Thawar Chand Gehlot ಯುವ ಸಂಗಮ ಕಾರ್ಯಕ್ರಮದ ಅಂಗವಾಗಿ ಕರ್ನಾಟಕಕ್ಕೆ ಭೇಟಿ ನೀಡಿದ ರಾಜಸ್ಥಾನದ ವಿದ್ಯಾರ್ಥಿಗಳೊಂದಿಗೆ ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ಚಂದ್ ಗೆಹ್ಲೋಟ್ ಅವರು ಸೋಮವಾರ ಲೋಕಭವನದಲ್ಲಿ ಸಂವಾದ ನಡೆಸಿದರು.
ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ರಾಜ್ಯಪಾಲರು, ಇಂತಹ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮಗಳು ದೇಶದ ವಿವಿಧ ರಾಜ್ಯಗಳ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಅಭಿವೃದ್ಧಿಯ ವೈಶಿಷ್ಟ್ಯಗಳ ಬಗ್ಗೆ ಅರಿವು ಮೂಡಿಸುವ ಮೂಲಕ ರಾಷ್ಟ್ರೀಯ ಏಕತೆಯನ್ನು ಬಲಪಡಿಸುತ್ತವೆ ಎಂದು ಹೇಳಿದರು.
ಯುವ ಸಂಗಮ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ಭಾರತದ ವೈವಿಧ್ಯತೆಯನ್ನು ಅರ್ಥಮಾಡಿಕೊಳ್ಳಲು ಮತ್ತು ವಿವಿಧ ರಾಜ್ಯಗಳ ಅಭಿವೃದ್ಧಿ ಹಾಗೂ ಅನುಭವಗಳಿಂದ ಕಲಿಯಲು ಉತ್ತಮ ವೇದಿಕೆಯಾಗಿದ್ದು, ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ದೇಶದ ಅಭಿವೃದ್ಧಿಗೆ ಕೊಡುಗೆ ನೀಡುವಂತೆ ಕರೆ ನೀಡಿದರು.
Thawar Chand Gehlot ಭಾರತವು ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದ್ದು, ದೇಶವನ್ನು ಇನ್ನಷ್ಟು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಯುವಕರು ಶ್ರಮ ಮತ್ತು ಸಮರ್ಪಣೆಯಿಂದ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು. ಸರ್ಕಾರದ ವಿವಿಧ ಯೋಜನೆಗಳ ಪ್ರಯೋಜನ ಪಡೆದು ರಾಷ್ಟ್ರ ನಿರ್ಮಾಣದಲ್ಲಿ ಪಾಲುದಾರರಾಗುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಐಐಐಟಿ ಧಾರವಾಡದ ಡಾ.ಎಸ್.ಆರ್.ಮಹದೇವ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.
Shri Thawar Chand Gehlot ದೇಶವನ್ನು ಇನ್ನಷ್ಟು ಉತ್ತಮ ಮಟ್ಟಕ್ಕೆ ಕೊಂಡೊಯ್ಯಲು ಯುವಜನತೆ ಶ್ರಮಿಸಬೇಕು- ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್
ದೇಶ ಮೊದಲು.. ಜನರೊಂದಿಗೆ ಪ್ರಧಾನಿ ಮೋದಿ ಮಿಡಿತ
ಜಾಗತಿಕ ಸವಾಲಿನ ಸಂದರ್ಭದಲ್ಲಿ ದೇಶದ ಹಿತರಕ್ಷಣೆ ಮತ್ತು ರಾಷ್ಟ್ರದ ಸಶಕ್ತತೆ ದೃಷ್ಟಿಯಿಂದ ಆದರಣೀಯ ಪ್ರಧಾನಿ ಶ್ರೀ ನರೇಂದ್ರಮೋದಿಜೀ ಸಮಸ್ತ ಭಾರತೀಯರಲ್ಲಿ 7 ಪ್ರಮುಖ ಮನವಿ ಮಾಡಿಕೊಂಡಿದ್ದಾರೆ. ಭಾರತಕ್ಕಾಗಿ ಭಾರತೀಯರೆಲ್ಲರೂ ಒಂದಾಗಿ ಮುನ್ನಡೆಯುವ ಸಂದರ್ಭ ಮತ್ತೆ ಎದುರಾಗಿದೆ.
ಸಾಧ್ಯವಾದಲ್ಲೆಲ್ಲಾ ಮನೆಯಿಂದಲೇ ಕೆಲಸ ಮಾಡಲು ಆದ್ಯತೆ ನೀಡಿ, ಇಂಧನ ಬಳಕೆ ಕಡಿಮೆ ಮಾಡೋಣ, ಒಂದು ವರ್ಷದ ಕಾಲ ವಿದೇಶ ಪ್ರಯಾಣ ಬೇಡ, ಸ್ವದೇಶಿ ಉತ್ಪನ್ನಗಳನ್ನೇ ಬಳಸೋಣ, ಅಡುಗೆ ಎಣ್ಣೆಯ ಬಳಕೆಯನ್ನು ಕಡಿಮೆ ಮಾಡಿ, ನೈಸರ್ಗಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳೋಣ ಮತ್ತು ಒಂದು ವರ್ಷದವರೆಗೆ ಚಿನ್ನದ ಖರೀದಿ ಆದಷ್ಟು ತಪ್ಪಿಸೋಣ! ನಾಗರಿಕರ ಸಾಮೂಹಿಕ ಜವಾಬ್ದಾರಿಯುತ ನಡವಳಿಕೆ, ಜಾಗತಿಕ ಸವಾಲಿನ ಈ ಸಂದರ್ಭಗಳಲ್ಲಿ ಭಾರತವನ್ನು ಹೆಚ್ಚು ಬಲಿಷ್ಠ ಮತ್ತು ಹೆಚ್ಚು ಸ್ವಾವಲಂಬಿಯನ್ನಾಗಿಸಲಿದೆ. ಭಾರತಕ್ಕಾಗಿ ಒಂದಾಗಿ ನಾವೆಲ್ಲರೂ ಮುನ್ನಡೆಯೋಣ!
