Thursday, August 6, 2026
Thursday, August 6, 2026
Home Blog Page 103

ಕೆನರಾ ಬ್ಯಾಂಕ್ ಸ್ವ- ಉದ್ಯೋಗ ತರಬೇತಿ ಕೇಂದ್ರದಲ್ಲಿ ಕುರಿ ಸಾಕಣೆ ಬಗ್ಗೆ ಉಚಿತ ತರಬೇತಿ

0

ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲ್ಲೂಕು ಸೊಣ್ಣಹಳ್ಳಿಪುರದಲ್ಲಿರುವ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಮೇ 18 ರಿಂದ 13 ದಿನಗಳ ಕಾಲ ನಿರುದ್ಯೋಗಿ ಪುರುಷರು ಹಾಗೂ ಮಹಿಳೆಯರಿಗೆ ಕುರಿ ಸಾಕಾಣಿಕೆ ಕುರಿತು ಉಚಿತ ತರಬೇತಿ ಶಿಬಿರವನ್ನು ಏರ್ಪಡಿಸಿದೆ.

ಶಿಬಿರದಲ್ಲಿ ಕುರಿ ಸಾಕಾಣಿಕೆ ಜೊತೆಗೆ ವೈಜ್ಙಾನಿಕ ರೀತಿಯಲ್ಲಿ ಹಸು ಸಾಕಾಣಿಕೆ, ಮೇಕೆ ಸಾಕಾಣಿಕೆ, ಹಂದಿ ಸಾಕಾಣಿಕೆ, ಕೋಳಿ ಸಾಕಾಣಿಕೆ, ತೋಟಗಾರಿಕಾ ಬೆಳೆಗಳು, ಸಾವಯವ ಗೊಬ್ಬರ ತಯಾರಿಕೆ ಬಗ್ಗೆ ತರಬೇತಿ ನೀಡಲಾಗುತ್ತಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ.

ಸ್ವಯಂ ಉದ್ಯೋಗಿಗಳಾಗಲು ಬಯಸುವ 18 ರಿಂದ 50 ವರ್ಷ ವಯಸ್ಸಿನ ಕರ್ನಾಟಕ ರಾಜ್ಯದ ಯಾವುದೇ ಜಿಲ್ಲೆಯ ನಿರುದ್ಯೋಗಿ ಪುರುಷರು ಹಾಗೂ ಮಹಿಳೆಯರು ಈ ಶಿಬಿರದಲ್ಲಿ ಪಾಲ್ಗೊಳ್ಳಬಹುದಾಗಿದೆ.

ಈ ಶಿಬಿರದ ಸಮಯದಲ್ಲಿ ತರಬೇತಿ, ಊಟ ಹಾಗೂ ವಸತಿ ಸೌಕರ್ಯಗಳು ಉಚಿತವಾಗಿ ಕಲ್ಪಿಸಲಾಗುವುದು. ಗ್ರಾಮೀಣ ಭಾಗದ ಬಿಪಿಎಲ್ ಅಭ್ಯರ್ಥಿಗಳಿಗೆ ಮೊದಲ ಆದ್ಯತೆಯನ್ನು ನೀಡಲಾಗುವುದು. ಅಭ್ಯರ್ಥಿಗಳು ಸ್ಥಳೀಯ ಭಾಷೆ ಬಲ್ಲವರಾಗಿದ್ದು, ಕನ್ನಡ ಓದಲು ಮತ್ತು ಬರೆಯಲು ತಿಳಿದಿರಬೇಕು. ತರಬೇತಿ ನಂತರ ಕೇಂದ್ರ ಸರ್ಕಾರದ ಗ್ರಾಮೀಣ ಸಚಿವಾಲಯದಿಂದ ಪ್ರಮಾಣ ಪತ್ರವನ್ನು ವಿತರಿಸಲಾಗುವುದು.

ಆಸಕ್ತಿಯುಳ್ಳ ಅಭ್ಯರ್ಥಿಗಳು ಮೇ 18 ರಂದು ಬೆಳಿಗ್ಗೆ 10.00 ಘಂಟೆಗೆ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ, ಸೊಣ್ಣಹಳ್ಳಿಪುರ, ಹಸಿಗಾಳ(ಅಂಚೆ), ಹೊಸಕೋಟೆ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಇಲ್ಲಿ ನಡೆಯುವ ತರಬೇತಿಗೆ ನೇರವಾಗಿ ವಿದ್ಯಾರ್ಹತೆ ಮತ್ತು ವಿಳಾಸ ದಾಖಲಾತಿಗಳೊಂದಿಗೆ ಹಾಜರಾಗುವುದು.
ಸಂದರ್ಶನಕ್ಕೆ ಹಾಜರಾಗಲು ಅಸಾಧ್ಯವಾದಲ್ಲಿ ದಿನಾಂಕ : 18/05/2026 ರೊಳಗೆ ಸಂಸ್ಥೆಯನ್ನು ದೂರವಾಣಿ ಸಂಖ್ಯೆ 8970476050/ 9591514154/ 9686248369/6363139123/ 9505894247 ಗಳಿಗೆ ಸಂಪರ್ಕಿಸಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದೆಂದು ಸಂಸ್ಥೆಯ ನಿರ್ದೇಶಕರು ತಿಳಿಸಿದ್ದಾರೆ.

