Thursday, August 6, 2026
Thursday, August 6, 2026
Home Blog Page 100

ವಿಧಾನಸೌಧದಲ್ಲಿ ಡಿಸ್ಟಲರಿ ಮತ್ತು ಬ್ರಿವರೇಜಸ್‌ಗಳ ಮುಖ್ಯಸ್ಥರೊಂದಿಗೆ ಸಭೆ

0

ವಿಧಾನಸೌಧದ ಸಮ್ಮೇಳನ‌ ಸಭಾಂಗಣದಲ್ಲಿ ಡಿಸ್ಟಲರಿ ಮತ್ತು ಬ್ರಿವರೇಜಸ್‌ಗಳ ಮುಖ್ಯಸ್ಥರೊಂದಿಗೆ ಅಬಕಾರಿ ಸಚಿವರಾದ ಆರ್ ಬಿ ತಿಮ್ಮಾಪೂರ ಅವರು ಸಭೆ ನಡೆಸಿದರು. ಡಿಸ್ಟಲರಿ ಮತ್ತು ಬ್ರಿವರೇಜಸ್‌ಗಳಿಗೆ ಸಂಬಂಧಿಸಿದಂತೆ ಹಲವು ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಕುಂದುಕೊರತೆ ಹಾಗೂ ಅವರ ಬೇಡಿಕೆಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಸಭೆಯಲ್ಲಿ ಸರ್ಕಾರದ ಕಾರ್ಯದರ್ಶಿ ಪಿ.ಸಿ ಜಾಫರ್, ಅಬಕಾರಿ ಇಲಾಖೆ ಆಯುಕ್ತ ವೆಂಕಟೇಶ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ನೀಟ್-ಯುಜಿ ಪರೀಕ್ಷೆ ರದ್ದು – ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟ ಸ್ಪರ್ಧಾತ್ಮಕ ಪರೀಕ್ಷೆಗಳ ಮೌಲ್ಯವನ್ನೇ ಹಾಳುಗೆಡವಿದ ಕೇಂದ್ರ ಬಿಜೆಪಿ ಸರ್ಕಾರ – ಯುವ ಕಾಂಗ್ರೆಸ್ ನ ಹೆಚ್‍.ಪಿ.ಗಿರೀಶ್

0

ಪ್ರಶ್ನೆಪತ್ರಿಕೆ ಬಹಿರಂಗ ಹಾಗೂ ಅಕ್ರಮದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ನೀಟ್- ಯುಜಿ 2026 ಪರೀಕ್ಷೆಯನ್ನು ರದ್ದುಗೊಳಿಸಿ, ಮರುಪರೀಕ್ಷೆಗೆ ಆದೇಶಿಸಿದೆ. ಅಕ್ರಮಗಳ ಕುರಿತು ಸಿಬಿಐ ತನಿಖೆಗೆ ಸೂಚಿಸಿದೆ. ಇದು ತೀವ್ರ ಕಳವಳಕಾರಿ ಸಂಗತಿ 22 ಲಕ್ಷ ವಿದ್ಯಾರ್ಥಿಗಳ ಶ್ರಮ ವ್ಯರ್ಥ ಮಾಡಿ ವಿದ್ಯಾರ್ಥಿಗಳಲ್ಲಿ ಆತಂಕ ಸೃಷ್ಟಿ ಮಾಡಿದ ಕೇಂದ್ರ ಸರ್ಕಾರದ ನಡೆ ತೀವ್ರ ಖಂಡನೀಯ ಎಂದು ಯುವ ಕಾಂಗ್ರೆಸ್ ನ ಹೆಚ್‍.ಪಿ.ಗಿರೀಶ್ ಅವರು ತಿಳಿಸಿದ್ದಾರೆ.

ಪರೀಕ್ಷಾ ವ್ಯವಸ್ಥೆಯು ಪದೇ ಪದೇ ಹಳ್ಳ ಹಿಡಿಯುತ್ತಿರುವುದು ಈಗಾಗಲೇ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ 90ಕ್ಕೂ ಹೆಚ್ಚು ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳು ಸೋರಿಕೆ ಆಗಿರುವುದು ಕೇಂದ್ರ ಸರ್ಕಾರದ ಸಂಪೂರ್ಣ ಶಿಕ್ಷಣ ನೀತಿಯ ವೈಫಲ್ಯ ಎದ್ದು ಕಾಣುತ್ತಿದೆ ವಿದ್ಯಾರ್ಥಿಗಳ ಮಾನಸಿಕ ಸ್ಥಿತಿಯ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ವರ್ಷಗಟ್ಟಲೆ ಹಗಲಿರುಳು ಶ್ರಮಪಟ್ಟು ಪರೀಕ್ಷೆ ಬರೆದಿದ್ದ ಲಕ್ಷಾಂತರ ಮಕ್ಕಳ ಮೇಲೆ ಈ ದಿಢೀರ್ ‘ಮರುಪರೀಕ್ಷೆ’ಯ ನಿರ್ಧಾರವು ಗದಾಪ್ರಹಾರದಂತಿದೆ.

“ದೇಶದ ಜನರಿಗೆ ಮನೆಯಿಂದಲೇ ಕೆಲಸ ಮಾಡಿ ಅಥವಾ ಸಾರ್ವಜನಿಕ ಸಾರಿಗೆ ಬಳಸಿ ಇಂಧನ ಉಳಿಸಿ ಎಂದು ದೊಡ್ಡ ದೊಡ್ಡ ಬುದ್ಧಿಮಾತುಗಳನ್ನು ಹೇಳುವ ಕೇಂದ್ರ ಸರ್ಕಾರಕ್ಕೆ, ಮೊದಲು ತನ್ನ ಮೂಲ ಕರ್ತವ್ಯಗಳನ್ನು ಸರಿಯಾಗಿ ನಿರ್ವಹಿಸಲು ಸಾಧ್ಯವಾಗುತ್ತಿಲ್ಲವೇ? ದೇಶದ ಜನರಿಗೆ ಜೀವನಶೈಲಿಯ ಪಾಠ ಮಾಡುವ ಮೊದಲು, ಕನಿಷ್ಠ ಒಂದು ನೀಟ್ ಪರೀಕ್ಷೆಯನ್ನು ಪ್ರಶ್ನೆಪತ್ರಿಕೆ ಸೋರಿಕೆಯಾಗದಂತೆ ನಡೆಸುವ ಪ್ರಾಥಮಿಕ ಜವಾಬ್ದಾರಿಯನ್ನು ಕೇಂದ್ರ ಸರ್ಕಾರ ತೋರಲಿ,”