ಐಟಿಐ ಪ್ರವೇಶಕ್ಕೆ ಆನ್‌ಲೈನ್ ಅರ್ಜಿ ಆಹ್ವಾನ
ಶಿವಮೊಗ್ಗ ಜಿಲ್ಲಾ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯು ಶಿವಮೊಗ್ಗ ತಾಲೂಕು ಗಾಜನೂರು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿನ ವಿವಿಧ ವೃತ್ತಿಗಳಿಗೆ 2026-27ನೇ ಸಾಲಿನ ಎನ್.ಸಿ.ವಿ.ಟಿ. ಯೋಜನೆಯಡಿ ಐಟಿಐ ಪ್ರವೇಶಕ್ಕಾಗಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.
ಎಸ್.ಎಸ್.ಎಲ್.ಸಿ./ಪಿ.ಯು.ಸಿ./ ಪದವಿ ಪಾಸ್/ಫೇಲ್ ಆದ ವಿದ್ಯಾರ್ಥಿಗಳು ವೆಬ್‌ಸೈಟ್ www.cite.karnataka.gov.in ಮೂಲಕ ಅಥವಾ ಸಂಸ್ಥೆಗೆ ಭೇಟಿ ನೀಡಿ ಖುದ್ದಾಗಿ ಅರ್ಜಿ ಸಲ್ಲಿಸುವಂತೆ ಸಂಸ್ಥೆಯ ಪ್ರಾಚಾರ್ಯರು ತಿಳಿಸಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ದೂ.ಸಂ.: 9448722232/ 9449775239 ಗಳನ್ನು ಸಂಪರ್ಕಿಸುವುದು.
ತೀರ್ಥಹಳ್ಳಿಯ ನಾಲೂರು ಬಳಿ ಎರಡು ಕಾರುಗಳ ಡಿಕ್ಕಿಯಾಗಿ ನುಜ್ಜುಗುಜ್ಜು
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ನಾಲೂರು ಬಳಿ ಎರಡು ಕಾರುಗಳ ನಡುವೆ ಅಪಘಾತ ಸಂಬಂಧಿಸಿದೆ.
ಸ್ವಿಫ್ಟ್ ಕಾರು ಹಾಗೂ ಎರ್ಟಿಗಾ ಕಾರಿನ ನಡುವೆ ಅಪಘಾತ ಸಂಭವಿಸಿದ್ದು, ಕಾರಿನಲ್ಲಿ ಇದ್ದವರಿಗೆ ಗಾಯಗಳಾಗಿವೆ. ಗಾಯಾಳು ಗಳನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ವಿಫ್ಟ್ ಕಾರಿನಲ್ಲಿ ಮಧ್ಯಪಾನ ಮಾಡಿ ಕಾರು ಚಾಲನೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಸ್ವಿಫ್ಟ್ ಕಾರು ಶಿವಮೊಗ್ಗದ್ದಾಗಿದ್ದು, ಎರ್ಟಿಗಾ ಕಾರನ್ನು ದಾವಣಗೆರೆ ಮೂಲದ್ದಾಗಿದೆ ಎಂದು ಗುರುತಿಸಲಾಗಿದೆ.
ಆಗುಂಬೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಮರ,ಗಿಡಗಳ ಫಲಗಳನ್ನ ನೋಡಿ ವರ್ತಮಾನವನ್ನ ಗುರುತಿಸುವುದು ನಮ್ಮ ಪೂರ್ವಜರ ಹಿರಿಮೆ- ಶಿವಾನಂದ ಕಳವೆ
ಸುಪ್ರೀಂ ಕೋರ್ಟ್ನಲ್ಲಿ ಬಾಕಿ ಇರುವ ಪ್ರಕರಣಗಳ ಶೀಘ್ರ ವಿಲೇವಾರಿಗಾಗಿ ಆಗಸ್ಟ್ 21, 22 ಮತ್ತು 23, ರಂದು “ಸಮಾಧಾನ ಸಮಾರೋಹ” ಎಂಬ ವಿಶೇಷ ಲೋಕ್ ಅದಾಲತ್ ನಡೆಯಲಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕೆಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸಂತೊಷ್ ಎಂ ಎಸ್ ತಿಳಿಸಿದರು.
ಸಮಾಧಾನ ಸಮಾರೋಹ,ರಾಷ್ಟ್ರೀಯ ಮತ್ತು ವಿಶೇಷ ಲೋಕ್ ಅದಾಲತ್ ಹಾಗೂ ಬಂಜಾರ ಸಮುದಾಯಕ್ಕೆ ವಿಶೇಷ ಕಾನೂನು ಅರಿವು ಮತ್ತು ಆರೋಗ್ಯ ತಪಾಸಣಾ ಶಿಬಿರದ ಕುರಿತು ಮಾಹಿತಿ ನೀಡಲು ಸೋಮವಾರ ನ್ಯಾಯಾಲಯ ಆವರಣದ ವಿಸಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಅವರು ಮಾತನಾಡಿದರು.
ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ, ಶಿವಮೊಗ್ಗ ಜಿಲ್ಲೆಯಲ್ಲಿ ಮುಂಬರುವ ತಿಂಗಳುಗಳಲ್ಲಿ ಸರಣಿ ಲೋಕ್ ಅದಾಲತ್ ಹಾಗೂ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಸುಪ್ರೀಂ ಕೋರ್ಟ್ನಲ್ಲಿ “ಸಮಾಧಾನ ಸಮಾರೋಹ” : ಸುಪ್ರೀಂ ಕೋರ್ಟ್ನಲ್ಲಿ ಬಾಕಿ ಇರುವ ಪ್ರಕರಣಗಳ ಶೀಘ್ರ ವಿಲೇವಾರಿಗಾಗಿ ಆಗಸ್ಟ್ 21, 22 ಮತ್ತು 23 ರಂದು “ಸಮಾಧಾನ ಸಮಾರೋಹ” ಎಂಬ ವಿಶೇಷ ಲೋಕ್ ಅದಾಲತ್ ನಡೆಯಲಿದೆ.
ಜಿಲ್ಲೆಯಿಂದ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿ, ಬಹುಕಾಲದಿಂದ ಬಾಕಿ ಇರುವ 47 ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಲು ಗುರುತಿಸಲಾಗಿದೆ. ಹೀಗೆ ಸುಪ್ರೀಂ ಕೋರ್ಟ್ನಲ್ಲಿ ಬಹುಕಾಲದಿಂದ ಬಾಕಿ ಇದ್ದು, ರಾಜೀ ಸಂಧಾನಕ್ಕೆ ಸಿದ್ದವಿರುವವರು ಈಗಲೂ ಸಹ ಕಾನೂನು ಸೇವಾ ಪ್ರಾಧಿಕಾರವನ್ನು ಸಂಪರ್ಕಿಸಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದು. ಸಮಾಧಾನ ಸಮಾರೋಹಕ್ಕೆ ಗುರುತಿಸಲಾದ ಪ್ರಕರಣಗಳಲ್ಲಿ ಪಕ್ಷಗಾರರಿಗೆ ನೋಟಿಸ್ ಹೊರಡಿಸಲಾಗುತ್ತದೆ. ನಿಗದಿತ ದಿನಾಂಕದAದು ನುರಿತ ಮಧ್ಯಸ್ಥಗಾರರ ವಿಚಾರಣೆ ನಡೆದು, ಸುಪ್ರೀಂ ಕೋರ್ಟ್ನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಕರಣವನ್ನು ಇತ್ಯರ್ಥಪಡಿಸಲಾಗುವುದು.
ಈ ರೀತಿಯ ವಿಲೇವಾರಿಯಿಂದ ಪಕ್ಷಗಾರರಿಗೆ ಯಾವುದೇ ಹಣ ವ್ಯಯ ಆಗುವುದಿಲ್ಲ. ಹಾಗೂ ಸಮಾಧಾನದ ನ್ಯಾಯ ಒದಗುತ್ತದೆ ಆದ್ದರಿಂದ ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕು. ಸಾರ್ವಜನಿಕರು ತಮ್ಮ ಪ್ರಕರಣಗಳ ಸುಲಭ ವಿಲೇವಾರಿಗಾಗಿ samadhansamaroh@gmail.com ಗೆ ಇಮೇಲ್ ಮಾಡುವ ಮೂಲಕ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವನ್ನು ಸಂಪರ್ಕಿಸುವ ಮೂಲಕ ಈ ಅವಕಾಶವನ್ನು ಬಳಸಿಕೊಳ್ಳಬಹುದು ಎಂದರು.
ರಾಷ್ಟ್ರೀಯ ಲೋಕ್ ಅದಾಲತ್ : ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಜುಲೈ 11 ರಂದು ಶಿವಮೊಗ್ಗ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಈ ವರ್ಷದ ಎರಡನೇ ರಾಷ್ಟ್ರೀಯ ಲೋಕ್ ಅದಾಲತ್ ನಡೆಯಲಿದೆ.
ವೈವಾಹಿಕ ವಿವಾದಗಳು ಹಾಗೂ ಕೌಟುಂಬಿಕ ದೌರ್ಜನ್ಯ ಪ್ರಕರಣಗಳು, ಚೆಕ್ ಅಮಾನ್ಯ ಪ್ರಕರಣಗಳು, ಅಪಘಾತ ಪರಿಹಾರ ಹಾಗೂ ವಿಮಾ ಪ್ರಕರಣಗಳು, ಸಿವಿಲ್ ವ್ಯಾಜ್ಯಗಳು, ಆಸ್ತಿ ವಿಭಾಗ ಹಾಗೂ ಭೂಸ್ವಾಧೀನ ಪ್ರಕರಣಗಳು, ರಾಜಿ ಮಾಡಿಕೊಳ್ಳಬಹುದಾದ ಕ್ರಿಮಿನಲ್ ಪ್ರಕರಣಗಳು, ಬ್ಯಾಂಕ್ ಸಾಲ ವಸೂಲಾತಿ ಹಾಗೂ ಗ್ರಾಹಕ ವೇದಿಕೆಯ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಬಹುದಾಗಿದೆ ಎಂದರು.