Shiralakoppa Police ಮಹಿಳೆ ನಾಪತ್ತೆ. ಶಿರಾಳಕೊಪ್ಪ ಪೊಲೀಸ್ ಠಾಣೆ ಪ್ರಕಟಣೆ.

0

Shiralakoppa Police ಶಿಕಾರಿಪುರ ತಾಲೂಕು ಶಿರಾಳಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಕಣಸೋಗಿ ಗ್ರಾಮದ ಬಲವೀಂದ್ರಪ್ಪ ಎಂಬುವವರ ಪತ್ನಿ 30 ವರ್ಷದ ದೀಪಾ ಎಂಬ ಮಹಿಳೆ ಜನವರಿ 2026 ರಿಂದ ಕಾಣೆಯಾಗಿದ್ದು, ಈವರೆಗೂ ವಾಪಾಸ್ಸಾಗಿರುವುದಿಲ್ಲ.
ಈಕೆಯ ಚಹರೆ 5.00 ಅಡಿ ಎತ್ತರ, ತೆಳುವಾದ ಮೈಕಟ್ಟು, ಗೋಧಿ ಮೈಬಣ್ಣ, ಕೋಲುಮುಖ ಹೊಂದಿದ್ದು, ಕನ್ನಡ ಭಾಷೆ ಮಾತಾನಾಡುತ್ತಾರೆ.

ಮನೆಯಿಂದ ಹೋಗುವಾಗ ಹಸಿರು ಬಣ್ಣದ ಸೀರೆ ಧರಿಸಿರುತ್ತಾರೆ
ಈ ಮಹಿಳೆಯ ಕುರಿತು ಸುಳಿವು ಸಿಕ್ಕಲ್ಲಿ ಶಿರಾಳಕೊಪ್ಪ ಪೊಲೀಸ್ ಠಾಣೆ ದೂ.ಸಂ.: 8722983310/ 9480803367 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.

ಕ್ರೀಡೆಗಳಿಂದ ಮಾನಸಿಕ ಖಿನ್ನತೆ ದೂರ- ಕೆ.ಎಸ್.ತಾರಾನಾಥ್

0

ಕ್ರೀಡೆಗಳಿಂದ ಆತ್ಮಸ್ಥೈರ್ಯ ಹಾಗೂ ಜೀವನೋತ್ಸಾಹ ಮೂಡುತ್ತದೆ ಎಂದು ಶ್ರೀ ಬಸವೇಶ್ವರ ಸ್ವಾಮಿ ಪಟ್ಟಣ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷರಾದ ಕೆ ಎಸ್ ತಾರಾನಾಥ್ ಅಭಿಮತ ವ್ಯಕ್ತಪಡಿಸಿದರು. ಅವರು ಶ್ರೀ ಬಸವೇಶ್ವರ ಸ್ವಾಮಿ ಪಟ್ಟಣ ಪತ್ತಿನ ಸಹಕಾರ ಸಂಘದ ಶತಮಾನೋತ್ಸವ ಸಂಭ್ರಮದ ಆಚರಣೆ ಅಂಗವಾಗಿ ಬಸವೇಶ್ವರ ಕಾಲೇಜಿನ ಆವರಣದಲ್ಲಿ ಸಂಘದ ಸದಸ್ಯ ಮಹಿಳೆಯರಿಗೆ ಆಯೋಜಿಸಲಾದ ಕ್ರೀಡಾ ಸ್ಪರ್ಧೆಗಳನ್ನು ಉದ್ಘಾಟಿಸಿ ಮಾತನಾಡಿದರು. ಒತ್ತಡದ ಪ್ರಪಂಚದಲ್ಲಿ ಇಂದು ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳು ತುಂಬಾ ಅಗತ್ಯವಾಗಿದೆ. ಕ್ರೀಡೆಯಿಂದ ದೈಹಿಕ ಹಾಗೂ ಮಾನಸಿಕ ಶಕ್ತಿ ವೃದ್ಧಿಯಾಗುತ್ತದೆ ಹಾಗೆ ಇಂತಹ ಕ್ರೀಡೆಗಳಿಂದ ಪರಸ್ಪರರಲ್ಲಿ ಒಡನಾಟ ಹೆಚ್ಚುತ್ತದೆ ಜೊತೆಗೆ ಪರಿಚಯವೂ ಸಹ ಆಗುತ್ತದೆ ಇದರಿಂದ ಮಾನಸಿಕ ಖಿನ್ನತೆ ದೂರವಾಗುತ್ತದೆ ಆದ್ದರಿಂದ ಎಲ್ಲಾ ಸದಸ್ಯರು ಇಂತಹ ಕ್ರೀಡೆಗಳಲ್ಲಿ ಪಾಲ್ಗೊಳ್ಳಬೇಕು ಎಂದು ನುಡಿದರು. ಕಾರ್ಯಕ್ರಮದ ಸಂಚಾಲಕರು ಹಾಗೂ ನಿರ್ದೇಶಕರಗಳಾದ ಶ್ರೀಮತಿ ಶಾಂತ ಆನಂದ್ ಹಾಗೂ ಅನಿತಾ ರವಿಶಂಕರ್ ಕಾರ್ಯಕ್ರಮದ ರೂಪುರೇಷೆಗಳನ್ನು ತಿಳಿಸಿ ಮಹಿಳೆಯರಿಗೆ ಕ್ರೀಡೆಯಲ್ಲಿ ಭಾಗವಹಿಸಲು ಅವಕಾಶಗಳನ್ನು ಕಲ್ಪಿಸಿದರು. ಕಾರ್ಯಕ್ರಮದಲ್ಲಿ ನಿರ್ದೇಶಕರಾದ ಕಾಯಕಯೋಗಿ ಬಿ ಚನ್ನಬಸಪ್ಪ ಎಂ ಆರ್ ಪ್ರಕಾಶ್ ಎಚ್‌ವಿ ಮರುಳೆ ಶ. ಎಚ್ ಎಮ್ ಶಿವಾನಂದ್ ಕೆ ಸಿ ಪಾಲಾಕ್ಷಪ್ಪ. ಬಸವರಾಜ್ ಎಸ್ ಪಿ ಶಶಿಧರ್ ಚೆನ್ನೇಶ್ ಸಮಾಜ ಪ್ರಮುಖರಾದ ಪಿ ರುದ್ರೇಶ್
ಜಿ ವಿಜಯಕುಮಾರ್. . ಕಾರ್ಯದರ್ಶಿ ಎಸ್ ಸದಾಶಿವಮೂರ್ತಿ ಹಾಜರಿದ್ದರು.