*ಕೇಂದ್ರ ಸರ್ಕಾರವು ಕೇವಲ ಸಿಬಿಐ ತನಿಖೆಗೆ ಆದೇಶಿಸಿ ಕೈತೊಳೆದುಕೊಂಡರೆ ಸಾಲದು, ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಭದ್ರವಾದ ಹಾಗೂ ಪಾರದರ್ಶಕವಾದ ಪರೀಕ್ಷಾ ವ್ಯವಸ್ಥೆಯೊಂದನ್ನು ರೂಪಿಸಬೇಕು. ಇಲ್ಲವಾದರೆ ಇಡೀ ಪರೀಕ್ಷಾ ಪದ್ಧತಿಯ ಮೇಲೆಯೇ ಜನಸಾಮಾನ್ಯರಿಗೆ ಇರುವ ನಂಬಿಕೆ ಸಂಪೂರ್ಣವಾಗಿ ನಾಶವಾಗಲಿದೆ ಈಗಾಗಲೇ ಹಲವು ಬಾರಿ ಯುವ ಕಾಂಗ್ರೆಸ್ ರಾಷ್ಟ್ರವ್ಯಾಪಿ ಪ್ರತಿಭಟನೆಗಳನ್ನು ಮಾಡಿ ಸರ್ಕಾರದ ಗಮನಕ್ಕೆ ತಂದರು ಕಾರ್ಯ ಪ್ರವೃತ್ತರಾಗದೇ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿರುವ ಕೇಂದ್ರ ಸರ್ಕಾರದ ಬಂಡತನಕ್ಕೆ ಸಾಕ್ಷಿಯಾಗಿದೆ ಪರೀಕ್ಷೆಗಳ ಅಕ್ರಮ ಪ್ರಕರಣ ಉನ್ನತ ಮಟ್ಟದಲ್ಲಿ ತನಿಖೆಯಾಗಿ ತಪ್ಪಿಸ್ತರಿಗೆ ಶಿಕ್ಷೆಯಾಗಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಈ ರೀತಿ ಸಮಸ್ಯೆ ಮರುಕಳಿಸಿದರೆ ಹೋರಾಟದ ದಿಕ್ಕು ಬದಲಾಗುತ್ತದೆ ಎಂದು ಈ ಮೂಲಕ ಕೇಂದ್ರ ಸರ್ಕಾರಕ್ಕೆ ಎಚ್ಚರಿಸುತ್ತಿದ್ದೇವೆ ಎಂದಿದ್ದಾರೆ.

Karnataka Sanga ಕರ್ನಾಟಕ ಸಂಘದಲ್ಲಿ ಇಬ್ಬರು ಹಿರಿಯ ಮಹನೀಯರಿಗೆ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ

0

Karnataka Sanga ಶಿವಮೊಗ್ಗ ಕರ್ನಾಟಕ ಸಂಘದಲ್ಲಿ ದಿನಾಂಕ 15 ಮೇ 2026ರ ಶುಕ್ರವಾರ, ‘2026ರ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ ಸಮಾರಂಭ’ ವನ್ನು ಹಮ್ಮಿಕೊಳ್ಳಲಾಗಿದೆ. ಅಂದು ಸಂಜೆ 05:30 ಘಂಟೆಗೆ ನಾಡಿನ ಖ್ಯಾತ ಕವಿ ಮತ್ತು ಸಾಹಿತಿಗಳಾದ ಚೊಕ್ಕಾಡಿಯ ಶ್ರೀ ಸುಬ್ರಾಯ ಚೊಕ್ಕಾಡಿ ಅವರಿಗೆ ‘ಡಾ. ದ.ರಾ. ಬೇಂದ್ರೆ ಕಾವ್ಯ ಪ್ರಶಸ್ತಿ’ ಯನ್ನು ಮತ್ತು ಪ್ರಸಿದ್ಧ ಸಾಹಿತಿ, ವಿಮರ್ಶಕರಾದ ಬೆಂಗಳೂರಿನ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಅವರಿಗೆ ‘ಡಾ. ತೀ.ನಂ.ಶ್ರೀ. ಸಾಹಿತ್ಯ ವಿಮರ್ಶೆ ಪ್ರಶಸ್ತಿ’ಯನ್ನು ನೀಡಿ ಗೌರವಿಸಲಾಗುವುದು. ಶ್ರೀ ಸುಬ್ರಾಯ ಚೊಕ್ಕಾಡಿ ಅವರ ಕುರಿತು ಶ್ರೀ ಕೆ.ಪಿ. ಸುರೇಶ, ಸಾಹಿತಿ, ದಕ್ಷಿಣ ಕನ್ನಡ ಮತ್ತು ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಅವರ ಕುರಿತು ಶ್ರೀ ಹಳೇಮನೆ ರಾಜಶೇಖರ, ಕನ್ನಡ ಪ್ರಾಧ್ಯಾಪಕರು, ಸಾಹಿತಿ, ಉಜಿರೆ ಇವರುಗಳು ಅಭಿನಂದನಾ ನುಡಿಗಳನ್ನಾಡಲಿದ್ದಾರೆ.

ಪ್ರಶಸ್ತಿಯು ೨೫,೦೦೦/- ರೂ. (ಇಪ್ಪತ್ತೈದು ಸಾವಿರ) ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿರುತ್ತದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಪ್ರೊ. ಹೆಚ್.ಆರ್. ಶಂಕರನಾರಾಯಣ ಶಾಸ್ತ್ರಿ ಅವರು ವಹಿಸಲಿದ್ದಾರೆ.

