸವನ್ನು ಒಮ್ಮೆ ನೆನಪಿಸಿಕೊಳ್ಳಲಿ. 1970ರ ದಶಕದಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ಆರ್ಥಿಕ ಸಂಕಷ್ಟ ಎದುರಾದಾಗ, ಸರ್ಕಾರಿ ನೌಕರರ ವೇತನದ ಒಂದು ಭಾಗವನ್ನು ಕಡ್ಡಾಯವಾಗಿ ಠೇವಣಿ ಇಡುವ ‘Compulsory Deposit Scheme’ ಜಾರಿಗೆ ತಂದು ಜನರ ಹಣವನ್ನೇ ಕಸಿದುಕೊಂಡಿದ್ದರು ಮತ್ತು ತೈಲ ಉಳಿತಾಯಕ್ಕಾಗಿ ಜನರ ಮೇಲೆ ಕಠಿಣ ನಿರ್ಬಂಧ ಹೇರಿದ್ದರು.

2012ರಲ್ಲಿ ದೇಶದ ಆರ್ಥಿಕತೆ ಹದಗೆಟ್ಟಾಗ ಅಂದಿನ ಹಣಕಾಸು ಸಚಿವ ಪಿ. ಚಿದಂಬರಂ ಅವರು ಇದೇ ರೀತಿ ದೇಶದ ಜನರಲ್ಲಿ ‘ಚಿನ್ನ ಖರೀದಿಸುವುದನ್ನು ನಿಲ್ಲಿಸಿ’ ಎಂದು ಬಹಿರಂಗವಾಗಿ ಬೇಡಿಕೊಂಡಿದ್ದರು. ಅಷ್ಟೇ ಅಲ್ಲದೆ, ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರು ‘ಹಣವೇನು ಮರದಲ್ಲಿ ಬೆಳೆಯುವುದಿಲ್ಲ’ ಎಂದು ಹೇಳುವ ಮೂಲಕ ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡು ಜನಸಾಮಾನ್ಯರ ಸಂಕಷ್ಟವನ್ನು ಹೀಗಳೆದಿದ್ದರು. ಅಂದು ಅವರು ಮಾಡಿದ ಇಂತಹ ಆರ್ಥಿಕ ಅಶಿಸ್ತಿನ ಪರಿಣಾಮವಾಗಿ ಭಾರತವು ವಿಶ್ವದ ಅತ್ಯಂತ ದುರ್ಬಲ ಆರ್ಥಿಕತೆಗಳ (Fragile Five) ಪಟ್ಟಿಗೆ ಸೇರಿತ್ತು ಎಂಬ ಸತ್ಯವನ್ನು ರಾಹುಲ್ ಗಾಂಧಿಯವರು ಮರೆತಂತಿದೆ. ಎಂದು ಹೇಳಿದ್ದಾರೆ.

ಮೋದಿಯವರು ಮೆಟ್ರೋ ಬಳಸಿ ಅಥವಾ ಇಂಧನ ಉಳಿಸಿ ಎಂದು ಕರೆ ನೀಡುತ್ತಿರುವುದು ಕೇವಲ ಪೆಟ್ರೋಲ್ ಉಳಿಸಲು ಮಾತ್ರವಲ್ಲ, ಅದು ಮುಂದಿನ ತಲೆಮಾರಿಗೆ ಮಾಲಿನ್ಯಮುಕ್ತ ಪರಿಸರವನ್ನು ನೀಡುವ ಉದ್ದೇಶವನ್ನು ಹೊಂದಿದೆ. ವಿದೇಶಿ ವಸ್ತುಗಳ ವ್ಯಾಮೋಹ ಬಿಟ್ಟು ದೇಶಿ ಉತ್ಪನ್ನಗಳಿಗೆ ಆದ್ಯತೆ ನೀಡಿ ಎಂದು ಹೇಳುವುದು ‘ಆತ್ಮನಿರ್ಭರ ಭಾರತ’ದ ಸಂಕಲ್ಪವೇ ಹೊರತು ಅಸಹಾಯಕತೆಯಲ್ಲ. ರೈತರಿಗೆ ಕಡಿಮೆ ರಸಗೊಬ್ಬರ ಬಳಸಿ ಎಂದು ಹೇಳುತ್ತಿರುವುದು ಮಣ್ಣಿನ ಫಲವತ್ತತೆಯನ್ನು ಕಾಪಾಡಲು ಮತ್ತು ವಿಷಮುಕ್ತ ಕೃಷಿಯನ್ನು ಉತ್ತೇಜಿಸಲೆಂದೇ ಹೊರತು ಗೊಬ್ಬರದ ಕೊರತೆಯಿಂದಲ್ಲ. ಕಾಂಗ್ರೆಸ್ಸಿಗರು ಜನರ ಮನಸ್ಸಿನಲ್ಲಿ ಭಯ ಬಿತ್ತುವುದನ್ನು ಬಿಟ್ಟು, ದೇಶದ ಪ್ರಗತಿಯಲ್ಲಿ ಸಕಾರಾತ್ಮಕವಾಗಿ ಪಾಲ್ಗೊಳ್ಳುವುದನ್ನು ಕಲಿಯಲಿ. ಮೋದಿಯವರು ದೇಶವನ್ನು ಕಟ್ಟುವ ಹಾದಿಯಲ್ಲಿದ್ದಾರೆ, ಅದನ್ನು ಕೆಡವಲು ಯತ್ನಿಸುತ್ತಿರುವವರು ಯಾರು ಎಂಬುದು ಜನರಿಗೆ ಚೆನ್ನಾಗಿ ತಿಳಿದಿದೆ ಎಂದು ಹೇಳಿದ್ದಾರೆ.