ಹಿAದಿನ ಸಾಧನೆ: ಕಳೆದ ಮಾರ್ಚ್ 14 ರಂದು ನಡೆದ ರಾಷ್ಟ್ರೀಯ ಲೋಕ್ ಅದಾಲತ್‌ನಲ್ಲಿ ಒಟ್ಟು 14,501 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದ್ದು, ಒಟ್ಟು ರೂ. 28.48 ಕೋಟಿಗಳಿಗೂ ಅಧಿಕ ಪರಿಹಾರವನ್ನು ವಿತರಿಸಲಾಗಿತ್ತು. ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ದಿನಾಂಕ : 30-04-2026 ರವರೆಗೆ ಒಟ್ಟು 7427 ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ ಎಂದರು.
ಬAಜಾರ ಸಮುದಾಯಕ್ಕೆ ವಿಶೇಷ ಶಿಬಿರ : ಶಿವಮೊಗ್ಗ ನಗರದ ಬಂಜಾರ ಸಮುದಾಯ ಭವನದಲ್ಲಿ ಮೇ 30 ರಂದು ಬಂಜಾರ ಸಮುದಾಯದವರಿಗಾಗಿ ವಿಶೇಷ ಕಾನೂನು ಅರಿವು ಕಾರ್ಯಕ್ರಮ ಹಾಗೂ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ. ಈ ಸಂದರ್ಭದಲ್ಲಿ ವಿವಿಧ ಸರ್ಕಾರಿ ಇಲಾಖೆಗಳ ಮಳಿಗೆಗಳನ್ನು ಸ್ಥಾಪಿಸಲಾಗುತ್ತಿದ್ದು, ಸಮುದಾಯಕ್ಕೆ ಲಭ್ಯವಿರುವ ಸೌಲಭ್ಯಗಳ ಕುರಿತು ಮಾಹಿತಿಯನ್ನು ಸ್ಥಳದಲ್ಲಿಯೇ ನೀಡಲಾಗುತ್ತಿದ್ದು ಸಮುದಾಯದವರು ಇದರ ಸದುಪಯೋಗ ಪಡೆಯಬೇಕೆಂದರು.
ಚೆಕ್‌ಬೌನ್ಸ್ ಪ್ರಕರಣ(ಎನ್.ಐ. ಆಕ್ಟ್) ಇತ್ಯರ್ಥಕ್ಕೆ ವಿಶೇಷ ಲೋಕ್ ಅದಾಲತ್ ; ಚೆಕ್ ಅಮಾನ್ಯ ಪ್ರಕರಣಗಳ ಶೀಘ್ರ ವಿಲೇವಾರಿಗಾಗಿ ಜುಲೈ 18 ಮತ್ತು ನವೆಂಬರ್ 21 ರಂದು ವಿಶೇಷ ಲೋಕ್ ಅದಾಲತ್‌ಗಳನ್ನು ಹಮ್ಮಿಕೊಳ್ಳಲಾಗಿದ್ದು ಉಭಯ ಪಕ್ಷಗಾರರ ಉಪಸ್ಥಿತಿಯಲ್ಲಿ ನ್ಯಾಯಾಧೀಶರು ಮತ್ತು ನ್ಯಾಯಿಕೇತರ ಸಂಧಾನಕಾರರು ರಾಜೀ ಸಂಧಾನದ ಪ್ರಕ್ರಿಯೆಯನ್ನು ಕೈಗೊಂಡು ಪಕ್ಷಗಾರರು ವಿವಾದವನ್ನು ಇತ್ಯರ್ಥಪಡಿಸಿಕೊಂಡರೆ ಅದರಂತೆ ಅಂತಿಮ ಆದೇಶವನ್ನು ಅದೇ ದಿನದಂದು ನೀಡುವ ಅವಕಾಶವನ್ನು ಸಾರ್ವಜನಿಕರು ಮತ್ತು ಪಕ್ಷಗಾರರು ಸದುಪಯೋಗ ಪಡೆಯಬೇಕೆಂದರು.
ಸಾರ್ವಜನಿಕರು ಮತ್ತು ಕಕ್ಷಿದಾರರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಈ ಎಲ್ಲಾ ಸೌಲಭ್ಯಗಳ ಸದುಪಯೋಗ ಪಡಿಸಿಕೊಳ್ಳಬೇಕೆಂದು ಅವರು ಕೋರಿದರು.
Karnataka Sanga ಕವಿ ಜಿಎಸ್ಎಸ್ ಕನ್ನಡದ ಸಾಂಸ್ಕೃತಿಕ ಪ್ರಜ್ಞೆ, ರಾಯಭಾರಿ- ಡಾ.ಕಿರಣ್ ದೇಸಾಯಿ
Karnataka Sanga ಕನ್ನಡ ಕಾವ್ಯ ಪರಂಪರೆಯಲ್ಲಿ ಕವಿಗೆ ಸಮಾನ ಹೃದಯವುಳ್ಳವರೆಲ್ಲರೂ ಸಹೃದಯರು ಎನ್ನುತ್ತಾರೆ ಎಂದು ಕಮಲಾ ನೆಹರು ಕಾಲೇಜಿನ ನಿವೃತ್ತ ಕನ್ನಡ ಪ್ರಾಧ್ಯಾಪಕಿ ಕಿರಣ್ ದೇಸಾಯಿ ಹೇಳಿದರು.