Karnataka Sanga ಆಸಕ್ತರು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳ ಬೇಕೆಂದು ಈ ಮೂಲಕ ವಿನಂತಿಸಲಾಗಿದೆ.

ಹೊಳೆಹೊನ್ನೂರು;ಮೆಸ್ಕಾಂ ಜನ ಸಂಪರ್ಕ ಸಭೆ

0

ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಮೇ. 14 ರಂದು ಬೆಳಿಗ್ಗೆ 11.00 ರಿಂದ 01.00 ರವರೆಗೆ ಜನ ಸಂಪರ್ಕ ಸಭೆ ನಡೆಯಲಿದೆ. ಈ ಸಭೆಯಲ್ಲಿ ಮೆಸ್ಕಾಂನ ಅಧಿಕಾರಿಗಳು ಭಾಗವಹಿಸಲ್ಲಿದ್ದು, ಸಂಬಂಧಪಟ್ಟ ಪ್ರದೇಶದ ಗ್ರಾಹಕರ ಅಹವಾಲುಗಳನ್ನು ಸ್ವೀಕರಿಸುವುದರಿಂದ ಈ ಅವಕಾಶವನ್ನು ಗ್ರಾಹಕರು ಸದುಪಯೋಗಪಡಿಸಿಕೊಳ್ಳುವಂತೆ ಮೆಸ್ಕಾಂ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ದೂ.ಸಂ.;.9480833052 ನ್ನು ಸಂಪರ್ಕಿಸುವುದು.

ಭದ್ರಾವತಿ:ಅಂಬೇಡ್ಕರ್ ಭವನ ನಿರ್ವಹಣಾ ಸಮಿತಿ ಸದಸ್ಯರ ನಾಮನಿರ್ದೇಶನಕ್ಕೆ ಅರ್ಜಿ ಆಹ್ವಾನ

0

ಭದ್ರಾವತಿ ತಾಲೂಕು ಕೇಂದ್ರದಲ್ಲಿರುವ ಡಾ. ಬಿ.ಆರ. ಅಂಬೇಡ್ಕರ್ ಸಮುದಾಯ ಭವನದ ನಿರ್ವಹಣೆ ಮಾಡಲು 2 ವರ್ಷಗಳ ಅವಧಿಗೆ ನಿರ್ವಹಣಾ ಸಮಿತಿಯನ್ನು ರಚಿಸಬೇಕಾಗಿದ್ದು, ಪರಿಶಿಷ್ಟ ಜಾತಿಗೆ ಸೇರಿದ 3 ಸದಸ್ಯರನ್ನು ನಾಮ ನಿರ್ದೇಶನ ಮಾಡುವ ಸಲುವಾಗಿ ಅರ್ಜಿ ಆಹ್ವಾನಿಸಿದೆ.
ಭದ್ರಾವತಿ ತಾಲೂಕಿನಲ್ಲಿ ವಾಸಿಸುತ್ತಿರುವ ಹಾಗೂ ಬೇರೆ ಯಾವುದೇ ಸಮಿತಿಗಳಲ್ಲಿ ನೇಮಕಗೊಳ್ಳದಿರುವ ಪರಿಶಿಷ್ಟ ಜಾತಿಯ ಆಸಕ್ತರು ಅರ್ಜಿ ನಮೂನೆಯನ್ನು ಸಹಾಯಕ ನಿರ್ದೇಶಕರ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ತಾಲೂಕು ಪಂಚಾಯಿತಿ ಹಿಂಭಾಗ, ಭದ್ರಾವತಿ ಇಲ್ಲಿಂದ ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ಸ್ವಯಂ ದೃಢೀಕರಣ, ಜಾತಿ ಪ್ರಮಾಣ ಪತ್ರ ಹಾಗೂ ಆಧಾರ್ ಕಾರ್ಡ್ ನ್ನು ಲಗತ್ತಿಸಿ ಮೇ 21 ರೊಳಗಾಗಿ ಸಲ್ಲಿಸುವಂತೆ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಕಚೇರಿಯನ್ನು ಖುದ್ದಾಗಿ ಅಥವಾ ದೂ.ಸಂ.: 08282-263761 ನ್ನು ಸಂಪರ್ಕಿಸುವುದು.


ಶಿರಾಳಕೊಪ್ಪದಲ್ಲಿ ತೃಪ್ತಿ ಹೆಲ್ತ್‌ಕೇರ್‌ನಿಂದ ಯಶಸ್ವಿಯಾಗಿ ನಡೆದ ತಪಾಸಣೆ ಶಿಬಿರ

0

ಶಿರಾಳಕೊಪ್ಪದ ಮೆಡಿಲೆನ್ಸ್ ಡಯೋಗ್ನೋಸ್ಟಿಕ್ಸ್ ಮತ್ತು ಶಿವಮೊಗ್ಗದ ತೃಪ್ತಿ ಹೆಲ್ತ್ ಕೇರ್ ಆಶ್ರಯದಲ್ಲಿ ಉಚಿತ ಮೂತ್ರ ರೋಗ, ಮೂತ್ರಕೋಶ ತಪಾಸಣೆ ಮತ್ತು ಮಾಹಿತಿ ಕಾರ್ಯಕ್ರಮವು ಮೆಡಿಲೆನ್ಸ್ ಡಯೋಗ್ನೋಸ್ಟಿಕ್ಸ್ ಆವರಣದಲ್ಲಿ ಯಶಸ್ವಿಯಾಗಿ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಮೂತ್ರ ರೋಗದ ತಜ್ಞ ಡಾ. ಚಂದ್ರ ಶೇಖರ್ ಅವರು, ಆರೋಗ್ಯವೇ ಭಾಗ್ಯ, ಆರೋಗ್ಯವಿಲ್ಲದಿದ್ದರೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಆದ್ದರಿಂದ ಪ್ರತಿಯೊಬ್ಬರು ಆರೋಗ್ಯದ ಕಡೆ ಹೆಚ್ಚು ಗಮನ ಕೊಡಬೇಕು ಎಂದರು.