ಬಸ್ ಮತ್ತು ಬೈಕ್ ಮುಖಾಮುಖಿ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಮರಣ

0

ಶಿವಮೊಗ್ಗ ಜಿಲ್ಲೆಯ ಸವಳಂಗ ರಸ್ತೆಯಲ್ಲಿ ಬಸ್ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು, ಬೈಕ್ ಸವಾರ ಸ್ಥಳದಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಭಾನುವಾರ ರಾತ್ರಿ ಶಿವಮೊಗ್ಗದಿಂದ ಹಳೆ ಜೋಗದಲ್ಲಿರುವ ಮನೆಗೆ ತೆರಳುತ್ತಿದ್ದ 32 ವರ್ಷದ ಶಿವಕುಮಾರ್ ಸಾವನ್ನಪ್ಪಿದ್ದಾರೆ.

ಮೃತ ಶಿವಕುಮಾರ್ ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕಿನ ಹಳೆ ಜೋಗದ ನಿವಾಸಿಯಾಗಿದ್ದಾರೆ.

ಸ್ಥಳಕ್ಕೆ ಶಿವಮೊಗ್ಗ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Karnataka Sanga ವಚನಗಳಲ್ಲಿ ಭಕ್ತನು ಪೂರ್ವಜನ್ಮದ ಭವಾದಿಗಳನ್ನ ಕಳೆದುಕೊಳ್ಳುವ ಬಗೆಯನ್ನ ಅಕ್ಕ ತಿಳಿಸಿದ್ದಾಳೆ- ಪ್ರೊ.ರಾಜಾರಾಂ ಹೆಗಡೆ

0

Karnataka Sanga ವಚನ ಚಳುವಳಿಯನ್ನೇ ವೈದಿಕ ಪರಂಪರೆಗೆ ವಿರುದ್ಧವಾದ ಚಳುವಳಿ ಎಂಬಂತೆ ನಿರೂಪಿಸಿ ಜನಪ್ರಿಯಗೊಳಿಸಲಾಗಿದೆ. ಶಿವಾನುಭವ ಮಾರ್ಗ ಶಿವ ಭಕ್ತನ ಅಂತಿಮ ಮಾರ್ಗ. ಅಲ್ಲಿ ಅದ್ವೈತ ತತ್ವ, ಶಿವಯೋಗ ಬೇಕು ಎಂದು ಕುವೆಂಪು ವಿವಿಯ ಇತಿಹಾಸ ಪ್ರಾಕ್ತನಾಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ. ರಾಜಾರಾಮ ಹೆಗಡೆ ಹೇಳಿದರು.

ಶಿವಮೊಗ್ಗ ನಗರದ ಕರ್ನಾಟಕ ಸಂಘದಲ್ಲಿ ಅಭಿವ್ಯಕ್ತಿ ಟ್ರಸ್ಟ್ ವತಿಯಿಂದ ಶಿವಮೊಗ್ಗ ಸಾಹಿತ್ಯ ಹಬ್ಬ ಮೊದಲ ಆವತ್ತಿಯ ಎರಡನೇ ದಿನದ ಮೂರನೇ ಗೋಷ್ಠಿಯಲ್ಲಿ ಭಾನುವಾರ ಅಕ್ಕ-ಅಲ್ಲಮ ಅರಿವಿನ ಆಯಾಮಗಳು ವಿಷಯದ ಕುರಿತು ಸಂವಾದಕಾರರಾಗಿ ಪಾಲ್ಗೊಂಡು ಮಾತನಾಡಿದರು.