ಶಿವಮೊಗ್ಗ ನಗರದ ಕರ್ನಾಟಕ ಸಂಘದಲ್ಲಿ ಅಭಿವ್ಯಕ್ತಿ ಟ್ರಸ್ಟ್ ವತಿಯಿಂದ ಶಿವಮೊಗ್ಗ ಸಾಹಿತ್ಯ ಹಬ್ಬ ಮೊದಲ ಆವತ್ತಿಯ ಎರಡನೇ ದಿನದ ಐದನೇ ಗೋಷ್ಠಿಯಲ್ಲಿ ಭಾನುವಾರ ಸಾಮಗಾನ (ಜಿಎಸ್‌ಎಸ್-ಕಾವ್ಯ ಸಂವಾದ) ವಿಷಯದ ಕುರಿತು ಸಂವಾದಕಾರರಾಗಿ ಪಾಲ್ಗೊಂಡು ಮಾತನಾಡಿದರು.
ಜಿಎಸ್‌ಎಸ್ ಶತಮಾನೋತ್ಸವದಲ್ಲಿ ನಾವೆಲ್ಲಾ ಹೆಮ್ಮೆಪಡಬೇಕು. ಜಿಎಸ್‌ಎಸ್ ಕನ್ನಡದ ಸಾಂಸ್ಕೃತಿಕ ಪ್ರಜ್ಞೆ, ರಾಯಭಾರಿ. ಬದುಕಿನುದ್ದಕ್ಕೂ ಸಾಹಿತ್ಯದ ಕೀರ್ತಿಯನ್ನು ಉನ್ನತ ಶಿಖರಕ್ಕೆ ಹೊಯ್ದರು ಎಂದರು.
ಕುವೆಂಪು ಅವರ ನೇರ ಶಿಷ್ಯರು ಜಿಎಸ್‌ಎಸ್, ನಿಷ್ಶಬ್ದದಲ್ಲಿ ನಿಮ್ಮನ್ನು ನೆನೆಸುವೆ ಎಂದು ಕುವೆಂಪು ಅವರಿಗೆ ಹೇಳಿದರು. ಕಾವ್ಯ ಓದುವ ಸಂಪ್ರದಾಯ ಮರೆಯುತ್ತಿರುವ ಸಂದರ್ಭದಲ್ಲಿ ಇಂತಹ ಸಾಹಿತ್ಯ ಹಬ್ಬದಲ್ಲಿ ಜಿಎಸ್‌ಎಸ್ ಕಾವ್ಯ ಸಂವಾದ ನಡೆಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಪೇಸ್ ಪಿಯು ಕಾಲೇಜಿನ ಸಂಸ್ಕೃತ ಉಪನ್ಯಾಸಕಿ ಡಾ. ಮೈತ್ರೇಯಿ ಆದಿತ್ಯಪ್ರಸಾದ್ ಮಾತನಾಡಿ, ಜಿಎಸ್‌ಎಸ್ ಅವರ ಕಾವ್ಯ ದೇಶದ ಭವಿಷ್ಯತ್ತನ್ನು ಒಳಗೊಂಡಿರುತ್ತದೆ. ನೆಲ, ಜಲ ಸೇರಿದಂತೆ ಪಂಚಭೂತಗಳ ಸಂರಕ್ಷಿಸುವ ಹೊಣೆಗಾರಿಕೆಯನ್ನು ನೆನಪಿಸುವ ಕೆಲಸ ಜಿಎಸ್‌ಎಸ್ ಕವನಗಳಲ್ಲಿದೆ ಎಂದರು.
Karnataka Sanga ಪರಿಶ್ರಮಕ್ಕೆ ಮಿಗಿಲಾದದ್ದು ಇಲ್ಲ. ಅಪ್ರತಿಮ ವೀರತ್ವ, ಶೌರ್ಯ, ಸಹನೆ, ಧರ್ಮವನ್ನೆಲ್ಲವನ್ನು ಭಾವನಾತ್ಮಕವಾಗಿಯಷ್ಟೇ ಅಲ್ಲ. ಹೊಣೆಗಾರಿಕೆ ತಿಳಿಸುತ್ತದೆ. ಯುವ ಸಮೂಹಕ್ಕೆ ಭೂತಕಾಲದ ಸಂದೇಶದಿಂದ ವರ್ತಮಾನವನ್ನು ತೋರುವ ಮೂಲಕ ಸಮಷ್ಟಿಯ ಪ್ರಗತಿಯ ಕರ್ತವ್ಯಭಾವಕ್ಕೆ ನಮ್ಮನ್ನೆಲ್ಲ ಅವರ ಕವನ ಕರೆದೊಯ್ಯುತ್ತದೆ. ತನ್ಮೂಲಕ ದೇಶ ನಿರ್ಮಾಣದಲ್ಲಿ ತನ್ನದೇ ಪಾತ್ರವನ್ನು ಜಿಎಸ್‌ಎಸ್‌ನವರ ಕವನ ನಿರ್ವಹಿಸಿದೆ ಎಂದು ಹೇಳಿದರು.
ಹೊಸನಗರದ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕಿ ಮೇದಿನಿ ಕೆಸವಿನಮನೆ, ಕರ್ನಾಟಕ ಪಬ್ಲಿಕ್ ಶಾಲಾ ಶಿಕ್ಷಕ ಡಾ. ಬಸವರಾಜಪ್ಪ, ಹಾಗೂ ಡಾ. ಪ್ರಸಾದ್ ಬಾಪಟ್ ಕಾವ್ಯ ಸಂವಾದಕರಾಗಿ ಪಾಲ್ಗೊಂಡಿದ್ದರು.