ಶಿವಮೊಗ್ಗದ ದುರ್ಗೀಗುಡಿ ಯಲ್ಲಿರುವ ನಮ್ಮ ಸೆಂಟರ್‌ನಲ್ಲಿ ಆರ್ಥಿಕವಾಗಿ ಸಂಕಷ್ಠದಲ್ಲಿರುವವರಿಗೆ ಉಚಿತವಾಗಿ ಮೂತ್ರ ರೋಗ, ಬಿ.ಪಿ. ಕಿಡ್ನಿ, ಮಧುಮೇಹ ಮತ್ತಿತರ ತಪಾಸಣೆಗಳನ್ನು ನಡೆಸಲಾಗುತ್ತಿದ್ದು, ರೋಗಿಗಳು ಇದರ ಸದುಪಯೋಗ ಪಡೆಯಲು ತಿಳಿಸಿದರು.

ತಪಾಸಣೆಯಲ್ಲಿ ೫೬ಕ್ಕೂ ಹೆಚ್ಚು ಜನರು ಇದರ ಪ್ರಯೋಜನ ಪಡೆದರು. ಈ ಪೈಕಿ 17 ಜನರಿಗೆ ತೊಂದರೆಗಳಿದ್ದು, ಅದರಲ್ಲಿ ೮ಜನರಿಗೆ ಶಸ್ತ್ರ ಚಿಕಿತ್ಸೆಗೆ ಅವರು ಸೂಚಿಸಿದರು. ಹೆಲ್ತ್ ಕೇರ್‌ನ ಸುಶ್ಮಾ, ರಕ್ಷಿತಾ ಮತ್ತು ಮಾರ್ಕೇಟಿಂಗ್ ಎಕ್ಸಿಕ್ಯೂಟಿವ್ ಸುನಿಲ್ ಇದ್ದರು.

ಉದ್ಯಮದಲ್ಲಿ ಯಶಸ್ಸು ಗಳಿಸಲು ಕೌಶಲ್ಯ ಮುಖ್ಯ : ಯು.ಎಂ.ಶಿವರಾಜ್

0

ಸಂಘ ಸಂಸ್ಥೆಗಳು ವೃತ್ತಿ ಕ್ಷೇತ್ರ ಹಾಗೂ ಉದ್ಯಮದಲ್ಲಿ ಯಶಸ್ಸು ಗಳಿಸಲು ಕೌಶಲ್ಯಗಳ ಪರಿಣತಿ ಮುಖ್ಯ ಎಂದು ಶಿವಮೊಗ್ಗ ಜಿಲ್ಲಾ ವಿತರಕರ ಸಂಘದ ಮಾಜಿ ಅಧ್ಯಕ್ಷ ಯು.ಎಂ.ಶಿವರಾಜ್ ಹೇಳಿದರು.
ಆಕಾಶ್ ಇನ್ ಹೋಟೆಲ್ ಸಭಾಂಗಣದಲ್ಲಿ ಸಹ್ಯಾದ್ರಿ ಚಿಟ್ಸ್ ಸಂಸ್ಥೆಯ ಮೂರು ಜಿಲ್ಲೆಗಳ ಉದ್ಯೋಗಿಗಳಿಗೆ ಹಮ್ಮಿಕೊಳ್ಳಲಾದ ಕೌಶಲ್ಯ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಂದು ಉದ್ಯೋಗಿಗಳಲ್ಲಿ ಸಾಕಷ್ಟು ಕೌಶಲ್ಯದ ಕೊರತೆ ಇದೆ. ಪ್ರತಿಯೊಂದು ವ್ಯಾಪಾರ, ಉದ್ಯಮ ಹಾಗೂ ಎಲ್ಲಾ ಕ್ಷೇತ್ರಗಳಲ್ಲೂ ಬಹಳ ಅಗತ್ಯವಾಗಿ ಕೌಶಲ್ಯ ಬೇಕಾಗಿದೆ ಎಂದು ತಿಳಿಸಿದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್ ಮಾತನಾಡಿ, ವಿದ್ಯಾವಂತ ಉದ್ಯೋಗ ಆಕಾಂಕ್ಷಿಗಳಿಗೆ ಕೌಶಲ್ಯದ ಕೊರತೆ ಇರುವುದರಿಂದ ಒಳ್ಳೆಯ ಕಂಪನಿಗಳಲ್ಲಿ ಉದ್ಯೋಗ ವಂಚಿತರಾಗುತ್ತಿದ್ದಾರೆ. ಎಷ್ಟೇ ವಿದ್ಯಾವಂತರಾದರೂ ಸಹ ಕೌಶಲ್ಯರ ಅಗತ್ಯತೆ ತುಂಬಾ ಇದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೌಶಲ್ಯ ತುಂಬಾ ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಿದರು.
ತರಬೇತುದಾರ ಶ್ರೀಶ ಮಾತನಾಡಿ, ಪ್ರಾರಂಭದಲ್ಲಿ ಕಾರ್ಮಿಕರಿಗೆ, ಉದ್ಯೋಗಿಗಳಿಗೆ, ಕೆಲಸಗಾರರಿಗೆ ಸಕಾಲದಲ್ಲಿ ಕೌಶಲ್ಯನ ತರಬೇತಿ ನೀಡಬೇಕಾಗಿದೆ. ಇಂದು ಕೇಂದ್ರ ಸರ್ಕಾರದ ವತಿಯಿಂದ ಕೌಶಲ್ಯ ತರಬೇತಿಗೆ ಅತಿ ಹೆಚ್ಚು ಒತ್ತುಕೊಟ್ಟಿದ್ದಾರೆ. ತಂತ್ರಜ್ಞಾನ ಬದಲಾದ ಹಾಗೆ ನಾವು ನಮ್ಮ ಕಾರ್ಯಕ್ಷೇತ್ರದಲ್ಲಿ ಕೌಶಲ್ಯ ತರಬೇತಿ ಪಡೆಯಬೇಕಾಗಿದೆ ಎಂದು ಹೇಳಿದರು.
ತರಬೇತುದಾರ ಹೆಬ್ಬಾರ್ ಮಾತನಾಡಿ, ತರಬೇತಿಗಳಿಂದ ಉದ್ಯೋಗಿಗಳಲ್ಲಿ ಆತ್ಮವಿಶ್ವಾಸ ಮೂಡುವುದರ ಜೊತೆಗೆ ತಮ್ಮ ಕಾರ್ಯಕ್ಷೇತ್ರಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲು ಸಹಕಾರವಾಗುತ್ತದೆ ಎಂದು ತಿಳಿಸಿದರು.
ತರಬೇತಿ ಪಡೆದ ಗುರುರಾಜ್, ರಾಕೇಶ್ ಪಿ ಮತ್ತು ರಶ್ಮಿ ಅವರು ಇಂತಹ ತರಬೇತಿ ಕಾರ್ಯಕ್ರಮಗಳು ನಮ್ಮಲ್ಲಿ ಹೆಚ್ಚು ಆತ್ಮವಿಶ್ವಾಸ ತುಂಬುವುದರ ಜೊತೆಗೆ ಸಹುದ್ಯೋಗಿಗಳ ಜೊತೆ ಆತ್ಮೀಯತೆಯಿಂದ ಇರಲು ಕಲಿಸುತ್ತವೆ ಎಂದರು.
ಅನೂಪ್, ಕಡೂರಿನ ದ್ವಾರಕನಾಥ್ ಬಾಬು ಹಾಗೂ ರವಿ ಮುಲಾನಿ ಮತ್ತಿತರರು ಹಾಜರಿದ್ದರು.