ಷಟ್‌ಸ್ಥಳ ಹಂತಗಳ ಮೂಲಕ ಗಮ್ಯ ತಲುಪಬೇಕು. ಶಂಕರರ ವಿವೇಕ ಚೂಡಾಮಣಿಯಲ್ಲೂ ಪರತತ್ವವನ್ನು ತಿಳಿದುಕೊಂಡ ಮೇಲೆ ಶಾಸ್ತçಗಳು ನಿಷ್ಪçಯೋಜಕ ಎಂದಿದೆ. ಆಚರಣೆಗಳನ್ನು ಮಾಡಬಾರದು ಎಂದಿಲ್ಲ, ಗಮ್ಯ ಆಚರಣೆಗಳ ಮೂಲಕವೇ ತಲುಪುವುದು. ಈ ಸೂಕ್ಷ್ಮತೆಯನ್ನು ಶಿಷ್ಯರಿಗೆ ಕಲಿಸಬೇಕಾಗುತ್ತದೆ. ಸಾಧನವನ್ನು ಹೇಗೆ ಉಪಯೋಗಿಸಬೇಕು ಎಂಬುದನ್ನು ತಿಳಿಸಬೇಕು ಎಂದರು.

ವಚನಗಳಲ್ಲಿ ಭಕ್ತನಾದವನು ಪೂರ್ವಜನ್ಮದ ಭವಾದಿಗಳನ್ನು ಕಳೆದುಕೊಳ್ಳುವುದೇಗೆ ಎಂಬುದನ್ನು ಅಕ್ಕ ತಿಳಿಸಿದ್ದಾಳೆ. ತಾನೂ ಭವವನ್ನು ಕಳೆದುಕೊಂಡಿದ್ದೇನೆ ಎಂದು ಸ್ಪಷ್ಟನೆ ನೀಡಿದ ಮಹಿಳೆ ಅಕ್ಕಮಹಾದೇವಿ ಎಂದು ಹೇಳಿದರು.

ಸಂಶೋಧಕ ಹಾಗೂ ಟ್ರಾನ್ಸ್ಡಿಸಿಪ್ಲಿನರಿ ಹೆಲ್ತ್ ಅಂಡ್ ಸೈನ್ಸ್ ವಿವಿಯ ಸಹಾಯಕ ಪ್ರಾಧ್ಯಾಪಕ ಹರ್ಷಿತ್ ಜೋಸೆಫ್ ಮಾತನಾಡಿ, ಪ್ರಸ್ತುತ ಚರ್ಚೆಯನ್ನು ಗಮನಿಸಿದಾಗ ವಚನಗಳು ಅವೈದಿಕ ಹೇಗೆ ಎಂಬುದೇ ಗೊಂದಲವಿದೆ. ತರ್ಕ ದೋಷ ಎದ್ದು ಕಾಣಿಸುತ್ತದೆ ಎಂದರು.

ತತ್ ಹೇಗಿರುತ್ತೆ ಅಂದ್ರೆ ಅವಿನಾಶಿ, ಅಪ್ರಮೇಯ ಅಂತ ವೈದಿಕರು ಹೇಳುತ್ತಾರೆ. ಅವೈದಿಕರು ಜಂಗಮತ್ವವನ್ನು ಹೇಳುತ್ತಾರೆ. ಅಲ್ಲಮರು ನಿಸ್ಸಂಗತ್ವ, ನಿತ್ಯ ಇದೂ ತತ್ ಎಂದು ಹೇಳುತ್ತಾರೆ. ಇದು ಹೇಗೆ ಅವೈದಿಕ ಆಗುತ್ತೆ ಎಂಬುದೇ ಗೊಂದಲ?. ಎರಡೂ ಒಂದನ್ನೇ ಹೇಳುತ್ತೆ. ಈ ಅತಾರ್ಕಿಕ ಸಮಸ್ಯೆ ಹಾಗಾದ್ರೆ ಎಲ್ಲಿಂದ ಬಂತು ಎಂದರು.

Karnataka Sanga ನಮ್ಮ ಬಗ್ಗೆ ಇರುವ ವಿವರಣೆಗಳೆಲ್ಲ ಪಶ್ಚಿಮ ಸಂಸ್ಕ್ರತಿಯ ಅನುಭವದಿಂದ ಪ್ರಭಾವಿತವಾಗಿವೆ. ಹೀಗಾಗಿ ಪಶ್ಚಿಮ ಜಗತ್ತಿನ ಅರಿವಾದಾಗ ನಮ್ಮಲ್ಲಿ ಬದಲಾವಣೆ ಮಾಡಿಕೊಳ್ಳಲು ಅನುಕೂಲಕಾರಿ ಎಂದರು.

ಸ್ತ್ರೀ ಆದವಳು ಕೆಳಹಂತದಲ್ಲಿರಬೇಕು ಎಂಬುದು ಯುರೋಪಿನ ಫೆಮಿನಿಸಂನದ್ದು. 19ನೇ ಶತಮಾನದ ಹೊತ್ತಿಗೆ ವಿಸ್ತಾರಗೊಳ್ಳುತ್ತಾ ಹೋಯಿತು ಮತ್ತು ಬುನಾದಿಯಾಗಿ ನಿಂತಿತು. ಭಾರತದ ಪರಂಪರೆಯಲ್ಲಿ ಸ್ತ್ರೀಗೆ ಗೌರವದ ಸ್ಥಾನವಿತ್ತು. ಭಕ್ತಿ ಪರಂಪರೆ, ದಾಸ ಪರಂಪರೆಯಲ್ಲಿ ಈ ಸಮಸ್ಯೆ ಇರಲಿಲ್ಲ. ಹಾಗಾಗಿ ಅಕ್ಕಮಹಾದೇವಿಯನ್ನ ತಿಳಿದರೇ ಹೇಗೆ ಜಂಗಮತ್ವ ದೊರಕುವುದು ಎಂಬುದೇ ಪ್ರಶ್ನಾರ್ಥಕ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಮನ್ವಯಕಾರರಾದ ಕುವೆಂಪು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಷಣ್ಮುಖ ಎ. ಇದ್ದರು.