ಜುಲೈ1 ರಿಂದ ಗ್ರಾಮೀಣ ಭಾರತದಾದ್ಯಂತ ವಿಬಿ-ಜಿ ರಾಮ್ ಜಿ ಯೋಜನೆ ಜಾರಿಗೆ
ಹೊಸ ಚೌಕಟ್ಟಿನ ಅಡಿಯಲ್ಲಿ, ಕೌಶಲ್ಯರಹಿತ ಶಾರೀರಿಕ ಕೆಲಸ ಮಾಡಲು ಸ್ವಯಂಪ್ರೇರಿತರಾಗಿ ಮುಂದೆ ಬರುವ ವಯಸ್ಕ ಸದಸ್ಯರನ್ನು ಹೊಂದಿರುವ ಪ್ರತಿ ಗ್ರಾಮೀಣ ಕುಟುಂಬವು, ಪ್ರತಿ ಹಣಕಾಸು ವರ್ಷದಲ್ಲಿ 125 ದಿನಗಳ ಕೂಲಿ ಉದ್ಯೋಗದ ಶಾಸನಬದ್ಧ ಖಾತ್ರಿಯನ್ನು ಪಡೆಯಲು ಅರ್ಹವಾಗಿರುತ್ತದೆ.
ವಿಬಿ- ಜಿ ರಾಮ್ ಜಿ ಕಾಯ್ದೆಯು ಜಾರಿಗೆ ಬರುವುದರೊಂದಿಗೆ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯು ಅದೇ ದಿನಾಂಕದಿಂದ ರದ್ದಾಗಲಿದೆ.
ಅಮೃತಕ್ಕಿಂತ ಶ್ರೇಷ್ಠ, ತಾಯಿಯ ಪ್ರೀತಿ.- ಬ್ರಹ್ಮಕುಮಾರಿ ಸ್ವಾತಿ ಅಕ್ಕ
ತಾಯಿ ಸಂತೋಷ ಕುಟುಂಬದ ಆಧಾರಶಿಲೆ ತಾಯಿ ಎಂಬುದು ಅಮೃತಕ್ಕಿಂತ ಶ್ರೇಷ್ಠ ತಾಯಿಯ ಪ್ರೀತಿ ಎಲ್ಲರಿಗೂ ಸಿಗಲಿ ಎಂದು ನವಲೆ ರಸ್ತೆಯಲ್ಲಿರುವ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದಲ್ಲಿ ತಾಯಂದಿರ ದಿನಾಚರಣೆಯ ಅಂಗವಾಗಿ ಹಿರಿಯ ಮಾತೆಯರಿಗೆ ಹಮ್ಮಿಕೊಳ್ಳಲಾದ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ರಾಜಯೋಗಿನಿ ಪ್ರಜಾ ಪಿತಾ ಬ್ರಹ್ಮಕುಮಾರಿ ಸ್ವಾತಿ ಅಕ್ಕನವರು ಮಾತನಾಡಿದರು.
ತಾಯಿ ಎಂಬ ಶಬ್ದ ನಮ್ಮ ಜೀವನದ ಅತಿ ದೊಡ್ಡ ಶಕ್ತಿ ತಾಯಿಯ ಪ್ರೀತಿ ಮತ್ತು ಆಶೀರ್ವಾದ ಪ್ರಪಂಚದ ಯಾವ ಸಿರಿ ಸಂಪತ್ತಿಗೂ ಸರಿಸಮಾನವಾಗಿರುವುದಿಲ್ಲ ತಾಯಿಯನ್ನು ಗೌರವಿಸುವುದು ನಮ್ಮ ನಿಮ್ಮೆಲ್ಲರ ಆಧ್ಯ ಕರ್ತವ್ಯವಾಗಿದೆ ಎಂದ ಅವರು ಅಮ್ಮನ ಪದದಲ್ಲಿ ದೈವತ್ವವಿದೆ ಅವಳು ನಮ್ಮ ಬಾಳಿನ ದಾರಿದೀಪ ಅವಳ ಋಣವನ್ನು ತೀರಿಸಲು ಸಾಧ್ಯವಿಲ್ಲ ಬದುಕಿನಲ್ಲಿ ಬರುವ ಕಷ್ಟಗಳನ್ನು ತಾನು ತನ್ನ ಮಡಿಲಿಗೆ ಹಾಕಿಕೊಂಡು ಮಕ್ಕಳಿಗೆ ಸುಂದರವಾದ ಬದುಕನ್ನು ರೂಪಿಸುವಲ್ಲಿ ತಾಯಿ ಪ್ರಮುಖ ಪಾತ್ರವನ್ನು ವಹಿಸಿದ್ದಾಳೆ ತಾಯಿಯ ಪ್ರೀತಿ ಮತ್ತು ತ್ಯಾಗಕ್ಕಾಗಿ ಪ್ರತಿಯಾಗಿ ನಾವು ಏನು ನೀಡಿದರು.
ಅದು ಕಡಿಮೆ ಅವಳ ಬಗ್ಗೆ ಗೌರವ ಹಾಗೂ ಕೃತಜ್ಞತಾ ಭಾವನೆಯನ್ನು ಇಟ್ಟುಕೊಳ್ಳುವುದು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ನುಡಿದರು.
ಇದೇ ಸಂದರ್ಭದಲ್ಲಿ 93 ವಸಂತಗಳನ್ನ ಕಳೆದ ಮಾತೆ ಲಲಿತಮ್ಮ
ಹಾಗೂ 77 ವಸಂತಗಳನ್ನ ಕಳೆದ ಮಾತೆ ವಿನೋದಮ್ಮನವರಿಗೆ ಪ್ರೀತಿಯಿಂದ ಸನ್ಮಾನಿಸಿ ಗೌರವಿಸಲಾಯಿತು ಹಾಗೆ ಇದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲಾ ಮಾತೆಯರಿಗೆ ನೆನಪಿನ ಕಾಣಿಕೆಗಳನ್ನು ನೀಡಿ ಗೌರವಿಸಲಾಯಿತು.