ಮೇ 16 ರಂದು ಉದ್ಯೋಗ ನೇರ ಸಂದರ್ಶನ

0

ಶಿವಮೊಗ್ಗ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಶಿವಮೊಗ್ಗ ಇವರ ವತಿಯಿಂದ ಮೇ 16 ರಂದು ಬೆಳಿಗ್ಗೆ 10 ಗಂಟೆಗೆ ಉದ್ಯೋಗಾಕಾಂಕ್ಷಿಗಳಿಗಾಗಿ ನೇರ ಸಂದರ್ಶನವನ್ನು ಹಮ್ಮಿಕೊಳ್ಳಲಾಗಿದೆ.
ಈ ಸಂದರ್ಶನದಲ್ಲಿ ಖಾಸಗಿ ಪ್ರತಿಷ್ಠಿತ ಕಂಪನಿಯಾದ ‘ಸ್ಟ್ರೈಡ್ಸ್ ಫಾರ್ಮಾ ಸೈನ್ಸ್ ಪ್ರೈ. ಲಿ.’ ಭಾಗವಹಿಸಲಿದ್ದು, ಖಾಲಿ ಇರುವ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಿದೆ.
ಪಿಯುಸಿ, ಬಿಎ, ಬಿ.ಕಾಂ, ಬಿ.ಎಸ್ಸಿ ಮತ್ತು ಡಿಪ್ಲೊಮಾ ಪೂರೈಸಿದ, 18 ರಿಂದ 35 ವರ್ಷದೊಳಗಿನ ಅಭ್ಯರ್ಥಿಗಳು ಭಾಗವಹಿಸಬಹುದಾಗಿದ್ದು, ಸಂದರ್ಶನಕ್ಕೆ ಬರುವವರು ತಮ್ಮ ಬಯೋಡೇಟಾ ಮತ್ತು ಆಧಾರ್ ಕಾರ್ಡ್ ಪ್ರತಿಗಳನ್ನು ತರತಕ್ಕದ್ದು.
ನೇರ ಸಂದರ್ಶನಕ್ಕೆ ಪ್ರವೇಶ ಉಚಿತವಾಗಿದ್ದು ಸಂದರ್ಶನವು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಗುತ್ಯಪ್ಪ ಕಾಲೋನಿ, ಪಂಪಾ ನಗರ 2ನೇ ಕ್ರಾಸ್, ಸಾಗರ ರಸ್ತೆ, ಶಿವಮೊಗ್ಗ ಇಲ್ಲಿ‌ ನಡೆಯಲಿದೆ.
ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ
9380663606, 9108235132 ನ್ನು‌ ಸಂಪರ್ಕಿಸಬಹುದು ಎಂದು ಉದ್ಯೋಗಾಧಿಕಾರಿ ತಿಳಿಸಿದ್ದಾರೆ.

ಸಮಾಧಾನ ಸಮಾರೋಹ-ರಾಷ್ಟ್ರೀಯ ವಿಶೇಷ ಲೋಕ್ ಅದಾಲತ್‌ಗಳ ಆಯೋಜನೆ

0

ಸುಪ್ರೀಂ ಕೋರ್ಟ್ನಲ್ಲಿ ಬಾಕಿ ಇರುವ ಪ್ರಕರಣಗಳ ಶೀಘ್ರ ವಿಲೇವಾರಿಗಾಗಿ ಆಗಸ್ಟ್ 21, 22 ಮತ್ತು 23, ರಂದು “ಸಮಾಧಾನ ಸಮಾರೋಹ” ಎಂಬ ವಿಶೇಷ ಲೋಕ್ ಅದಾಲತ್ ನಡೆಯಲಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕೆಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸಂತೊಷ್ ಎಂ ಎಸ್ ತಿಳಿಸಿದರು.

ಸಮಾಧಾನ ಸಮಾರೋಹ, ರಾಷ್ಟ್ರೀಯ ಮತ್ತು ವಿಶೇಷ ಲೋಕ್ ಅದಾಲತ್ ಹಾಗೂ ಬಂಜಾರ ಸಮುದಾಯಕ್ಕೆ ವಿಶೇಷ ಕಾನೂನು ಅರಿವು ಮತ್ತು ಆರೋಗ್ಯ ತಪಾಸಣಾ ಶಿಬಿರದ ಕುರಿತು ಮಾಹಿತಿ ನೀಡಲು ನ್ಯಾಯಾಲಯ ಆವರಣದ ವಿಸಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಅವರು ಮಾತನಾಡಿದರು.

ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ, ಶಿವಮೊಗ್ಗ ಜಿಲ್ಲೆಯಲ್ಲಿ ಮುಂಬರುವ ತಿಂಗಳುಗಳಲ್ಲಿ ಸರಣಿ ಲೋಕ್ ಅದಾಲತ್ ಹಾಗೂ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಸುಪ್ರೀಂ ಕೋರ್ಟ್ನಲ್ಲಿ “ಸಮಾಧಾನ ಸಮಾರೋಹ” : ಸುಪ್ರೀಂ ಕೋರ್ಟ್ನಲ್ಲಿ ಬಾಕಿ ಇರುವ ಪ್ರಕರಣಗಳ ಶೀಘ್ರ ವಿಲೇವಾರಿಗಾಗಿ ಆಗಸ್ಟ್ 21, 22 ಮತ್ತು 23 ರಂದು “ಸಮಾಧಾನ ಸಮಾರೋಹ” ಎಂಬ ವಿಶೇಷ ಲೋಕ್ ಅದಾಲತ್ ನಡೆಯಲಿದೆ.
ಜಿಲ್ಲೆಯಿಂದ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿ, ಬಹುಕಾಲದಿಂದ ಬಾಕಿ ಇರುವ 47 ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಲು ಗುರುತಿಸಲಾಗಿದೆ.

ಹೀಗೆ ಸುಪ್ರೀಂ ಕೋರ್ಟ್ನಲ್ಲಿ ಬಹುಕಾಲದಿಂದ ಬಾಕಿ ಇದ್ದು, ರಾಜೀ ಸಂಧಾನಕ್ಕೆ ಸಿದ್ದವಿರುವವರು ಈಗಲೂ ಸಹ ಕಾನೂನು ಸೇವಾ ಪ್ರಾಧಿಕಾರವನ್ನು ಸಂಪರ್ಕಿಸಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದು. ಸಮಾಧಾನ ಸಮಾರೋಹಕ್ಕೆ ಗುರುತಿಸಲಾದ ಪ್ರಕರಣಗಳಲ್ಲಿ ಪಕ್ಷಗಾರರಿಗೆ ನೋಟಿಸ್ ಹೊರಡಿಸಲಾಗುತ್ತದೆ.

ನಿಗದಿತ ದಿನಾಂಕದಂದು ನುರಿತ ಮಧ್ಯಸ್ಥಗಾರರ ವಿಚಾರಣೆ ನಡೆದು, ಸುಪ್ರೀಂ ಕೋರ್ಟ್ನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಕರಣವನ್ನು ಇತ್ಯರ್ಥಪಡಿಸಲಾಗುವುದು.
ಈ ರೀತಿಯ ವಿಲೇವಾರಿಯಿಂದ ಪಕ್ಷಗಾರರಿಗೆ ಯಾವುದೇ ಹಣ ವ್ಯಯ ಆಗುವುದಿಲ್ಲ. ಹಾಗೂ ಸಮಾಧಾನದ ನ್ಯಾಯ ಒದಗುತ್ತದೆ ಆದ್ದರಿಂದ ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕು.

ಸಾರ್ವಜನಿಕರು ತಮ್ಮ ಪ್ರಕರಣಗಳ ಸುಲಭ ವಿಲೇವಾರಿಗಾಗಿ samadhansamaroh@gmail.com ಗೆ ಇಮೇಲ್ ಮಾಡುವ ಮೂಲಕ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವನ್ನು ಸಂಪರ್ಕಿಸುವ ಮೂಲಕ ಈ ಅವಕಾಶವನ್ನು ಬಳಸಿಕೊಳ್ಳಬಹುದು ಎಂದರು.

ರಾಷ್ಟ್ರೀಯ ಲೋಕ್ ಅದಾಲತ್ : ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಜುಲೈ 11 ರಂದು ಶಿವಮೊಗ್ಗ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಈ ವರ್ಷದ ಎರಡನೇ ರಾಷ್ಟ್ರೀಯ ಲೋಕ್ ಅದಾಲತ್ ನಡೆಯಲಿದೆ.
ವೈವಾಹಿಕ ವಿವಾದಗಳು ಹಾಗೂ ಕೌಟುಂಬಿಕ ದೌರ್ಜನ್ಯ ಪ್ರಕರಣಗಳು, ಚೆಕ್ ಅಮಾನ್ಯ ಪ್ರಕರಣಗಳು, ಅಪಘಾತ ಪರಿಹಾರ ಹಾಗೂ ವಿಮಾ ಪ್ರಕರಣಗಳು, ಸಿವಿಲ್ ವ್ಯಾಜ್ಯಗಳು, ಆಸ್ತಿ ವಿಭಾಗ ಹಾಗೂ ಭೂಸ್ವಾಧೀನ ಪ್ರಕರಣಗಳು, ರಾಜಿ ಮಾಡಿಕೊಳ್ಳಬಹುದಾದ ಕ್ರಿಮಿನಲ್ ಪ್ರಕರಣಗಳು, ಬ್ಯಾಂಕ್ ಸಾಲ ವಸೂಲಾತಿ ಹಾಗೂ ಗ್ರಾಹಕ ವೇದಿಕೆಯ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಬಹುದಾಗಿದೆ ಎಂದರು.

ಹಿಂದಿನ ಸಾಧನೆ: ಕಳೆದ ಮಾರ್ಚ್ 14 ರಂದು ನಡೆದ ರಾಷ್ಟ್ರೀಯ ಲೋಕ್ ಅದಾಲತ್‌ನಲ್ಲಿ ಒಟ್ಟು 14,501 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದ್ದು, ಒಟ್ಟು ರೂ. 28.48 ಕೋಟಿಗಳಿಗೂ ಅಧಿಕ ಪರಿಹಾರವನ್ನು ವಿತರಿಸಲಾಗಿತ್ತು. ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ದಿನಾಂಕ : 30-04-2026 ರವರೆಗೆ ಒಟ್ಟು 7427 ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ ಎಂದರು.
ಬಂಜಾರ ಸಮುದಾಯಕ್ಕೆ ವಿಶೇಷ ಶಿಬಿರ : ಶಿವಮೊಗ್ಗ ನಗರದ ಬಂಜಾರ ಸಮುದಾಯ ಭವನದಲ್ಲಿ ಮೇ 30 ರಂದು ಬಂಜಾರ ಸಮುದಾಯದವರಿಗಾಗಿ ವಿಶೇಷ ಕಾನೂನು ಅರಿವು ಕಾರ್ಯಕ್ರಮ ಹಾಗೂ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ.