ಯಾವಕೃತಿ ಶುದ್ಧವಾಗಿ ಮನುಷ್ಯನ ಭಾವಗಳನ್ನ ಕೇಂದ್ರವಾಗಿ ನಿರೂಪಿಸುತ್ತದೆಯೋ ಆ ಕೃತಿ ಜನರನ್ನ ಮುಟ್ಟುತ್ತೆ- ಎಂ.ಆರ್.ದತ್ತಾತ್ರಿ

0

ಕುವೆಂಪು ಅವರದ್ದು ವರ್ಣನಾತ್ಮಕ ಕಾದಂಬರಿ. ಕಲಾತ್ಮಕ, ವಿಚಾರ ಸೇರಿದ ಕಾದಂಬರಿ ಭೈರಪ್ಪನವರದ್ದು. ಅನಕೃ, ಕಾರಂತರ ಇಬ್ಬರ ಕಾದಂಬರಿಗಳಲ್ಲಿ ರಸ ಕಡಿಮೆ ಅಂತ ಭೈರಪ್ಪನವರ ಅಭಿಪ್ರಾಯ. ರಸ ಪ್ರಧಾನವಾದದ್ದು ಕಡಿಮೆಯಾಗುತ್ತಿತ್ತು ಎನ್ನಬಹುದೇನೋ ಎಂದು ಕಾದಂಬರಿಕಾರ ಡಾ. ಅಜಕ್ಕಳ ಗಿರೀಶ್ ಭಟ್ ಅಭಿಪ್ರಾಯಿಸಿದರು.

ಶಿವಮೊಗ್ಗ ನಗರದ ಕರ್ನಾಟಕ ಸಂಘದಲ್ಲಿ ಅಭಿವ್ಯಕ್ತಿ ಟ್ರಸ್ಟ್ ವತಿಯಿಂದ ಶಿವಮೊಗ್ಗ ಸಾಹಿತ್ಯ ಹಬ್ಬ ಮೊದಲ ಆವತ್ತಿಯ ಎರಡನೇ ದಿನದ ಎರಡನೇ ಗೋಷ್ಠಿಯಲ್ಲಿ ಭೈರಪ್ಪನವರ ಸಾಹಿತ್ಯ ಕನ್ನಡ ಓದುಗ ವಲಯವನ್ನು ಉಳಿಸಿ ಬೆಳೆಸಿದ ಪರಿ ಕುರಿತು ಸಂವಾದಕಾರರಾಗಿ ಪಾಲ್ಗೊಂಡು ಮಾತನಾಡಿದರು.

50ರ ಕೊನೆ 60ರ ದಶಕದ ಆರಂಭ ಭೈರಪ್ಪನವರು ಬರೆಯಲು ಆರಂಭಿಸಿದ್ದು. ಪ್ರಗತಿಶೀಲ ಚಳುವಳಿಯ ಕಾಲ. ಅದು ಹೆಚ್ಚು ಕಾಲ ಉಳಿಯಲಿಲ್ಲ. ನಂತರದ್ದು ನವ್ಯ ಕಾಲಘಟ್ಟ. ವಿಶ್ವವಿದ್ಯಾಲಯದ ಪ್ರೊಫೆಸರ್ಸ್ಗಳು ಬರವಣಿಗೆಗಳು ಕಂಡುಬಂದಿತು. ಇದು ಸಾಮಾನ್ಯರ ಮೇಲೆ ಹೆಚ್ಚು ಪ್ರಭಾವ ಮಾಡಲಿಲ್ಲ. ಪಬ್ಲಿಕ್ ಲೈಬ್ರರಿಯಿಂದ ತಂದು ಕಾದಂಬರಿ ಓದುವ ಕಾಲವದು. ಈ ರೀತಿ ಜನರನ್ನು ಭೈರಪ್ಪನವರ ಕಾದಂಬರಿಗಳು ತಲುಪಿದ್ದವು.

ಭಾವದೊಂದಿಗೆ ವಿಚಾರಗಳನ್ನು ಬೆರೆಸಿದ ಕಾದಂಬರಿಗಳನ್ನು ಜನಪ್ರಿಯಗೊಳಿಸಿದ ಕೀರ್ತಿ ಭೈರಪ್ಪನವರದ್ದು. ಸಂಸ್ಕಾರ ಮತ್ತು ವಂಶವೃಕ್ಷ ಒಂದೇ ಸಮಯಕ್ಕೆ ಬಂದು ಜನಪ್ರಿಯವಾದವು ಎಂದರು.

