Wednesday, August 12, 2026
Wednesday, August 12, 2026

Karnataka Sanga ವಚನಗಳಲ್ಲಿ ಭಕ್ತನು ಪೂರ್ವಜನ್ಮದ ಭವಾದಿಗಳನ್ನ ಕಳೆದುಕೊಳ್ಳುವ ಬಗೆಯನ್ನ ಅಕ್ಕ ತಿಳಿಸಿದ್ದಾಳೆ- ಪ್ರೊ.ರಾಜಾರಾಂ ಹೆಗಡೆ

Date:

Karnataka Sanga ವಚನ ಚಳುವಳಿಯನ್ನೇ ವೈದಿಕ ಪರಂಪರೆಗೆ ವಿರುದ್ಧವಾದ ಚಳುವಳಿ ಎಂಬಂತೆ ನಿರೂಪಿಸಿ ಜನಪ್ರಿಯಗೊಳಿಸಲಾಗಿದೆ. ಶಿವಾನುಭವ ಮಾರ್ಗ ಶಿವ ಭಕ್ತನ ಅಂತಿಮ ಮಾರ್ಗ. ಅಲ್ಲಿ ಅದ್ವೈತ ತತ್ವ, ಶಿವಯೋಗ ಬೇಕು ಎಂದು ಕುವೆಂಪು ವಿವಿಯ ಇತಿಹಾಸ ಪ್ರಾಕ್ತನಾಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ. ರಾಜಾರಾಮ ಹೆಗಡೆ ಹೇಳಿದರು.

ಶಿವಮೊಗ್ಗ ನಗರದ ಕರ್ನಾಟಕ ಸಂಘದಲ್ಲಿ ಅಭಿವ್ಯಕ್ತಿ ಟ್ರಸ್ಟ್ ವತಿಯಿಂದ ಶಿವಮೊಗ್ಗ ಸಾಹಿತ್ಯ ಹಬ್ಬ ಮೊದಲ ಆವತ್ತಿಯ ಎರಡನೇ ದಿನದ ಮೂರನೇ ಗೋಷ್ಠಿಯಲ್ಲಿ ಭಾನುವಾರ ಅಕ್ಕ-ಅಲ್ಲಮ ಅರಿವಿನ ಆಯಾಮಗಳು ವಿಷಯದ ಕುರಿತು ಸಂವಾದಕಾರರಾಗಿ ಪಾಲ್ಗೊಂಡು ಮಾತನಾಡಿದರು.

ಷಟ್‌ಸ್ಥಳ ಹಂತಗಳ ಮೂಲಕ ಗಮ್ಯ ತಲುಪಬೇಕು. ಶಂಕರರ ವಿವೇಕ ಚೂಡಾಮಣಿಯಲ್ಲೂ ಪರತತ್ವವನ್ನು ತಿಳಿದುಕೊಂಡ ಮೇಲೆ ಶಾಸ್ತçಗಳು ನಿಷ್ಪçಯೋಜಕ ಎಂದಿದೆ. ಆಚರಣೆಗಳನ್ನು ಮಾಡಬಾರದು ಎಂದಿಲ್ಲ, ಗಮ್ಯ ಆಚರಣೆಗಳ ಮೂಲಕವೇ ತಲುಪುವುದು. ಈ ಸೂಕ್ಷ್ಮತೆಯನ್ನು ಶಿಷ್ಯರಿಗೆ ಕಲಿಸಬೇಕಾಗುತ್ತದೆ. ಸಾಧನವನ್ನು ಹೇಗೆ ಉಪಯೋಗಿಸಬೇಕು ಎಂಬುದನ್ನು ತಿಳಿಸಬೇಕು ಎಂದರು.

ವಚನಗಳಲ್ಲಿ ಭಕ್ತನಾದವನು ಪೂರ್ವಜನ್ಮದ ಭವಾದಿಗಳನ್ನು ಕಳೆದುಕೊಳ್ಳುವುದೇಗೆ ಎಂಬುದನ್ನು ಅಕ್ಕ ತಿಳಿಸಿದ್ದಾಳೆ. ತಾನೂ ಭವವನ್ನು ಕಳೆದುಕೊಂಡಿದ್ದೇನೆ ಎಂದು ಸ್ಪಷ್ಟನೆ ನೀಡಿದ ಮಹಿಳೆ ಅಕ್ಕಮಹಾದೇವಿ ಎಂದು ಹೇಳಿದರು.

ಸಂಶೋಧಕ ಹಾಗೂ ಟ್ರಾನ್ಸ್ಡಿಸಿಪ್ಲಿನರಿ ಹೆಲ್ತ್ ಅಂಡ್ ಸೈನ್ಸ್ ವಿವಿಯ ಸಹಾಯಕ ಪ್ರಾಧ್ಯಾಪಕ ಹರ್ಷಿತ್ ಜೋಸೆಫ್ ಮಾತನಾಡಿ, ಪ್ರಸ್ತುತ ಚರ್ಚೆಯನ್ನು ಗಮನಿಸಿದಾಗ ವಚನಗಳು ಅವೈದಿಕ ಹೇಗೆ ಎಂಬುದೇ ಗೊಂದಲವಿದೆ. ತರ್ಕ ದೋಷ ಎದ್ದು ಕಾಣಿಸುತ್ತದೆ ಎಂದರು.