ಈ ಸಂದರ್ಭದಲ್ಲಿ ವಿವಿಧ ಸರ್ಕಾರಿ ಇಲಾಖೆಗಳ ಮಳಿಗೆಗಳನ್ನು ಸ್ಥಾಪಿಸಲಾಗುತ್ತಿದ್ದು, ಸಮುದಾಯಕ್ಕೆ ಲಭ್ಯವಿರುವ ಸೌಲಭ್ಯಗಳ ಕುರಿತು ಮಾಹಿತಿಯನ್ನು ಸ್ಥಳದಲ್ಲಿಯೇ ನೀಡಲಾಗುತ್ತಿದ್ದು ಸಮುದಾಯದವರು ಇದರ ಸದುಪಯೋಗ ಪಡೆಯಬೇಕೆಂದರು.

ಬೆಂಗಳೂರು ಉಪನಗರ ರೈಲು ಯೋಜನೆ: 𝟭𝟱𝟯 𝗠𝗲𝘁𝗿𝗼 𝗖𝗼𝗮𝗰𝗵 ಗಳ ಖರೀದಿಗೆ 𝗜𝗖𝗙 ಜೊತೆ ಒಪ್ಪಂದ, ₹𝟭,𝟱𝟭𝟯.𝟳𝟱 ಕೋಟಿ ಮೊತ್ತದ ಕಾರ್ಯಾದೇಶ

0

ಬೆಂಗಳೂರು ನಗರದ ಸಂಚಾರ ದಟ್ಟಣೆಗೆ ಮುಕ್ತಿ ನೀಡಲಿರುವ ಬಹುನಿರೀಕ್ಷಿತ ಬೆಂಗಳೂರು ಉಪನಗರ ಸಾರಿಗೆ ಯೋಜನೆಗೆ (𝗕𝗦𝗧𝗣) ಮಹತ್ವದ ವೇಗ ದೊರಕಿದೆ. ಯೋಜನೆಯ ಕಾರಿಡಾರ್-𝟮 ಮತ್ತು ಕಾರಿಡಾರ್-𝟰 ಕ್ಕೆ ಅಗತ್ಯವಿರುವ 𝟭𝟱𝟯 ಹವಾನಿಯಂತ್ರಿತ ‘ಬ್ರಾಡ್-ಗೇಜ್ ಮೆಟ್ರೋ ಮಾದರಿಯ ಬೋಗಿ’ಗಳನ್ನು (𝗠𝗲𝘁𝗿𝗼 𝗧𝘆𝗽𝗲 𝗖𝗼𝗮𝗰𝗵𝗲𝘀) ಪೂರೈಸುವಂತೆ ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿಗೆ (𝗜𝗖𝗙) 𝗕𝗶-𝗥𝗜𝗗𝗘 ಸಂಸ್ಥೆಯು ಅಧಿಕೃತವಾಗಿ ಕಾರ್ಯಾದೇಶ (𝗪𝗼𝗿𝗸 𝗢𝗿𝗱𝗲𝗿) ನೀಡಿದೆ.

ಈ ಬೃಹತ್ ಕಾರ್ಯಾದೇಶದ ಒಟ್ಟು ಮೊತ್ತ ₹𝟭,𝟱𝟭𝟯.𝟳𝟱 ಕೋಟಿಗಳಾಗಿದ್ದು, ಭವಿಷ್ಯದಲ್ಲಿ ಬೆಂಗಳೂರು ಹಾಗೂ ಸುತ್ತಮುತ್ತಲಿನ ಜನತೆಗೆ ಇದೊಂದು ಅತ್ಯಂತ ವಿಶ್ವಾಸಾರ್ಹ ಮತ್ತು ಸುಸ್ಥಿರ ಸಾರಿಗೆ ವ್ಯವಸ್ಥೆಯಾಗಿ ಹೊರಹೊಮ್ಮಲಿದೆ.

ಮೇ 𝟲, 𝟮𝟬𝟮𝟲 ರಂದು ನೀಡಲಾದ ಈ ಗುತ್ತಿಗೆಯ ಅನ್ವಯ, ಮುಂದಿನ 𝟭𝟴 ತಿಂಗಳೊಳಗೆ 𝗜𝗖𝗙 ಸಂಸ್ಥೆಯು ಬೋಗಿಗಳ ಪೂರೈಕೆಯನ್ನು ಕಡ್ಡಾಯವಾಗಿ ಆರಂಭಿಸಬೇಕಿದೆ. ಕಾರಿಡಾರ್-𝟮 ರ ವ್ಯಾಪ್ತಿಗೆ ಬರುವ ಚಿಕ್ಕಬಾಣಾವರ-ಯಶವಂತಪುರ ಮಾರ್ಗವನ್ನು ನಿಗದಿತ ಸಮಯದಲ್ಲಿಯೇ ಸಾರ್ವಜನಿಕ ಸೇವೆಗೆ ಮುಕ್ತಗೊಳಿಸುವ ದೃಷ್ಟಿಯಿಂದ ಈ ಗಡುವು ವಿಧಿಸಲಾಗಿದೆ. ಅಲ್ಲದೆ, ಡಿಸೆಂಬರ್ 𝟮𝟬𝟮𝟱 ರಲ್ಲಿ ನಡೆದ ‘𝗣𝗥𝗔𝗚𝗔𝗧𝗜’ ಪರಿಶೀಲನಾ ಸಭೆಯಲ್ಲಿ ಪ್ರಧಾನಮಂತ್ರಿಯವರು ಸೂಚಿಸಿದ್ದ ಕಾಲಮಿತಿಗೂ ಇದು ಪೂರಕವಾಗಿದೆ ಎಂದು 𝗕𝗶-𝗥𝗜𝗗𝗘 ಸ್ಪಷ್ಟಪಡಿಸಿದೆ. ಶೀಘ್ರದಲ್ಲೇ ಉಭಯ ಸಂಸ್ಥೆಗಳ ನಡುವೆ ಅಧಿಕೃತ ಒಡಂಬಡಿಕೆಗೆ (𝗠𝗼𝗨) ಸಹಿ ಬೀಳಲಿದೆ.