ಆದಿತ್ಯವಾರದ ದಿನಪತ್ರಿಕೆಯ ಭೈರಪ್ಪನವರ ವಿಮರ್ಶೆ ಓದುಗರನ್ನು ಸೃಷ್ಟಿಸುತ್ತಿತ್ತು. ವಿಚಾರವನ್ನು ಕಲಾತ್ಮಕವಾಗಿ ಹೇಳಿದರೆ ಜನರಿಗೆ ತಲುಪುತ್ತದೆ. ಭೈರಪ್ಪನವರ ಕಾದಂಬರಿಯಲ್ಲಿ ಸಮಷ್ಟಿಯ ದೃಷ್ಟಿ ಇದ್ದವು. ಒಬ್ಬ ರಚನಾತ್ಮಕ ಕಾದಂಬರಿಕಾರನಾಗಿ ತಮ್ಮ ಸ್ವಾತಂತ್ರವನ್ನೂ ಉಳಿಸಿಕೊಂಡರು. 4 ತಲೆಮಾರುಗಳು ಇವರ ಕಾದಂಬರಿಗಳನ್ನು ಓದಿದ್ದೆ ಎಂದು ಹೇಳಿದರು.

ಕಾದಂಬರಿಕಾರ ಎಮ್.ಆರ್. ದತ್ತಾತ್ರಿ ಮಾತನಾಡಿ, ಕತೆ ಬರೆಯಲು ಹೇಳಿಕೊಟ್ಟಿದ್ದು ಮಾಸ್ತಿಯವರು, ಇದಕ್ಕೆ ವಿಚಾರ ಸೇರಿಸಿದ್ದು ಕಾರಂತರು. ಪಾತ್ರದ ಆಳಕ್ಕೆ ಇಳಿಯುವುದು ಯಶವಂತ ಚಿತ್ತಾಲರು. ಇವು ಮೂರೂ ಸೇರಿದ್ದು ಭೈರಪ್ಪನವರದ್ದು. 50ರಿಂದ 80ರ ಕಾಲಘಟ್ಟವು ಸ್ಥಿತ್ಯಂತರ ಕಾಲಘಟ್ಟ. ಆ ಕಾಲದಲ್ಲಿ ಧೀರ ಸಾಹಿತ್ಯ ರಚನೆ ಭೈರಪ್ಪನವರದ್ದು ಎಂದರು.

50-80ರವರೆಗಿನ ಕಾಲಘಟ್ಟ 3-4 ತಲೆಮಾರಿದೆ. ಬಹಳಷ್ಟು ಸಿಕ್ಕುಗಳಿದ್ದ ತಲೆಮಾರು. ಓದುಗರ ಸಂಖ್ಯೆ ಜಾಸ್ತಿಯಾದುದು 80ರ ದಶಕ. 90ರ ದಶಕ ಎಂಜಿನಿಯರ್‌ಗಳನ್ನು ತಯಾರು ಮಾಡಿತು. ಅವರಲ್ಲಿ ಹೆಚ್ಚಿನವರು ಭೈರಪ್ಪನವರ ಓದುಗರು. ಯಾವುದೂ ಬಲವಂತವಾಗಿ ಹೇರಿದ್ದಲ್ಲ, ಯೂನಿವರ್ಸಿಟಿಗಳಿಂದ ಬಂದ ಓದುಗರಲ್ಲ. ಯಾವ ಕೃತಿ ಶುದ್ಧವಾಗಿ ಮನುಷ್ಯ ಭಾವಗಳನ್ನು ಕೇಂದ್ರದಲ್ಲಿಟ್ಟುಕೊಳ್ಳುತ್ತದೆಯೋ ಅಂತ ಕೃತಿ ಯಾವತ್ತಿಗೂ ಜನರನ್ನು ಮುಟ್ಟುತ್ತೆ, ಇನ್ನೂ ಬಹುಕಾಲವೂ ಇರುತ್ತೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಮನ್ವಯಕಾರರಾದ ಸಹನಾ ವಿಜಯ್‌ಕುಮಾರ್ ಇದ್ದರು.

D.K. Sivakumar ಡಿ.ಕೆ ಸುಧಾಕರ್ ನಿಧನ: ಡೀಸಿಎಂ ಡಿ.ಕೆ.ಶಿವಕುಮಾರ್ ಸಂತಾಪ

0

D.K. Sivakumar ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದ ನಮ್ಮ ಸಂಪುಟ ಸಹೋದ್ಯೋಗಿ, ನನ್ನ ಆತ್ಮೀಯ ಸ್ನೇಹಿತ ಡಿ. ಸುಧಾಕರ್ ಅವರು ಇಂದು ಕೊನೆಯುಸಿರೆಳೆದ ಸುದ್ದಿ ಅತೀವ ದುಃಖವನ್ನುಂಟು ಮಾಡಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.
ಶಿವಕುಮಾರ್ ಸಂತಾಪ ವ್ಯಕ್ತಪಡಿಸಿದ್ದಾರೆ.

ಹಿರಿಯೂರು ಶಾಸಕರು, ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ರಾಜ್ಯದ ಯೋಜನೆ ಮತ್ತು ಸಾಂಖ್ಯಿಕ ಸಚಿವರಾಗಿದ್ದ ಡಿ. ಸುಧಾಕರ್ ಅವರು ಜನಪರ ಕಾಳಜಿಯುಳ್ಳ ನಾಯಕರಾಗಿದ್ದರು. ಬಡವರ ಬಂಧು ಎಂದೇ ಹೆಸರಾಗಿದ್ದ ಅವರು, ನನ್ನನ್ನು ಭೇಟಿ ಮಾಡಲು ಬಂದಾಗಲೆಲ್ಲ ಕ್ಷೇತ್ರದ ಒಂದಿಲ್ಲೊಂದು ಅಭಿವೃದ್ಧಿ ಕೆಲಸದ ಬಗ್ಗೆ ಮನವಿ ಹಿಡಿದುಕೊಂಡೇ ಬರುತ್ತಿದ್ದರು. ಅವರ ಆ ಗುಣ, ಕ್ಷೇತ್ರದ ಜನರ ಮೇಲಿದ್ದ ಅವರ ಅಪಾರ ಪ್ರೀತಿಯನ್ನು ತೋರಿಸುತ್ತಿತ್ತು.