ಮಾತೆಯರು ಕುಟುಂಬದ ಕಣ್ಣು ಅವರು ಸದಾ ಆರೋಗ್ಯವನ್ನು ಸದೃಢವಾಗಿ ಇಟ್ಟುಕೊಂಡರೆ ಕುಟುಂಬ ಪರಿಪೂರ್ಣವಾಗಿ ಸುಂದರವಾಗಿ ಇರುತ್ತದೆ ಆಸೆ ವ್ಯಾಮೋಹಗಳನ್ನು ತ್ಯಜಿಸಿ ಪರಮಾತ್ಮನ ನಾಮಸ್ಮರಣೆಯಲ್ಲಿ ನಮಗೆ ಸಕಲವೂ ದೊರಕುತ್ತದೆ ಎಂದು ನುಡಿದರು.
ಇದೇ ಸಂದರ್ಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಸಂಘದ ಉಪಾಧ್ಯಕ್ಷರಾದ ರೊಟೇರಿಯನ್ ಜಿ ವಿಜಯ್ ಕುಮಾರ್ಯವರು ಸಂಸ್ಥೆಯಲ್ಲಿ ನಡೆಯುತ್ತಿರುವ ಕಾರ್ಯಕ್ರಮಗಳು ಯೋಗ,ಆಧ್ಯಾತ್ಮಿಕ, ನೀತಿಶಾಸ್ತ್ರ, ಪ್ರಾಯೋಗಿಕ ಮನೋವಿಜ್ಞಾನ, ತತ್ವಶಾಸ್ತ್ರ, ವಿಶ್ವ ಇತಿಹಾಸ ಮತ್ತು ಸಂಸ್ಕೃತಿಯ ಸಾರಾಂಶ, ಸಮಾಜಶಾಸ್ತ್ರ, ಮತ್ತು ಹಲವಾರು ಇತರ ವಿಷಯಗಳ ಮಿಶ್ರಣವಾಗಿದೆ.
ಈ ಸಂಸ್ಥೆಯು ಪ್ರತಿಯೊಬ್ಬ ವ್ಯಕ್ತಿಯಲ್ಲಿನ ತನ್ನ ಆದ್ಯಾತ್ಮಿಕ ಆಂತರಿಕ ಪ್ರತಿಭೆಯನ್ನು ಗುರುತಿಸುತ್ತದೆ ಮತ್ತು ತಮ್ಮೊಳಗಿನ ವ್ಯಕ್ತಿತ್ವ ವನ್ನು ಮರುಶೋಧಿಸಲು ಸಹಾಯ ಮಾಡುತ್ತದೆ. ಜಾತಿ, ಮತ, ವಯಸ್ಸು ಮತ್ತು ಸಾಮಾಜಿಕ, ಆರ್ಥಿಕ ಅಥವಾ ರಾಜಕೀಯ ಸ್ಥಾನಮಾನವನ್ನು ಲೆಕ್ಕಿಸದೆ ಈ ಸಂಸ್ಥೆ ಎಲ್ಲರಿಗೂ ಮುಕ್ತವಾಗಿದೆ. ಎಂದರು.
ಈ ಸಂದಭದಲ್ಲಿ ನಾಗು ಅಕ್ಕನವರು. ಸ್ವಾತಿ ಅಕ್ಕನವರು. ಬಿಂದು ವಿಜಯ ಕುಮಾರ್ ಹಾಗೂ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯ ಸದಸ್ಯರು ಉಪಸ್ಥಿತರಿದ್ದರು ಕಾರ್ಯಕ್ರಮದ ನಂತರ ಎಲ್ಲರಿಗೂ ಪ್ರಸಾದದ ವ್ಯವಸ್ಥೆ ಮಾಡಲಾಯಿತು.
ಉದ್ಯಮಗಳು ಯಶಸ್ವಿಯಾಗಿ ನಡೆಯಲು ಸಾರ್ವಜನಿಕರ ಸಹಕಾರ ಅಗತ್ಯ- ಆರ್.ಪ್ರಸನ್ನ ಕುಮಾರ್
ಬಿಗ್ ಬಾಸ್ ಫ್ಯಾಮಿಲಿ ರೆಸ್ಟೋರೆಂಟ್ ಉದ್ಘಾಟನಾ ಸಮಾರಂಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯರು ಆರ್ ಪ್ರಸನ್ನ ಕುಮಾರ್
ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಕಲಗೋಡು ರತ್ನಾಕರ್ ಮಾಜಿ ಮಹಾ ನಗರ ಪಾಲಿಕೆ ಸದಸ್ಯ ಎಚ್ ಸಿ. ಯೋಗೇಶ್. ಉತ್ತರ ಬ್ಲಾಕ್ ಅಧ್ಯಕ್ಷ ಶಿವಕುಮಾರ್ ಇವರುಗಳಿಗೆ ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಆರ್ ಪ್ರಸನ್ನ ಕುಮಾರ್ ಮಾತನಾಡುತ್ತಾ ಉದ್ಯಮಗಳು ಯಶಸ್ವಿಯಾಗಿ ನೆರವೇರಲು ಸಾರ್ವಜನಿಕರ ಸಹಕಾರ ಅಗತ್ಯ ಜೊತೆಗೆ ರುಚಿರುಚಿಯಾದ ಸೇವೆಯನ್ನು ಒದಗಿಸುವುದು ಸಹ ಮತ್ತೆ ಮುಖ್ಯ ಎಂದು ನುಡಿದರು.