S. N. Channabasappa ಇತಿಹಾಸದುದ್ದಕ್ಕೂ ಹಗರಣಗಳಲ್ಲೇ ಮುಳುಗಿ, ದೇಶದ ಬೊಕ್ಕಸವನ್ನು ಲೂಟಿ ಮಾಡಿ, ಭಾರತವನ್ನು ವಿಶ್ವದ ಮುಂದೆ ಭಿಕ್ಷಾಪಾತ್ರೆಯೊಂದಿಗೆ ನಿಲ್ಲಿಸಿದ್ದ ಕಾಂಗ್ರೆಸ್ಸಿಗರಿಗೆ ಇಂದು ದೇಶಭಕ್ತಿ ಮತ್ತು ಶಿಸ್ತಿನ ಪಾಠ ಅರ್ಥವಾಗುತ್ತಿಲ್ಲ. ದೇಶಕ್ಕಾಗಿ ‘ಝೋಳಿಗೆ’ ಹಿಡಿದು ಹೊರಡಲು ಸಿದ್ಧವಿರುವ ಮೋದಿಯವರ ತ್ಯಾಗದ ಬಗ್ಗೆ ಮಾತನಾಡುವ ನೈತಿಕತೆ, ವಿದೇಶಿ ಮಣ್ಣಿನಲ್ಲಿ ನಿಂತು ಸ್ವದೇಶವನ್ನು ನಿಂದಿಸುವ ರಾಹುಲ್ ಗಾಂಧಿಯವರಿಗಾಗಲಿ ಅಥವಾ ಅವರ ಗುಲಾಮರಿಗಾಗಲಿ ಖಂಡಿತ ಇಲ್ಲ. ಹನ್ನೆರಡು ವರ್ಷಗಳ ಆಡಳಿತದ ನಂತರವೂ ನಮಗೆ ಮಾರ್ಗದರ್ಶನ ನೀಡುವ ಪ್ರಧಾನಿ ಬೇಕೇ ಹೊರತು, ಹನ್ನೆರಡು ನಿಮಿಷವೂ ದೇಶದ ಹಿತದೃಷ್ಟಿಯಿಂದ ಯೋಚಿಸದ ಇಂತಹ ದಿವಾಳಿ ಕಾಂಗ್ರೆಸ್ ನಾಯಕರು ಬೇಕಿಲ್ಲ.

ನಿಮ್ಮ ಈ ಕಪಟ ನಾಟಕಕ್ಕೆ ಈಗಾಗಲೇ ದೇಶಾದ್ಯಂತ ಜನತೆ ತಕ್ಕ ಪಾಠ ಕಲಿಸುತ್ತಿದ್ದಾರೆ. ನಿಮ್ಮ ಈ ಸುಳ್ಳಿನ ಸಾಮ್ರಾಜ್ಯವನ್ನು ದೇಶದ ಜನರು ಎಂದಿಗೂ ಒಪ್ಪುವುದಿಲ್ಲ ಮತ್ತು ಮುಂಬರುವ ದಿನಗಳಲ್ಲಿ ಕಾಂಗ್ರೆಸ್‌ಗೆ ಅಸ್ತಿತ್ವವೇ ಇಲ್ಲದಂತೆ ಮಾಡಲಿದ್ದಾರೆ ಎಂದು ಹೇಳಿದ್ದಾರೆ.

