Friday, September 11, 2026
Friday, September 11, 2026

DC Shivamogga ಆಗಸ್ಟ್ ತಿಂಗಳಿನಲ್ಲೇ ಆಗಸ್ಟ್ ಮತ್ತು ಸೆಪ್ಟೆಂಬರ್ ಎರಡೂ ತಿಂಗಳ ಪಡಿತರ ಅಕ್ಕಿ ವಿತರಣೆ: ಪ್ರಭುಲಿಂಗ ಕವಳಿ‌ಕಟ್ಟಿ

Date:

DC Shivamogga ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು ಅನ್ನಭಾಗ್ಯ ಯೋಜನೆಯಡಿ 2026ರ ಆಗಸ್ಟ್ ಮತ್ತು ಸೆಪ್ಟಂಬರ್ ಮಾಹೆಗಳ ಅನ್ನಭಾಗ್ಯ ಪಡಿತರವನ್ನು ಆಗಸ್ಟ್ ಮಾಹೆಯಲ್ಲಿ ಒಂದೇ ಬಾರಿಗೆ ಒಟ್ಟಾಗಿ ವಿತರಣೆ ಮಾಡಲು ಸರ್ಕಾರವು ಆದೇಶಿಸಿದೆ.
ಅಂತ್ಯೋದಯ ಅನ್ನ ಯೋಜನೆಯಡಿ ಪಡಿತರ ಚೀಟಿಗೆ ಎರಡು ತಿಂಗಳ ಒಟ್ಟು 70 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡಲಾಗುವುದು. ಆದ್ಯತಾ ಪಡಿತರ ಚೀಟಿಗೆ ಎರಡು ತಿಂಗಳ ಒಟ್ಟು 10 ಕೆ.ಜಿ. ಅಕ್ಕಿಯನ್ನು ಉಚಿತವಾಗಿ ನೀಡಲಾಗುವುದು.
DC Shivamogga ಪಡಿತರ ಚೀಟಿದಾರರು ಆಹಾರ ಧಾನ್ಯವನ್ನು ಪಡೆಯುವಾಗ ಆಗಸ್ಟ್ ಮತ್ತು ಸೆಪ್ಟಂಬರ್ ಮಾಹೆಗಳ ಹಂಚಿಕೆಗಳಿಗೆ ಒಂದು ಬಾರಿ ಕಡ್ಡಾಯವಾಗಿ ಬಯೋ ನೀಡಿ ಪಡಿತರ ಪಡೆಯುವುದು. ಪ್ರತಿ ದಿನ ಬೆಳಗ್ಗೆ 6.00 ರಿಂದ ರಾತ್ರಿ 10.00ರವರೆಗೆ ಪಡಿತರ ವಿತರಣೆಗೆ ಸರ್ವರ್ ಲಭ್ಯಗೊಳಿಸಿರುವುದರಿಂದ ಆ. 31 ರೊಳಗಾಗಿ ನ್ಯಾಯಬೆಲೆ ಅಂಗಡಿಗೆ ತೆರಳಿ ಎರಡು ಬಾರಿ ಬಯೋ ನೀಡಿ ಪಡಿತರ ಪಡೆಯುವುದು. ಪಡಿತರ ವಿತರಣೆ ಸಂಬಂಧ ಯಾವುದೇ ದೂರುಗಳಿದ್ದಲ್ಲಿ ಕೇಂದ್ರ ಸಹಾಯವಾಣಿ 1967 ಕ್ಕೆ ಕರೆ ಮಾಡಿ ಅಥವಾ ಹತ್ತಿರದ ಆಹಾರ ಕಚೇರಿಗೆ ಭೇಟಿ ನೀಡಿ ದೂರು ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Chamber of commerce Shivamogga “ಬೆಂಗಳೂರಿನಾಚೆ ಕೈಗಾರಿಕಾ ಅಭಿವೃದ್ಧಿ” ಗಾಗಿ ಶಿವಮೊಗ್ಗ ನಗರವನ್ನ ಸೇರ್ಪಡಿಸಿ- ಎಸ್.ರುದ್ರೇಗೌಡ

Chamber of commerce Shivamogga ಬೆಂಗಳೂರಿನಾಚೆಗಿನ ಕೈಗಾರಿಕೆಗಳ ಅಭಿವೃದ್ಧಿಗಾಗಿ ಶಿವಮೊಗ್ಗ ನಗರ...

Madhu Bangarappa ಸರ್ಕಾರದ ಸೇವೆಗಳನ್ನ ಜನರ ಮನೆಬಾಗಿಲಿಗೆ ತಲುಪಿಸುವ ಉದ್ದೇಶದಿಂದ “ಪ್ರಜಾಸೇವೆ “ಜಾರಿಗೆ: ಮಧು ಬಂಗಾರಪ್ಪ

Madhu Bangarappa ಜನಸಾಮಾನ್ಯರ ದಿನನಿತ್ಯದ ಸಮಸ್ಯೆ-ಸವಾಲುಗಳಿಗೆ, ದುಃಖ ದುಮ್ಮಾನಗಳಿಗೆ ತ್ವರಿತವಾಗಿ ಸ್ಪಂದಿಸಿ,...