ತತ್ ಹೇಗಿರುತ್ತೆ ಅಂದ್ರೆ ಅವಿನಾಶಿ, ಅಪ್ರಮೇಯ ಅಂತ ವೈದಿಕರು ಹೇಳುತ್ತಾರೆ. ಅವೈದಿಕರು ಜಂಗಮತ್ವವನ್ನು ಹೇಳುತ್ತಾರೆ. ಅಲ್ಲಮರು ನಿಸ್ಸಂಗತ್ವ, ನಿತ್ಯ ಇದೂ ತತ್ ಎಂದು ಹೇಳುತ್ತಾರೆ. ಇದು ಹೇಗೆ ಅವೈದಿಕ ಆಗುತ್ತೆ ಎಂಬುದೇ ಗೊಂದಲ?. ಎರಡೂ ಒಂದನ್ನೇ ಹೇಳುತ್ತೆ. ಈ ಅತಾರ್ಕಿಕ ಸಮಸ್ಯೆ ಹಾಗಾದ್ರೆ ಎಲ್ಲಿಂದ ಬಂತು ಎಂದರು.

Karnataka Sanga ನಮ್ಮ ಬಗ್ಗೆ ಇರುವ ವಿವರಣೆಗಳೆಲ್ಲ ಪಶ್ಚಿಮ ಸಂಸ್ಕ್ರತಿಯ ಅನುಭವದಿಂದ ಪ್ರಭಾವಿತವಾಗಿವೆ. ಹೀಗಾಗಿ ಪಶ್ಚಿಮ ಜಗತ್ತಿನ ಅರಿವಾದಾಗ ನಮ್ಮಲ್ಲಿ ಬದಲಾವಣೆ ಮಾಡಿಕೊಳ್ಳಲು ಅನುಕೂಲಕಾರಿ ಎಂದರು.

ಸ್ತ್ರೀ ಆದವಳು ಕೆಳಹಂತದಲ್ಲಿರಬೇಕು ಎಂಬುದು ಯುರೋಪಿನ ಫೆಮಿನಿಸಂನದ್ದು. 19ನೇ ಶತಮಾನದ ಹೊತ್ತಿಗೆ ವಿಸ್ತಾರಗೊಳ್ಳುತ್ತಾ ಹೋಯಿತು ಮತ್ತು ಬುನಾದಿಯಾಗಿ ನಿಂತಿತು. ಭಾರತದ ಪರಂಪರೆಯಲ್ಲಿ ಸ್ತ್ರೀಗೆ ಗೌರವದ ಸ್ಥಾನವಿತ್ತು. ಭಕ್ತಿ ಪರಂಪರೆ, ದಾಸ ಪರಂಪರೆಯಲ್ಲಿ ಈ ಸಮಸ್ಯೆ ಇರಲಿಲ್ಲ. ಹಾಗಾಗಿ ಅಕ್ಕಮಹಾದೇವಿಯನ್ನ ತಿಳಿದರೇ ಹೇಗೆ ಜಂಗಮತ್ವ ದೊರಕುವುದು ಎಂಬುದೇ ಪ್ರಶ್ನಾರ್ಥಕ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಮನ್ವಯಕಾರರಾದ ಕುವೆಂಪು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಷಣ್ಮುಖ ಎ. ಇದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive special Article ಆಧ್ಯಾತ್ಮದ ಆನಂದ ಹಂಚಿದ ದಾವಣಗೆರೆಯ ಶ್ರೀಶಿವಾನಂದ ತೀರ್ಥರು ...

"ಅಧ್ಯಾತ್ಮಾನಂದ ನೀಡುತ್ತಿದ್ದ ದಾವಣಗೆರೆಯ ಶ್ರೀ ಶಿವಾನಂದ ತೀರ್ಥರು" ( ಅವರ ಜಯಂತ್ಯೋತ್ಸವ ತನ್ನಿಮಿತ್ತಈವಿಶೇಷಲೇಖನ) -Klive...

Kuvempu University ಆಗಸ್ಟ್ 13 & 14. ರಂದು ಕುವೆಂಪು ವಿವಿಯ ಸ್ನಾತಕೋತ್ತರ ಪದವಿಗಳಿಗೆ ಪ್ರವೇಶಾತಿ

2026-27ನೇ ಸಾಲಿಗೆ ಕುವೆಂಪು ವಿಶ್ವವಿದ್ಯಾಲಯದ ಜ್ಞಾನ ಸಹ್ಯಾದ್ರಿ ಕ್ಯಾಂಪಸ್, ಮತ್ತು ವಿವಿ...