World Mother’s Day ತಾಯಿ ಇಲ್ಲದ ಬದುಕು ಶೂನ್ಯ, ತಾಯಿಯನ್ನು ಗೌರವಿಸಿದರೆ ದೈವವನ್ನು ಪೂಜಿಸಿದಂತೆ- ಬಸವರಾಜ್ ಎಸ್.ಹೊರಟ್ಟಿ

0

World Mother’s Day ಅವ್ವ ಎನ್ನುವ ಎರಡಕ್ಷರ ನನ್ನ ಪಾಲಿಗೆ ಕೇವಲ ಹೆಸರಲ್ಲ, ಅದು ನನ್ನ ಬದುಕಿನ ಅಕ್ಷಯ ಚೈತನ್ಯ. ಎದೆಯ ಒರತೆಯಲ್ಲಿ ಸದಾಕಾಲ ತಿಳಿನೀರಿನ ಬುಗ್ಗೆಯಂತೆ ಉಕ್ಕುವ ಅವ್ವನ ನೆನಪುಗಳೇ ನನ್ನ ಜೀವನದ ದಾರಿದೀಪ, ನನ್ನ ಪ್ರತಿ ದಿನ ಆರಂಭವಾಗುವುದೇ ಅವ್ವನ ಸ್ಮರಣೆಯಿಂದ. ಬಾಲ್ಯದಲ್ಲಿ ಅವ್ವ ಹಾಡುತ್ತಿದ್ದ ಆ ಜೋಗುಳದ ಮಧುರ ಧ್ವನಿ ಇಂದಿಗೂ ನನ್ನ ಕಿವಿಯಲ್ಲಿ ರಿಂಗಣಿಸುತ್ತಿದೆ, ಮನಸ್ಸಿಗೆ ನೆಮ್ಮದಿ ನೀಡುತ್ತಿದೆ‌ ಎಂದು ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಎಸ್ ಹೊರಟ್ಟಿ ಅವರು ತಿಳಿಸಿದರು.

ವಿಶ್ವ ತಾಯಂದಿರ ದಿನವಾದ ಇಂದು‌ ಅವರು ಮಾತನಾಡುತ್ತಾ, ಅವ್ವ ನನ್ನ ಪಾಲಿನ ಸರ್ವಸ್ವ ಅವಳು ನನ್ನನ್ನು ಸದಾ ಕಾಯುವ ಶಕ್ತಿ ಪ್ರೀತಿಯಿಂದ ಕಾಡುವ ಮಮತೆ. ತಾಯಿಯ ಪ್ರೀತಿ ಮತ್ತು ತ್ಯಾಗಕ್ಕೆ ಪ್ರತಿಯಾಗಿ ನಾವು ಏನನ್ನೂ ನೀಡಿದರೂ ಅದು ಕಡಿಮೆಯೇ. ಈ ಜನ್ಮವಷ್ಟೇ ಅಲ್ಲ ನೂರು ಜನ್ಮ ಎತ್ತಿ ಬಂದರೂ ತಾಯಿಯ ಋಣ ತೀರಿಸಲು ಸಾಧ್ಯವಿಲ್ಲ.

ನಮ್ಮ ತಾಯಿ ಶ್ರೀಮತಿ ಗುರವ್ವ ಶಿವಲಿಂಗಪ್ಪ ಹೊರಟ್ಟಿ ಅವರ ಸವಿನೆನಪಿನಲ್ಲಿ ಸ್ಥಾಪಿಸಿರುವ ‘ಅವ್ವ ಸೇವಾ ಟ್ರಸ್ಟ್ ಮೂಲಕ ನೊಂದವರಿಗೆ ಆಸರೆಯಾಗುವುದು, ಸಾಧಕರನ್ನು ಗುರುತಿಸುವುದು ಮತ್ತು ಪ್ರತಿಭಾವಂತರಿಗೆ ನೆರವಾಗುವ ಸಮಾಜಮುಖಿ ಕೆಲಸಗಳಲ್ಲಿ ನಾನು ಸದಾ ನಿಮ್ಮೊಂದಿಗಿದ್ದೇನೆ ಎಂದು ತಿಳಿಸಲು ಹೆಮ್ಮೆ ಎನಿಸುತ್ತದೆ ಎಂದು‌ ತಿಳಿಸಿದರು.

World Mother’s Day ತಾಯಿಯಿಲ್ಲದ ಬದುಕು ಶೂನ್ಯ, ತಾಯಿಯನ್ನು ಗೌರವಿಸುವುದು ಎಂದರೆ ದೈವವನ್ನು ಪೂಜಿಸಿದಂತೆ. ಈ ಸುದಿನದಂದು ಜಗತ್ತಿನ ಎಲ್ಲಾ ತಾಯಂದಿರಿಗೂ ಶಿರಬಾಗಿ ನಮಿಸುತ್ತಾ ವಿಶ್ವ ತಾಯಂದಿರ ದಿನಾಚರಣೆಯ ಶುಭಾಶಯಗಳನ್ನು ಕೋರುತ್ತೇನೆ ಎಂದು ತಿಳಿಸಿದರು.