ಸುಧಾಕರ್ ಅವರು ಇಂದು ಕುಟುಂಬಸ್ಥರು, ಬಂಧುಗಳು ಹಾಗೂ ಅಪಾರ ಬೆಂಬಲಿಗರನ್ನು ಅಗಲಿರುವುದು ತುಂಬಲಾರದ ನಷ್ಟ.

D.K. Sivakumar ಭಗವಂತನು ಡಿ. ಸುಧಾಕರ್ ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಹಾಗೂ ಅವರ ಕುಟುಂಬಕ್ಕೆ ಈ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ.
ಎಂದು ಸಂದೇಶದಲ್ಲಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ

B.Y. Raghavendra ತಂದೆ ಬಿವೈಆರ್ ಅವರ ಅಭಿಮಾನೋತ್ಸವದ ಬಗ್ಗೆ ಮಮತಾ ಭಾವನೆ ವ್ಯಕ್ತಪಡಿಸಿದ ಬಿ.ವೈ.ರಾಘವೇಂದ್ರ

0

​B.Y. Raghavendra. ಚಿತ್ರದುರ್ಗದ ಮಾದಾರ ಚೆನ್ನಯ್ಯ ಮೈದಾನದಲ್ಲಿ ಇಂದು ನೆರೆದಿದ್ದ 10 ಲಕ್ಷಕ್ಕೂ ಅಧಿಕ ಅಭಿಮಾನಿಗಳ ಸಾಗರ, ಜನನಾಯಕ ಶ್ರೀ ಬಿ. ಎಸ್. ಯಡಿಯೂರಪ್ಪ ಅವರ ಮೇಲಿರುವ ಅಚಲವಾದ ಪ್ರೀತಿ ಮತ್ತು ಗೌರವಕ್ಕೆ ಸಾಕ್ಷಿಯಾಯಿತು.

​ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಜೀ ಅವರ ಉಪಸ್ಥಿತಿಯಲ್ಲಿ, ನಾಡಿನ ಮೂಲೆ ಮೂಲೆಯಿಂದ ಬಂದ ರೈತ ಬಂಧುಗಳು ಮತ್ತು ಅಭಿಮಾನಿಗಳ ಸಾಕ್ಷಿಯಾಗಿ “ಬಿಎಸ್‌ವೈ ಅಭಿಮಾನೋತ್ಸವ” ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿತು. ಬಿಎಸ್ವೈ ಅವರ 50 ವರ್ಷಗಳ ಸಾರ್ಥಕ ಸೇವೆಗೆ ಸಂದ ಅತಿದೊಡ್ಡ ಗೌರವ ಇದಾಗಿದೆ.

B.Y. Raghavendra. ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಬಿ. ಎಲ್.‌ ಸಂತೋಷ್‌̧ ರಾಜ್ಯಾಧ್ಯಕ್ಷರಾದ ಶ್ರೀ ವಿಜಯೇಂದ್ರ ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಎಸ್.‌ ಬೊಮ್ಮಾಯಿ, ಶ್ರೀ ಡಿ. ವಿ. ಸದಾನಂದ ಗೌಡ, ಶ್ರೀ ಜಗದೀಶ್‌ ಶೆಟ್ಟರ್‌, ಕೇಂದ್ರ ಸಚಿವರಾದ ಶ್ರೀ ಪ್ರಲ್ಹಾದ್‌ ಜೋಶಿ, ಶ್ರೀ ವಿ. ಸೋಮಣ್ಣ, ಕು. ಶೋಭಾ ಕರಂದ್ಲಾಜೆ, ಪ್ರತಿಪಕ್ಷ ನಾಯಕರಾದ ಶ್ರೀ ಆರ್.‌ ಅಶೋಕ್‌, ವಿಧಾನ ಪರಿಷತ್‌ ವಿಪಕ್ಷ ನಾಯಕರಾದ ಶ್ರೀ ಛಲವಾದಿ ನಾರಾಯಣಸ್ವಾಮಿ, ವಿವಿಧ ಮಠಾಧೀಶರುಗಳು, ಸಂಸದರು, ಶಾಸಕರು ಮತ್ತು ಪ್ರಮುಖರು ಉಪಸ್ಥಿತರಿದ್ದರು.

​ಈ ಐತಿಹಾಸಿಕ ಸಮಾರಂಭದಲ್ಲಿ ಭಾಗವಹಿಸಿದ ಪ್ರತಿಯೊಬ್ಬರಿಗೂ ನನ್ನ ಹೃದಯಪೂರ್ವಕ ಕೃತಜ್ಞತೆಗಳು.