ಕಾರ್ಯಾದೇಶದ ಪ್ರಮುಖ ಅಂಶಗಳು (𝗦𝗰𝗼𝗽𝗲 𝗼𝗳 𝗪𝗼𝗿𝗸):
ಚೆನ್ನೈನ 𝗜𝗖𝗙 ಗೆ ನೀಡಲಾದ ಈ ಸಮಗ್ರ ಗುತ್ತಿಗೆಯು ಕೇವಲ ಬೋಗಿಗಳ ನಿರ್ಮಾಣವನ್ನಷ್ಟೇ ಅಲ್ಲದೆ, ಈ ಕೆಳಗಿನ ಜವಾಬ್ದಾರಿಗಳನ್ನು ಒಳಗೊಂಡಿದೆ:

ರೈಲು ಬೋಗಿಗಳ (𝗥𝗼𝗹𝗹𝗶𝗻𝗴 𝗦𝘁𝗼𝗰𝗸) ವಿನ್ಯಾಸ ಮತ್ತು ಸಂಪೂರ್ಣ ಉತ್ಪಾದನೆ.

ಗುಣಮಟ್ಟ ಪರಿಶೀಲನೆ, ಜೋಡಣೆ, ಪರೀಕ್ಷೆ ಹಾಗೂ ಕಾರ್ಯಾರಂಭ (𝗜𝗻𝘀𝗽𝗲𝗰𝘁𝗶𝗼𝗻, 𝗜𝗻𝘁𝗲𝗴𝗿𝗮𝘁𝗶𝗼𝗻, 𝗧𝗲𝘀𝘁𝗶𝗻𝗴 𝗮𝗻𝗱 𝗖𝗼𝗺𝗺𝗶𝘀𝘀𝗶𝗼𝗻𝗶𝗻𝗴).

𝗥𝗗𝗦𝗢 ನಿಂದ ಅಗತ್ಯವಿರುವ ಶಾಸನಬದ್ಧ ಅನುಮೋದನೆಗಳ ಪಡೆಯುವಿಕೆ.

ಸಿಗ್ನಲಿಂಗ್, ವಿದ್ಯುತ್ ಪೂರೈಕೆ (𝗧𝗿𝗮𝗰𝘁𝗶𝗼𝗻 & 𝗣𝗼𝘄𝗲𝗿 𝗦𝘂𝗽𝗽𝗹𝘆) ಹಾಗೂ ಪ್ಲಾಟ್‌ಫಾರ್ಮ್ ಸ್ಕ್ರೀನ್ ಡೋರ್ (𝗣𝗹𝗮𝘁𝗳𝗼𝗿𝗺 𝗦𝗰𝗿𝗲𝗲𝗻 𝗗𝗼𝗼𝗿𝘀) ಗುತ್ತಿಗೆಗಳೊಂದಿಗೆ ಸುಗಮ ಸಮನ್ವಯ.

ಕಾರಿಡಾರ್‌ಗಳ ಯಶಸ್ವಿ ಕಾರ್ಯಾಚರಣೆಗೆ ಕಡ್ಡಾಯವಾಗಿರುವ 𝗥𝗔𝗠𝗦 (ವಿಶ್ವಾಸಾರ್ಹತೆ, ಲಭ್ಯತೆ, ನಿರ್ವಹಣೆ ಮತ್ತು ಸುರಕ್ಷತೆ) ಮಾನದಂಡಗಳ ಪೂರೈಕೆ. “ಬೆಂಗಳೂರು ಉಪನಗರ ರೈಲು ಯೋಜನೆಯ ಪಾಲಿಗೆ ಈ ಕಾರ್ಯಾದೇಶವು ಒಂದು ಐತಿಹಾಸಿಕ ಮೈಲಿಗಲ್ಲಾಗಿದೆ. 𝗜𝗖𝗙 ಜೊತೆಗಿನ ಈ ಪಾಲುದಾರಿಕೆಯ ಮೂಲಕ, ಕಾರಿಡಾರ್ 𝟮 ಮತ್ತು 𝟰 ರ ಟ್ರ್ಯಾಕ್ ಮತ್ತು ವ್ಯವಸ್ಥೆಗಳ ಮೂಲಸೌಕರ್ಯ ಕಾಮಗಾರಿ ಪೂರ್ಣಗೊಳ್ಳುವಷ್ಟರಲ್ಲಿ, ಅಗತ್ಯವಾಗಿರುವ ರೈಲು ಬೋಗಿಗಳು ಲಭ್ಯವಿರುವುದನ್ನು ನಾವು ಖಚಿತಪಡಿಸಿಕೊಳ್ಳುತ್ತಿದ್ದೇವೆ.

ಈ ಸಮನ್ವಯತೆಯು ಬೆಂಗಳೂರಿನ ನಾಗರಿಕರಿಗೆ ವಿಶ್ವದರ್ಜೆಯ ಉಪನಗರ ರೈಲು ಜಾಲವನ್ನು ಯಾವುದೇ ವಿಳಂಬವಿಲ್ಲದೆ ತಲುಪಿಸಲು, ಸುಸ್ಥಿರ ನಗರ ಸಾರಿಗೆಯ ದೃಷ್ಟಿಕೋನವನ್ನು ಈಡೇರಿಸಲು ಹಾಗೂ ನಗರದ ಟ್ರಾಫಿಕ್ ಸಮಸ್ಯೆಯನ್ನು ತಗ್ಗಿಸಲು ನೆರವಾಗಲಿದೆ.”— ಲಕ್ಷ್ಮಣ್‌ ಸಿಂಗ್‌, ವ್ಯವಸ್ಥಾಪಕ ನಿರ್ದೇಶಕರು (𝗠𝗗), 𝗕𝗶-𝗥𝗜𝗗𝗘 (𝗞-𝗥𝗜𝗗𝗘)