ಕಲಗೋಡು ರತ್ನಾಕರ್ ಹಾಗೂ ಹೆಚ್ ಸಿ ಯೋಗೇಶ್. ಮತ್ತು ಶಿವಕುಮಾರ್ ಅವರು ಶುಭ ಹಾರೈಸಿದರು ಮಾಲೀಕರದ ಎಸ್ ಚಿನ್ನಪ್ಪ, ದರ್ಶನ್ ಜೋಸಿ, ಲಿಂಗೇಸ್, ಹಾಗು ಸಿಬ್ಬಂದಿ ವರ್ಗ ದವರು ಉಪಸ್ಥಿತರಿದ್ದರು.
B. S. Yediyurappa ಅಭಿಮಾನೋತ್ಸವ ಆಚರಿಸಿದ ಅಭಿಮಾನಿಗಳಿಗೆ ಹಿರಿಯ ರಾಜಕಾರಣಿ “ಬಿಎಸ್ ವೈ” ಅವರಿಂದ ಧನ್ಯತೆ ಅರ್ಪಣೆ
B. S. Yediyurappa ಜನರ ಪ್ರೀತಿ, ಅಭಿಮಾನಿಗಳಿಂದ ಹೃದಯ ತುಂಬಿದೆ. ಕಳೆದ ಐದು ದಶಕಗಳ ನನ್ನ ಪ್ರಾಮಾಣಿಕ ಹೋರಾಟ, ಜನಸೇವೆಗಳನ್ನು ಗಮನಿಸಿ, ಅಭಿನಂದಿಸಿ, ಆಶೀರ್ವದಿಸಲು ಬೃಹತ್ ಅಭಿನಂದನೋತ್ಸವವನ್ನು ಅರ್ಥಪೂರ್ಣವಾಗಿ ಆಯೋಜಿಸಿ, ನನ್ನ ನಿರೀಕ್ಷೆಯನ್ನೂ ಮೀರಿ ಯಶಸ್ವಿಗೊಳಿಸಿದ ಲಕ್ಷ ಲಕ್ಷ ಅಭಿಮಾನಿಗಳಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿಗಳಾದ ಬಿ. ಎಸ್. ಯಡಿಯೂರಪ್ಪನವರು ಹೇಳಿದ್ದಾರೆ.
ತಮ್ಮ ಬಿಡುವಿಲ್ಲದ ಕಾರ್ಯಗಳ ಒತ್ತಡದ ನಡುವೆಯೂ ಆಗಮಿಸಿ ಶುಭ ಹಾರೈಸಿದ ಕೇಂದ್ರ ಗೃಹ ಸಚಿವ ಶ್ರೀ Amit Shah ಜೀ ಅವರಿಗೆ, ನನ್ನನ್ನು ಆಶೀರ್ವದಿಸಿ ಹರಸಲು ದಿವ್ಯ ಸಾನ್ನಿಧ್ಯ ವಹಿಸಿದ್ದ ನಾಡಿನ ಎಲ್ಲ ಪರಮಪೂಜ್ಯ ಸ್ವಾಮೀಜಿಗಳಿಗೆ, ಹರ ಗುರು ಚರ ಮೂರ್ತಿಗಳಿಗೆ, ಪಕ್ಷದ ಎಲ್ಲಾ ನಾಯಕರಿಗೆ, ಜನಪ್ರತಿನಿಧಿಗಳಿಗೆ, ಸಂಘಟಕರಿಗೆ ಹಾಗೂ ಎಲ್ಲಾ ನಮ್ಮ ನಿಷ್ಠಾವಂತ ಕಾರ್ಯಕರ್ತರಿಗೆ ನಾನು ಸದಾ ಆಭಾರಿಯಾಗಿದ್ದೇನೆ ಎಂದಿದ್ದಾರೆ.
ನನ್ನಲ್ಲಿ ಶಕ್ತಿ ಇರುವವರೆಗೂ, ನನ್ನ ಕೊನೆಯ ಉಸಿರಿರುವವರೆಗೂ, ಪಕ್ಷ ಸಂಘಟನೆಗೆ, ನಾಡು ನುಡಿಯ, ನಾಡಿನ ಜನರ ಸೇವೆಗೆ ನನ್ನ ಪ್ರಾಮಾಣಿಕ ಪ್ರಯತ್ನಗಳು ಮುಂದುವರಿಯಲಿದೆ. ನಿಮ್ಮೆಲ್ಲರ ಪ್ರೀತಿ, ಅಭಿಮಾನ, ಬೆಂಬಲ, ಹಾರೈಕೆ ಆಶೀರ್ವಾದಗಳೇ ನನ್ನ ಶಕ್ತಿ ಎಂದು ತಿಳಿಸಿದ್ದಾರೆ.
B. S. Yediyurappa ಮತ್ತೊಮ್ಮೆ ಪ್ರತಿಯೊಬ್ಬರಿಗೂ ನನ್ನ ಅಭಿವಂದನೆಗಳು. ಕಾರ್ಯಕ್ರಮಕ್ಕೆ ಆಗಮಿಸಿದ ಪ್ರತಿಯೊಬ್ಬರೂ ಸುರಕ್ಷಿತವಾಗಿ ತಮ್ಮ ತಮ್ಮ ಊರು, ಮನೆಗಳಿಗೆ ತಲುಪಲಿ, ಯಾರಿಗೂ ಏನೂ ತೊಂದರೆಯಾಗದಿರಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.