DK Sivakumar ಸಾರ್ವಜನಿಕರ ಸಮಸ್ಯೆಗಳಿಗೆ ತಕ್ಷಣ ಸೂಕ್ತ ಸ್ಪಂದಿಸಿ- ಡಿ.ಕೆ.ಶಿವಕುಮಾರ್

0

DK Sivakumar ಬೆಂಗಳೂರಿನ ಅಂಬೇಡ್ಕರ್‌ ವೀದಿಯ ಜ್ಞಾನಜ್ಯೋತಿ ಸಭಾಂಗಣದಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಆಯೋಜಿಸಿದ್ದ ಆಡಳಿತ ಸುಧಾರಣೆಗಳು ಹಾಗೂ ಸಾರ್ವಜನಿಕ ಅಹವಾಲು ನಿರ್ವಹಣೆ ವಿಷಯಗಳ ಕುರಿತು ಬಿಡಿಎ ನೌಕರರಿಗೆ ತರಬೇತಿ ನೀಡುವ ಕಾರ್ಯಕ್ರಮವನ್ನು ಬಿಡಿಎ ಅಧ್ಯಕ್ಷರಾದ ಎನ್.ಎ ಹ್ಯಾರಿಸ್‌ ಅವರೊಂದಿಗೆ ರಾಜ್ಯದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಉದ್ಘಾಟಿಸಿದರು.

DK Sivakumar. ಬಿಡಿಎ ತಮ್ಮ ಸಿಬ್ಬಂದಿಗೆ 7 ದಿನಗಳ ಈ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಂಡಿದ್ದು, ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸುವುದು, ಪರಿಣಾಮಕಾರಿಯಾಗಿ ಕುಂದುಕೊರತೆಗಳ ನಿರ್ವಹಣೆ, ಸಾರ್ವಜನಿಕರಿಗೆ ಅನುಕೂಲವಾಗುವ ಪ್ರಕ್ರಿಯೆಗಳ ಸರಳೀಕರಣ ಕುರಿತು ತರಬೇತಿ ನೀಡಲಾಗುತ್ತಿದೆ. ಈ ವೇಳೆ ಮಾತನಾಡಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕಚೇರಿಗೆ ಹೆಚ್ಚು ನೊಂದವರೇ ಬರುತ್ತಾರೆ. ಹೀಗಾಗಿ ಬಿಡಿಎ ಸಿಬ್ಬಂದಿ ಪಾರದರ್ಶಕತೆಯಿಂದ ಕಾರ್ಯನಿರ್ವಹಿಸಬೇಕು. ಎಲ್ಲರನ್ನೂ ಗೌರವದಿಂದ ಕಾಣಬೇಕು ಹಾಗೂ ಏಜೆಂಟ್ ಗಳ ಅವ್ಯವಹಾರಗಳಿಗೆ ಅವಕಾಶ ಕೊಡದೆ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಬಿಡಿಎ ಸಿಬ್ಬಂದಿಗೆ ಸಲಹೆಗಳನ್ನು ನೀಡಿದರು

ಕರ್ನಾಟಕಕ್ಕೆ ಭೇಟಿ‌ ನೀಡಿದ ಪ್ರಧಾನಿ ಮೋದಿಗೆ ರಾಜ್ಯ ಬಿಜೆಪಿ ಅಭಿನಂದನೆ

0

ಪಶ್ಚಿಮ ಬಂಗಾಳದಲ್ಲಿ ಐತಿಹಾಸಿಕ ಜಯದ ಘೋಷಣೆ ಮೊಳಗಿಸಿ, ಅಸ್ಸಾಂ ಮತ್ತು ಪುದುಚೇರಿಯಲ್ಲಿ ಜನಾಭಿಮಾನದಿಂದ ಭರ್ಜರಿ ವಿಜಯ ಸಾಧಿಸಿದ ಬಳಿಕ ಮೊದಲ ಬಾರಿಗೆ ಬೆಂಗಳೂರಿಗೆ ಆಗಮಿಸಿದ ಪ್ರಧಾನಮಂತ್ರಿ ಶ್ರೀನರೇಂದ್ರಮೋದಿ ಅವರಿಗೆ ಕರ್ನಾಟಕದ ಸಮಸ್ತ ಜನತೆಯ ಪರವಾಗಿ ಅಭಿಮಾನಪೂರ್ವಕ ಸನ್ಮಾನ ಸಲ್ಲಿಸಲಾಯಿತು.

ವಿಶ್ವದ ವೇದಿಕೆಯಲ್ಲಿ ಭಾರತದ ಸಾಮರ್ಥ್ಯ, ಸಂಸ್ಕೃತಿ ಮತ್ತು ಸ್ವಾಭಿಮಾನವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುತ್ತಿರುವ ದೂರದೃಷ್ಟಿಯ ನನಾಯಕತ್ವ, “ವಿಕಸಿತ ಭಾರತ”ದ ಸಂಕಲ್ಪವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ದೇಶವನ್ನು ದಿಟ್ಟ ಹೆಜ್ಜೆಗಳಲ್ಲಿ ಮುನ್ನಡೆಸುತ್ತಿರುವ ಆದರಣೀಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಇತ್ತೀಚೆಗೆ ನಡೆದ ಪಂಚರಾಜ್ಯಗಳ ಚುನಾವಣೆಯಲ್ಲಿ ಜನತೆ ಮತ್ತೊಮ್ಮೆ ಬೆಂಬಲದ ಮುದ್ರೆ ಒತ್ತಿದ್ದಾರೆ.